ತ್ರಿಶೂರು
ತ್ರಿಶೂರ್ ಸಂಕ್ಶಿಪ್ತ ರೂಪ ತಿರು ಶಿವ ಪೇರುರ್ ಎಂದು ಕರೆಯಾಲಾಗುತ್ತದೆ. ಇದರ ಅರ್ಥ ಶಿವನ ಹೆಸರಿನ ನಗರ ಅಥವಾ ಪಟ್ಟಾಣ. ಪರ್ಯಾಯವಾಗಿ ತಿರು ಶಿವ ಪೇರೂರ್ ಎಂದರೆ ವಡಕುಂನಾಥನ್ ದೇವಾಲಯ, ಕೊಟ್ಟಾಪುರಂ ಮತ್ತು ಪೂಣ್ಕುನ್ನಮ್ ಶಿವನ ದೇವಸ್ತಾನ ಸೇರಿದ ಪ್ರಸಿದ್ಧ ಶಿವನ ದೇವಾಲಯ ಸೇರಿದ ಸ್ತ್ಥಳ ಎಂದರ್ಥ. ತ್ರಿಶೂರ್ ಪ್ರಾಚೀನಗಳಲ್ಲಿ "ವೃಷಭದ್ರಿಪುರಂ ಕೈಲಾಸಂ" ಎಂದು ಕರೆಯಲಾಗುತ್ತಿತ್ತು ಮತ್ತು ಹಿಂದೆ ಇದನ್ನು ಅಂಗ್ಲ ಭಾಷೆಯಲ್ಲಿ ಟ್ರಿಚೂರ್ ಎಂದು ಕರೆಯಲಾಗುತ್ತದೆ.ತ್ರಿಶೂರ್ ಜಿಲ್ಲೆಯ ಮುಖ್ಯ ಕಛೇರಿಯು ತ್ರಿಶೂರು ನಗರದಲ್ಲಿ ೧ ಜುಲೈ ೧೯೪೯ರಂದು ರಚಿಸಲಾಯಿತು.ಈ ನಗರವು ಆನೆ ಪ್ರೇಮಿಗಳ ಭೂಮಿ ಕೂಡ.ತ್ರಿಶೂರ್ ನಗರವು ಸಾಮಾನ್ಯವಾಗಿ ಕೇರಳದ ಸಾಂಸ್ಕ್ರುತಿಕ ರಾಜಧಾನಿ ಎಂದು ಕರೆಯಲಾಗಿತ್ತದೆ. ಇದು ನಾಲ್ಕನೇ ದೊಡ್ಡ ನಗರ ಮತ್ತು ಕೇರಳದ ಮೂರನೆ ದೊಡ್ಡ ನಗರವೆನಿಸಿದೆ. ಭಾರತದಲ್ಲಿ ೨೦ನೇ ಅತಿ ದೊಡ್ಡದು ಮತ್ತು ತ್ರಿಶೂರು ಜಿಲ್ಲೆಯ ಜಿಲ್ಲಾ ಕೇಂದ್ರವು.ವಡಕ್ಕುಂನಾಥನ್ ದೇವಾಲಯವು ಸುಮಾರು ೬೫ ಎಕರೆಯಲ್ಲಿ ತಿಕ್ಕಿನಾಡು ಮೈದಾನದಲ್ಲಿ ಸ್ಥಪಿಸಿದೆ. ತ್ರಿಶೂರ್ ಒಮ್ಮೆ ಕ್ಕೊಚ್ಚಿನ್ ಸಾಮ್ರಾಜ್ಯದ ರಾಜಧಾನಿಯಾದಗಿತ್ತು.ತ್ರಿಶೂರ್ ಕೇರಳದ ಸಾಂಸ್ಕತಿಕ ರಾಜಧನಿಯೆಂದು ಕರೆಯಾಲಾಗುತ್ತದೆ ಎಕೆಂದರೆ ಅದರ ಸಾಂಸ್ಕತಿಕ ,ಆಧ್ಯಾತ್ಮಿಕ ಮತ್ತು ಧಾರ್ಮಿಕ ಒಲವುಗಳಿಂದ
ತ್ರಿಶೂರ್
|
---|
ಹವಾಮಾನ
ಬದಲಾಯಿಸಿತ್ರಿಶೂರ್ ನಗರವು ಉಷ್ಣಾ ವಲಯದ ಮುಂಗಾರು ಹವಾಗುಣವನ್ನು ಹೊಂದಿದೆ. ಬೇಸಿಗೆ ಕಾಲದಲ್ಲಿ ತಾಪಮಾನ ಕನಿಷ್ಠ ಸರಾಸರಿ ೨೨.೫ ಸೆಲ್ಶಿಯಸ್ ಮತ್ತು ಗರಿಷ್ಠ ಸರಾಸರಿ ತಾಪಮಾನ ೩೩ ಸೆಲ್ಶಿಯಸ್ ಆಗಿರುತ್ತದೆ. ಚಳಿಗಾಲದಲ್ಲಿ ಗರಿಷ್ಠ ಸರಾಸರಿ ತಾಪಮಾನ ೨೯ ಸೆಲ್ಶಿಯಸ್ ಮತ್ತು ಕನಿಷ್ಠ ಸರಾಸರಿ ತಾಪಮಾನ ೨೦ ಸೆಲ್ಶಿಯಸ್ ಆಗಿರುತ್ತದೆ.
