ಕರಡು:ಜೀವಂತ ವ್ಯಕ್ತಿಗಳ ಜೀವನಚರಿತ್ರೆ

(ಸದಸ್ಯ:Chaithra Pillareddy/ನನ್ನ ಪ್ರಯೋಗಪುಟ ಇಂದ ಪುನರ್ನಿರ್ದೇಶಿತ)

ವಿಕಿಪೀಡಿಯ: ಜೀವಂತ ವ್ಯಕ್ತಿಗಳ ಜೀವನಚರಿತ್ರೆ

ಸಂಪಾದಕರು ಯಾವುದೇ ಒಂದು ವಿಕಿಪೀಡಿಯ ಪುಟಕ್ಕೆ ಜೀವಂತ ವ್ಯಕ್ತಿಯ ಬಗ್ಗೆ ಜೀವನಚರಿತ್ರೆಯನ್ನು ಸೇರಿಸುವಾಗ ಬಹಳ ಕಾಳಜಿ ವಹಿಸಬೇಕು. ಈ ಕೆಲಸ ಮಾಡುವಾಗ ಬಹಳ ಸೂಕ್ಷ್ಮತೆಯನ್ನು ವಹಿಸಬೇಕು ಮತ್ತು ನಮ್ಮ ನೀತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು:

ನಾವು ಸರಿಯಾದ ಲೇಖನ ಮಾಡಬೇಕು. ವೈಯಕ್ತಿಕ ಜೀವನದ ಬಗ್ಗೆ ಜೀವನಚರಿತ್ರೆಯಲ್ಲಿ ಪ್ರಸ್ತಾಪಿಸಿದಾಗ ಉತ್ತಮ ಗುಣಮಟ್ಟವುಳ್ಳ ಉಲ್ಲೇಖಗಳು ನೀಡಬೇಕು. ಮೂಲವಿಲ್ಲದ ಅಥವಾ ಕಳಪೆ ಮೂಲದ ವಿವಾದಾಸ್ಪದ ವಸ್ತು - ಅದು ಧನಾತ್ಮಕ, ಋಣಾತ್ಮಕ, ಅಥವಾ ಪ್ರಶ್ನಾರ್ಹವಾದರೆ - ಚರ್ಚೆ ಪುಟಗಳು, ಬಳಕೆದಾರ ಪುಟಗಳು, ಮತ್ತು ಯೋಜನೆಯ ಜಾಗದಿಂದ ಚರ್ಚೆ ಇಲ್ಲದೆ ಜೀವಿತ ವ್ಯಕ್ತಿಗಳ ಬಗ್ಗೆ ವಿಕಿಪೀಡಿಯ ಲೇಖನದಿಂದ ತಕ್ಷಣ ತೆಗೆದುಹಾಕಬೇಕು.

ಈ ನೀತಿಯು ಜೀವಿತ ವ್ಯಕ್ತಿಗಳ ಜೀವನಚರಿತ್ರೆ ಮತ್ತು ಇತರ ಲೇಖನಗಳಲ್ಲಿ ವ್ಯಕ್ತಿಗಳ ಬಗ್ಗೆಗಿರುವ ಜೀವನಚರಿತ್ರೆಯ ವಸ್ತುವಿಗೂ ಸಮಾನವಾಗಿ ಅನ್ವಯಿಸುತ್ತದೆ. ಜೀವಿತ ವ್ಯಕ್ತಿಗಳ ಬಗ್ಗೆ ಮಾಡುವ ಸಂಪಾದನೆಗಳಿಗೆ, ವಿಕಿಪೀಡಿಯ ಯಾವುದೇ ಸಾಕ್ಷಿ ಹೊರೆಯುವುದಿಲ್ಲ. ಅದು ಕೇವಲ ಸಂಪಾದನೆ ಮಾಡುವ ವ್ಯಕ್ತಿಯ ಹೆಗಲ ಮೇಲೆ ದೃಢವಾಗಿ ನಿಂತಿದೆ. ಜೀವಂತ ವ್ಯಕ್ತಿಯ ಜೀವನಚರಿತ್ರೆ ಬರೆಯುವ ಸಂಪಾದಕರು ಮತ್ತು ಜೀವನಚರಿತ್ರೆಯ ವಸ್ತುವಿನ ಯಾವುದೇ ಪುಟದ ವಿಷಯದ ಬಗ್ಗೆ ಕಾಳಜಿ ಇದ್ದವರು ಬಿ ಎಲ್ ಪಿ (BLP) ನೋಟೀಸ್ಬೋರ್ಡ್ ಮೇಲೆ ನಮಗೆ ದಯವಿಟ್ಟು ಸೂಚನೆ ನೀಡಿ.

ತಾರ್ಕಿಕಾಧಾರ

ಬದಲಾಯಿಸಿ

ವಿಕಿಪೀಡಿಯದ ಲೇಖನಗಳಲ್ಲಿ ಇರುವ ಜೀವಂತ ವ್ಯಕ್ತಿಯ ಬಗ್ಗೆಗಿನ ವಿಷಯವು ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವಿಕಿಪೀಡಿಯವು ಮುಖ್ಯ ಹತ್ತು ವೆಬ್ಸೈಟ್‌ಗಳಲ್ಲಿ ಒಂದು ಮತ್ತು ಈ ವೆಬ್ಸೈಟ್‌ನ ಪ್ರಾಮುಖ್ಯತೆ ಅದರ ಜವಬ್ದಾರಿಯಿಂದ ಬರುತ್ತದೆ. ವಿಕಿಪೀಡಿಯವು ಒಂದು ಸಾಮನ್ಯ ಯೋಜನೆ, ವಿಶ್ವದ ಸುಧಾರಾಣೆ ಇದರ ಮುಖ್ಯ ಉದ್ದೇಶವಾಗಿದೆ. ಅಂದರೆ ವ್ಯಕಿಯ ಬಗ್ಗೆಗಿನ ಲೇಖನಗಳು ಸಹಾನುಭೂತಿ, ಅನುಗ್ರಹ ಮತ್ತು ತಿಳುವಳಿಕೆಗಳಿಂದ ತುಂಬಿರಬೇಕು.

ಜೀವಂತ ವ್ಯಕ್ತಿಯ ಬಗ್ಗೆಗಿನ ವಿಷಯವು ತಪ್ಪಾದ ಅಥವಾ ವಿಕೃತ ಲೇಖನಗಳಾಗಿರುವುದರಿಂದ ಜನ ಬೇಸರಗೊಂಡು ಫೌಂಡೇಶನ್‌ಗೆ ಮತ್ತು ಜಿಂಬೊ ವೇಲ್ಸ್‌ಗೆ ದಿನವು ದೂರುಗಳು ನೀಡುತ್ತಿದ್ದಾರೆ. ಈ ದೂರುಗಳನ್ನು ಯಶಸ್ವಿಗೊಳಿಸುವುದು ಭಾವುಕರ ವಿಷಯವಾಗಿದೆ.

