ರ್‍ಯಾಕೂನ್
Temporal range: Blancan–present[]
ಪೂರ್ವದ ರ್‍ಯಾಕೂನ್ (ಪಿ. ಐ. ಲೋಟೊರ್), ನ್ಯೂ ಯಾರ್ಕ್ ನಗರದ ಸೆಂಟ್ರಲ್ ಪಾರ್ಕ್‌ನಲ್ಲಿ
Conservation status
Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಕಾರ್ಡೇಟಾ
ವರ್ಗ: Mammalia
ಗಣ: ಕಾರ್ನಿವೋರಾ
ಕುಟುಂಬ: ಪ್ರೋಸೈಯಾನಿಡೇ
ಕುಲ: ಪ್ರೋಸೈಯಾನ್
ಪ್ರಜಾತಿ:
P. lotor
Binomial name
Procyon lotor
(Linnaeus, 1758)
Native range in red, introduced range in blue
Synonyms
  • Ursus lotor Linnaeus, 1758

ರ್‍ಯಾಕೂನ್ ಉತ್ತರ ಅಮೆರಿಕದಲ್ಲಿ ಕಾಣದೊರೆಯುವ ಮಾಂಸಾಹಾರಿ ಸ್ತನಿ. ಕಾರ್ನಿವೊರ ಗಣದ ಪ್ರೋಸೈಯಾನಿಡೀ ಕುಟುಂಬಕ್ಕೆ ಸೇರಿದೆ. ಪ್ರೋಸೈಯಾನ್ ಜಾತಿಯ ಸುಮಾರು 7 ಪ್ರಭೇದಗಳಿಗೆ ಸಾಮಾನ್ಯವಾಗಿ ಈ ಹೆಸರು ಅನ್ವಯವಾಗುವುದಾದರೂ ಪ್ರಮುಖವಾಗಿ ಈ ಹೆಸರಿನಿಂದ ಪ್ರಸಿದ್ಧವಾಗಿರುವುದು ಪ್ರೋಸೈಯಾನ್ ಲೋಟೊರ್ ಎಂಬುದು ಮಾತ್ರ.

ದೇಹರಚನೆ

ಬದಲಾಯಿಸಿ

ದೇಹದ ಉದ್ದ ಸುಮಾರು 40-60 ಸೆಂಮೀ. ಭುಜದ ಬಳಿಯ ಎತ್ತರ 20-30 ಸೆಂಮೀ.[] ತೂಕ 1.5-2.5 ಕೆಜಿ. ಮೈಬಣ್ಣ ಬೂದು. 20-40 ಸೆಂಮೀ ಉದ್ದದ ಬಾಲವುಂಟು.[][][] ಮೈಮೇಲೂ ಬಾಲದಲ್ಲೂ ಹುಲುಸಾದ, ಮೃದುವಾದ ತುಪ್ಪಳಿನಂಥ ಕೂದಲುಗಳಿವೆ. ಬಾಲದಲ್ಲಿ ಕಪ್ಪುಬಣ್ಣದ 5-10 ಪಟ್ಟೆಗಳಿವೆ. ಮುಸುಡಿ ನಾಯಿ ಮುಸುಡಿಯಂತೆ ಮುಂಚಾಚಿದೆ. ಮುಖದ ಮೇಲೆ ಕಪ್ಪುಬಣ್ಣದ ಅಡ್ಡ ಪಟ್ಟೆಯುಂಟು. ಕಾಲುಗಳಲ್ಲಿ ಉದ್ದ ಬೆರಳುಗಳೂ ಚೂಪು ನಖಗಳೂ ಇವೆ. ಕೈಗಳನ್ನು ಕೋತಿಗಳು ಬಳಸುವಂತೆಯೇ ಬಲು ಸಮರ್ಥವಾಗಿ ಬಳಸಬಲ್ಲುದು.

