ವೈಜಯಂತಿಮಾಲಾ
ವೈಜಯಂತಿಮಾಲಾ ಬಾಲಿ [೧](ಆಗಸ್ಟ್ ೧೩, ೧೯೩೬) ಭಾರತೀಯ ಕಲಾಲೋಕದಲ್ಲಿ ಪ್ರಖ್ಯಾತ ಹೆಸರು. ಚಲನಚಿತ್ರ ಕಲಾವಿದೆಯಾಗಿ ಮತ್ತು ಭರತನಾಟ್ಯ ಕಲೆಯಲ್ಲಿ ಪ್ರಸಿದ್ಧರಾದ ವೈಜಯಂತಿಮಾಲಾ ದಕ್ಷಿಣ ಭಾರತದಿಂದ ಹಿಂದಿ ಚಿತ್ರರಂಗದಲ್ಲಿ ಪ್ರಖ್ಯಾತಿ ಪಡೆದ ಕಲಾವಿದೆಯರಲ್ಲಿ ಪ್ರಥಮಸಾಲಿನವರು.
ಜೀವನ
ಬದಲಾಯಿಸಿಚಲನಚಿತ್ರ ಮತ್ತು ಭರತನಾಟ್ಯ ಕಲಾವಿದೆಯಾಗಿ ಪ್ರಖ್ಯಾತರಾಗಿರುವ ವೈಜಯಂತಿಮಾಲಾ ಅವರು ಆಗಸ್ಟ್ ೧೩, ೧೯೩೬ರಂದು ತಮಿಳುನಾಡಿನ ಅಂದಿನ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ್ದ ಟ್ರಿಪ್ಜಲಿಕೇನ್ ಎಂಬಲ್ಲಿ ಜನಿಸಿದರು. ತಂದೆ ಎಂ. ಡಿ. ರಾಮಸ್ವಾಮಿ ಅವರು ಮತ್ತು ತಾಯಿ ವಸುಂಧರಾ ದೇವಿ ಅವರು.[೨]
ಚಲನಚಿತ್ರ ರಂಗದಲ್ಲಿ
ಬದಲಾಯಿಸಿ೧೯೪೯ರ ವರ್ಷದಲ್ಲಿ ತಮ್ಮ ಹದಿಮೂರನೆಯ ವಯಸ್ಸಿನಲ್ಲೇ ‘ವಾಳ್ಗೈ’ ಎಂಬ ತಮಿಳು ಚಿತ್ರದ ಮೂಲಕ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವೈಜಯಂತಿಮಾಲಾ ಮುಂದೆ ತಮಿಳು ಮತ್ತು ಹಿಂದಿ ಭಾಷೆಗಳೆರಡರಲ್ಲೂ ಪ್ರಖ್ಯಾತಿ ಪಡೆದ ತಾರೆಯೆನಿಸಿದರು. ಬಹಾರ್, ನಾಗಿನ್, ದೇವದಾಸ್, ಕಟ್ಪುತ್ಲಿ, ಸಾಧನಾ, ನಯಾ ದೌರ್, ಮಧುಮತಿ, ಗಂಗಾ ಜಮುನಾ, ಸಂಗಮ್, ಲೀಡರ್, ಪೆಹ್ಲಿ ಜಲಕ್, ಆಮ್ರಪಾಲಿ, ಜ್ಯೂಯೆಲ್ ಥೀಫ್, ಸಂಘರ್ಷ್ ಹೀಗೆ ಹಲವಾರು ಚಿತ್ರಗಳಲ್ಲಿ ದಿಲೀಪ್ ಕುಮಾರ್, ರಾಜ ಕಫೂರ್, ದೇವಾನಂದ್, ಕಿಶೋರ್ ಕುಮಾರ್ ಮುಂತಾದ ಪ್ರಸಿದ್ಧರೊಂದಿಗೆ ನಟಿಸಿ ಪ್ರಸಿದ್ಧಿ ಪಡೆದರು. ತಮ್ಮ ಸೌಂಧರ್ಯ, ನೃತ್ಯ, ಅಭಿನಯಗಳಿಂದ ಪ್ರೇಕ್ಷಕರಿಗೆ ಮೋಡಿ ಮಾಡಿದ್ದ ವೈಜಯಂತಿಮಾಲಾ ಅವರ ಹೆಸರು ಅಂದಿನ ಈ ಮಹಾನ್ ನಟರುಗಳ ಹೆಸರುಗಳ ಜೊತೆಯಲ್ಲಿ ನಿರಂತರವಾಗಿ ಸುದ್ಧಿಯಲ್ಲಿತ್ತು. ಮುಂದೆ ಅವರ ಚಮನ್ ಲಾಲ್ ಬಾಲಿ ಅವರನ್ನು ವರಿಸಿದರು.[೩] ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದ ವೈಜಯಂತಿಮಾಲಾ ಅವರು ಜಿ. ಡಿ. ವೆಂಕಟರಾಂ ಎಂಬುವರು ನಿರ್ಮಿಸಿದ್ದ "ಆಶಾ ನಿರಾಶಾ" ಎಂಬ ಕನ್ನಡ ಚಿತ್ರದಲ್ಲೂ ನಟಿಸಿದ್ದರು.[೪] ಆದರೆ ಆ ಚಿತ್ರ ತೆರೆಕಾಣಲಿಲ್ಲ.
