ಸೀಐಎಸ್-ಏ೨ಕೇನ ಪ್ರೋಗ್ರಾಮ್ ಅಸೋಸಿಯೇಟ್ ಕೆಲಸಗಳು :
- ಸಮುದಾಯ ಮತ್ತು ಸಿಐಎಸ್-ಎ೨ಕೆ ನಡುವೆ ಸಂಪರ್ಕ-ಸೇತುವೆಯಂತೆ ಕೆಲಸ ಮಾಡುವುದು. (ದತ್ತಿಗಳ ಬೇಡಿಕೆಗಳನ್ನು ವಿಶ್ಲೇಷಿಸುವುದು, ಸಮ್ಮಿಲನ ಮತ್ತು ಇತರೆ ಕಾರ್ಯಕ್ರಮಗಳ ಉಸ್ತುವಾರಿ ಮತ್ತು ಇತರೆ ಕ್ರಿಯಾಯೋಜನೆಗಳ ಉಸ್ತುವಾರಿ)
- ತಿಂಗಳ ಯೋಜನಾ ವರದಿ.
- ತಿಂಗಳ ಐಆರ್‌ಸಿ ಸಮ್ಮಿಲನ, ಸುದ್ದಿಪತ್ರಿಕೆ, ಸಮ್ಮಿಲನ, ಹಾಗೂ ದಾಖಲೀಕರಣ.
- ಐಇಜಿ ದತ್ತಿ ಪಡೆದವರ ಜೊತೆ ಕೆಲಸ ಮಾಡುವುದು, ಅವರಿಗೆ ಅಗತ್ಯ ಸಹಾಯ ನೀಡುವುದು, ಐಇಜಿ ಪ್ರಸ್ತಾವನೆ ತಯಾರಿಸುವುದು.
- ಕನ್ನಡ ವಿಕಿಪೀಡಿಯ ಮತ್ತು ಸಮುದಾಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಗತ್ಯ ಪ್ರಚಾರ ಮತ್ತು ತಾಂತ್ರಿಕ ಬೆಂಬಲ.
- ಪ್ರತಿ ಮೂರು ತಿಂಗಳುಗಳಿಗೆ ಒಮ್ಮೆ ಕೆಲಸದ ಪ್ರಗತಿಯ ವಿಶ್ಲೇಷಣೆ ನಡೆಸಲಾಗುವುದು.
- ಸಿಐಎಸ್-ಎ೨ಕೆ ಪ್ರೋಗ್ರಾಮ್ ಡೈರೆಕ್ಟರ್ ಅವರ ನಿರ್ದೇಶನದಂತೆ ಆಗಾಗ ಇತರೆ ಕೆಲಸಗಳನ್ನು ಸೂಚಿಸಲಾಗುವುದು.
- ನವೆಂಬರ್ ೩೦ರಿಂದ ಡಿಸೆಂಬರ್ ೩ರ ವರೆಗೂ ಸಿ.ಐ.ಎಸ್. ಕಚೇರಿಯಲ್ಲಿ ಪಿ.ಎ. ಓರಿಯಂಟೇಶನ್ ಕಾರ್ಯಕ್ರಮ ನಡೆದಿತ್ತು.ಅದರಲ್ಲಿ ಕಾರ್ಯಾಗಾರ ನಡೆಸುವುದು ಹೇಗೆ ಮತ್ತು ಸಮುದಾಯದ ಬೆಳವಣಿಗೆ ಮಾಡುವುದು ಹೇಗೆ ಎಂದು ತಿಳಿಸಿಕೊಟ್ಟರು.
- ಡಿಸೆಂಬರ್ ೪ರಿಂದು ನಿರಂಜನ ಅವರ ಪುಸ್ತಕಗಳನ್ನು ಹುಡುಕಲು ಈ ಕೆಳಗಿನ ಗ್ರಂಥಾಲಯಗಳಿಗೆ ಭೇಟಿ ಕೊಟ್ಟೆ.
- ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್ ಗ್ರಂಥಾಲಯ
- ಬಿ.ಎಂ.ಶ್ರೀ ಪ್ರತಿಷ್ಟಾನ ಗ್ರಂಥಾಲಯ
- ಕ್ರೈಸ್ಟ್ ಯೂನಿವರ್ಸಿಟಿ ಗ್ರಂಥಾಲಯ
- ಹಳೆಯ ಪುಸ್ತಕದ ಅಂಗಡಿಗಳು
- ಲೋಕಲ್ ಬುಕ್ ಫೇರ್ಸ್
ಕೆಲವು ಪುಸ್ತಕಗಳನ್ನು ನಿರಂಜನ ಅವರ ಮಗಳಾದ ತೇಜಸ್ವಿನಿ ನಿರಂಜನ ಅವರಿಂದ ಪಡೆಯಲಾಗಿದೆ.ಒಟ್ಟಾಗಿ ೫೩ ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ.
- ಕ್ರೈಸ್ಟ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಂದ ತಯಾರಾದ ಲೇಖನಗಳನ್ನು ಸರಿ ಪಡಿಸಲು ಇಂಟರ್ನ್ಶಿಪ್ ಆಯೋಜಿಸಿ ೬೫ ಲೇಖನಗಳನ್ನು ಸೇರಿಸಲಾಗಿದೆ.
- ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಡಿಸೆಂಬರ್ ೧೦,೧೧ ಮತ್ತು ೧೨ರಂದು ವಿಷಯಾಧಾರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಾಗಾರದಿಂದ ೨೨ ಹೊಸ ಲೇಖಕಿಯರು ವಿಕಿಪೀಡಿಯವನ್ನು ಸೇರಿದರು ಮತ್ತು ಅವರಿಂದ ೪೪ ಕರಾವಳಿ ಕರ್ನಾಟಕದ ಲೇಖಕಿಯರ ಮತ್ತು ಸಾಧಕಿಯರ ಲೇಖನಗಳು ತಯಾರಾದವು.
ಭಾಗವಹಿಸಿದವರ ಸಂಖೈ |
ಲೇಖನಗಳ ಸಂಖ್ಯೆ |
ಸೇರಿಸಲಾಗಿರುವ ಬೈಟ್ಗಳು |
ಸಂಪಾದನೆಗಳ ಸಂಖ್ಯೆ
|
೨೨ |
೧೦೦ |
೫೯೧೮೯೪.೦ |
೧೨೨೦
|
- ಬೆಂಗಳೂರಿನ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯಲ್ಲಿ ಡಿಸೆಂಬರ್ ೧೯ ಮತ್ತು ೨೦ರಂದು ವಿಷಯಾಧಾರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಾಗಾರದಿಂದ ೯ ಹೊಸ ಲೇಖಕರು ವಿಕಿಪೀಡಿಯವನ್ನು ಸೇರಿದರು ಮತ್ತು ಅವರಿಂದ ಸುಮಾರು ೩೦ ವಿಜ್ಞಾನ ಲೇಖನಗಳು ತಯಾರಾದವು.ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲರೂ ಸಕ್ರಿಯವಾಗಿ ಲೇಖನಗಳನ್ನು ಸೇರಿಸುತ್ತಿದ್ದಾರೆ.
ಭಾಗವಹಿಸಿದವರ ಸಂಖೈ |
ಲೇಖನಗಳ ಸಂಖ್ಯೆ |
ಸೇರಿಸಲಾಗಿರುವ ಬೈಟ್ಗಳು |
ಸಂಪಾದನೆಗಳ ಸಂಖ್ಯೆ
|
೯ |
೪೯ |
೬೦೦೬೬೩.೦ |
೭೬೩
|
- ಕ್ರೈಸ್ಟ್ ಯೂನಿವರ್ಸಿಟಿಯ ೬೦೦ ವಿದ್ಯಾರ್ಥಿಗಳಿಗೆ ಅವರ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ೨೦ ವಿವಿಧ ತರಗತಿಗಳಿಗೆ ಹೋಗಿ ತರಬೇತಿ ಕೊಡಲಾಗಿತ್ತು.
