ಸುದರ್ಶನ
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:00, ೩೦ December ೨೦೦೫ (UTC)
ಇಂಡಿಕ್ ಭಾಷೆಗಳು
ಬದಲಾಯಿಸಿಭಾರತೀಯ ಭಾಷೆಗಳೇ ಇಂಡಿಕ್ ಭಾಷೆಗಳಲ್ವೆ? ಆಂಗ್ಲ ಅಪಭ್ರಂಷವಲ್ವೆ, ಅದು? ಇಂಡಿಕ್ ಭಾಷೆಗಳು ಎಂದು ಮತ್ತೆ ಸೇರಿಸೋದರಿಂದ ಬಹುಶಃ confusionಗೆ ಎಡೆ ಮಾಡಿಕೊಟ್ಟಂತಾಗುವುದು. ಆಂಗ್ಲ ವಿಕಿಪೀಡಿಯದಲ್ಲಿದ್ದ ವರ್ಗಗಳು ಕನ್ನಡದಲ್ಲಿ ಹಾಗೆಯೇ ಇಳಿಸಬೇಕೆಂದಿಲ್ಲ :) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 17:26, ೪ January ೨೦೦೬ (UTC)
ಹರಿ ಪ್ರಸಾದರೆ, ಭಾರತೀಯ ಭಾಷೆಗಳೆಲ್ಲ en:Indic ಭಾಷೆಗಳಲ್ಲ. Indic ಎಂಬುವುದು ಭ್ಹಾಷಾಶಸ್ತ್ರದಲ್ಲಿ ಉಪಯೋಗಿಸುವ ಒಂದು classification ಆಗಿರುತ್ತೆ. Indic ಅಥವಾ en:Indo-Aryan ಭಾಷಾಕುಟುಂಬವು en:Indo European languages ಭಾಷಾಕುಟುಂಬದ ಅಂಗವು.
ಭಾರತೀಯ ಭಾಷೆಗಳಾದ ದ್ರಾವಿಡ ಭಾಷೆಗಳು, ಬೋಡೊ (en:Tibeto-Burman ಕುಟುಂಬಕ್ಕೆ ಸೇರಿದ್ದು), ಆಸ್ಟ್ರೋ ಆಶಿಯಾಟಿಕ್ ಕುಟುಂಬಕ್ಕೆ ಸೇರಿರುವ ಮುಂಡ ಭಾಷೆ, ಹಾಗು ಅನೇಕಾನೇಕ ಭಾಷೆಗಳು, ಇಂಡಿಕ್ ಅಲ್ಲ.
ಐತಿಹಾಸಿಕ ಕಾರಣಗಳಿಂದ, (hostoric reason) ಭಾಷೆಗಳ ವಿಂಗಡನೆಯು ಈರೀತಿ ಆಗಿಹೋಗಿವೆ. ನನ್ನ ಅನಿರಿಕೆಯ ಪ್ರಕಾರ, ನಾವು ನಮ್ಮದೆ ಆದ ಭಾಷಾಶಸ್ತ್ರದ ವಿಂಗಡನೆಗಳನ್ನು ಹಾಕಲು ಕಾಲ ಮೀರಿದೆಯಲ್ಲವೆ. ಹಾಗೆ ಹಾಕಿದಲ್ಲಿ confusionಗೆ ಈಡಾಗುವುದು. -- Sudarshanhs 04:10, ೫ January ೨೦೦೬ (UTC)
