Reiki (霊気?, English pronunciation: /ˈreɪkiː/)ಎಂಬುದು ಆಧ್ಯಾತ್ಮಿಕ ಅಭ್ಯಾಸ[] ವಾಗಿದ್ದು, ಇದನ್ನು ೧೯೨೨ರಲ್ಲಿ ಜಪಾನಿನ ಬೌದ್ಧ ಮತೀಯ ಮಿಕಾವೊ ಉಸುಯಿ ಅಭಿವೃದ್ಧಿಪಡಿಸಿದರು. ಇದು ಸಾಮಾನ್ಯವಾಗಿ ಪಾಮ್ ಹೀಲಿಂಗ್ ಎಂದು ಕರೆಯಲ್ಪಡುವ ವಿಧಾನವನ್ನು ಪೂರಕ ಮತ್ತು ಪರ್ಯಾಯ ಚಿಕಿತ್ಸೆಯ ರೂಪದಲ್ಲಿ ಬಳಸುತ್ತದೆ ಹಾಗು ಕೆಲ ವೃತ್ತಿಪರರು ಇದನ್ನು ಕೆಲವೊಮ್ಮೆ ಪೌರಸ್ತ್ಯ ಚಿಕಿತ್ಸೆ ಎಂದು ವರ್ಗೀಕರಿಸುತ್ತಾರೆ.[] ಈ ವಿಧಾನದ ಮೂಲಕ ವೈದ್ಯರು, ಗುಣಪಡಿಸುವ ಶಕ್ತಿಯನ್ನು ಕೀ ನ ರೂಪದಲ್ಲಿ ಅಂಗೈ ಮೂಲಕ ವರ್ಗಾವಣೆ ಮಾಡುತ್ತಾರೆ.[]

Reiki
ಚೀನೀ ಹೆಸರು
ಸಾಂಪ್ರದಾಯಿಕ ಚೀನೀ
ಸರಳೀಕಸರಿಸಿದ ಚೀನೀ
ಜಪಾನೀ ಹೆಸರು
ಹಿರಗನ れいき
Kyūjitai 靈氣
ಶಿಂಜಿತಾಯ್
Korean name
Hangul 영기
Hanja 靈氣
Vietnamese name
Quốc ngữ linh khí

ರೇಖಿಯ ಎರಡು ಪ್ರಮುಖ ಶಾಖೆಗಳನ್ನು ಸಾಮಾನ್ಯವಾಗಿ ಸಾಂಪ್ರದಾಯಿಕ ಜಪಾನೀಸ್ ರೇಖಿ ಮತ್ತು ಪಾಶ್ಚಿಮಾತ್ಯ ರೇಖಿ ಎಂದು ಸೂಚಿಸಲಾಗುತ್ತದೆ. ರೇಖಿಯ ಸಾಂಪ್ರದಾಯಿಕ ಮತ್ತು ಪಾಶ್ಚಿಮಾತ್ಯ ರೂಪಗಳಲ್ಲಿ, ಮೂರು ರೀತಿಯ ಶೈಕ್ಷಣಿಕ ಹಂತಗಳಿವೆ.ಇವುಗಳನ್ನು ಸಾಮಾನ್ಯವಾಗಿ ಮೊದಲನೆಯದು,ಎರಡನೆಯದು ಮತ್ತು ತಜ್ಞ/ಶಿಕ್ಷಕ ಹಂತ ಎಂದು ಕರೆಯಲಾಗುತ್ತದೆ. ರೇಖಿ ವೈದ್ಯರು ಮತ್ತು ತಜ್ಞರ ಪ್ರಕಾರ, ಮೊದಲ ಹಂತದ ಪದವಿಯಲ್ಲಿ, ರೇಖಿಯನ್ನು ಅಭ್ಯಸಿಸುವವರು ಸ್ವತಃ ತಮ್ಮನ್ನು ಹಾಗು ಇತರರನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಎರಡನೆಯ ಪದವಿ ಹಂತದಲ್ಲಿ ವೈದ್ಯರು ವಿಶಿಷ್ಟ ಸಂಕೇತಗಳನ್ನು ಬಳಸಿಕೊಂಡು ದೂರದಿಂದಲೆ(ಸಾಮಾನ್ಯವಾಗಿದೂರ ಚಿಕಿತ್ಸೆ ) ಇತರರನ್ನು ಗುಣಪಡಿಸಬಲ್ಲರು. ಶಿಕ್ಷಕ ಹಂತದಲ್ಲಿ (ನಿರ್ದಿಷ್ಟವಾಗಿ ತಜ್ಞ/ಶಿಕ್ಷಕ ಹಂತ) ಅವರು ರೇಖಿಯನ್ನು ಇತರರಿಗೆ ಬೋಧಿಸಬಲ್ಲವರಾಗಿರುತ್ತಾರೆ ಹಾಗು ರೇಖಿಯನ್ನು ಇತರರಿಗೆ ಕಲಿಯಲು ಅನುವು ಮಾಡಿಕೊಡುತ್ತಾರೆ.

