ಲಿಂಗ ವಿವಕ್ಷೆ
ಅರ್ಥ ಗಮಯತಿ’ – ಎಂಬ ವ್ಯುತ್ಪತ್ತಿಯನ್ನು ಹೇಳುತ್ತಾರೆ. ಅಡಗಿಕೊಂಡಿರುವ ಅರ್ಥವನ್ನು ಗಮನಕ್ಕೆ ಬರುವಂತೆ ಮಾಡುವುದೇ ಲಿಂಗ ಎನಿಸುತ್ತದೆ. ‘ಅರ್ಥ’ ಎಂದರೆ ಹೇಳಬೇಕಾದ ವಿಷಯ. ಅಂದರೆ ಹೇಳಬೇಕಾದುದನ್ನು ತಿಳಿಸುವ ಶಬ್ದವೇ ಅರ್ಥ. ಲಿಂಗ ಎಂಬುದಕ್ಕೆ ವ್ಯಾವಹಾರಿಕವಾಗಿ ಸ್ತ್ರೀ ಪುರುಷ ವ್ಯತ್ಯಾಸದ ಸಂಜ್ಞೆ ಎಂಬರ್ಥವೂ ಇದೆ. [೧]
ಲಿಂಗ ಶಬ್ದದ ವ್ಯಾಖ್ಯೆ
ಬದಲಾಯಿಸಿಕ್ರಿಯೆಯನ್ನು ಹೆಳದಿರತಕ್ಕದ್ದು, ವಿಭಕ್ತಿಯನ್ನು ಹೊಂದಿರತಕ್ಕದ್ದು, ಅರ್ಥವನ್ನು ಪಡೆದಿರತಕ್ಕದ್ದು ಲಿಂಗವೆನಿಸುತ್ತದೆ. [ಸೂತ್ರ : 82] ಲಿಂಗ ಶಬ್ದಕ್ಕೆ ಅನೇಕಾರ್ಥಗಳಿವೆ. ಲಿಂಗ ಶಬ್ದವು ಜೈನ ವ್ಯಾಕರಣ ಪರಂಪರೆಯ ಪರಿಭಾಷಾ ಶಬ್ದವಾಗಿ ಪ್ರಯೋಗಕ್ಕೆ ಬಂದಿದೆ. ಆ ಪ್ರಕಾರ ಲಿಂಗ ಎಂದರೆ ಪ್ರಕೃತಿ ಅಥವಾ ಪ್ರಾತಿಪಾದಿಕವೆಂದು ಅರ್ಥ. ಪ್ರಾತಿಪಾದಿಕ ಎಂದರೆ ನಾಮಪದದ ಮೂಲರೂಪ. ಯವುದೊಂದು ಪದಕ್ಕೆ, ಪ್ರತ್ಯಯ ಸೇರುವಾಗ ಮೂಲದಲ್ಲಿ ಪ್ರಕೃತಿ ಇರುತ್ತದೆ. ಈ ಪ್ರಕೃತಿಯ ವಸ್ತುಗಳನ್ನು ಹೇಳುವಲ್ಲಿ ಪ್ರಾತಿಪದಿಕಾರ್ಥದಲ್ಲಿ ಲಿಂಗವನ್ನು ಹೊಂದುತ್ತದೆ. ಇದು ನಾಮಪದ ಕ್ರಿಯೆಯನ್ನು ಹೇಳುವಲ್ಲಿ ಧಾತುವನ್ನು ಆಶ್ರಯಿಸುತ್ತದೆ. – ಇದುವೇ ಕ್ರಿಯಾಪದ. ನಾಮಪದಗಳು - ನಾಮವಿಭಕ್ತಿ ಪ್ರತ್ಯಯಗಳನ್ನೂ ಪಡೆದುಕೊಳ್ಳುತ್ತದೆ. ಕೇಶಿರಾಜನು ಇಲ್ಲಿ ಕ್ರಿಯಾರಹಿತವಾದ ವಿಭಕ್ತಿ ವಿಹೀನವಾದ ಆದರೆ ಅರ್ಥವತ್ತಾದ ಘಟಕವನ್ನು ‘ಲಿಂಗ’ ವೆನ್ನುವಲ್ಲಿ ನಮಪದದ ಮೂಲರಹಸ್ಯವನ್ನೇ ಭೇದಿಸಿದ್ದಾನೆ. ಕನ್ನಡದಲ್ಲಿ ನಾಮಪದಗಳಿಗೆ ನೇರವಾಗಿ ನಾಮ ವಿಭಕ್ತಿ ಪ್ರತ್ಯಯಗಳು ಹತ್ತುವುದಿಲ್ಲ. ಅವು ಮೊದಲುಲಿಂಗವಾಗಿ ನಿಂತು, ನಂತರ ವಿಭಕ್ತಿ ಪ್ರತ್ಯಯವನ್ನು ಪಡೆಯುತ್ತವೆ. ಉದಾ : ಕೃದಂತ ಪದಗಳಲ್ಲಿನ ನಲಿದಂ, ನಲಿವಂ ಎಂಬಲ್ಲಿನ ಭೂತ, ಭವಿಷ್ಯತ್ ಕಾಲವಾಚಿ ಪ್ರತ್ಯಯಗಳಾದ ದಂ, ವಂ ಗಳನ್ನು ತೆಗೆದು ನಲಿದ ಎಂದಿಟ್ಟುಕೊಂಡು ಮುಂದೆ ಮಮಿಂಕೆಯದದೊಳೆ ಎಂಬ ನಮವಿಭಕ್ತಿ ಪ್ರತ್ಯಯಗಳನ್ನು ಹಚ್ಚಲಾಗುತ್ತದೆ. ಉದಾ: ನಲಿದಂ, ನಲಿದನಂ, ನಲಿದನಿಂ, ನಲಿದಂಗೆ, ನಲಿದನತ್ತಣಿಂ, ನಲಿದನ, ನಲಿದನೊಳ್.
ಚರ್ತುವಿಧ ಲಿಂಗ
ಬದಲಾಯಿಸಿಕ್ರಿಯೆಯನ್ನು ಹೆಳದಿರತಕ್ಕದ್ದು, ವಿಭಕ್ತಿಯನ್ನು ಹೊಂದಿರತಕ್ಕದ್ದು, ಅರ್ಥವನ್ನು ಪಡೆದಿರತಕ್ಕದ್ದು ಲಿಂಗವೆನಿಸುತ್ತದೆ. [ಸೂತ್ರ : 82] ಕೇಶಿರಾಜನು ಲಿಂಗವೆಂಬ ಪದವನ್ನು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಎಂಬ ಸಮನ್ಯ ಅರ್ಥದಲ್ಲಿ ಹೇಳದೆ ವಿಶೇಷ ಅರ್ಥದಲ್ಲಿ ವಿವರಿಸಿದ್ದಾನೆ. ಕನ್ನಡದಲ್ಲಿ ಮೂಲ ಪ್ರಕೃತಿಗಳಿಗೆ ನೇರವಾಗಿ ವಿಭಕ್ತಿಪ್ರತ್ಯಯಗಳು ಹತ್ತುವುದಿಲ್ಲ. ನಮ ಪ್ರಕೃತಿ ಮೊದಲು ಲಿಂಗವಾಗಿ, ವಿಬಕ್ತಿ ಪ್ರತ್ಯಯಗಳನ್ನು ಪಡೆಯಲು ಅರ್ಹವಾಗುತ್ತದೆ. ಕೇಶಿರಾಜನು ಧಾತುಗಳಲ್ಲಿ ಸಲ್ಲದ ನಮಪದಗಳ ಅರ್ಥವತ್ತಾದ ಮೂಲ ಘಟಕಗಳನ್ನು ಲಿಂಗವೆಂದು ಕರೆಯುತ್ತಾನೆ. ಉದಾದರಣೆಗೆ,
- ಗಿಡದಿಂದ = ಗಿಡ+ಅದ್+ಇಂದ. ಪದ = ಪ್ರಕೃತಿ+ಪ್ರಾತಿಪದಿಕಲಿಂಗ+ನಾಮವಿಭಕ್ತಿಪ್ರತ್ಯಯ
- ಮರದಿಂದ = ಮರ+ಅತ್+ಇಂದ.
[ನಾಮಪದದ ಮೂಲರೂಪ ಪ್ರಕೃತಿ ಅಥವಾ ಕ್ರಿಯಪದದ ಮೂಲಧಾತು. ನಮವಿಭಕ್ತಿ ಪ್ರತ್ಯಯಗಳನ್ನು ಹೊಂದುವ ಮೂಲ ಶಬ್ದ-ಪ್ರಾತಿಪದಿಕ] ಇಲ್ಲಿ, ಮರ=ನಾಮಲಿಂಗ - ಅತ್=ಪ್ರಾತಿಪದಿಕ - ಇಂದ=ವಿಭಕ್ತಿಪ್ರತ್ಯಯ > ನಾಮಪದ=ಲಿಂಗ+ಪ್ರಾತಿಪದಿಕ+ವಿಭಕ್ತಿಪ್ರತ್ಯಯ. ‘ಲಿಂಗ ಚತುಸ್ಟಯಂ’ಎಂದು ಹೇಳುತ್ತಾರೆ. ಅವುಗಳು,
- ಕೃತ್.
- ತದ್ಧಿತ.
- ಸಮಾಸ.
- ನಾಮ – ಎಂದು ನಾಲ್ಕು ಬಗೆ.
ನಾಮಪದದಂತೆಯೇ ಕೃತ್, ತದ್ಧಿತ, ಸಮಾಸ ಪ್ರಕೃತಿಗಳು ಬೇರೆ ಬೇರೆ ಪ್ರತ್ಯಯಗಳನ್ನು ಪಡೆದಾಗ ಅವು ಕೃತದಂತ, ತದ್ಧಿತಾಂತ, ಸಮಾಸ ಪದಗಳಾಗುವುವು.
ಕೃಲ್ಲಿಂಗ
ಬದಲಾಯಿಸಿಕೃತ್ ಪ್ರತ್ಯಯಾಂತ ಪದಗಳು ಕೃದಂತಗಳು. ಧಾತುಗಳಿಗೆ ಆಖ್ಯಾತ ವಿಭಕ್ತಿ ಪ್ರತ್ಯಯಗಳಲ್ಲದೆ ಸೇರುವ ಬೇರೆ ಕೆಲವು ಪ್ರತ್ಯಯಗಳನ್ನು ಕೃತ್ ಪ್ರತ್ಯಯಗಳೆಂದು ಕರೆಯುತ್ತಾರೆ. ಭೂತ-ಭವಿಷ್ಯತ್ ಕ್ರಿಯೆಗಳು ವಿಭಕ್ತಿಗಳನ್ನುಳಿದಾಗ ಕೃದಂತಗಳಾಗುತ್ತವೆ. ಉದಾ : ನೋಡಿದಂ, ನೋಡುವಂ ಎಂಬಲ್ಲಿನ ‘ಅಮ್’ ಉಳಿದು ನೋಡಿದ, ನೋಡುವ ಪದಗಳು ಧಾತುಗಳಿಂದ ಹುಟ್ಟಿಕೊಳ್ಳುವ ನಮಪದಗಳು ಕೃದಂತಗಳು. ಧಾತುಗಳಿಗೆ ಕೃತ್ ಪ್ರತ್ಯಯಗಳು ಸೇರಿದಗ ಕೃದಂತಗಳಾಗುವುವು. [ಧಾತು=ಕ್ರಿಯೆಯ ಮೂಲ ರೂಪ] ‘ಮಾಡಿದಂ’ ಎಂಬ ಭೂತಕಾಲ ಕ್ರಿಯಪದವನ್ನು ತೆಗೆದುಕೊಂಡು ಅದರೊಳಗಿನ ವಿಭಕ್ತಿ ಪ್ರತ್ಯಯವನ್ನು ತೆಗೆದು ಪುನಃ ಹಚ್ಚಿದಲ್ಲಿ ಅದು ಕೃದಂತ ಪದವಾಗುವುದು. ಮಾಡಿದ+ಮ್=ಮಾಡಿದಂ.
