ನಮಸ್ಕಾರ Shireeshj


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೦೭:೩೭, ೩೦ ಜೂನ್ ೨೦೨೦ (UTC)

ಪ್ರೊ.ಭಾಲಚಂದ್ರ ಜಯಶೆಟ್ಟಿ ಬದಲಾಯಿಸಿ

ಕಲ್ಯಾಣ ಕರ್ನಾಟಕದ ಖ್ಯಾತ ಸಾಹಿತಿ, ಅನುವಾದಕರಲ್ಲಿ ಅಗ್ರಗಣ್ಯರಾಗಿ ಕತೆ,ಕವನ, ಲೇಖನ, ನಾಟಕ,ಲಲಿತ ಪ್ರಬಂಧ, ಶರಣ ಸಾಹಿತ್ಯ, ಅನುವಾದ ಸಾಹಿತ್ಯ ಸೇರಿದಂತೆ ಹಲವಾರು ಪ್ರಕಾರದ ಸಾಹಿತ್ಯ ರಚಿಸಿ ಸುಮಾರು ಎಂಬತ್ತರಷ್ಟು ಮೌಲಿಕ ಕೃತಿಗಳು ಪ್ರಕಟಿಸಿ ಪ್ರಖ್ಯಾತರಾದ ಹಿರಿಯ ಸಾಹಿತಿಯೆಂದರೆ ಪ್ರೊ. ಭಾಲಚಂದ್ರ ಜಯಶೆಟ್ಟಿ . ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಭೀಮಣ್ಣಾ ಮತ್ತು ಜಯಮ್ಮ ದಂಪತಿಗಳಿಗೆ ದಿನಾಂಕ 22-11-1939 ರಲ್ಲಿ ಜನಿಸಿದ್ದಾರೆ. ಹಿಂದಿ ಭಾಷೆಯಲ್ಲಿ ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು 1965 ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಸರ್ಕಾರಿ ಪದವಿ ಮಹಾವಿದ್ಯಾಲಯದ ಹಿಂದಿ ಭಾಷಾ ಸಹ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿ, 1997 ರಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಭಾಷೆಗಳಲ್ಲಿ ಪ್ರವೀಣತೆ ಹೊಂದಿದ ಇವರು ಹಲವಾರು ಕೃತಿಗಳು ಬರೆದು, ಕನ್ನಡದಿಂದ ಹಿಂದಿಗೆ ಅನುವಾದ ಮಾಡುವವರಲ್ಲಿ ಅಗ್ರಗಣ್ಯರಾಗಿದ್ದಾರೆ. ಇವರು ಪ್ರಕಟಿಸಿದ ಕೃತಿಗಳೆಂದರೆ,