- ಹಳೆಯ ವಿಕಿಪೀಡಿಯನ್ನರ ಬಳಿ ಮಾತನಾಡಿ,ಅವರನ್ನು ಮತ್ತೆ ಸಂಪಾದಕರನ್ನಾಗಿ ಮಾಡಲು ಪ್ರಯತ್ನ ನಡೆಸಲಾಗಿತ್ತು.
- ಸರಕಾರಿ ವಸ್ತುಸಂಗ್ರಹಾಲಯ,ಬೆಂಗಳೂರಿನಲ್ಲಿ ಗ್ಲಾಮ್(GLAM) ಪ್ರಾಜೆಕ್ಟ್ ಮಾಡಿ ಕರ್ನಾಟಕ ಸರ್ಕಾರಿ ವಸ್ತುಸಂಗ್ರಹಾಲಯ (ಬೆಂಗಳೂರು) ಲೇಖನವನ್ನು ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಲಾಗಿತ್ತು.
- ಮೈಸೂರಿನ ಸಿ.ಪಿ.ಡಿ.ಪಿ.ಎಸ್., ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜನವರಿ ೧೧,೧೨ ಮತ್ತು ೧೩ರಂದು ವಿಷಯಾಧಾರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಾಗಾರದಿಂದ ೧೨ ಹೊಸ ಲೇಖಕರು ವಿಕಿಪೀಡಿಯವನ್ನು ಸೇರಿದರು ಮತ್ತು ಅವರಿಂದ ೧೨ ಸಾಹಿತ್ಯ ಲೇಖನಗಳು ತಯಾರಾದವು.
ಭಾಗವಹಿಸಿದವರ ಸಂಖೈ |
ಲೇಖನಗಳ ಸಂಖ್ಯೆ |
ಸೇರಿಸಲಾಗಿರುವ ಬೈಟ್ಗಳು |
ಸಂಪಾದನೆಗಳ ಸಂಖ್ಯೆ
|
೧೨ |
೩೭ |
೩೬೯೫೯೪.೦ |
೪೮೨
|
- ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ರಾಜಾಜಿನಗರ, ಬೆಂಗಳೂರಿನಲ್ಲಿ ಜನವರಿ ೧೧,೧೨ ಮತ್ತು ೧೩ರಂದು ವಿಷಯಾಧಾರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಾಗಾರದಿಂದ ೧೪ ಹೊಸ ಲೇಖಕರು ವಿಕಿಪೀಡಿಯವನ್ನು ಸೇರಿದರು ಮತ್ತು ಅವರಿಂದ ೨೮ ವಿಜ್ಞಾನ ಲೇಖನಗಳು ತಯಾರಾದವು.
ಭಾಗವಹಿಸಿದವರ ಸಂಖೈ |
ಲೇಖನಗಳ ಸಂಖ್ಯೆ |
ಸೇರಿಸಲಾಗಿರುವ ಬೈಟ್ಗಳು |
ಸಂಪಾದನೆಗಳ ಸಂಖ್ಯೆ
|
೧೨ |
೩೪ |
೫೩೮೩೫೪.೦ |
೬೭೮
|
- ಆಡಿಟರ್ ಶ್ರೀ. ಬಿ. ವಿ. ರವಿಂದ್ರನಾಥ್ ರವರ ಕಛೇರಿ,ಸಾಗರದಲ್ಲಿ ಜನವರಿ ೨೬ ಮತ್ತು ೨೭ರಂದು ವಿಷಯಾಧಾರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಾಗಾರದಿಂದ ೧೨ ಹೊಸ ಲೇಖಕರು ವಿಕಿಪೀಡಿಯವನ್ನು ಸೇರಿದರು ಮತ್ತು ಅವರಿಂದ ೧೨ ಮೆಕ್ಯಾನಿಕಲ್ ಇಂಜಿನಿಯರಿಂಗ್‍ಗೆ ಸಂಬಂದಿಸಿದ ಲೇಖನಗಳು ತಯಾರಾದವು.
