ಬಹಮನಿ ಸುಲ್ತಾನರು
ಬಾಹಮನಿ ಅಥವಾ ಬಹಮನಿ ಅಥವಾ ಬಹುಮನಿ ಸುಲ್ತಾನತ್ತು (ಬಾಹಮನಿ ಸಾಮ್ರಾಜ್ಯವು) ದಕ್ಷಿಣ ಭಾರತದ ದಕ್ಖನ್ ಮಹಮ್ಮದೀಯ ಆಧಿಪತ್ಯವಾಗಿತ್ತು, ಮಧ್ಯಯುಗದ ಪ್ರಮುಖ ಕೇಂದ್ರೀಯ ಪ್ರಭುತ್ವವಗಳಲ್ಲೊಂದಾಗಿತ್ತು. ಆ ಸಾಮ್ರಾಜ್ಯವು, ದೆಹಲಿ ಚಕ್ರಾಧಿಪತ್ಯದ ಮುಹಮ್ಮದ್ ಬಿನ್ ತುಘಲಕ್ ನ ಆಳ್ವಿಕೆಯಲ್ಲಿ ಇಸ್ಮಾಯಿಲ್ ಮುಖ್ ನಡೆಸಿದ ಬಂಡಾಯ ಅಥವಾ ದಂಗೆಯ ಪರಿಣಾಮವಾಗಿತ್ತು, ದೆಹಲಿ ಸುಲ್ತಾನತ್ತಿನ ದಖನ್ ಪ್ರದೇಶದಲ್ಲಿ ರಾಜ್ಯಭಾರ ಮಾಡುತ್ತಿದ್ದ ಅಮೀರರು ಇಸ್ಮಾಯಿಲ್ ಮುಖ್ ಬಂಡಾಯವನ್ನು ಬೆಂಬಲಿಸಿದರು. ಈ ಸಾಮ್ರಾಜ್ಯವನ್ನು ಸ್ಥಾಪಕ ಹಸನ್ ಗಂಗು ಹೆಸರಿಸಲಾದವನು. ಬಾಹಮನಿ ಸುಲ್ತಾನತ್ತು ದಕ್ಷಿಣ ಭಾರತದ ಮೊದಲ ಸ್ವತಂತ್ರ ಮುಸಲ್ಮಾನ ಸಾಮ್ರಾಜ್ಯವಾಗಿತ್ತು. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ಭಾಗಗಳಲ್ಲಿ, ಹೆಚ್ಚು ಕಡಿಮೆ ಎರಡು ಶತಮಾನಗಳ ಕಾಲ ಆಳಿದ ಬಾಹಮನಿ ರಾಜವಂಶವು, ಕರ್ನಾಟಕದ ಇತಿಹಾಸದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿದೆ.
ಬಹಮನಿ ಸುಲ್ತಾನತ್ ಬಹಮನಿ ಸಲ್ತನತ್
ಪಾರಸಿ: سلطان نشین بهمنی | |||||||||||
---|---|---|---|---|---|---|---|---|---|---|---|
1347–1527 | |||||||||||
Capital | ಗುಲ್ಬರ್ಗ (1347–1425) ಬೀದರ್ (1425–1527) | ||||||||||
Common languages | ಪಾರಸಿ ,ಉರ್ದು, ದಖಿನಿ, ಕನ್ನಡ, ಮರಾಠಿ, ತೆಲುಗು, | ||||||||||
