ನಮಸ್ಕಾರ B nagesha


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೦೭:೪೮, ೫ ಮೇ ೨೦೧೮ (UTC)

ಮೊಲೆ ಕ್ಯಾನ್ಸರ

ಆಧುನಿಕ ಸ್ತ್ರೀಯರ ಸ್ವಾಸ್ಥ್ಯದ ಬಗೆಗೆ ಇರುವ ಅಂತಕಗಳಲ್ಲಿ ಮೊಲೆ ಕ್ಯಾನ್ಸರಗೆ ಪ್ರಥಮ ಆಧ್ಯತೆ ಇದೆ. ಕಾರಣ ಮೊಲೆಗಳು ಹೆಣ್ಣಿನ ಸುಂದರ ಮತ್ತು ಅಷ್ಟೇ ಬಹು ಸಂಕೀರ್ಣ ಅಂಗ, ಅದು ಆಕೆಗೆ ಸೌಂದರ್ಯದ ತಾಯ್ತನದ ಸಂಕೇತ, ಗಂಡಿನ ಪಾಲಿಗೆ ಕಾಮೋದ್ರೇಕದ ಒಂದು ಕೇಂದ್ರ ಮತ್ತು ಮಗುವಿನ ಪಾಲಿಗೆ ಅಮೃತಕಲಶ. ಹುಡುಗಿಯರು ಖುತುಮತಿಯಾಗುವ ಕಾಲಕ್ಕೆ ಮೂಡಲಾರಂಭಿಸುವ ಮೊಲೆಗಳು ಕಲವೇ ತಿಂಗಳುಗಳಲ್ಲಿ ಕೆಲವರಲ್ಲಿ ವರ್ಷಗಳಲ್ಲಿ ಪೂರ್ಣ ಪ್ರಮಾಣಕ್ಕೆ ಬೆಳೆದು ನಿಲ್ಲುತ್ತವೆ ಅಗಿನಿಂದ ಅವು ಜೀವೋತ್ಪತ್ತಿಯ ಕ್ರೀಯೆಯಲ್ಲಿ ಸಕ್ರಿಯೆವಾಗುತ್ತಾವೆ. ಮನುಷ್ಯನ ದೇಹದೊಳಗೆ ಜೀವಕೋಶಗಳು ನಿರ್ದೀಷ್ಠ ರೀತಿಯಲ್ಲಿ ಹುಟ್ಟಿ ನಂತರ ನಾಶವಾಗುತ್ತವೆ ಅದರೆ ಅವುಗಳಲ್ಲಿ ಯಾವುದೋ ಒಂದು ಜೀವಕೋಶಗಳ ಬೆಳವಣಿಗೆಯಲ್ಲಿ ಏರುಪೇರು ಆಗುವುದರ ಮೂಲಕ ಅಗತ್ಯೆಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಬಿಡುತ್ತಾವೆ ಮತ್ತು ಹರಡಿಕೊಳ್ಳುತ್ತಾವೆ ಇಂತಹ ಹರಡಿಕೊಳ್ಳುವ ಕ್ರೀಯೆಗೆ ಮೊಲೆ ಕ್ಯಾನ್ಸರ ಎಂದು ಹೆಸರು. ಸ್ತ್ರೀಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರಗಳಲ್ಲಿ ಮೊಲೆ ಕ್ಯಾನ್ಸರ ಪ್ರಮಾಣವೇ ಅತಿಹೆಚ್ಚು ಎಂದರೆ ತಪ್ಪಗಲಾರದು. ಮೊಲೆ ಕ್ಯಾನ್ಸರ ಎನ್ನುವುದು ಅತ್ಯಂತ ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲೂ ಅದರಲ್ಲೂ ಸಮಾಜದ ಶ್ರೀಮಂತ ಅಥವಾ ಮೇಲ್ವರ್ಗದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ಪುರಾವೆಗಳು ಇವೆ. ಕೊಬ್ಬಿನಾಂಶ ಹೆಚ್ಚಾಗಿರುವ ಆಹಾರವನ್ನು ಸೇವಿಸುವುದರಿಂದ ಮೊಲೆ ಕ್ಯಾನ್ಸರ ಬರುತ್ತದೆ. ಇದರ ಪ್ರಮಾಣ ಭಾರತ ದೇಶದಲ್ಲಿ ತೀರ ಕಡಿಮೆ ಇದೆ ಎಂದರೆ ತಪ್ಪಗಲಾರದು ಅಂದರೆ ಭಾರತ ದೇಶದ ಪ್ರತಿ ಸಾವಿರ ಮಹಿಳೆಯರಲ್ಲಿ ಒಬ್ಬರಿಗೆ ಮಾತ್ರ ಈ ಕಾಯಿಲೆ ಕಾಣಿಸಿಕೊಳ್ಲುತ್ತದೆ. ಇದಕ್ಕೆ ಸೂಕ್ತವಾದ ಮುನ್ನೇಚ್ಚರಿಕೆಯನ್ನು ವಹಿಸಿದರೆ ಇದು ಮಾರಕವಾಗದಂತೆ ತಡೆಯಬಹುದು. ಇದನ್ನು ತೀರ ಪ್ರಾಥಮಿಕ ಹಂತದಲ್ಲಿ ಗುರ್ತಿಸಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು ಇಲ್ಲವಾದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ, ಮೊಲೆ ಕ್ಯಾನ್ಸರನಿಂದ ಕೇವಲ ರೋಗ ಹರಡಿದ ಸ್ತ್ರೀಗೆ ಮಾತ್ರವಲ್ಲದೆ ಆಕೆಯನ್ನು ನೆಚ್ಚಿದ ಕುಟುಂಬ, ಮಕ್ಕಳು ಬಹದೊಡ್ಡ ಬೇಲೆಯನ್ನು ತೆರೆಬೇಕಾಗುತ್ತದೆ, ಈ ಒಂದು ಕಾರಣಕ್ಕಾಗಿಯೇ ಮೊಲೆ ಕ್ಯಾನ್ಸರ ಬಗ್ಗೆ ಬಹಳ ಜಾಗೃತರಾಗಬೇಕಾಗುತ್ತದೆ.