೨೦೦೮ರಲ್ಲಿ ನಡೆಸಲಾದ ಯಾದೃಚ್ಛೀಕರಿಸಲಾದ ಪ್ರಾಯೋಗಿಕ ಪರೀಕ್ಷೆಗಳ [] ಒಂದು ಕ್ರಮಬದ್ಧ ವಿಮರ್ಶೆ ಕೆಳಕಂಡಂತೆ ತಿಳಿಸಿದೆ: "..ಅಧ್ಯಯನ ನಡೆಸಲಾದಂತಹ ಸ್ಥಿತಿಗಳನ್ನು(ಖಿನ್ನತೆ, ನೋವು ಹಾಗು ಆತಂಕ, ಹಾಗು ಇತರೆ) ಆಧಾರವಾಗಿಟ್ಟುಕೊಂಡು ರೇಖಿಯು ಒಂದು ಪರಿಣಾಮಕಾರಿ ಚಿಕಿತ್ಸೆಯೆಂದು ಸೂಚಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ.."

ಇತಿಹಾಸ

ಬದಲಾಯಿಸಿ

ಹೆಸರಿನ ನಿಷ್ಪತ್ತಿ

ಬದಲಾಯಿಸಿ
 
ಮಿಕವೋ ಉಸುಯಿ 臼井甕男 (1865–1926)

ಇಂಗ್ಲೀಷ್ ಪದವಾದ ರೇಖಿ , "ಪರ್ಯಾಯ ಚಿಕಿತ್ಸಾ ವಿಧಾನ" ಎಂಬ ಅರ್ಥವನ್ನು ನೀಡುತ್ತದೆ, ಇದನ್ನು ಜಪಾನಿ ಸ್ವೀಕೃತ ಪದ ರೇಖಿ 霊気ಯಿಂದ ತೆಗೆದುಕೊಳ್ಳಲಾಗಿದೆ, ಇದು "ನಿಗೂಢ ವಾತಾವರಣ ಅಥವಾ ಭಾವನೆ" ಎಂಬ ಅರ್ಥವನ್ನು ನೀಡುತ್ತದೆ, ಇದು ಚೈನೀಸ್ ಸ್ವೀಕೃತ ಪದ ಲಿಂಗ್ಕಿ 靈氣ಯಿಂದ ಜನ್ಯವಾಗಿದೆ, ಇದರರ್ಥ "ಆಧ್ಯಾತ್ಮಿಕ ವಾತಾವರಣ; ಬುದ್ಧಿವಂತಿಕೆ". ಈ ಪದಕ್ಕೆ ಆಕ್ಸ್ಫರ್ಡ್ ಆಂಗ್ಲ ನಿಘಂಟಿನಲ್ಲಿ ಸಮಗ್ರವಾಗಿ ಅರ್ಥ ನಿರೂಪಿಸಲಾಗಿದೆ.

ರೇಖಿ , ನಾಮಪದ. ಪರ್ಯಾಯ ಚಿಕಿತ್ಸೆ. ಬ್ರಿಟ್. /ˈreɪki/, U.S. /ˈreɪki/. ರೂಪಗಳು: ದೊಡ್ದಕ್ಷರದ ಆದ್ಯಕ್ಷರದೊಂದಿಗೂ ಸಹಿತ.

[‹ಜಪಾನೀಸ್ ರೇಖಿ , ಸಾಮಾನ್ಯವಾಗಿ 'ನಿಗೂಢ ವಾತಾವರಣ, ಆಶ್ಚರ್ಯಕರ ಸಂಕೇತ' ಎಂಬ ಅರ್ಥ ನೀಡುವ ವಿಶೇಷ ಪದ(1001; ಚೈನೀಸ್ ಲಿಂಗ್ಕಿ ಗೆ ಹೋಲಿಕೆ ಆಧ್ಯಾತ್ಮಿಕ ವಾತಾವರಣ)‹ ರೇಯಿ ಚೇತನ, ಅಮೂರ್ತ ಚೇತನ(< ಮಧ್ಯ ಚೈನೀಸ್) + ಕಿ ಜೀವಾಧಾರಕ ಶಕ್ತಿ (< ಚೈನೀಸ್ ಕಿ ಚಿ ಯ ಮಧ್ಯ ಚೈನೀಸ್ ಆಧಾರ ನಾಮಪದ 2).]

