ವರದಹಳ್ಳಿ ಅಥವಾ ವರದಪುರ ಅಥವಾ ವದ್ದಳ್ಳಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಶ್ರೀ ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ ಮತ್ತು ಸಮಾಧಿ ಹೊಂದಿದ ಸ್ಥಳ. ಇಲ್ಲಿ ಶ್ರೀಧರ ಸ್ವಾಮಿಗಳು ಸ್ಥಾಪಿಸಿದ ಆಶ್ರಮ, ಅವರ ಸಮಾಧಿ ಮತ್ತು ಧರ್ಮ ಧ್ವಜಗಳನ್ನು ಕಾಣಬಹುದು. ಇತಿಹಾಸ ಪ್ರಸಿದ್ಧವಾದ ಶ್ರೀ ದುರ್ಗಾಂಬಾ ದೇವಾಲಯ ಇಲ್ಲಿದೆ.[]

ವರದಪುರ

ವರದಪುರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಶಿವಮೊಗ್ಗ
ನಿರ್ದೇಶಾಂಕಗಳು 14.167° N 75.00° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
{{{population_total}}}
 - {{{population_density}}}/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 577401
 - +91-(0)8183
 - KA-15


ವರದಹಳ್ಳಿಯಲ್ಲಿರುವ ವೀಕ್ಷಣಾರ್ಹ ಸ್ಥಳಗಳು

ಬದಲಾಯಿಸಿ

ಗೋಮುಖ ತೀರ್ಥ

ಬದಲಾಯಿಸಿ

ವರದಹಳ್ಳಿಗೆ ಬಂದಾಗ ಮೊದಲು ಸಿಗೋದೇ ಒಂದು ಕೊಳ. ಅದರ ಪಕ್ಕದಲ್ಲಿ ಇರೋ ಗೋಮುಖ ತೀರ್ಥ. ವರ್ಷವಿಡೀ ಬೀಳೋತ್ತಿರೋ ಈ ತೀರ್ಥದಲ್ಲಿ ಅನೇಕ ಔಷಧೀಯ ಗುಣಗಳಿವೆ ಎಂದು ಭಕ್ತರು ನಂಬುತ್ತಾರೆ

ಶ್ರೀಧರರ ತಪಸ್ಸಿನ ಸ್ಥಳ

ಬದಲಾಯಿಸಿ

ಹಾಗೇ ತೀರ್ಥದ ಪಕ್ಕದಲ್ಲಿನ ಮೆಟ್ಟಿಲುಗಳಲ್ಲಿ ಮೇಲಕ್ಕೆ ಹತ್ತಿ ಬಂದರೆ ಶ್ರೀಧರ ಸ್ವಾಮಿಗಳು ಕೂತು ತಪಸ್ಸು ಮಾಡುತ್ತಿದ್ದರು ಎನ್ನೋ ಸ್ಥಳ ಸಿಗುತ್ತದೆ. ಅಲ್ಲಿ ಶ್ರೀಧರ ತೀರ್ಥ ಬೆಟ್ಟದ ತಪ್ಪಲಿಂದ, ಬಂಡೆಯ ಸಂದಿಯಿಂದ ಬಂದು ಬೀಳುವುದು ಕಾಣುತ್ತದೆ. ಹಾಗೇ ಬಲಕ್ಕೆ ತಿರುಗಿದರೆ ಗುರುಕುಲ ಕಾಣಿಸುತ್ತದೆ. ಇದರ ಪಕ್ಕದಲ್ಲಿನ ಕಾಡನ್ನು ದೇವರ ಕಾಡು ಎಂಬ ಸಂರಕ್ಷಿತ ಅರಣ್ಯವನ್ನಾಗಿ ಘೋಷಿಸಲಾಗಿದೆ