Religion | ಸುನ್ನಿ ಇಸ್ಲಾಮ್[೧][೨] | ||||||||||
Government | ರಾಜಪ್ರಭುತ್ವ | ||||||||||
ಸುಲ್ತಾನ | |||||||||||
• 1347–1358 | ಅಲಾ ಉದ್ದೀನ್ ಬಹ್ಮನ್ ಶಾಹ | ||||||||||
• 1525–1527 | ಕಲಿಮ್-ಅಲ್ಲಾ ಶಾಹ | ||||||||||
Historical era | ಅಂತಿಮ ಮಧ್ಯಕಾಲೀನ | ||||||||||
• Established | 3 ಆಗಸ್ಟ್ 1347 | ||||||||||
• Disestablished | 1527 | ||||||||||
| |||||||||||
Today part of | ಭಾರತ |
ಇತಿಹಾಸಶಾಸ್ತ್ರ
ಬದಲಾಯಿಸಿಪ್ರಧ್ಯಾಪಕ ಹಾರೂನ್ ಖಾನ್ ಶೇರ್ವಾನಿ ಮತ್ತು ರಿಚರ್ಡ್ ಮಾಕ್ಷ್ವೆಲ್ ಈಟನ್ ಅಂತಹ ಪಂಡಿತರು ಬಹಮನಿ ಸಾಮ್ರಾಜ್ಯದ ಕುರಿತಾದ ದಾಖಲೆಗಳನ್ನು ಪಾರಸೀಯ ಇತಿಹಾಸಕಾರ ಫರಿಶ್ತನ ಮತ್ತು ಕವಿ, ಅನುವಾದಕ ಮತ್ತು ಭಾಷಾ ವಿದ್ವಾಂಸ ಸೈಯದ್ ಅಲಿ ತಾಬತಾಯಿಯ ಕೃತಿಗಳ ಮೇಲೆ ಆಧರಿಸುತ್ತಾರೆ. ಸಾಮ್ರಾಜ್ಯಕ್ಕೆ ಬೇರೆ ಸಮಕಾಲೀನ ಕೃತಿಗಳು ಶಿವತತ್ವ ಚಿಂತಾಮಣಿ ಮತ್ತು ಗುರು ಚರಿತ್ರೆ. ರೂಸಿ ವ್ಯಾಪಾರಿ ಅಫ಼ಾಂಸಿ ನಿಕಿತೀನ್ ಕೂಡ ಈ ಸಾಮ್ರಾಜ್ಯ ಪ್ರಯಾಣಿಸಿ ತನ್ನ ಅನುಭವವನ್ನು ಬರೆದಿದ್ದರು. ದೆಹಲಿ ಸಾಮ್ರಾಜ್ಯದ ಒಬ್ಬ ಚರಿತ್ರಕಾರ, ಜ಼ಿಯಾವುದ್ದೀನ್ ಬರಾನಿಯು ಈ ಸಾಮ್ರಾಜ್ಯದ ಬಗ್ಗೆ ಬರೆಯುತ್ತಾನೆ.
ಬಾಹಮನ್ ಶಾಹ
ಬದಲಾಯಿಸಿಅಲಾ ಉದ್ದೀನ್ ಹಸನ್ ಬಹಮನ್ ಶಾಹ (ಪಾರಸೀಯ: علاء الدين بهمن شاه; ಮರಣ 10 ಫೆಬ್ರವರಿ 1358) ಅವನ ಮೂಲ ಹೆಸರು ಜ಼ಫರ್ ಖಾನ್ ಅಥವಾ ಹಸನ್ ಗಂಗು, ಬಾಹಮನಿ ಸುಲ್ತಾನತ್ತಿನ ಸ್ಥಾಪಕನು. ಅವನು ತುರುಕ ಅಥವಾ ಆಫ್ಘಾನಿ ಮೂಲದವನು. ಅವನು ಕೆಲವು ದಾಖಲೆಗಳ ಪ್ರಕಾರ ಖೊರಸಾನಿ ಸಹಾಸಿಗನು, ಅವನು ತನ್ನನ್ನು ಬಹರಾಮ್ ಗೋರ್ನ ವಂಶಸ್ಥನೆಂದು ಘೋಷಿಸಿದನು. ಫರಿಶ್ತನ ಪ್ರಕಾರ, ಹಸನ್ ಗಂಗುವಿನ ಅಸ್ಪಷ್ಟ ಹಿನ್ನಲೆಯು, ಆತನ ಮೂಲವನ್ನು ಸಂಶೋಧಿಸಲು ಕಷ್ಟವೆಂದು ಎನ್ನುತ್ತಾರೆ, ಆದರೂ ಕೂಡ ಆತನನ್ನು ಆಫ್ಘಾನಿ ಮೂಲದವನೆಂದು ಹೇಳಲಾಗುತ್ತದೆ. ಫಿರಿಶ್ತನು ಮತ್ತಷ್ಟು ಬರೆಯುತ್ತಾರೆ, ಜ಼ಫರ್ ಖಾನ್ ಆತನ ಈ ಹಿಂದೆ ದೆಹಲಿಯಲ್ಲಿ ಗಂಗು (ಆದ್ದರಿಂದ ಹಸನ್ ಗಂಗೂ ಎಂಬ ಹೆಸರು) ಎಂಬ ಬ್ರಾಹ್ಮಣ ಜ್ಯೋತಿಷಿಯ ಸೇವಕನಾಗಿದ್ದನು ಮತ್ತು ಆತನು ಉತ್ತರ ಭಾರತದವನೆಂದು ಹೇಳುತ್ತಾರೆ. ಇತಿಹಾಸಕಾರರು ದಂತಕಥೆಗೆ ಯಾವುದೇ ದೃಢೀಕರಣವನ್ನು ಕಂಡುಕೊಂಡಿಲ್ಲ, ಆದರೆ ಸುಲ್ತಾನ ಫಿರೂಜ಼್ ಶಾಹನ ಆಸ್ಥಾನದ ಇತಿಹಾಸಕಾರನಾಗಿದ್ದ ಬರಾನಿ ಮತ್ತು ಇತರ ಕೆಲವು ವಿದ್ವಾಂಸರು ಅವನನ್ನು ಹಸನ್ ಗಂಗು ಎಂದು ಕರೆದಿದ್ದಾರೆ. ಜ಼ಫರ್ ಖಾನಿಗೆ ಮೂಲದ ಇನ್ನೊಂದು ಸಿದ್ಧಾಂತದ ಪ್ರಕಾರ ಆತನು ಬ್ರಾಹ್ಮಣ ಮೂಲದವನು ಮತ್ತು ಬಹ್ಮನ್ "ಬ್ರಾಹ್ಮಣ"ದ ಭ್ರಷ್ಟ ವೈಯಕ್ತೀಕರಿಸಿದ ರೂಪವಾಗಿದೆ, ಹಸನ್ ಗಂಗೂ ಹಿಂದೂ ಬ್ರಾಹ್ಮಣನಾಗಿರುವುದರಿಂದ ಮುಸಲ್ಮಾನನಾಗಿದ್ದಾನೆ. ಆದಾಗ್ಯೂ ಈ ದೃಷ್ಟಿಕೋನವನ್ನು S.A.Q ಹುಸೇನಿ ಅವರು ಅಪಖ್ಯಾತಿಗೊಳಿಸಿದ್ದಾರೆ, ಅವರು ಬ್ರಾಹ್ಮಣ ಮೂಲ ಅಥವಾ ಜ಼ಫರ್ ಖಾನ್ ಮೂಲತಃ ಪಂಜಾಬಿನಿಂದ ಇಸ್ಲಾಮಿಗೆ ಮತಾಂತರಗೊಂಡ ಹಿಂದೂ ಎಂಬ ಕಲ್ಪನೆಯನ್ನು ಸಮರ್ಥನೀಯವಲ್ಲ ಎಂದು ಪರಿಗಣಿಸುತ್ತಾರೆ.
