ಮೈಸೂರು ಹುಸೇನಿ

ಪೇಪರ್ ಮೇಲೆ ಕಲಾಪ್ರಪಂಚ

ಕಾಗದದ ಆ ಉಬ್ಬುಚಿತ್ರ ಮೊದಲ ನೋಟದಲ್ಲಿಯೇ ವಿಸ್ಮಯ ಉಂಟು ಮಾಡಿದರೆ, ಕಲಾರಸಿಕನ ಕಿವಿಯಲ್ಲಿ ಪಿಸುಗಟ್ಟಿ ಏನೋ ಹೇಳಿದಂತೆ ಭಾಸವಾದರೆ ಆಶ್ಚರ್ಯವಿಲ್ಲ. ಅದು ಕಲಾವಿದನ ಕೌಶಲ.

ಹೊಸ ಅನುಭವ ನೀಡುವ ತಮ್ಮ ಪ್ರಯೋಗಶೀಲ ಕಲಾಕೃತಿಗಳಿಂದಲೇ ಕಲಾ ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಿರುವವರು ಎಸ್.ಎಫ್. ಹುಸೇನಿ. ಕಾಗದವನ್ನು ಲೋಹದ ಫಲಕದಂತೆ ಉಬ್ಬು-ತಗ್ಗುಗಳಾಗುವಂತೆ ಹಚ್ಚಿ ಹೈ-ರಿಲೀಫ್ ಶಿಲ್ಪಗಳನ್ನಾಗಿಸುವ ವಿಧಾನವನ್ನು ಹುಸೇನಿಯವರ ಭಿತ್ತಿಶಿಲ್ಪಗಳಲ್ಲಿ ಕಾಣಬಹುದು. ಸಮಕಾಲೀನ ಸಂದರ್ಭದಲ್ಲಿ ಅಷ್ಟಾಗಿ ಬಳಕೆಯಾಗದ ಈ ಮಾಧ್ಯಮ ಕುತೂಹಲಕರವಾಗಿದೆ. ಕಲ್ಲು ಅಥವಾ ಕಂಚಿನಂತೆ ನೈಜತೆ ಭಾಸವಾಗುವ ಇವರ ಕಲಾಕೃತಿಗಳು ನಿಬ್ಬೆರಗಾಗಿಸುತ್ತವೆ. ಹುಸೇನಿ ಈ ಮಾಧ್ಯಮದಲ್ಲಿ ತನ್ನದೇ ವೈಶಿಷ್ಟ್ಯ ರೂಢಿಸಿಕೊಂಡಿದ್ದಾರೆ.

ಏನಾದರೂ ಹೊಸತು ಮಾಡಬೇಕು ಎಂದು ಆಲೋಚಿಸುತ್ತಿದ್ದಾಗ ಮನದಲ್ಲಿ ಮೂಡಿದ್ದು ಕಾಗದ ಉಬ್ಬುಚಿತ್ರ ರಚನೆ. ತಮ್ಮ ಬಳಿ ಹಾಗೂ ಸ್ನೇಹಿತರ ಬಳಿ ಇದ್ದ ಹಾಳೆಗಳನ್ನಲ್ಲಾ ಒಟ್ಟುಗೂಡಿಸಿ ಪ್ರಯೋಗ ಶುರುವಿಟ್ಟುಕೊಂಡರು. ಅದು ತಕ್ಕಮಟ್ಟಿಗೆ ಯಶ ಕಾಣುತ್ತಿದ್ದಂತೆ ಆ ಮಾಧ್ಯಮವನ್ನು ತಮ್ಮದಾಗಿಸಿಕೊಳ್ಳಲು ಮುಂದಾದರು. ಚಿತ್ರ-ವಿಚಿತ್ರ ರೀತಿಯ, ಅಮೂರ್ತ ಅಭಿವ್ಯಕ್ತಿ ಹುಸೇನಿಅವರ ವಿಶೇಷತೆ. ಹಾಗಂತ ಅವರ ಕೃತಿಗಳಲ್ಲಿ ನಿಶ್ಚಿತ ರೇಖಾ ವಿನ್ಯಾಸವಿದೆ.

ಎಸ್.ಎಫ್. ಹುಸೇನಿ ಕಲಾವಲಯದಲ್ಲಿ 'ಮೈಸೂರು ಹುಸೇನಿ' ಎಂದೇ ಚಿರಪರಿಚಿತರು. ತಂದೆ ಸಯ್ಯದ್ ಫೀರ್, ತಾಯಿ ಜೀನಾತ್ ಉನ್ನಿಸಾ ಬೀ ಅವರ ಮಗನಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂನಲ್ಲಿ ಜನನ. ಬಾಲ್ಯದ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ. ಮೈಸೂರಿನ ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಫೈನ್ ಆರ್ಟ್ ಡಿಪ್ಲೊಮಾ ಮತ್ತು ಆರ್ಟ್ ಮಾಸ್ಟರ್ ಶಿಕ್ಷಣ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್.ಎ. ಪದವಿ. ಹುಸೇನಿಯವರು ಸದಾ ಪ್ರಯೋಗಶೀಲ ಪ್ರಯತ್ನ. ಪ್ರತಿ ಕೃತಿಯಲ್ಲೂ ಹೊಸತನ ಬೇಕೆಂಬ ತುಡಿತ. ಏಕರೇಖಾ ಚಿತ್ರಗಳು, ಅಮೂರ್ತ ಛಾಯಾಚಿತ್ರಗಳು ಮತ್ತು ಸಾಂಝಿ ಕಾಗದ ಕತ್ತರಿ ಕಲೆಗಳಲ್ಲೂ ನಿಪುಣರು. ಸಿ.ಡಿ ಬಳಸಿ ತೆಗೆದಿರುವ ಅಮೂರ್ತ ಛಾಯಾಚಿತ್ರಗಳು ಐದು ಸಾವಿರಕ್ಕೂ ಹೆಚ್ಚು. ಇವರ ಅನೇಕ ಕೃತಿಗಳು ದೇಶ ಆಸ್ಟ್ರೇಲಿಯ, ಫಿನ್ಲೆಂಂಡ್, ಜರ್ಮನಿ, ದಕ್ಷಿಣ ಆಫ್ರಿಕಾ, ದೋಹಗಳ ಖಾಸಗಿ ಸಂಗ್ರಹಕಾರರಲ್ಲಿ ಸೇರಿವೆ.

ಮೈಸೂರು, ಬೆಂಗಳೂರು, ಧಾರವಾಡ, ಗುಲ್ಬರ್ಗ, ಉಡುಪಿ, ಮುಂಬೈ, ದೆಹಲಿ, ಚೆನ್ನೈ ಹೀಗೆ ಅನೇಕ ಕಡೆಗಳಲ್ಲಿ 9 ಏಕವ್ಯಕ್ತಿ ಚಿತ್ರಕಲಾಪ್ರದರ್ಶನ, 70ಕ್ಕೂ ಹೆಚ್ಚು ಸಮೂಹ ಕಲಾಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಕಲೆ ತಲುಪಿಸುವ ಉದ್ದೇಶದಿಂದ ತಮ್ಮದೇ 'ಸಾಂಝಿ ಕಲಾಲೋಕ' ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ 10 ವರ್ಷಗಳಿಂದ ಚಿತ್ರಕಲಾ ಪ್ರದರ್ಶನ, ಕಾರ್ಯಗಾರಗಳನ್ನು ನಡೆಸುತ್ತಿದ್ದಾರೆ. ಅವರ ಸಂಪರ್ಕ: 9845153277.

ಕಾಗದ ಉಬ್ಬುಚಿತ್ರ ಮಾಡೋದು ಹೇಗೆ?

ಕಾಗದ ಉಬ್ಬುಚಿತ್ರ ಕಲೆಯಲ್ಲಿ ಅಧಿಕ ತಾಳ್ಮೆ, ಅಧಿಕ ಸಮಯ ಬೇಕು. ಕೃತಿಗೊಂದು ಆಕಾರ ಕೊಡುವ ಮೊದಲು ಕಲಾವಿದ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಜೇಡಿ ಮಣ್ಣಿನಿಂದ ಮತ್ತು ತಮಗೆ ಬೇಕಾಗುವ ವಸ್ತುಗಳನ್ನು ಸಂಯೋಜಿಸಿ ಆಕಾರ ನೀಡುತ್ತ ಹೋಗಬೇಕು. ಸಮಾಧಾನಕರ ಆಕಾರ ಬಂದ ನಂತರ ಕಾಗದದ ಚೂರುಗಳನ್ನು ಅಂಟಿನಿಂದ ಮಣ್ಣಿನ ಆಕೃತಿಯ ಮೇಲೆ ಹಲವು ಪದರಗಳಲ್ಲಿ ಅಂಟಿಸಬೇಕು. ನಿಖರತೆಯನ್ನು ತಲುಪಿದ ನಂತರ ಕಾಗದದ ಪ್ರತಿಕೃತಿಯನ್ನು ತೇವಾಂಶವಿದ್ದಂತೆಯೇ ಮಣ್ಣಿನ ಅಚ್ಚಿನಿಂದ ಬೇರ್ಪಡಿಸಿ ಅನಂತರ ಕಾಗದದ ಆಕೃತಿಯನ್ನು ಬಿಸಿಲಿನಲ್ಲಿ ಒಣಗಿಸಬೇಕು.

ಬಳಿಕ ಕಲಾವಿದನ ಭಾವನೆಗಳಿಗೆ ತಕ್ಕಂತೆ ಅವುಗಳಿಗೆ ಬಣ್ಣ ಹಚ್ಚಬಹುದು. ಈ ವಿಧಾನ ಸರಳ ಎನಿಸಿದರೂ ಏಕಾಗ್ರತೆ, ಸೂಕ್ಷ್ಮತೆ, ಸಂಯಮ ಬೇಕಾಗುತ್ತದೆ. ಇವು ಮೊದಲ ನೋಟಕ್ಕೆ ಘನರೂಪದ ಮರಳು, ಕಲ್ಲು ವಿವಿಧ ಲೋಹ ಮಾಧ್ಯಮಗಳ ಶಿಲ್ಪ ಎಂಬ ಭಾವನೆ ಬರುತ್ತದೆ. kannadaprabha.com/ SF HUSENI - ಆಘ್ಯ

ನಮಸ್ಕಾರ Sfhuseni


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-தமிழ்க்குரிசில் (talk) ೧೪:೨೭, ೩೦ ಏಪ್ರಿಲ್ ೨೦೧೩ (UTC)