ರೊನೂರ್ ವೆಂಕಟೇಶ್ವರ ದೇವರಾಜ್(ಆರ್. ವಿ. ದೇವರಾಜ್)

ರೊನೂರ್ ವೆಂಕಟೇಶ್ವರ ದೇವರಾಜ್(ಆರ್. ವಿ. ದೇವರಾಜ್) ರವರು ೩ ಡಿಸೆಂಬರ್ ೧೯೫೭ರಲ್ಲಿ ಜನಿಸಿದರು. ಇವರು  ಒಬ್ಬ ಭಾರತೀಯ ರಾಜಕಾರಣಿ ಆಗಿದ್ದು, ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್ಆರ್‌ಟಿಸಿ) ಅಧ್ಯಕ್ಷರಾಗಿ ೨೩ ಮೇ ೨೦೦೦ ರಿಂದ ೨೮ ಅಕ್ಟೋಬರ್ ೨೦೦೭ ರವರೆಗೆ ಸೇವೆ ಸಲ್ಲಿಸಿದ್ದಾರೆ.[] ಅವರು ಕೆಪಿಸಿಸಿ(KPCC)ಯ ಸಾಮಾನ್ಯ ಕಾರ್ಯದರ್ಶಿ ಮತ್ತು ಎಐಸಿಸಿ(AICC)ಯ ಸದಸ್ಯರಾಗಿದ್ದಾರೆ. ಅವರು ಚಾಮರಾಜಪೇಟೆ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.[] ಚಾಮರಾಜಪೇಟೆ ಕ್ಷೇತ್ರದ ವಿಂಗಡಣೆಯ ನಂತರ, ಅವರು ಚಿಕ್ಕಪೇಟೆಯ ಕಾಂಗ್ರೆಸ್ ಅಭ್ಯರ್ಥಿಯಾದರು.

ರೊನೂರ್ ವೆಂಕಟೇಶ್ವರ ದೇವರಾಜ್(ಆರ್. ವಿ. ದೇವರಾಜ್)

ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಚುನಾವಣಾ ಅಫಿದವಿತ್ ಪ್ರಕಾರ ಅವರ ವೃತ್ತಿ ವ್ಯಾಪಾರ ಮತ್ತು ಕೃಷಿಯಾಗಿದೆ.[]

ಆರಂಭಿಕ ಜೀವನ ಮತ್ತು ಶಿಕ್ಷಣ

ಬದಲಾಯಿಸಿ

ಆರ್.ವಿ. ದೇವರಾಜ್ ಅವರ ತಂದೆ ರೊನೂರ್ ವೆಂಕಟೇಶಪ್ಪನವರು ಬೆಂಗಳೂರಿನ ಸಿಟಿ ಮಾರ್ಕೆಟ್‌ನಲ್ಲಿ ತರಕಾರಿ ವ್ಯಾಪಾರಿಯಾಗಿದ್ದರು.[] ದೇವರಾಜ್ ವೆಂಕಟೇಶಪ್ಪನ ನಾಲ್ಕನೇ ಪುತ್ರರಾಗಿದ್ದರು.[] ಇವರು ೩ ಡಿಸೆಂಬರ್ ೧೯೫೭ ರಂದು ಬೆಂಗಳೂರಿನಲ್ಲಿ ಜನಿಸಿದರು.[] ಇವರು ೨೦೦೭ ರಲ್ಲಿ ಗುರು ಘಾಸಿದಾಸ್ ವಿಶ್ವವಿದ್ಯಾಲಯ, ಬಿಲಾಸ್ಪುರ್‌ನಲ್ಲಿ ಬಿಎ ಪದವಿಯನ್ನು ಪಡೆದರು.[][]

