ನಮಸ್ಕಾರ Kannasda234


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Pavanaja (ಚರ್ಚೆ) ೧೩:೫೮, ೨೪ ಜೂನ್ ೨೦೧೫ (UTC)

ಕವಿ ರವೀಂದ್ರನಾಥ ಗೋರರು ಈ ಕಡಲತಡಿಯ ಸೌಂದರ್ಯವನ್ನು ತಮ್ಮ ಕವಿತೆಯೊಂದರಲ್ಲಿ ಹಾಡಿ ಹೊಗಳಿದ್ದರು. ಸುಂದರ ಕಡಲು ತೀರಗಳು, ದ್ವೀಪಗಳು, ಸುತ್ತ ಹಚ್ಚಹಸರಿನ ವನರಾಶಿ ಹೊಂದಿದ ಕಾರವಾರವನ್ನು 'ಕನ್ನಡನಾಡಿನ ಕಾಶ್ಮೀರ' ಎಂದೂ ಬಣ್ಣಿಸುತ್ತಾರೆ. ಸದಾಶಿವಗಢ ಕೋಟೆ, ಸೀಬರ್ಡ ನೌಕಾನೆಲೆ, ಜಲಸಾಹಸ ಕೇಂದ್ರ, ದುರ್ಗಾ ದೇಗುಲಗಳು ಇಲ್ಲಿನ ಪ್ರವಾಸಿ ತಾಣಗಳು. ಕಾರವಾರ ಹತ್ತಿರದ ಶಿರ್ವೆ ಗ್ರಾಮದ ಎದುರಿಗೆ ಶಿರ್ವೆ ಹೆಸರಿನ ಪರ್ವತ ಶ್ರೇಣ್ಣಿ ಇದೆ. ಈ ಶ್ರೇಣಿಯ ನಡುವೆ, ನೆಲಮಟ್ಟದಿಂದ ೩,೫೦೦ ರಿಂದ ೪,೦೦೦ ಅಡಗಳಷ್ಟು ಎತ್ತರದ ಬೃಹತ್ ಶಿಲಾಬಂಡೆಯೊಂದು ಎದ್ದು ನಿಂತಿದೆ. ಶಿರ್ವೆ ಪರ್ವತಶ್ರೇಣಿ ಇರುವುದು ಕಾರವಾರ ಪಟ್ಟಣದಿಂದ ೩೫ ಕಿ. ಮೀ. ದೂರದಲ್ಲಿ. ಮಲ್ಲಾಪುರ ಮರ್ಗವಾಗಿ ಹೋಗುವ ರಸ್ತೆಯಲ್ಲಿ ದೇವಳಮಕ್ಕಿ ಎಂಬ ಪುಟ್ಟ ಊರು ದಾಟುತ್ತಿದ್ದಂತೆಯೇ ಬಲಗಡೆ ಕಚ್ಚಾರಸ್ತೆ ಕಾಣಿಸುತ್ತದೆ. ಆ ದಾರಿಯಲ್ಲಿ ನಡದರೆ ೪-೫ ಕಿ.ಮೀ. ದೂರದಲ್ಲಿ ಶಿರ್ವೆ ಗ್ರಾಮವಿದೆ.

   ಶಿರ್ವೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದ ರಸ್ತೆಯಿಂದ ಮೂರು-ನಾಲ್ಕು ಕಿ.ಮೀ. ಮುನ್ನಡೆದು ಎಡಭಾಗದ ಅರಣ್ಯ ತಿರುವನಲ್ಲಿ ಹೊರಳಿದರೆ ಶಿರ್ವೆ ಬೆಟ್ಟದ ಚಾರಣದ ಆರಂಭ. ತಿರುವಿನ ಎದುರಿನಲ್ಲಿ ಹೊಲಗದ್ದೆಗಳ ಸಾಲು ಸಾಲು. ಹೂಬಳ್ಳಿಗಳ ರಾಶಿ ಕಣ್ಣಿಗೆ ಹಬ್ಬ. ಮುಂದೆ ಎರಡು ಕ್.ಮೀ. ವರೆಗೆ ಸಮತಟ್ಟಾದ ಕಚ್ಚಾರಸ್ತೆ ಕಚ್ಚಮಾರ್ಗ ದಾಟಿದ ಬಳಿಕ ಮಾತ್ರ ಎತ್ತರೆತ್ತದ ದಾರಿ. ಒಂದೂವರೆ ತಾಸಿನ ಕಾಲ್ನಡಿಗೆಯ ನಂತರ ಶಿರ್ವೆ ಬೆಟ್ಟ ಒಂದು ಬಯಲಿನ ಭಾಗದಿಂದ ಸ್ಪಷ್ಟವಾಗಿ ಗೋಚರಿಸೌತ್ತದೆ. ಆದರೆ ಸಾಗಬೇಕಾಗಿರುವ ಅಂತರವಿನ್ನೂ ದೂರ. ಬಯಲು ದಾರಿಯ ದಂಡೆಗುಂಟ ಮುಂದಕ್ಕೆ ಅರ್ಧ ತಾಸು ಕ್ರಮಿಸಿದರೆ ಹುಲ್ಲುಗಾವಲು ಸಿಗುತ್ತದೆ. ಎಡಭಾಗದಲ್ಲಿ ಹೆಚ್ಚು ದಟ್ಟ.ಇಲ್ಲಿ ಕುಳಿತು ಆಯಾಸ ಪರಿಹರಿಸಕೊಳ್ಳಬಹುದು. ಹುಲ್ಲುಗಾವಲಿನಲ್ಲಿ ನಿಂತು ನೋಡಿದರೆ ಹಿಂದೆ ಮುಂದೆ ಎರಡೂ ಬದಿಗೂ ವನರಾಶಿ ಆಕಾಶದೊಡನೆ ಚಕ್ಕಂದವಾಡುತ್ತಿದೆಯೋ ಎನ್ನುವಂತಹ ವಿಹಂಗಮ ನೋಟ. ಬೆಟ್ಟ ಏರುತ್ತಲೇ ಹೋದಂತೆ ಎಡಭಾಗದಲ್ಲಿ ಹಳೆಯ ಕಲ್ಲಿನ ಗೋಡೆಗಳು, ದೊಡ್ಡ ಬಂಡೆಗಳು ಒಂದರ ಮೇಲೆ ಇನ್ನೊಂದರಂತೆ ಪೇರಿಸಿ ಇಟ್ಟಂತಿವೆ. ಕಾಡಿನಲ್ಲಿ ಬೃಹದಾಕಾರದ ವಿಭಿನ್ನ  ಪ್ರಭೇದದ ಜಾತಿಯ ಮರಗಳಿವೆ.
    ನಮ್ಮ ತಂಡಕ್ಕೆ ಮರ್ಗದಲ್ಲಿ ಮುಳ್ಳುಹಂದಿಯ ಮುಳ್ಲು ಮತ್ತು ಹುಲಿಯ ಮಲದ ಉಂಡೆಗಳು ಸಿಕ್ಕವು. ಆಈ ಭಾಗದ ಅರಣ್ಯದಲ್ಲಿ ನರಿ, ಕಾಡುಹಂದಿ,ಕೋತಿ,ಜಿಂಕೆ ಮುತ್ತು ಪ್ರಾಣಿಗಳಿವೆ ಎಂಬ ಮಾಹಿತಿ ಸ್ಥಳೀಯರಿಂದ ದೊರೆಯಿತು