ನೃತ್ಯ ಕಲೆಯಲ್ಲಿ
ಬದಲಾಯಿಸಿವಿವಾಹದ ನಂತರದಲ್ಲಿ ಇನ್ನೂ ಪ್ರಸಿದ್ಧಿಯಲ್ಲಿರುವಗಲೇ ಚಿತ್ರರಂಗವನ್ನು ತ್ಯಜಿಸಿದ ವೈಜಯಂತಿಮಾಲಾ ಬಾಲಿ ಅವರು ಮುಂದೆ ಹೆಚ್ಚಿನ ಸಮಯವನ್ನು ಭರತನಾಟ್ಯ ಕಲೆಗೆ ಮೀಸಲಿಟ್ಟರು. ತಮ್ಮ ನೃತ್ಯ ಪ್ರದರ್ಶನ ಮತ್ತು ನೃತ್ಯ ಸಂಯೋಜನೆಗಳಿಂದ ಅವರು ವಿಶ್ವದಾದ್ಯಂತ ಜನರನ್ನು ನೃತ್ಯಕಲೆಯತ್ತ ಆಕರ್ಷಿಸಿದ್ದಾರೆ.[೫]
ಕ್ರೀಡೆ ಮತ್ತು ರಾಜಕಾರಣದಲ್ಲಿ
ಬದಲಾಯಿಸಿಗೋಲ್ಫ್ ಆಟದಲ್ಲಿ ಸಹಾ ಅವರು ಪರಿಣತರು. ರಾಜಕೀಯದಾಟದಲ್ಲಿ ಸಹಾ ಇವರು ಕಾಂಗ್ರೆಸ್ ಮತ್ತು ಭಾಜಪ ಪಕ್ಷಗಳ ಮೂಲಕ ಅನೇಕ ಬಾರಿ ಲೋಕಸಭೆ ಇಲ್ಲವೇ ರಾಜ್ಯಸಭೆಗಳ ಸದಸ್ಯತ್ವ ನಿರ್ವಹಿಸಿದ್ದಾರೆ.
ನಿರ್ಮಾಪಕಿಯಾಗಿ
ಬದಲಾಯಿಸಿವರ್ಷ | ಸಿನಿಮಾ | ಪಾತ್ರವರ್ಗ | ನಿರ್ದೇಶಕ | ಸಂಗೀತ ನಿರ್ದೇಶಕ | ಭಾಷೆ | ಟಿಪ್ಪಣಿ |
---|---|---|---|---|---|---|
೧೯೮೨ | ಕಾತೊದೂತನ್ ನಾನ್ ಪೆಸುವೆನ್ | ರಾಮ್ಜೀ, ಶ್ರೀಪ್ರಿಯಾ, ಮೇನಕಾ | ಎಮ್.ಎ.ಕಜ | ಶಂಕರ್ ಗಣೇಶ್ | ತಮಿಳು | ರಾಜಿಯಮ್ಮಲ್ ರವರ ಒತೆ ಸಹ-ನಿರ್ಮಾಪಣೆ ೧೪ ಜನವರಿ ೧೯೮೨ ರಂದು ಬಿಡುಗಡೆ ಮಾಡಲಾಯಿತು |
ಪ್ರಶಸ್ತಿ ಮತ್ತು ಗೌರವಗಳು
ಬದಲಾಯಿಸಿನಾಟ್ಯಕಲೆಯಲ್ಲಿನ ಮಹತ್ಸಾಧನೆಗಾಗಿ ವೈಜಯಂತಿಮಾಲಾ ಅವರು ಸಂಗೀತ ನಾಟಕ ಅಕಾಡೆಮಿಯ ಗೌರವವನ್ನು ಪಡೆದಿದ್ದಾರೆ. ಸಂಗಮ್, ದೇವದಾಸ್, ಸಾಧನಾ, ಮಧುಮತಿ, ಗಂಗಾ ಜಮುನಾ, ಸಂಘರ್ಷ್ ಮುಂತಾದ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಫಿಲಂಫೇರ್, ಬಿ.ಎಫ್.ಜೆ.ಎ ಮುಂತಾದ ಪ್ರಶಸ್ತಿಗಳು, ಪದ್ಮಶ್ರೀ ಪ್ರಶಸ್ತಿ, ಕಲೈಮಾಮಣಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗೌರವಗಳು
ಬದಲಾಯಿಸಿ- ೧೯೬೮ - ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ
- ೧೯೭೯ - ತಮಿಳುನಾಡು ಸರ್ಕಾರದಿಂದ ತಮಿಳುನಾಡು ರಾಜ್ಯ ಕಲಾವಿದ ಪ್ರಶಸ್ತಿ [೬]
- ೧೯೭೯ - ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ
- ೧೯೯೫ - ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
ಫಿಲ್ಮ್ ಫೇರ್ ಪ್ರಶಸ್ತಿ
ಬದಲಾಯಿಸಿವರ್ಷ | ಪ್ರಶಸ್ತಿ | Nominated work | ಪಾತ್ರ | ಫಲಿತಾಂಶ | ಉಲ್ಲೇಖ |
---|---|---|---|---|---|
೧೯೫೬ | ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ | ದೇವ್ದಾಸ್ | ಚಂದ್ರಮುಖಿ | ಗೆಲುವು | [೭] [೮] [೯] [೧೦] [೧೧] [೧೨] |
೧೯೫೮ | ಅತ್ಯುತ್ತಮ ನಟಿ ಪ್ರಶಸ್ತಿ | ಸಾಧ್ನಾ | ಚಂಪಬಾಯಿ / ರಜನಿ | ||
೧೯೫೮ | ಮಧುಮತಿ | ಮಧುಮತಿ / ಮಾಧವಿ / ರಾಧಾ | Nominated | ||
೧೯೬೧ | ಗಂಗಾ ಜಮುನಾ | ಧನ್ನೋ | ಗೆಲುವು | ||
೧೯೬೪ | ಸಂಗಮ್ | ರಾಧಾ | |||
೧೯೯೬ | ಜೀವಮಾನ ಸಾಧನೆ ಪ್ರಶಸ್ತಿ |
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2014-08-05. Retrieved 2014-03-14.
- ↑ https://twitter.com/villagehistory/status/441756226162946048
- ↑ http://www.bollywoodm.com/indian-actresses/vaijayantimala-bali-profile.html
- ↑ "ವೈಜಯಂತಿಮಾಲಾ ನಟಿಸಿದ ಕನ್ನಡ ಚಿತ್ರ". moviebuff.com.
- ↑ http://movies.in.msn.com/actor.aspx?P_PersonID=69656
- ↑ Anjana Rajan (2007-01-15). "Screen, stage and beyond". ದಿ ಹಿಂದೂ. Coimbatore, Tamil Nadu. Archived from the original on 2013-01-25. Retrieved 2012-01-22.
- ↑ "The Winners - 1956". Indiatimes. Archived from the original on 2012-07-14. Retrieved 2011-04-24.
- ↑ "The Winners - 1956". Indiatimes. Archived from the original on 2012-07-09. Retrieved 2011-04-24.
- ↑ "The Nominations - 1958". Indiatimes. Archived from the original on 2012-07-10. Retrieved 2011-04-24.
- ↑ "The Winners - 1960". Indiatimes. Archived from the original on 2012-07-09. Retrieved 2011-04-24.
- ↑ "The Winners - 1964". Indiatimes. Archived from the original on 2012-07-21. Retrieved 2011-04-24.
- ↑ "Lifetime Achievement (Popular)". Indiatimes. Archived from the original on 2008-02-12. Retrieved 2011-04-24.