ವಯಸ್ಸಿನ ಮೀತಿ ಬದಲಾಯಿಸಿ

೧೧ ವರ್ಷಕಿಂತ ಮುಂಚೆ ಖುತುಮತಿ ಆಗದವರು ಮತ್ತು ೫೦ ವರ್ಷದ ನಂತರ ಮುಟ್ಟು ನಿಂತವರಲ್ಲಿ, ಪಾಶ್ಚಮಾತ್ಯ ರಾಷ್ಟ್ರಗಳಲ್ಲಿ ೫೦ ರಿಂದ ೭೦ ವರ್ಷದ ನಡುವೆ ಮತ್ತು ಭಾರತ ದೇಶದಲ್ಲಿ ೩೦ ರಿಂದ ೩೫ ನೇಯ ವಯಸ್ಸಿನವರಲ್ಲಿ ಮೊಲೆ ಕ್ಯಾನ್ಸರ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ.

ಮೊಲೆ ಕ್ಯಾನ್ಸರನಲ್ಲಿ ೨ ವಿಧ ಬದಲಾಯಿಸಿ

೧. ದೇಹದೊಳಗೆ ನಾರಿನಂಥ ಪದಾರ್ಥ ಇರುತ್ತದೆ ಇದು ಗೊತ್ತಿರದ ಕಾರನಕ್ಕಾಗಿ ಗಂಟು ಕಟ್ಟಿಕೊಮಡು ವಿಕಾರವಾಗಿ ಬೆಳೆಯುತ್ತಾ ಹೊಗಬಹುದು ಇದನ್ನು ವೈಧ್ಯಕಿಯ ಭಾಷೆಯಲ್ಲಿ ನಾರ್ಕೋಮಾ ಎನ್ನುತ್ತಾರೆ, ಬೆಳವಣಿಗೆಯ ಭೀಕರತೆ ಎಂದರೆ ಅದರ ಆಕ್ರಮಣಕಾರಿ ಗುಣ, ದೇಹದ ಯಾವುದೋ ಒಂದು ಭಾಗದಲ್ಲಿ ಕಾಣಿಸಿಕೊಳ್ಳುವ ಇದು ರಕ್ತನಾಳ, ನರಗಳ ಮೂಲಕ ದೇಹದ ಇನ್ನಾವುದೇ ಭಾಗಕ್ಕಾದರೂ ಪಸರಿಸಿ ಅಲ್ಲೂ ಕ್ಯಾನ್ಸರ ಪಸರಿಸಬಹುದು ಹೀಗಾಗಿ ಇದು ತೀರ ಆಪಾಯಕಾರಿ. ೨. ದೇಹದ ಯಾವುದಾದರೂ ಗ್ರಂಥಿ ಅಂಗಕ್ಕೆ ತಗಲುವ ಕ್ಯಾನ್ಸರ ಇದನ್ನು ಮೊಲೆ ಕ್ಯಾನ್ಸರ ಎಂದು ಕರೆಯುತ್ತೇವೆ, ಇದು ನಾರ್ಕೋಮಾದ ಹಾಗೆ ಅಪಯಕಾರಿ ಅಲ್ಲದಿದ್ದರೂ ಪ್ರಾಥಮಿಕ ಹಂತದಲ್ಲಿ ಪತ್ತೆಯಾದರೆ ನಿವಾರಣೆ ಅದು ಸಾಧ್ಯವಾಗದೆ ಹೋದಲ್ಲಿ ನಿಯಂತ್ರಣ ಆಸಾಧ್ಯ ಈ ಒಂದು ಕಾರಣಕ್ಕಾಗಿ ಶಸ್ತ್ರ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ.

ದೇಹದೋಳಗಿನ ಕೆಲವು ಜೈವಿಕ ಹಾಗೂ ಚೋದನಿ ವ್ಯವಸ್ಥೆಗಳು ಪರಸ್ಪರ ಪ್ರಕ್ರೀಯೆಗಳ ಪರಿಣಾಮದಿಂದಾಗಿ ಮೊಲೆಯಲ್ಲಿ ಕ್ಯಾನ್ಸರ ಉದ್ಬವಿಸಿತ್ತು ಎಂಬ ಅಭಿಪ್ರಾಯ ಈಗ ಪ್ರಚಲಿತವಾಗಿದೆ. ಮೊಲೆಗಳಲ್ಲಿ ಕ್ಯಾನ್ಸರ ಉಂಟಾಗುವ ಸಾಧ್ಯತೆಗಳನ್ನು ಮೋದಲೇ ಗುರ್ತಿಸಲು ಕೆಲವು ಮಾರ್ಗಸೂಚಿಗಳೂ ಇವೆ. ಅವುಗಳಲ್ಲಿ ಅನುವಂಶಿಕತೆ, ತಾಯಿಯ ಒಡಹುಟ್ಟಿದ ಸಹೋದರಿಯರಲ್ಲಿ ಮತ್ತು ರಕ್ತ ಸಂಬಂಧಿಗಳಲ್ಲಿ, ಮೊಲೆಯ ಕ್ಯಾನ್ಸರ ಇದ್ದ ಸಂತತಿಯರಲ್ಲಿ ಇದರ ಸಂಬಂಧ ಇತರರಿಗಿಂತ ೨-೩ ಪಟ್ಟು ಹೆಚ್ಚಾಗಿರುತ್ತಾದೆ ಅದರಲ್ಲಿ ಬಹಳ ಮುಖ್ಯವಾಗಿ ಮೊಲೆಯ ಕ್ಯಾನ್ಸರ ಶೇ ೯೦ ರಷ್ಟು ರಕ್ತ ಸಂಬಂಧಿಗಳಲ್ಲಿ ಇರುವುದು ನಮಗೆ ಕಂಡು ಬರುತ್ತದೆ.

ಮೊಲೆಯ ಕ್ಯಾನ್ಸರನ ವಿವಿಧ ಹಂತಗಳು ಬದಲಾಯಿಸಿ

೧. ಮೊಲೆಗಳಲ್ಲಿ ಗಂಟುಗಳಂತೆ ಭಾಸವಾಗುವ ಗಡ್ಡೆಗಳು ಮೂಡುವುದು. ಈ ಹಂತದಲ್ಲಿ ಅವು ನಿರ್ಗಳವಾಗಿ ಆತ್ತಿಂದತ್ತ ಚಲಿಸುತ್ತವೆ ಹಾಗೂ ಎದೆಯ ಚರ್ಮಕ್ಕಾಗಲಿ ಅಥವಾ ಒಳಗಿನ ಅಂಗಕ್ಕಾಗಲಿ ಅವು ಅಂಟಿರುವುದಿಲ್ಲ ಈ ಹಂತದಲ್ಲಿ ಸ್ವಲ್ಪ ಊತ ಕೂಡ ಇರುತ್ತದೆ. ಮೊಲೆಯ ಪ್ರಮಾಣ ೨ ಸೇ.ಮಿ ಗಿಂತ ಕಡಿಮೆ ಪ್ರಮಾಣ. ೨. ಮೊಲೆಯ ಗಂಟುಗಳು ಸ್ವಲ್ಪ ದೊಡ್ಡವಾಗುವುದು, ಈ ಹಂತದಲ್ಲಿ ಗಡ್ಡೆಗಳು ಬೀಡಿ ಬೀಡಿಯಾಗಿರುತ್ತಾವೆ. ಮೊಲೆಯ ಪ್ರಮಾಣ ೫ ಸೇ.ಮಿ ಗಿಂತ ಕಡಿಮೆ ಪ್ರಮಾಣ. ೩. ಗೆಡ್ಡೆಗಳ ಗಾತ್ರ ದೊಡ್ಡದಾಗಿದ್ದು ಎದೆಯ ಚರ್ಮಕ್ಕೆ ಇಲ್ಲವೇ ದೇಹದ ಒಳಗಿನ ಯಾವುದಾದರೂ ಒಂದು ಭಾಗಕ್ಕೆ ಅಂಟಿಕೊಂಡಿರುತ್ತಾವೆ ಅವುಗಳ ಚಲನೆ ಸಾಧ್ಯವಿಲ್ಲ. ಮೊಲೆಯ ಪ್ರಮಾಣ ೫ ಸೇ.ಮಿ ಗಿಂತ ಹೆಚ್ಚಿನ ಪ್ರಮಾಣ. ೪. ಗಡ್ಡೆ ಒಡೆದು ರಕ್ತಸ್ರಾವ ಆಗುತ್ತದೆ, ದುರ್ಗಂಧ ಬೇರೆ ರೇವು ಬರುತ್ತದೆ ಈ ಹಂತದಲ್ಲಿ ಕ್ಯಾನ್ಸರ ದೇಹದ ಭಾಗಕ್ಕೂ ಅಂಟಿಕೊಲ್ಳಬಹುದು.

ಪತ್ತೆ ಮಾಡುವ ವಿಧಾನ ಬದಲಾಯಿಸಿ

೧. ಬಾಹ್ಯ ಪರೀಕ್ಷೆ ೨. ಬಯೊಪಿ ೩. ಮ್ಯೊಮೋಗ್ರಾಪಿ

ಚಿಕಿತ್ಸೆ ಬದಲಾಯಿಸಿ

೨ನೇಯ ಹಂತ ಮುಟ್ಟಿರುವ ಮೊಲೆಯ ಕ್ಯಾನ್ಸರಗೆ ಶಸ್ತ್ರಚಿಕಿತ್ಸೆಯಿಂದ ಮಾತ್ರ ನಿವಾರಣೆ ಸಾಧ್ಯ ಮುಂದುವರೆದ ಹಂತದಲ್ಲಿ ಶಸ್ತ್ರಚಿಕಿತ್ಸೆಯ ಜೋತೆಗೆ ವಿಕಿರಣ ಚಿಕಿತ್ಸೆ, ಕ್ಯಾನ್ಸರ ನಿವಾರಕ ಔಷದಿಗಳು ಪ್ರಯೋಗ ಕೂಡ ಅಗತ್ಯವಾಗುತ್ತದೆ. ಹಾರ್ಮೋನಗಳ ವೈಪಲ್ಯದಿಂದ ಆಗುವ ಕ್ಯಾನ್ಸರಗಳಿಗೆ ಹಾರ್ಮೋನಗಳ ನಿಯಂತ್ರಣಕ್ಕೆ ಅಂಡಾಶಯ ತೆಗೆದುಹಾಕುವುದರಿಂದ ಪರಿಹಾರ ಸಾಧ್ಯ ಸೃಷ್ಟಿ ಕ್ರೀಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಇಸ್ಟ್ರೋಜೆನ ಎಂಬ ಹಾರ್ಮೋನು ಕಾರ್ಯ ಎಸಗದಂತೆ ವಿರುದ್ದ ಕ್ರೀಯೆಗೆ ಪ್ರಚೋದನೆ ನೀಡುವಂತೆ ಟೊಮೊಕ್ಸಿಪಿನ ಎಂಬ ಔಷದಿಯಿಂದ ಇದರ ಪರಿಣಾಮ ಸಾಧ್ಯ.