ಆಧ್ಯಾತ್ಮಿಕ ಜೀವನ ಶಕ್ತಿ, ಅಥವಾ ಜೀವಾಧಾರಕ ಆಧ್ಯಾತ್ಮಿಕ ಶಕ್ತಿ, ಇದು ಎಲ್ಲ ಜೀವಿಗಳಲ್ಲಿ ಸ್ವಭಾವಗತವಾಗಿರುತ್ತವೆಂದು ಹೇಳಲಾಗುತ್ತದೆ (cf. ಚಿ ನಾಮಪದ.). ಪರಿಣಾಮವಾಗಿ: ಸ್ಪಷ್ಟವಾಗಿ ಪುರಾತನ ಟಿಬೇಟಿಯನ್ ಬೌದ್ಧಧರ್ಮದ ವಿಧಾನವನ್ನು ಆಧಾರಿಸಿದ ಒಂದು ಚಿಕಿತ್ಸೆಯನ್ನು, ಜಪಾನಿನಲ್ಲಿ ೧೯ನೇ ಶತಮಾನದ ನಂತರ ಭಾಗದಲ್ಲಿ ಅಥವಾ ೨೦ನೇ ಶತಮಾನದ ಆರಂಭದಲ್ಲಿ ಡಾ. ಮಿಕಾವೋ ಉಸುಯಿ(೧೮೬೫–೧೯೨೬) ಅಭಿವೃದ್ಧಿಪಡಿಸಿದರು, ಈ ವಿಧಾನದಲ್ಲಿ ಚಿಕಿತ್ಸಕರು ಈ ಶಕ್ತಿಯನ್ನು ಆತನಿಂದ- ಅಥವಾ ಆಕೆಯಿಂದ ರೋಗಿಗೆ ಕೈಗಳ ಮೇಲೆ ತಮ್ಮ ಕೈಯನ್ನು ಮೃದುವಾಗಿ ಇರಿಸುವ ಮೂಲಕ ವರ್ಗಾಯಿಸುತ್ತಾರೆ, ಇದರಿಂದ ರೋಗಿಯ ದೇಹದ ಸ್ವಾಭಾವಿಕ ರಕ್ಷಣಾ ಪ್ರಕ್ರಿಯೆಯು ಚುರುಕುಗೊಳ್ಳುವುದರ ಜೊತೆಗೆ ಶಾರೀರಿಕ ಹಾಗು ಭಾವನಾತ್ಮಕವಾಗಿ ಆರೋಗ್ಯ ಸ್ಥಿತಿಯು ಮೊದಲಿನಂತಾಗುತ್ತದೆ.[]

