ಪರಿಚಯ ಬದಲಾಯಿಸಿ

 
ಕೇರಳ
ನನ್ನ ಹೆಸರು ಜೆಸ್ಸ್ನಿ ಜೋಸ್. ಏಪ್ರಿಲ್ ೪ ೧೯೯೯ ನನ್ನ ಜನ್ಮ ದಿನ . ಕೇರಳದಲ್ಲಿರುವ ತ್ರಿಶೂರ್  ನನ್ನ ಜನ್ಮ ಸ್ಥಳ . ಜೋಸ್ ಲಾಜರ್ ಮತ್ತು ಶೈನಿ ಜೋಸ್ ನನ್ನ ತಂದೆ ತಾಯಿಯರು . ನನ್ನ ತಂದೆ ವ್ಯಾಪಾರ ವೃತಿಯಲ್ಲಿ ಇದ್ದಾರೆ . ನಾನು ಎಂಟು ವರ್ಷಗಳು ಒಂಟಿಯಾಗಿದೇ .ನಂತರ ನನ್ನ ತಮ್ಮ , ಜೆಸ್ವಿನ್ ಹುಟ್ಟಿದನು .  ಮೂರು ವರ್ಷಗಳ ನಂತರ ನನ್ನ ತಂಗಿ , ಜೆಸ್ನ ಹುಟ್ಟಿದಳು . ನನ್ನ ಮಾತೃಭಾಷ ಮಲಯಾಳಂ. ಬದಲಾಯಿಸಿ
 
ಬೆಂಗಳೂರು
ನಾನು ಹುಟ್ಟಿದ್ದು ಕೇರಳದಲ್ಲಾದರೂ ಬೆಳೆದದ್ದು  ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ .ಆದರಿಂದ ಕನ್ನಡ ಭಾಷೆ ನನಗೆ ತುಂಬಾ ಇಷ್ಟ. ರಜೆಗಳ ಸಂದರ್ಭಧಲ್ಲಿ  ನಾವು ಕೇರಳದಲ್ಲಿರುವ ನಮ್ಮ ಸಂಬಂಧಿಕರನ್ನು ನೋಡಲು ಹೋಗುತ್ತೇವೆ . ಬದಲಾಯಿಸಿ

ಶಿಕ್ಷಣ ಬದಲಾಯಿಸಿ

ನಾನು ಹತ್ತನೇ  ತರಗತಿಯವರೆಗೆ ಕ್ರೈಸ್ಟ್ ಶಾಲೆಯಿಂದ ಶಿಕ್ಷಣವನ್ನು ಪಡೆದೆ . ಪಿ ಯು ಸಿಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದೆ. .ಈಗ ಡಿಗ್ರಿ ಮೊದಲನೇ  ವರ್ಷವನ್ನು  ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ. ಬದಲಾಯಿಸಿ

ಆಸಕ್ತಿಗಳು ಬದಲಾಯಿಸಿ

 
ಮೈಸೂರು
ನನಗೆ ಪುಸ್ತಕಗಳನ್ನು ಓದುವುದು ತುಂಬಾ ಇಷ್ಟ . ಜೇನ್ ಆಸ್ಟಿನ್ ಅವರು ಬರೆದಿರುವ " ಪ್ರೈಡ್ ಅಂಡ್ ಪ್ರೆಜುಡೀಸ್ "  ಎಂಬ ಪುಸ್ತಕ ತುಂಬ ಇಷ್ಟವಾಗಿದೆ . ಹಾಡುವುದು , ನೃತ್ಯಮಾಡುವುದು , ಪುಸ್ತಕವನ್ನು ಓದುವುದು , ಚಿತ್ರ ಬಿಡಿಸುವುದು ಮೊದಲಾದ ಹವ್ಯಾಸಗಳಲ್ಲಿ ನನಗೆ ಆಸಕ್ತಿ ಇದೆ . ಹೊಸ ಸ್ಥಳಗಳನ್ನು ಬೇಟಿ ಮಾಡುವುದು ನನಗೆ ಇಷ್ಟ . ನಾನು ಊಟಿ ,ಮೂನ್ನಾರ್ ,ಅಟ್ಟಪ್ಪಾಡಿ , ಮೈಸೂರು ,ಮೊದಲಾದ ಸ್ಥಳಗಳನ್ನು ಬೇಟಿ ಮಾಡಿದೆ . ಪ್ರಕೃತಿಯನ್ನು ರಕ್ಷಣೆ ಮಾಡಬೇಕೆಂಬ ಛಲ ನನಿಗಿದೆ .ನನಗೆ ಫುಟ್ ಬಾಲ್ ಆಡುವುದು ತುಂಬ ಇಷ್ಟ . ನನಗೆ ಹಲವಾರು ಸ್ನೇಹಿತರಿದ್ದಾರೆ . ಒಳ್ಳೆಯ ಪ್ರೊಫೆಸರ್ ಆಗಬೇಕೆಂಬುದು ನನ್ನ ಜೀವನದ ಗುರಿಯಾಗಿದೆ . ಹೆಸರು ,ಹಣ ,ಸಂಪತ್ತಿಗಿಂತ ಜೀವನವನ್ನು  ಸಂತೋಷ ಮತ್ತು ನೆಮ್ಮದಿಯಿಂದ ಬಾಳುವುದೇ ಮುಖ್ಯವೆಂದು ನಾನು ಬಲವಾಗಿ ನಂಬುತ್ತೇನ . ಎ. ಪಿ . ಜೆ ಅಬ್ದುಲ್ ಕಲಾಂ ರವರು ನನ್ನ ಸ್ಪೂರ್ತಿ. ಬದಲಾಯಿಸಿ