ಸತ್ಪಾಲ್ ಸಿಂಗ್
ಗುರು ಸತ್ಪಾಲ್ ಎಂದೂ ಕರೆಯಲ್ಪಡುವ ಸತ್ಪಾಲ್ ಸಿಂಗ್ (ಜನನ ೧ ಫೆಬ್ರವರಿ ೧೯೫೫), ಕುಸ್ತಿ ತರಬೇತುದಾರ ಮತ್ತು ಭಾರತದ ಮಾಜಿ ಕುಸ್ತಿಪಟು. ಅವರು ೧೯೮೨ ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು ಮತ್ತು ೧೯೭೪ ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತರಾಗಿದ್ದರು. ಇಂದು ಅವರು ಒಲಿಂಪಿಕ್ ಪದಕ ವಿಜೇತರಾದ ಸುಶೀಲ್ ಕುಮಾರ್ ಮತ್ತು ರವಿ ಕುಮಾರ್ ದಹಿಯಾ ಅವರ ತರಬೇತುದಾರರಾಗಿ ಪ್ರಸಿದ್ಧರಾಗಿದ್ದಾರೆ.[೧][೨] [೩]
ಸತ್ಪಾಲ್ ಸಿ೦ಗ್ | |
---|---|
Born | ೧ ಫೆಬ್ರವರಿ ೧೯೫೫ ಬಾವಾನಾ, ದೆಹಲಿ |
Nationality | ಭಾರತ |
Occupation | ಕುಸ್ತಿಪಟು |
Known for | ಅರ್ಜುನ ಪ್ರಶಸ್ತಿ ಪಡೆದವರು |
Notable work | ೧೯೮೨ ರ ಏಷ್ಯನ್ ಕ್ರೀಡಾಕೂಟ ದಲ್ಲಿ ಚಿನ್ನದ ಪದಕ, ೧೯೭೪ ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ |
ಅವರಿಗೆ ೨೦೧೫ ರಲ್ಲಿ ಭಾರತವು ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.
ಜೀವನಚರಿತ್ರೆ
ಬದಲಾಯಿಸಿಸತ್ಪಾಲ್ ಅವರು ೧ ಫೆಬ್ರವರಿ ೧೯೫೫ ರಂದು ದೆಹಲಿ ಬವಾನಾ ಗ್ರಾಮದಲ್ಲಿ ಜನಿಸಿದರು. ಅವರು ದೆಹಲಿಯ ಹನುಮಾನ್ ಅಖಾರಾನಲ್ಲಿ ಪ್ರಸಿದ್ಧ ಕುಸ್ತಿ ತರಬೇತುದಾರ ಗುರು ಹನುಮಾನ್ ಅವರಿಂದ ತರಬೇತಿ ಪಡೆದರು.[೪] ಅವರು ೧೬ ವರ್ಷಗಳ ಕಾಲ ಭಾರತೀಯ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಅವರು ೧೯೭೪, ೧೯೭೮ ಮತ್ತು ೧೯೮೨ ಕಾಮನ್‌ವೆಲ್ತ್ ಆಟಗಳಲ್ಲಿ ೩ ಬೆಳ್ಳಿ ಪದಕಗಳನ್ನು ಗೆದ್ದು ಕಾಮನ್‌ವೆಲ್ತ್ ಆಟಗಳಲ್ಲಿ ಅಂತರರಾಷ್ಟ್ರೀಯ ಯಶಸ್ಸನ್ನು ಸಾಧಿಸಿದರು. ಏಷ್ಯನ್ ಗೇಮ್ಸ್‌ನಲ್ಲೂ, ಅವರು ಸತತ ಆಟಗಳಲ್ಲಿ ತಮ್ಮ ಪ್ರದರ್ಶನವನ್ನು ಸುಧಾರಿಸಿದರು, ೧೯೭೪ ರಲ್ಲಿ ಕಂಚು, ೧೯೭೮ ರಲ್ಲಿ ಬೆಳ್ಳಿ ಮತ್ತು ೧೯೮೨ ರಲ್ಲಿ ಚಿನ್ನದೊಂದಿಗೆ ಉತ್ತುಂಗಕ್ಕೇರಿದರು.[೫] ಸತ್ಪಾಲ್ ಅವರು ಕುಸ್ತಿಯಲ್ಲೂ ಉತ್ತಮರಾಗಿದ್ದರು. ಅವರು ಭಾರತ್ ಕುಮಾರ್ (೧೯೭೩), ರುಸ್ತಮ್-ಎ-ಹಿಂದ್ (೧೯೭೪ ಮತ್ತು ೧೯೭೫), ಭಾರತ್ ಕೇಸರಿ (೧೯೭೫), ರುಸ್ತಂ-ಎ-ಭಾರತ್ (೧೯೭೫), ಮಹಾ ಭಾರತ ಕೇಸರಿ (೧೯೭೬), ಮಹಾನ್ ಭಾರತ್ ಕೇಸರಿ (೧೯೭೬) , ರುಸ್ತಂ-ಎ-ಜಮಾನ್ (೧೯೭೬), ಹಿಂದ್ ಕೇಸರಿ (೧೯೭೭), ಭಾರತ್ ಶ್ರೀ (೧೯೭೮) ಮತ್ತು ಭಾರತ್ ಬಲರಾಮ್ (೧೯೭೯) ನಂತಹ ಹಲವಾರು ಪ್ರಶಸ್ತಿಗಳನ್ನು ಗೆದ್ದರು.
