ಮುಲ್ಕಿ ಸೀಮೆಯ ದಂಡನಾಯಕರು

ಮುಲ್ಕಿ ಸೀಮೆಯ ಮೂವರು ಸೇನಾ ದಂಡನಾಯಕರು ಮೂಲ್ಕಿ ಸೀಮೆಯ ಸಾಮಂತ ಅರಸರ ಆಳ್ವಿಕೆಗೆ ಒಳಪಟ್ಟ ಒಂಭತ್ತು ಮಾಗಣೆಯ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಮೂವರು ಬಿಲ್ಲವ ನಾಯಕರು ಗಡಿಪಟ್ಟ ಪಡೆದು ನಾಯಕರೆಂಬ ಬಿರುದಾಂಕಿತರಾಗಿ ರಾಜ್ಯದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರಖ್ಯಾತ ಬಿಲ್ಲವ ಮನೆತನದ ಈ ಮೂವರು ರಾಜ್ಯ ಪ್ರಮುಖರು ಸಮಾಜದ ನಾಯಕರು ಆಗಿದ್ದರು. ಕೋರ್ಟು ಕಛೇರಿಗಳಿಲ್ಲದ ಆ ಕಾಲದಲ್ಲಿ ನ್ಯಾಯಾಧಿಕಾರಿಗಳಾಗಿಯೂ ಮನ್ನಣೆ ಪಡೆದಿದ್ದರು . ತಮ್ಮ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ಸಮಾಜ ಬಾಂಧವರ ವ್ಯಾಜ್ಯಗಳನ್ನು ಕಲಹಗಳನ್ನು ತಮ್ಮ ಮನೆಯಲ್ಲಿ , ದೈವಸ್ಥಾನದಲ್ಲಿ ದೈವದ ಆಧಿನದಲ್ಲಿ ತಾವೇ ಇತ್ಯರ್ಥಗೊಳಿಸುತ್ತಿದ್ದರು. ತಪ್ಪಿತಸ್ಥರಿಗೆ ದಂಡ ಅಥವಾ ಶಿಕ್ಷೆ ನೀಡುವ ಅಧಿಕಾರವು ಈ ನಾಯಕರಿಗಿತ್ತು . ಅರಮನೆಯ ಆಸ್ಥಾನದ ನ್ಯಾಯ ಸ್ಥಾನದಲ್ಲಿ ನಾಯಕರಿಗೆ ಪ್ರಮುಖ ಸ್ಥಾನವಿತ್ತು. ಜನರಿಗೆ ಅಂಗಸಾಧನೆ ಗರಡಿ ವಿದ್ಯೆಯ ಜೊತೆಗೆ ಸಮರ ಕಲೆಗಳನ್ನು ಕಲಿಸಿ ಸೈನಿಕರನ್ನು ತರಬೇತುಗೊಳಿಸುವ ಮಹತ್ತರ ಜವಬ್ದಾರಿ ನಾಯಕರಿಗಿತ್ತು. ಯುದ್ಧದ ಸನ್ನಿವೇಶದಲ್ಲಿ ತಮ್ಮ ದಂಡಿನೊಂದಿಗೆ ಹೋರಾಡಿ ರಾಜ್ಯದ ಗಡಿ ರಕ್ಷಣೆ ಮಾಡಬೇಕಾದ ಜವಬ್ದಾರಿ ನಾಯಕರದ್ದು. ಸಾಮಂತರಸರ ಪರಮ ಆಪ್ತರಾಗಿ ಅಧಿಕಾರಿಯಾಗಿ ಮಂತ್ರಿಯಂತೆ ಸ್ನೇಹಿತನಂತೆ ನಾಯಕರು ಅರಸರ ಖಾಸಗಿ ಜೀವನದಲ್ಲಿ ಹಾಗೂ ರಾಜ್ಯಭಾರದಲ್ಲಿ ವಿಶೇಷ ಪಾತ್ರ ವಹಿಸಿದ್ದರು ಸಾಮಂತ ಅರಸರಿಗೆ ಅರಸು ಪಟ್ಟಾಭಿಷೇಕ ನೆರವೇರಿದ ಬಳಿಕ ಅವರು ಮುಲ್ಕಿ ಸೀಮೆಯ ಕ್ಷೇತ್ರ ವ್ಯಾಪ್ತಿಯ ದೈವ ದೇವರುಗಳ ಗುಡಿಗಳ ದೇವಾಲಯಗಳ ಪ್ರಮುಖರೆನಿಸುತ್ತಾರೆ. ಹಾಗಾಗಿ ಅವರು ಮುಲ್ಕಿ ಬಪ್ಪನಾಡು ದೇವಾಲಯದ ಅನುವಂಶಿಕ ಮುಕ್ತೇಸರರಾಗುತ್ತಾರೆ.[] ದೇವಾಲಯದ ರಥೋತ್ಸವದ ಸಂಧರ್ಭದಲ್ಲಿ ಧ್ವಜರೋಹಣ ಹಾಗೂ ಧ್ವಜ ಅವರೋಹಣದಂದು ಮೂವರು ನಾಯಕರಿಗೆ ಪ್ರಥಮವಾಗಿ ದೇವರ ಪ್ರಸಾದ ವಿತರಣೆಯಾಗುತ್ತದೆ.

ಉಲ್ಲೇಖ

ಬದಲಾಯಿಸಿ
  1. ಬಪ್ಪನಾಡು