ನಮಸ್ಕಾರ ನಿಶ್ಮಿತ


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Pavanaja (ಚರ್ಚೆ) ೦೬:೨೬, ೧೫ ಜುಲೈ ೨೦೧೫ (UTC)

ದಕ್ಷಿನದಲ್ಲೊಬ್ಬ ದಳಪತಿ

ಬದಲಾಯಿಸಿ

ಭಾರತದ ದಕ್ಷಿಣ ತುದಿಯಲ್ಲಿ ತೂತ್ತುಕುಡಿ ಎಂಬ ರೇವು ಪಟ್ಟಣ ಇದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ, ಅಲ್ಲೊಂದು ಹಡಗಿನ ಆರಂಭೋತ್ಸವ ನಡೆಯಿತು. ಶ್ರೀಲಂಕಾದ ಕೊಲಂಬೋದವರೆಗೆ ಅದರ ದಾರಿ. ಭಾರತದ ಮೊಟ್ಟಮೊದಲ ಗವರ್ನರ್ ಜನರಲ್ ರಾಜಾಜಿ ಅದನ್ನು ಬಿಡುಗಡೆ ಮಾಡಿದರು. ಆ ಹಡಗಿನ ಹೆಸರು ಚಿದಂಬರಂ ಪಿಳ್ಳೈ ಎಂದಿತ್ತು.

ಚಿದಂಬರ ಪಿಳ್ಳೈ ಅದೇ ಊರಿನವರು, ಖ್ಯಾತ ವಕೀಲರಾಗಿದ್ದರು. ಮಹಾರಾಷ್ಟ್ರದ ದೇಶಭಕ್ತ ಕ್ರಾಂತಿಕಾರಿಗಳ ಪರಿಚಯ ಅವರಿಗಿತ್ತು. ಕಾರ್ಮಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅವರು ಮುಖಂಡರೂ ಮಾರ್ಗದರ್ಶಿಯೂ ಆಗಿದ್ದರು. ಇದರಿಂದ ದಳಪತಿ ಎಂಬ ಬಿರುದು ಅವರ ಹೆಸರಿಗೆ ಸೇರಿತು.

ಈ ಶತಮಾನದ ಆರಂಭದ ಮಾತು. ಆಗ ಬ್ರಿಟೀಷ್ ಕಂಪನಿಯೊಂದು ತೂತ್ತುಕುಡಿಯಿಂದ ಕೊಲಂಬೊಗೆ ಹಡಗು ನಡೆಸುತ್ತಿತ್ತು. ಪ್ರಯಾಣಿಕರೆಲ್ಲ ಬಡಜನರು. ಭಾರತದಿಂದ ಸಿಂಹಲಕ್ಕೆ ದುಡಿಯಲು ಹೋಗುತ್ತಿದ್ದ ಕೂಲಿ ಕಾರ್ಮಿಕರು. ಹಡಗಿನ ಶುಲ್ಕವಾದರೂ ಸಾಮಾನ್ಯ ದರಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ಅಂದರೆ ಚಾರ್ಜು ನಾಲ್ಕು ರೂ. ಮತ್ತು ಲಗ್ಗೇಜಿಗೆ ಪ್ರತ್ಯೇಕ ಹಣ. ಈ ಸುಲಿಗೆಯನ್ನು ಕಂಡು ದಳಪತಿ ಚಿದಂಬರಂ ಬುದ್ಧಿ ಕಲಿಸಲು ಅವರು ನಿರ್ಧರಿಸಿದರು. ತಾವೇ ಒಂದು ಸ್ವದೇಶಿ ಹಡಗು ಕಂಪನಿಯನ್ನು ಆರಂಭಿಸಿದರು. ಎರಡು ಹಡಗುಗಳನ್ನು ಕೊಂಡು ಅದಕ್ಕೆ ಲಾವೊ ಮತ್ತು ಕಾಲಿಯೊ ಎಂದು ಹೆಸರಿಟ್ಟರು. ಈ ಎರಡು ಸ್ವದೇಶಿ ಹಡಗುಗಳು ಪ್ರಯಾಣ ಆರಂಬಿಸಿದವು. ಅವುಗಳಲ್ಲಿ ಶುಲ್ಕ ನಾಲ್ಕು ಆಣೆ ಮಾತ್ರ. ಲಗ್ಗೇಜಿಗೆ ಹಣ ಕೊಡಬೇಕಾಗಿರಲಿಲ್ಲ. ಇದು ನ್ಯಾಯವಾದ ದರವಾಗಿತ್ತು. ಅಂದರೆ ಇದಕ್ಕಿಂತ ಮೊದಲು ಇಂಗ್ಲೀಷರು ಎಷ್ಟು ನೀತಿಗೆಟ್ಟು ಸಂಪಾದಿಸುತ್ತಿದ್ದರು ಎಂದು ಗೊತ್ತಾಗುತ್ತದೆ.

ಇಂಗ್ಲೀಷರ ಹಡಗಿಗೆ ಜನರೆ ಇಲ್ಲದಂತಾದರು. ಅದು ದಿವಾಳಿಯಾಗುವ ಹಂತಕ್ಕೆ ಬಂತು. ಆಗ ದರ ಇಳಿಸಿದರು. ಕೊನೆಗೆ ದುಡ್ಡಿಲ್ಲದೆ ಕರೆದುಕೊಂಡು ಹೋಗುತ್ತೇವೆ ಎಂದು ಪ್ರಚಾರ ಮಾಡಿದರು. ಆದರೆ ಜನರಿಗೆ ಅರಿವು ಬಂದಿತ್ತು. ಅವರು ತಮ್ಮ ದಳಪತಿಯ ಕೈಬಿಡಲಿಲ್ಲ. ಕಪ್ಪಲೋಟ್ಟಿಯ ತಮಿಳನ್ ಎಂದು ಗೌರವದಿಂದ ಪಿಳ್ಳೈ ಅವರನ್ನು ಹೊಗಳಿದರು.

ಸ್ವದೇಶಿ ಕಂಪನಿಯನ್ನು ಮುಚ್ಚಿದರೆ ಒಂದು ಲಕ್ಷ ರೂ. ಕೊಡುತ್ತೇವೆ ಎಂದು ಇಂಗ್ಲೀಷ್ ಕಂಪನಿಯವರು ಚಿದಂಬರಂ ಅವರಿಗೆ ಗುಟ್ಟಾಗಿ ತಿಳಿಸಿದರು. ಆದರೆ ಅವರು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಇಂಗ್ಲೀಷರ ಅನ್ಯಾಯವನ್ನು ಬಯಲಿಗೆಳೆಯಲು ಊರಿನಲ್ಲಿ ಭಾರತ ಮಾತಾ ಸಮಿತಿಗಳನ್ನು ಸ್ಥಾಪಿಸಿದರು. ಆದ್ದರಿಂದ ಕಾರ್ಮಿಕರನ್ನು ಗುಲಾಮರಂತೆ ದುಡಿಸುತ್ತಿದ್ದ ಇಂಗ್ಲೀಷರ ಕಾರ್ಖಾನೆಗಳಲ್ಲಿ ಪ್ರತಿಭಟನೆ ಹೆಚ್ಚಿತು. ಹವಳದ ಕಾರ್ಖಾನೆಯ ಒಂದು ಸಾವಿರ ಕೆಲಸಗಾರರು ಮುಷ್ಕರ ಹೂಡಿದರು.