OED ಪಟ್ಟಿಯ ಪ್ರಕಾರ 1975ರಲ್ಲಿ ಮೊದಲ ಬಾರಿಗೆ ರೇಖಿ ಎಂಬ ಪದವನ್ನು ಬಳಸಲಾಯಿತೆಂದು ದಾಖಲಿಸಲಾಗಿದೆ.[] ಸಾಮಾನ್ಯ ಲಿಪ್ಯಂತರಣಕ್ಕೆ ಬದಲಾಗಿ, ಕೆಲ ಆಂಗ್ಲ-ಭಾಷಾ ಲೇಖಕರು, ರೇಖಿಯನ್ನು "ಸಾರ್ವತ್ರಿಕ ಜೀವನಾಧಾರ ಶಕ್ತಿಯೆಂದು" ಸಡಿಲವಾಗಿ ತರ್ಜುಮೆ ಮಾಡುತ್ತಾರೆ,[] ಇದು ಜಪಾನೀಸ್ ಭಾಷೆಯ ಅರ್ಥಕ್ಕಿಂತ ಭಿನ್ನವಾಗಿರುತ್ತದೆ. "ನಿಗೂಢ ವಾತಾವರಣ" ಎಂಬ ಅರ್ಥವನ್ನು ನೀಡುವ ಜಪಾನೀಸ್ರೇಖಿ ಪದವನ್ನು ಶಿಂಜಿತೈ ಕಾಂಜಿನಲ್ಲಿ (ಹೊಸ ಚೈನೀಸ್ ಅಕ್ಷರ ರೂಪಗಳು) 霊気 ಅಥವಾ レイキ ಎಂದು ಕತಕಾನ ಮಾತ್ರಾಕ್ಷರಮಾಲೆಯಲ್ಲಿ(ಮಾದರಿಯಾಗಿ ವಿದೇಶಿ ಪದಗಳನ್ನು ಲಿಪ್ಯಂತರಿಸಲು ಬಳಸಲಾಗುತ್ತದೆ) ಬರೆಯಲಾಗುತ್ತದೆ. ಇದು "ಅಳಿದ ಚೇತನ, ಆತ್ಮ; ಅಮೂರ್ತ ಚೇತನ, ಚೈತನ್ಯ; ನಿಗೂಢತೆ, ಪವಿತ್ರವಾದ, ದೈವಿಕ" ಎಂಬ ಅರ್ಥವನ್ನು ನೀಡುವ ರೇಯಿ ಹಾಗು "ಅನಿಲ, ಆವಿ; ವಾತಾವರಣ; ಜೀವಾಧಾರಕ ಶಕ್ತಿ, ಚೈತನ್ಯ, ಜೀವನಕ್ಕೆ ಉಸಿರು, ಜೀವಶಕ್ತಿ; ಶಕ್ತಿ, ಬಲ; ಸ್ವಾಭಾವಿಕ ವಿದ್ಯಮಾನ; ಚೇತನ, ಮನಸ್ಸು, ಜಾಗೃತಿ..."[] ಎಂಬ ಅರ್ಥವನ್ನು ನೀಡುವ ಕಿ ಎಂಬ ಪದಗಳನ್ನು ಸಂಯೋಗಿಸುತ್ತದೆ. ಈ ಕಿಯನ್ನು(ಅಂದರೆ, ಚೈನೀಸ್ ಕಿ ಅಥವಾ ಚಿ)ರೇಖಿ ಯಲ್ಲಿ "ಆಧ್ಯಾತ್ಮಿಕ ಶಕ್ತಿ[[; ಜೀವಧಾರಕ ಶಕ್ತಿ; ಜೀವಶಕ್ತಿ; ಜೀವನದ ಶಕ್ತಿ" ಎಂದು ಪರಿಗಣಿಸಲಾಗುತ್ತದೆ.[]]] ಜಪಾನೀಸ್-ಆಂಗ್ಲ ನಿಘಂಟುಗಳಲ್ಲಿ ಕಂಡುಬರುವ ರೇಖಿ ಪದದ ಕೆಲ ಸಮಾನಾಂತರ ತರ್ಜುಮೆಗಳೆಂದರೆ:"ನಿಗೂಢ ಭಾವ",[೧೦]"ನಿಗೂಢತೆಯ ವಾತಾವರಣ(ಭಾವನೆ)",[೧೧] ಹಾಗು "ಒಂದು ಅಲೌಕಿಕ ವಾತಾವರಣ(ಇದನ್ನು ದೇವಾಲಯದ ಪವಿತ್ರ ಪ್ರಾಕಾರದಲ್ಲಿ ಅನುಭವಿಸಬಹುದು);(ಅನುಭವಿಸುವುದು, ಇಂದ್ರೀಯ ಶಕ್ತಿ) ಒಂದು ಆಧ್ಯಾತ್ಮಿಕ(ದೈವಿಕ)ಉಪಸ್ಥಿತಿ."[೧೨] ಸಾಮಾನ್ಯವಾಗಿ ರೇಖಿ ಪದಕ್ಕಿರುವ ಸಿನೋ-ಜಪಾನೀಸ್ ಉಚ್ಚಾರಣೆಯ ಜೊತೆಯಲ್ಲಿ, ಈ ಕಾಂಜಿ 霊気 ಪರ್ಯಾಯ ಜಪಾನೀಸ್ ಅರ್ಥವಿವರಣೆಯನ್ನು ಹೊಂದಿದೆ,ರಯೋಗೆ , ಅರ್ಥ "ರಾಕ್ಷಸ; ಪ್ರೇತ"(ಅದರಲ್ಲೂ ವಿಶೇಷವಾಗಿ ಅಲೌಕಿಕ ಜೀವಿಯ ಸ್ವಾಧೀನದಲ್ಲಿರುವಾಗ).[೧೩]

ಚೈನೀಸ್ಲಿಂಗ್ಕಿ ಯನ್ನು 靈氣 ಮೊದಲ ಬಾರಿಗೆ (ಸುಮಾರು. ೩೨೦ BCE)ಯಲ್ಲಿ ಗುವಾಂಜಿ ವಿಭಾಗದ "ಆಂತರ್ಯ ತರಬೇತಿ" ನೆಯಿಯೇ ನಲ್ಲಿ ದಾಖಲು ಮಾಡಲಾಯಿತು, ಇದು ಪ್ರಾಚೀನ ದಾವೊಯಿಸ್ಟ್ ಧ್ಯಾನ ವಿಧಾನಗಳಲ್ಲಿ ವಿವರಿಸಲಾಗಿದೆ. "ಮನಸ್ಸಿನಲ್ಲಿರುವ ಆ ನಿಗೂಢ ಜೀವಧಾರಕ ಶಕ್ತಿ: ಒಂದು ಕ್ಷಣದಲ್ಲಿ ಇದು ಆಗಮಿಸಿ, ಮತ್ತೊಂದು ಕ್ಷಣದಲ್ಲಿ ಹೊರಟುಹೋಗುತ್ತದೆ. ಇದು ಎಷ್ಟು ಸೂಕ್ಷ್ಮವೆಂದರೆ, ಇದರೊಳಗೆ ಏನೂ ಇರುವುದಿಲ್ಲ; ಎಷ್ಟು ವ್ಯಾಪಕವೆಂದರೆ, ಇದರಾಚೆಗೂ ಏನೂ ಇರುವುದಿಲ್ಲ. ಮಾನಸಿಕ ಕ್ಷೋಭೆ ಉಂಟುಮಾಡುವ ಹಾನಿಯಿಂದಾಗಿ ಇದನ್ನು ನಾವು ಕಳೆದುಕೊಳ್ಳುತ್ತೇವೆ."[೧೪] ಆಧುನಿಕ ಪ್ರಮಾಣಕ ಚೈನೀಸ್ಲಿಂಗ್ಕಿ ಯನ್ನು ಚೈನೀಸ್-ಇಂಗ್ಲಿಷ್ ನಿಘಂಟುಗಳು:(ಸುಂದರವಾದ ಪರ್ವತಗಳ) ಆಧ್ಯಾತ್ಮಿಕ ಪ್ರಭಾವ ಅಥವಾ ವಾತಾವರಣ";[೧೫]"೧.ಬುದ್ಧಿವಂತಿಕೆ; ಗ್ರಹಣಾ ಶಕ್ತಿ; ೨.ಅಲೌಕಿಕ ಶಕ್ತಿ ಅಥವಾ ಯಕ್ಷ ಕಥೆಗಳಲ್ಲಿ ಬರುವ ಶಕ್ತಿ; ಪವಾಡ ಸದೃಶ ಶಕ್ತಿ ಅಥವಾ ಬಲ;[೧೬] ಹಾಗು "೧.ಆಧ್ಯಾತ್ಮಿಕ ಪ್ರಭಾವ(ಪರ್ವತಗಳ/ಮುಂತಾದವುಗಳ ಪ್ರಭಾವ.) ಎಂದು ತರ್ಜುಮೆ ಮಾಡಿವೆ.; ೨.ಜಾಣತನ; ಬುದ್ಧಿವಂತಿಕೆ".[೧೭]

