ಸದಸ್ಯರ ಚರ್ಚೆಪುಟ:59.95.69.193/WEP 2019-20

ಶ್ರೀರಾಮನ ಚಿತ್ರಕಲೆ

ದಕ್ಷಿಣ ಭಾರತದ ಚಿತ್ರಕಲೆ

ಬದಲಾಯಿಸಿ

ಚಿತ್ರಕಲೆಯು ಆದಿಮಾನವರ ಕಾಲದಿಂದಲೂ ಅಸ್ತಿತ್ವದಲ್ಲಿರುವ ಒಂದು ಕಲಾಪ್ರಕಾರ. ಶಿಲಾಯುಗದ ಮಾನವರು ಗುಹೆಗಳಲ್ಲಿ ಚಿತ್ರಗಳನ್ನು ಕೆತ್ತುವ ಮೂಲಕ ಪ್ರಕೃತಿಯ ವಿವಿಧ ರೂಪಗಳು ಹಾಗು ವಿವಿಧ ಪ್ರಾಕೃತಿಕ ಘಟನೆಗಳನ್ನು ತೋರ್ಪಡಿಸುತ್ತಿದ್ದರು. ಈ ರೀತಿಯಲ್ಲಿ ಮೂಲರೂಪವನ್ನು ಪಡೆದ ಚಿತ್ರಕಲೆಯು, ಕಾಲಕ್ರಮೇಣ ಅಭಿವೃದ್ಧಿಗೊಂಡು, ಆಧುನಿಕ ಜಗತ್ತಿನಲ್ಲಿ ಕಲಾಪ್ರಕಾರಗಳ ಒಂದು ಪ್ರಮುಖ ಭಾಗವಾಗಿ ಬಂದು ನಿಂತಿದೆ. ಮೂಲತಹ ಸಂವಹನೆಯ ಸಾಧನೆಯಾಗಿದ್ದ ಚಿತ್ರಕಲೆಯು ಕಾಲ ಮುಂದುವರೆದಂತೆಲ್ಲಾ ಅಭಿವೃದ್ಧಿ ಹೊಂದಿ ಸಾಮಾಜಿಕ ಹಾಗು ಸಾಂಸ್ಕೃತಿಕ ಮೌಲ್ಯಗಳ ಸಂಕೇತವಾಗಿ ಮೂಡಿಬಂದಿದೆ.ಒಂದು ಪ್ರದೇಶದ ಅತ್ಥವ ಕಾಲಘಟ್ಟದ ಮೌಲ್ಯಗಳು ಹಾಗು ಆಚರಣೆಗಳನ್ನು ಆ ಕಾಲದ ಅಥವ ಆ ಪ್ರದೀಶದ ಚಿತ್ರಕಲೆಯಿಂದ ತಿಳಿಯಬಹುದು. ಎಷ್ಟೋ ಪೌರಾಣಿಕ ಹಾಗು ಐತಿಹಾಸಿಕ ಘಟನೆಗಳು ಹಾಗು ಸಂಗತಿಗಳು ಚಿತ್ರಕಲೆಯ ಮೂಲಕ ವ್ಯಕ್ತಪಡಿಸಲ್ಪಟ್ಟಿವೆ. ಅವು ಒಂದು ದೇಶದ ಚರಿತ್ರೆ ಹಾಗು ಕಲಾತ್ಮಕ ಹಿನ್ನಲೆಯನ್ನು ಕೊಡುವಲ್ಲಿ ಸಹಾಯವಾಗಿವೆ.