1991 ರಲ್ಲಿ ಮಿರ್ಚಿ ಬಾಬಾ ಮತ್ತು ಇತರ ಕತೆಗಳು ಎಂಬ ಕಥಾಸಂಕಲನ, 2003 ರಲ್ಲಿ ಯುಗಾಂತ ಎಂಬ ನಾಟಕ. (ಇದು ಮೂರು ಸಲ ಮುದ್ರಣ ಕಂಡಿದೆ.) 2002 ರಲ್ಲಿ ನಮ್ಮ ಮನೆ ಎಂಬ ಲಲಿತ ಪ್ರಬಂಧ ಸಂಕಲನ, 2003 ರಲ್ಲಿ ಚಿಂತನ -ಮಂಥನ ಎಂಬ ವೈಚಾರಿಕ ಲೇಖನಗಳ ಸಂಕಲನ, 2004 ರಲ್ಲಿ ಭಗತ್ ಸಿಂಗ ಎಂಬ ಜೀವನ ಚರಿತ್ರೆ, 2005 ರಲ್ಲಿ ಕನ್ನಡ ವ್ಯಾಕರಣ ಕೈಪಿಡಿ, 1973 ರಲ್ಲಿ ಲೀಲಾವತಾರಿ ವೀರಭದ್ರ, 1991 ರಲ್ಲಿ ಕೊಡ್ಗಲ್ಲಿನ ಕೂಗು, 1993 ರಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ವಿ.ಎಸ್.ಖಾಂಡೆಕರ್, ಕುರಿತು ಬರೆದರೆ 1984 ರಲ್ಲಿ ಹಿಂದಿಯಲ್ಲಿ ವಿಭೂತಿಯಂ ಮತ್ತು 2014 ರಲ್ಲಿ ಅಷ್ಟಾವರಣ ಕಿ ವೈಜ್ಞಾನಿಕತಾ 2016 ರಲ್ಲಿ ಶರಣ ಆಂದೋಲನ ಎಂಬ ಮೂರು ಪುಸ್ತಕಗಳು ರಚಿಸಿದ್ದಾರೆ. ಹಾಗೂ 2005 ರಲ್ಲಿ ಪ್ರಯೋಗಿಕ ಕನ್ನಡ ವ್ಯಾಕರಣ ಮತ್ತು ಡಾ.ಸಿದ್ದಲಿಂಗ ಸ್ವಾಮಿಗಳು , ಹರಳಯ್ಯಾ ಕೃತಿಗಳು ಪ್ರಕಟಿಸಿದರೆ 2006 ರಲ್ಲಿ ಹೈದರಾಬಾದ ಕರ್ನಾಟಕದ ವಿಮೋಚನಾ ಚಳವಳಿ , ಕಬೀರದಾಸರು , ಪಂ.ಶಿವಚಂದ್ರಜಿ, 2010 ರಲ್ಲಿ ಮಹಾಪ್ರಸಾದಿ ಕಕ್ಕಯ್ಯ, ಶರಣ ಸಾಹಿತ್ಯ ಸುತ್ತಮುತ್ತ 2011 ರಲ್ಲಿ ಆನುದೇವ ಒಳಗಣವನು. ಅಮ್ಮಾವ್ರ ಗಂಡ 2012 ರಲ್ಲಿ ಸಂತ ಕಬೀರದಾಸರು,ಶರಣ ಚಿಂತನೆಯ ನೆಲೆಯಲ್ಲಿ 2013 ರಲ್ಲಿ ವೈಜ್ಞಾನಿಕ ನೆಲೆಯಲ್ಲಿ ಅಷ್ಟಾವರಣ ಮತ್ತು ಚುರುಕು ಚಟಾಕಿ , 2014 ರಲ್ಲಿ ಬಸವಣ್ಣ ಮತ್ತು ಲೋಹಿಯಾ, ಬಸವಣ್ಣ ಮತ್ತು ತುಳಸಿದಾಸ, ಆಮುಗಿ ದೇವಯ್ಯ, ಮೇದಾರ ಕೇತಯ್ಯ ಕೃತಿಗಳು ಹೊರತಂದರೆ, 2015 ರಲ್ಲಿ ದಂಡಕಾರುಣ್ಯದಲ್ಲಿ ಗಣತಂತ್ರ, ಶರಣಾ ಲೋಕ ಮತ್ತು ಶರಣು ಶರಣಾರ್ಥಿ- ಭಾಗ-1.2.3. ಇವು ಇವರ ಸಮಗ್ರ ಶರಣ ಸಾಹಿತ್ಯದ ಕೃತಿಗಳಾದರೆ, 2016 ರಲ್ಲಿ ಸೃಜನ 2017 ರಲ್ಲಿ ಸಂಕೀರ್ಣ' ಎಂಬ ಕೃತಿಗಳು, ಇವರ ಸಮಗ್ರ ಸಾಹಿತ್ಯ ಸಂಪುಟಗಳು ಭಾಗ -1.2. ರಲ್ಲಿ ಮುದ್ರಣಗೊಂಡಿವೆ. ಸಂಪ್ರಾಪ್ತಿ ಎಂಬುದು ಇವರು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ಸಮಗ್ರ ಸಾಹಿತ್ಯ ಸಂಪುಟವಾಗಿದೆ. ಮತ್ತು 2016 ರಲ್ಲಿ ಡೊಹರ ಕಕ್ಕಯ್ಯ 2017 ರಲ್ಲಿ ಶರಣಿ ಸತ್ಯಕ್ಕ 2018 ರಲ್ಲಿ ಅಪರಿಮಿತದ ಕತ್ತಲೆಯೊಳಗೆ ವಿಪರಿತದ ಬೆಳಕು ಮತ್ತು ಪೂರ್ವೋತ್ತರ ಪರಿಣಯ 2019 ರಲ್ಲಿ ಬಾಚಿ ಕಾಯಕದ ಬಸವಯ್ಯ ಎಂಬ ಕೃತಿಗಳು ರಚಿಸಿದ್ದಾರೆ.

