ನಮಸ್ಕಾರ Nagarajbaliger


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೩:೫೫, ೧೨ ಜೂನ್ ೨೦೨೦ (UTC)

ಹರಿಶ್ಚಂದ್ರ ಕಾವ್ಯ: ವಸಿಷ್ಠ ವಿಶ್ವಾಮಿತ್ರರ ಸಂವಾದ - ರಾಘವಾಂಕ

ಬದಲಾಯಿಸಿ
           ಹರಿಶ್ಚಂದ್ರ ಕಾವ್ಯ:  ವಸಿಷ್ಠ ವಿಶ್ವಾಮಿತ್ರರ ಸಂವಾದ - ರಾಘವಾಂಕ

ಕವಿ ಪರಿಚಯ : ರಾಘವಾಂಕ :

           ಕವಿಯು ಕ್ರಿ.ಶ.೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗೂ ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ. ಈತನು ಹರಿಹರನ ಸೋದರಳಿಯ.ಹರಿಹರನೂ,ರಾಘವಾಂಕನೂ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರೆಂದು ಹೆಸರಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಷಟ್ಪದೀ ಪ್ರಕಾರವನ್ನು ಪ್ರವರ್ತನಗೊಳಿಸಿದ ಕೀರ್ತಿ ರಾಘವಾಂಕನಿಗೆ ಸಲ್ಲುತ್ತದೆ. ಕನ್ನಡದ ಅತ್ಯಂತ ಸ್ವತಂತ್ರ ಮನೋಧರ್ಮದ ಪ್ರಯೋಗಶೀಲನಾದ ವೀರಶೈವ ಕವಿ. ಹರಿಶ್ಚಂದ್ರಕಾವ್ಯ ಎಂಬ ಕಾವ್ಯದ ಕರ್ತೃ. ಈತನ ಜೀವನ ಹಾಗೂ ಕೃತಿಗಳು ಇವನ ಅನಂತರದ ಕೆಲವು ಕವಿಗಳಿಗೆ ಕುತೂಹಲದ, ಗೌರವದ ವಿಷಯಗಳಾಗಿದ್ದವು. ರಾಘವಾಂಕ ಹಂಪೆಯಲ್ಲಿ ಹುಟ್ಟಿ ಬೆಳೆದವ. ಇವನ ತಂದೆ ಮಹಾದೇವಭಟ್ಟ ,ತಾಯಿ ರುದ್ರಾಣಿ. ಹರಿಹರ ಇವನ ಸೋದರ ಮಾವ ಮತ್ತು ಗುರು. ಆತ ದೀಕ್ಷಾಗುರು, ಕಾವ್ಯಗುರುವೂ ಹೌದು. ಹರಿಹರನಂತೆ ರಾಘವಾಂಕನೂ ಪಂಪಾ ವಿರೂಪಾಕ್ಷನ ಪರಮಭಕ್ತ. ಹಂಪೆಯ ಶಂಕರಪ್ರಭು , ಹಂಪೆಯ ಮಾದಿರಾಜ, ಹಂಪೆಯ ಹರೀಶ್ವರ ಇದು ರಾಘವಾಂಕನ ಗುರುಪರಂಪರೆ.ತಾನು ಹರಿಹರನ ವರಸುತ ಎಂದು ಈತ ಹೇಳಿಕೊಂಡಿದ್ದಾನೆ.ಈತ ಸಂಸ್ಕೃತ ಭಾಷೆಗಳಲ್ಲಿಯೂ ಸಮಸ್ತ ಲೌಕಿಕ ವೈದಿಕ ವಿದ್ಯೆಗಳಲ್ಲಿಯೂ ಪರಿಣಿತನಾಗಿದ್ದ . 'ಉಭಯಕವಿ ಕಮಲರವಿ'ಯಾದ ಈತ ಹರಿಶ್ಚಂದ್ರಕಾವ್ಯವನ್ನು ರಚಿಸಿ ಪಂಪಾಪುರದ ದೇವರಾಜನ ಸಭೆಯಲ್ಲಿ ಓದಿ ವಿದ್ವಾಂಸರನ್ನೊ ರಾಜನನ್ನೂ ಮೆಚ್ಚಿಸಿದ್ದ್ದ.. ರಾಜ ಇವನಿಗೆ 'ಕವಿಶರಭಭೇರುಂಡ' ಎಂಬ ವಾದದ ಪೆಂಡೆಯವನ್ನು ಕೊಟ್ಟು ಸನ್ಮಾನಿಸಿದ. ರಾಜಸಭೆಯಲ್ಲಿ ಹೀಗೆ ಮೆಚ್ಚುಗೊಂಡ ಹರಿಶ್ಚಂದ್ರಕಾವ್ಯವನ್ನು ರಾಘವಾಂಕ ಹೊನ್ನ ಹರಿವಾಣದಲ್ಲಿರಿಸಿ ತಂದು ತನ್ನ ಗುರುವು ಮಾವನೂ ಆದ ಹರಿಹರನ ಮುಂದಿರಿಸಿ ಅವನ ಆಶೀರ್ವಾದಗಳನ್ನು ಬೇಡಿದಾಗ , ಆತ ಮೆಚ್ಚಲೊಲ್ಲದೆ , ನರಸ್ತುತಿ ಮಾಡಿದ ತಪ್ಪಿಗಾಗಿ ರಾಘವಾಂಕನ ಹಲ್ಲುಗಳನ್ನು ಮುರಿದ. ಅನಂತರ ಶೈವಕೃತಿಪಂಚಕಗಳನ್ನು ರಚಿಸಿ ಮರಳಿ ತನ್ನ ಹಲ್ಲುಗಳನ್ನು ಪಡೆದ.ಅನಂತರ ಹಂಪೆಗೆ ಬಂದು ಹರಿಹರನ ಆಜ್ಞಾನುಸಾರವಾಗಿ ಬೇಲೂರಿಗೆ ಹೋಗಿ ಅಲ್ಲಿ ಬಯಲಾದ. ಇದರಲ್ಲಿ ಐತಿಹಾಸಿಕತೆ ಹಾಗು ಸಾಂಕೇತಿಕತೆಗಳೆರಡೂ ಬೆರೆತಿವೆ. ರಾಘವಾಂಕ ಹರಿಹರನ ವರಸುತನೆಂಬ ಹೆಮ್ಮೆಯ ಶಿಷ್ಯ . ಉಭಯ ಭಾಷಾಪಂಡಿತ ತನ್ನ ಪ್ರತಿವಾದಿಗಳೊಂದಿಗೆ ಸೆಣಸಿ ಬದುಕುವ ಛಲ ಉಳ್ಳವ ಎನ್ನುವ ಅಂಶಗಳು ಹೆಚ್ಚು ವಾಸ್ತವಕ್ಕೆ ಸಮೀಪವಾದವು.