ಆಹಾರ
ಬದಲಾಯಿಸಿಅಕ್ಕಿ ಅವರ ಪ್ರಧಾನ ಆಹಾರವಾಗಿದೆ. ಅಚ್ಚಪಂ ಮತ್ತು ಕುರಲಪ್ಪಂ ಅವರ ಜನಪ್ರಿಯ ತಿನಿಸುಗಳು. ವಟ್ಟಯಪ್ಪಂ ಒಂದು ರೀತಿಯ ಈ ನಗರದ ವಿಶೇಷ ಭಕ್ಷ್ಯದಲ್ಲಿ ಒಂದು.
ಹಬ್ಬಗಳು
ಬದಲಾಯಿಸಿಈ ನಗರದಲ್ಲಿ ಆಚರಿಸುವ ಪ್ರಮುಖ ಹಬ್ಬಗಳು : ಕ್ರಿಸ್ ಮಸ್,ಓಣ್ಂ,ಇಸ್ಟರ್,ಈದ್ ಮತ್ತು ವಿಶು . ಈ ನಗರ ಆಯೋಜಿಸುವ ದಪ್ಪಗಿನ ಅಕ್ಷರ ತ್ರಿಶೂರ್ ಪುರಂ [೧] ಉತ್ಸವ ಕೇರಳದ ಅತ್ಯಂತ ವರ್ಣರಂಜಿತ ಮತ್ತು ಅದ್ಭು ದೇವಾಲಯದ ಉತ್ಸವ. ಈ ಹಬ್ಬವನ್ನು ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ತಿಕ್ಕಿನಾಡು ಮೈದಾನದಲ್ಲಿ ನಡೆಯುತ್ತುದೆ.ತ್ರಿಶೂರ್ ಪುರಂ "ಪೂರಂಗಳ ಪೂರಂ" ಎಂದು ಹೇಳಲಾಗುತ್ತದೆ. ಸಕ್ತನ್ ತಂಪುರನ್ ತ್ರಿಶೂರಿನ ಆಧುನಿಕ ಅಡಿಗಲ್ಲು ಹಾಕಿದರು ಮತ್ತು ತ್ರಿಶೂರ್ ಪುರಂ ಎಂಬ ಅತ್ಯಂತ ಅದ್ಭುತವಾದ ಸಾಂಸ್ಕೃತಿಕ ಉತ್ಸವ ಆರಂಭಿಸಿದರು.
ದೇವಾಲಯಗಳು,ಚರ್ಚ್ ಮತ್ತು ಮಸೀದಿಗಳು
ಬದಲಾಯಿಸಿತ್ರಿಶೂರಿನಲ್ಲಿ ವಡಕ್ಕುಂನಾಥನ್ ದೇವಾಲಯ ,ತೀರುವಂಬಾಡಿ ಶ್ರೀ ಕೃಷ್ಣ ದೇವಾಲಯ, ಪಾರಾಮೀಕಾವು ದೇವಸ್ಥಾನ ಮತ್ತು ಗುರುವಾಯೂರ್ ದೇವಾಲಯ ಸೇರಿದಂತೆ ಪ್ರಸಿದ್ಧ ದೊಡ್ಡ ದೇವಾಲಯಗಳು ಹೊಂದಿದೆ.ನಗರದ ವಡಕ್ಕುಂನಾಥನ್ ದೇವಸ್ಥಾನವು ಹಿಂದೂ ಶೈವದ ಪ್ರಮುಖ ಮಂದಿರವು.ಜಿಲ್ಲೆಯ ಅತ್ಯಂತ ಪವಿತ್ರ ಹಿಂದೂ ವೈಷ್ಣವ ದೇವಾಲಯಗಳಲ್ಲಿ ಒಂದಾಗಿದೆ ಗುರುವಾಯೂರ್ ದೇವಸ್ಥಾನ. ಮಾರ್ಟ್ ಮರಿಯಂ ಕ್ಯಾತೆಡ್ರಿಲ್ ಈ ನಗರದ ಹಳೆಯ ಚರ್ಚ್ ಈ ನಗರದಲ್ಲಿ ನೆಲೆಗೊಂಡಿದೆ. ತ್ರಿಶೂರ್ ನಗರದ ಚೆಟ್ಟಿಯಂಗಡಿ ಹನಫಿ ಮಸೀದಿ ತ್ರಿಶೂರಿನ ಅತ್ಯಂತ ಹಳೆಯ ಮಸೀದಿಯಾಗಿದೆ.