ಇತಿಹಾಸ
ಬದಲಾಯಿಸಿಬರಾನಿಯು ಎಂದನು "ಹಸನ್ ಗಂಗು ಅವರು ಅತ್ಯಂತ ವಿನಮ್ರ ಪರಿಸ್ಥಿತಿಯಲ್ಲಿ ಜನಿಸಿದನು. ಆತನ ಜೀವನದ ಮೊದಲ ಮೂವತ್ತು ವರ್ಷಗಳ ಕಾಲ ಆತನು ಹೊಲದ ಕೂಲಿಗಿಂತ ಹೆಚ್ಚೇನೂ ಆಗಿರಲಿಲ್ಲ. "ಆತನ ಪ್ರಾಮಾಣಿಕತೆಗೆ ಮೆಚ್ಚಿದ ಸುಲ್ತಾನನು ಆತನನ್ನು ನೂರು ಕುದುರೆ ಸವಾರರ ದಂಡನಾಯಕನನ್ನಾಗಿ ಮಾಡಿದನು. ಮಹಮದೀಯ ಭಾರತದ ಈ ಯುಗದಲ್ಲಿ ಸೇನಾದಳ ಮತ್ತು ಸಾಮಾಜಿಕ ಮತ್ತು ಆರ್ಥಿಕ ಏಣಿಯ ಈ ಹಠಾತ್ ಏರಿಕೆ ಸಾಮಾನ್ಯವಾಗಿತ್ತು. ದೌಲತಾಬಾದ್ ಪ್ರದೇಶದಲ್ಲಿ ದೊಡ್ಡ ಮುಸಲ್ಮಾನ ವಸಾಹತು ನಿರ್ಮಿಸಲು ದಕ್ಖನಿಗೆ ವಲಸೆ ಹೋಗುವಂತೆ ಒತ್ತಾಯಿಸಲ್ಪಟ್ಟ ದೆಹಲಿಯ ನಿವಾಸಿಗಳಲ್ಲಿ ಜ಼ಫರ್ ಖಾನ್ ಅಥವಾ ಹಸನ್ ಗಂಗೂ ಕೂಡ ಒಬ್ಬನು. ಕಂಪಿಲಿ ಸಂಸ್ಥಾನವನ್ನು ಸೋಲಿಸದಕ್ಕಾಗಿ, ಸುಲ್ತಾನನು ಜ಼ಫ಼ರ್ ಖಾನಿಗೆ ಇಕ಼್ತಾಲನ್ನು (ಉಂಬಳಿಯನ್ನು) ನೀಡಿದನು. ಆ ಪ್ರದೇಶದ ಅಕ್ಕಪಕ್ಕದ ಸಂಸ್ಥಾನಗಳನ್ನು ಸೋಲಿಸಿ ಪ್ರಭಾವ ಮತ್ತು ಸಂಪತ್ತನ್ನು ಪಡೆದನು.
ಉಗಮ
ಬದಲಾಯಿಸಿಅವನ ಸಾಮ್ರಾಜ್ಯದ ಸ್ಥಾಪನೆಯ ಮುಂಚೆ, ಹಸನ್ ಗಂಗುವು ದಕ್ಖನಿನ ಒಬ್ಬ ರಾಜ್ಯಪಾಲನಾಗಿದ್ದನು ಹಾಗೂ ತುಘಲಕಿನ ಪರವಾಗಿ ಮುಖಂಡನಾಗಿದ್ದನು. 1345ರಲ್ಲಿ ದಕ್ಖನಿನ ಅಮೀರರು ದೌಲತಾಬಾದ್ ಪಟ್ಟಣದಲ್ಲಿ ಇಸ್ಮಾಯಿಲ್ ಮುಖ್ ಎಂಬ ಒಬ್ಬ ಆಫ್ಘಾನಿ ಕುಲೀನನನ್ನು ಸಿಂಹಾಸನಕ್ಕೆ ಕೂರಿಸಿದರು. ನಂತರ, 1346ರಲ್ಲಿ ಅಮೀರರು ತುಘಲಕಿನ ವಿರುದ್ಧ ಒಂದು ಬಂಡಾಯ ಪ್ರಾರಂಭಿಸುತ್ತಾರೆ, ಅದು ಇಸ್ಮಾಯಿಲ್ ಮುಖ್ ಬಂಡಾಯ. ಸುಲ್ತಾನ ತುಘಲಕ್ಕು ಬಂಡಾಯಗಾರರನ್ನು ಕೊನೆಗಾಣಿಸಲು ದಾಳಿ ಮಾಡಿದಾಗ, ಹಸನ್ ಗಂಗು ತನ್ನ ಪ್ರದೇಶವನ್ನು ರಕ್ಷಿಸಲು ಹೋಗುತ್ತಾನೆ. ಆಗ ಸುಲ್ತಾನ ತುಘಲಕ್ಕು ಹಸನ್ ಗಂಗುವನ್ನು ಸೋಲಿಸಲು ಇಮಾದ್ ಉಲ್ಮುಲ್ಕನ್ನು ಕಳುಹಿಸುತ್ತಾನೆ. ಆಗ ಗುಜರಾತಿನಲ್ಲಿ ಒಂದು ಬಂಡಾಯ ಪ್ರಾರಂಭವಾಗುತ್ತದೆ, ಆಗ ತುಘಲಕ್ಕು ತನ್ನ ಅಮೀರರನ್ನು ದೌಲತಾಬಾದನ್ನು ಆಕ್ರಮಿಸಿ, ಬಂಡಾಯವನ್ನು ಸೋಲಿಸಲು ಕಳುಹಿಸಿದನು, ಗುಜರಾತಿನ ಮೇಲೆ ಗಮನಿಸಿದನು. ಹಸನ್ ಗಂಗು ಇಮಾದ್ ಉಲ್ಮುಲ್ಕನ್ನು ಸೋಲಿಸಿ ದೌಲತಾಬಾದಿನಲ್ಲಿ ಬಂಡಾಯಗಾರರ ಜತೆ ಸೇರಿ, ತುಘಲಕ್ಕಿನ ಅಮೀರರನ್ನು ಸೋಲಿಸುತ್ತಾನೆ. ಬಂಡಾಯದ ನಾಯಕನಾದ ಇಸ್ಮಾಯಿಲ್ ಮುಖು, ತಾನು ವಯಸ್ಸಾದವನೆಂದು ನೆಪ ಕೊಟ್ಟು, ಹಸನ್ ಗಂಗುವನ್ನು ಸೂಕ್ತ ಅರಸನೆಂದು ಯೋಚಿಸಿ, ಆತನಿಗೆ ಆ ಸಂಸ್ಥಾನದ ಸಿಂಹಾಸನಕ್ಕೆ ಕೂರಿಸುತ್ತಾನೆ. ಹಸನ್ ಗಂಗುವನ್ನು ಚಿಷ್ಟಿ ಸೂಫಿ ಶೇಖರ ಬೆಂಬಲದ ಮೂಲಕ " ಅಲಾವುದ್ದೀನ ಬಹಮನ ಶಾಹ ಸುಲ್ತಾನ - ಬಹಮನಿ ರಾಜವಂಶದ ಸ್ಥಾಪಕ" ಎಂದು ದೊರೆಯಾಗಿ ನೇಮಿಸಲಾಯಿತು.
ಬೆಳವಣಿಗೆ
ಬದಲಾಯಿಸಿತುರುಕ ಅಥವಾ ಭಾರತತುರುಕ ಪಡೆಗಳು, ಪರಿಶೋಧಕರು, ಸಂತರು ಮತ್ತು ವಿದ್ವಾಂಸರು ದೆಹಲಿ ಮತ್ತು ಉತ್ತರ ಭಾರತದಿಂದ ದಕ್ಖನಿಗೆ ಬಹಮನೀಯ ಸುಲ್ತಾನತ್ತಿನ ಸ್ಥಾಪನೆಯೊಂದಿಗೆ ವಲಸೆ ಹೋದರು. ಈ ವಲಸಿಗರಲ್ಲಿ ಶಿಯಾವಾದಿಯರು ಎಷ್ಟು ಮಂದಿಯಿದ್ದರು ಎಂಬುದು ಸ್ಪಷ್ಟವಲ್ಲ. ಅದೇನೇ ಇದ್ದರೂ, ಬಹಮನಿ ಆಸ್ಥಾನದಲ್ಲಿ ಹಲವಾರು ಗಣ್ಯರು ಶಿಯಾವಾದಿಯರೆಂದು ಗುರುತಿಸಲ್ಪಟ್ಟಿದ್ದಾರೆ ಅಥವಾ ಗಮನಾರ್ಹವಾದ ಶಿಯಾವಾದಿ ಒಲವನ್ನು ಹೊಂದಿದ್ದಾರೆಂದು ಪ್ರದರ್ಶಿಸಲು ಸಾಕಷ್ಟು ಪುರಾವೆಗಳಿವೆ.