ಭಾರತದ ಚಿತ್ರಕಲೆಯು ಇತರ ಕಲಾಪ್ರಕಾರಗಳಿಗಿಂತ ವಿಭಿನ್ನವಾದುದು. ಭಾರತ ದೇಶದಲ್ಲಿ ಒಂದು ಪ್ರದೀಶದಿಂದ ಮತ್ತೊಂದು ಪ್ರದೀಶಕ್ಕೆ ಹೋಗುವಲ್ಲಿ, ಚಿತ್ರಕಲೆಗಳ ಶೈಲಿಯಲ್ಲಿ ಬದಲಾವಣೆಗಳನ್ನು ಕಾಣಾಬಹುದು. ಬಣ್ಣಗಳನ್ನು ಉಪಯೋಗಿಸುವ ಪರಿ, ಚಿತ್ರಗಳ ಆಕಾರ ಹಾಗು ಚಿತ್ರರೇಖೆಗಳ ಶೈಲಿಯು ದೇಶದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವ್ಯತ್ಯಾಸವಾಗುವುದನ್ನು ಕಾಣಾಬಹುದು. ರಾಜ್ಯದ ಆಡಾಳಿತ, ಸಮಾಜ ರಚನೆ ಹಾಗು ಕಾಲಘಟ್ಟಗಳ ಮೌಲ್ಯಗಳು ಚಿತ್ರಕಲೆಯ ಶೈಲಿಯನ್ನು ಪ್ರಭಾವಿಸುತ್ತವೆ. ಉತ್ತರ ಭಾರತದ ಚಿತ್ರಕಲೆಯು ರಜ್ಪುತರ ಹಾಗು ಮುಘಲರ ಆಡಳಿತದಿಂದ ಪ್ರಭಾವಿತಗೊಂಡು, ದಕ್ಷಿಣ ಭಾರತದ ಚಿತ್ರಕಲೆಯು ಚೋಳರು, ಚೇರರು, ವಿಜಯನಗರದ ಅರಸರು ಹಾಗು ಮೈಸೂರಿನ ಅರಸರ ಆಡಳಿತದಿಂದ ಪ್ರಭಾವಿತಗೊಂಡಿದೆ. ದಕ್ಶಿಣ ಭಾರತದಲ್ಲಿ ಹಲವಾರು ಆಡಳಿತಗಳು ಸ್ಥಾಪನೆಯಾಗಿ, ಕಾಲದಿಂದ ಕಾಲಕ್ಕೆ ಬದಲಾದರೂ ಸಹ, ಚಿತ್ರಕಲೆಗೆ ಪ್ರಾಮುಖ್ಯತೆಯನ್ನು ನೀಡಿದ್ದು ಕೆಲವು ಸಾಮ್ರಾಜ್ಯಗಳು ಮಾತ್ರ. ದಕ್ಷಿಣ ಭಾರತದ ಚಿತ್ರಕಲೆಗಳಲ್ಲಿ ಎದ್ದು ಕಾಣುವ ಬಗೆಗಳು ಡೆಕ್ಕನ್ನಿನ ಚಿತ್ರಕಲೆ, ಮೈಸೂರಿನ ಚಿತ್ರಕಲೆ ಹಾಗು ತಂಜಾವುರಿನ ಚಿತ್ರಕಲೆ. ಇದಲ್ಲದೆ ಕೇರಳಾ ಪ್ರದೇಶದ ರಾಜಾ ರವಿ ವರ್ಮನ ಜಗತ್-ಪ್ರಸಿದ್ಧಿಯಾದವು.