ಮೂಲಗಳು

ಬದಲಾಯಿಸಿ
ಫೈವ್ ಪ್ರಿಸೆಪ್ಟ್ಸ್ ಹಾಗು ಟೈಮ್ ಲೈನ್ ಆಫ್ ರೇಖಿ ಹಿಸ್ಟರಿಯನ್ನೂ ಸಹ ನೋಡಿ
 
ಚುಜಿರೋ ಹಯಾಶಿ林 忠次郎 (1880 - 1940)

ರೇಖಿಯನ್ನುಮಿಕಾವೋ ಉಸುಯಿ(臼井甕男) ೧೯೨೨ರಲ್ಲಿ, ಮೌಂಟ್ ಕುರಾಮ ಮೇಲೆ ಆಯೋಜಿಸಲಾಗಿದ್ದ ಇಪ್ಪತ್ತೊಂದು ದಿನದ ಬೌದ್ಧ ತರಬೇತಿ ಶಿಬಿರಇಸ್ಯು ಗುವೋ ನಡೆಸುವಾಗ ಅಭಿವೃದ್ಧಿಪಡಿಸಿದರು.[೧೮] ಈ ತರಬೇತಿ ಅವಧಿಯಲ್ಲಿ ಉಸುಯಿಯವರು ಏನು ಮಾಡಿದ್ದರೆಂಬ ಬಗ್ಗೆ ಖಚಿತವಾದ ಮಾಹಿತಿಯಿಲ್ಲ, ಆದಾಗ್ಯೂ ಶಿಬಿರದಲ್ಲಿ ಧ್ಯಾನ,ಉಪವಾಸ, ಮಂತ್ರ ಪಠಣ, ಹಾಗು ಪ್ರಾರ್ಥನೆಗಳು ಇದ್ದಿರಬಹುದು.[೧೯][೨೦] ಒಂದು ಆಧ್ಯಾತ್ಮಿಕ ದಿವ್ಯಜ್ಞಾನದ ಮೂಲಕ, ಉಸುಯಿ ರೇಖಿಯ ಬಗ್ಗೆ ಜ್ಞಾನವನ್ನು ಪಡೆಯುವುದರ ಜೊತೆಗೆ ಆಧ್ಯಾತ್ಮಿಕ ಶಕ್ತಿಯನ್ನು ಬಳಸುವ ಹಾಗು ಇತರರಿಗೆ ಬಳಸಲು ಅನುವು ಮಾಡಿಕೊಟ್ಟರೆಂದು ಹೇಳಲಾಗುತ್ತದೆ, ಇದು ಅವರ ಶರೀರಕ್ಕೆ ಮುಕುಟ ಚಕ್ರದ ಮೂಲಕ ಪ್ರವೇಶಿಸಿತೆಂದು ಪ್ರತೀತಿಯಿದೆ.[೧೯] ಏಪ್ರಿಲ್ ೧೯೨೨ರಲ್ಲಿ, ಉಸುಯಿ ಟೋಕಿಯೋಗೆ ಸ್ಥಳಾಂತರಗೊಂಡುಉಸುಯಿ ರೇಖಿ ರಯೋಹೋ ಗಕ್ಕೈ ಯನ್ನು ಸ್ಥಾಪಿಸುತ್ತಾರೆ(ಸಾಂಪ್ರದಾಯಿಕವಾಗಿ ಮ್ಯಾಂಡರಿನ್ ನಲ್ಲಿ "臼井靈氣療法學會", ಇದುಉಸುಯಿ'ಸ್ ಸ್ಪಿರಿಚುವಲ್ ಎನರ್ಜಿ ಥೆರಪಿ ಮೆಥಡ್ ಸೊಸೈಟಿ ಎಂಬ ಅರ್ಥವನ್ನು ನೀಡುತ್ತದೆ), ಸಂಸ್ಥೆಯು ರೇಖಿಯ ಮೂಲಕ ದೊಡ್ಡ ಪ್ರಮಾಣದಲ್ಲಿ ಜನರಿಗೆ ಚಿಕಿತ್ಸೆಯನ್ನು ಮುಂದುವರೆಸುವ ಉದ್ದೇಶವನ್ನು ಹೊಂದಿತ್ತು.[೧೯][೨೧]