ಇದರ ಜೊತೆಗೆ ಅವರ್ ಲೇಡಿ ಆಫ್ ಲೌರ್ಡೆಸ್ ಸಿರೊ-ಮಲಬಾರ್ ಕ್ಯಾಥೊಲಿಕ್ ಮೆಟ್ರೋಪಾಲಿಟನ್ ಕ್ಯಾಥೆಡ್ರಲ್ ಮತ್ತು ಅವರ್ ಲೇಡಿ ಆಫ್ ಡೋಲೇಸ್ ಸಿರೊ-ಮಲಬಾರ್ ಕ್ಯಾಥೊಲಿಕ್ ಬೆಸಿಲಿಕಾ ಸೇರಿದಂತ ಎರಡು ಪ್ರಸಿದ್ಧ ಚರ್ಚಗಳು ಹೊಂದಿದೆ.ತ್ರಿಶೂರ್ ಐತಿಹಾಸಿಕವಾಗಿ ಹಿಂದೂ ಪಾಂಡಿತ್ಯದ ಕೇಂದ್ರವಾಗಿದೆ.ಕ್ರಿಶ್ಚಿಯನ್ ಧರ್ಮ ,ಇಸ್ಲಾಂ ಧರ್ಮ ಮತ್ತು ಜುದಾಯಿಸಂ ಧರ್ಮ ತ್ರಿಶೂರ್ ಜಿಲ್ಲೆಯ ಮೂಲಕ ಭಾರತಿಯ ಉಪಖಂಡಕ್ಕೆ ಪ್ರವೇಶಿಸಿತು. ವಿದ್ವಾಂಸರು ಮತ್ತು ಕ್ರಿಶ್ಚಿಯನ್ ಬರಹಗಳ ಕೃತಿಗಳು ಸಂತ ಥಾಮಸ್ ಧರ್ಮಪ್ರಚಾರಕ, ೨೦೦೦ ವರ್ಷಗಳ ಹಿಂದೆ ತ್ರಿಶೂರಿನ ಬಳಿ ಇರುವ ಮುಜ಼ಿರಿಸ್ನಲ್ಲಿ ಇಳಿದರು ಎಂದು ಹೇಳಿಕೊಳ್ಳುತ್ತಾರೆ. ದೇಶದ ಮೊದಲ ಮಸೇದಿಯು ಆಗಿದ ಚೀರಾಮನ್ ಜುಮಾ ಮಸೇದಿ ಕ್ರಿ.ಶ ೬೨೯ರಲ್ಲಿ ತೆರೆಯಲಾಯಿತು.
ಬ್ಯಾಂಕುಗಳು,ಪ್ರಮುಖ ಕೇಂದ್ರಗಳು ಮತ್ತು ಶೈಕ್ಷಣಿಕ ಕೇಂದ್ರಗಳು.
ಬದಲಾಯಿಸಿಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್,ಕ್ಯಾಥೊಲಿಕ್ ಸಿರಿಯನ್ ಬ್ಯಾಂಕ್ ಮತ್ತು ಧನಲಕ್ಷ್ಮಿಬ್ಯಾಂಕ್ ಲಿಮಿಟೆಡ್ ಸೇರಿದಂತೆ ಮೂರು ಪ್ರಮುಖ ವರ್ಗೀಕೃತ ಬ್ಯಾಂಕುಗಳು ಹೊಂದಿದೆ.ಈ ನಗರವು ರೇಷ್ಮೆ ಮತ್ತು ಚಿನ್ನದ ಆಭರಣಗಳನ್ನು ಶಾಪಿಂಗ್ ಮಡುವ ಒಂದು ದೊಡ್ಡ ಕೇಂದ್ರ ಕೂಡವಾಗಿದೆ.ತ್ರಿಶೂರ್ ದೇಸಿಯ ಪ್ರವಸಿಗಲನ್ನು ದೊಡ್ಡ ಸಂಖ್ಯೆಯಲ್ಲಿ ಆರ್ಕಸುವ ಒಂದು ಸ್ಥಳ ವಾಗಿದೆಕೇರಳ ಕಲಾಮಂಡಲಂ , ಜವಾಹರ್ ಬಾಲ ಭವನ, ಕೇರಳದ ಪೊಲೀಸ್ ಅಕಾಡೆಮಿ , ಕೇರಳ ಕೃಷಿ ವಿಶ್ವವಿದಾಲಯ, ಕಾಲೇಜ್ ಆಫ್ ಪಶುವೈದ್ಯಕೀಯ ಮತ್ತು ಪಾಣಿ ವಿಜ್ಞಾನ, ಕೇರಳ ಇನ್ಸ್ಟಿಟ್ಯುಟ್ ಸ್ಥಳೀಯ ಆಡಳಿತ ಮತ್ತು ಕೇರಳ ಅರಣ್ಯ ಸಂಶೋಧನಾ ಸಂಸ್ಥೆ ಸೇರಿದಂತೆ ಹಲವಾರು ಪ್ರಮುಖ ಶೈಕ್ಷಣಿಕ ಕೇಂದ್ರಗಳಿವೆ.