ಡೆಕ್ಕನ್ನಿನ ಚಿತ್ರಕಲೆ

ಬದಲಾಯಿಸಿ
 
ಅಕ್ಬರ್ ರಾಜನ ಚಿತ್ರಕಲೆ

ದೆಕ್ಕನ್ ಚಿತ್ರಕಲೆಯು ದಕ್ಷಿಣ ಭಾರತದ ಚಿಕಣಿ ಚಿತ್ರಕಲೆಯಾಗಿ ಬಹ್ಮನಿ ಆಡಳಿತದಲ್ಲಿ ಪ್ರಾರಂಭವಾದ ಕಲಾಪ್ರಕಾರ. ಈ ಕಲಾಪ್ರಕಾರವು ಡೆಕ್ಕನ್ ಆಡಳಿತಗಾರ್ರಿಂದ ಪ್ರೋತ್ಸಾಹ ಪಡೆದು ಅಭಿವೃದ್ಧಿ ಹೊಂದಿ, ಕುತುಬ್ ಶಾಹಿ ರಾಜವಂಶದವರೆಗೂ ಇದ್ದದ್ದುಂಟು. ಉತ್ತರ ಭಾರತದಲ್ಲಿ ಮುಘಲ್ ಚಿತ್ರಕಲೆಯು ಪ್ರಸಿದ್ಧಿಯಾಗಿದ್ದ ಕಾಲದಲ್ಲಿ, ಬಹಮನಿ ರಾಜ್ಯಾಡಳಿತದಿಂದ ಪ್ರಭಾವ ಹೊಂದಿ ದೆಕ್ಕನ್ ಚಿತ್ರಕಲೆಯು ತನ್ನ ಮೂಲರೂಪವನ್ನು ಪಡೆದುಕೊಂಡಿತು. ಚಿಕಣಿ ಚಿತ್ರಕಲೆಯ ಶೈಲಿಯು ಬಿಜಾಪುರ, ಬೀದರ್, ಗೊಲ್ಕೊಂಡದಂತಹ ರಾಜ್ಯಗಳಲ್ಲಿ ಪ್ರಸಿದ್ಧವಾಗಿದ್ದುಂಟು. ಹದಿನಾರು ಹಾಗು ಹದಿನೇಳನೆ ಶತಮಾನದಲ್ಲಿ ಹುಟ್ಟಿಕೊಂಡಂತಹ ಈ ಕಲೆಯು ಮಹತ್ತರ ಬದಲಾವಣೆಯನ್ನು ಒಳಗೊಂಡಿತು. ಹದಿನೆಂಟನೇ ಹಾಗು ಹತ್ತೊಂಬ್ಭತ್ತನೇ ಶತಮಾನಗಳಾಲ್ಲಿ ಮುಘಲ್ ರಾಜ್ಯದಿಂದ ಪ್ರಭಾವಿತಗೊಂಡು, ನಿಜ಼ಾಮರ ಆಡಳಿತದಲ್ಲಿ ಹೈದರಾಬಾದಿ ಶೈಲಿಯ ಚಿತ್ರಕಲೆಯಾಗಿ ಪರಿವರ್ತನೆಯಾಯಿತು. ಈ ಚಿತ್ರಕಲೆಯಲ್ಲಿ ಟರ್ಕಿ ಹಾಗು ಪರ್ಶಿಯಾ ಶೈಲಿಯ ಬಣ್ಣ ಬಳಕೆಯನ್ನು ಕಾಣಬಹುದು. ನಿರಂತರ ಅಭಿವೃದ್ಧಿಗೆ ಒಳಗಾದ ಈ ಕಲಾರೂಪವು ಹತ್ತೊಂಬ್ಭತ್ತನೇ ಶತಮಾನದ ಅಂತ್ಯಭಾಗದ ಹೊತ್ತಿಗೆ ಕಾಣ್ಮರೆಯಾಗುತ್ತಾ ಕೊನೆಗೆ ಒಂದು ಅಂತ್ಯವನ್ನು ಕಂಡುಕೊಂಡಿತು. ಈಗ ಈ ಚಿತ್ರಕಲೆಯು ತಾರಿಫ಼್-ಹುಸ್ಸೇನ್ ಶಾಹಿ ಎಂಬ ಪುರಾತನ ಹಸ್ತಪತ್ರದಲ್ಲಿ ಮತ್ರ ಉಳಿದುಕೊಂಡಿದೆ. ಈ ಶೈಲಿಯ ಇನ್ನಿತರ ಚಿತ್ರಕಲೆಗಳು ಯುದ್ಧ ಹಾಗು ಇನ್ನಿತರ ಐತಿಹಾಸಿಕ ಘಟನೆಗಳಲ್ಲಿ ನಾಶವಾಗಿವೆ.

ಮೈಸೂರಿನ ಚಿತ್ರಕಲೆ

ಬದಲಾಯಿಸಿ
 
ಮೈಸೂರು ಚಿತ್ರಕಲೆ
 
ಏಕದಂತ

ದಕ್ಷಿಣ ಭಾರತದ ಚಿತ್ರಕಲೆಯ ವಿಧಗಳಲ್ಲಿ ಅತಿ ಶ್ರೇಷ್ಠವಾದದ್ದು ಮೈಸೂರು ಚಿತ್ರಕಲೆ. ಕರ್ನಾಟಕದ ಮೈಸೂರು ರಾಜ್ಯದಲ್ಲಿ ಅಭಿವೃದ್ಧಿಗೊಂಡ ಈ ಕಲ್ಲಶೈಲಿಯು ತನ್ನ ಮೂಲರೂಪವನ್ನು ಅಜಂತಾ ಕಾಲದಲ್ಲಿ ಕಂಡುಕೊಂಡಿತು. ಮೈಸೂರು ಚಿತ್ರಕಲೆಯು ಹೆಚ್ಚಿನ ಮಟ್ಟಿಗೆ ವಿಜಯನಗರದ ಚಿತ್ರಕಲಾ ಶೈಲಿಯಿಂದ ಪ್ರಭಾವಿತಗೊಂಡ ಕಲಾಪ್ರಕಾರ. ತಾಲಿಕೋಟೆಯ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯವು ಸೋತಾಗ, ಆ ಪ್ರದೇಶದ ಜನರು ಶ್ರೀರಂಗಪಟ್ಟಣ, ಬೆಟ್ಟದಪುರ್, ಹರ್ದನಹಳ್ಳಿ, ಮುದುಕುಟೊರೆ, ಮೈಸೂರು, ಚಿತ್ರದುರ್ಗ, ರಾಯಚೂರ ಹಾಗು ಲೇಪಾಕ್ಷಿಯಂತಹ ನೆರೆಯ ರಾಜ್ಯಗಳಿಗೆ ವಲಸೆ ಬಂದರು. ಈ ಕಾರಣದಿಂದಾಗಿ, ವಿಜಯನಗರದ ಚಿತ್ರಕಲಾವಿಧರು ಮೈಸೂರು ರಾಜ್ಯದಲ್ಲಿ ನೆಲೆಸಲು ಸಾಧ್ಯವಾಯಿತು. ಮೈಸೂರಿನ ರಾಜ ವೊಡೆಯರ್ ಅವರ ಪ್ರೋತ್ಸಾಹ ಹಾಗು ಆಶ್ರಯ ಪಡೆದ ಈ ಕಲಾವಿಧರು, ಚಿತ್ರಕಲೆಗಳಲ್ಲಿ ವಿಜಯನಗರದ ಚಿತ್ರಕಲಾ ಶೈಲಿಯನ್ನು ಬೆರೆಸುತ್ತ ಹೊರಟರು. ಈ ಕಾರಣದಿಂದಾಗಿ ಮೈಸೂರು ಚಿತ್ರಕಲೆಯಲ್ಲಿ ವಿಜಯನಗರ ಸಾಮ್ರಾಜ್ಯದ ಚಿತ್ರಕಲೆಯ ಕೆಲವು ಸೂಕ್ಷ್ಮ ಅಂಶಗಳನ್ನು ಗುರುತಿಸಬಹುದು. ಈ ಕಲಾಪ್ರಕಾರವು ಅದರ ಸೊಬಗು ಹಾಗು ನಾಜೂಕು ಶೈಲಿಗೆ ಪ್ರಸಿದ್ಧವಾದುದು. ಮೈಸೂರು ಚಿತ್ರಕಲೆಗಳಲ್ಲಿ ದೇವ-ದೇವತೆಯರಯನ್ನು ಅತಿ ಹೆಚ್ಚಾಗಿ ಕಾಣಬಹುದು. ಮೈಸೂರು ಅರಸರು ಶಾಸ್ತ್ರ ಹಾಗು ಪುರಾಣಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತಿದ್ದ ಕಾರಣ, ಮೈಸೂರು ಚಿತ್ರಕಲೆಗಳಲ್ಲಿ ದೇವ-ದೇವತೆಯರಯನ್ನು ಅತಿ ಹೆಚ್ಚಾಗಿ ಕಾಣಬಹುದು.

ಮೈಸೂರು ಚಿತ್ರಕಲೆಯು ಒಡೆಯರ್ ಅವರ ಆಡಳಿತದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಹೊಂದಿತು. ಆದರೆ, ಹೈದರಾಲಿ ಹಾಗು ಟಿಪ್ಪು ಸುಲ್ತಾನರ ಆಡಳಿತ ಅವಧಿಯಲ್ಲಿ ಈ ಚಿತ್ರಕಲೆಗೆ ಹೆಚ್ಚು ಪ್ರೋತ್ಸಾಹ ಸಿಗಲಿಲ್ಲ. ಈ ಆಡಳಿತಾವಧಿಯಲ್ಲಿ ಯುದ್ಧ ಹಾಗು ರಾಜ್ಯವಿಸ್ತರಣೆಗೆ ಹೆಚ್ಚು ಪ್ರಾಮುಖ್ಯತೆ ಸಿಕ್ಕ ಕಾರಣ ಕಲೆ ಮುಂದೊವರೆದು ಅಭಿವೃದ್ಧಿ ಹೊಂದಲು ಸಾಧ್ಯವಾಗಲ್ಲಿಲ್ಲ. ಆದರೆ, ಈ ಅರಸರು ಕಲಾವಿಧರು ಹಾಗು ಚಿತ್ರಗಾರರಿಗೆ ಅಶ್ರಯವನ್ನು ನೀಡಿದ ಕಾರಣ, ಮೈಸೂರು ಶೈಲಿಯ ಚಿತ್ರಕಲೆಯು ಪೂರ್ತಿಯಾಗಿ ಅಳಿದುಹೋಗಲಿಲ್ಲ. ಟಿಪ್ಪು ಸುಲ್ತಾನರ ಆಳ್ವಿಕೆಯಲ್ಲಿ, ಸೀಬಿಯ ನರಸಿಂಹಸ್ವಾಮಿ ದೇವಾಲಯ[] ಹಾಗು ಗಂಜಾಮಿನ್ ದರಿಯಾ ದೌಲತ್ ಬಾಘ್[] ಅರಮನೆಯ ಗೋಡೆಗಳನ್ನು ವಿವಿಧ ಮೈಸೂರು ಶೈಲಿಯ ಚಿತ್ರಗಳಿಂದ ಅಲಂಕರಿಸಲಾಗಿತ್ತು. ಟಿಪ್ಪು ಸುಲ್ತಾನರ ಅಕಾಲ ಮರಣದ ನಂತರ ರ್ರಜ್ಯವು ಮತ್ತೊಮ್ಮೆ ವೊಡೆಯರ್ ಅವರ ಆಳ್ವಿಕೆಗೆ ಬಂದು ಸೇರಿತು. ರಾಜ್ಯ ಹಿಂದಿರುಗಿ ಪಡೆದ ನಂತರ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಆಡಳಿತದ ಅವಧಿಯಲ್ಲಿ ಮೈಸೂರು ಚಿತ್ರಕಲೆಯನ್ನು ಆಶ್ರಯಿಸಿ ಪುನರ್ಚೇತನಗೊಳಿಸಿದರು.

