ಚಂದ್ರಯಾನ-೨

(ಚಂದ್ರಯಾನ-2 ಇಂದ ಪುನರ್ನಿರ್ದೇಶಿತ)

ಚಂದ್ರಯಾನ-೨ (ಸಂಸ್ಕೃತ:चंद्रयान-२, lit: Moon-vehicle[][] pronunciation), ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆಯ ಸಂಪೂರ್ಣ ದೇಶೀಯ ತಂತ್ರಜ್ಞಾನ ಅಳವಡಿಸಿ ನಿರ್ಮಿಸಿರುವ ಚಾಂದ್ರ ಪರಿಶೋಧನಾ ಅಭಿಯಾನ. ೨೨ ಜುಲೈ ೨೦೧೯ ರ ಅಪರಾಹ್ನ ೦೨ ಗಂಟೆ ೪೩ (2ಗಂ.43 ನಿ.ಕ್ಕೆ)ನಿಮಿಷ ಭಾರತೀಯ ಕಾಲಮಾನಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ 3 (ಜಿ ಎಸ್ ಎಲ್ ವಿ ಎಂಕೆ 3-ಎಂ1 ) ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.[]

ಚಂದ್ರಯಾನ-2 []
Operatorಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ
Mission typeಕಕ್ಷೆಗಾಮಿ, ಭೂಸ್ಪರ್ಶಕ and one ರೋವರ್
Launch dateಜುಲೈ ೨೨, ೨೦೧೯, ೧೪:೪೩ IST (೦೯:೧೩ UTC) []
Launch vehicleಜಿ.ಎಸ್.ಎಲ್.ವಿ
Mission durationOne year (orbiter and rover)
Satellite ofMoon
HomepageISRO
Mass೨,೬೫೦ Kg (orbiter, lander and rover)

ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಒಂದು ಚಾಂದ್ರ ಕಕ್ಷೆಗಾಮಿ, ರೋವರ್ ಹಾಗು ಒಂದು ಭೂಸ್ಪರ್ಶಕ ಒಳಗೊಂಡಿರುವ ಇದು ಸೆಪ್ಟೆಂಬರ್‌ ವೇಳೆಗೆ ಚಂದ್ರನ ದಕ್ಷಿಣ ದ್ರುವಕ್ಕೆ ಇಳಿಯುವ ಯೋಜನೆ ಇದೆ.[] ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ಭೂಸ್ಪರ್ಶಕವನ್ನು ಇಳಿಸುವ ಮೊಟ್ಟ ಮೊದಲ ಯೋಜನೆ ಇದಾಗಿದೆ. ಇದಕ್ಕೆ ತಗಲುವ ವೆಚ್ಚ ಸುಮಾರು ೪೨೫ ಕೋಟಿ (ಯುಎಸ್$೯೦ ದಶಲಕ್ಷ)ರಷ್ಟೆಂದು ಅಂದಾಜಿಸಲಾಗಿದೆ.[] ಇಸ್ರೋ ಪ್ರಕಾರ, ಈ ಅಭಿಯಾನವು ವಿವಿಧ ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಿ ಬಳಕೆಮಾಡುವುದರ ಜೊತೆಗೆ 'ಹೊಸ' ಪ್ರಯೋಗಗಳನ್ನು ನಡೆಸುತ್ತದೆ.[][] ಗಾಲಿಗಳಿರುವ ರೋವರ್ ಚಂದ್ರನ ಮೇಲ್ಮೈ ತಲುಪಿ, ಆ ಸ್ಥಳದ ರಾಸಾಯನಿಕ ವಿಶ್ಲೇಷಣೆ ನಡೆಸಲು ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸುತ್ತದೆ. ಅಲ್ಲಿನ ಅಗತ್ಯ ಅಂಕಿಅಂಶದ ದತ್ತಾಂಶವನ್ನು ಭೂಮಿಗೆ ಚಂದ್ರಯಾನ-೨ ಕಕ್ಷೆಗಾಮಿಯ ಮೂಲಕ ತಲುಪಿಸಲಾಗುತ್ತದೆ.[] ಚಂದ್ರಯಾನ-1 ಅಭಿಯಾನದ ಯಶಸ್ಸಿಗೆ ಕಾರಣರಾದ ಮೈಲ್ಸ್ವಾಮಿ ಅಣ್ಣಾದೊರೈ ನೇತೃತ್ವದ ತಂಡವು ಚಂದ್ರಯಾನ-೨ ಅಭಿಯಾನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಇತಿಹಾಸ

ಬದಲಾಯಿಸಿ

ಅಭಿಯಾನಕ್ಕೆ, ಭಾರತ ಸರ್ಕಾರವು ೧೮ ಸೆಪ್ಟೆಂಬರ್ ೨೦೦೮ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ರ ಅಧ್ಯಕ್ಷತೆಯಲ್ಲಿ ನಡೆದ ಯೂನಿಯನ್ ಕ್ಯಾಬಿನೆಟ್(ಕೇಂದ್ರ ಸಚಿವ ಸಂಪುಟ ಸಭೆ) ಸಭೆಯಲ್ಲಿ ಅನುಮೋದನೆ ನೀಡಲಾಯಿತು.[೧೦] ನವೆಂಬರ್ ೧೨, ೨೦೦೭ರಲ್ಲಿ, ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ(ರೋಸ್ಕೊಸ್ಮೊಸ್) ಹಾಗು ISROನ ಪ್ರತಿನಿಧಿಗಳು, ಎರಡೂ ಏಜೆನ್ಸಿಗಳೂ ಚಂದ್ರಯಾನ-೨ ಯೋಜನೆಯಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ಒಪ್ಪಂದಕ್ಕೆ ಸಹಿ ಹಾಕಿದವು.[೧೧] ಕಕ್ಷೆಗಾಮಿ ಹಾಗು ರೋವರ್ ನ ತಯಾರಿಕೆಗೆ ISRO ಪ್ರಮುಖ ಜವಾಬ್ದಾರಿ ವಹಿಸಿಕೊಂಡರೆ, ರೋಸ್ಕೊಸ್ಮೊಸ್ ಗಗನನೌಕೆ ತಯಾರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು. ಬಾಹ್ಯಾಕಾಶ ನೌಕೆಯ ವಿನ್ಯಾಸವು ಆಗಸ್ಟ್ ೨೦೦೯ರ ಹೊತ್ತಿಗೆ ಪೂರ್ಣಗೊಂಡಿತು, ಜೊತೆಗೆ ಎರಡೂ ರಾಷ್ಟ್ರಗಳ ವಿಜ್ಞಾನಿಗಳು ಇದರ ಬಗ್ಗೆ ಜಂಟಿಯಾಗಿ ವಿಧ್ಯುಕ್ತ ಪರಿಶೀಲನೆ ನಡೆಸಿದರು.[೧೨][೧೩][೧೪] ಲ್ಯಾಡರ್ ತಯಾರಿಕೆಯಲ್ಲಿ ರಷ್ಯಾದಿಂದ ವಿಳಂಬಗೂಂಡ ಕಾರಣ ಉಡಾವಣೆಯನ್ನು ೩೦೧೬ಕ್ಕೆ ಮುಂದೊಡಲಾಯಿತು. ಆದರೆ ರೋಸ್ಕೊಸ್ಮೊಸ್ ನ ಫೂಬೊಸ್-ಗ್ರಂಟ್ ಮಂಗಳ ಗ್ರಹದ ಉಡಾವಣೆ ಗುರಿಯು ವಿಫಲಗೊಂಡ ಕಾರಣ ರಷ್ಯಾ ಈ ಉಡಾವಣೆಯಿಂದ ಹೊರ ಬಂದಿತು. ಫೂಬೊಸ್-ಗ್ರಂಟ್ ಅಭಿಯಾನದ ಕೆಲವು ತಾಂತ್ರಿಕ ಅಂಶಗಳು ಚಂದ್ರಯಾನ-೨ ರಲ್ಲಿಯು ಬಳಸಲಾಗಿತ್ತು. ೨೦೧೫ ರ ಹೊತ್ತಿಗೆ ಲ್ಯಾಂಡರ್ ಅನ್ನು ಒದಗಿಸಲು ರಷ್ಯಾ ತನ್ನ ಅಸಾಮರ್ಥ್ಯವನ್ನು ಉಲ್ಲೇಖಿಸಿದಾಗ, ಭಾರತವು ಚಂದ್ರನ ಕಾರ್ಯಾಚರಣೆಯನ್ನು ಸ್ವತಂತ್ರವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿತು.[೧೫]