ನಡವಳಿಕೆ

ಬದಲಾಯಿಸಿ

ರ‍್ಯಾಕೂನ್ ನಿಶಾಚರಿ. ಸಾಮಾನ್ಯವಾಗಿ ಹಗಲಿನಲ್ಲಿ ಮರದ ಪೊಟರೆಗಳಲ್ಲೊ ಕಲ್ಲುಬಂಡೆಗಳ ಸಂದುಗಳಲ್ಲೊ ಮಲಗಿದ್ದು ರಾತ್ರಿವೇಳೆ ಬೇಟೆ ಅರಸಿ ಹೊರಡುತ್ತದೆ. ಮರ ಹತ್ತುವುದರಲ್ಲಿ ಅಂತೆಯೇ ನೀರಿನ ಮೇಲೆ ಈಸುವುದರಲ್ಲಿ ನಿಷ್ಣಾತ.[][]

ಇದು ಎಲ್ಲ ಬಗೆಯ ಆಹಾರವನ್ನು ತಿನ್ನುತ್ತದಾದರೂ ಜಲಜೀವಿಗಳಾದ ಕಪ್ಪೆ, ಮೀನು, ಸಣ್ಣಪುಟ್ಟ ನೆಲಪ್ರಾಣಿಗಳನ್ನೂ ಇಷ್ಟಪಡುತ್ತದೆ.[] ಹಲವಾರು ಬಗೆಯ ಕಾಯಿ, ಬೀಜ, ಕಾಳುಗಳನ್ನೂ ತಿನ್ನುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ ದಕ್ಷಿಣ ಪ್ರಾಂತ್ಯಗಳಲ್ಲಿ ಕಾಣಸಿಗುವ ರ‍್ಯಾಕೂನ್ ವರ್ಷವಿಡೀ ಚಟುವಟಿಕೆಯಿಂದ ಇರುತ್ತದೆ ಆದರೆ ಉತ್ತರ ಭಾಗದಲ್ಲಿ ಜೀವಿಸುವ ರ‍್ಯಾಕೂನ್ ಜಾತಿ ಚಳಿಗಾಲದಲ್ಲಿ ಶಿಶಿರ ನಿದ್ರಾವಶವಾಗುತ್ತದೆ.

ಸಂತಾನೋತ್ಪತ್ತಿ

ಬದಲಾಯಿಸಿ

ಇದರ ಸಂತಾನವೃದ್ಧಿಯ ಕಾಲ ಜನವರಿಯಿಂದ ಜೂನ್.[೧೦][೧೧][೧೨] ಗರ್ಭಾವಸ್ಥೆಯ ಅವಧಿ ಸುಮಾರು 65 ದಿವಸಗಳು. ಒಂದು ಸೂಲಿಗೆ 1-7 ಮರಿ ಹುಟ್ಟುತ್ತವೆ.[೧೩][೧೪] ಮರಿಗಳು ಸುಮಾರು 10 ವಾರಗಳ ಕಾಲ ತಾಯಿಯೊಡನೆಯೇ ಇದ್ದು ನಿಧಾನವಾಗಿ, ಅಂದರೆ ಒಂದು ವರ್ಷ ವಯಸ್ಸಿನವಾಗುವ ವೇಳೆಗೆ ಸ್ವತಂತ್ರವಾಗಿ ಜೀವಿಸತೊಡಗುತ್ತವೆ. ರ‍್ಯಾಕೂನಿನ ಆಯಸ್ಸು ಸುಮಾರು 10-15 ವರ್ಷಗಳು.

ಉಲ್ಲೇಖಗಳು

ಬದಲಾಯಿಸಿ
  1. "Fossilworks: Procyon lotor". fossilworks.org. Archived from the original on 2022-09-22. Retrieved 2023-10-10.
  2. Timm, R.; Cuarón, A.D.; Reid, F.; Helgen, K. & González-Maya, J.F. (2016). "Procyon lotor". IUCN Red List of Threatened Species. 2016: e.T41686A45216638. doi:10.2305/IUCN.UK.2016-1.RLTS.T41686A45216638.en. Retrieved 19 February 2022.
  3. Lagoni-Hansen 1981, p. 16.
  4. Hohmann, Bartussek & Böer 2001, p. 77.
  5. Lagoni-Hansen 1981, p. 15.
  6. Zeveloff 2002, p. 58.
  7. MacClintock 1981, p. 33.
  8. Zeveloff 2002, p. 72.
  9. Hohmann, Bartussek & Böer 2001, p. 83.
  10. Hohmann, Bartussek & Böer 2001, p. 150.
  11. MacClintock 1981, p. 81.
  12. Zeveloff 2002, p. 122.
  13. Hohmann, Bartussek & Böer 2001, p. 131.
  14. Zeveloff 2002, pp. 121, 126.

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: