ವಿಪ್ಪರ್ತಿ ಆದಿಮೂರ್ತಿ (ಜನನ ೫ ಮೇ ೧೯೪೬) ಇವರು ಇಸ್ರೋದ ಗೌರವಾನ್ವಿತ ಪ್ರೊಫೆಸರ್.[] ಇವರು ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಮಾಜಿ ಸತೀಶ್ ಧವನ್ ಪ್ರೊಫೆಸರ್ ಮತ್ತು ಸಂಶೋಧನಾ ಡೀನ್ ಆಗಿದ್ದರು.[] ಆದಿಮೂರ್ತಿ ಅವರು ಐಐಎಸ್‍ಟಿಗೆ ಸೇರುವ ಮೊದಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರಮುಖ ಸೌಲಭ್ಯ ಕೇಂದ್ರವಾದ, ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಸಹಾಯಕ ನಿರ್ದೇಶಕ ಹುದ್ದೆಯನ್ನು ನಿ೯ವಹಿಸುತ್ತಿದರು.[] ರಾಕೆಟ್ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಡೈನಾಮಿಕ್ಸ್‌ಗೆ ನೀಡಿದ ಕೊಡುಗೆಗಳಿಗೆ ಇವರು ಹೆಸರುವಾಸಿಯಾಗಿದ್ದಾರೆ. [] ಭಾರತ ಸರ್ಕಾರವು ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.[]

ವಿ.ಆದಿಮೂರ್ತಿ
ಜನನ೫ ಮೇ ೧೯೪೬
ರಾಜಮಂಡ್ರಿ, ಆಂಧ್ರ ಪ್ರದೇಶ, ಭಾರತ
ರಾಷ್ಟ್ರೀಯತೆಭಾರತ
ಕಾರ್ಯಕ್ಷೇತ್ರಏರೋಸ್ಪೇಸ್ ಇಂಜಿನಿಯರಿಂಗ್
ಹೈಪರ್ಸಾನಿಕ್ ವೇಗ
ಸಂಸ್ಥೆಗಳುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಅಭ್ಯಸಿಸಿದ ವಿದ್ಯಾಪೀಠಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ್
ಪ್ರಸಿದ್ಧಿಗೆ ಕಾರಣಚಂದ್ರಯಾನ I, ಚಂದ್ರಯಾನ-2, ಮಂಗಳಯಾನ, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ
ಸಂಗಾತಿಸಂಧ್ಯಾಮೂರ್ತಿ ವಿಪ್ಪರ್ತಿ
ಟಿಪ್ಪಣಿಗಳು
ಮಿಷನ್ ಕಾನ್ಸೆಪ್ಟ್ ಡಿಸೈನರ್
ಚಂದ್ರಯಾನ I, ಚಂದ್ರಯಾನ-2 ಮತ್ತು ಮಂಗಳಯಾನ[][]

ವೃತ್ತಿ

ಬದಲಾಯಿಸಿ

ಆದಿಮೂರ್ತಿಯವರು ಭಾರತದ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದರು.[] ಇವರು ೧೯೭೩ ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರದಿಂದ ಅಪರೂಪದ ಹೈಪರ್ಸಾನಿಕ್‍ಗಳಲ್ಲಿ ತಮ್ಮ ಪಿ ಹೆಚ್ ಡಿ ಪಡೆದರು. ನಂತರ, ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಸೇರಿದರು. ಅವರು ತಿರುವನಂತಪುರದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ವಿಜ್ಞಾನಿಯಾಗಿ ನೇಮಕಗೊಂಡರು. ಮತ್ತು ವಿಎಸ್‍ಎಸ್‍ಸಿನಲ್ಲಿ ಸಹಾಯಕ ನಿರ್ದೇಶಕರಾದರು. [] ೨೦೧೦ರಲ್ಲಿ ಇವರು ವಿಎಸ್‍ಎಸ್‍ಸಿಯಿಂದ ನಿವೃತ್ತರಾದರು. ನಂತರ ಅವರು ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಸತೀಶ್ ಧವನ್ ಪ್ರೊಫೆಸರ್ ಆಗಿ ನೇಮಕಗೊಂಡರು.