ವಿನ್ಯಾಸ

ಬದಲಾಯಿಸಿ
 
ಚಂದ್ರಯಾನ್ -2 ಲ್ಯಾಂಡರ್ ಮತ್ತು ಆರ್ಬಿಟರ್ ಇಂಟಿಗ್ರೇಟೆಡ್ ಸ್ಟ್ಯಾಕ್
ಬಾಹ್ಯಾಕಾಶ ನೌಕೆ ಭೂ-ಕಕ್ಷೆಗೆ

ಅಭಿಯಾನವು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ Mk-II(GSLV)ನ ಮೂಲಕ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ, ಜೊತೆಗೆ ಶ್ರೀಹರಿಕೋಟ ದ್ವೀಪದ ಮೇಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಉಡಾವಣೆ ಮಾಡಲಾಯಿತು. ಚಂದ್ರಯಾನ–2ರ ನೌಕೆಯನ್ನು ಹೊತ್ತ ರಾಕೆಟ್ ‘ಬಾಹುಬಲಿ’ 22-7-2019 ಸೋಮವಾರ ಮಧ್ಯಾಹ್ನ 2.43ಕ್ಕೆ ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಹಾರಿತು.ಇಸ್ರೊ ನಿರ್ಮಿತ ಅತ್ಯಂತ ಬಲಶಾಲಿ ರಾಕೆಟ್‌, ಜಿಎಸ್‌ಎಲ್‌ವಿ ಮಾರ್ಕ್‌–3 ‘ಬಾಹುಬಲಿ’ಯು 3,850ಕೆ.ಜಿ. ತೂಕದ ಉಪಕರಣಗಳನ್ನು ಭೂಮಿಯಕಕ್ಷೆಗೆ ಸೇರಿಸಿತು[೧೬](ಇದರ ಸರಾಸರಿ ಉಡಾವಣೆ ತೂಕ ೨,೬೫೦ ಕೆಜಿ.?)[೧೭][೧೮]

ಕಕ್ಷೆಗಾಮಿ

ಬದಲಾಯಿಸಿ

ISRO, ಕಕ್ಷೆಗಾಮಿಯನ್ನು ವಿನ್ಯಾಸಗೊಳಿಸುತ್ತದೆ, ಇದು ೨೦೦ ಕಿಮೀ ಎತ್ತರದಲ್ಲಿ ಚಂದ್ರನನ್ನು ಪರಿಭ್ರಮಿಸುತ್ತದೆ.[೧೯] ಅಭಿಯಾನವು ಕಕ್ಷೆಗಾಮಿಗೆ ಐದು ಉಪಕರಣಗಳನ್ನು ಕೊಂಡೊಯ್ಯಬೇಕೆಂದು ನಿರ್ಧರಿಸಲಾಗಿದೆ. ಇದರಲ್ಲಿ ಮೂರು ಉಪಕರಣಗಳು ಹೊಸತಾಗಿದ್ದು, ಮತ್ತೆರಡು ಉಪಕರಣಗಳು ಚಂದ್ರಯಾನ-1ರಲ್ಲಿ ಕಕ್ಷೆಗಾಮಿಗೆ ಹೊತ್ತೊಯ್ಯಲಾದ ಸುಧಾರಿತ ರೂಪಾಂತರಗಳಾಗಿದೆ. ಸರಾಸರಿ ಉಡಾವಣಾ ಮಾಸ್ (ದ್ರವ್ಯರಾಶಿ-ತೂಕ) ೧,೪೦೦ ಕೆಜಿಯಷ್ಟಿರುತ್ತದೆ.[೨೦][೨೧]

ಗಗನನೌಕೆ

ಬದಲಾಯಿಸಿ

ಚಂದ್ರನ ಮೇಲ್ಮೈನ ಮೇಲೆ ಪರಿಣಾಮ ಬೀರಿದ ಚಂದ್ರಯಾನ-೧ರ ಚಾಂದ್ರ ಶೋಧಕಕ್ಕಿಂತ ಭಿನ್ನವಾಗಿ, ಗಗನನೌಕೆಯು ಹಗುರವಾಗಿ ನಿಲುಗಡೆ ಮಾಡುತ್ತದೆ.[೨೨] ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ ಗಗನನೌಕೆಯನ್ನು ಒದಗಿಸುತ್ತದೆ. ಗಗನನೌಕೆ ಹಾಗು ರೋವರ್ ನ ಸರಾಸರಿ ತೂಕ ೧,೨೫೦ ಕೆಜಿ. ರಷ್ಯನ್ ಸ್ಪೇಸ್ ಏಜೆನ್ಸಿ ರೋಸ್ಕೊಸ್ಮೊಸ್ ಗಗನನೌಕೆಯನ್ನು ೨೦೧೧ರಲ್ಲಿ ಪರೀಕ್ಷಿಸಲು ಉದ್ದೇಶಿಸಿದೆ.[೨೨][೨೩][೨೪]

ರೋವರ್ ೩೦-೧೦೦ ಕೆಜಿ ತೂಕ ಹೊಂದಿದ್ದು ಸೌರಶಕ್ತಿಯ ಮೇಲೆ ಕಾರ್ಯನಿರ್ವಹಿಸುತ್ತದೆ. ರೋವರ್ ಗಾಲಿಗಳ ಮೇಲೆ ಚಂದ್ರನ ಮೇಲ್ಮೈಯನ್ನು ತಲುಪಿ, ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸಿ, ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ, ಹಾಗು ಮೇಲಿರುವ ಕಕ್ಷೆಗಾಮಿಗೆ ಶೋಧಿತ,ದೊರೆತ ದತ್ತಾಂಶವನ್ನು ಕಳುಹಿಸುತ್ತದೆ, ಇದು ಭೂಮಿಯ ಸ್ಟೇಶನ್ ಗೆ ತನ್ನ ಪರಿಧಿ ಕೇಂದ್ರದ ಮುಖಾಂತರ ಮಾಹಿತಿ ಪ್ರಸಾರ ಮಾಡುತ್ತದೆ.[೨೦][೨೧]

ಉಪಕರಣಗಳು

ಬದಲಾಯಿಸಿ
 
ಚಂದ್ರಯಾನ್ -2 ಲಿಫ್ಟಿಂಗ್ ಆಫ್; 2019 ಜುಲೈ 22 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ವಿ-ಎಂಕೆ III ಲಾಂಚರ್‌ನಲ್ಲಿ ರೀಡ್‌ ಚಂದ್ರಯಾನ್ -2 ಕೋಶ ಉಡಾವಣೆ.