ಕೃಷ್ಣರಾಜ ಒಡೆಯರ್ ಅವರ ಶ್ರೀತತ್ವನಿಧಿಯ ರಚನೆಯಿಂದಾಗಿ ಹಲವಾರುಚಿತ್ರಗಾರರು ಹಾಗು ಕಲಾವಿಧರು ಪ್ರೋತ್ಸಾಹಗೊಂಡ ಕಾರಣ ಈ ಅವಧಿಯಲ್ಲಿ ಹಲವಾರು ಕಲೆಯ ಮೇಲುಕೃತಿಗಳು ಸೃಷ್ಟಿಗೊಂಡವು. ಈ ಕಾಲದಲ್ಲಿ ಸೃಷ್ಟಿಗೊಂಡ ಎಷ್ಟೋ ಚಿತ್ರಕಲೆಗಳು, ಇಂದಿಗೂ ಪ್ರಸಿದ್ಧವಾಗಿವೆ. ಮೈಸೂರು ರಾಜರ ಹಾಗು ರಾಜವಂಶದವರ ಭಾವಚಿತ್ರಗಳು, ಐತಿಹಾಸಿಕ ಹಾಗು ಪೌರಾಣಿಕ ಚಿತ್ರಗಳು, ದೇವ-ದೇವತೆಯರ ಚಿತ್ರಗಳು ಈ ಕಾಲದ ಚಿತ್ರಕಲೆಗೆ ಪ್ರಮುಖ ವಸ್ತುವಾಗಿ ಕಂಡುಬಂದವು. ಸಂಸ್ಕೃತ ಕೃತಿಗಳಾದ ವಿಷ್ಣುಧರ್ಮೋತ್ತರ ಪುರಾಣ ಹಾಗು ಶಿವತತ್ವರತ್ನಾಕರ್ ಕೃತಿಗಳು ಆ ಕಾಲದ ಚಿತ್ರಗಾರರಿಗೆ ಮಾರ್ಗದರ್ಶನೀಯ ಕೃತಿಗಳಾಗಿ ಪರಿಣಮಿಸಿದವು. ಮೈಸೂರು ಚಿತ್ರಕಲೆಯ ಅತಿ ವಿಭಿನ್ನ ಸೊಂಗತಿ ಹಾಗು ಸಂಕೇತವು, ಅವರು ಚಿತ್ರಕಲೆಗೆ ಉಪಯೋಗಿಸುತ್ತಿದ್ದ ಬಣ್ಣ-ದ್ರವ್ಯ ಹಾಗು ರೇಖಾ ಶೈಲಿ. ಚಿತ್ರಕಲೆಗೆ ಬೀಕಾದ ವಸ್ತುಗಳನ್ನು, ಮೈಸೂರು ಚಿತ್ರಗಾರರು ಸ್ವತಹ ತಯಾರಿಸುತ್ತಿದ್ದರು. ವಿವಿಧ ಬಣ್ಣಗಳ ಗುರುತಿಗಾಗಿ ವಿವಿಧ ಜೈವಿಕ ವಸ್ತುಗಳಿಂದ ದ್ರವ್ಯವನ್ನು ಸಂಗ್ರಹಿಸುತ್ತಿದ್ದರು. ಚಿತ್ರಕಲೆಗಳು ಮರದ ಹಲಿಗೆ, ಬಟ್ಟೆಯ ತುಂಡು ಹಾಗು ಕಾಗದ ಹಾಳೆಗಳನ್ನು ಉಪಯೋಗಿಸಲ್ಪಡುತಿತ್ತು. ವೊಡವೆ-ವಸ್ತ್ರಗಳನ್ನು ಚಿತ್ರಿಸಲು, ಬಿಳಿಯ ಸೀಸ, ಗೋಂದು ಹಾಗು ಗ್ಯಾಂಬೋಸಿನಿಂದ ತಯಾರಿಸಿದ ಒಂದು ರೀತಿಯ ಲೇಪನವನ್ನು ಬಳಸಲಾಗುತ್ತಿತ್ತು. ಈ ಲೆಪನದ ಕ್ರಿಯೆ ಮೈಸೂರು ಚಿತ್ರಕಲೆಯ ಮುಖ್ಯ ಸಂಕೇತ. ಮೈಸೂರು ಚಿತ್ರಕಲೆಯು ಅದರ ವಿಭಿನ್ನ ಸೋಬಗು, ಲಕ್ಷಣ ಹಾಗು ಸೂಕ್ಷ್ಮತೆಗೆ ಹೆಸರುವಾಸಿಯಾಗಿ, ಈ ಕಲಾಶೈಲಿಯನ್ನು ಇಂದಿಗೂ ಪ್ರಸಿದ್ಧಿಗೊಳಿಸಿದೆ.

ತಂಜಾವುರಿನ ಚಿತ್ರಕಲೆ

ಬದಲಾಯಿಸಿ
 
ತಂಜಾವುರಿನ ಚಿತ್ರಕಲೆ
 
ಗಜಲಕ್ಷ್ಮಿ

ತಂಜಾವುರ ಶೈಲಿಯ ಚಿತ್ರಕಲೆಯು[] ದಕ್ಷಿಣ ಭಾರತದ ತಂಜಾವುರಎಂಬ ಒಂದು ರಾಜ್ಯದಲ್ಲಿ ಸೃಷ್ಟಿಗೊಂಡ ಕಲೆ. ಇದು ತಂಜಾವುರಿನ[] ನಾಯಕರ ಕೈಕೆಳಗೆ ಆಶ್ರಯ ಹಾಗು ಪ್ರೋತ್ಸಾಹ ಪಡೆದು ಹಾಗು ಬೆಳೆದುಬಂದ ಕಲಾಪ್ರಕಾರ. ಹನ್ನೊಂದನೇ ಶತಮಾನದಲ್ಲಿ, ಚೋಳರು ಈ ರೀತಿಯ ಚಿತ್ರಕಲೆಯನ್ನು ಮೊದಲ ಬಾರಿಗೆ ಬ್ರಿಹದೇಶ್ವರ ದೇವಾಲಯ[] ಗೋಡೆಗಳ ಮೇಲೆ ಅಚ್ಛಳಿಸಿದರು. ನಂತರ ಹದಿನಾರನೇ ಶತಮಾನದಲ್ಲಿ ತಂಜಾವುರಿನ ನಾಯಕರು ಇದೇ ಗೋಡೆಗಳ ಮೇಲೆ ತಮ್ಮದೇ ಶೈಲಿಯಲ್ಲಿ ಚಿತ್ರಕಲೆಗಳನ್ನು ಮತ್ತೊಮ್ಮೆ ಚಿತಿಸಿರುವುದನ್ನು ಕಾಣಬಹುದು.