ಗೌರವಗಳು ಮತ್ತು ಪ್ರಶಸ್ತಿಗಳು

ಬದಲಾಯಿಸಿ

ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಸಹವತಿ೯ ಆಗಿರುವ ಆದಿಮೂರ್ತಿ ಅವರು ರಾಕೆಟ್ ತಂತ್ರಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ, ೧೯೯೭ ರ ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ ಪ್ರಶಸ್ತಿಯನ್ನು ಪಡೆದರು. ಅವರು ಅಲೆಕ್ಸಾಂಡರ್ ವಾನ್ ಹಂಬೋಲ್ಟ್ ಫೌಂಡೇಶನ್‌ನ ಫೆಲೋ ಆಗಿದ್ದಾರೆ. ಇವರು ೧೯೭೯-೮೦ ಮತ್ತು ೧೯೯೯-೨೦೦೦ ಅವಧಿಯಲ್ಲಿ ಜರ್ಮನಿಯ ಸ್ಟಟ್‌ಗಾರ್ಟ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ವಿಜ್ಞಾನಿಯಾಗಿದ್ದರು.‌‍[] ೨೦೨-೨೦೦೩ ಅವಧಿಯಲ್ಲಿ ಇವರು ಇಂಟರ್-ಏಜೆನ್ಸಿ ಬಾಹ್ಯಾಕಾಶ ಶಿಲಾಖಂಡರಾಶಿಗಳ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.[] ೨೦೧೨ ರಲ್ಲಿ, ಆದಿಮೂರ್ತಿ ಅವರು ಬಾಹ್ಯಾಕಾಶ ಡೈನಾಮಿಕ್ಸ್‌ಗೆ ನೀಡಿದ ಕೊಡುಗೆಗಳಿಗಾಗಿ ಭಾರತ ಸರ್ಕಾರದಿಂದ ಪದ್ಮಶ್ರೀ ಪಡೆದರು.[][] ೨೦೧೩ ರಲ್ಲಿ, ಅವರು ಮೊದಲ ಭಾರತೀಯ ಚಂದ್ರನ ಅನ್ವೇಷಕ ಚಂದ್ರಯಾನ-1 ರೊಂದಿಗಿನ ಅವರ ಕೆಲಸಕ್ಕಾಗಿ ತಂಡದ ಸಾಧನೆಗಾಗಿ ಅಂತರರಾಷ್ಟ್ರೀಯ ಸಾಧನೆ ಪ್ರಶಸ್ತಿ ಲಾರೆಲ್ ಅನ್ನು ಗಳಿಸಿದರು. []

ಉಲ್ಲೇಖಗಳು

ಬದಲಾಯಿಸಿ
  1. "He has orbited the earth thrice". Deccan Herald. 13 February 2010.
  2. "State Stamp Mission". Archived from the original on 8 November 2013. Retrieved 19 September 2014.
  3. "Indian Institute of Science".
  4. "ISRO to implement regional navigation satellite system". The Hindu. 5 January 2011. Retrieved 30 January 2012.
  5. ೫.೦ ೫.೧ ೫.೨ "Laurels after a unique Sabarimala pilgrimage". News18. 26 January 2012.
  6. ೬.೦ ೬.೧ ೬.೨ "Dr V. Adimurthy". International Astronautical Federation. Retrieved 30 January 2012.
  7. ೭.೦ ೭.೧ "Adimurthy: Cycling through space". The Times of India. 25 January 2012. Archived from the original on 3 January 2013. Retrieved 30 January 2012.
  8. "Space India Jan-jun 2012". www.dos.gov.in. Retrieved 2020-03-23.
  9. "Chief Guest of Nationsal Science Day & 12th Research Scholar Day | Indian Institute of Technology Bhubaneswar". www.iitbbs.ac.in. Retrieved 2022-06-03.


ಬಾಹ್ಯ ಕೊಂಡಿಗಳು

ಬದಲಾಯಿಸಿ