ಕೃತಿಗಳು: ೧.ಹರಿಶ್ಚಂದ್ರ ಕಾವ್ಯ ೨.ಸಿದ್ಧರಾಮ ಪುರಾಣ ೩.ಸೋಮನಾಥ ಚರಿತೆ ೪. ವೀರೇಶ ಚರಿತೆ ೫.ಶರಭಚರಿತೆ ೬.ಹರಿಹರಮಹತ್ವ

_____________________________________________________________________________________________________________________________________________________

        ಪರುಷಮಣಿ, ಕಾಮದೇನು, ಕಲ್ಪವೃಕ್ಷ, ವನಸಿರಿಯಮನಗಳಿಂದ ಸಮೃದ್ಧವಾಗಿ ಸ್ವರ್ಗಕ್ಕೆ ಸಮಾನವಾಗಿದ್ದ ದೇವೇಂದ್ರನ ಅಮರಾವತಿಯ ಆಸ್ಥಾನದಲ್ಲಿ ಒಂದು ದಿನ ರಾತ್ರಿ ದೇವೇಂದ್ರನ ಸಭೆ ನಡೆದಿತ್ತು.ಮೇರು ಪರ್ವತ, ವಿನೋದ, ಅಮೃತ, ವರರಂಭೆ, ಶಚಿರಾಣಿ, ಐರಾವತ, ಆನೆ, ವಜ್ರಾಯುಧ ನವನಿಧಿ ಭಂಡಾರದ ಇತ್ಯಾದಿಗಳಿಗೆ ಒಡೆಯನಾಗಿ ಸಾಕ್ಷಾತ್ ಶಿವನಂತಿದ್ದ ದೇವೇಂದ್ರನು ಒಡ್ಡೋಲಗದಲ್ಲಿ ವಿರಾಜಮಾನನಾಗಿದ್ದನು. ಒಡಲನ್ನು ಆವರಿಸಿದ  ಅಂಗೋಪಾಂಗಗಳ ಸಂಕುಳದ ನಡುವೆ ಕಣ್ಣುಗಳೆರಡೂ ಕಂಗೊಳಿಸುವಂತೆ ನವಗ್ರಹಗಳ ನಡುವೆ ಚಂದ್ರ ಸೂರ್ಯರು ರಂಜಿಸುವಂತೆ ಇಡೀ ಭೂಮಂಡಲವನ್ನೇ ಹಬ್ಬಿ ಪಸರಿಸಿದ ನದಿಗಳ ನಡುವೆ ಸುರುಚಿರ ಗಂಗೆ ತುಂಗೆ ಭದ್ರೆಯ ಸೌಂದರ್ಯ ಮಹಿಮೆಗಳಿಂದ ಶೋಭಿಸುವಂತೆ ದೇವೇಂದ್ರನ ಸಭೆಯಲ್ಲಿ ನೆರೆದಿದ್ದ ಮುನಿಕುಲದ ನಡುವೆ ಶ್ರೇಷ್ಠರಾದ ವಸಿಷ್ಠ ವಿಶ್ವಾಮಿತ್ರರಿಬ್ಬರೂ ರಂಜಿಸುತ್ತಿದ್ದರು. ಸಿಂಹಾಸನದಲ್ಲಿ ಕುಳಿತ ದೇವೇಂದ್ರನು ವಶಿಷ್ಠ ಮಹರ್ಷಿಯನ್ನು ಕುರಿತು, "ಮುನಿಪುಂಗವ  ಸಮಸ್ತ ಭೂಮಂಡಲವನ್ನಾಳುವ ಸೂರ್ಯವಂಶದ ಇಕ್ಪ್ವಾಕು ಕುಲದ  ಅರಸರಲ್ಲಿ ಅತ್ಯಂತ ಪರಾಕ್ರಮಿಗಳೆನ್ನಿಸಿಕೊಂಡು,  ವಚನಮನಕಾಯದಲ್ಲಿ ಒಮ್ಮೆಯೂ ಹುಸಿ ಹೊದ್ದಂತೆ ಸುಳ್ಳನ್ನು ಹೇಳದಂತೆ ನಡೆವ ಕಲಿಗಳು ಯಾರಯ್ಯಾ  ಹೇಳು ! ಇಕ್ಷಾಕು ವಂಶದ ಅರಸರ ಪರಂಪರೆಗೆ ನೀನು ಯೋಗ್ಯ ರಾಜಗುರು. ಅವರಲ್ಲಿ ನೀನು  ತಿಳಿಯದವರು ಯಾರೂ ಇಲ್ಲ. ಆದ್ದರಿಂದ ಅವರಲ್ಲಿ  ಸತ್ಯವಂತನಾರು,ಹೇಳು ?" ಎಂದು ಹೇಳುತ್ತಾನೆ. ಅದಕ್ಕೆ ಪ್ರತಿಯಾಗಿ ಮುನಿಶ್ರೇಷ್ಠ ವಶಿಷ್ಠನು "ದೇವಾ ಇಕ್ಷಾಕು ವಂಶದ ಚತುರ್ದಶ ಭುವನಪತಿಗಳಲ್ಲಿ - ಅರಸರಲ್ಲಿ ಇದು ತನಕ ನಾನೂ ತಿಳಿದಂತೆ ಹುಸಿ ಹೊಂದಿದವರೆಲ್ಲ; ಹಿಂದಿನ  ಅರಸರುಗಳನ್ನು ಉದ್ಧರಿಸಲೆಂದು ವಸುಧಾಧಿಪತಿ  ಹರಿಶ್ಚಂದ್ರನು ಅವತರಿಸಿದ್ದಾನೆ, ಆತನ ಸತ್ಯದೆ ಸಕನ್ನು ಹೊಗಳಲು ನನ್ನಿಂದ ಸಾಧ್ಯವೇ ? ಫಣಿಪತಿಗರಿದು ಶಶಿಮೌಳಿಯಾಣೆ" ಎನ್ನುತ್ತಾನೆ. ಈ ಮಾತುಗಳನ್ನು ಕೇಳಿ ವಿಶ್ವಾಮಿತ್ರನು ಅತ್ಯಂತ ಕ್ರೋಧನಾಗುತ್ತಾನೆ. ತುಂಬಿದ ಒಡ್ಡೋಲಗದ ನಡುವೆ ದೇವೇಂದ್ರನು ತನ್ನನ್ನು  ಮೊದಲು ಮಾತಾಡಲಿಲ್ಲವಲ್ಲ ಎಂಬ ಕೋಪ ಒಂದೆಡೆ ! ಒಂದೆಡೆಗೆ ಅಖಿಲ ಜೀವಾವಳಿಯಲ್ಲಿ  ವಶಿಷ್ಠ ಮುನಿ ಯಾವುದನ್ನು ಹೌದೆಂದು ಹೇಳುವನೊ ಅದು ಅಲ್ಲವೆಂದು ವಾದಿಸುವ ಹಠ ಇನ್ನೊಂದೆಡೆಗೆ, ವಸಿಷ್ಠನಲ್ಲಿ ಕುಂದನಲ್ಲದೆ ಶ್ರೇಷ್ಠತೆಯನ್ನು ಕಾಣದಂತಹ ಭಾವ ಮತ್ತೊಂದೆಡೆಗೆ! ಇವೆಲ್ಲ ಮುಪ್ಪುರಿಗೊಂಡು,ಕುಡಿವರಿದು  ವಿಶ್ವಾಮಿತ್ರನಿಗೆ ಕಡುಕೋಪ ಆವರಿಸಿತು. ಆಗವನು ವಸಿಷ್ಠ ಮುನಿಯನ್ನು ನಿಂದಿಸುತ್ತಾ. ನಿಲ್ಲು ವಸಿಷ್ಠ  ಮುನಿಯನ್ನು ನಿಂದಿಸುತ್ತಾನೆ. ನಿಲ್ಲುವ ವಸಿಷ್ಠ  ಮುಂದೆ ನುಡಿಯಬೇಡ, ಹೇಳಿದ್ದೆಲ್ಲವನ್ನೂ ಬೇಸರವಿಲ್ಲದೆ ಕೇಳುವ  ದೇವೇಂದ್ರನಿದ್ದಾನೆಂದು ಹೇಸದೆ ಈ ರೀತಿ ಹರಟುವುದೇ ? ಎಂದು  ತಡೆಯುತ್ತಾನೆ.
              ಆಗ ವಸಿಷ್ಠ  ಮುನಿಯು ಏನು ? ನಾನು   ಹರಟುವುದೇ ? ಹಾಗಾದರೆ ಹರಿಶ್ಚಂದ್ರ ಶ್ರೇಷ್ಠರಲ್ಲವೇ ?  ಹೇಳು"! ಎಂದು ಕೋಪಗೊಂಡು ನುಡಿಯುತ್ತಾನೆ. ಅದಕ್ಕೆ ಪ್ರತಿಯಾಗಿ ವಿಶ್ವಾಮಿತ್ರನು ರಾಶಿ ಹೊನ್ನುಂಟು ಶ್ರೇಷ್ಠನಾಗದಿರುತ್ತಾನೆಯೇ !" 