ಅವರು ಹಲವಾರು ಯುವ ಕಾಂಗ್ರೆಸ್ ಹುದ್ದೆಗಳನ್ನು ಹೊಂದಿದ್ದರು ಮತ್ತು ಯುವ ಕಾಂಗ್ರೆಸ್ ಪಕ್ಷದ ಸದಸ್ಯರಾಗಲು ಬೆಂಗಳೂರಿನ ಸಾವಿರಾರು ಯುವಕರನ್ನು ಸಜ್ಜುಗೊಳಿಸಿದರು. ೧೯೮೫-೮೮ರಲ್ಲಿ ಬೆಂಗಳೂರು ನಗರ ಸೇವಾದಳದ ಅಧ್ಯಕ್ಷರಾಗಿ ನೇಮಕಗೊಂಡರು. ಈ ಅವಧಿಯಲ್ಲಿ ಅವರು ಸೇವಾದಳದ ಜಾಗೃತಿ ಮೂಡಿಸಲು ಸೈಕಲ್ ಜಾತವನ್ನು ಮಾಡಿದರು. ಈ ಅವಧಿಯಲ್ಲಿ, ಆರ್. ವಿ. ದೇವರಾಜ್ ರವರು ರಾಜ್ಯಮಟ್ಟದ ತರಬೇತಿಯನ್ನು ಲಾಲ್ಬಾಗ್ ಗಾಜಿನ ಮನೆಯಲ್ಲಿ ಬಿ. ಕೆ. ಹರಿಪ್ರಸಾದ್ ರವರ ನೇತೃತ್ವದಲ್ಲಿ ನಡೆಸಿದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡರು. ಅವರ ಕೆಲಸ ಅವರನ್ನು ರಾಜ್ಯ ರಾಜಕೀಯಕ್ಕೆ ಕರೆದೊಯ್ಯಿತು.

ವೈಯಕ್ತಿಕ ಜೀವನ

ಬದಲಾಯಿಸಿ

ಅವರು ಮೇ ೨೯ ರಂದು ಮಮತಾಳನ್ನು ವಿವಾಹವಾದರು. ಇವರು ಒಬ್ಬ ಮಗಳು ಮತ್ತು ಒಬ್ಬ ಮಗನನ್ನು ಹೊಂದಿದ್ದಾರೆ.[]

ಅವರ ಒಟ್ಟು ಘೋಷಿತ ಆಸ್ತಿ ೯೭.೯ ಕೋಟಿ ರೂ. ಇದರಲ್ಲಿ ೧೬.೫ ಕೋಟಿ ಚರ ಆಸ್ತಿ ಮತ್ತು ೮೧.೩ ಕೋಟಿ ಸ್ಥಿರಾಸ್ತಿ ಸೇರಿದೆ. ಅವರ ಒಟ್ಟು ಘೋಷಿತ ಆದಾಯವಾದ ೬೭.೧ ಲಕ್ಷ ರೂ.ಗಳಲ್ಲಿ ೬೨.೭ ಲಕ್ಷ ಸ್ವಯಂ ಆದಾಯವಾಗಿದೆ. ಆರ್ ವಿ ದೇವರಾಜ್ ಅವರ ಒಟ್ಟು ಹೊಣೆಗಾರಿಕೆ 22.5 ಕೋಟಿ ರೂಪಾಯಿಗಳಾಗಿದೆ.[೧೦]

ರಾಜಕೀಯ ವೃತ್ತಿ

ಬದಲಾಯಿಸಿ

ಆರ್.ವಿ. ದೇವರಾಜ್ ೧೯೯೦ ರಿಂದ ಕರ್ನಾಟಕದ ಚಾಮರಾಜಪೇಟೆ ಕ್ಷೇತ್ರದ ಎಂಎಲ್ಎ ಆದರು.[೧೧] ಅವರು ಕೆಎಸ್ಆರ್ಟಿಸಿ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದರು. ಕೆಎಸ್ಆರ್‌ಟಿಸಿ ಅಧ್ಯಕ್ಷರಾಗಿ ಅವರ ಮೊದಲ ಅವಧಿ ೧೯೯೪ ರಲ್ಲಿ ಮತ್ತು ಅವರ ಎರಡನೆಯ ಅವಧಿ ೧೯೯೮ ರಲ್ಲಿ ಆರಂಭವಾಯಿತು.