ತಜ್ಞ ಸಮಿತಿಯು, ಕಕ್ಷೆಗಾಮಿ ಐದು ಉಪಕರಣಗಳನ್ನು, ಹಾಗು ರೋವರ್ ಎರಡು ಉಪಕರಣಗಳನ್ನು ಕೊಂಡೊಯ್ಯಬೇಕೆಂದು ಸಲಹೆ ನೀಡಿದೆಯೆಂದು ISRO ಪ್ರಕಟಿಸಿತು.[೨೫][೨೬] ಕಕ್ಷೆಗಾಮಿಗೆ ಕೆಲವು ವೈಜ್ಞಾನಿಕ ಉಪಕರಣಗಳನ್ನು ಒದಗಿಸುವ ಮೂಲಕ NASA ಹಾಗು ESA ಅಭಿಯಾನದಲ್ಲಿ ಪಾಲ್ಗೊಳ್ಳುತ್ತದೆಂದು ಆರಂಭದಲ್ಲಿ ವರದಿ ಮಾಡಲಾಗಿತ್ತು,ತೂಕ ನಿರ್ಬಂಧದಿಂದಾಗಿ ಬಾಹ್ಯ ಉಪಕರಣಗಳನ್ನು ಅಭಿಯಾನವು ಕೊಂಡೊಯ್ಯುವುದಿಲ್ಲವೆಂದು ISRO ನಂತರದಲ್ಲಿ ಸ್ಪಷ್ಟಪಡಿಸಿತು.[೨೭]

ಕಕ್ಷೆಗಾಮಿ ಉಪಕರಣ

ಬದಲಾಯಿಸಿ
  • ಚಂದ್ರನ ಮೇಲ್ಮೈಯಲ್ಲಿರುವ ಪ್ರಮುಖ ಅಂಶಗಳನ್ನು ದ್ವಿ-ವಿಮಿತೀಯ ನಿರೂಪಣೆ ಮಾಡಲು ಬೆಂಗಳೂರಿನ ISRO ಸ್ಯಾಟಲೈಟ್ ಸೆಂಟರ್ ನ ಲಾರ್ಜ್ ಏರಿಯ ಸಾಫ್ಟ್ ಎಕ್ಸ್-ರೆ ಸ್ಪೆಕ್ಟ್ರೋಮೀಟರ್ ಹಾಗು ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ(PRL)ಯ ಸೋಲಾರ್ ಎಕ್ಸ್-ರೇ ಮಾನಿಟರ್ ಉಪಕರಣಗಳು.[೨೮]
  • ಚಂದ್ರನ ಮೇಲ್ಮೈನಲ್ಲಿರುವ ಮೊದಲ ಹತ್ತು ಮೀಟರುಗಳಲ್ಲಿ ನೀರ್ಗಲ್ಲುಗಳನ್ನೊಳಗೊಂಡಂತೆ ದೊರೆಯುವ ವಿವಿಧ ರಚನೆಗಳ ಬಗ್ಗೆ ಶೋಧನೆಯನ್ನು ನಡೆಸಲು, ಅಹಮದಾಬಾದಿನ ಸ್ಪೇಸ್ ಅಪ್ಲಿಕೇಶನ್ಸ್ ಸೆಂಟರ್(SAC)ನ (ಬಾಹ್ಯಾಕಾಶ ತತ್ವಗಳ ಅಳವಡಿಕೆ)ಕೇಂದ್ರ L ಹಾಗು S ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ ಚಂದ್ರನಿಂದ ಆವರಿಸಲ್ಪಟ್ಟಿರುವ ಪ್ರದೇಶಗಳಲ್ಲಿ ದೊರೆಯುವ (ಹಿಮ)ನೀರು ಕಲ್ಲುಗಳ ಬಗ್ಗೆ ದೃಢಪಡಿಸಲು SAR ಮತ್ತಷ್ಟು ಸಾಕ್ಷ್ಯಗಳನ್ನು ಒದಗಿಸುತ್ತದೆಂದು ನಿರೀಕ್ಷಿಸಲಾಗಿದೆ.[೨೬]
  • ಚಂದ್ರನ ಮೇಲ್ಮೈನ ಉದ್ದಕ್ಕೂ ಒಂದು ವ್ಯಾಪಕವಾದ ತರಂಗಾಂತರದ ಶ್ರೇಣಿಯನ್ನು ದ್ವಿ-ವಿಮಿತೀಯ ನಿರೂಪಣೆ ಮಾಡುವ ಮೂಲಕ ಖನಿಜಗಳು, ನೀರಿನ ಕಣಗಳು ಹಾಗು ಹೈಡ್ರಾಕ್ಸಿಲ್ ಗಳ ಉಪಸ್ಥಿತಿಯ ಬಗ್ಗೆ ಅಧ್ಯಯನ ನಡೆಸಲು ಅಹಮದಾಬಾದಿನ SAC ನಿಂದ ಪಡೆದುಕೊಂಡ ಇಮೇಜಿಂಗ್ IR ಸ್ಪೆಕ್ಟ್ರೋಮೀಟರ್ (IIRS).[೨೬]
  • ಚಾಂದ್ರ ಬಾಹ್ಯಗೋಳದ ಬಗ್ಗೆ ಸವಿಸ್ತಾರದ ಅಧ್ಯಯನ ನಡೆಸಲು ತಿರುವನಂತಪುರದ ಸ್ಪೇಸ್ ಫಿಸಿಕ್ಸ್ ಲ್ಯಾಬೋರೇಟರಿ(SPL) ನಿಂದ ಪಡೆದುಕೊಂಡ ನ್ಯೂಟ್ರಲ್ ಮಾಸ್ ಸ್ಪೆಕ್ಟ್ರೋಮೀಟರ್.[೨೬]
  • ಚಾಂದ್ರ ಖನಿಜಶಾಸ್ತ್ರ ಹಾಗು ಭೂವೈಜ್ಞಾನಿಕ ವಿವರಣೆಗಳ ಅಧ್ಯಯನಕ್ಕೆ ಅಗತ್ಯ ತ್ರಿವಿಮಿತೀಯ ನಕ್ಷೆಯ ತಯಾರಿಕೆಗೆ ಅಹಮದಾಬಾದಿನ SAC ಒದಗಿಸಿದ ಟೆರೈನ್ ಮ್ಯಾಪಿಂಗ್ ಕ್ಯಾಮೆರ-೨(TMC-೨).[೨೬]
ರೋವರ್ ಉಪಕರಣ
  • ಬೆಂಗಳೂರಿನ ಲ್ಯಾಬೋರೇಟರಿ ಫಾರ್ ಎಲೆಕ್ಟ್ರೋ ಆಪ್ಟಿಕ್ ಸಿಸ್ಟಮ್ಸ್(LEOS)ನಿಂದ ಪಡೆದುಕೊಂಡ ಲೇಸರ್ ಇಂಡ್ಯೂಸ್ಡ್ ಬ್ರೇಕ್ ಡೌನ್ ಸ್ಪೆಕ್ಟ್ರೋಸ್ಕೋಪ್(LIBS).[೨೬]
  • PRL, ಅಹಮದಾಬಾದಿನಿಂದ ಪಡೆದುಕೊಳ್ಳಲಾದ ಅಲ್ಫಾ ಪಾರ್ಟಿಕಲ್ ಇಂಡ್ಯೂಸ್ಡ್ ಎಕ್ಸ್-ರೆ ಸ್ಪೆಕ್ಟ್ರೋಸ್ಕೋಪ್(APIXS).