ತದ್ಧಿತ ಲಿಂಗ
ಬದಲಾಯಿಸಿ[ತದ್+ದ+ಹಿತ] ನಾಮಪದಗಳಿಗೆ ಹತ್ತುವ ಕಲ, ಗುಣ, ಉದ್ಯೋಗವಾಚಿ ಪ್ರತ್ಯಯಗಳನ್ನು ತದ್ಧಿತ ಪ್ರತ್ಯಯಗಳೆಂದೂ, ಅಂತಹ ಪದಗಳನ್ನು ತದ್ಧಿತಪದಗಳೆಂದೂ ಕರೆಯಲಾಗಿದೆ. ಉದಾ: ಕಲ್ಲುಕುಟಿಗ, ಕನ್ನಡಿಗ, ಬಳೆಗಾರ, ಮೋಸಗಾರ, ಗಣಿಗ, ಕಂಚುಗಾರ, ಬಿಲ್ಲುಗಾರ, ಮೀಂಗುಲಿಗ, ಮರುಕುಳಿ, ದೀವಟಿಗಂ, ಸಿರಿವಂತ, ಕಂಚುಗಾರ್ತಿ, ಹಾದರಗಿತಿ ಇತ್ಯಾದಿ. ಕೇಶಿರಾಜ 50ಕ್ಕಿಂತಲೂ ಹೆಚ್ಚು ತದ್ಧಿತ ಪ್ರತ್ಯಯಗಳನ್ನು ಹೇಳಿ ತದ್ಧಿತ ನಾಮ, ತದ್ಧಿತಭಾವನಾಮ, ತದ್ಧಿತಾವ್ಯಯವೆಂದು ವಿಭಾಗಿಸಿದ್ದಾನೆ.
ಸಮಾಸಲಿಂಗ
ಬದಲಾಯಿಸಿತೆಂ+ಗಾಳಿ=ತೆಂಗಾಳಿ. ಇದು ಸಮಾಸಲಿಂಗ. ಇದಕ್ಕೆ ವಿವಿಧ ವಿಭಕ್ತಿಪ್ರತ್ಯಯಗಳನ್ನು ಹಚ್ಚಿದಾಗ ಸಮಾಸಪದಗಳಾಗುವುವು. ಉದಾ : ತೆಂಗಾಳಿ+ಅಮ್=ತೆಂಗಾಳಿಯಂ. [ಅಭ್ಯಾಸಕ್ಕೆ-ಇಮ್ಮಾವು, ಈರಯ್ದು, ಗಿಡಮರಬಳ್ಳಿ, ಮುಂಗಯ್ ಇತ್ಯಾದಿ]
ನಾಮಲಿಂಗ
ಬದಲಾಯಿಸಿಅರಸ, ಇಂದ್ರ, ವರಾಹ, ಹರಿಣ, ಮೂಷಕ, ಗಿಡ, ಮರ, ಬಳ್ಳಿ ಇತ್ಯಾದಿಗಳು ನಮಲಿಂಗಗಳು. ಇವುಗಳಯ ನಾಮವಿಭಕ್ತಿ ಪ್ರತ್ಯಯಗಳನ್ನು ಪಡೆದುಕೊಂಡು ನಾಮಪದಗಳಾಗುವುವು. ಉದಾ : ಅರಸ+ಮ್=ಅರಸಂ. [ಮಮಿಂಕೆಯದದೊಳ್- ಪ್ರತ್ಯಯಗಳನ್ನು ಗಮನಿಸಿರಿ] ನಾಮಪ್ರಕೃತಿಗಳಲ್ಲಿ ಸಹಜನಾಮ ಪ್ರಕೃತಿಗಳು ಹಾಗೂ ಸಾಧಿತ ನಾಮಪ್ರಕೃತಿಗಳು ಅಥವಾ ನಿಷ್ಪನ್ನ ನಾಮಪ್ರಕೃತಿಗಳು ಎಂದು ಎರಡು ವಿಧ. ಸಹಜ ನಾಮಪ್ರಕೃತಿಗಳಲ್ಲಿ ಮನುಷ್ಯರ, ವಸ್ತುಗಳ, ಪ್ರಾಣಿಗಳ ಹೆಸರು, ಸಂಖ್ಯೆ, ಕಾಲ, ದಿಕ್ಕುಗ ಳನ್ನು ಸೂಚಿಸುವ ಹೆಸರು ಇವುಗಳ ಪ್ರಕೃತಿಗಳು ಬರುವುದುಂಟು.
