ಪೊಟರೆ (ಮರ)
ಪೊಟರೆಯು (ಕೋಟರ) ಮರದ ಬೊಡ್ಡೆ ಅಥವಾ ರೆಂಬೆಯಲ್ಲಿ ನೈಸರ್ಗಿಕವಾಗಿ ರೂಪಗೊಂಡಿರುವ ಭಾಗಶಃ ಆವೃತವಾದ ಪೊಳ್ಳುಭಾಗ. ಇವು ಮುಖ್ಯವಾಗಿ ಹಳೆಯ ಮರಗಳಲ್ಲಿ (ಸತ್ತ ಅಥವಾ ಬದುಕಿರುವ) ಕಂಡುಬರುತ್ತವೆ. ಪೊಟರೆಗಳು ಮರಗಳ ಅನೇಕ ಪ್ರಜಾತಿಗಳಲ್ಲಿ ರೂಪಗೊಳ್ಳುತ್ತವೆ, ಮತ್ತು ನೈಸರ್ಗಿಕ ಕಾಡುಗಳು ಹಾಗೂ ಕಾಡುಪ್ರದೇಶಗಳ ಪ್ರಮುಖ ಲಕ್ಷಣವಾಗಿರುತ್ತವೆ, ಮತ್ತು ಅನೇಕ ಕಶೇರುಕ ಹಾಗೂ ಅಕಶೇರುಕ ಪ್ರಾಣಿಗಳಿಗೆ ಆವಾಸಸ್ಥಾನವಾಗಿ ಕಾರ್ಯನಿರ್ವಹಿಸುತ್ತವೆ.[೧] ಪ್ರಾಕೃತಿಕ ಶಕ್ತಿಗಳಿಂದಾದ ದೈಹಿಕ ಒತ್ತಡದ ಪರಿಣಾಮವಾಗಿ ಚೇಗಿನಲ್ಲಿ ಗುಳಿ ಉಂಟಾಗಿ ಅದು ಒಡ್ಡಲ್ಪಡುವುದರಿಂದ ಪೊಟರೆಗಳು ರೂಪಗೊಳ್ಳಬಹುದು. ಈ ಶಕ್ತಿಗಳಲ್ಲಿ ಗಾಳಿ, ಬೆಂಕಿ, ಉಷ್ಣ, ಮಿಂಚು, ಮಳೆ, (ಇರುವೆಗಳು ಅಥವಾ ಜೀರುಂಡೆಗಳು) ಕೀಟಗಳ ಆಕ್ರಮಣ, ಬ್ಯಾಕ್ಟೀರಿಯಾ, ಅಥವಾ ಶಿಲೀಂಧ್ರಗಳು ಸೇರಿವೆ.
ಉಲ್ಲೇಖಗಳು
ಬದಲಾಯಿಸಿ- ↑ Gibbons, Phillip; David Lindenmayer (2002). Tree Hollows and Wildlife Conservation in Australia. CSIRO Publishing. ISBN 0-643-06705-1.