ಒಬ್ಬ ವ್ಯಕ್ತಿಯು ತನ್ನ ಬಗ್ಗೆ ಇರುವ ಲೇಖನವನ್ನು ತಾನೆ ಬದಲಾಹಿಸಲು ಸಾಧ್ಯವಿಲ್ಲ ಏಕೆಂದರೆ ಅವರು ವಿಕಿಪೀಡಿಯದ ಸಾಮಾನ್ಯ ಸದಸ್ಯನಾಗಿರುವುದಿಲ್ಲ ಮತ್ತು ಅವರಿಗೆ ಯಾವುದೇ ರೀತಿಯ ನೀತಿಗಳು ತಿಳಿದಿರುವುದಿಲ್ಲ. ಅವರು ಒಳ್ಳೆ ರೀತಿಯಲ್ಲಿ ಬದಲಿಸುವುದು ಸಹ ದೊಡ್ದ ಅಪರಾಧವಾಗುತ್ತದೆ.


ವಿಕಿಪೀಡಿಯದಲ್ಲಿ ಜೀವಂತ ವ್ಯಕ್ತಿಯ ಬಗ್ಗೆ ಲೇಖನ ಬರೆಯುವಾಗ ಸಂಪಾದಕರು ಬಹಳ ಕಾಳಜಿಯನ್ನು ವಹಿಸಿರಬೇಕು.ಕೆಳಗಿನ ಅಂಶಗಳನ್ನು ತಲೆಯಲ್ಲಿ ಇಟ್ಟುಕೊಂಡು ಲೇಖನಗಳನ್ನು ಸೃಷ್ಟಿಸಬೇಕು.

  • ಲೇಖನವು ಸ್ವತಃ ಸಂವೇದನೆಯನ್ನು ಮತ್ತು ನಮ್ಮ ನೀತಿಗಳನ್ನು ಆದಾರದ ಹಂತದೊಂದಿಗೆ ಸಂಪಾದನೆ ಮಾಡಬೇಕು;
  • ಲೇಖನಕ್ಕೆ ಸಂಬಂಧ ಪಟ್ಟ ವ್ಯಕ್ತಿಯು ವಿಷಯವನ್ನು ಸಂಪಾದಿಸಲು ಪ್ರಯತ್ನಿಸಿದಾಗ ಅದನ್ನು ಒಳ್ಳೆಯ ರೀತಿಯಲ್ಲಿ ಮತ್ತು ವಿನಯವಾದ ರೀತಿಯಲ್ಲಿ ವ್ಯವಹಾರಿಸಬೇಕು
  • ಒಂದು ಅನಾಮದೇಯ ಐಪಿ ವಿಳಾಸ ಅಥವಾ ಒಂದು ಹೊಸ ಖಾತೆಯಿಂದ ಜೀವಂತ ವ್ಯಕ್ತಿಯ ಬಗ್ಗೆಗಿನ ಲೇಖನ ಅಥವಾ ಅದರ ಒಂದು ವಿಭಾಗ ಬಗ್ಗೆ ಖಾಲಿ ಆದ ವೇಳೆ ಆ ವ್ಯಕ್ತಿಯನ್ನು ಆಕ್ರಮಿಸದೇ ಅವರನ್ನು ಸಂಭಾಷಣೆಗೆ ಒಳಮಾಡಬೇಕು ಮತ್ತು ಆ ಲೇಖನದಲ್ಲಿ ಯಾವುದೇ ರೀತಿಯ ಮೂಲವಿಲ್ಲದ ತಪ್ಪಾದ ವಿಷಯವು ಕಂಡಲ್ಲಿ ಅದನ್ನು ಅಳಿಸಬೇಕು.

ಬರವಣಿಗೆ ಶೈಲಿ

ಬದಲಾಯಿಸಿ

ಜೀವಂತ ಜನರ ಜೀವನಚರಿತ್ರೆಯನ್ನು ಜವಬ್ದಾರಿಯುತವಾಗಿ, ತಟಸ್ಥವಾಗಿ ಮತ್ತು ವಿಶ್ವಕೋಶೀಯ ಶೈಲಿಯಲ್ಲಿ ಬರೆಯಬೇಕು.ಲೇಖನಗಳಲ್ಲಿ, ಬೇರೆ ಲೇಖನಗಳಿಂದ ದೊರೆತ ಮೂಲ ವಿಷಯವನ್ನು ಮತ್ತು ಕೆಲವು ಸಂದರ್ಭಗಳಲ್ಲಿ ಅವರು ತಮ್ಮ ಬಗ್ಗೆ ಪ್ರಕಟಿಸಿದ ವಿಷಯವನ್ನು ನಿಷ್ಪಕ್ಷಪಾತ ರೀತಿಯಲ್ಲಿ ದಾಖಲಿಸಬೇಕು. ಬರವಣಿಗೆಯ ಶೈಲಿಯಲ್ಲಿ ತಟಸ್ಥ, ವಾಸ್ತವಿಕ ಮತ್ತು ಇರುವುದಕ್ಕಿಂತ ಹೆಚ್ಚಾಗಿ ಹಾಕಬಾರದು. ಸಹಾನುಭೂತಿ ದೃಷ್ಟಿಕೋನವನ್ನು ಮತ್ತು ಪತ್ರಿಕೋದ್ಯಮ ದೃಷ್ಟಿಕೋನವನ್ನು ತಪ್ಪಿಸಬೇಕು.

ಮೂಲಗಳು

ಬದಲಾಯಿಸಿ

ನಂಬಲಾರ್ಹ ಮೂಲಗಳು

ಬದಲಾಯಿಸಿ

ಜೀವನಚರಿತ್ರೆ ಅಥವಾ ಆತ್ಮಚರಿತ್ರೆಯಲ್ಲಿ ಯಾವುದಾದರು ಪ್ರತಿಪಾದನೆಗಳು ಮತ್ತು ಸುಳ್ಳಿನ ವಿಷಯಗಳು ಕಂಡು ಬಂದರೆ ಅದು ಮಾನನಷ್ಟಕರ. ನಂಬಲಾರ್ಹ ಮೂಲಗಳು,ತೃತೀಯ ಮೂಲಗಳು ಮತ್ತು ಯಾವುದೇ ಮೂಲ ಸಂಶೋಧನೆ ಮತ್ತು ಪರಿಶೀಲನೆ ಸಾಧ್ಯತೆ ಇಲ್ಲದೆ ಸೃಷ್ಟಿಸುವ ಲೇಖನಗಳು ನಮ್ಮ ವಿಷಯ ನೀತಿಯನ್ನು ಉಲ್ಲಂಘಿಸುತ್ತದೆ ಮತ್ತು ಮಾನನಷ್ಟ ಹಕ್ಕಿಗೆ ಕಾರಣವಾಗಬಹುದು. ಪಕ್ಷಪಾತ ವೆಬ್ಸೈಟ್‌‌ನಲ್ಲಿ ಇರುವ ಮತ್ತು ಅಸ್ಪಷ್ಟ ಪತ್ರಿಕೆಯಲ್ಲಿ ಇರುವ ವಿಷಯವನ್ನು ಹಾಕುವಾಗ ಎಚ್ಚರಿಕೆಯನ್ನು ವಹಿಸಬೇಕು. ಅದು ಅವಹೇಳನಕಾರಿಯಾಗಿದರೆ ಅದನ್ನು ಹಾಕಲೇಬಾರದು. ಸ್ವಯಂ ಬರೆದ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ, ವೆಬ್ಸೈಟ್‌‌‌ನಲ್ಲಿ ಮತ್ತು ಬ್ಲಾಗ್ಸ್‌ನಲ್ಲಿ ಇರುವ ವಿಷಯಗಳನ್ನು ಬಳಸಲೇ ಬಾರದು. ಈ ಮೂಲಗಳು ಬಿಎಲ್‌ಪಿನಲ್ಲಿ ಬಾಹ್ಯ ಕೊಂಡಿಗಳಿಗೆ ಸೇರಬಾರದು.

ಎಲ್ಲಾ ವಾರ್ತಪತ್ರಿಕೆಗಳು ಮತ್ತು ಮ್ಯಗಜಿನ್‌ಗಳು ನಂಬಲಾರ್ಹ ಮಾಹಿತಿಗಳನ್ನು ನೀಡುವುದಿಲ್ಲ. ಕೆಲವು ವಾರ್ತಪತ್ರಿಕೆಗಳು ಮತ್ತು ಮ್ಯಗಜಿನ್‌ಗಳು ಸುಳ್ಳು ಪುಕಾರುಗಳನ್ನು ಪ್ರಕಟಿಸುತ್ತದೆ. ಅಂತಹ ವಿಷಯಗಳಿಗೆ ಲೇಖನಗಳಲ್ಲಿ ಜಾಗವಿರುವುದಿಲ್ಲ. ಅಂತಹ ವಿಷಯವನ್ನು ಹಾಕುವುದಕ್ಕೂ ಮುನ್ನ ಅದು ನಿಜವಾದುದೇ, ನಂಬಲಾರ್ಹ ವಿಷಯವೇ ಮತ್ತು ಆ ವಿಷಯ ವಿಶ್ವಕೋಶೀಯ ಲೇಖನದಲ್ಲಿ ಪ್ರಕಟಿತವಾಗಿದೆಯೇ ಎಂದು ಪರಿಶೀಲಿಸಿ ಅನಂತರ ಆ ವಿಷಯವನ್ನು ಹಾಕಬೇಕಾಗುತ್ತದೆ.

ಮೂಲವಿಲ್ಲದ ಅಥವಾ ಕಳಪೆ ಮೂಲದ ವಿವಾದಾಸ್ಪದ ವಸ್ತು ತೆಗೆದುಹಾಕಿ

ಬದಲಾಯಿಸಿ

ಸಂಪಾದಕರು ವ್ಯಕ್ತಿಗಳ ಬಗ್ಗೆ ಮೂಲವಿಲ್ಲದ, ಮತ್ತು ವಿವಾದಾಸ್ಪದ ವಸ್ತು ತೆಗೆದುಹಾಕಬೇಕಾಗುತ್ತದೆ. ಇದು ವಿಕಿಪೀಡಿಯ:ಪರಿಶೀಲನೆಗೆ ಸಾಧ್ಯತೆಯಲ್ಲಿ ನಿರ್ದಿಷ್ಟಪಡಿಸಿದ ಗುಣಮಟ್ಟವನ್ನು ಪೂರೈಸದ ಮೂಲವನ್ನು ಅವಲಂಬಿಸಿರುತ್ತದೆ ಅಥವಾ ಇದು ಒಂದು ಊಹಾತ್ಮಕ ವ್ಯಾಖ್ಯಾನ ಮೂಲವಾಗುತ್ತದೆ. ಇದರಲ್ಲಿರುವ ವಸ್ತು ಅವಹೇಳನಕಾರಿ ಮತ್ತು ಮೂಲವಿಲ್ಲದ ಅಥವಾ ಕಳಪೆ ಮೂಲದ ವಸ್ತುವಾಗಿದ್ದರೆ , ಅದಕ್ಕೆ ಮೂರು ಪೂರ್ವಸ್ಥಿತಿಯ ನಿಯಮ ಅನ್ವಯಿಸುವುದಿಲ್ಲ. ಜೀವನಚರಿತ್ರೆಯ ಬಗ್ಗೆ ಬಳಕೆದಾರ ಮತ್ತು ಚರ್ಚೆ ಪುಟಗಳು ಸೇರಿದಂತೆ ವಿಕಿಪೀಡಿಯದಲ್ಲಿ ಎಲ್ಲೇ ಕಂಡುಬಂದರು ಈ ನಿಯಮಗಳು ಅನ್ವಯಿಸುತ್ತವೆ. ನಿರ್ವಾಹಕರು, ಪುಟ ರಕ್ಷಣೆಗಾಗಿ ಬ್ಲಾಕ್‌ಗಳನ್ನು ನೀಡಿ ಇಂತಹ ವಸ್ತು ತೆಗೆಯುವುದಕ್ಕೆ ಹೇಳುತ್ತಾರೆ. ಅವರ ಲೇಖನವನ್ನು ಅವರೆ ಸಂಪಾದನೆ ಮಾಡುತ್ತಿದ್ದರು ಸಹ ಈ ನಿಯಮಗಳು ಅನ್ವಯಿಸುತ್ತವೆ. ಸಂಪಾದಕರು , ಮತ್ತೆ ವಸ್ತುವನ್ನು ಸೇರಿಸುವುದಕ್ಕೆ ಪ್ರಯತ್ನಿಸಿದರೆ ಅವರಿಗೆ ಎಚ್ಚರಿಕೆ ನೀಡಿ ನಿರ್ಬಂಧಿಸಬಹುದು.

ವಿಷಯವನ್ನು ಸ್ವ-ಪ್ರಕಟಿತ ಮೂಲವಾಗಿ ಬಳಸುವುದು

ಬದಲಾಯಿಸಿ

ವ್ಯಕ್ತಿಯು ತಮ್ಮ ಬಗ್ಗೆ ತಾವೇ ಬರೆದುಕೊಳ್ಳೋವರೆಗು ಸ್ವ-ಪ್ರಕಟಿತ ಮೂಲವು ಬಿಎಲ್‌ಪಿನ ಕೆಳಗಡೆ ಬರುವುದಿಲ್ಲ. ವ್ಯಕ್ತಿಯ ಬಗ್ಗೆಗಿನ ವಿಷಯವು ಪತ್ರಿಕ ಬಿಡುಗಡೆ, ವೈಯಕ್ತಿಕ ವೆಬ್ಸೈಟ್‌‌‌ಗಳಲ್ಲಿ ಅಥವಾ ಬ್ಲಾಗ್‌ಗಳಿಂದ ತಿಳಿಯಬಹುದು. ಸ್ವ-ಪ್ರಕಟಿತ ವಿಷಯವನ್ನು ಲೇಖನಕ್ಕೆ ಹಾಕಬೇಕಾದರೆ ಅದು

  • ವ್ಯಕ್ತಿಯ ಪ್ರಾಧಾನ್ಯಕ್ಕೆ ಸಂಬಂಧ ಪಟ್ಟದಾಗಿರಬೇಕು;
  • ವಿವಾದಾಸ್ಪದವಾಗಿರ ಬಾರದು;
  • ಅನುಚಿತವಾಗಿ ಸ್ವಯಂ ಸೇವೆಯಾಗಿರಬಾರದು;
  • ಮೂರನೇ ಪಕ್ಷಗಳ ಬಗ್ಗೆ ಹಕ್ಕು ಒಳಗೊಳ್ಳದ ಅಥವಾ ನೇರವಾಗಿ ವಿಷಯಕ್ಕೆ ಸಂಬಂಧವಿಲ್ಲದ ಘಟನೆಗಳ ಬಗ್ಗೆ ಇರಬಾರದು;
  • ಯಾರು ಬರೆದರೆಂದು ಸಂಪೂರ್ಣವಾಗಿ ತಿಳಿಯಬೇಕು;

ಈ ನಿಬಂಧನೆಗಳನ್ನು ವಿಶ್ವಾಸಾರ್ಹ ತೃತೀಯ ಪ್ರಕಾಶಕರು ಪ್ರಕಟಿಸಿದ ಪ್ರಜೆಗಳ ಆತ್ಮಚರಿತ್ರೆ ಅನ್ವಯಿಸುವುದಿಲ್ಲ.ಇದನ್ನು ನಂಬಲಾರ್ಹ ಮೂಲವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಸ್ವ-ಪ್ರಕಟಿತವಲ್ಲ. ಸ್ವ-ಪ್ರಕಟಿತವಾದ ಬ್ಲಾಗ್ ಅಥವಾ ವೈಯಕ್ತಿಕ ವೆಬ್ಸೈಟ್‌‌‌ಗಳಲ್ಲಿ ದೊರೆಯುವ ವ್ಯಕ್ತಿಯ ಬಗ್ಗೆಗಿನ ವಿಷಯವು ಬಾಹ್ಯ ಕೊಂಡಿಗಳು / ಹೆಚ್ಚಿನ ಓದಿಗಾಗಿ ವಿಭಾಗದಲ್ಲಿ ಸೇರಿಸಲಾಗುತ್ತದೆ ಅಥವಾ ಅದನ್ನು ಲೇಖನದ ಮೂಲವಾಗಿ ಬಳಸಲಾಗುತ್ತದೆ.

ವ್ಯಕ್ತಿಯು ಅವರ ಸ್ವಂತ ಲೇಖನ ಸಂಪಾದನೆಯನ್ನು ವ್ಯವಹರಿಸುವಾಗ

ಬದಲಾಯಿಸಿ

ಕೆಲವು ಸಂದರ್ಭಗಳಲ್ಲಿ , ವ್ಯಕ್ತಿಯು ಅವರ ಸ್ವಂತ ಲೇಖನ ಸಂಪಾದನೆಯಲ್ಲಿ ಭಾಗಿಯಾಗುತ್ತಾರೆ. ಅವರು ತಮ್ಮ ಲೇಖನ ಬದಲಿಸಬಹುದು ಅಥವಾ ಬದಲಾಯಿಸಲು ಪ್ರತಿನಿಧಿ ಹೊಂದಿರಬಹುದು. ಅವರು ಲೇಖನ ಚರ್ಚೆ ಪುಟದ ಮೂಲಕ ಅಥವಾ ಇಮೇಲ್ ಮೂಲಕ ವಿಕಿಪೀಡಿಯ ಸಂಪಾದಕರನ್ನು ಸಂಪರ್ಕಿಸಬಹುದು. ವಿಕಿಪೀಡಿಯ ತಮ್ಮ ಬಗ್ಗೆ ಹೊಸ ಲೇಖನಗಳನ್ನು ಬರೆಯುವುದಕ್ಕೆ ಅಥವಾ ಅಸ್ತಿತ್ವದಲ್ಲಿರುವ ಲೇಖನ ವಿಸ್ತರಿಸುವುದಕ್ಕೆ ಪ್ರೋತ್ಸಾಹಿಸುವುದಿಲ್ಲ. ಆದರೆ, ಮೂಲವಿಲ್ಲದ ಅಥವಾ ಕಳಪೆ ಮೂಲದ ವಸ್ತು ಲೇಖನದಲ್ಲಿದ್ದರೆ, ಅದನ್ನು ಅಳಿಸಲು ಅನುಮತಿ ನೀಡುತ್ತದೆ.

ಜೀವನಚರಿತ್ರೆಯ ಲೇಖನ ಅಥವಾ ಯಾವುದಾದರು ಭಾಗವನ್ನು ಅನಾಮಧೇಯ ಸಂಪಾದನೆ ಮಾಡಿದಾಗ ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕು. ಸಂಪಾದನೆಯಲ್ಲಿ ಒಳಗೊಂಡಿರುವ ವ್ಯಕ್ತಿ ಪ್ರತ್ಯೇಕವಾದವನಲ್ಲ , ಅಂತಹ ಸಂಪಾದನೆಗಳನ್ನು ಸಾಮಾನ್ಯವಾಗಿ ಉಪಟಳತನಯೆಂದು ಪರಿಗಣಿಸಬಾರದು. ಆರ್ ಸಿ ಗಸ್ತುದಳ ಮತ್ತು ಭಾಗಿಯಾಗುವ ಇತರರು ಇಂತಹ ಸಂದರ್ಭಗಳಲ್ಲಿ ಅವರು ಯಾರನ್ನು ವ್ಯವಹರಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಂಡು ಎಚ್ಚರಿಕೆಯಿಂದ ಇರಬೇಕು. ಉಪಟಳತನಕ್ಕೆ ಸಂಬಂಧಿತ ಚರ್ಚೆ ಪುಟ ಮತ್ತು ಟೆಂಪ್ಲೇಟ್ಗಳ ಬಳಕೆಯನ್ನು ತಡೆಯಬೇಕು. ಪಕ್ಷಪಾತ ಅಥವಾ ಅಸಮರ್ಪಕ ವಸ್ತು ತೆಗೆದುಹಾಕಲು ಯತ್ನಿಸಬಹುದು.

ಏಕಂತ ಪರವಾದ ಭಾವನೆ

ಬದಲಾಯಿಸಿ

ಜೀವಂತ ಜನರ ಜೀವನಚರಿತ್ರೆ ಸಂಪ್ರದಾಯ ಮತ್ತು ವ್ಯಕ್ತಿಯ ಗೌಪ್ಯತೆಗೆ ಸಂಬಂಧಿಸಿದಂತೆ ಬರೆಯಬೇಕು.

ವಿಕಿಪೀಡಿಯ ಒಂದು ವಿಶ್ವಕೋಶ ಟ್ಯಾಬ್ಲಾಯ್ಡ್ ಅಲ್ಲ. ಒಂದು ವಿಷಯವನ್ನು ಉದ್ರೇಕಕಾರಿ ಮಾಡುವುದು ವಿಕಿಪೀಡಿಯದ ಕೆಲಸವಲ್ಲ ಅಥವಾ ಜನರ ಜೀವನದ ಬಗ್ಗೆ ಹಕ್ಕುಗಳನ್ನು ನೀರೂರಿಸುವ, ಹರಡುವ ಪ್ರಾಥಮಿಕ ವಾಹನ ಅಲ್ಲ. ವ್ಯಕ್ತಿಯ ಪ್ರತಿ ವಿವರ ಸೇರಿದಂತೆ ಒಂದು ಅಥವಾ ಎರಡು ಘಟನೆಗಳ ಬಗ್ಗೆ ಬರೆಯುವಾಗ ಸಮಸ್ಯೆಗಳಿಗೆ ಕಾರಣವಾಗಬಹುದು. ಅತ್ಯುತ್ತಮ ಸಂದರ್ಭದಲ್ಲಿ ಇದು ವಿಶ್ವಕೋಶವಲ್ಲದ ಲೇಖನಕ್ಕೆ ಕಾರಣವಾಗಬಹುದು. ಕೆಟ್ಟ ಸಂದರ್ಭದಲ್ಲಿ, ಈ ತಟಸ್ಥ ನಮ್ಮ ನೀತಿಗಳ ಗಂಭೀರ ಉಲ್ಲಂಘನೆ ಮಾಡಬಹುದು. ಸಂಶಯದ ಸಮಯದಲ್ಲಿ ಜೀವನಚರಿತ್ರೆ ಸಂಪೂರ್ಣವಾಗಿ ಮೂಲದ ತಟಸ್ಥ ಮತ್ತು ವಿಷಯ ರೂಪಕ್ಕೆ ತರಬೇಕು.

ಪರಿಚಿತ ಸಾರ್ವಜನಿಕ ವ್ಯಕ್ತಿಗಳು

ಬದಲಾಯಿಸಿ

ಕೆಲವು ಸಂದರ್ಭಗಳಲ್ಲಿ, ಗಮನಾರ್ಹ ಸಾರ್ವಜನಿಕ ವ್ಯಕ್ತಿಗಳ ಬಗ್ಗೆ ಬೇರೆ ಮೂಲಗಳಲ್ಲಿ ಪ್ರಕಟವಾದ ವಸ್ತು ವಿಶ್ವಾಸಾರ್ಹವಾಗಿದ್ದರೆ, ಆ ವಸ್ತು ಸರಳವಾಗಿ ವಿಕಿಪೀಡಿಯದ ಜೀವನಚರಿತ್ರೆಯಲ್ಲಿ ದಾಖಲಿಸಬಹುದು. ವ್ಯಕ್ತಿಯ ಬಗ್ಗೆ ಪ್ರಕಟವಾದ ಆರೋಪ ಅಥವಾ ಘಟನೆ ವಿಶ್ವಾಸಾರ್ಹ ಮೂಲಗಳಿಂದ ಮತ್ತು ದೃಡವಾದ ಉಲ್ಲೇಖವಿದ್ದರೆ - ಆ ವಸ್ತು ನಕಾರಾತ್ಮಕವಾದರು ಮತ್ತು ವ್ಯಕ್ತಿಗೆ ವಿಷಯ ಇಷ್ಟವಾಗದಿದ್ದರು ಸಹ ಲೇಖನದಲ್ಲಿ ಸೇರಿಸಬಹುದು. ಅದು ವಿಶ್ವಾಸಾರ್ಹ ಮೂಲದ ದಾಖಲೆಯಿಲ್ಲದಿದ್ದಲ್ಲಿ , ಆ ವಿಷಯವನ್ನು ಬಿಟ್ಟುಬಿಡಿ. ಪ್ರಾಥಮಿಕ ಮೂಲದ ವಸ್ತು ಎಚ್ಚರಿಕೆಯಿಂದ ಬಳಸಬೇಕು. ಉದಾಹರಣೆಗೆ, ಸಾರ್ವಜನಿಕ ದಾಖಲೆಗಳಾದ ಜನ್ಮ ದಿನಾಂಕ, ಮನೆ ಮೌಲ್ಯ, ಸಂಚಾರ ಆಧಾರಗಳು , ವಾಹನ ನೋಂದಣಿಗಳನ್ನು, ಮನೆ ಅಥವಾ ವ್ಯಾಪಾರ ವಿಳಾಸಗಳು, ವೈಯಕ್ತಿಕ ವಿವರಗಳು, ಪ್ರಯೋಗ ನಕಲುಗಳು ಮತ್ತು ಇತರ ನ್ಯಾಯಾಲಯದ ದಾಖಲೆಗಳನ್ನು , ವಿಶ್ವಾಸಾರ್ಹ ಪರೋಕ್ಷ ಮೂಲದಲ್ಲಿ ಉಲ್ಲೇಖಿಸಿದ್ದರೆ ಮಾತ್ರ ಜೀವನಚರಿತ್ರೆಯಲ್ಲಿ ಬಳಸಬೇಕು.

ತುಲನಾತ್ಮಕವಾಗಿ ಅಪರಿಚಿತ ಜನರು

ಬದಲಾಯಿಸಿ

ವಿಕಿಪೀಡಿಯದಲ್ಲಿ ಹೆಸರುವಾಸಿ ಆಗದೆ ಇರುವವರ ಬಗ್ಗೆಯು ಜೀವನ ಚರಿತ್ರಯ ಲೇಖನವನ್ನು ಸೃಷ್ಟಿಸಲಾಗಿರುತ್ತದೆ. ಈ ಲೇಖನವನ್ನು ಸಂಪಾದಿಸುವ ಸಂಪಾದಕರು ಬಹು ಎಚ್ಚರದಿಂದ ಮತ್ತು ಇರುವ ವಿಷಯವನ್ನು ಹಾಕಬೇಕಾಗುತ್ತದೆ. ಈ ಲೇಖನಗಳನ್ನು ಸೃಷ್ಟಿಸಬೇಕಾದರೆ ಮೊದಲು ಪ್ರಾಥಮಿಕ ಮೂಲವನ್ನು ಮತ್ತು ದ್ವಿತೀಯಾ ಮೂಲವನ್ನು ಬಳಸಿ ವಿಷಯವನ್ನು ಹಾಕಿದ ಬಳಿಕ ತೃತೀಯ ಪ್ರಾಥಮಿಕ ಮೂಲಗಳಿಂದ ದೊರೆತ ವಿಷಯವನ್ನು ಹಾಕಬೇಕಾಗುತ್ತದೆ.

ಒಂದು ಘಟನೆಯಿಂದ ಗಮನಾರ್ಹವಾದ ಜನರ ಬಗ್ಗೆಗಿನ ಲೇಖನಗಳು

ಬದಲಾಯಿಸಿ

ವಿಕಿಪೀಡಿಯ ಒಂದು ಪತ್ರಿಕೆ ಅಲ್ಲ. ಯಾರ ಬಗ್ಗೆಯಾದರು ಸುದ್ದಿ ಬಂದಿದ್ದರೆ, ಆ ವಾಸ್ತವು ವಿಶ್ವಕೋಶ ಪ್ರವೇಶಕ್ಕೆ ಒಳಪಟ್ಟಿರುತ್ತದೆ ಎಂದು ಸೂಚನೆಯಲ್ಲ. ಒಂದು ವ್ಯಕ್ತಿಯ ಬಗ್ಗೆ ವಿಕಿಪೀಡಿಯದಲ್ಲಿ ಹೆಸರನ್ನು ಉಲ್ಲೇಖಿಸಿ ಲೇಖನವಿದ್ದು ಮತ್ತು ಆ ವ್ಯಕ್ತಿಯ ಸಂಕ್ಷಿಪ್ತ ವ್ಯಕ್ತಿತ್ವ ಮೂಲಭೂತವಾಗಿ ಕಡಿಮೆ ಉಳಿದಿದ್ದರೆ, ಸಾಮಾನ್ಯವಾಗಿ ಅಂತವರ ಲೇಖನಕ್ಕೆ ವಿಷಯ ಸೇರಿಸುವುದರಿಂದ ದೂರವಿರಬೇಕು. ಕೇವಲ ಒಂದು ನಿರ್ದಿಷ್ಟ ಘಟನೆಯಿಂದ, ಒಂದು ಪ್ರತ್ಯೇಕ ಜೀವನಚರಿತ್ರೆ ಬರೆಯುವ ಅಗತ್ಯವಿಲ್ಲ. ಕನಿಷ್ಠ ಜೀವನಚರಿತ್ರೆ ಬರೆಯುವ ಕಾರಣದಿಂದ, ತಟಸ್ಥ ದೃಷ್ಟಿಕೋನ ನೀತಿಗೆ ಸಮಸ್ಯೆಯಾಗುತ್ತದೆ. ಇಂತಹ ಸಂದರ್ಭದಲ್ಲಿ, ಕೇವಲ ಘಟನೆಯ ಬಗ್ಗೆ ಪ್ರಸ್ತಾಪಿಸಿ ವ್ಯಕ್ತಿಯ ಬಗ್ಗೆ ಅಲ್ಲ. ಸಂಪಾದಕರು ಮಹತ್ವದ ಮಾಹಿತಿ ನಷ್ಟವಿಲ್ಲದೆ ಮತ್ತು ಖಾಸಗಿ ವ್ಯಕ್ತಿಗಳ ಹೆಸರುಗಳಿಲ್ಲದೆ ಲೇಖನಗಳನ್ನು ಪರಿಷ್ಕರಿಸುವುದು ಸಾಧ್ಯವೇ ಎಂದು ಪರಿಗಣಿಸಬೇಕು.

ಹುಟ್ಟಿದ ದಿನದ ಗೌಪ್ಯತೆ

ಬದಲಾಯಿಸಿ

ವಿಕಿಪೀಡಿಯ ಕೆಲವು ಪ್ರಸಿದ್ಧ ಜನರ ನಿಖರ ಜನನ ದಿನಾಂಕ ಒಳಗೊಂಡಿದೆ. ಈ ದಿನಾಂಕಗಳನ್ನು ನೀಡುವಾಗ ಬಹಳ ಎಚ್ಚರಿಕೆಯಿಂದ ಚೆನ್ನಾಗಿ ತಿಳಿದುಕೊಂಡು ಹಾಕಬೇಕಾಗುತ್ತದೆ. ಹೆಸರಾಂತ ವ್ಯಕ್ತಿಗಳ ಹುಟ್ಟಿದ ದಿನವು ದೇಶದ ಸಾಮಾನ್ಯ ಜನರಿಗೆ ಲಭ್ಯವಾಗಿ ಸಿಗುತ್ತದೆ. ಬೇರೆಯವರ ಹುಟ್ಟಿದ ದಿನದಲ್ಲಿ ತಪ್ಪುಗಳು ಇರಬುಹುದು. ಇತ್ತೀಚ್ಛಿನ ದಿನಗಳಲ್ಲಿ ಹುಟ್ಟ ದಿನಾಂಕವು ಬಹಳ ಗೌಪ್ಯತೆಯ ವಿಷಯವಾಗಿದೆ. ಹುಟ್ಟಿದ ದಿನ ಸರಿಯಾಗಿ ತಿಳಿದಿರದ ಸಮಯದಲ್ಲಿ ಮತ್ತು ದಿನಾಂಕದ ಬಗ್ಗೆ ಯಾವುದಾದರು ದೂರು ಬಂದಾಗ ಹುಟ್ಟಿದ ವರ್ಷವನ್ನು ಹಾಕಿದರೆ ಸಾಕು.

ವಿಮರ್ಶೆ

ಬದಲಾಯಿಸಿ

ವಿಮರ್ಶಕರ ವೀಕ್ಷಣೆಗಳು ಲೇಖನಕ್ಕೆ ಸಂಬಂಧಿತವಾಗಿದ್ದರೆ, ವಿಶ್ವಾಸಾರ್ಹ ಪರೋಕ್ಷ ಮೂಲಗಳ ಆಧಾರಿತವಾಗಿ ನಿರೂಪಿಸಬಹುದು. ಇಲ್ಲದಿದ್ದರೆ ಲೇಖನದ ವಸ್ತು, ನಾಶಪಡಿಸಲಾಗದ ಮತ್ತು ವಿಮರ್ಶಕರ ವಸ್ತು ಅಡ್ಡ ಬರದಿರುವ ರೀತಿಯಲ್ಲಿ ಬರೆಯಬೇಕು. ವಿಮರ್ಶೆಗೆ ಹೆಚ್ಚು ಪ್ರಮಾಣದ ಜಾಗ ನೀಡದೆ ಎಚ್ಚರಿಕೆ ವಹಿಸಬೇಕು. ಅಲ್ಪಸಂಖ್ಯಾತ ಅಭಿಪ್ರಾಯಗಳನ್ನು ವಿಮರ್ಶೆ ಪ್ರತಿನಿಧಿಸಿದರೆ, ಅದಕ್ಕೆ ಲೇಖನದಲ್ಲಿ ಸ್ಥಳವಿಲ್ಲ. ವಿಷಯ ನಂಬಲರ್ಹವಾದ ಮೂಲದಿಂದಾಗಿರಬೇಕು ಮತ್ತು ನಿರ್ದಿಷ್ಟವಾಗಿ ಲೇಖನದ ವಿಷಯದ ಬಗ್ಗೆ ಇರಬೇಕು. ಸಂಘದ ತಪ್ಪನ್ನು ಅವಲಂಬಿಸುವ ಸಮರ್ಥನೆಗಳಿಂದ ಹುಷಾರಾಗಿರಬೇಕು.

ಪಕ್ಷಪಾತ ಅಥವಾ ದುರುದ್ದೇಶಪೂರಿತ ವಿಷಯ

ಬದಲಾಯಿಸಿ

ಸಂಪಾದಕರು ಪಕ್ಷಪಾತ ಅಥವಾ ದುರುದ್ದೇಶಪೂರಿತ ವಿಷಯದ ಬಗ್ಗೆ ಚೆನ್ನಾಗಿ ಆನ್ವೇಷಣೆ ಮಾಡಿ ಅನಂತರ ಜೀವನಚರಿತ್ರಯಲ್ಲಿ ಬರೆಯಬೇಕು. ಯಾರದರು ಅವರ ಕೆಲಸಗಳನ್ನು ವೀಕ್ಷಿಸಿ ಪಕ್ಷಪಾತ ಪಾಯಿಂಟ್‌ ಹಾಕಿದಾಗ ವಿಶ್ವಾಸಾರ್ಹ ಮೂರನೇ ಪಕ್ಷದ ಮೂಲಗಳು ಪ್ರಕಟಿಸಿ ಅವರ ಉನ್ನತ ಹೆಸರನ್ನು ಉಳಿಸಬೇಕು.

ವರ್ಗಗಳ ಬಳಕೆ

ಬದಲಾಯಿಸಿ

ಲೇಖನ ವಿಷಯ ನೀಡಿರುವ ವರ್ಗವನ್ನು ಸ್ಪಷ್ಟಪಡಿಸಬೇಕು ಮತ್ತು ಅದು ವರ್ಗದ ಹೆಸರುಗಳು, ಹಕ್ಕು ನಿರಾಕರಣೆ ಅಥವಾ ಪರಿವರ್ತಕಗಳನ್ನು ಒಯ್ಯುವುದಿಲ್ಲ. ಲೇಖನದ ವರ್ಗದಲ್ಲಿ ಟ್ಯಾಗ್ ಬಳಕೆ ಮಾಡುವಾಗ, ಅದರಲ್ಲಿನ ವಸ್ತು ಸತ್ಯವನ್ನು ತಿಳಿಸಬೇಕು ಮತ್ತು ಮೂಲವನ್ನು ಹೊಂದಿರಬೇಕು. ಉದಾಹರಣೆಗೆ, ವರ್ಗ: ಪ್ರಸ್ತುತ ಘಟನೆ, ವ್ಯಕ್ತಿಯ ವಲಯದಲ್ಲಿ ಗಮನಾರ್ಹವಾಗಿದ್ದರೆ ಅಪರಾಧಿಗಳನ್ನು ಸೇರಿಸಬಹುದು; ಇದು ವಿಶ್ವಾಸಾರ್ಹ ಮೂಲಗಳಲ್ಲಿ ಪ್ರಕಟವಾಗಿರಬೇಕು. ಕೆಳಗಿನ ಎರಡು ಸೂತ್ರಗಳನ್ನು ನೆರವೇರಿಸದೆ ಧಾರ್ಮಿಕ ನಂಬಿಕೆಗಳು ಮತ್ತು ಲೈಂಗಿಕತೆ ಬಗ್ಗೆ , ವರ್ಗ ಟ್ಯಾಗ್‌ಗಳನ್ನು ಬಳಸಬಾರದು:

  • ವ್ಯಕ್ತಿ ಸಾರ್ವಜನಿಕವಾಗಿ ನಂಬಿಕೆಗಳನ್ನು ಸ್ವಯಂ ಗುರುತಿಸಿದರೆ ಬಳಸಬಹುದು.
  • ವ್ಯಕ್ತಿಯ ನಂಬಿಕೆಗಳು ಮತ್ತು ಲೈಂಗಿಕ ಆಯ್ಕೆಗಳು ಗಮನಾರ್ಹ ಚಟುವಟಿಕೆಗಳಿಗೆ ಅಥವಾ ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದ ವೇಳೆ, ಪ್ರಕಟವಾದ ಮೂಲಗಳನ್ನು ಆಧಾರಿತವಾಗಿ ಬಳಸಬಹುದು.

ಟ್ರಿವಿಯ ವಿಭಾಗಗಳು

ಬದಲಾಯಿಸಿ

ಜೀವಂತ ವ್ಯಕಿಯ ಜೀವನಚರಿತ್ರೆ ಲೇಖನಗಳು ಟ್ರಿವಿಯ ವಿಭಾಗದಿಂದ ತುಂಬಿರಬಾರದು. ಈ ಲೇಖನಗಳು ಸಂಬಂಧಿತ ಮೂಲದ ಹಕ್ಕುಗಳಿಂದ ಹೊಂದಿರಬೇಕು.

ಬಿ ಎಲ್ ಪಿ (BLP) ಉಲ್ಲಂಘನೆ ತಡೆಯುವುದು

ಬದಲಾಯಿಸಿ

ರಕ್ಷಣೆ

ಬದಲಾಯಿಸಿ

ಸಂಶಯವಿದ್ದಲ್ಲಿ ಜೀವನಚರಿತ್ರೆ ತಟಸ್ಥ ಹಾಗೂ ಮೂಲ ವಿಷಯಕ್ಕೆ ಆವೃತ್ತಿ ಮಾಡಬೇಕು. ನಿರ್ವಾಹಕರಿಗೆ ದುರುದ್ದೇಶಪೂರಿತ ಅಥವಾ ಪಕ್ಷಪಾತ ಸಂಪಾದನೆ ಶಂಕಿಸಿದರೆ ಅಥವಾ ಇದು ನೀತಿಯನ್ನು ಉಲ್ಲಂಘಿಸಬಹುದೆಂಬ ಭಾವನೆ ಮೂಡಿದರೆ, ವಿವಾದಿತ ವಸ್ತು ತೆಗೆದು ಪುಟವನ್ನು ರಕ್ಷಿಸಬಹುದು.


ಬಿ ಎಲ್ ಪಿ (BLP) ಅಳಿಸುವಿಕೆಗೆ ಗುಣಮಟ್ಟಗಳು

ಬದಲಾಯಿಸಿ

ಅರೆ ಗಮನಾರ್ಹ BLPs ಬಗ್ಗೆ AfDs ಮುಚ್ಚುವಾಗ ನಿರ್ವಾಹಕ ಲೇಖನಕ್ಕೆ ಸಂಬಂಧ ಪಟ್ಟ ವ್ಯಕ್ತಿಯ ಇಚ್ಛೆಯನ್ನು ತಿಳಿದುಕೊಳ್ಳುವುದು ಮುಖ್ಯ. ಇಷ್ಟು ಮಟ್ಟಿಗೆ ವ್ಯಕ್ತಿಯ ಇಚ್ಛೆಯನ್ನು ತಿಳಿದುಕೊಳ್ಳಬೇಕು ಎಂಬ ಒಮ್ಮತವಿಲ್ಲ.ಆದುದರಿಂದ ಇದು ನಿರ್ವಾಹಕನ ನಿರ್ಧರದ ಮೇಲೆ ಅವಲಂಭಿಸಿರುತ್ತದೆ. ಅಳಿಸಲಾದ BLPನಲ್ಲಿ ಇರುವ ವಿಷಯವನ್ನು ಬೇರೆ ಲೇಖನಕ್ಕೆ ಸೇರಿಸಲು ಸಾಧ್ಯವಿಲ್ಲ. ಈ ನಿಯಮ ವಿಕಿಪೀಡಿಯದ ಎಲ್ಲಾ ಪುಟಗಳಿಗೂ ಅನ್ವಹಿಸುತ್ತದೆ. ಒಂದು ವೇಳೆ ಬಿ ಎಲ್ ಪಿ(BLP)ನಲ್ಲಿ ಇರುವ ವಿಷಯವನ್ನು ಬೇರೆ ವಿಷಯದೊಂದಿಗೆ ಹಾಕಬೇಕಾದರೆ ಅದರ ಇತಿಹಾಸವನ್ನು ಜಿ ಎಫ್ ಡಿ ಎಲ್ (GFDL) ಮುಖಾಂತರ ಸಂರಕ್ಷಿಸಿರಬೇಕು.

ವಿವಾದಿತ ವಸ್ತು ತೆಗೆದುಹಾಕುವಿಕೆ

ಬದಲಾಯಿಸಿ

ಒಂದು ಪುಟ ಈ ನೀತಿಯನ್ನು ಉದಾಹರಿಸಿ ಅಳಿಸಿದರೆ, ನಿರ್ವಾಹಕರು, ಅಳಿಸಿರುವ ನಿರ್ವಾಹಕರೊಂದೆಗೆ ಸಮಸ್ಯೆಯನ್ನು ವಿವರವಾಗಿ ಚರ್ಚಿಸದೆ ಅಳಿಸುವಿಕೆ ರದ್ದುಮಾಡಬಾರದು. ಅಳಿಸಿರುವ ನಿರ್ವಾಹಕರು, ವಸ್ತು ಸೂಕ್ಷ್ಮವನ್ನು ಇಮೇಲ್ ಮೂಲಕ ಇತರ ನಿರ್ವಾಹಕರಿಗೆ, ಅಳಿಸುವಿಕೆಯ ಬಗ್ಗೆ ವಿವರಿಸಬೇಕು; ಅಳಿಸುವಿಕೆಗೆ ಆಕ್ಷೇಪಿಸುವ ನಿರ್ವಾಹಕರು, ಅಳಿಸಿರುವ ನಿರ್ವಾಹಕರು ಇತರ ವಿಷಯಗಳನ್ನು ಆಧಾರಿಸಿ ಅಳಿಸಿರಬಹುದೆಂದು ತಿಳಿಯಬೇಕು.