ಭಾಗವಹಿಸಿದವರ ಸಂಖೈ |
ಲೇಖನಗಳ ಸಂಖ್ಯೆ |
ಸೇರಿಸಲಾಗಿರುವ ಬೈಟ್ಗಳು |
ಸಂಪಾದನೆಗಳ ಸಂಖ್ಯೆ
|
೧೨ |
೧೫ |
೧೨೫೭೮೪.೦ |
೧೨೮
|
- ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಫೋಟೊವಾಕ್ ಏರ್ಪಡಿಸಿ,ಅಲ್ಲಿ ತೆಗೆದ ಫೋಟೊಗಳಿಗೆ ತಕ್ಕ ಲೇಖನಗಳನ್ನು ಬರೆದು ವಿಕಿಪೀಡಿಯಕ್ಕೆ ಸೇರಿಸಲಾಯಿತು.
- ಡಿಸೆಂಬರ್ ನಲ್ಲಿ ಸಂಗ್ರಹಿಸಿದ ನಿರಂಜನ ಅವರ ಪುಸ್ತಕಗಳನ್ನು ಸ್ಕ್ಯಾನ್ನಿಂಗ್ ಮಾಡಲಾಯಿತು,ಅವುಗಳನ್ನು ವಿಕಿಮೀಡಿಯ ಕಾಮನ್ಸ್‍ಗೆ ಸೇರ್ಪಡಿಸಿ ವಿಕಿಸೋರ್ಸ್‍ನಲ್ಲಿ ಪರಿವಿಡಿಪುಟ ಸೃಷ್ಟಿಸಲಾಯಿತು.
- ನಿರಂಜನ ಅವರ ೯ ಪುಸ್ತಕಗಳ ಟೈಪಿಂಗ್ ಸಮುದಾಯದ ಸಹಾಯದೊಂದಿಗೆ ಪೂರ್ಣಗೊಳಿಸಲಾಗಿದೆ ಮತ್ತು ಕನ್ನಡ ವಿಕಿಸೋರ್ಸ್‍ನಲ್ಲಿ ಮೊದಲ ಬಾರಿಗೆ ಒಂದು ಪುಸ್ತಕವನ್ನು ಅಂತಿಮ ಘಟ್ಟದವರೆಗೆ ತಯಾರುಮಾಡಲು ಸಾಧ್ಯವಾಯಿತು.ಈಗ ಆ ಪುಸ್ತಕ ೩ ವಿವಿಧ ರೀತಿಯ ಫಾರ್ಮ್ಯಾಟ್‍ಗಳಲ್ಲಿ ಲಭ್ಯವಿದೆ.
- ಇಂಟರ್ನ್ಸ್‍ಗಳ ಸಹಾಯದಿಂದ ಹೊಸ ಯೋಜನೆಯನ್ನು ಪ್ರಾರಂಭಿಸಿ ಮತ್ತು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
- ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ(ಎಲ್ಲಾ ಪುಸ್ತಕಗಳನ್ನು ವಿಕಿಮೀಡಿಯ ಕಾಮನ್ಸ್‍ಗೆ ಸೇರ್ಪಡಿಸಿ ವಿಕಿಸೋರ್ಸ್ ನಲ್ಲಿ ಪರಿವಿಡಿಪುಟ ಸೃಷ್ಟಿಸಲಾಯಿತು).
- ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೆ ಅವರ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ತರಬೇತಿ ಕೊಡಲಾಗಿತ್ತು.
- ಬೆಂಗಳೂರಿನಲ್ಲಿರುವ ಕೆಲವು ಕನ್ನಡ ಟೈಪಿಂಗ್ ತರಬೇತಿ ನೀಡುವ ಇನ್ಸ್ಟಿಟ್ಯೂಟ್‍ಗಳನ್ನು ಸಂಪರ್ಕಿಸಿ,ವಿಕಿಸೋರ್ಸನ್ನು ಕನ್ನಡ ಟೈಪಿಂಗ್ ತರಬೇತಿ ನೀಡಲು ಉಪಯೋಗಿಸಿ ಎಂದು ಮಾತುಕತೆ ನಡೆಸಲಾಗಿತ್ತು.
