ನಮಸ್ಕಾರ Shingu1989


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೨೩:೧೯, ೧೬ ನವೆಂಬರ್ ೨೦೨೩ (IST)Reply

*ಡಾ. ಹಾ.ಮ ನಾಗಾರ್ಜುನ್* ಬದಲಾಯಿಸಿ

ಡಾ. ಹಾ. ಮ. ನಾಗಾರ್ಜುನ

ಡಾ. ಹಾ.ಮ. ನಾಗಾರ್ಜುನ ಅವರ ಪ್ರತಿಭೆ, ಪರಿಶ್ರಮ ಸಾಹಿತ್ಯ ಸಂಘಟನೆಗಳಲ್ಲಿ ಮುಪ್ಪರಿಗೊಂಡಿವೆ. ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಹದಿನೆಂಟು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಹನ್ನೆರಡಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ. ನಲವತ್ತೈದರ ಹರೆಯದ ನವ ತಾರುಣ್ಯದ ಉತ್ಸಾಹಿಗಳಾದ ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಥೆ, ಕವನ, ಪ್ರಬಂಧ, ವಿಮರ್ಶೆ, ಸಂಪಾದನೆ ಪ್ರಕಾರಗಳಲ್ಲಿ ಕೃಷಿಗೈದಿರುವ ಇವರು ಪ್ರಾಧ್ಯಾಪಕ ವೃತ್ತಿಯ ಜೊತೆ ಜೊತೆಗೆ ಸಾಹಿತ್ಯ ಕೃಷಿ ಮಾಡುತ್ತಾ ಪ್ರಗತಿಪರ ಕೃಷಿಕರಾಗಿ ಸಾವಯವ ಕೃಷಿಯೊಂದಿಗೆ ಹಲವು ರೈತರೊಂದಿಗೆ ಸಮಾಲೋಚನೆ ನಡೆಸಿ ಹಲವು ಹತ್ತು ವಿಚಾರಕಮ್ಮಟಗಳಲ್ಲಿ ಭಾಗಿಯಾಗಿ ವಿಚಾರ ಮಂಡಿಸಿರುತ್ತಾರೆ.

'ಕನ್ನಡ ಸಾಹಿತ್ಯದಲ್ಲಿ ಜನಪ್ರಿಯ ಸಾಹಿತ್ಯ ನಡೆದು ಬಂದ ಹೆಜ್ಜೆ ಗುರುತುಗಳು' ಕುರಿತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪಡೆದು ೨೦೦೨ ರಿಂದ ಪ್ರಾಧ್ಯಾಪಕ ವೃತ್ತಿಯಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿ ತೊಡಗಿಸಿಕೊಂಡರು. ೨೦೦೮ ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ನಂತರದಲ್ಲಿ ಕರ್ನಾಟಕದ ಕೇಂದ್ರ ಸ್ಥಾನವಾದ ಬೆಂಗಳೂರಿನಲ್ಲಿ 'ಕರ್ನಾಟಕ ಸಂಶೋಧಕರ ಒಕ್ಕೂಟ' (ರಿ) ಸ್ಥಾಪಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಸಂಘಟಿತವಾದ ಈ ಒಕ್ಕೂಟದ ನೈರುತ್ಯ ವಲಯದ ಕುವೆಂಪು ವಿ.ವಿ. ವ್ಯಾಪ್ತಿಯ ವಲಯ ಸಂಚಾಲಕನಾಗಿ ಸುಮಾರು ಹನ್ನೆರಡಕ್ಕೂ ಹೆಚ್ಚು ಕಮ್ಮಟಗಳನ್ನು ಪದವಿ ಕಾಲೇಜುಗಳಲ್ಲಿ ಹಮ್ಮಿಕೊಂಡು ಅರಿವು ಅರಿವಿನ ವಿಸ್ತಾರವನ್ನು ನಾಡಿನ ವಿದ್ವಾಂಸರ ಮುಖೇನ ವಿಚಾರ ಮಂಡಿಸಿ ಅಲ್ಲಿನ ಫಲಿತ ವಿಷಯಗಳನ್ನು ಸಂಪಾದಿಸಿ' ಪರಿಶೋಧ ಕೃತಿ ಪ್ರಕಟಿಸಿ ಮತ್ತಷ್ಟು ಶಕ್ತಿಯನ್ನು ಅಧಿಕೃತವಾಗಿ ಹೆಚ್ಚಿಸಿದ್ದಾರೆ. ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಕೈಗೊಂಡು ಬೆಂಗಳೂರು ಇವರ ಸಹಯೋಗದೊಂದಿಗೆ ಮೂಲಭೂತ ಹಕ್ಕುಗಳು, ಮಾನವ ಹಕ್ಕುಗಳು, ಮಹಿಳಾ ಸಬಲೀಕರಣದ ಹಕ್ಕುಗಳು, ಮಾನವೀಯ ಮೌಲ್ಯಗಳು ಶಿಕ್ಷಣದ ಹಕ್ಕುಗಳು ಹೀಗೆ ಹಲವು ಹತ್ತು ಹಕ್ಕುಗಳ ಸಮಗ್ರ ಮಾಹಿತಿಯನ್ನು ನಾಡಿನ ಹಲವು ಹತ್ತು ಕಾಲೇಜುಗಳಲ್ಲಿ ನೀಡಿ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸಿದ ಕೀರ್ತಿ ಇವರದಾಗಿದೆ.