ಇವರು ಬರೆದ ಬರಹಗಳು ನೂರಕ್ಕಿಂತ ಹೆಚ್ಚು , ಕನ್ನಡ, ಹಿಂದಿ ಭಾಷೆಯಲ್ಲಿ ವೈಚಾರಿಕ, ಸಂಶೋಧನಾತ್ಮಕ ಲೇಖನಗಳು ಬರೆದಿದ್ದು ಅವು ಮಾಸಪತ್ರಿಕೆಗಳಾದ ಬಸವಪಥ, ಹಿಂದಿ ಪತ್ರಿಕೆ ಬಸವಮಾರ್ಗ , ಮಹಾಮನೆ, ಸಿದ್ದಗಂಗಾ,ಹೊಸತು,ತುಷಾರ, ಪ್ರಜಾವಾಣಿ,ಕನ್ನಡ ಪ್ರಭ,ಮಯೂರ, ತರಂಗ, ಸುಧಾ, ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಆಕಾಶವಾಣಿಯಲ್ಲಿ ಕಲಬುರಗಿ, ಬೆಂಗಳೂರು, ಮಂಗಳೂರು, ಗುಜರಾತ್, ದೆಹಲಿ, ಕೇಂದ್ರಗಳಿಂದ ಮತ್ತು ಬೆಂಗಳೂರು ದೂರದರ್ಶನದಿಂದ ಇವರ ಕಾರ್ಯಕ್ರಮಗಳು ಪ್ರಸಾರವಾಗಿವೆ.

ಕಲಬುರ್ಗಿಯ ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಭಾಲ್ಕಿ ಹಿರೇಮಠ ಮಠದಿಂದ ಇವರು ಹಲವಾರು ಪುಸ್ತಕಗಳು ಸಂಪಾದಿಸಿ ಪ್ರಕಟಿಸಿದ್ದಾರೆ.

ಅಷ್ಟೇಯಲ್ಲದೆ ಇವರು ಅನುವಾದಕರಾಗಿ ಕನ್ನಡದ ಪ್ರಮುಖ ಸಾಹಿತಿಗಳ 30 ಕೃತಿಗಳು ಹಿಂದಿಗೆ ಅನುವಾದಿಸಿದ್ದಾರೆ. ಮತ್ತು ಮರಾಠಿಯಿಂದ ಕನ್ನಡಕ್ಕೆ ಒಂದು, ಹಿಂದಿಯಿಂದ ಕನ್ನಡಕ್ಕೆ ಮೂರು ಕೃತಿಗಳು ಅನುವಾದಿಸಿದ್ದಾರೆ. ಇವರ ಅನುವಾದ ಸಾಹಿತ್ಯ 1981 ರಲ್ಲಿ ದುಃಖ ಭರಾ ರಾಗ ಕೃತಿಗೆ ಶಿಕ್ಷ ಮಂತ್ರಾಲಯ ಪರವಾಗಿ ದೆಹಲಿಯ ಹಿಂದಿ ನಿರ್ದೇಶನಾಲಯದ ಪ್ರಶಸ್ತಿ, ಮತ್ತು ಅದೇ ವರ್ಷ ಕರ್ನಾಟಕ ಸರ್ಕಾರದ ಪ್ರಶಸ್ತಿ, 2002 ರಲ್ಲಿ ಯು.ಆರ್.ಅನಂತಮೂರ್ತಿ ಯವರ ಅವಸ್ಥಾ ಕೃತಿ ಹಿಂದಿಗೆ ಅನುವಾದಿಸಿದ್ದರಿಂದ ಕರ್ನಾಟಕ ರಾಜ್ಯ ಪ್ರಶಸ್ತಿ, 1993 ರಲ್ಲಿ ಬಿ.ಎಂ.ಶ್ರೀ ಯವರ ಭಾರತೀಯ ಕಾವ್ಯ ಮೀಮಾಂಸೆ ಹಿಂದಿಗೆ ಅನುವಾದಿಸಿದ್ದರಿಂದ 1994 ರಲ್ಲಿ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದಾರೆ. 1995 ರಲ್ಲಿ, ಎಸ್.ಎಲ್.ಬೈರಪ್ಪ ನವರ ಅನುವಾದಿತ ಛೋರ್ ಕೃತಿಗೆ ಉತ್ತರಾಂಚಲದಿಂದ ಅಂತರಾಷ್ಟ್ರೀಯ ಪ್ರಶಸ್ತಿ. 2010 ರಲ್ಲಿ ಜಿ.ಎಸ್. ಶಿವರುದ್ರಪ್ಪನವರ ಕಾವ್ಯಾರ್ಥ ಚಿಂತನ ಹಿಂದಿ ಅನುವಾದಿತ ಕೃತಿಗೆ 2009 ನೇ ವರ್ಷದ ಅನುವಾದಿತ ಕೃತಿಗಳಿಗಾಗಿ ನೀಡುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1985 ರಲ್ಲಿ ವಿಭೂತಿಯಂ ಮತ್ತು 1995 ರಲ್ಲಿ ಮೋಡ್ ಎಂಬ ಹಿಂದಿ ಕೃತಿಗಳಿಗೆ, ಹಾಗೂ 2001 ರಲ್ಲಿ ಯುಗಾಂತ ಎಂಬ ಕನ್ನಡ ನಾಟಕ ಕೃತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿ 2014 ರಲ್ಲಿ ಶರಣರ ಚಿಂತನೆಯ ನೆಲೆಯಲ್ಲಿ ಎಂಬ ಕೃತಿಗೆ ಕಾವ್ಯಾನಂದ ಪ್ರಶಸ್ತಿ 2005 ರಲ್ಲಿ ಕಲಬುರ್ಗಿಯ ಉದಯೋನ್ಮುಖ ಬರಹಗಾರರ ಬಳಗದಿಂದ ಕಾಯಕ ಸಮ್ಮಾನ ಪ್ರಶಸ್ತಿ , 2003 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

1998 ರಲ್ಲಿ ಬೀದರ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಹಾಗೂ 2017 ರಲ್ಲಿ ಪುಣೆಯಲ್ಲಿ ಜರುಗಿದ ಮಹಾರಾಷ್ಟ್ರ ರಾಜ್ಯ ಮಟ್ಟದ ಮರಾಠಿ ಮೊದಲನೆಯ ಬಸವೇಶ್ವರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಮತ್ತು 2016 ರಲ್ಲಿ 75 ವರ್ಷ ತುಂಬಿದ ಪ್ರಯುಕ್ತ ಭಾಲ್ಕಿ ಹಿರೇಮಠದಿಂದಲೂ ಇವರಿಗೆ ಸನ್ಮಾನಿಸಿ ಗೌರವಿಸಿದ್ದಾರೆ. ಹಾಗೂ 2004 ರಲ್ಲಿ ಕಲಬುರಗಿಯ ಸಿದ್ಧಲಿಂಗೇಶ್ವರ ಪ್ರಕಾಶನದ ವತಿಯಿಂದ ನಮ್ಮ ಅನುವಾದಕ ಎಂಬ ಅಭಿನಂದನಾ ಗ್ರಂಥವು ಸಮರ್ಪಿಸಲಾಗಿದೆ.

ವಿ.ಸಿ.ಸಂಪದ ಬೆಂಗಳೂರು ವತಿಯಿಂದ 2017 ರಲ್ಲಿ ಪ್ರತಿಭಾ ಸಂಪನ್ನರು ಎಂದು ನಗದು ಬಹುಮಾನದೊಂದಿಗೆ ಸನ್ಮಾನ, ಮತ್ತು ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ವತಿಯಿಂದ ಇವರ ಜೀವಮಾನ ಸಾಧನೆಗಾಗಿ 2019 ರಲ್ಲಿ ಗೌರವ ಪ್ರಶಸ್ತಿ, ನಗದು ಬಹುಮಾನ ನೀಡಿ ಸತ್ಕರಿಸಲಾಗಿದೆ.

ಇವರ ಬದುಕು ಬರಹ ಕುರಿತು ಸಾಹಿತಿ ಪತ್ರಕರ್ತರಾದ ಸಂಗಮನಾಥ ರೇವತಗಾಂವ ಅವರು ಭಾಲಚಂದ್ರ ಜಯಶೆಟ್ಡಿ ಎಂಬ ಪರಿಚಯಾತ್ಮಕ ಕೃತಿಯೊಂದು ಹೊರತಂದಿದ್ದಾರೆ. ಇವರ ಕುರಿತು ಡಾ.ಹಣಮಂತ ಮೇಲಕೇರಿ ಯವರು ಎಂ.ಫೀಲ್ ಪದವಿ ಪಡೆದರೆ, ಸಾವಿತ್ರಿ ಎನ್ನುವವರು ಪಿ.ಎಚ್.ಡಿ.ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸದ್ಯ ಇವರು ಕಲಬುರಗಿಯ ನಿವಾಸಿಯಾಗಿದ್ದು, ವಿಶ್ರಾಂತ ಜೀವನದೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.