- ಇಂಡಿಕ್ ಬರಿಯ ಭಾರತೀಯ ಭಾಷೆಗಳು ಎಂದಲ್ಲವೆಂಬುದು ನನಗೆ ತಿಳಿದಿದೆ. ಕಾಲವೇನೂ ಮೀರಿಲ್ಲ. ನಮ್ಮದೇ ಆದ ಕ್ಲಾಸಿಫಿಕೇಶನ್ ಖಂಡಿತ ಪ್ರಾರಂಭಿಸಬಹುದು. ಭಾರತೀಯ ಭಾಷೆಗಳಲ್ಲಿರುವ ಎಲ್ಲ ವಿಕಿಪೀಡಿಯದವರೂ ಅದನ್ನೇ ಫಾಲೋ ಮಾಡಬಹುದು. ಆದರೆ ಅದಕ್ಕೊಂದು ವೈಜ್ಞಾನಿಕ, ಸಂಶೋಧನಾ background ಬೇಕು - ಸಮರ್ಥಿಸಿಕೊಳ್ಳುವುದಕ್ಕೆ ಮತ್ತು ತನ್ನದೇ ಆದ ಅಸ್ತಿತ್ವ ನೀಡುವುದಕ್ಕೆ. ನಮಗೆ ಆಗ ಖಂಡಿಸಲಾಗಲಿಲ್ಲವೆಂದ ಮಾತ್ರಕ್ಕೆ ಈಗಲೂ ತಪ್ಪು ತಪ್ಪಾಗಿ ಕ್ಲಾಸಿಫೈ ಮಾಡಿಕೊಂಡು ಆಂಗ್ಲರು ಹೇರಿದ್ದನ್ನೇ ಹೇರಿಕೊಂಡು ಹೋಗುವ ಝರೂರತ್ತು ಇಲ್ಲ. ಸ್ವಲ್ಪ ಯೋಚಿಸಿ ನೋಡಿ. ಭಾಷೆಗಳನ್ನು ಅಡಾಉಡಿ ಮಾಡಿಕೊಂಡು ಅಂಗ್ಲದಲ್ಲಿದ್ದಂತೆ ಅಚ್ಚು ಹಾಕಬೇಡಿ. ಚರ್ಚೆ ನಡೆಸೋಣ... ನೀವೀಗಾಗಲೇ ವಿಕಿಪೀಡಿಯ ಲಿಸ್ಟಿಗೆ ಪತ್ರ ಬರೆದು ಒಳ್ಳೆಯ ಕೆಲಸ ಮಾಡಿದ್ದೀರಿ. ಅಲ್ಲಿ ಕೆಲವು ಭಾಷಾ ತಜ್ಞರಿದ್ದಾರೆ. ಅವರು ನಮಗೆ ಮಾರ್ಗದರ್ಶನ ನೀಡಬಹುದು. ಸದ್ಯಕ್ಕೆ ಭಾಷಾ ಕ್ಲಾಸಿಫಿಕೇಶನ್ ಆಂಗ್ಲದಂತೆ ಇಲ್ಲಿಯೂ replicate ಮಾಡುವುದು ಬೇಡ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 06:53, ೫ January ೨೦೦೬ (UTC)
- ನಾವು ಬಳಸುವ ಪರಿಗೆ ವೈಜ್ಞಾನಿಕ ಸಂಶೊಧನೆಯ ಸಮರ್ಥನೆ ಇರಬೇಕು. ನಮ್ಮದೆ ಕ್ಲಾಸಿಫಿಕೇಶನ್ ಮಾಡಲು ನನಗೇನೋ ಆಸಕ್ತಿ ಇದೆ. ಈಗಿನ ಕ್ಲಾಸಿಫಿಕೇಶನ್ ನಲ್ಲಿನ ಹುಳುಕುಗಳನ್ನು ಯಾರಾದರೂ ಸರಿಯಾಗಿ ಹೇಳಬೇಕು. ಇರಲಿ, Mailing list ನಲ್ಲಿ ಇದರ ಬಗ್ಗೆ ಮುಂದಕ್ಕೆ.. BTW, "ಅಡಾಉಡಿ" ಎಂದರೇನು :-) ? -- Sudarshanhs 07:39, ೫ January ೨೦೦೬ (UTC)
- > "ಅಡಾಉಡಿ" ಎಂದರೇನು :-) ? -- Urgentಉ ಅಂತ :-) (no pun intended) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 19:55, ೫ January ೨೦೦೬ (UTC)