೨೦೦೪ ರಲ್ಲಿ ನಡೆದ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣರಿಗೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವರು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸ್ವಯಂಪ್ರೇರಿತವಾಗಿ ತಮ್ಮ ಅಭ್ಯರ್ಥಿಯನ್ನು ಹಿಂತೆಗೆದುಕೊಂಡರು. ೨೦೦೫ ರಲ್ಲಿ ಅವರು ವಿಧಾನಸಭಾ ಸದಸ್ಯರಾಗಿ ಚುನಾಯಿತರಾದರು. ಎಸ್. ಎಂ. ಕೃಷ್ಣರವರು ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಲು ರಾಜ್ಯ ರಾಜಕೀಯವನ್ನು ತೊರೆದರು ಮತ್ತು ಆರ್‌. ವಿ. ದೇವ್‌ರಾಜ್ ಅವರ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮತ್ತು ಅವರ ಚಾಮರಾಜಪೇಟೆ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ನಿರ್ದೇಶಿಸಲ್ಪಟ್ಟರು.

೨೦೦೬ ರಲ್ಲಿ ಚಾಮರಾಜಪೇಟೆ ಕ್ಷೇತ್ರವು ವಿಂಗಡಣೆಯ ನಂತರ ಅವರು ಚಿಕ್ಕಪೇಟೆ ಕ್ಷೇತ್ರದಲ್ಲೇ ಮುಂದುವರೆದರು.[೧೨] ಇವರು ನೇತ್ರದಾನ ಶಿಬಿರ, ರಕ್ತ ದಾನ ಶಿಬಿರ, ನಿರುದ್ಯೋಗಿಗಳಿಗೆ, ವಿಕಲಚೇತನರಿಗೆ ಸಹಾಯ ಮಾಡುತ್ತ ಬಂದರು ಮತ್ತು ಇವರು ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಎಲ್ಲ ಸಂಘಟನೆಯಲ್ಲಿ ಜಾಗೃತಿ ಮೂಡಿಸಲು ಸಕಲ ಸಾಮಾನ್ಯರಿಗೆ ಸಹಾಯ ಮಾಡುತ್ತ ಬಂದರು. ಈ ಶಿಬಿರಗಳಲ್ಲಿ ಸಾವಿರಾರು ಜನರು ಚಿಕ್ಕಪೇಟೆ ಕ್ಷೇತ್ರದಿಂದ ಮತ್ತು ಪ್ರದೇಶಗಳಿಂದ ಹಾಜರಿದ್ದರು. ಈ ಅವಧಿಯಲ್ಲಿ ಅವರು ಸಾಮೂಹಿಕ ವಿವಾಹಗಳನ್ನು ನಡೆಸಿದರು ಮತ್ತು ಉಚಿತ ಸೀರೆಗಳು, ಮಂಗಳಸೂತ್ರ, ಧೋತಿಗಳು ಮತ್ತು ಶರ್ಟ್‌ಗಳನ್ನು ವಧು-ವರರಿಗೆ ವಿತರಿಸಿದರು. ಇವರು ಮಹಿಳಾ ಕೌಶಲ್ಯಾಭಿವೃದ್ಧಿಗೆ ಉತ್ತಮವಾದ ಪ್ರೋತ್ಸಾಹವನ್ನು ನೀಡಿದರು.[೧೩]

೨೦೦೮-೦೯ ಲೋಕಸಭಾ ಚುನಾವಣೆಗಳಲ್ಲಿ ಅವರು ಪಕ್ಷದ ನಾಯಕರು ಮತ್ತು ಕಾರ್ಮಿಕರನ್ನು ಬೆಂಗಳೂರು ದಕ್ಷಿಣ ಮತ್ತು ಇತರ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗೆ ಕೆಲಸ ಮಾಡಲು ಸಂಘಟಿಸಿದರು.