ಅವರ ಸ್ಮಾರಕ ಶಿಲೆಯ ಮೇಲೆ ಕೆತ್ತಲಾದ ಬರೆಹದ ಪ್ರಕಾರ,[೨೨] ಉಸುಯಿ, ತಮ್ಮ ಜೀವಿತಾವಧಿಯಲ್ಲಿ ೨೦೦೦ಕ್ಕೂ ಮೇಲ್ಪಟ್ಟ ಜನರಿಗೆ ತಮ್ಮ ರೇಖಿ ವಿದ್ಯೆಯನ್ನು ಧಾರೆ ಎರೆದಿದ್ದಾರೆ, ಹಾಗು ಅವರ ಇಷ್ಟು ಮಂದಿ ಶಿಷ್ಯರಲ್ಲಿ ಹದಿನಾರು ಜನರುಶಿನ್ಪಿಡೆನ್ ಮಟ್ಟದವರೆಗೂ ಕಲಿತಿದ್ದಾರೆ, ಇದು ಪಾಶ್ಚಿಮಾತ್ಯ ಮೂರನೇ, ಅಥವಾ ತಜ್ಞ/ಶಿಕ್ಷಕ ಮಟ್ಟದ ಪದವಿಗೆ ಸಮಾನಾಂತರವಾಗಿದೆ.[೨೨][೨೩] ಫುಕುಯಾಮದಲ್ಲಿ (福山市,ಫುಕುಯಾಮ-ಶಿ ) ರೇಖಿಯನ್ನು ಕಲಿಸುವಾಗ, ಉಸುಯಿ ಪಾರ್ಶ್ವವಾಯುವಿಗೆ ತುತ್ತಾಗಿ, ೯ ಮಾರ್ಚ್ ೧೯೨೬ರಲ್ಲಿ ನಿಧನರಾಗುತ್ತಾರೆ.[೨೨]

ಆರಂಭಿಕ ಬೆಳವಣಿಗೆ

ಬದಲಾಯಿಸಿ
ಚಿತ್ರ:Hawayo Takata.jpg
ಹವಯೋ ತಕಾತ (24 ಡಿಸೆಂಬರ್ 1900 - 11 ಡಿಸೆಂಬರ್ 1980)

