ಶ್ರೀ ತ್ಯಾಗರಾಜ

ಮಹೇಶ್ ಮಹದೇವ್ ಸೃಷ್ಟಿಸಿರುವ ಒಂದು ರಾಗ
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಶ್ರೀ ತ್ಯಾಗರಾಜ ಕರ್ನಾಟಕ ಸಂಗೀತದಲ್ಲಿ (ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತದ ಒಂದು ಪ್ರಕಾರ) ಮಹೇಶ್ ಮಹದೇವ್ ಸೃ‍‌ಷ್ಟಿಸಿರುವ ಒಂದು ರಾಗವಾಗಿದೆ []  ಇದು ಕರ್ನಾಟಕ ಶಾಸ್ತ್ರೀಯ ಸಂಗೀತದ 72 ಮೇಳಕರ್ತ ರಾಗ ವ್ಯವಸ್ಥೆಯಲ್ಲಿ 59ನೇ ಮೇಳಕರ್ತ ರಾಗ ಧರ್ಮಾವತಿಯ ಜನ್ಯವಾಗಿದ್ದು ಇದು ಔಡವ-ಷಾಡವ ರಾಗವಾಗಿದೆ.[]

ರಾಗ ಸ್ವರೂಪ ಮತ್ತು ಲಕ್ಷಣ

ಬದಲಾಯಿಸಿ
 
Janya Raga of Dharmavathi scale with shadjam at C

ಶ್ರೀ ತ್ಯಾಗರಾಜ ರಾಗವು ಔಡವ-ಷಾಡವ ರಾಗವಾಗಿದ್ದು ಇದರ ಆರೋಹಣದಲ್ಲಿ ಷಡ್ಜ, ಸಾಧಾರಣ ಗಾಂಧಾರ, ಪ್ರತಿ ಮಧ್ಯಮ, ಪಂಚಮ, ಕಾಕಲಿ ನಿಷಾದವಿದೆ. ಅವರೋಹಣದಲ್ಲಿ ಮಾತ್ರ ಚತುಶ್ರುತಿ ರಿಷಭದ ಪ್ರಯೋಗವಿರುತ್ತದೆ. ಈ ರಾಗದ ಆರೋಹಣ ಮತ್ತು ಅವರೋಹಣ ಕೆಳಕಂಡಂತಿದೆ.

ಆರೋಹಣ ಸ ಗ2 ಮ2 ಪ ನಿ3 ಸ

ಅವರೋಹಣ ಸ ನಿ3 ಪ ಮ2 ಗ2 ರಿ2 ಸ

ಆರೋಹಣದಲ್ಲಿ ಐದು ಸ್ವರ ಹಾಗೂ ಅವರೋಹಣದಲ್ಲಿ ಏಳೂ ಸ್ವರಗಳು ಇರುವುದರಿಂದ ಇದು ಔಡವ-ಷಾಡವ ರಾಗವಾಗಿದೆ.[]

ಸಂಗೀತ ರಚನೆ

ಬದಲಾಯಿಸಿ

ಈ ರಾಗವು ಹೊಸರಾಗವಾಗಿದ್ದು ಮಹೇಶ್ ಮಹದೇವ್ ಈ ರಾಗದಲ್ಲಿ ಮೊದಲಿಗೆ "ಶ್ರೀ ರಾಮಚಂದ್ರಂ ಭಜಾಮಿ" ಎಂಬ ಕರ್ನಾಟಕ ಸಂಗೀತದ ಕೃತಿಯನ್ನು ಆದಿ ತಾಳದಲ್ಲಿ ರಚಿಸಿದ್ದಾರೆ. ಪ್ರಿಯದರ್ಶಿನಿ ಈ ಕೃತಿಯನ್ನು ಹಾಡಿದ್ದು ಕೃತಿಯ ಬಿಡುಗಡೆಯನ್ನು ತ್ಯಾಗರಾಜರ ಜೀವ ಸಮಾಧಿಯಾದ ಸ್ಥಳದಲ್ಲಿ ನಡೆಯುವ 176ನೇ ತ್ಯಾಗರಾಜ ಆರಾಧನಾ ಮಹೋತ್ಸವ, ತಿರುವಯ್ಯರು ತಮಿಳುನಾಡಿನಲ್ಲಿ ಬಿಡುಗಡೆ ಮಾಡಲಾಯಿತು.[]  

ಕೃತಿಯ ಸಾಹಿತ್ಯ

ಬದಲಾಯಿಸಿ

ಮಹೇಶ್ ಮಹದೇವ್ ಶ್ರೀಸ್ಕಂದ ಎಂಬ ಅಂಕಿತ ನಾಮದೊಂದಿಗೆ ಈ ರಾಗದಲ್ಲಿ ರಚಿಸಿದ "ಶ್ರೀ ರಾಮಚಂದ್ರಂ ಭಜಾಮಿ"[] ಕೃತಿಯ ಸಾಹಿತ್ಯ

ಪಲ್ಲವಿ:

ಶ್ರೀ ರಾಮಚಂದ್ರಂ ಭಜಾಮಿ ಸತತಂ  

ದಶರಥ ತನಯಂ ರಘುಕುಲ ತಿಲಕಂ

ಅನುಪಲ್ಲವಿ:

ವೀರ ರಾಘವಂ ರಾಜೀವ ನಯನಂ

ಜಾನಕಿ ಪ್ರಾಣ ಜಗದಾನಂದಕಾರಕಂ

ಚರಣ:  

ಶ್ರೀ ತ್ಯಾಗರಾಜ ರಾಗನುತಂ

ಕಂದರ್ಪ ಕೋಟಿ ಲಾವಣ್ಯ ಸದೃಶಂ

ಶ್ರೀಸ್ಕಂದ ಜನಕ ಹೃದಯ ಮಂದಿರಸ್ಥಿತಂ

ಸುಗ್ರೀವ ವಾನರ ಹನುಮಾದಿ ಸಂ ಸೇವಿತಂ

ಉಲ್ಲೇಖಗಳು

ಬದಲಾಯಿಸಿ
  1. http://samyukthakarnataka.com/articlepage.php?articleid=SMYK_BANG_20230123_03_4&width=174px&edition=Bangalore&curpage=3
  2. ೨.೦ ೨.೧ "Sri Tyagaraja Raga created by Mahesh Mahadev". Mahesh Mahadev - Official Website. 2023-01-10. Retrieved 2023-08-04.
  3. ೩.೦ ೩.೧ "a New Raga in Carnatic Music by Mahesh Mahadev". News Karnataka. 2023-01-19. Retrieved 2023-08-04.