೨೦೦೯-೧೦ರ ಬಿಬಿಎಂಪಿ ಚುನಾವಣೆಯಲ್ಲಿ, ನಾಲ್ಕು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ೧೩,೦೦೦ ಮತಗಳಿಂದ ಗೆದ್ದಿದ್ದಾರೆ. ಅವರು ತಮ್ಮ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರೋತ್ಸಾಹಕ್ಕಾಗಿ ಕ್ರೀಡಾಕೂಟಗಳನ್ನು ನಡೆಸಿದರು ಮತ್ತು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಅವರು ಸಾರ್ವಜನಿಕರಿಂದ ಸ್ವಯಂಪ್ರೇರಿತ ಕೊಡುಗೆಗಳ ಮೂಲಕ ಕಲ್ಯಾಣ ಪರಿಹಾರ ನಿಧಿಗಳನ್ನು ಸಂಗ್ರಹಿಸಿದರು.

ಜುಲೈ ೨೦೧೧ ರಲ್ಲಿ ಕೆಪಿಸಿಸಿ ನೇತೃತ್ವದಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಮಾಡಿದ ಕೊಡುಗೆಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವ ಮತ್ತು ಬಿಜೆಪಿ ಸರಕಾರದ ಭ್ರಷ್ಟ ಅಭ್ಯರ್ಥಿಗಳ ಬಗ್ಗೆ ಜಾಗೃತಿ ಮೂಡಿಸುವ ಎರಡು ಉದ್ದೇಶಗಳೊಂದಿಗೆ 'ಕಾಂಗ್ರೆಸ್ ನಡಿಗೆ ಜನರ ಬಳಿಗೆ' ಎಂಬ ಸಮೂಹ ಅರಿವು ಕಾರ್ಯಕ್ರಮವನ್ನು ನಡೆಸಿದರು. ಮೇ ೨೦೧೨ ರಲ್ಲಿ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನಾಮನಿರ್ದೇಶನಗೊಂಡರು. ಅವರು ೨೦೧೩ ರಲ್ಲಿ ಚಿಕ್ಕಪೇಟೆಯಲ್ಲಿ ನಡೆದ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.

ಆರ್. ವಿ. ದೇವರಾಜ್ ಅವರು ೨೦೨೩ ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್‌ಸಿ) ಅಭ್ಯರ್ಥಿಯಾಗಿದ್ದಾರೆ.[೧೪]

ಉಲ್ಲೇಖಗಳು

ಬದಲಾಯಿಸಿ
  1. "Rs. 50 cr. to be spent on facilities at bus stands". The Hindu. 29 December 2003. Archived from the original on 9 May 2004.
  2. Mahadevia, Darshini (2008). Inside the Transforming Urban Asia: Processes, Policies, and Public Actions. Concept Publishing Company. p. 609. ISBN 9788180695742.
  3. https://www.news18.com/assembly-elections-2023/karnataka/r-v-devraj-chickpet-candidate-s10a169c004/
  4. https://myneta.info/Karnataka2023/candidate.php?candidate_id=7815
  5. https://kla.kar.nic.in/council/members/EXMEMBERS/DevarajRV.htm
  6. https://kla.kar.nic.in/council/members/EXMEMBERS/DevarajRV.htm
  7. https://www.news18.com/assembly-elections-2023/karnataka/r-v-devraj-chickpet-candidate-s10a169c004/
  8. https://myneta.info/Karnataka2023/candidate.php?candidate_id=7815
  9. https://kla.kar.nic.in/council/members/EXMEMBERS/DevarajRV.htm
  10. https://www.news18.com/assembly-elections-2023/karnataka/r-v-devraj-chickpet-candidate-s10a169c004/
  11. https://kla.kar.nic.in/council/members/EXMEMBERS/DevarajRV.htm
  12. https://www.hindustantimes.com/elections/karnataka-assembly-election/chickpet-1161
  13. https://kannada.oneindia.com/news/bengaluru/contribution-of-women-to-karnataka-should-appreciate-says-rv-devaraj-136410.html
  14. https://www.news18.com/assembly-elections-2023/karnataka/r-v-devraj-chickpet-candidate-s10a169c004/