________________________________________________________________________________________________________________________________________________



ಎಂದು ವ್ಯಂಗ್ಯ ನುಡಿ ನುಡಿಯಲು, ವಸಿಷ್ಠ, ಹೊನ್ನ ಮಾತು ಈ ಸಭೆಯಲ್ಲೇಕೆ ? ಹರಿಶ್ಚಂದ್ರ ಸತ್ಯವಂತಲ್ಲವೇ ? ಹೇಳು ಎಂದು ಕೇಳುತ್ತಾನೆ ಅದಕ್ಕೆ ವಿಶ್ವಾಮಿತ್ರನುಈ ದೇಶದಲ್ಲಿ ಸತ್ಯವಂತನು ಆಳುತ್ತಿರುವುದನ್ನು ನಾನು ಕೇಳಿಯೂ ಇಲ್ಲ ಕಂಡೂ ಕಂಡೂ ಇಲ್ಲ ಎನ್ನುತ್ತಾನೆ ಮುನಿ ಕುಲತಿಲಕನಾದ ವಸಿಷ್ಠನು ಹೆಚ್ಚಿನ ಮಾತುಗಳನ್ನು ಬೆಳೆಸುಲು ಅವಕಾಶಕೊಡದೆ " ಹಲವು ಮಾತೇಕೆ ? ಹರಿಶ್ವಂದ್ರನಲ್ಲಿ ಅಸತ್ಯವನ್ನು ಕಾಣಿಸಲು ಬಲ್ಲವರು ಲೋಕದಲ್ಲಿ ಮುನ್ನಹುಟ್ಟಿಲ್ಲ ಮುಂದೆ ಹುಟ್ಟುವವರನ್ನು ಕಾಣೆ. ನಾನಿದನ್ನು ಬಲ್ಲೆ. ಉಳಿದವರ ಪ್ರಾಮಾಣಿವೇಕೆ ?ಎಂದು ಪ್ರತಿ ನುಡಿಯುತ್ತಾನೆ. ಇದನ್ನು ಕೇಳಿದ ವಿಶ್ವಾಮಿತ್ರನು ಮನದಲ್ಲಿ ಅತಿ ಕೋಪ ತಾಳಿ, ನಿಲ್ಲು ವಸಿಷ್ಠ ಮುಂದೆ ನುಡಿಯಬೇಡ.ಬಾಯಿ ಹಿರಿದುಂಟು! ಮನ ಬಂದಂತೆ ಮಾತನಾಡಬೇಡ, ಹರಿಶ್ಚಂದ್ರನು ಸಮುದ್ರ ತೀರದವರೆಗೂ ವ್ಯಾಪಿಸಿದ ಧರೆಗೆ ಅರಸನು ಮೇಲಾಗಿ ಧನವುಳ್ಳ ಶಿಷ್ಯನು ನಿನಗವನು ಅತಿ ವಿಫುಳ ಧನವನ್ನು ಕಾಣಿಕೆಯಾಗಿ ಕೊಟ್ಟು ಗೌರವಿಸುತ್ತಿದ್ದಾನೆ.ಇಷ್ಟೇ ಅಲ್ಲದೆ ನೀನು ಅವನ ಆರೈಕೆಯಲ್ಲಿರುವ ವನು. ಹೀಗಿರುವಾಗ ಬೆಳೆಸಿ ಬಣ್ಣಿಸುವುದು ನಿನಗೆ ಸಲ್ಲದಯ್ಯ" ಎಂದು ಭರ್ತ್ಸನೆ ಮಾಡುತ್ತಾನೆ. ಅದಕ್ಕೆ ಮುನಿಶ್ರೇಷ್ಠ ವಸಿಷ್ಠನು, "ಏನು? ನಾನು ರಾಜಪ್ರತಿಗ್ರಹದ ಬಲದವನೆ" ಎನ್ನಲು, ವಿಶ್ವಾಮಿತ್ರನು, ಹೌದು ಮುನಿಯಬೇಡ ಒಂದು ವೇಳೆ ಹರಿಶ್ಚಂದ್ರನನ್ನು ಸುಳ್ಳನ್ನು ಹೇಳಿದ್ದೆಯಾದರೆ ನೀನೇನುಮಾಡಬಲ್ಲೇ ? ಎಂದು ಸವಾಲು ಹಾಕುತ್ತಾನೆ. ಮುನಿಶ್ರೇಷ್ಠ ವಸಿಷ್ಠನು "ಹರಿಶ್ಚಂದ್ರನು ಮರೆತಾದರೂ ಸುಳ್ಳಾಡಲು ಸಾಧ್ಯವಿಲ್ಲ. ಒಂದು ವೇಳೆ ಅವನು ಮರೆತಾದರೂ ಸುಳ್ಳನ್ನಾಡಿದ್ದೆಯಾದರೆ ನಾನು ವೇದ, ಮತ, ಕುಲ ,ಆಚಾರ, ಧರ್ಮಮಾರ್ಗ, ಮಹಾವೃತ, ಅನುಷ್ಠಾನ, ಗ ಗುರುವಾಜ್ಞೆ, ಲಿಂಗಾರ್ಚನೆ, ಉನ್ನತ ತಪಸ್ಸು, ಬ್ರಹ್ಮಕರ್ಮ ಇತ್ಯಾದಿಗಳಿಂದ ಸಂಪಾದಿಸಿಕೊಂಡ ಪುಣ್ಯವೆಲ್ಲವನ್ನೂ ತೊರೆದು ಸತಿಯನ್ನು, ತ್ಯಜಿಸಿ ದಿಗಂಬರನಾಗಿ ಮುಕ್ತ ಕೇಶಿತನಾಗಿ ಮನುಷ್ಯನ ತಲೆಬುರುಡೆಯಲ್ಲಿ ಮದ್ಯವನ್ನು ತುಂಬಿಕೊಂಡು ಕುಡಿಯುತ್ತ ದಕ್ಷಿಣಾಭಿಮುಖನಾಗಿ ಸ್ಮಶಾನದ ಕಡೆಗೆ ಹೋಗುತ್ತೇನೆ."ಎಂದು ಘೋರ ಪ್ರತಿಜ್ಞೆಯನ್ನು ಮಾಡುತ್ತಾನೆ.