- ವಿಕಿಪೀಡಿಯಾದ ೧೩ನೇ ವರ್ಷಾಚರಣೆಯ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ.
- ವಿಕಿಕೋಟ್‍ನಲ್ಲಿ ಒಂದು ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದೆ ಮತ್ತು ವಿಕಿಕೋಟಿನ ಮುಖ್ಯ ಪುಟ ಡಿಸೈನ್ ಮಾಡಲಾಗಿದೆ.
- ವಿಕಿಪೀಡಿಯಾದ ೧೩ನೇ ವರ್ಷಾಚರಣೆಯ ಬಗ್ಗೆ ಚರ್ಚೆ ಮಾಡಲು ಐ.ಆರ್.ಸಿ ಏರ್ಪಡಿಸಲಾಗಿತ್ತು.
- ಪವನಜ ಅವರ ನೇತೃತ್ವದಲ್ಲಿ ಅಂತರಜಾಲ ಸಂಪರ್ಕವಿಲ್ಲದ ಕಡೆಗಳಲ್ಲಿ ವಿಕಿಪೀಡಿಯಾವನ್ನು ತಲುಪಿಸಲು ಆಫ್ಲೈನ್ ಕನ್ನಡ ವಿಕಿಪೀಡಿಯ ತಯಾರಿಸಿ ಕೆಲ ಸಂಸ್ಥೆಗಳಿಗೆ ನೀಡಲಾಗಿದೆ.
- ಫೆಬ್ರುವರಿ ೧೩ ಮತ್ತು ೧೪ರಂದು ಕನ್ನಡ ವಿಕಿಪೀಡಿಯಾದ ೧೩ನೇ ವರ್ಷಾಚರಣೆಯನ್ನು ಆಚರಿಸಲಾಗಿತ್ತು.ಅದರ ಅಂಗವಾಗಿ ಪಿಳಿಕುಳ ಎಂಬ ನಿಸರ್ಗಧಾಮಕ್ಕೆ ಭೇಟಿ ನೀಡಿ ಫೋಟೊ ನಡಿಗೆ ಮಾಡಲಾಗಿತ್ತು.ಮರುದಿನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
- ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಫೆಬ್ರುವರಿ ೧೬ ಮತ್ತು ೧೭ರಂದು ವಿಷಯಾಧಾರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಾಗಾರದಿಂದ ೨೫ ಹೊಸ ಲೇಖಕರು ವಿಕಿಪೀಡಿಯವನ್ನು ಸೇರಿದರು ಮತ್ತು ಅವರಿಂದ ೫ ಲೇಖನಗಳು ತಯಾರಾದವು ಮತ್ತು ಈ ಕಾರ್ಯಾಗಾರದಲ್ಲಿ ಕೆಲವರಿಂದ ವಿಕಿಸೋರ್ಸಿನ ಒಂದು ಪುಸ್ತಕದ ಕೆಲಸವನ್ನು ಮಾಡಿಸಲಾಗಿತ್ತು(ವಿದ್ಯಾರ್ಥಿಗಳಿಗೆ ಟೈಪಿಂಗ್ ಬರದ ಕಾರಣ ವಿಕಿಸೋರ್ಸನ್ನು ಬಳಸಿ ಅವರಿಗೆ ತರಬೇತಿ ನೀಡಲಾಗಿತ್ತು).
- ಸಮುದಾಯವನ್ನು ಬಲಪಡಿಸಲು ಯತಿರಾಜುರವರ ಬಳಿ ಮಾತನಾಡಿ ಕರ್ನಾಟಕದ ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯಾಗಾರವನ್ನು ಮಾಡುವುದು ಮತ್ತು ಅವರನ್ನು ಸಕ್ರಿಯ ವಿಕಿಪೀಡಿಯನ್ನರಾಗಿ ಮಾಡುವುದರ ಬಗ್ಗೆ ಮಾತನಾಡಲಾಗಿತ್ತು.
- ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೆ ಅವರ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ತರಬೇತಿ ಕೊಡಲಾಗಿತ್ತು.
- ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೆ ಅವರ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ತರಬೇತಿ ಕೊಡಲಾಗಿತ್ತು.
- ಸಮುದಾಯ ಸಮಾಲೋಚನೆ ಮೈಸೂರು ಪ್ರಯಾಣ.
- ೧೩ನೇ ವರ್ಷಾಚರಣೆಯಗೆ ಹಾಕಿ APG ವರದಿಯನ್ನು ಪೂರ್ಣಗೊಳಿಸಲಾಗಿದೆ.
- ೨೦೧೬-೧೭ರ ಕೆಲಸ ಯೋಜನೆಯ ಬರವಣಿಗೆ.
- ಔಷಧೀಯ ಮತ್ತು ಉಪಯುಕ್ತ ಸಸ್ಯಗಳು ಸಂಪಾದನೋತ್ಸವ.
- ಸಂಪಾದನೋತ್ಸವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ.
- ಜ್ಞಾನ, ತಂತ್ರಜ್ಞಾನ ಲೇಖನಗಳ ಎರಡನೇ ಸಂಪಾದನೋತ್ಸವ.
- ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್.
- ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೆ ಅವರ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ತರಬೇತಿ ಕೊಡಲಾಗಿತ್ತು.
- ಈ ತಿಂಗಳ ವಿಕಿಪೀಡಿಯ ಸಂಪಾದಕ ಆರಂಭಿಸಲಾಗೆದೆ.
- ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಬರೆದ ಲೇಖನಗಳು ವಿಶ್ಲೇಷಣೆ ಮಾಡಲಾಗಿದೆ.
- ಕ್ರೈಸ್ಟ್ ಯೂನಿವರ್ಸಿಟಿಯ ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭಿಸಲು ಚರ್ಚೆ.
- Mini TTT ಹಾಗೂ MWT (ಕಾರ್ಯಾಗಾರ ಮಂಗಳೂರು)
- IISC ಯಲ್ಲಿ ಕಾರ್ಯಾಗಾರ ನಡೆಸಲು ರಾಮಚಂದ್ರ ಅವರ ಜೊತೆ ಚರ್ಚೆ
- TTT ಹಾಗೂ MWT ಬೆಂಗಳೂರು
ಭಾಗವಹಿಸಿದವರ ಸಂಖ್ಯೆ |
ಲೇಖನಗಳ ಸಂಖ್ಯೆ
|
೧೬ |
೭೫+
|
- ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೆ ಅವರ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ತರಬೇತಿ ಕೊಡಲಾಗಿತ್ತು.
- ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಮಾಡಿದ ಕೆಲಸದ ಮೌಲ್ಯಮಾಪನ.
- 13 ವರ್ಷಾಚರಣೆ ಆಚರಣೆಯ ಬಿಲ್ಲುಗಳನ್ನು ಅಗತ್ಯ ರೂಪದಲ್ಲಿ ಮಾಡಿ WMF ಸಲ್ಲಿಸಲಾಗಿದೆ.
- ಕ್ರೈಸ್ಟ್ ಯೂನಿವರ್ಸಿಟಿಯ ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭಿಸಲಾಗಿದೆ.
- ಕೆಲವರಿಗೆ OCR4 (wikisource) ತರಬೇತಿ ನಿಡಲಾಗಿದೆ.
ಭಾಗವಹಿಸಿದವರ ಸಂಖೈ |
ಲೇಖನಗಳ ಸಂಖ್ಯೆ |
ಚಿತ್ರಗಳು
|
೭ |
೧೦ |
೧೦೦ +
|
- ವಿಕಿಕೋಟ್ ಮುಖ್ಯ ಪುಟದ ಬದಲಾವಣೆ.