ಶ್ರೀಧರರ ಸಮಾಧಿ ಸ್ಥಳ

ಬದಲಾಯಿಸಿ

ಶ್ರೀಧರರ ತಪಸ್ಸಿನ ಜಾಗದಿಂದ ಬಲಗಡೆ ಇರುವ ಮೆಟ್ಟಿಲುಗಳಲ್ಲಿ ಮೇಲೆ ಸಾಗಿದರೆ ಮೊದಲೊಂದು ಗುರುಕುಲವೂ, ಅದಕ್ಕಿಂತ ಮೇಲೆ ಸಾಗಿದರೆ ಸಾಮವೇದ ಪಾಠಶಾಲೆಯೂ ಕಾಣುತ್ತದೆ. ಅದರ ಪಕ್ಕದಲ್ಲಿ ಶೀಧರರು ಸಮಾಧಿ ಹೊಂದಿದ ಜಾಗ, ಆ ಜಾಗದಲ್ಲಿ ಕಟ್ಟಲಾದ ಮಂದಿರವನ್ನು ಕಾಣಬಹುದು. ಈ ಮಂದಿರ ಬೆಳಗ್ಗೆ ಆರರಿಂದ ಮಧ್ಯಾಹ್ನ ೨ರವರೆಗೆ, ಸಂಜೆ ನಾಲ್ಕರಿಂದ ಎಂಟರವರೆಗೆ ತೆಗೆದಿರುತ್ತದೆ ಎಂಬ ಮಾಹಿತಿಫಲಕವನ್ನು ಮಂದಿರದ ಹೊರಗೆ ಕಾಣಬಹುದು. ಮಂದಿರದ ಎಡಭಾಗದಲ್ಲಿ ಶ್ರೀಧರರ ಏಕಾಂತಗುಹೆ ಕಾಣುತ್ತದೆ. ಭಕ್ತರು ನೋಡಲನುವಾಗುವಂತೆ ಅದಕ್ಕೊಂದು ಕಿಟಕಿಯಿಟ್ಟಿದ್ದಾರೆ. ಅಲ್ಲಿಗೆ ಬಂದ ಭಕ್ತರು ಆ ಕಿಟಕಿಯಲ್ಲಿ ನಾಣ್ಯಗಳನ್ನು ಹಾಕುವುದು ಒಂದು ಪದ್ದತಿ.ಲ್ಲೇ ಪಕ್ಕದಲ್ಲಿ ಶ್ರೀಧರರ ಜೀವನವನ್ನು ನೆನಪಿಸುವ ಅಪರೂಪದ ಕಪ್ಪು ಬಿಳುಪು ಛಾಯಾಚಿತ್ರಗಳ ಸಂಗ್ರಹವಿದೆ. ನವರಾತ್ರಿಯ ಸಮಯದಲ್ಲಿ ಇಲ್ಲಿನ ಸಾಮವೇದ ಗುರುಕುಲದಲ್ಲಿ ಶಾರದಾದೇವಿಯ ಮೂರ್ತಿಯನ್ನಿಟ್ಟು ಅಲಂಕರಿಸಿರುತ್ತಾರೆ. ದತ್ತಜಯಂತಿ ಇಲ್ಲಿನ ಮತ್ತೊಂದು ಆಕರ್ಷಣೆ.

ಧರ್ಮಧ್ವಜ

ಬದಲಾಯಿಸಿ

ಸಾಮವೇದ ಗುರುಕುಲದ ಪಕ್ಕದ ಮರವೊಂದರಲ್ಲಿ ಧರ್ಮ ಧ್ವಜಕ್ಕೆ ದಾರಿ ಎಂಬ ಬೋರ್ಡು ಕಾಣುತ್ತದೆ.ಅಲ್ಲಿಂದ ಸುಮಾರು ಒಂದೂವರೆ ಕಿಲೋಮೀಟರ್ ನಡೆದರೆ ಧರ್ಮಧ್ವಜ ಸಿಗುತ್ತದೆ. ಅಂದ ಹಾಗೆ ಶ್ರೀಧರರು ತಪಸ್ಸಿಗೆ ಕೂತ ಸ್ಥಳದ ಎಡದಿಂದ ಸಾಗೋ ಮಣ್ಣ ಹಾದಿಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ಅಲ್ಲೂ ಧರ್ಮಧ್ವಜಕ್ಕೆ ಸಾಗೋ ಸಣ್ಣ ಹಾದಿಯೊಂದಿದೆ. ಆದರೆ ಅಲ್ಲಿ ಮಾರ್ಗಸೂಚಿ ಫಲಕಗಳಿಲ್ಲ. ಇಲ್ಲಿ ಶ್ರೀಧರರು ತಪಸ್ಸಿಗೆ ಕೂರುತ್ತಿದ್ದ ಮತ್ತೊಂದು ಜಾಗ, ಅವರ ಮೂಲ ಆಶ್ರಮಗಳನ್ನೂ ಕಾಣಬಹುದು. ಇಲ್ಲಿಂದ ಶರಾವತಿ ಹಿನ್ನೀರಿನ, ಮುಳುಗಡೆಯ ದೃಶ್ಯಗಳನ್ನೂ ನೋಡಬಹುದು. "ಅಮೃತ ಘಳಿಗೆ" ಚಿತ್ರದ ಹಾಡುಗಳನ್ನು ಈ ಧರ್ಮಧ್ವಜದ ಪಕ್ಕದಲ್ಲೇ ಚಿತ್ರಿಸಲಾಗಿದೆ. ಅಲ್ಲಿಂದ ಹಾಗೇ ವರದಳ್ಳಿಯ ಮತ್ತೊಂದು ಆಕರ್ಷಣೆ ದೇವಿ ದೇವಸ್ಥಾನಕ್ಕೆ ಇಳಿದು ಹೋಗೋ ದಾರಿಯಿತ್ತಂತೆ. ಆದರೆ ಈಗ ಅಲ್ಲೆಲ್ಲಾ ಬೇಲಿ ಹಾಕಿ ಇಳಿದು ಹೋಗುವುದು ಸಾಧ್ಯವಿಲ್ಲ

ವರದಹಳ್ಳಿಯ ದುರ್ಗಾಂಬಾ ದೇವಸ್ಥಾನ

ಬದಲಾಯಿಸಿ

ದೇವಿಯು ಮೂಕಾಸುರನನ್ನು ಒದ್ದಾಗ ಅವನು ಇಲ್ಲಿ ಬಂದು ಬಿದ್ದನಂತೆ. ಹಾಗಾಗಿ ದೇವಿ ಒದೆದ ಹಳ್ಳಿ "ವದ್ದಳ್ಳಿ" ಅಂತ ನಾಮಕರಣವಾಯಿತೆಂದು ಜನರು ಹೇಳುತ್ತಾರೆ. ಇಲ್ಲಿನ ದರ್ಶನದ ಸಮಯ ಮೂರು ಘಂಟೆ. ಹಾಗಾಗಿ ಇಲ್ಲಿಗೆ ಬರುವವರೆಲ್ಲಾ ಮೊದಲು ಶ್ರೀಧರ ಆಶ್ರಮದ ದರ್ಶನ ಮುಗಿಸಿ ಇಲ್ಲಿಗೆ ಬರುತ್ತಾರೆ. ಇಲ್ಲೇ ಪಕ್ಕದಲ್ಲಿ ರಾಮನ, ಹನುಮನ ಸಣ್ಣ ಗುಡಿಗಳೂ ಇವೆ. ಪಕ್ಕದಲ್ಲಿ ಶ್ರೀಧರ ಸ್ವಾಮಿಗಳ ಬೃಂದಾವನವನ್ನೂ ನೋಡಬಹುದು. ಇದನ್ನು ಗಮನಿಸಿ ನೋಡದಿದ್ದರೆ ದಾರಿಯಲ್ಲಿ ಮರೆತೇ ಹೋಗುತ್ತದೆ ! ಇಲ್ಲಿ ಸಮಾಧಿಗಳು, ಮತ್ತು ಪ್ರತಿಯೊಂದರ ಬಳಿಯೂ ಶಿವಲಿಂಗಗಳಿವೆ

ವರದಹಳ್ಳಿಯ ಆಶ್ರಮದಲ್ಲಿ ಮಧ್ಯಾಹ್ನ ೧೨:೩೦ ರಿಂದ ೨:೩೦ರವರೆಗೆ ಊಟದ ವ್ಯವಸ್ಥೆಯಿರುತ್ತದೆ.

ತಲುಪುವ ದಾರಿ

ಬದಲಾಯಿಸಿ

ವರದಹಳ್ಳಿಯು ಸಾಗರದಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಗೆ ತಲುಪಲು ಅನೇಕ ದಾರಿಗಳಿವೆ:

ಸಾಗರದಿಂದ ವರದಹಳ್ಳಿಗೆ ಹೋಗಲು ಗಂಟೆಗೊಂದರಂತಾದರೂ ಬಸ್ಸುಗಳು ಸಿಗುತ್ತವೆ. ಸ್ವಂತ ವಾಹನ, ಆಟೋ, ಮಾರುತಿಗಳಲ್ಲೂ ಹೋಗಬಹುದು.

ಚಿತ್ರಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