               ವಶಿಷ್ಠ ಮುನಿಪುಂಗವನ ಈ ಪ್ರತಿಜ್ಞೆಯನ್ನು ಕೇಳಿದ ದೇವೇಂದ್ರನ ಆಸ್ಥಾನದ ಸ್ಥಿತಿ ಗತಿ ಅಲ್ಲೋಲ ಕಲ್ಲೋಲವಾಯಿತು ! ದೇವೇಂದ್ರನ್ನು ಮೊದಲುಗೊಂಡು ಆಸ್ಥಾನದ ಸಭಿಕರೆಲ್ಲರೂ ನಿಬ್ಬೆರಗಾಗಿ ಬಿಟ್ಟರು. ಅವರಿಗೆ ಏನು ಮಾಡಬೇಕು , ಏನು ಹೇಳಬೇಕು ಎಂದು ದಿಕ್ಕೆ ತೋಚದಂತಾಯಿತು. ಸಭಿಕರೆಲ್ಲರೂ "ಭೂಮಿ ಆಕಾಶಗಳೆರಡೂ ಪ್ರತಿಭಟಿಸಿ ಕಾದಾಡಿದರೆ ಚರಾಚರಗಳೆಲ್ಲ ಎಲ್ಲಿ ಹೋಗಬೇಕು. ಯಾರ ಆಶ್ರಯ ಪಡೆಯಬೇಕು. ಹಾಗೇ ಅಖಿಲವನ್ನು  ಸುಟ್ಟು ಮರಳಿ ಹುಟ್ಟಿಸಬಲ್ಲ ಸಾಮರ್ಥ್ಯವುಳ್ಳ ಈ ಭಯಂಕರ ಮುನಿಗಳಿಬ್ಬರ ಕಲಹದಲ್ಲಿ ಕೂಡಬಾರದು, ಏಳಬಾರದ, ನುಡಿಯಬಾರದು, ನುಡಿಯದಿರಬಾರದು ಹೌದೆನ್ನಬಾರದು, ಅಲ್ಲೆನ್ನಬಾರದು" ಎಂಬ ಸಂದಿಗ್ಧತೆಯಲ್ಲಿ ಸಿಕ್ಕು ಚಿಂತಿಸತೊಡಗಿದರು. ಇಡೀ ಸಭೆಗೆ ಸಭೆಯೇ ಚಿಂತೆಗೆ ಈಡಾಯಿತು.

__________________________________________________________________________________________________________________________________________________