- ಕ್ರೈಸ್ಟ್ ಯೂನಿವರ್ಸಿಟಿಯ ೬೦೦ ವಿದ್ಯಾರ್ಥಿಗಳಿಗೆ ಅವರ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ೨೦ ವಿವಿಧ ತರಗತಿಗಳಿಗೆ ಹೋಗಿ ತರಬೇತಿ ಕೊಡಲಾಗಿತ್ತು.
- 2015-16ರ ಪ್ರಭಾವಿ ವರದಿ ಬರೆಯಲು ಪ್ರಾರಂಭಿಸಲಾಗಿದೆ.
- ಸ್ಕ್ಯಾನ್ ಪುಸ್ತಕಗಳ ಶುದ್ಧೀಕರಣ ಮಾಡು ವಿಧಾನ ತಿಳಿಯಲು ಗುಂಟೂರು ಪ್ರಯಾಣ ಬೆಳೆಸಿದ್ದೆ.
- 2015-16ರ ಪ್ರಭಾವ ವರದಿ ಪೂರ್ಣಗೊಂಡಿದೆ.
- ಸಮ್ಮಿಲನ-೨೫
- ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೆ ಅವರ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ತರಬೇತಿ ಕೊಡಲಾಗಿತ್ತು.
- ಕನ್ನಡ ವಿಕಿಪೀಡಿಯ ಸ್ಥಳೀಯ ಅಪ್ಲೋಡ್ ನೀತಿ ಪುಟ (Draft).
- WEP ವರದಿ outreach.wikimedia.org ನಲ್ಲಿ ಪೂರ್ಣಗೊಂಡಿದೆ.
- ಕ್ರೈಸ್ಟ್ ಯೂನಿವರ್ಸಿಟಿ
- SDM
- ವಿಷಯ ಕೊಡುಗೆ ಬಗ್ಗೆ ತುಮಕೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಜೊತೆ ಚರ್ಚೆ.
- ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳ ಅಭಿಪ್ರಾಯ ಮತ್ತು ಎದುರಿಸಿದ ಸಮಸ್ಯೆಗಳ ತಿಳಿಯಲು ಒಂದು ಸಮೀಕ್ಷೆಯನ್ನು ಕೈಗೊಂಡಲಾಯಿತು
- ಕನ್ನಡ ವಿಕಿಪೀಡಿಯಾದ ಕರಡು ನ್ಯಾಯಯುತ ಬಳಕೆ ನೀತಿ ಪುಟ.
- ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗಾಗಿ ಒಂದು ಪ್ರತ್ಯೇಕ ಟೆಂಪ್ಲೇಟ್ (to show that they belong to WEP).
- 100wikidays ಆರಂಭಿಸಲು ಸಮುದಾಯ ಸದಸ್ಯರ ಪ್ರೇರಿತನೆ.
- ಹಳೆಯ WEP ನಲ್ಲಿ ಪಾಲ್ಗೊಂಡವರ ಹೆಸರು ವರದಿಗೆ ಸೇರ್ಪಡೆ.
- ೨೦೧೩
- ೨೦೧೪
- ೨೦೧೫
- ಕಡಂಬರೆಗಳ ಕೂಟದೊಂದಿಗೆ ಮಾತಾಡಿ ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಬೇಕಾಗುವಂತ, ಪುಸ್ತಕಗಳನ್ನು ಒದಗಿಸಲು ಕೋರಿಕೆ
- ವಿಕಿಸೋರ್ಸ್ ನಲ್ಲಿ ನಿರಂಜನ ಪುಸ್ತಕಗಳು ಯೋಜನೆಯನ್ನು ಪೂರ್ಣಗೊಳಿಸಲು ಪುಸ್ತಕಗಳ ಹುಡುಕಾಟ.
- ಆಳ್ವಾಸ್ ನುಡಿಸಿರಿ ಚಿತ್ರಗಳ ಮೇಲೆ ಕೆಲಸ ಪ್ರಾರಂಭಿಸಲಾಗಿದೆ.