ಈ ಶೈಲಿಯ ಚಿತ್ರಕಲೆಯು ವಿವಿಧ ಕಾಲಾವಧಿಗಳಲ್ಲಿ ಅಸ್ತಿತ್ವದಲ್ಲಿ ಇದ್ದಿತು. ಈ ಕಾರಣದಿಂದಾಗಿ ಈ ಚಿತ್ರಕಲಾ ಶೈಲಿಯು ಹಲವಾರು ಆಡಳಿತಗಾರರ ಪ್ರಭಾವ ಹೊಂದಿ ಸಮೃದ್ಧವಾಯಿತು. ವಿಜಯನಗರದ ಅರಸರು ಹಾಗು ಮರಾಠರಿಂದ ಹಿಡಿದು, ಚೋಳ ದೇಶದ ರಾಜರು, ನಾಯಕರು, ಮೈಸೂರೊ ಅರಸರು ಹಾಗು ಈಸ್ಟ್ ಇಂಡಿಯಾ ಕಂಪನಿಯವರವರೆಗು, ಎಲ್ಲರೂ ಈ ಕಲಾರೂಪದ ಮೇಲೆ ಪ್ರಭಾವ ಬೀರಿದರು. ತಾಳಿಕೊಟೆ ಯುದ್ಧದಲ್ಲಿ ವಿಜಯನಗರ ಸಮ್ರಾಜ್ಯವು ಸೋತಾಗ, ಅಲ್ಲಿಯ ಚಿತ್ರಗಾರರು ಹಾಗು ಇತರ ಕಲಾವಿಧರು ತಂಜಾವುರಿಗೆ ಆಶ್ರಯ ಹುಡುಕುತ್ತ ಬಂದರು. ತಂಜಾವುರಿನಲ್ಲಿ ನೆಲೆಸಿದ ಇವರು, ತಂಜಾವುರಿನ ಚಿತ್ರಕಲೆಯಲ್ಲಿ ತಮ್ಮದೇ ಆದ ಅನನ್ಯ ಶೈಲಿಯನ್ನು ಅಳವಡಿಸಿದರು. ತಮಿಳು ನಾಡಿನ ಮದುರೈ ಹಾಗು ಸೆಣಜಿ ರಾಜ್ಯಗಳು ನಾಯಕರ ಆಳ್ವಿಕೆಯಲ್ಲಿದ್ದ ಕಾರಣ, ಈ ಜಾಗಗಳಲ್ಲಿ, ಚಿತ್ರಕಲೆಗಳು ನಾಯಕ ಆಡಳಿತಗಾರರ ಪ್ರಭಾವವನ್ನು ಹೂಂದಿದ್ದವು. ರಘು ನಾಥ ನಾಯಕ ಹಾಗು ವಿಜಯ ರಾಘವ ನಾಯಕರು ಈ ಚಿತ್ರಕಲೆಗೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದರು. ಇದಲ್ಲದೆ, ಮರಾಠರು ಮೈಸೂರು ಅರಸರು, ತಿರುಪತಿ ಹಾಗು ಕಲಮ್ಕಾರಿ [] ಚಿತ್ರಕಲೆಗಳೂ ಸಹ ಈ ಚಿತ್ರಕಲೆಯ ಮೇಲೆ ಪ್ರಭಾವ ಬೀರಿದವು. ನಂತರ ಯೂರೋಪಿನವರು ಭಾರತವನ್ನು ಪ್ರವೇಶಿಸಿದಾಗ, ಈ ಚಿತ್ರಕಲೆಯು ಯೂರೋಪಿನ ಚಿತ್ರಕಲಾ ಶೈಲಿಯನ್ನು ಸಹಾ ಅಳವಡಿಸಿಕೊಂಡಿತು. ಹದಿನೇಳನೇ ಶತಮಾನದ ಹೊತ್ತಿಗೆ, ಕಂಪನಿ ಶೈಲಿಯ ತಂಜಾವುರಿನ ಚಿತ್ರಕಲೆಯು ಅಭಿವೃದ್ಧಿ ಹೊಂದಿತ್ತು.

ತಂಜಾವುರಿನ ಚಿತ್ರಗಳು ವಿವಿಧ ಆಕಾರ ಹಾಗು ಗಾತ್ರದಲ್ಲಿ ಕಾಣಸಿಗುವುವು. ದೇವ-ದೇವತೆಯರು ಹಾಗು ರಾಜ ಮತ್ತು ರಾಜವಂಶದವರಿಂದ ಹಿಡಿದು, ಚರಿತ್ರೆಯಲ್ಲಿ ನಡೆದ ಕೆಲವು ಪ್ರಮುಖ ಯುದ್ಧಗಳು ಸಹ ಈ ಚಿತ್ರಗಳ ಮೂಲ ವಸ್ತು ಅಥವ ವಿಷಯವಾಗಿವೆ. ತಂಜಾವುರು ಶೈಲಿಯ ಚಿತ್ರಗಳ ಅತಿ ಪ್ರಮುಖ ಅಂಶ್ ಚಿನ್ನದ ಬಳಕೆ. ಕೆಂಪು, ಹಸಿರು, ಬಿಳಿ, ಹಾಗು ನೀಲಿ ಬಣ್ಣಗಳು ಹೆಚ್ಚಾಗಿ ಉಪಯೊಗಗೊಂಡರೂ, ಚಿನ್ನದ ಲೇಪನವು ಅತಿ ಹೆಚ್ಚಗಿ ಬಳಕೆಯಾಗಿರುವುದನ್ನು ಕಾಣಬಹುದು. ಅರಮನೆ, ದೇವಾಲಯ ಹಾಗು ವೋಡವೆ ವಸ್ತ್ರಗಳನ್ನು ಚಿನ್ನದ ಲೇಪನದಿಂದ ಅಲಂಕರಿಸಿರುವುದನ್ನು ಕಾಣಬಹುದು. ಸುಮಾರಾಗಿ, ಈ ಚಿತ್ರಗಳನ್ನು ಮರದ ಹಲಗೆಯ ಮೇಲೆ ಮಾಡಲಾಗುತ್ತದೆ. ಜೈವಿಕ ವಸ್ತುಗಳಿಂದ ಬಣ್ಣ ದ್ರವ್ಯಗಳಿಂದ ತಯಾರಿಸಿ, ಬಿಳಿಯ ಸೀಸ, ಗೋಂದು, ಫ಼್ರಾನ್ಸಿನ ಸೀಮೆಸಿಣ್ಣ (ಗೋಪಿ) ಹಾಗು ಜೈವಿಕ ದ್ರವ್ಯಗಳಿಂದ ದ್ರವ್ಯವನ್ನು ಸಂಗ್ರಹಿಸಿ, ಲೇಪನವನ್ನು ತಯಾರಿಸುತ್ತಾರೆ. ಚಿನ್ನದ ತೆಳ್ಳಗಿನ ಹಾಳೆಯನ್ನು ಈ ಲೇಪನದೊಂದಿಗೆ ತಂಜಾವುರಿನ ಚಿತ್ರಕಲೆಗಳಲ್ಲಿ ಬಳಸುತ್ತರೆ. ಚಿನ್ನದ ಹೊಳಪಿನಿಂದೆ ಮಿನುಗುವ ಈ ಚಿತ್ರಕಲೆಗಳು, ತಮ್ಮ ಮಹೋನ್ನತ ಶೈಲಿಗೆ ಪ್ರಸಿದ್ಧವಾದವು. ತಂಜಾವುರಿನ ಚಿತ್ರಕಲೆಯು ಹಲವಾರು ಭಾರತೀಯರು ಹಾಗು ಹೊರ ದೇಶದವರು ಇಂದಿಗೂ ಚಿತ್ರಿಸುವುದನ್ನು ಕಾಣಬಹುದು.