ರೋಗ ಬರದಂತೆ ತಡೆಯುವುದು ಬದಲಾಯಿಸಿ

ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಮುಂಚೆ ರೋಗ ಬಾರದಂತೆ ತಡೆಯುವುದೇ ಜಾಣತನ. ಮೊಲೆ ಕ್ಯಾನ್ಸರ ಎಲ್ಲರಿಗೂ ಬರುವುದಿಲ್ಲ ಆರೋಗ್ಯದಲ್ಲಿನ ಏಚ್ಚರಿಕೆ ಮೊಲೆ ಕ್ಯಾನ್ಸರ ಬರದಂತೆ ತಡೆಯಬಹುದು ತಮಗೆ ಅಂಥದ್ದೇನು ಆಗುವುದಿಲ್ಲ ಎಂಬ ಅಸಡ್ಡೆ ಒಲ್ಲೆಯದಲ್ಲ ಆಕಸ್ಮಾತ ಬಂದರೆ ಎಂಬ ಎಚ್ಚರಿಕೆ ಅಗತ್ಯ ಆಗಾಗ ವೈಧ್ಯರ ಹತ್ತೀರ ಹೋಗಿ ಪರಿಕ್ಷೀಸಿಕೊಳ್ಳುವುದು ಒಳ್ಳೆಯದು ಇದಕ್ಕಿಂತ ಸುಲಭವಾದದ್ದು ಆಗಾಗ ತಾವೇ ಬಾಹ್ಯ ಪರೀಕ್ಷೆಗೆ ಒಳಪಡಿಸಿಕೊಳ್ಳುವುದು ಒಳ್ಳೆಯದು ಇದರಿಂದ ರೋಗ ಬರುವುದನ್ನು ತಡೆಗಟ್ಟಬಹುದು, ಹತ್ತಿರ ಸಂಬಂಧಿಗಳನ್ನು ವಿವಾಹ ಆಗಬಾರದು, ತಮ್ಮ ಮಕ್ಕಳಿಗೆ ದಿರ್ಘಕಾಲ ಮೊಲೆಯುನೀಸಬಾರದು.

ಉಲ್ಲೇಖಗಳು ಬದಲಾಯಿಸಿ

೧. ಸಾಮಾನ್ಯ ಶಸ್ತ್ರ ವೈಧ್ಯದ ಕಾಯಿಲೆಗಳು: ಡಾ. ಹೆಚ್. ಡಿ ಚಂದ್ರಪ್ಪಗೌಡ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ, ೧೯೯೩ ಪುಟ ಸಂಖ್ಯೆ ೨೪೧-೨೪೭ ೨. ಆರೋಗ್ಯ ಸಂಗಾತಿ ಅಂಪುಡ ೧ ಡಾ|| ವಸುಂಧರಾ ಭೂಪತಿ, ಪರಿಶ್ರೀ ಪ್ರಿಂಟರ್ಸ ನಂ ೦೯ ೪ನೇ ಅಡ್ಡ ರಸ್ತೆ ನಾಗಪ್ಪ ಸರ್ಕಾಲ, ಶ್ರೀರಾಮಪುರಂ ಬೆಂಗಳೂರು-೫೬೦೦೨೧ ಪುಟ ಸಂಖ್ಯೆ ೫೪೯-೫೫೨ , ೨೦೧೧

2021 Wikimedia Foundation Board elections: Eligibility requirements for voters ಬದಲಾಯಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.