ಸತ್ಪಾಲ್ ಈಗ ದೆಹಲಿಯ ಶಿಕ್ಷಣ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ಮುಖ್ಯ ಪೋಷಕರಾಗಿದ್ದಾರೆ. ೧೯೮೮ ರಿಂದ ದೆಹಲಿ ಛತ್ರಸಾಲ್ ಸ್ಟೇಡಿಯಂನಲ್ಲಿ ಸಹ ತರಬೇತುದಾರ ವೀರೇಂದ್ರ ಸಿಂಗ್ ಅವರೊಂದಿಗೆ ಕುಸ್ತಿಯ ತರಬೇತಿಗಾಗಿ ಅಖಾಡಾ ಅನ್ನು ನಡೆಸುತ್ತಾರೆ. ಅವರು ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತದಾರ ಸುಶೀಲ್ ಕುಮಾರ್ ಮತ್ತು ರವಿ ಕುಮಾರ್ ದಹಿಯಾ ಅವರ ತರಬೇತುದಾರರಾಗಿ ಪ್ರಸಿದ್ಧರಾಗಿದ್ದಾರೆ.[೬]
ಅವರಿಗೆ ೨೦೦೯ ರಲ್ಲಿ ಭಾರತ ಸರ್ಕಾರ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಯಿತು. ಅವರು ಈ ಹಿಂದೆ ೧೯೭೪ ರಲ್ಲಿ ಅರ್ಜುನ ಪ್ರಶಸ್ತಿ ಮತ್ತು ೧೯೮೩ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.[೭]
ಪ್ರಶಸ್ತಿಗಳು ಮತ್ತು ಸಾಧನೆಗಳು
ಬದಲಾಯಿಸಿ- ೧೯೭೪:ಅರ್ಜುನ ಪ್ರಶಸ್ತಿ
- ೧೯೮೩:ಪದ್ಮಶ್ರೀ
- ೨೦೦೯:ದ್ರೋಣಾಚಾರ್ಯ ಪ್ರಶಸ್ತಿ
- ೧೬ ಬಾರಿ ರಾಷ್ಟ್ರೀಯ ಹೆವಿವೇಟ್ ಚಾಂಪಿಯನ್.
- ೨೦೧೫: ಪದ್ಮಭೂಷಣ
ಭಾಗವಹಿಸುವಿಕೆ
ಬದಲಾಯಿಸಿ- ೧೯೮೦ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಕುಸ್ತಿ - ಪುರುಷರ ಫ್ರೀಸ್ಟೈಲ್ ೧೦೦ ಕೆಜಿ
ಉಲ್ಲೇಖಗಳು
ಬದಲಾಯಿಸಿ- ↑ Chakravertty, Shreya (26 August 2008). "Life in Satpal's akhada: Early mornings and lots of ghee". Indian Express. Retrieved 18 December 2018.
- ↑ Amsan, Andrew (2021-08-05). "How Chhatrasal stadium and coach Satpal shaped Ravi Dahiya". The Indian Express (in ಇಂಗ್ಲಿಷ್). Retrieved 2021-08-05.
- ↑ "ಆರ್ಕೈವ್ ನಕಲು". Archived from the original on 2016-07-29. Retrieved 2018-09-07.
- ↑ "Guru Hanuman Akhara chosen for the 2014 Rashtritya Khel Protsahan Puraskar". Jargran Josh. 22 August 2014. Retrieved 2014-11-20.
- ↑ Nag, Utathya (2022-05-27). "Satpal Singh – the legendary wrestling coach who mentored Olympic champions". International Olympic Committee. Archived from the original on 2022-09-21.
- ↑ http://satpalsingh.allsport.in/
- ↑ "Padma Shri Awardees". Archived from the original on 29 ಫೆಬ್ರವರಿ 2012. Retrieved 30 ಜುಲೈ 2009.