ಉಸುಯಿಯವರ ನಿಧನದ ನಂತರ, ಉಸುಯಿಯವರ ಒಬ್ಬ ಶಿಷ್ಯರಾದ ಶ್ರೀ. J. ಉಷಿಡ, ಗಕ್ಕೈನ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸುತ್ತಾರೆ.[೨೪] ಉಸುಯಿಯವರ ಸ್ಮಾರಕವನ್ನು ನಿರ್ಮಾಣ ಮಾಡುವ ಹಾಗು ಕೆತ್ತುವ ಜವಾಬ್ದಾರಿಯನ್ನೂ ಸಹ ಇವರು ಹೊಂದಿದ್ದರು ಜೊತೆಗೆ ಸ್ಮಾರಕವಿರುವ ಜಾಗವನ್ನು ರಕ್ಷಿಸುವ ಹೊಣೆ ಹೊತ್ತಿದ್ದರು.[೨೪] ಶ್ರೀ.ಉಷಿಡರ ನಂತರ ಶ್ರೀ.ಐಚಿ ಟಕೆಟೊಮಿ, ಶ್ರೀ.ಯೋಶಿಹಾರು ವಾಟನಾಬೆ, ಶ್ರೀ.ಕಿಮಿಕೋ ಕೊಯಾಮ ಇದರ ಜವಾಬ್ದಾರಿ ವಹಿಸಿಕೊಂಡರು ಹಾಗು ಉಸುಯಿಯವರ ಪ್ರಸಕ್ತದ ಉತ್ತರಾಧಿಕಾರಿ, ಶ್ರೀ. ಕೊಂಡೋ, ೧೯೯೮ರಲ್ಲಿ ಇದರ ಅಧ್ಯಕ್ಷ ಪದವಿಯನ್ನು ಸ್ವೀಕರಿಸಿದರು.[೨೪] ಉಸುಯಿ ಕಲಿಸಿದ ಹದಿನಾರು ಬೋಧಕರಲ್ಲಿ ತೊಶಿಹಿರೋ ಇಗುಚಿ, ಜುಸಬುರೋ ಗುಯಿಡ, ಇಲಿಚಿ ಟಕೆಟೊಮಿ, ತೊಯೋಯಿಚಿ ವನಮಿ, ಯೋಶಿಹಿರು ವಾಟನಬೆ, ಕೆಯಿಜೋ ಒಗಾವ, J. ಉಷಿಡ, ಹಾಗು ಚುಜಿರೋ ಹಯಾಶಿ ಸೇರಿದ್ದಾರೆ.[೨೪][೨೫] ಚುಜಿರೋ ಹಯಾಶಿ(林 忠次郎 ಹಯಾಶಿ ಚುಜಿರೋ ) ಉಸುಯಿಯವರ ರೇಖಿ ರಯೋಹೋ ಗಕ್ಕೈನ್ನು ತೊರೆದು ತಮ್ಮದೇ ಆದ ಚಿಕಿತ್ಸಾಲಯ ಆರಂಭಿಸುತ್ತಾರೆ, ಇಲ್ಲಿ ಇವರು ರೇಖಿ ಚಿಕಿತ್ಸೆಗಳನ್ನು ನೀಡುವುದರ ಜೊತೆಗೆ, ಅದರ ಬಗ್ಗೆ ಬೋಧನೆ, ಹಾಗು ಜನರಿಗೆ ರೇಖಿಯನ್ನು ಕಲಿಯಲು ಅನುವು ಮಾಡಿಕೊಡುತ್ತಾರೆ, ಹಾಗು ಈ ಚಿಕಿತ್ಸಾಲಯಕ್ಕೆ ಹವಾಯೋ ತಕಾತ ನಿರ್ದೇಶಕರಾಗುತ್ತಾರೆ.[೨೪] ಹಯಾಶಿ ರೇಖಿ ಬೋಧನೆಗಳನ್ನು ಸರಳಗೊಳಿಸುತ್ತಾರೆ, ಹೆಚ್ಚು ಕ್ರಮಬದ್ಧವಾಗಿ ರಚನೆ ಹಾಗು ರೇಖಿ ವಿಧಾನಗಳ ಸರಳ ರಚನೆಯನ್ನು ಬಳಸಿಕೊಂಡು ಶಾರೀರಿಕ ಉಪಶಮನಕ್ಕೆ ಒತ್ತು ನೀಡುತ್ತಾರೆ.[೨೬]

ತಮ್ಮ ಚಿಕಿತ್ಸಾಲಯದಲ್ಲಿ ಹಯಾಶಿಯವರ ಶಿಕ್ಷಾರ್ಥಿಯಾಗಿ ರೇಖಿಯ ವ್ಯಾಸಂಗಾವಧಿಯಲ್ಲಿ, ಕಿಬ್ಬೊಟ್ಟೆ ನೋವು ಹಾಗು ಅಸ್ತಮಾಕ್ಕೆ ಚಿಕಿತ್ಸೆ ನೀಡುವುದನ್ನು ಒಳಗೊಂಡಂತೆ, ಹಯಾಶಿ ತಕಾತರಿಗೆ ವಿಧಿವತ್ತಾಗಿ ರೇಖಿಯನ್ನು ಬಳಸುವ ಬಗ್ಗೆ ತರಬೇತಿ ನೀಡುತ್ತಾರೆ,[೨೭][೨೮] ಜೊತೆಗೆ ೨೧ ಫೆಬ್ರವರಿ ೧೯೩೮ರಲ್ಲಿ ಅವರನ್ನೊಬ್ಬ ರೇಖಿ ತಜ್ಞೆಯನ್ನಾಗಿ ಮಾಡುತ್ತಾರೆ.[೨೭][೨೯] ತಕಾತ ಹವಾಯಿಯುದ್ದಕ್ಕೂ ಹಲವಾರು ರೇಖಿ ಚಿಕಿತ್ಸಾಲಯಗಳನ್ನು ಸ್ಥಾಪಿಸುತ್ತಾರೆ, ಇದರಲ್ಲಿ ಒಂದು ಹಿಲೋನಲ್ಲಿ ಸ್ಥಿತವಾಗಿದೆ,[೨೭] ಹಾಗು ನಂತರದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದುದ್ದಕ್ಕೂ ಪ್ರಯಾಣಿಸಿ, ರೇಖಿ ವೃತ್ತಿಯನ್ನು ನಡೆಸುವುದರ ಜೊತೆಗೆ ಇತರರಿಗೆ ಮೊದಲ ಎರಡು ಹಂತಗಳನ್ನು ಕಲಿಸುತ್ತಾರೆ,[೩೦] ಹಾಗು ೧೯೭೦ರವರೆಗೂ ತಕಾತ ರೇಖಿ ತಜ್ಞರು ವಿಧಿವತ್ತಾಗಿ ವೃತ್ತಿಯನ್ನು ಆರಂಭಿಸಲು ಅನುವು ಮಾಡಿಕೊಡಲಿಲ್ಲ.[೩೧] ಈ ಹಂತದಲ್ಲಿ, ತಕಾತ,ಶಿನ್ಪಿಡೆನ್ ಮಟ್ಟಕ್ಕೆ ರೇಖಿ ಪರಿಣಿತ ನೆಂಬ ಪದವನ್ನೂ ಸಹ ಪರಿಚಯಿಸಿದರು.[೩೨] ರೇಖಿ ಚಿಕಿತ್ಸೆಗಳಿಗೆ ಹಾಗು ಬೋಧನೆಗಳಿಗೆ ಶುಲ್ಕವನ್ನು ವಿಧಿಸುವ ಪ್ರಾಮುಖ್ಯತೆಗೆ ಅವರು ಒತ್ತು ನೀಡಿದರು ಜೊತೆಗೆ ಸಂಪೂರ್ಣವಾಗಿ ನಿಪುಣತೆಯನ್ನು ಪಡೆಯುವ ತರಬೇತಿಗಾಗಿ $೧೦,೦೦೦ ಶುಲ್ಕವನ್ನು ನಿಗದಿ ಮಾಡಿದರು(ಅಂದಾಜು £೬,೫೦೦ ಅಥವಾ €೭,೪೦೦).[೩೧]