ಭಾಷೆಗಳ ಪುಟದ Titleಗಳು
ಬದಲಾಯಿಸಿಹರಿ ಪ್ರಸಾದರೆ,
೧. "ವರ್ಗ:ಎಷಿಯನ್ ಭಾಷೆಗಳು" ಎಂದು ಬರೆದಿದ್ದೀರಿ. ಇದನ್ನು ಆಂಗ್ಲದಲ್ಲಿ "ಏಷಿಯನ್" (ಏ ದೀರ್ಘ) ಎಂತಲೂ, ಕನ್ನಡದಲ್ಲಿ "ಏಷಿಯಾದ ಭಾಷೆಗಳು" ಎಂದು ಹೇಳುವುದನ್ನು ಕೇಳಿದ್ದೇನೆ. ಯಾವುದನ್ನು ಉಪಯೋಗಿಸೋಣ? ಈ ವಿಷಯ ಎತ್ತಿದ್ದು ಇರುವುದನ್ನು ಬದಲಾಯಿಸಲು ಮುಖವಾಗಿಯಲ್ಲ, ಆದರೆ ಯಾವ approach ಅನ್ನು ಮುಂದಕ್ಕೆ ಅಳವಡಿಸಿಕೊಳ್ಳ ಬೇಕು ಅಂತ.
- hmm... ನಾನು ಬರೆದದ್ದಲ್ಲ. ಆ ಪುಟದ history ನೋಡಿ. ಕಾಮೆಂಟ್ ಹಾಕುವ ಮುನ್ನ ಒಮ್ಮೆ ಇತಿಹಾಸ ನೋಡಿ ನನ್ನ ತಲೆಯ ಮೇಲೆ ಹಾಕಿದರೆ ಒಳ್ಳೆಯದು. :) ಯಾರಾದರೂ ಬರೆದಿರಲಿ, mostly ಸ್ಪೆಲ್ಲಿಂಗ್ ತಪ್ಪಾಗಿದೆ.
೨. "ಮಲ್ಯಾಳಮ್" ಎಂದಿದೆ. ಅದನ್ನು ಕನ್ನಡದಲ್ಲಿ "ಮಲೆಯಾಳಮ್" ಅಂದು ಕರೆಯುವುದು ವಾಡಿಕೆಯಲ್ಲವೆ ? -- Sudarshanhs 08:08, ೫ January ೨೦೦೬ (UTC)
- ಎರಡೂ ರೂಪದಲ್ಲಿ ಬಳಕೆಯಾಗುತ್ತದಾದ್ದರಿಂದ ಯಾವುದಾದರೂ ಒಂದನ್ನು ಹಾಗೇ ಬಿಟ್ಟು. ಇನ್ನೊಂದು ಹೆಸರಿಗೆ redirection ಹಾಕಿದರಾಯಿತು :) ನಿಮ್ಮ ಅಭಿಪ್ರಾಯ ತಿಳಿಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 19:52, ೫ January ೨೦೦೬ (UTC)
- ಓಹ್, ಕ್ಷಮಿಸಿ ಸಾರ್. ತಪ್ಪಾಗಿ, ತಾವು ಬರೆದಿದ್ದು ಅಂತ ಬರೆದು ಬಿಟ್ಟೆ. ಈಗಲೇ REDIRECT ಹಾಕ್ತೀನಿ. ಅದಿರಲಿ, ನನಗೆ "ಅಸ್ಸಮೀಸ್" ಅಂಬೋ ಪುಟದ ಹೆಸರ ಬಗ್ಗೆ ಸಹ ಪ್ರಷ್ಣೆ ಇದೆ. ಅದನ್ನ ಮೆಯ್ಲಿಂಗ್ ಲಿಸ್ಟ್ ಗೆ ಬರೀತಿನಿ. -- Sudarshanhs 02:24, ೬ January ೨೦೦೬ (UTC)