ನವವಿಧ ಲಿಂಗ
ಬದಲಾಯಿಸಿಸಾಮನ್ಯವಾಗಿ ಲಿಂಗಗಳು ಮೂರು - ಪುಲ್ಲಿಂಗ, ಸ್ತ್ರೀಲಿಂಗ, ಮತ್ತು ನಪುಂಸಕಲಿಂಗ. ಆದರೆ ಕೇಶಿರಾಜನು ಲಿಂಗವೂ ಒಂಭತ್ತು ತೆರವೆಂದು ಹೇಳಿದ್ದಾನೆ. ಶಬ್ದಮಣಿದರ್ಪಣದ ಸೂತ್ರ ಸಂಖ್ಯೆ 98 ರಲ್ಲಿ ‘ಲಿಂಗಮೊಂಬತ್ತು ತೆರಂ’ ಎಂದು ವಿವರಿಸುತ್ತಾನೆ. ಕರ್ನಾಟಕ ಭಾಷೆಯಲ್ಲಿ ವಿಶೇಷವಾಗಿ 1. ಸ್ತ್ರೀಲಿಂಗ, 2. ಪುಲ್ಲಿಂಗ, 3. ನಪುಂಸಕಲಿಂಗ, 4. ಪುಂಸ್ತ್ರೀಲಿಂಗ, 5. ಸ್ತ್ರೀನಪುಂಸಕಲಿಂಗ, 6. ಪುಂನುಂಸಕಲಿಂಗ, 7. ತ್ರಿವಿಧಲಿಂಗ, 8. ವಿಶೇಷಾಧೀನಲಿಂಗ, 9. ಅವ್ಯಯಲಿಂಗ – ವೆಂದು ಲಿಂಗವು ಒಂಭತ್ತು ತೆರಂ - ಇದನ್ನು ನೀನು ತಿಳಿದುಕೋ ಎಂದಿದ್ದಾನೆ.
- ಸ್ತ್ರೀಲಿಂಗ – ಅರಸಿ, ದೇವಿ, ಮೇರಿ, ಸರಸ್ವತಿ ಇತ್ಯಾದಿ.
- ಪುಲ್ಲಿಂಗ – ಅರಸಂ, ರಾಮಂ, ಭೀಮಂ, ದೇವಂ
- ನಪುಂಸಕ ಲಿಂಗ – ಕರಡಿ, ಬೆಟ್ಟ, ಕನ್ನಡಿ, ಕಳಸ, ಕಿರೀಟ
- ಪುಂಸ್ತ್ರೀಲಿಂಗ – ಇವರ್ ಪುರುಷರ್, ಇವರ್ ಸ್ತ್ರೀಯರ್, ಅವರ್ ಪೆಂಡಿರ್, ಇವರ್ ತೊಳ್ತು, [ಇವರ್ ಪುರುಷರ್ ಎಂದೊಡನೆ ಸಂಪೂರ್ಣ ಪುಲ್ಲಿಂಗದ ಅರ್ಥವಾಗುತ್ತದೆ ಹೊರತು ಸ್ತ್ರೀಲಿಂಗವಲ್ಲ. ಅಂತೆಯೇ ಇವರ್ ಸ್ತ್ರೀಯರ್ ಎಂದರೆ ಪೂರ್ಣ ಸ್ತ್ರೀಲಿಂಗ. ಇಲ್ಲಿ ಪುರುಷರ ಮತ್ತು ಸ್ತ್ರೀಯರ ಎಂಬ ಲಿಂಗವನ್ನು ಅವೇ ಸೂಚಿಸುತ್ತವೆ. ಆದರೆ ಅವರ್, ಇವರ್, ಉವರ್, ಇವಂ ಇತ್ಯಾದಿ ಸರ್ವನಮಗಳು ಲಿಂಗಭೇದವಿಲ್ಲದ ಹತ್ತುತ್ತದೆ. ಇಲ್ಲಿ ಸರ್ವನಮಗಳಿಗೆ ಲಿಂಗವನ್ನು ಹೇಳಲಗಿದೆ. ಆದುದರಿಂದ ಕೇಶಿರಾಜನ ಲಿಂಗವಿವಕ್ಷೆ ವಿಚಿತ್ರವಾಗಿದೆ.]
- ಸ್ತ್ರೀನಪುಂಸಕ – ಆ ಪೆಣ್ಜಾಣೆ, ಆ ಪೆಣ್ ಬಂದುದು, [ಆ ಪೆಣ್ ಜಾಣೆ, ಆಪೆಣ್ ಬಂದುದು ಇತ್ತಯಾದಿ ಉದಹರಣೆಗಳು – ಆ ಹೆಣ್ಣು ಬಂತು, ಆ ಹೆಣ್ಣಿಗೆ ಬುದ್ಧಿಯಿಲ್ಲ, ಆ ಹೆಣ್ಣು ಜಣೆ ಎಂಬಿವು ನಮಗೆಲ್ಲಾ ತಿಳಿದಿರುವ ಪದಗಳೇ. ಸಂದರ್ಭೋಚಿತವಾಗಿ ಹೆಣ್ಣು ಪದ ಬಳಕೆಯಾಗಿದೆ. ಸ್ತ್ರೀ, ಸಿರಿ, ಲಕ್ಷ್ಮೀ ಇವು ಸ್ತ್ರೀಲಿಂಗಗಲು. ಆದರೆ ಸಿರಿ ಅಂದರೆ ಸಂಪತ್ತು, ಲಕ್ಷ್ಮೀ ಎಂದರೆ ಧನ ಇತ್ಯಾದಿಗಳು ನಪುಂಸಕಲಿಂಗಗಳು. ದೇವತೆ, ಕನ್ನಿಕೆ, ಪೆಣ್, ಸರಸ್ವತಿ ಇತ್ಯಾದಿಗಳು ಸ್ತ್ರೀಲಿಂಗವೂ ಹೌದು, ನಪುಂಸಕ ಲಿಂಗವೂ ಹೌದು. ಆದುದರಿಂದ ಇವು ಸ್ತ್ರೀ ನಪುಂಸಕ ಲಿಂಗ ಉದ : ದೇವತೆಯರ್ ಮೆಚ್ಚಿ ವರಮಂ ಅರಸಂಗೆ ಇತ್ತರ್ [ಸ್ತ್ರೀಲಿಂಗ], ಭಾರಿಸಿದುವು ಬಿಡದೆ ಜಡೆದು ವನದೇವತೆಗಳ್ [ ನಪುಂಸಕಲಿಂಗ], ಪರಮಜಿನೇಂರ ವಾಣಿಯೇ ಸರಸ್ವತಿ ಕೆರಃ್ನವಾಗಿ ಪೇಳಿಪಳ್ [ಸ್ತ್ರೀಲಿಂಗ] ಪರಮಚಿನೇಂದ್ರವಾಣಿಯೇ ಸರಸ್ವತಿ, ಬೇರದು ಪೆಣ್ಣರೂಪಂ [ ನಪುಂಸಕಲಿಂಗ]]
- ಪುಂನಪುಂಸಕ – ರವಿ ಮೂಡಿದಂ, ಚಂದ್ರ ಉದಯಿಸಿದಂ
- ತ್ರಿವಿಧ ಲಿಂಗ - ನೀನರಸಂ, ನೀನ್ ಶಿಶು, ನೀನ್ ಪಶು, - ನೀನ್, ಆನ್, ತಾನ್, ಏನ್, ಆರ್, ಏತರ್, ಏತಕ್ಕೆ, ಅದಕ್ಕೆ, ಶಿಶು, ಹಸುಳೆ, ಮಗು, ಕೂಸು ಇತ್ಯದಿಗಳು ತ್ರಿಲಿಂಗಕ್ಕೆ ಉದಾ.
- ವಾಚ್ಯಲಿಂಗ – ಇದರ ಇನ್ನೊಂದು ಹೆಸರು ವಿಶೇಷಾಧೀನಲಿಂಗ. ನೇರಿದನಿವಂ, ನೇರಿದಳಿವಳ, ನೊಂದಿದುದು, £ಅಭಿಮಾನಿ, ದಾನಿ, ಆಭಿಮಾನಿ ಅವನ್-ಅವಳ್-ಅದು, ದಾನಿ ಅವನ್-ಅವಳ್-ಅದು, - ಸಾಧು, ಚಂಡಿ,ಭೋಗಿ, ಸುಖಿ, ಹೇಡಿ, ಕವಿ, ಗುರು, ಲಘು ಇತ್ಯಾದಿಗಳು ವಾಚ್ಯಲಿಂಗಗಳು. ಇಲ್ಲಿ ವಿಶೇಷಕ್ಕೆ ಲಿಂಗವು ಅಧೀನವಾಗಿ ಹೇಳಲ್ಪಡುತ್ತದೆ. ಅಂದರೆ, ವಿಶೇಷಕ್ಕೆ ಅಧೀನ, ವಿಶೇಷಣ ಬರುವುದರಿಂದ ಅದು ವಿಶೇಷದ ಲಿಂಗವನ್ನೇ ಹೊಂದುತ್ತದೆ. ಉದಾ: ನೇರಿದನಿವಂ ಎಂಬ ಪ್ರಯೋಗ – ಇಲ್ಲಿ ಇವಂ ವಿಶೇಷಕ್ಕೆ ಲಿಂಗವು ಅಧೀನವಾಗಿ ಹೇಳಿದೆ. ನೇರಿದನ್+ಇವಂ ಎಂದರೆ ಅನ್ ಎಂಬ ಪುಲ್ಲಿಂಗ ಸೂಚಕ ಪ್ರತ್ಯಯ ಸೇರಿ ನೇರಿದ+ಅನ್+ಇವಂ = ನೇರಿದನಿವಂ ಆಹುತ್ತದೆ. ನಾನು, ನೀನು, ತಾನು, ನಂ, ಅದು, ಇದು, ಅವನ್, ಅವಳ್, ಎಂಬ ಸರ್ವನಾಮಗಳಿಗೆ, ಬಿಳಿದು, ಕರಿದು, ಒಳ್ಳೆಯದು, ಕೆಟ್ಟದ್ದು, ಎಂಬ ಗುಣವಾಚಕಗಳಿಗೆ, ಹಲವು, ಕೆಲವು ಇತ್ಯಾದಿ ಪರಿಮಾಣಸೂಚಕ ಪದಗಳಿಗೆ ಲಿಂಗಭೇದವಿಲ್ಲ. ಹಾಗಾಗಿ ಕೇಶಿರಾಜ ಇವುಗಳನ್ನು ವಾಚ್ಯಲಿಂಗಗಳೆಂದು ಕರೆದಿದ್ದಾನೆ. ಅವಂ ಅಭಿಮಾನಿ, ಅವಂ ದಾನಿ, ಅವಳ್ ಚಂಡಿ, ಅದು ಗುರು, ಇದು ಲಕ್ಷ್ಮೀ – ಅವಂ ಎನ್ನುವುದು ವಿಶೇಷ ಲಿಂಗವನ್ನು ಪಡೆದು ಪುಲ್ಲಿಂಗವಾಗುತ್ತದೆ.
- ಅವ್ಯಯಲಿಂಗ - ಭೋಂಕನೆ, ಮೆಲ್ಲನೆ, ಭೋಂಕನೆ ಬಂದನ್-ಬಂದಳ್, ಮೆಲ್ಲನೆ ಬಂದನ್-ಬಂದಳ್-ಬಂದುದು, ತೊಟ್ಟನೆ, ಕೆಮ್ಮನೆ, ಇಮ್ಮನೆ, ಕೆಚ್ಚನೆ, ಪಚ್ಚನೆ, ಬೆಚ್ಚರಂ, ನಿರ್ನೆರಂ, ಸೂಡಂ ಬಾಡಂ ಇತ್ಯಾದಿ ಪದಗಳು, ಅಂತೆವೀಲ್, ದಲ್, ಮಿಗೆ, ವಲಂ, ಕೆನ್ನಂ ಇವುಗಳೆಲ್ಲ ಕನ್ನಡದ ಅವಯಯವಾದುದರಿಂದ ಇವುಗಳು ಅವ್ಯಯಲಿಂಗ ಎನಿಸುವುದು. ಅವ್ಯಯ ಎಂದರೆ ವ್ಯಯವಿಲ್ಲದ್ದು. ಕೃತ್ ಪ್ರತ್ಯಯಗಳನ್ನಾಗಲೀ ಆಖ್ಯಾತ ಪ್ರತ್ಯಯಗಳನ್ನಾಗಲೀ ಹೊಂದಿರುವ ಪದಗಳು ಅವ್ಯಯಗಳು ಎಂಬ ಹೆಸರು ಪಡೆದಿವೆ.
[ಕೇಶಿರಾಜನು ಹೀಗೆ ಹೇಳಲು ಕಾರಣವಿಲ್ಲದೇ ಇಲ್ಲ. ಸಂಸ್ಕøತ ವ್ಯಾಕರಣವನ್ನು ಅನುಸರಿಸಿ ಕನ್ನಡ ವ್ಯಾಕರಣವನ್ನು ಬರೆಯಲು ಹೊರಟ ಅವನಿಗೆ ಸಂಸ್ಕøತ ಇದಕ್ಕೆ ಅಡ್ಡಿಯಾಗಿರಬೇಕು. ಆದರೆ ಕೊನೆಗೆ ಅವನೇ ಈ ಒಂಭತ್ತು ತೆರನಾದ ಲಿಂಗಗಳನ್ನು ಒಪ್ಪುವುದಿಲ್ಲ]
ತ್ರಿವಿಧ ಲಿಂಗ
ಬದಲಾಯಿಸಿಕೇಶಿರಾಜನು ಲಿಂಗಂ ಒಂಭತ್ತುತೆರಂ ಎಂದು ಹೇಳಿದರೂ ಕನ್ನಡದ ಸಂಧರ್ಭದಲ್ಲಿ ಲಿಂಗಗಳು ಮೂರೇ ಮೂರು ಎನ್ನುತ್ತಾನೆ. ಅವುಗಳು 1. ಪುಲ್ಲಿಂಗ, 2. ಸ್ತ್ರೀಲಿಂಗ, 3. ನಪುಂಸಕಲಿಂಗ.
- ಪುಲ್ಲಿಂಗ – ಮನುಷ್ಯರಲ್ಲಿ ಗಂಡಸರನ್ನು ಸೂಚಿಸುವ ನಾಮಪದಗಳು ಮಾತ್ರ ಪುಲ್ಲಿಂಗ ಶಬ್ದಗಳು. ಉದಾ: ರಾಮ, ಭೀಮ, ಸೋಮ.
- ಸ್ತ್ರೀಲಿಂಗ – ಮನುಸ್ಯರಲ್ಲಿ ಹೆಂಗಸರನ್ನು ಸೂಚಿಸುವ ಪದಗಳು – ಉದಾ : ಸೀತಾ, ಗೀತಾ, ಮಾತಾ.
- ನಪುಂಸಕಲಿಂಗ – ಮನುಷ್ಯರನ್ನುಳಿದು ಇತರ ಪ್ರಾಣಿವರ್ಗ ಹಾಗೂ ನಿರ್ಜೀವ ವಸ್ತುಗಳನ್ನು ಸೂಚಿಸುವ ನಾಮಪದಗಳು, ನಪುಂಸಕ ಶಬ್ದಗಳು. ಉದಾ : ಹುಲಿ, ಹಲ್ಲಿ, ಧ್ವಜ ಇತ್ಯಾದಿ.