      ವಸಿಷ್ಠ ವಿಶ್ವಾಮಿತ್ರರ ಕಲಹದಲ್ಲಿ ಸಭಾಪತಿಯಾದ ದೇವೇಂದ್ರನಿಗೂ ದಿಕ್ಕು ತೋಚದಂತಾಯಿತು. ಅವನಿಗೂ ಯಾರಿಗೆ ಏನು ಹೇಳಿದರೆ ಮುಂದೆ ಏನಾಗುವುದೋ ಎಂಬ ಭೀತಿ ಚಿಂತೆ. ಹೀಗಾಗಿ ಅವನು ಯಾರಿಗೂ ಏನನ್ನೂ  ಹೇಳದೆ ಕೇವಲ ನಿಬ್ಬೆರಗಾಗಿ ಕುಳಿತುಬಿಟ್ಟನು. "ಒಬ್ಬರಿಗೆ ಹಿತ ನುಡಿದರೆ ಪಕ್ಷವೆಂದೂ ಹಿಂದುಗಳಿದರೆ ಉಪೇಕ್ಷೆವೆಂದೂ ಜಡೆದರೆ ನಮಗಿಂತ ಅಧಿಕನೇ ಎಂದೂ ಹೊಗಳಿದರೆ ಉಪಚಾರವೆಂದೂ ಇಬ್ಬರೂ ನೊಂದು ಶಾಪವನ್ನು ಕೊಡದೆ ಬಿಡಲಾರರು"ಎಂದು  ಆನಂದರಸವನರಿತು ಬೆರಗಿನ ಮುಖ ತಾಳಿ ಸುಮ್ಮನೇ ಕುಳಿತುಬಿಟ್ಟನು. ಆಗ ನಾರದಮುನಿಯು ಗದರಿಸುತ್ತಾ ಎದ್ದು ನಿಂತು. "ವಿಶ್ವಾಮಿತ್ರ ವಸಿಷ್ಠನಿಗೆ ನೀನಾವ ವಚನ ಕೊಡುಗೆಯೂ ಕೊಡು" ಎಂದು ಎಚ್ಚರಿಸುತ್ತಾನೆ.  ನಾರದಮುನಿಯ ಮಾತನ್ನು ಕೇಳಿದ ವಿಶ್ವಾಮಿತ್ರನ ಹೀಗೆ ಪ್ರತಿಜ್ಞೆ ಮಾಡುತ್ತಾನೆ. ಈ ಧರೆಯಲ್ಲಿ ಚತುರ್ಯುಗಗಳು ಮರಳಿ ಮರಳಿ ಸಾವಿರ ಬಾರಿ ಹುಟ್ಟಿ ಬಂದರೂ ಒಂದು ದಿನವೆಂಬುದು  ೩೦ ದಿವಾದರೂ,ಒಂದು ಮಾಸವೆಂಬುದು ಹನ್ನೆರಡು ಮಾಂಸವಾದರೂ ಒಂದು ವರ್ಷ ಎಂಬುದು ಯುಗವಾದರೂ, ಈ ದೇವೇಂದ್ರನು ನನಗೆ  ಪರಮ ಆಯುಷ್ಯವನ್ನು ಕರುಣಿಸಿದರೂ ನಾನು ಮಾತ್ರ ಹದಿನಾಲ್ಕು ಜನ್ಮಗಳಲ್ಲಿ ಹುಟ್ಟಿ ಬರುತ್ತೇನೆಯೇ ವಿನಃ ಅಲ್ಲಿಯತನಕ ದೇವ ಲೆಕ್ಕಕ್ಕೆ ಬರುವುದಿಲ್ಲ. ಅಷ್ಟೇ ಅಲ್ಲ ಒಂದು ವೇಳೆ ನಾನು ಸೋತದ್ದೇ ಆದರೆ ನಾನು ಭಕ್ತಿ, ಶಮೆ, ಇಂದ್ರಿಯ ನಿಗ್ರಹ, ಯೋಗ, ಯಾಗ, ವೇದ, ಮತ, ವಿರಕ್ತಿ,ಘನಗೋವೃತ, ತಪೋನಿಷ್ಠೆ ,ಜಪ, ಗುಣಾಸಕ್ತೆ, ಸ್ನಾನ, ಮೌನ, ಧ್ಯಾನ, ಆಚಾರ, ಸತ್ಯತಪ, ನಿತ್ಯನೇಮ, ಯುಕ್ತಿ, ಶೈವಾಗಮಾವೇಷ, ಲಿಂಗಾರ್ಚನಾಸಕ್ತಿ,  ಇತ್ಯಾದಿಗಳಿಂದ ಸಂಪಾದಿಸಿಕೊಂಡ ಪುಣ್ಯದ ಅರ್ಧವನ್ನು ಹರಿಶ್ಚಂದ್ರನಿಗೆ ಬಿಟ್ಟುಕೊಡುತ್ತೇನೆ. ಇದು ನನ್ನ ಪ್ರತಿಜ್ಞೆ ." 
   ಇಷ್ಟಾದರೂ ವಸಿಷ್ಠಮುನಿ ವಿಶ್ವಾಮಿತ್ರ ಮುನಿಯರ ಕಲಹ ನಿಲ್ಲಲಿಲ್ಲ ಅವರಿಬ್ಬರಲ್ಲು ವಾಗ್ ಯುದ್ಧ ಪ್ರಾರಂಭವಾಯಿತು.

ವಸಿಷ್ಠ : ಎಂದು ಹರಿಶ್ಚಂದ್ರನನ್ನು ನ ಪರೀಕ್ಷಿಸುವೆ?

ವಿಶ್ವಾಮಿತ್ರ: ನನ್ನ ಮನ ಬಂದ ದಿನ 

ವಸಿಷ್ಠ: ಎಷ್ಟು ಸಲ ? ವಿಶ್ವಾಮಿತ್ರ : ಆತನು ಈ ಧರೆಯಲ್ಲಿ ಜೀವಂತವಾಗಿರುವತನಕ!

ವಸಿಷ್ಠ :  ಯಾವ ಪರಿಯಲಿ ?

ವಿಶ್ವಾಮಿತ್ರ : ಸಹಸ್ರ ವಿಧದಲ್ಲಿ ! ವಸಿಷ್ಠ : ನಿಜವೇ ?

ವಿಶ್ವಾಮಿತ್ರ: ನಿಜ!
ವಸಿಷ್ಠ : ಹಿಂದುಗಳೆಯಲು ಅದೇಕೆ ನುಡಿವೆ?

ವಿಶ್ವಾಮಿತ್ರ: ನೀನಾಡುವ ರೀತಿಯೇ ಸರಿಯಾಗಿಲ್ಲ! ವಸಿಷ್ಠ: ನನ್ನ ಕೂಡ ಇಷ್ಟೊಂದು ಅಣಕವೇಕೆ ?

___________________________________________________________________________________________________________________________________________________