ಪ್ರಚಲಿತ ಸ್ಥಿತಿ

ಬದಲಾಯಿಸಿ

ಆಗಸ್ಟ್ ೩೦, ೨೦೧೦ರ ಹೊತ್ತಿಗಿನ ಪ್ರಯೋಗಕ್ಕೆ, ಇಸ್ರೋ, ಚಂದ್ರಯಾನ-೨ರ ಅಭಿಯಾನಕ್ಕೆ ಉಪಕರಣಗಳನ್ನು ಅಂತಿಮಗೊಳಿಸಿತು.[೨೧]

ಚಂದ್ರಯಾನ ನೌಕೆ ಚಂದ್ರನ ಮೇಲೆ

ಬದಲಾಯಿಸಿ
 
Rover Pragyan mounted on the ramp of Vikram lander-ವಿಕ್ರಮ್ ಅವತರಣ ಮಂಟಪದಲ್ಲಿ ರೋವರ್/ಶೋಧನಾ ಚಲನ ಗಾಡಿ 'ಪ್ರಜ್ಞಾನ್'ನ್ನು ಅಳವಡಿಸುತ್ತಿರುವುದು.
  • 2019 ಸೆಪ್ಟೆಂಬರ್ 7ರಂದು ಚಂದ್ರನ ಮೇಲೆ ಚಂದ್ರಯಾನ–2 ನೌಕೆ ಚಂದ್ರನ ಮೇಲೆ ಇಳಿಯುವುದು. ಅದು ಇಳಿಯುವ ಕೊನೆಯ 15 ನಿಮಿಷಗಳು ಮುಖ್ಯವಾಗಿದೆ ಎಂದು ಇಸ್ರೊ ವಿಜ್ಞಾನಿಗಳು ಹೇಳಿದ್ದರು. ಉಡ್ಡಯನಗೊಂಡ 48ನೇ ದಿನದಂದು "ಚಂದ್ರನ ದಕ್ಷಿಣ ಧ್ರುವ ಪ್ರದೇಶ"ದಲ್ಲಿ ನೌಕೆಯನ್ನು ಸುರಕ್ಷಿತವಾಗಿ ಇಳಿಸಲು ವಿಜ್ಞಾನಿಗಳು ಯೋಜನೆ ರೂಪಿಸಿದ್ದರು. ‘ಸಾಫ್ಟ್‌ ಲ್ಯಾಂಡಿಂಗ್’ ಬಹು ನಾಜೂಕು ಕೆಲಸವಾಗಿದ್ದು, ನೌಕೆ ಇಳಿಸುವ ಕೊನೆಯ ಹಂತದ 15 ನಿಮಿಷಗಳು ವಿಜ್ಞಾನಿಗಳ ಪಾಲಿಗೆ ಮತ್ತು ಯಶಸ್ಸಿಗೆ ನಿರ್ಣಾಯಕ’ ಎಂದು ಇಸ್ರೊ ಅಧ್ಯಕ್ಷ ಡಾ.ಕೆ. ಶಿವನ್ ಹೇಳಿದ್ದರು.[೨೯]
  • ಲ್ಯಾಂಡರ್, ವಿಕ್ರಮ್ ಅನ್ನು ಚಂದ್ರನ ಸಮೀಪ ಹೋಗುತ್ತಿದ್ದಂತೆ ಚಂದ್ರಯಾನ್ -2 ಮಿಷನ್ ಸಂಯೋಜನೆಯಿಂದ ಬೇರ್ಪಡಿಸಲಾಯಿತು. 2-9-2019 ರಂದು ಸೋಮವಾರ ಮಧ್ಯಾಹ್ನ 1.15 ಕ್ಕೆ ಈ ಪ್ರತ್ಯೇಕತೆಯನ್ನು ಸಾಧಿಸಲಾಗಿತ್ತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಟಿಸಿದೆ. ರೋವರ್, ಪ್ರಜ್ಞಾನ್ ಅನ್ನು ಹೊತ್ತ ಲ್ಯಾಂಡರ್ 2-9-2019 ರಂದು 119 ಕಿಮೀ ಎಕ್ಸ್ 127 ಕಿಮೀ ಚಂದ್ರನ ಕಕ್ಷೆಯಲ್ಲಿದೆ. ಆರ್ಬಿಟರ್ ಚಂದ್ರನನ್ನು ತನ್ನ ಅಸ್ತಿತ್ವದಲ್ಲಿರುವ ಕಕ್ಷೆಯಲ್ಲಿ ಪರಿಭ್ರಮಿಸುತ್ತಿತ್ತು,[೩೦][೩೧]

ಚಂದ್ರಯಾನ 2 ನೌಕೆಯಿಂದ ಮಾಹಿತಿ

ಬದಲಾಯಿಸಿ
Images of the Earth captured by Chandrayaan-2 Vikram lander camera LI4
  • ‘ಚಂದ್ರಯಾನ 2’ರ ಕಣ್ಣಿನಲ್ಲಿ ಭೂಮಿ ಹೀಗೆ ಕಾಣುತ್ತೆ:‘][೩೨]
  • ಕೆಲವು ಸಂಬಂಧಿತ ತಂತ್ರಜ್ಞಾನಗಳಲ್ಲಿ ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾ, ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ತಪ್ಪಿಸುವ ಕ್ಯಾಮೆರಾ (ಎಲ್‌ಎಚ್‌ಡಿಎಸಿ), ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (ಎಲ್‌ಪಿಡಿಸಿ), 800 ಎನ್ ಥ್ರೊಟಬಲ್ ದ್ರವ ಮುಖ್ಯ ಎಂಜಿನ್, ವರ್ತನೆ ಥ್ರಸ್ಟರ್‌ಗಳು, ಕಾ ಬ್ಯಾಂಡ್ ರೇಡಿಯೋ ಆಲ್ಟಿಮೀಟರ್ (ಕಾರಾ) , ಲೇಸರ್ ಜಡತ್ವ ಉಲ್ಲೇಖ ಮತ್ತು ವೇಗವರ್ಧಕ ಪ್ಯಾಕೇಜ್ (LIRAP), [ಈ ಘಟಕಗಳನ್ನು ಚಲಾಯಿಸಲು ಬೇಕಾದ ಸಾಫ್ಟ್‌ವೇರ್. ಲ್ಯಾಂಡರ್ನ ಎಂಜಿನಿಯರಿಂಗ್ ಮಾದರಿಗಳು 2016 ರ ಅಕ್ಟೋಬರ್ ಅಂತ್ಯದಲ್ಲಿ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಲ್ಲಕೆರೆಯಲ್ಲಿ ನೆಲ ಮತ್ತು ವೈಮಾನಿಕ ಪರೀಕ್ಷೆಗಳಿಗೆ ಒಳಗಾಗಲು ಪ್ರಾರಂಭಿಸಿದವು. ಲ್ಯಾಂಡಿಂಗ್ ಸೈಟ್ ಅನ್ನು ಆಯ್ಕೆ ಮಾಡಲು ಲ್ಯಾಂಡರ್ನ ಸಂವೇದಕಗಳ ಸಾಮರ್ಥ್ಯವನ್ನು ನಿರ್ಣಯಿಸಲು ಸಹಾಯ ಮಾಡಲು ಇಸ್ರೋ ಮೇಲ್ಮೈಯಲ್ಲಿ ಸುಮಾರು 10 ಕುಳಿಗಳನ್ನು ರಚಿಸಿತ್ತು.[೩೩][೩೪]
  • ಆಯಾಮಗಳು: 2.54 × 2 × 1.2 ಮೀ [26]
  • ಒಟ್ಟು ಲಿಫ್ಟ್-ಆಫ್ ದ್ರವ್ಯರಾಶಿ: 1,471 ಕೆಜಿ (3,243 ಪೌಂಡು)
  • ಪ್ರೊಪೆಲ್ಲಂಟ್ ದ್ರವ್ಯರಾಶಿ: 845 ಕೆಜಿ (1,863 ಪೌಂಡು)
  • ಒಣ ದ್ರವ್ಯರಾಶಿ: 626 ಕೆಜಿ (1,380 ಪೌಂಡು)
  • ವಿದ್ಯುತ್ ಉತ್ಪಾದನಾ ಸಾಮರ್ಥ್ಯ: 650 W.
  • ಮಿಷನ್ ಅವಧಿ: ≤ 14 ದಿನಗಳು (ಒಂದು ಚಂದ್ರ ದಿನ)[೩೫]