ಪ್ರಾಂತೀಯ, ರಾಜ್ಯ, ರಾಷ್ಟ್ರ ಅಂತರ್‌ರಾಷ್ಟ್ರೀಯ ಮಟ್ಟದ ವಿಚಾರ ಸಂಕೀರಣಗಳನ್ನು ಸಂಘಟಿಸಿ ಕಮ್ಮಟಗಳಲ್ಲಿ ಪ್ರಬಂಧ ಮಂಡನೆ ಮಾಡಿ, ಅವುಗಳಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ಲೇಖನಗಳು ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟವಾಗಿರುವುದು ಇವರ ಯಶಸ್ವಿಗೆ ಹಿಡಿದ ಕನ್ನಡಿಯಾಗಿದೆ. ಇವರ ಮಾರ್ಗದರ್ಶನದಲ್ಲಿ ೨ ಎಂ.ಫಿಲ್ ಹಾಗೂ ೮ ಪಿಎಚ್.ಡಿ ಯನ್ನು ಯಶಸ್ವಿಯಾಗಿ ಮಂಡಿಸಿ ಪದವಿ ಪಡೆದಿರುತ್ತಾರೆ. ಪ್ರಸ್ತುತ ಎರಡು ಪಿಎಚ್.ಡಿ ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ನಾಡಿನ ಪ್ರತಿಷ್ಠಿತ ಸಂಸ್ಥೆಗಳಾದ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣ ಸಂಸ್ಥೆಯ ಅನುಷ್ಠಾನದಲ್ಲಿ ಕನ್ನಡ ಅರಸರ ಯುದ್ಧ ನೀತಿಗಳು' ಎಂಬ ಪ್ರಧಾನ ಸಂಶೋಧನೆಯನ್ನು ಹಿಂದೂ ಕಾನೂನುಗಳ ಸ್ವರೂಪ' ಎಂಬ ಕಿರು ಸಂಶೋಧನೆಯನ್ನು ಯಶಸ್ವಿಯಾಗಿ ಕೃತಿ ರೂಪದಲ್ಲಿ ಪ್ರಕಟವಾಗಿದೆ. ಕುವೆಂಪು ವಿ.ವಿ,ಯ ಅಂಬೇಡ್ಕರ್ ಮತ್ತು ಬೌದ್ಧ ಅಧ್ಯಯನ ಕೇಂದ್ರ ಅನುಷ್ಠಾನದಲ್ಲಿ 'ಆತ್ಮ ಕಥನಕಗಳಲ್ಲಿ ಅಂಬೇಡ್ಕರ್ ಚಿಂತನೆ' ಕುರಿತು ಕಿರು ಸಂಶೋಧನೆ ಯಶಸ್ವಿಗೊಳಿಸಿದ್ದಾರೆ. ಇವರೊಬ್ಬ ಆದರ್ಶ ಶಿಕ್ಷಕ, ಶ್ರೇಷ್ಠ ಸಂಶೋಧಕ, ಸಂಘಟಕರಾಗಿ, ಅವಿರತವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಭದ್ರಾವತಿ ಬಾನುಲಿಯಲ್ಲಿ ಚಿಂತನ ಹಾಗೂ ಭಾಷಣ, ರೂಪಕಗಳನ್ನು ನೀಡಿ ಜನಾನುರಾಗಿಯಾಗಿದ್ದಾರೆ. ನೂರಾರು ವೇದಿಕೆಯಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ. ಕಸ್ತೂರಿ, ಚಂದನ ವಾಹಿನಿಗಳಲ್ಲಿ ಹರಟೆ ಮತ್ತು ಬೆಳಗು ಕಾಠ್ಯಕ್ರಮದಲ್ಲಿ ಭಾಗಿಯಾಗಿ ಕಾಠ್ಯಕ್ರಮದ ಯಶಸ್ವಿಗೆ ಕಾರಣರಾಗಿದ್ದಾರೆ. ಡಾ. ಹಾ. ಮ. ನಾಗಾರ್ಜುನ ಅವರ ವ್ಯಕ್ತಿತ್ವ, ಯುವಪ್ರತಿಭೆ ಮತ್ತು ಬಹುಮುಖಿ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಅರಸಿಕೊಂಡು ಬಂದಿದೆ. ೨೦೦೨ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು 'ಕನ್ನಡ ಶ್ರೀ' ೨೦೦೬ ರಲ್ಲಿ 'ಅಮೃತಶ್ರೀ' ಪ್ರಶಸ್ತಿ ನೀಡಿದ್ದಾರೆ. ೨೦೧೦ ೨೦೧೦ ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು 'ಅರಳು ಪ್ರಶಸ್ತಿ' ನೀಡಿ ಗೌರವಿಸಿದ್ದಾರೆ. ೨೦೧೩ ರಲ್ಲಿ 'ಸುಗಂಧ ಪುಷ್ಪ' ಕೃತಿಗೆ ವರ್ಷದ ಅತ್ಯುತ್ತಮ ಕೃತಿ ಪ್ರಶಸ್ತಿ ನೀಡಿದ್ದಾರೆ. ೨೦೧೭ ರಲ್ಲಿ ಜಿಲ್ಲಾ ಸಿರಿಗನ್ನಡ ವೇದಿಕೆಯು' 'ಸಾಹಿತ್ಯ ಸಿರಿ' ಪುರಸ್ಕಾರ ನೀಡಿ ಗೌರವಿಸಿರುವುದಕ್ಕೆ ಬಾಜನರಾಗಿದ್ದಾರೆ. ೨೦೧೮ ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು 'ಸಿದ್ಧಾಂತ ಶಿಖಾಮಣಿ ತಾತ್ವಿಕ ನಿಲುವುಗಳು' ಕೃತಿಗೆ ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ೨೦೧೮ ರಲ್ಲಿ ಕರ್ನಾಟಕ ಬಯಲಾಟ ಅಕಾಡಮಿ ಸದಸ್ಯನಾಗಿ ಬಾಗಲಕೋಟೆಯಲ್ಲಿ ಸೇವೆ ಸಲ್ಲಿಸಿದ್ದಾರೆ. Shingu1989 (ಚರ್ಚೆ) ೨೦:೨೦, ೨೦ ಮಾರ್ಚ್ ೨೦೨೪ (IST)Reply