ಮೊಹಮ್ಮದ್ ಶಾಹ
ಬದಲಾಯಿಸಿಹಸನ್ ಗಂಗುವಿಗೆ ಆತನ ಮಗ, ಮೊಹಮ್ನದ್ ಶಾಹ ಉತ್ತರಾಧಿಕಾರಯಾದನು. ಫರಿಶ್ತನ ಹೇಳುವ ಪ್ರಕಾರ, ಮೊಹಮ್ಮದ್ದು ವಿಜಯನಗರ ಸಾಮ್ರಾಜ್ಯದೊದಿಗೆ ಬಹಳಷ್ಟು ಯುದ್ಧ ಮಾಡಿದನು, ಅವನು ಧರ್ಮವನ್ನು ನೆಪವಾಗಿ ಬಳಸಿ, ಧರ್ಮ ಹರಡುವ "ಉದ್ದೇಶ" ವನ್ನು ಹೊಂದಿ, ವಿಜಯನಗರವನ್ನು ಘೋರವಾಗಿ ನಶಿಸಿದನು, ಫರಿಶ್ತನ ಬರವಣಿಗೆಯ ಪ್ರಕಾರ ಐದು ಲಕ್ಷ "ಅಧಾರ್ಮಿಕರು" ಯೋಧರ ಕತ್ತಿಗಳಿಂದ ಸತ್ತರು" ಮತ್ತು "ಆದ್ದರಿಂದ, ಕಾರ್ನಾಟಿಕ ಪ್ರದೇಶದ ಜಿಲ್ಲೆಗಳನ್ನು ಎಷ್ಟು ಪಾಳುಬೀಳಿಸಲಾದವು (ಸಂಪೂರ್ಣವಾಗಿ ನಶಿಸಲಾದವು) ಎಂದರೆ, ಜನಸಂಖ್ಯೆಯು ಹಲವಾರು ಶತಮಾನಗಳ ನಂತರ ಅವು ತಮ್ಮ ಸಹಜವಾದ ಜನಸಂಖ್ಯಕ್ಕೆ ಚೇತರಿಸಿಕೊಂಡವು".
ಬಹಮನಿವಿಜಯನಗರ ಯುದ್ಧಗಳು
ಬದಲಾಯಿಸಿವಿಜಯನಗರ ಸಾಮ್ರಾಜ್ಯ ಮತ್ತು ಬಹಮನೀಯರು ಗೋದಾವರಿ ಜಲಾನಯನ ಪ್ರದೇಶ, ತುಂಗಭದ್ರಾ ದೂವಾಬ್ ಮತ್ತು ಮರಾಠವಾಡ ದೇಶದ ನಿಯಂತ್ರಣಕ್ಕಾಗಿ ಹೋರಾಡಿದರು, ಆದಾಗ್ಯೂ ಅವರು ಯುದ್ಧವನ್ನು ಘೋಷಿಸಲು ಒಂದು ನೆಪವನ್ನು ವಿರಳವಾಗಿ ಬಯಸಿದ್ದರು, ಸೇನಾ ಘರ್ಷಣೆಗಳು ಬಹುತೇಕ ನಿಯಮಿತ ಲಕ್ಷಣವಾಗಿದ್ದವು ಮತ್ತು ಅಲ್ಲಿಯವರೆಗೆ ನಡೆಯಿತು. ಈ ರಾಜ್ಯಗಳು ಮುಂದುವರಿದವು. ಸೈನಿಕ ಗುಲಾಮಗಿರಿಯು ವಿಜಯನಗರದಿಂದ ಸೆರೆಹಿಡಿಯಲ್ಪಟ್ಟ ಗುಲಾಮರನ್ನು ಒಳಗೊಂಡಿತ್ತು, ನಂತರ ಅವರನ್ನು ಇಸ್ಲಾಮಿಗೆ ಪರಿವರ್ತಿಸಲಾಯಿತು ಮತ್ತು ಆತಿಥೇಯ ಸಮಾಜಕ್ಕೆ ಸಂಯೋಜಿಸಲಾಯಿತು, ಆದ್ದರಿಂದ ಅವರು ಬಹಮನೀಯ ಸಾಮ್ರಾಜ್ಯದೊಳಗೆ ಸೇನಾ ವೃತ್ತಿಜೀವನವನ್ನು ಪ್ರಾರಂಭಿಸಬಹುದು.