ಚಂದ್ರನ ಸಮಿಪಕ್ಕೆ ಮಾಡ್ಯೂಲ್ 'ವಿಕ್ರಮ್'

ಬದಲಾಯಿಸಿ
 
ಚಂದ್ರನಮೇಲೆ ಶೋಧನಾ ಗಾಡಿ 'ಪ್ರಜ್ಞಾನ'ವನ್ನುಇಳಿಸುವ'ವಿಕ್ರಮ'ಅವತರಣ ಸಾಧನ- ಯೋಜನೆಯ ವಿವವರಗಳು; Mission Overview
 
Pragyan rover of the Chandrayaan-2 mission//ಚಂದ್ರಯಾನ್ -2 ಮಿಷನ್‌ನ 'ಪ್ರಜ್ಞಾನ' ರೋವರ್ ಶೋಧನಾ ಗಾಡಿ
  • ಚಂದ್ರಯಾನ್ -2 ರ ಲ್ಯಾಂಡಿಂಗ್ ಮಾಡ್ಯೂಲ್ 'ವಿಕ್ರಮ್' ನ ಕಕ್ಷೆಯನ್ನು 3-9-2019 ಮಂಗಳವಾರ ಮೊದಲ ಬಾರಿಗೆ ಯಶಸ್ವಿಯಾಗಿ ಇಳಿಸಲಾಯಿತು ಮತ್ತು ಶನಿವಾರ ಮುಂಜಾನೆ ಚಂದ್ರನ ಮೇಲೆ ಐತಿಹಾಸಿಕ ಮೃದು-ಇಳಿಯುವಿಕೆಯನ್ನು ಎಳೆಯಲು ಭಾರತಕ್ಕೆ ಒಂದು ಅಂತಿಮ ಕುಶಲತೆಯು ಕೆಲಸ ಉಳಿದಿತ್ತು.
  • 4 ಸೆಕೆಂಡುಗಳ ಡಿ-ಆರ್ಬಿಟಿಂಗ್ ಕಾರ್ಯಾಚರಣೆಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲ್ಯಾಂಡರ್ ಅನ್ನು ಚಂದ್ರಯಾನ್ -2 ರ ಕಕ್ಷೆಯಿಂದ ಬೇರ್ಪಡಿಸಿದ ಒಂದು ಪ್ರಮುಖ ಮೈಲಿಗಲ್ಲಿನಲ್ಲಿ ಭಾರತದ ಎರಡನೇ ಚಂದ್ರನ ಕಾರ್ಯಾಚರಣೆಯನ್ನು ಅದರ ಕೊನೆಯ ಮತ್ತು ಅತ್ಯಂತ ನಿರ್ಣಾಯಕ ಹಂತಕ್ಕೆ ತಳ್ಳಿತು -,(ಚಂದ್ರನ ಮೇಲೆ ನಿಯಂತ್ರಿತ ಮೃದುವಾದ ಇಳಿಯುವಿಕೆ.)
  • ಲ್ಯಾಂಡರ್‌ನಲ್ಲಿದ್ದ ಪ್ರೊಪಲ್ಷನ್ ಸಿಸ್ಟಮ್ ಚಂದ್ರನನ್ನು ಸ್ವತಂತ್ರವಾಗಿ ಪರಿಭ್ರಮಿಸಲು ಪ್ರಾರಂಭಿಸಿದ ನಂತರ ಅದರ ಕಕ್ಷೆಯನ್ನು ಕಡಿಮೆ ಮಾಡಲು ಮೊದಲ ಬಾರಿಗೆ ಸ್ಪೋಟಿಸಲಾಯಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
  • ಇಲ್ಲಿಯವರೆಗೆ, ಚಂದ್ರನ ಪ್ರಯಾಣದ ಎಲ್ಲಾ ಕಾರ್ಯಾಚರಣೆಗಳನ್ನು 3,840 ಕೆಜಿ ಚಂದ್ರಯಾನ್ -2 ಬಾಹ್ಯಾಕಾಶ ನೌಕೆಯ ಮುಖ್ಯ ಕಕ್ಷೆಯಿಂದ ಜುಲೈ 22 ರಂದು ದೇಶದ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್, ಜಿಎಸ್ಎಲ್ವಿ ಎಂಕೆಐಐ-ಎಂ 1 ಭೂಮಿಯ ಕಕ್ಷೆಗೆ ಉಡಾಯಿಸಲಾಯಿತು.
  • "ಚಂದ್ರಯಾನ್ -2 ಗಗನನೌಕೆಯ ಮೊದಲ ಡಿ-ಆರ್ಬಿಟಿಂಗ್ ಕುಶಲತೆಯು ಇಂದು (ಸೆಪ್ಟೆಂಬರ್ 03, 2019) 0850 ಗಂ IST ಯಿಂದ ಪ್ರಾರಂಭವಾಗಿ, ಆನ್‌ಬೋರ್ಡ್ ಪ್ರೊಪಲ್ಷನ್ ವ್ಯವಸ್ಥೆಯನ್ನು ಬಳಸಿಕೊಂಡು ಯಶಸ್ವಿಯಾಗಿ ನಿರ್ವಹಿಸಲ್ಪಟ್ಟಿತು. ಕುಶಲತೆಯ ಅವಧಿ 4 ಸೆಕೆಂಡುಗಳು" ಎಂದು ಇಸ್ರೋ ತಿಳಿಸಿದೆ.
  • 2019 ಜುಲೈ 22 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ವಿ-ಎಂಕೆ III ಲಾಂಚರ್‌ನಲ್ಲಿ ರೀಡ್‌ ಚಂದ್ರಯಾನ್ -2 ಅನ್ನು ಉಡಾವಣೆ ಮಾಡಲಾಯಿತು. ಇಲ್ಲಿಯವರೆಗೆ, ಬಾಹ್ಯಾಕಾಶ ನೌಕೆ ತನ್ನ ಎಲ್ಲಾ ಕುಶಲತೆಯನ್ನು ಹೆಚ್ಚಿನ ನಿಖರತೆಯಿಂದ ಕೈಗೊಂಡಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿನ ಅಂತಿಮ ಸಾಫ್ಟ್-ಲ್ಯಾಂಡಿಂಗ್/ ಮೃದು-ಇಳಿಯುವಿಕೆಯ ಉದ್ದೇಶ/ಯೋಜನೆ ಆಗಿರುತ್ತದೆ.
(ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸೆಪ್ಟೆಂಬರ್ 7 ರಂದು 'ವಿಕ್ರಮ್' ಚಾಲಿತ ಇಳಿಯುವ ಮೊದಲು ಇಸ್ರೋ ದಿ.4-9-2019ಬುಧವಾರ ಮತ್ತೊಂದು ಡಿ-ಆರ್ಬಿಟಿಂಗ್ ಕುಶಲತೆಯನ್ನು ನಿರ್ವಹಿಸಲಿದೆ.)[೩೬][೩೭]

ಸಂಪರ್ಕ ಕಡಿತ

ಬದಲಾಯಿಸಿ
  • ಚಂದ್ರಯಾನ-2ರ ಲ್ಯಾಂಡರ್ 'ವಿಕ್ರಮ್' 7-9-2019 ಶನಿವಾರ ಬೆಳಗಿನಜಾವ 1.55ಕ್ಕೆ ಚಂದ್ರನ ನೆಲ ಸ್ಪರ್ಶ ಮಾಡುವ ಸಮಯದ ಕೊನೆಯ ಹಂತದಲ್ಲಿ ಸಂಪರ್ಕ ಕಡಿದುಕೊಂಡಿತು. ಇದರಿಂದ ಚಂದ್ರನ ಈ ಅನ್ವೇಶಣೆಯ ಯೋಜನೆ ಯಶಸ್ವಿ ಆಯಿತೇ ಇಲ್ಲವೇ ಎಂಬುದು ತಿಳಿಯದು. ಚಂದ್ರನ ಮೇಲೆ ಇಳಿಯಲು 2.1 ಕಿ.ಮೀ. ಗಳಷ್ಟು ಎತ್ತರದಲ್ಲಿದ್ಧಾಗ ವಿಕ್ರಮ ಅವತರಣ ಸಾದನವು ಸಂಪರ್ಕವನ್ನು ಕಡಿದುಕೊಂಡಿತು. ಅದು ಎಲ್ಲಿ ಇಳಿಯಬೇಕು ಎಂಬ ಗುರಿ ಇತ್ತೋ ಅಲ್ಲಿ ಇಳಿಯಲಿಲ್ಲ. ಆದರೆ, ಅದನ್ನು ಹೊತ್ತು ತಂದ ಆರ್ಬಿಟರ್ ಉತ್ತಮವಾಗಿ ಚಂದ್ರನನ್ನು ಪರಿಭ್ರಮಣ ಮಾಡುತ್ತಿದೆ. ಲ್ಯಾಂಡರ್ 'ವಿಕ್ರಮ್' ಚಂದ್ರನ ನೆಲ ಸ್ಪರ್ಶ ಮಾಡುವಾಗ ಕೊನೆಯ ಹಂತ ಸಮಯ ದಿ ೭-೯-೨೦೧೯ ಬೆಳಿಗಿನಜಾವ 02: 25ಗಂಟೆ. ಆಗ ಭೂಮಿಯ ಸಂಪರ್ಕ ಕಡಿದುಕೊಂಡಿತು. (ಆದ್ದರಿಂದ ಈ ಯೋಜನೆ ಯಶಸ್ವಿ ಆಯಿತೇ ಇಲ್ಲವೇ ಎಂಬ ಬಗ್ಗೆ ವಿಕ್ರಮ್ ಲ್ಯಾಂಡರ್ ನಿಂದ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.)
  • ಕೊನೆ ಹಂತದಲ್ಲಿ 'ವಿಕ್ರಮ' ಅವತರಣ ಸಾಧನ ಲ್ಯಾಂಡರ್ ತನ್ನ ದಾರಿ ಬಿಟ್ಟು ಇಳಿಯಲಾರಂಭಿಸಿತ್ತು. ಆದರೆ ಆ ಬಳಿಕ ಏನಾಯಿತು ಎಂಬುದು ಮಿಷನ್ ಕಂಟ್ರೋಲ್‌ ಕೊಠಡಿಗೆ ಮಾಹಿತಿ ಸಿಗಲಿಲ್ಲ. ಇದರಿಂದ ಇಸ್ರೊ ವಿಜ್ಞಾನಿಗಳು ಆತಂಕಕ್ಕೆ ಒಳಗಾದರು. ಅಲ್ಲಿ ವೀಕ್ಷಣೆಗೆ ಹಾಜರಿದ್ದ ಪ್ರಧಾನಿ ವಿಜ್ಞಾನಿಗಳಿಗೆ ಈ ಬಗೆಯ ದೊಡ್ಡ ಪ್ರಯತ್ನದಲ್ಲಿ ಇದು ಸಾಮಾನ್ಯ ಎಂದು ಸ್ವಾಂತನ ಹೇಳಿದರು.[೩೮][೩೯]

ಚಿತ್ರಗಳು

ಬದಲಾಯಿಸಿ

ಕಾರ್ಯಕ್ರಮ ವಿವರ

ಬದಲಾಯಿಸಿ
Animation of Chandrayaan-2
Lunar landing phase
Overall motion of Chandrayaan-2
       Earth ·        Moon ·        Chandrayaan-2
Timeline of operations [೪೦][೪೧]
Phase Date Event Detail Result References
Apogee /
Aposelene
Perigee /
Periselene
Geocentric phase 22 July 2019 09:13:12 UTC Launch Burn time: 16 min 14 sec 45,475 km (28,257 mi) 169.7 km (105.4 mi) [೪೨]
24 July 2019 09:22 UTC 1st orbit-raising maneuver Burn time: 48 sec 45,163 km (28,063 mi) 230 km (140 mi) [೪೩]
25 July 2019 19:38 UTC 2nd orbit-raising maneuver Burn time: 883 sec 54,829 km (34,069 mi) 251 km (156 mi) [೪೪]
29 July 2019 09:42 UTC 3rd orbit-raising maneuver Burn time: 989 sec 71,792 km (44,609 mi) 276 km (171.5 mi) [೪೫]
2 August 2019 09:57 UTC 4th orbit-raising maneuver Burn time: 646 sec 89,472 km (55,595 mi) 277 km (172 mi) [೪೬]
6 August 2019 09:34 UTC 5th orbit-raising maneuver Burn time: 1041 sec 142,975 km (88,841 mi) 276 km (171 mi) [೪೭]
13 August 2019 20:51 UTC Trans-lunar injection Burn time: 1203 sec [೪೮]
Selenocentric phase 20 August 2019 03:32 UTC Lunar orbit insertion
1st lunar bound maneuver
Burn time: 1738 sec 18,072 km (11,229 mi) 114 km (71 mi) [೪೯]
21 August 2019 07:20 UTC 2nd lunar bound maneuver Burn time: 1228 sec 4,412 km (2,741 mi) 118 km (73 mi) [೫೦]
28 August 2019 03:34 UTC 3rd lunar bound maneuver Burn time: 1190 sec 1,412 km (877 mi) 179 km (111 mi) [೫೧]
30 August 2019 12:48 UTC 4th lunar bound maneuver Burn time: 1155 sec 164 km (102 mi) 124 km (77 mi) [೫೨]
1 September 2019 12:51 UTC 5th lunar bound maneuver Burn time: 52 sec 127 km (79 mi) 119 km (74 mi) [೫೩]
Vikram lunar landing 2 September 2019 7:45 UTC Vikram separation 127 km (79 mi) 119 km (74 mi) [೫೪]
3 September 2019 3:20 UTC 1st deorbit burn Burn time: 4 sec 128 km (80 mi) 104 km (65 mi) [೫೫]
3 September 2019 22:12 UTC 2nd deorbit burn Burn time: 9 sec 101 km (63 mi) 35 km (22 mi) [೫೬]
6 September 2019 UTC (planned) Powered descent
6 September 2019 UTC (planned) Vikram landing
7 September 2019 UTC (planned) Pragyan rover deployment

ಹೊರಸಂಪರ್ಕ

ಬದಲಾಯಿಸಿ

ಇವನ್ನೂ ಗಮನಿಸಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಚಂದ್ರಯಾನ-2 ಉಡಾವಣೆ: ನಭಕ್ಕೆ ಚಿಮ್ಮಿದ 'ಬಾಹುಬಲಿ'". 22 Jul 2019 03:18 PM IST. Archived from the original on 22 ಜುಲೈ 2019. Retrieved 22 ಜುಲೈ 2019. {{cite news}}: Check date values in: |date= (help)
  2. ೨.೦ ೨.೧ "Chandrayaan-2 HOME". ISRO. Archived from the original on 2019-07-29. Retrieved 2019-07-21.
  3. "candra". Spoken Sanskrit. Retrieved 2008-11-05.
  4. "yaana". Spoken Sanskrit. Retrieved 2008-11-05.
  5. "ಚಂದ್ರಯಾನ-2 ಯಶಸ್ವಿ ಉಡಾವಣೆ: ನೌಕೆ ಹೊತ್ತು ನಭಕ್ಕೆ ಚಿಮ್ಮಿದ 'ಬಾಹುಬಲಿ', ಇಸ್ರೋ ವಿಜ್ಞಾನಿಗಳ ಶ್ರಮ ಸಾರ್ಥಕ". Vijayavani. 2019-07-22. Archived from the original on 2019-07-23. Retrieved 2019-07-23.
  6. "India, Russia giving final shape to Chandrayaan-2". Hindustan Times. 2008-10-30. Retrieved 2008-11-11.
  7. "Chandrayaan-2 to be finalised in 6 months". The Hindu. 2007-09-07. Archived from the original on 2008-10-23. Retrieved 2008-10-22.
  8. "Chandrayaan-II will try out new ideas, technologies". The Week. 2010-09-07. Retrieved 2010-09-07.
  9. "ISRO plans Moon rover". Chennai, India: The Hindu. 2007-01-04. Archived from the original on 2007-09-14. Retrieved 2008-10-22.
  10. "Cabinet clears Chandrayaan-2". Chennai, India: The Hindu. 2008-09-19. Archived from the original on 2008-10-27. Retrieved 2008-10-23.
  11. "India, Russia to expand n-cooperation, defer Kudankulam deal". Earthtimes.org. 2008-11-12. Retrieved 2008-11-11.
  12. "ISRO completes Chandrayaan-2 design news". domain-b.com. 2009-08-17. Retrieved 2009-08-20.
  13. "India and Russia complete design of new lunar probe". 2009-08-17. Retrieved 2009-08-20.
  14. "India and Russia Sign an Agreement on Chandrayaan-2". ISRO. 2007-11-14. Archived from the original on 2008-10-12. Retrieved 2008-10-23.
  15. "Chandrayaan-2". pib.nic.in. Retrieved 2019-06-13.
  16. ಚಂದ್ರಾನ್ವೇಷಣೆಗೆ ಹೊಸ ಭಾಷ್ಯ: ಚಂದ್ರಯಾನ–2 ನೌಕೆ ಭೂ ಕಕ್ಷೆಗೆ ಸೇರ್ಪಡೆ;d: 23 ಜುಲೈ 2019
  17. ದಿ ಇಕನಾಮಿಕ್ ಟೈಮ್ಸ್-ಚಂದ್ರಯಾನ-2 ಚಂದ್ರನಿಗೆ ಇನ್ನಷ್ಟು ಹತ್ತಿರವಾಗುವುದು.
  18. ಕಾರ್ಯಾಚರಣೆ ಯಶಸ್ವಿಯಾಗುವ ವಿಶ್ವಾಸದಲ್ಲಿ ಇಸ್ರೊ;ಚಂದ್ರಯಾನ–2 ಉಡ್ಡಯನ ಪ್ರಜಾವಾಣಿ ವಾರ್ತೆ;d: 22 ಜುಲೈ 2019
  19. 'ಚಂದ್ರನ ಸಂಪೂರ್ಣ ಕವರೇಜ್ ಗಾಗಿ ಚಂದ್ರಯಾನ-2ನ್ನು ನಾವು ಉಡಾವಣೆ ಮಾಡುತ್ತಿದ್ದೇವೆ.'
  20. ೨೦.೦ ೨೦.೧ ದಿ ಇಕನಾಮಿಕ್ ಟೈಮ್ಸ್-ಚಂದ್ರಯಾನ-2 ಚಂದ್ರನಿಗೆ ಇನ್ನಷ್ಟು ಹತ್ತಿರವಾಗುವುದು.
  21. ೨೧.೦ ೨೧.೧ ೨೧.೨ "ಚಂದ್ರಯಾನ-2 ಅಭಿಯಾನಕ್ಕಾಗಿ ISRO-ಉಪಕರಣಗಳನ್ನು ಅಂತಿಮಗೊಳಿಸಿದೆ". Archived from the original on 2013-10-22. Retrieved 2010-12-23.
  22. ೨೨.೦ ೨೨.೧ ದಿ ಇಕನಾಮಿಕ್ ಟೈಮ್ಸ್-ಚಂದ್ರಯಾನ-2 ಚಂದ್ರನಿಗೆ ಇನ್ನಷ್ಟು ಹತ್ತಿರವಾಗುವುದು
  23. ಏವಿಯೇಶನ್ ವೀಕ್-ಚಂದ್ರಯಾನ-2 ಗಗನನೌಕೆಯನ್ನು ರಷ್ಯಾ ಮುಂದಿನ ವರ್ಷ(2011) ಪರೀಕ್ಷಿಸುತ್ತದೆ.
  24. "ISRO-ಉಪಕರಣ ಚಂದ್ರಯಾನ-2 ಅಭಿಯಾನಕ್ಕಾಗಿ ISRO-ಉಪಕರಣಗಳನ್ನು ಅಂತಿಮಗೊಳಿಸಿದೆ". Archived from the original on 2013-10-22. Retrieved 2010-12-23.
  25. Johnson (August 31, 2010). "Three new Indian payloads for Chandrayaan 2, decides ISRO". Indian Express. Archived from the original on 2010-11-03. Retrieved 2010-08-31.
  26. ೨೬.೦ ೨೬.೧ ೨೬.೨ ೨೬.೩ ೨೬.೪ ೨೬.೫ "Payloads for Chandrayaan-2 Mission Finalised". Indian Space Research Organisation (ISRO). ISRO. August 30, 2010. Archived from the original on 2012-10-15. Retrieved 2010-09-02.
  27. "NASA and ESA to partner for chandrayaan-2". Skaal Times. February 04, 2010. Archived from the original on 2011-07-15. Retrieved 2010-02-22. {{cite news}}: |first= missing |last= (help); Check date values in: |date= (help); Cite has empty unknown parameter: |coauthors= (help)
  28. Payloads for ಚಂದ್ರಯಾನ-2ರ ಅಭಿಯಾನಕ್ಕೆ ಉಪಕರಣಗಳನ್ನು ಅಂತಿಮಗೊಳಿಸಲಾಗಿದೆ, ಇದು 7 ಉಪಕರಣಗಳನ್ನು ಕೊಂಡೊಯ್ಯುತ್ತದೆ.
  29. ಜುಲೈ೨೩-೭-೨೦೧೯-ಇಳಿಯುವ ಕನೆಯ ೧೫ ನಿಮಿಷ
  30. https://www.deccanherald.com/national/big-chandrayaan-2-move-lander-separates-from-orbiter-758630.html Big Chandrayaan-2 move: Lander separates from Orbiter Rasheed Kappan, Bengaluru, SEP 02 2019,
  31. ಚಂದ್ರನ ಮತ್ತಷ್ಟು ಸನಿಹಕ್ಕೆ ‘ಚಂದ್ರಯಾನ–2’: ಆರ್ಬಿಟರ್‌ನಿಂದ ಬೇರ್ಪಟ್ಟ ಲ್ಯಾಂಡರ್;ಏಜೆನ್ಸಿಸ್;d: 02 ಸೆಪ್ಟೆಂಬರ್ 2019
  32. ‘ಚಂದ್ರಯಾನ 2’ರ ಕಣ್ಣಿನಲ್ಲಿ ಭೂಮಿ ಹೀಗೆ ಕಾಣುತ್ತೆ:‘ಚಂದ್ರಯಾನ 2 ಉಪಗ್ರಹ ಕಳಿಸಿದ ಚಿತ್ರ:- ಇಸ್ರೋ-