ಮುಕ್ತಾಯ

ಬದಲಾಯಿಸಿ

ಈ ಕಲಾಪ್ರಕಾರಗಳು ಪುರಾತನ ಕಾಲದಿಂದಲೂ ತಮ್ಮದೇ ವಿಶಿಷ್ಟ ಶೈಲಿಯನ್ನು ಮೈಗೂಡಿಸಿಕೊಂಡು ಬೆಳೆದು ಬಂದಿವೆ. ಅನೇಕ ರಾಜ್ಯಗಳ, ಜನರ ಕಲೆ ಹಾಗು ಸಂಸ್ಕೃತಿಗಳ ಸಮ್ಮಿಲನದಿಂದಾಗಿ, ಒಂದು ರೀತಿಯ ಹೋಲಿಕೆಯ ಎಳೆಯನ್ನೂ ಸಹ ಈ ಚಿತ್ರಕಲೆಗಳಲ್ಲಿ ಕಾಣಬಹುದು. ಒಟ್ಟಾರೆ, ಈ ಕಲಾಶೈಲಿಗಳು ಇಡೀ ದಕ್ಷಿಣ ಭಾರತದ ಸಂಸ್ಕೃತಿ ಹಾಗು ಕಲೆಯು ಬೆಳೆದು ಬಂದ ದಾರಿಗೆ ಹಿಡಿದ ಕನ್ನಡಿಯಂತಿವೆ. ಆಧುನಿಕತೆಯ ಬರಕ್ಕೆ ಸಿಲುಕಿ ಸಾಮಾನ್ಯ ಜನ-ಮನದಲ್ಲಿ ಕಲೆಗೆ ಸಲ್ಲುತ್ತಿದ್ದ ಬೆಲೆ ಕಡಿಮೆಯಾಗುತ್ತಿರುವುದನ್ನು ಕಾಣಬಹುದು. ಈ ಕಾರಣದಿಂದಾಗಿ ಭಾರತದ ರಾಜ್ಯ್ ಸರ್ಕಾರಗಳು ಈ ಕಲೆಗಳ ಪುನರುಜ್ಜೀವನ ಹಾಗು ಹಾಗು ಪೋಶಣೆಗೆಂದು ಹಲವಾರು ಯೋಜನೆಗಳು, ಕಾರ್ಯ್ಕ್ರಮಗಳು ಹಾಗು ತರಬೆತಿಯ ಕಾರ್ಯಕ್ರಮಗಳನ್ನು ಎರ್ಪಡಿಸುತ್ತಿವೆ. ಕಲಾವಿಧರು ಪುರಾತನ ಚಿತ್ರಕಲೆಗಳನ್ನು ಆಧುನಿಕ ಶೈಲಿಯಲ್ಲಿ ರೂಪಿಸಿ ಹೊಸ ಬಗೆಯ ಚಿತ್ರಕಲೆಗಳನ್ನು ಸೃಷ್ಟಿಸಿದ್ದಾರೆ.

ಉಲ್ಲೆಖ

ಬದಲಾಯಿಸಿ


Return to the user page of "59.95.69.193/WEP 2019-20".