ತಕಾತ ೧೧ ಡಿಸೆಂಬರ್ ೧೯೮೦ರಲ್ಲಿ ನಿಧನರಾಗುತ್ತಾರೆ,[೩೧][೩೩] ಆ ಅವಧಿಯಲ್ಲಿ ಆಕೆ ೨೨ ರೇಖಿ ತಜ್ಞರಿಗೆ ತರಬೇತಿ ನೀಡಿದ್ದರು,[೩೪][೩೫] ಹಾಗು ಜಪಾನಿನಾಚೆಗೂ ವಿಸ್ತರಿಸಿದ ಬಹುತೇಕ ಎಲ್ಲ ರೇಖಿ ಶಿಕ್ಷಣವು ಅವರ ಪ್ರಯತ್ನದ ಫಲವೆಂದು ಹೇಳಬಹುದು.[೩೬]

ಐದು ಸೂತ್ರಗಳು

ಬದಲಾಯಿಸಿ

ಉಸುಯಿ,ಚಕ್ರವರ್ತಿ ಮೆಯಿಜಿಯವರ(明治天皇ಮೆಯಿಜಿ ಟೆನ್ನೋ )ಸಾಹಿತ್ಯಕ ಕೃತಿಗಳ ಅಭಿಮಾನಿಯಾಗಿದ್ದರು. ರೇಖಿ ಪದ್ಧತಿಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ, ಉಸುಯಿ, ಚಕ್ರವರ್ತಿಯ ಕೆಲ ಕೃತಿಗಳನ್ನು ನೀತಿಸೂತ್ರಗಳ ಒಂದು ಸಂಗ್ರಹವಾಗಿ ಸಂಕ್ಷಿಪ್ತಗೊಳಿಸುತ್ತಾರೆ, ಇದು ನಂತರದಲ್ಲಿ ಐದು ರೇಖಿ ಆಚಾರಸೂತ್ರಗಳಾಗಿ ಪರಿಚಯವಾಯಿತು(五戒 ಗೊಕೈ, ಅರ್ಥ, "ಐದು ದೈವಾಜ್ಞೆಗಳು," ಇದು ಹತ್ಯೆಗೈಯ್ಯುವುದು, ದರೋಡೆ ಮಾಡುವುದು, ಲೈಂಗಿಕವಾಗಿ ಅನುಚಿತ ವರ್ತನೆ, ಸುಳ್ಳು ಹೇಳುವುದು ಹಾಗು ಸಂಯಮರಾಹಿತ್ಯದ ವಿರುದ್ಧ ಬೋಧಿಸುವ ಬೌದ್ಧ ಉಪದೇಶಗಳಿಂದ ಆಯ್ದುಕೊಳ್ಳಲಾಗಿದೆ). ಸಾಮಾನ್ಯವಾಗಿ ರೇಖಿ ಪದ್ಧತಿಯನ್ನು ಬೋಧಿಸುವವರು ಹಾಗು ಚಿಕಿತ್ಸೆ ನೀಡುವವರು ಈ ಐದು ಆಚಾರ ಸೂತ್ರಗಳು, ಅಥವಾ ನಿಯಮಗಳಿಗೆ ಬದ್ಧರಾಗಿರಬೇಕಾಗುತ್ತದೆ.[೩೭]

"https://kn.wikipedia.org/w/index.php?title=ರೇಖಿ&oldid=1246190" ಇಂದ ಪಡೆಯಲ್ಪಟ್ಟಿದೆ