  33. [ "Department of Space Annual Report 2016-17" (PDF). ISRO.gov.in. Archived from the original (PDF) on 18 March 2017. Retrieved 20 July 2019.]
  34. D. S., Madhumathi (25 October 2016). "ISRO starts landing tests for Chandrayaan-2 mission". The Hindu. Retrieved 28 October 2016.]
  35. Nair, Avinash (31 May 2015). "ISRO to deliver "eyes and ears" of Chandrayaan-2 by 2015-end". The Indian Express. Retrieved 7 August 2016.
  36. Chandrayaan-2 one step closer to Moon landing Press Trust of India, Bengaluru, ;SEP 03 2019
  37. https://www.prajavani.net/stories/national/chandrayaan-2-moon-landing-662105.html ‘ಚಂದ್ರಯಾನ–2’: ಚಂದ್ರನ ಸನಿಹಕ್ಕೆ ವಿಕ್ರಂ ಲ್ಯಾಂಡರ್;ಪ್ರಜಾವಾಣಿ ;Published: 03 ಸೆಪ್ಟೆಂಬರ್ 2019,
  38. - ವಿಕ್ರಮ್‌ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕ್ಷಣಗಳ ಮಾಹಿತಿ; ಪ್ರಜಾವಾಣಿ d: 06 ಸೆಪ್ಟೆಂಬರ್ 2019
  39. ಚಂದ್ರನ ನೆಲ ಸ್ಪರ್ಶದ ಕೊನೆ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡ ಲ್ಯಾಂಡರ್‌ ವಿಕ್ರಮ್;ಪ್ರಜಾವಾಣಿ ;d: 07 ಸೆಪ್ಟೆಂಬರ್ 2019
  40. "Chandrayaan-2 update:Mission Plan of Chandrayaan-2 spacecraft - ISRO". www.isro.gov.in. Archived from the original on 2019-07-24. Retrieved 2019-07-24.
  41. "Live media coverage of the landing of Chandrayaan-2 on lunar surface - ISRO". www.isro.gov.in. Archived from the original on 2019-09-02. Retrieved 2019-09-02.
  42. ಉಲ್ಲೇಖ ದೋಷ: Invalid <ref> tag; no text was provided for refs named ISRO_PR_20190722
  43. "Chandrayaan2 update: First earth bound maneuver - ISRO". www.isro.gov.in. Archived from the original on 2019-07-24. Retrieved 2019-07-24.
  44. "Chandrayaan2 update: Second earth bound maneuver". ISRO.gov.in. 26 July 2019. Archived from the original on 25 July 2019. Retrieved 26 July 2019. {{cite web}}: Cite has empty unknown parameter: |dead-url= (help)
  45. "Chandrayaan2 update: Third earth bound maneuver - ISRO". www.isro.gov.in. Archived from the original on 2019-07-29. Retrieved 2019-07-29.
  46. "Chandrayaan2 update: Fourth earth bound maneuver". www.isro.gov.in. Archived from the original on 2019-08-02. Retrieved 2019-08-02.
  47. "Chandrayaan2 update: Fifth earth bound maneuver". www.isro.gov.in. Archived from the original on 2019-08-06. Retrieved 2019-08-06.
  48. "Chandrayaan-2 Successfully enters Lunar Transfer Trajectory". www.isro.gov.in. Archived from the original on 2019-08-13. Retrieved 2019-08-14.
  49. "Chandrayaan-2 update: Lunar Orbit Insertion". www.isro.gov.in. Archived from the original on 2019-08-20. Retrieved 2019-08-20.
  50. "Chandrayaan-2 update: Second Lunar Orbit Maneuver". www.isro.gov.in. ISRO. Archived from the original on 21 ಆಗಸ್ಟ್ 2019. Retrieved 21 August 2019. {{cite web}}: Cite has empty unknown parameter: |dead-url= (help)
  51. "Chandrayaan-2 update: Third Lunar bound Orbit Maneuver". www.isro.gov.in. ISRO. Archived from the original on 28 ಆಗಸ್ಟ್ 2019. Retrieved 28 August 2019. {{cite web}}: Cite has empty unknown parameter: |dead-url= (help)
  52. "Chandrayaan-2 update: Fourth Lunar Orbit Maneuver". www.isro.gov.in. ISRO. Archived from the original on 30 ಆಗಸ್ಟ್ 2019. Retrieved 30 August 2019. {{cite web}}: Cite has empty unknown parameter: |dead-url= (help)
  53. "Chandrayaan-2 update: Fifth Lunar Orbit Maneuver". www.isro.gov.in. ISRO. Archived from the original on 3 ಸೆಪ್ಟೆಂಬರ್ 2019. Retrieved 1 September 2019. {{cite web}}: Cite has empty unknown parameter: |dead-url= (help)
  54. "Chandrayaan-2 update: Vikram Lander successfully separates from Orbiter - ISRO". www.isro.gov.in. Archived from the original on 3 ಸೆಪ್ಟೆಂಬರ್ 2019. Retrieved 2 September 2019.
  55. "Chandrayaan-2 update: First de-orbiting maneuver - ISRO". www.isro.gov.in. Archived from the original on 3 ಸೆಪ್ಟೆಂಬರ್ 2019. Retrieved 3 September 2019.
  56. "Chandrayaan-2 update: Second de-orbiting maneuver - ISRO". www.isro.gov.in. Archived from the original on 2019-09-04. Retrieved 2019-09-03.

ಬಾಹ್ಯ ಕೊಂಡಿಗಳು

ಬದಲಾಯಿಸಿ