ವಿಶಿಷ್ಟ ಮುನಿಯು ಈ ಮಾತಿಗೆ ಉತ್ತರ ರೂಪವಾಗಿ ವಿಶ್ವಾಮಿತ್ರ ಮುನಿ, "ಇನಿತು ಮುಳಿಸಾವುದು  ನಿನ್ನನ್ನು  ಹರಿಶ್ಚಂದ್ರನ ಅರಮನೆಗೆ ಈಗಲೇ ಹೋಗಿ ವಿಶ್ವಾಮಿತ್ರಮುನಿ ನಿನ್ನನ್ನು ಸತ್ಯಭ್ರಷ್ಠನನ್ನಾಗಿ ಮಾಡುತ್ತಾನೆ. ನೀನು ಮಾತ್ರ ಯಾವುದಕ್ಕೂ ಎಚ್ಚೆತ್ತಿರು  ಎಂದು ಬೇಕಾದರೆ ನೆನಪಿಸಿಕೊಡು. ಬೇಗ ಹೋಗು, ನಿಲ್ಲಬೇಡ" ಎಂದು ಅಣುಕಿಸಿದನು. ಅದಕ್ಕೆ ವಸಿಷ್ಠನು "ನಾನು ಆಡುವೆನೆ ? ಇಂತಹ ಚಾಡಿಕೋರತನಕ್ಕೆ ನಾನೆಂದೂ ಮನಸ್ಸು ಮಾಡುವುದಿಲ್ಲ" ಎಂದನು. ವಿಶ್ವಾಮಿತ್ರನು ಅಷ್ಟಕ್ಕೇ ಬಿಡದೆ "ನನ್ನ ತೊಂದರೆಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯನಾಗದೆ ಹರಿಶ್ಚಂದ್ರನು ಸುಳ್ಳನ್ನು ನುಡಿದರೆ, ನೀನು ನಿನ್ನ ಮುನಿತನವನ್ನು ಬಿಸುಟು ಸ್ಮಶಾನಕ್ಕೆ ಹೋಗಬೇಕಾಗುತ್ತದೆ. ಆದ್ದರಿಂದ ಈಗಲೇ ಹೋಗಿ ಈ ಸಂಗತಿಯನ್ನು ಹರಿಶ್ಚಂದ್ರನಿಗೆ ಹೇಳು" ಎಂದು ಮತ್ತೆ ವ್ಯಂಗ್ಯಮಾಡುತ್ತಾನೆ. ಅದಕ್ಕೆ ವಸಿಷ್ಠಮಹರ್ಷಿ ಸೂರ್ಯ ತೇಜಸ್ಸನ್ನು ಕಳೆದುಕೊಳ್ಳದಿರು, ಅಗ್ನಿ ತಣಗಾಗದಿರು, ಚಂದ್ರ ತಂಪನ್ನು ತ್ಯಜಿಸದಿರು, ಎಂದು ಬೋಧಿಸುವುದೇಕೆ ? ಸುಮ್ಮನಿದ್ದರೂ ಅವು ತಮ್ಮ ನಿಜ ಸ್ವರೂಪವನ್ನು  ಬಿಡುತ್ತವೆಯೇ ? ಹಾಗೆ ಹರಿಶ್ಚಂದ್ರನಿಗೆ ಅಸತ್ಯವಂತನಾಗದಿರಯ ಎಂದು ಬೋಧಿಸುವುದು ವ್ಯರ್ಥ.ಏಕೆಂದರೆ ಹರಿಶ್ಚಂದ್ರ ತನ್ನ ಮೂಲ ಸ್ವಭಾವವನ್ನು ಯಾವತ್ತೂ ಬಿಟ್ಟು ಕೊಡಲಾರ!  ಅವನು  ಎಂದೆಂದಿಗೂ ಅಸತ್ಯವಂಚಿತನಾಗಲಾರ" ಎಂದು ಪ್ರತ್ಯುತ್ತರ ಕೊಡುತ್ತಾನೆ. ವಿಶ್ವಾಮಿತ್ರನು ಮತ್ತೆ ಮುಂದುವರಿದು, ಸಿಡಿಲು ಹೊಡೆದರೆ ಹಿಡಿದ ಕಾಯುವುದೇ ? ಕೋಪಗೊಂಡು ಅರಣ್ಯವನ್ನು ನುಂಗಿದರೆ ಮನೆ ಉಳಿಯುವುದೇ ? ಹೆಗ್ಗಡಲು ಉಕ್ಕಿ ಜಗತ್ತನ್ನು ಮುಳುಗಿಸಿದರೆ ಬಿದರಗುಂಪು ತಡೆಯಬಲ್ಲದೇ ? ಹೇಳು ಮುನಿಪ, ನಿನ್ನ ಬಡ ಬೋಧೆ ಗೀದೆಗಳು ಹರಿಶ್ಚಂದ್ರನನ್ನು ರಕ್ಷಿಸಲಾರವು, ನಾನು ಅತಿಕೋಪ ತಾಳಿದರೆ ಅವು ಏನೂ ಮಾಡಲಾರವು, ನೀನು ಹರಿಶ್ಚಂದ್ರನಲ್ಲಿಗೆ ಹೋಗಿ ಹೇಳದಿದ್ದರೆ ಶಿವನಾಣೆ, ಹೋಗು ! ಎಂದು ವಸಿಷ್ಠಮುನಿಯನ್ನು ಜರಿದು ನುಡಿಯುತ್ತಾನೆ. ಆಗ ವಸಿಷ್ಠಮುನಿಯು "ಕುಲವು ನಾಲಿಗೆಯನ್ನು ಅರುಹಿತು ಎಂಬ ನಾಣ್ನುಡಿ ಈಗ ಸತ್ಯವಾಯಿತು. ನೀನು ಬ್ರಹ್ಮರ್ಷಿ ಯಾಗಿದ್ದರೆ ಅಂತರಂಗದಿಂದ  ನಿರ್ಮಲನಾಗಿರುತ್ತಿದ್ದೆ ! ಆದರೆ ನೀನು  ಬ್ರಹ್ಮರ್ಷಿಯಲ್ಲ ! ರಾಜರ್ಷಿ ಕೋಪಿಸದೆ, ಗದರಿಸದೆ ಕಟುವಾಗಿ ನುಡಿಯದೆ ನಿಲ್ಲಲು ನೀನೇನು ಬಲ್ಲೆ !" ಎಂದು ಚುಚ್ಚಿ ನುಡಿಯುತ್ತಾನೆ . ಈ ವ್ಯಂಗ್ಯ ಮಾತುಗಳನ್ನು ಕೇಳಿದ ಮೇಲಂತೂ ವಿಶ್ವಾಮಿತ್ರನಿಗೆ ಕೋಪ ಮಿತಿಮೀರಿ ಹೋಯಿತು, ಅವನು ಎಷ್ಟೊಂದು ಕುಪಿತನಾದ ನೆಂದರೆ ಆ ಕೋಪವನ್ನು ಬಣ್ಣಿಸಲು ಯಾವ ಕವಿಯಿಂದಲೂ ಸಾಧ್ಯವಿಲ್ಲವೆನ್ನುತ್ತಾನೆ ರಾಘವಾಂಕ! ಮಿತಿ ಮೀರಿದ ಕೋಪಕ್ಕೆ ವಶನಾದ ವಿಶ್ವಾಮಿತ್ರನು, ನೋಡು ನೋಡು! ಇಂದು ನೀನು ನನ್ನನ್ನು ರಾಜರ್ಷಿ ಎಂದು ಹೀಯಾಳಿಸಿ ನುಡಿದಿದ್ದಕ್ಕೆ ಪ್ರತಿಯಾಗಿ, ನಾನು ಹರಿಶ್ಚಂದ್ರನನ್ನು  ಅಸತ್ಯನನ್ನಾಗಿ ಮಾಡಿಯೇ ತೀರುತ್ತೇನೆ. ಶ್ರೇಷ್ಠ ಪ್ರತಿಜ್ಞೆಗಳನ್ನು ಮಾಡಿದ ನಿನ್ನನ್ನು ವ್ರತಭ್ರಷ್ಟನನ್ನಾಗಿ ಮಾಡುತ್ತೇನೆ. ಲೇವಡಿ ಮಾಡಿ ಕಾಡುತ್ತಿದೆ." ಎನ್ನುತ್ತ ಎದ್ದು ಆಡಂಬರದ ಸಿಡಿಲು ಗರ್ಜಿಸಿ ಮೇಘದಿಂದ ಹೊರ ಹೊರಡುವಂತೆ ದೇವೇಂದ್ರನ ಒಡ್ಡೋಲಗ ದಿಂದ ಹೊರಟು ಹೋದನು ವಿಶ್ವಾಮಿತ್ರನು."ಕೋಣಗಳೆರಡು ಕಾದಾಡಿದರೆ ಗಿಡಕ್ಕೆ ಮೃತ್ಯು" ಎಂಬ ಲೋಕೋಕ್ತಿಯಂತೆ ವಸಿಷ್ಠ ವಿಶ್ವಾಮಿತ್ರರ ಕಲಹವು ಹರಿಶ್ಚಂದ್ರನ ಕಷ್ಟ ಸಂಕಷ್ಟಗಳ ಪರಂಪರೆಗೆ ಮುನ್ನುಡಿಯಾಗುತ್ತದೆ.

_ಸಿದ್ಧಪಡಿಸಿದವರು: ಸಹಾಯಕ ಪ್ರಾಧ್ಯಾಪಕರು, ಡಾ.ನಾಗರಾಜ ವೀ ಬಳಿಗೇರ ಕೆ.ಎಲ್.ಇ. ಸಂಸ್ಥೆಯ ಜೆ.ಟಿ.ಮಹಾವಿದ್ಯಾಲಯ ಗದಗ -ಬೆಟಗೇರಿ

 

A tag has been placed on ಚಿತ್ರ:WhatsApp Image 2021-05-22 at 7.48.10 PM.jpeg requesting that it be speedily deleted from Wikipedia. This has been done under section F3 of the criteria for speedy deletion, because it is an image licensed as "for non-commercial use only," "non-derivative use" or "used with permission," it has not been shown to comply with the limited standards for the use of non-free content. [೧], and it was either uploaded on or after 2005-05-19, or is not used in any articles. If you agree with the deletion, there is no need to do anything. If, however, you believe that this image may be retained on Wikipedia under one of the permitted conditions then:

  • state clearly the source of the image. If it has been copied from elsewhere on the web you should provide links to: the image itself, the page which uses it and the page which contains the license conditions.
  • add the relevant copyright tag.

If you think this page should not be deleted for this reason, you may contest the nomination by visiting the page and clicking the button labelled "Contest this speedy deletion". This will give you the opportunity to explain why you believe the page should not be deleted. However, be aware that once a page is tagged for speedy deletion, it may be deleted without delay. Please do not remove the speedy deletion tag from the page yourself, but do not hesitate to add information in line with Wikipedia's policies and guidelines. If the page is deleted, and you wish to retrieve the deleted material for future reference or improvement, then please contact the deleting administrator, or if you have already done so, you can place a request here. ★ Anoop✉ ೦೬:೩೦, ೨೩ ಮೇ ೨೦೨೧ (UTC)

ನಾಮ ಪ್ರಕರಣ

ಬದಲಾಯಿಸಿ

==

==

ನಾಮಪ್ರಕರಣ: __________________________________________________________________________________________ ಲಿಂಗ= ನಾಮಪ್ರಕೃತಿ

ಸೂತ್ರಗಳು: ೮೨,೮೫,೮೬

ಸೂತ್ರಂ: ೮೨

               ಕ್ರಿಯೆಯಂ ನುಡಿಯದುದು ವಿಭ
               ಕ್ತಿಯನಿಲ್ಲದುದರ್ಥಮುಳ್ಳುದಂತದು ಲಿಂಗಂ 
               ನಿಯತಚತುರ್ಭೇದಮದಾ
               ರಯೆ ಕೃತ್ತದ್ದಿತಸಮಾಸನಾಮಸ್ಥಿತಿಯಿಂ

ಸೂತ್ರಸಾರ: ಕ್ರಿಯಾವಾಚಕವಲ್ಲದುದು, ನಾಮವಿಭಕ್ತಿ ಪ್ರತ್ಯಯಗಳಿಲ್ಲದುದು,(ಸಪ್ತ ವಿಭಕ್ತಿ) ಅರ್ಥವತ್ತಾಗಿರುವುದು ಅದುವೇ ಲಿಂಗ. ಕೃತ್, ತದ್ದಿತ,ಸಮಾಸ ಮತ್ತು ನಾಮ. ಎಂದು ನಾಲ್ಕುತೆರನಾಗಿದೆ.

ಪ್ರಯೋಗ: ೧. ಕೃತ್ತಿಮಗೆ = ಕೃಲಿಂಗಕ್ಕೆ

                      ಮಾಡಿದ, ಬೇಡಿದ, ಕೂಡಿದ,ನೋಡಿದ- ಎಂದಿರಿಸಿ ನಾಮವಿಭಕ್ತಿಗಳಂ ಪತ್ತಿಸುವುದು
                 ಉದಾ: ಮಾಡಿದಂ, ಮಾಡಿದನಂ, ಮಾಡಿದನಿಂ, ಮಾಡಿದಂಗೆ, ಮಾಡಿದನತ್ತಣಿಂ,ಮಾಡಿದನ,

೨. ತದ್ಧಿತಲಿಂಗಕ್ಕೆ: ಅಡಪವಳ, ಪಡೆವಳ್ಳ, ಸಜ್ಜೆವಳ್ಳ- ಎಂದಿರಿಸಿ ವಿಭಕ್ತಿಯಂ ಪತ್ತಿಸುವರು. ಉದಾ: ಅಡಪವಳಂ, ಅಡಪದವಳನಂ, ಅಡಪದವಳನಿಂ ಅಡಪದವಳಂಗೆ, ಅಡಪದವಳನತ್ತಣಿಂ, ಅಡಪದವಳನ, ಅಡಪದವಳನೊಳ್.


೩.ಸಮಾಸಲಿಂಗ:

                  ಉದಾ:      ಇದಕ್ಕೆ ನಾಮವಿಭಕ್ತಿ ಪ್ರತ್ಯಯಗಳನ್ನು ಹಚ್ಚಿ ಕಡುವಿಲ್ಲಂ, ಕಡುವಿಲ್ಲನಂ, ಕಡುವಿಲ್ಲನಿಂ, ಕಡುವಿಲ್ಲಂಗೆ, 

ಕಡುವಿಲ್ಲನತ್ತಣಿಂ, ಕಡುವಿಲ್ಲನ, ಕಡುವಿಲ್ಲಂ, ಕಡುವಿಲ್ಲನೊಳ್, ಎಂದು ಪದಗಳನ್ನು ರೂಪಿಸಬಹುದು ತೆಂಗಾಳಿ, ತೆಂಗಾಳಿಯಂ, ತೆಂಗಾಳಿಗೆ, ತೆಂಗಾಳಿಯತ್ತಣಿಂ, ತೆಂಗಾಳಿಯ, ತೆಂಗಾಳಿಯೊಳ್

೪.ನಾಮಲಿಂಗ: ಇದಕ್ಕೆ ನಾಮವಿಭಕ್ತಿ ಪ್ರತ್ಯಯಗಳನ್ನು ಹಚ್ಚಿ. ಅರಸಂ, ಅರಸನಂ, ಅರಸನಿಂ, ಅರಸಂಗೆ, ಅರಸನತ್ತಣಿಂ,
  ಅರಸನ, ಅರಸನೊಳ್, ಎಂದು ಪದಗಳನ್ನು ರೂಪಿಸಬಹುದು.
 ಕ್ರಿಯಾರ್ಥಮಂ ನುಡಿವ ʼಧಾತುʼ ಲಿಂಗಮಲ್ಲದು : ನೋಡು, ಬೇಡು,ತೀಡು, ಇಸು, ಪಸು, ಎಂಬಿವು ಮೊದಲಾದವು ಧಾತುಗಳ್ (=ಲಿಂಗಗಳಲ್ಲ)

ಸೂತ್ರಂ :೮೫

                       ಸಮುಪಾತ್ತ ಕ್ರಿಯೆಯುಂ ವಾ
                       ಕ್ಯಮಾಲೆಯುಂ ಸುಕವಿರಚಿತನಾಮಮದಾದಂ-
                       ದಮರ್ಗು ಲಿಂಗಂ, ಮಾರ್ಗ
                       ಕ್ರಮಮಂ ಕಾಣಲ್ಕೆ ಬರ್ಪುದಾದ್ಯರ ಕೃತಿಯೊಳ್  ||೮೫||

ಸೂತ್ರ ಸಾರ : ಸಮುಪಾತ್ತ ಕ್ರಿಯೆ ಹಾಗೂ ವಾಕ್ಯಮಾಲೆಗಳು ಸುಕವಿರಚಿತ ನಾಮಗಳಾದ ಪಕ್ಷದಲ್ಲಿ ಲಿಂಗವಾಗಿ ಪರಿಣಮಿಸುತ್ತವೆ.

ಆದ್ಯರ ಕಾವ್ಯಗಳಲ್ಲಿ ಇವುಗಳ ಬಳಕೆಯನ್ನು ಕಾಣಲು ಬರುತ್ತದೆ.

ಪ್ರಯೋಗಂ:

ಕ್ರಿಯೆಗೆ    :   {=ಸಮುಪಾತ್ತ ಕ್ರಿಯಾಲಿಂಗ }
                  “ನಮೋಸ್ತುಗಳಿರ್ಪಂದದೊಳರ್ದಂ”(ನಮೋಸ್ತುಗಳೆಂದು ಸವರ್ಣಗೆ ಪೆಸರಾಯಿತು)

ವಾಕ್ಯಮಾಲೆ : {=ವಾಕ್ಯಮಾಲಾಲಿಂಗಕ್ಕೆ}

                      ೧,…. “ತೋಳ್ಗೊ| ಪ್ಪುವನಾಳ್ದನಕ್ಕೆದು ಕೈದುವೊತ್ತರ ದೇವಂ”
                      ೨. ಗುಣಕ್ಕೆ ನಲ್ಲ ಗಣೇಶಂ
                      ೩. “ಸೊರ್ಕಾನೆಗಳ್ಗಾಲಾಗಂ………..”
                      ೪………… “ಅಹಿಂಸಾಪರಮೋಧರ್ಮಮೆಂ”
                      ಬುದನೀ “ “ತತ್ಸವತುರ್ವದೆಣ್ಯ” ರರಿದರ್ ತ್ರೈಲೋಕ್ಯಚೂಡಾಮಣೀ”


ಸೂತ್ರಂ :೮೬

                    ಕ್ಷಿತಿಯೊಳೆ ರೂಢಾನ್ವರ್ಥಾಂ-
                    ಕಿತಮೆಂದಾ ನಾಮಮರಿಗೆ ಮೂದೆರನಸಮಾ
                    ಸತೆಯೊಳ್ ನೆಲಸಿರ್ಪುದು ನಿ-
                    ಶ್ಚಿತನಸಮಂಪಂಚವರ್ಣಕೃತಪರಿಮಾಣಂ ||೮೬||

ಸೂತ್ರಸಾರ: ರೂಢವೆಂದು ಅನ್ವರ್ಥವೆಂದು ಹಾಗೂ ಅಂಕಿತವೆದು ಆ ನಾಮಲಿಂಗವು ಮೂರು ವಿಧವಾಗಿದೆ. ರೂಢನಾಮಕ್ಕೆ ನಿಶ್ಚಿತ-ನಾಮವೆಂದೂ ಹೆಸರಿದೆ. ಅದು ಒಂದುರಿಂದ ಐದು ಅಕ್ಷರಗಳ ಪರಿಮಾಣವುಳ್ಳದ್ದಾಗಿ ಸಮಾಸ ರಹಿತವಾಗಿರತ್ತದೆ.



೧.ರೂಢನಾಮ (ನೆಲಂ,ಪೊಲಂ,ಜಲಂ,ಚಲಂ) ೨.ಅನ್ವರ್ಥಕ ನಾಮ ೧.ಗುಣಾನುರೂಪಾನ್ವರ್ಥನಾಮಕ್ಕೆ: ದಾನಿ, ಪರಾಕ್ರಮಿ,ಅಭಿಮಾನಿ,ದಯಾಪರ. ೨. ಅರ್ಥಾನುರೂಪಾನ್ವರ್ಥನಾಮಕ್ಕೆ: ಹಿಳ್ಳೆಗಾಲಂ, ನಿಡುಮೂಗಂ, ಕುಸಿಗೊರಲಂ ೩.ಅಂಕಿತ ನಾಮ ದೂಳಿಗಂ, ಕಾಟಂ, ಕಸವಂ, ತಿಪ್ಪಂ,ಮಾಚಂ,ಕೇತಂ