ಮೊದಲ ಬಹಮನಿವಿಜಯನಗರ ಯುದ್ಧ
ಬದಲಾಯಿಸಿಮೊದಲ ಬಹಮನಿವಿಜಯನಗರ ಯುದ್ಧವು 14ನೇ ಮತ್ತು 15ನೇ ಶತಮಾನಗಳಲ್ಲಿ ನಡೆಯಿತು. ಬಹಮನೀಯ ಸುಲ್ತಾನ ಮೊಹಮ್ಮದ್ ಶಾಹನು ವಿಜಯನಗರದ ನಾಣ್ಯಗಳನ್ನು ನೀಷೇಧಿಸಿದಾಗ, ವಿಜಯನಗರದ ಬುಕ್ಕ ರಾಯನು ಮುಸುನುರಿ ನಾಯಕರು, ವರಾಂಗಲ್ ಮತ್ತು ಕನ್ನಯ್ಯ ಜತೆ ಒಂದು ಯುದ್ಧ ಮಿತ್ರತ್ವವನ್ನು ಸೃಷ್ಟಿಸುತ್ತಾರೆ, ಮತ್ತು ಬಹಮನೀಯ ನಾಣ್ಯಗಳನ್ನು ನಶಿಸುತ್ತಾರೆ. ಈ ಸ್ಥಿತಿಯು ವರಾಂಗಲಿನ ರಾಜಕುಮಾರನ ಮರಣದಂಡನೆಯ ನಂತರ ಹೆಚ್ಚು ಉತ್ಕಟವಾಗುತ್ತದೆ. ನಂತರ ಮಹಮ್ಮದ್ದು ಇಡೀ ವರಾಂಗಲಿನ ಮೇಲೆ ದಾಳಿ ಮಾಡುತ್ತಾನೆ ಕನ್ನಯ್ಯನು ಶಾಹನಿಗೆ ಶರಣನಾಗಿ 13 ಕೋಟಿ ಹೊನ್ನಿನ ಹುನಗಳನ್ನು (ಹಣವನ್ನ) ಮೊಹಮ್ಮದ್ದಿಗೆ ಕೊಟ್ಟು, ಬಹಮನೀಯ ಸಾಮ್ರಾಜ್ಯದ ಸಾಮಂತನಾದನು. ಕೆಲವು ಕಾಳಗಗಳಾದ ನಂತರ, ವಿಜಯನಗರದ ಬುಕ್ಕ ರಾಯನು ಮಹಮ್ಮದ ಶಾಹನಿಗೆ ಶರಣನಾಗುತ್ತಾನೆ. ಎರಡು ದೇಶದ ನಡುವೆ ಒಂದು ಒಪ್ಪಂದವನ್ನು ಸೃಷ್ಟಿಸಲಾಗುತ್ತದೆ. ಮಹಮ್ಮದ್ ಶಾಹನ ಹತ್ಯಾಕಾಂಡಗಳು ವಿಜಯನಗರದ ಐದು ಲಕ್ಷ ಜನರನ್ನು ಬಲಿ ಮಾಡಿತು. ಹಾಗಾಗಿ, ಒಪ್ಪಂದದ ಪ್ರಕಾರ ಎರಡು ಆಧಪತ್ಯಗಳು ಯೋಧರಾಗಿಲ್ಲದವರನ್ನು ಕೊಲ್ಲದಿರುವುದನ್ನು ವಚನ ಮಾಡಲಾಯಿತು.
ಉಲ್ಲೇಖಗಳು
ಬದಲಾಯಿಸಿ- ↑ Burjor Avari, Islamic Civilization in South Asia: A History of Muslim Power and Presence in the Indian subcontinent, (Routledge, 2013), 91.
- ↑ Farooqui Salma Ahmed, A Comprehensive History of Medieval India: From Twelfth to the Mid-Eighteenth Century, (Dorling Kindersley Pvt. Ltd., 2011), 170.