ವ್ಯಾಪಾರ
ಬದಲಾಯಿಸಿತ್ರಿಶೂರ್ ಕೇರಳ ಆಂತರಿಕ ವಾಣಿಜ್ಯದಲ್ಲಿ ಪ್ರವರ್ಥಮಾನ ಕೇಂದ್ರವಾಯಿತು. ಈ ನಗರದಲ್ಲಿ ಆನೇಕ ಮಲಯಾಳಿ ಉದ್ಯಮಿಗಳು ಒಂದು ಅಕ್ಷಯಪಾತ್ರೆಗೆ ಕಾರ್ಯ ನಿರ್ವಹಿಸಿದ್ದಾರೆ ಮತ್ತು ಕೇರಳದ ಪ್ರಮುಖ್ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ.ತ್ರಿಶೂರ್ ದಕ್ಶಿಣ ಭಾರತದ ಪ್ರಮುಖ ಚಿನ್ನ ಉತ್ಪಾದನಾ ಕೇಂದ್ರವಾಗಿದೆ. ಕೇರಳದ ಆಭರಣ ೭೦% ತ್ರಿಶೂರಿನಲ್ಲಿ ತಯಾರಿಸಲಾಗುತ್ತದೆ. ಈ ನಗರವು ಆಭರಣ ಮತ್ತು ಜವಳಿ ವ್ಯಾಪಾರದ ಕೇಂದ್ರವೂ ಕೂಡ ಆಗಿದೆ. ಈ ನಗರವು ಭಾರತದ ಆಯುರ್ವೇದಿಕ್ ಔಷಧಾ ತಯಾರಿಕಾ ಉಧ್ಯಮಕ್ಕೆ ದೊಡ್ಡ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಔಷಧಿ,ವೈಧ್ಯರತ್ನಂ ಔಷಧ ಶಾಲಾ, ಕೆ.ಪಿ.ನಂಭೂಧಿರೀಸ್, ಸೀತಾರಾಂ ಆಯುರ್ವೇದ ಫಾರ್ಮಸಿ ಲಿಮಿಟೆಡ್, ಕಂಡಂ ಕುಳತಿ ವೈಧ್ಯಶಾಲಾ ಇತ್ಯಾದಿ ಕಂಪನಿಗಳು ಕೆಲವು ರಾಜ್ಯದ ಪ್ರಮುಖ ಆಯುರ್ವೇದ ಔಷಧಿ ತಯಾರಕರು. ಇನ್ಫೋಸಿಸ್ ಕೇರಳದ ನಾಲ್ಕನೇ ತಂತ್ರಜ಼ನ ವಲಯವು ತ್ರಿಶೂರ್ ನಲ್ಲಿ ನೆಲೆಸಿದೆ. ಪ್ರವಾಸೋದ್ಯಮವು ತ್ರಿಶೂರಿನ ಆರ್ಥಿಕ ಅಗಾಧವಾದ ಕೊಡುಗೆಯನ್ನು ಹೊಂದಿದೆ. ಈ ನಗರದ ದೇವಾಲಯಗಳು ಮತ್ತು ಹಳೆಯ ಚರ್ಚುಗಳು ಪ್ರವಾಸಿಗರನ್ನು ಹೆಚ್ಚು ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಈ ನಗರವು ಸಾರ್ವಜನಿಕ ಸಾರಿಗೆ ಖಾಸಗಿ ಬಸ್ಸುಗಳು,ಟ್ಯಾಕ್ಸಿಗಳನ್ನು ಮತ್ತು ರಿಕ್ಷಾಗಳನ್ನು ಅವಲಂಭಿಸುತ್ತದೆ.
ಸಾಹಿತ್ಯ
ಬದಲಾಯಿಸಿಕೇರಳದ ಸಂಗೀತ ನಾಡಗ ಆಕಾಡೆಮಿ ,ಕೇರಳದ ಲಲೀತಾಕಾಲಾ ಕೇರಳದ ಮತ್ತು ಕೇರಳದ ಸಾಹಿತ್ಯ ಆಕಾಡೆಮಿಯು ಈ ನಗರದಲ್ಲಿ ಹೊಂದಿದೆ.
ಉಲೇಖನಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