ಸೂಕ್ತವಾಗಿದ್ದರೆ, ವಿವಾದಗಳ ಅಳಿಸುವಿಕೆಯನ್ನು ಪುನರವಲೋಕನಕ್ಕೆ ತೆಗೆದುಕೊಂಡು ಹೋಗಬಹುದು.

ಲೇಖನ ಅಳಿಸಿದ ನಂತರ ಎ ಎಫ್ ಡಿ(AFD)ನಲ್ಲಿ ಕೃಪೆ ಖಾಲಿಮಾಡುವುದು

ಬದಲಾಯಿಸಿ

ಲೇಖನ ಅಳಸುವಿಕೆ ಚರ್ಚೆಯಿಂದ ಅಳಿಸಲಾದ ಜೀವಂತ ವ್ಯಕ್ತಿಯ ಜೀವನಚರಿತ್ರೆಯು AFD ಪುಟದಿಂದ ಮತ್ತು ಸಂಬಂಧ ಪಟ್ಟ ಮೂಲಗಳಿಲ್ಲದ ಲೇಖನಗಳಿಂದ ಅಳಿಸಲಾಗುತ್ತದೆ. ಬಿ ಎಲ್ ಪಿ(BLP) ಅಳಿಸುವಿಕೆಗೆ ನಂತರ ಯಾವುದಾದರು ನಿರ್ವಾಹಕ ಆ ಲೇಖನದ ಮರುಸೃಷ್ಟಿಯಿಂದ ರಕ್ಷಿಸಲು ಆಯ್ಕೆ ಮಾಡಿಕೊಳ್ಳಬಹುದು.

ನಿರ್ಬಂಧಿಸುವುದು

ಬದಲಾಯಿಸಿ

ಸಂಪಾದಕರು, ವ್ಯಕ್ತಿಗಳ ಬಗ್ಗೆ ಮೂಲವಿಲ್ಲದ ಅಥವಾ ಕಳಪೆ ಮೂಲದ ವಿವಾದಾಸ್ಪದ ವಸ್ತುವನ್ನು ಪದೇ ಪದೇ ಸೇರಿಸಿದರೆ ಅಥವಾ ಪುನಃಸ್ಥಾಪಿಸಿದರೆ ಅವರನ್ನು ನಿರ್ಬಂಧಿಸಬಹುದು.

ಟೆಂಪ್ಲೇಟ್ಗಳು

ಬದಲಾಯಿಸಿ

ಜೀವಂತ ವ್ಯಕ್ತಿಯ ಜೀವನಚರಿತ್ರೆಯು ಲೇಖನಕ್ಕೆ ಸಂಬಂಧ ಪಟ್ಟ ವ್ಯಕ್ತಿಗೆ ಅಲ್ಲದೇ ಎಲ್ಲ ಜೀವಂತ ವ್ಯಕ್ತಿಗಳಿಗೂ ಅನ್ವಹಿಸುತ್ತದೆ. ಲೇಖನದಲ್ಲಿ ಉಲ್ಲೇಖಿಸಲಾದ ವ್ಯಕ್ತಿಯ ಬಗ್ಗೆಗಿನ {{Blp}}ಯನ್ನು ಲೇಖನಗಳ ಚರ್ಚಾಪುಟಕ್ಕೆ ಸೇರಿಸಲಾಗುತ್ತದೆ ಮತ್ತು ಇದು ಜೀವಂತ ವ್ಯಕ್ತಿಯ ಜೀವನಚರಿತ್ರೆಯ ಚರ್ಚಾಪುಟದಲ್ಲಿ ಸೇರಿಸಲಾಗುತ್ತದೆ ಆದ್ದುದರಿಂದ ಸಂಪಾದಕರು, ಓದುಗಾರರು ಮತ್ತು ಲೇಖನಕ್ಕೆ ಸಂಬಂಧ ಪಟ್ಟ ವ್ಯಕ್ತಿಗೆ ನೀತಿಗಳ ಬಗ್ಗೆ ಎಚ್ಚರಿಕೆಯನ್ನು ನೀಡಬಹುದು. ಜನರು ಬಿ ಎಲ್ ಪಿ(BLP) ಉಲ್ಲಂಘಿಸಿದ ಸಮಸ್ಯೆಗಳನ್ನು, ನೀವು ಈ ಟೆಂಪ್ಲೆಟ್ಗಳನ್ನು ಬಳಸಬಹುದು:


ಈ ನೀತಿಯ ಪ್ರಕಾರ ವಸ್ತುಗಳನ್ನು ಏಕೆ ತೆಗೆದುಹಾಕಲಾಗಿದೆ ಎಂದು ವಿವರಿಸಲು ಲೇಖನದ ಚರ್ಚೆ ಪುಟದಲ್ಲಿ {{BLP removal}} ಬಳಸಬಹುದು.

ನಿಮ್ಮ ಬಗ್ಗೆ ಲೇಖನ ವ್ಯವಹರಿಸುವಾಗ

ಬದಲಾಯಿಸಿ

ನಿಮ್ಮ ಬಗ್ಗೆ ಬರೆದ ಲೇಖನದ ವಸ್ತುವಿನ ಬಗ್ಗೆ ಪ್ರಶ್ನೆ ಅಥವಾ ಸಮಸ್ಯೆ ಇದ್ದರೆ ಇಮೇಲ್ ಮೂಲಕ ವಿಕಿಪೀಡಿಯ ಸಂಪಾದಕರನ್ನು ಸಂಪರ್ಕಿಸಬಹುದು. ನಿಮಗೆ ನೀತಿಯನ್ನು ಜಾರಿಗೊಳಿಸುವಲ್ಲಿ ಸಹಾಯ ಬೇಕಾದರೆ, ಬಿ ಎಲ್ ಪಿ ನೋಟೀಸ್ಬೋರ್ಡ್ ಮೇಲೆ ನಮಗೆ ತಿಳಿಸಿ ಅಥವಾ ವ್ಯವಸ್ಥಾಪಕರನ್ನು ಸಂಪರ್ಕಿಸಿ.

ನಿಯೋಜಿತ ಏಜೆಂಟ್

ಬದಲಾಯಿಸಿ

ವಿಕಿಪೀಡಿಯದ ನಿಯೋಜಿತ ಏಜೆಂಟ್:


Jimmy Wales, Designated Agent
Wikimedia Foundation, Inc.
146 2nd St N, # 310
St. Petersburg FL 33701
United States
Facsimile number: +1(727)258-0207

E-mails may also be sent to: info-en "at" wikipedia.org (replace the "at" with @)