ರೂಡೋಲ್ಫ್ ವಿರ್ಚೊವ್

ರೂಡೋಲ್ಫ್ ವಿರ್ಚೊವ್ (1821-1902) ಒಬ್ಬ ಜರ್ಮನ್ ರೋಗವಿಜ್ಞಾನಿ.

ರೂಡೋಲ್ಫ್ ವಿರ್ಚೊವ್

ಜನನ, ವಿದ್ಯಾಭ್ಯಾಸ

ಬದಲಾಯಿಸಿ

ಈಗ ಪೋಲೆಂಡಿಗೆ ಸೇರಿರುವ ಪೊಮೆರಾನಿಯ ಎಂಬಲ್ಲಿ 1821 ಅಕ್ಟೋಬರ್ 13ರಂದು ಜನಿಸಿದ. ಜರ್ಮನ್ ಶರೀರಕ್ರಿಯಾವಿಜ್ಞಾನಿ ಯೋಹಾನೆಸ್ ಪೀಟರ್ ಮ್ಯೂಲರ್ (1801-58) ಎಂಬವನ ಶಿಷ್ಯನಾಗಿ ಬರ್ಲಿನ್ ವಿಶ್ವವಿದ್ಯಾಲಯದಿಂದ ವೈದ್ಯಕೀಯದಲ್ಲಿ ಪದವಿ ಗಳಿಸಿದ (1843).

ವೃತ್ತಿಜೀವನ, ಸಾಧನೆಗಳು

ಬದಲಾಯಿಸಿ

ಯುವ ಶಸ್ತ್ರವೈದ್ಯನಾಗಿ ಲ್ಯೂಕೀಮಿಯ ರೋಗವನ್ನು ಮೊತ್ತಮೊದಲು ನಿದಾನಿಸಿದ (1845). ಈತನ ಉಗ್ರ ರಾಜಕೀಯ ನಿಲವಿನ ಕಾರಣವಾಗಿ ಹುದ್ದೆ ಕಳೆದುಕೊಂಡ. ಹೀಗೆ ಒದಗಿದ ವಿರಾಮ ವೇಳೆಯಲ್ಲಿ ವ್ಯಾಧಿಗ್ರಸ್ತ ಊತಕಗಳ ಸೂಕ್ಷ್ಮದರ್ಶಕೀಯ ಅಧ್ಯಯನದಲ್ಲಿ ಮಗ್ನನಾದ. ಮುಂದೆ ಬರ್ಲಿನ್ನಿನಲ್ಲಿ ರೋಗವೈಜ್ಞಾನಿಕ ಅಂಗರಚನಾವಿಜ್ಞಾನದ (ಪ್ಯಾಥಲಾಜಿಕಲ್ ಅನಾಟಮಿ) ಪ್ರಾಧ್ಯಾಪಕ ಹುದ್ದೆಗೆ ನೇಮಕವಾಗುವ ವೇಳೆಗೆ (1850) ಈತನ ವೈದ್ಯಕೀಯ ಚಿಂತನೆಗಳು ಸ್ಫುಟಗೊಂಡಿದ್ದುವು. ಕೋಶ ಸಿದ್ಧಾಂತ (ಸೆಲ್ ತಿಯರಿ) ವ್ಯಾಧಿಗ್ರಸ್ತ ಊತಕಕ್ಕೂ ಅನ್ವಯಿಸುತ್ತದೆಂದು ತನ್ನ ಗ್ರಂಥದಲ್ಲಿ ಸಾಧಿಸಿದ (1858). ವಿರ್ಚೊವ್‌ನನ್ನು ಸಕಾರಣವಾಗಿಯೇ ಕೋಶೀಯ ರೋಗವಿಜ್ಞಾನದ ಜನಕನೆಂದು ಪರಿಗಣಿಸಲಾಗುತ್ತಿದೆ. ಹೀಗೆ, ಒಂದು ಶತಮಾನಾನಂತರ ಅರಳಿದ ಆಣವಿಕ ಜೀವವಿಜ್ಞಾನದ ಅಭಿವರ್ಧನೆಗೆ ಕೋಶೀಯ ರೋಗವಿಜ್ಞಾನವೊಂದು ಜಿಗಿಹಲಗೆಯಾಯಿತು. “ಎಲ್ಲ ಕೋಶಗಳೂ ಕೋಶಜನ್ಯವಾದವೇ” ಎಂಬುದು ಈತನ ಪ್ರಸಿದ್ಧ ಸೂಕ್ತಿ.[][][]

ಲೂಯಿ ಪಾಸ್ತರ್ (1822-95) ಸಮಕಾಲೀನವಾಗಿ ಮಂಡಿಸಿದ್ದ ವ್ಯಾಧಿಯ ಜೀವಾಂಕುರ ಸಿದ್ಧಾಂತವನ್ನು (ಜರ್ಮ್ ತಿಯರಿ) ವಿರ್ಚೊವ್ ನಿರಾಕರಿಸಿದ. ಇದು ಹೇಗೂ ಇರಲಿ, ಉಭಯ ಪ್ರಕಾರಗಳ ರೋಗಗಳೂ ಇವೆಯೆಂದು ಈಗ ತಿಳಿದಿದೆ. ಆದರೆ ಅಂದು ವಿರ್ಚೊವ್‌ನ ದೃಢಚಿಂತನೆಗಳ ಮತ್ತು ಹಠಮಾರಿತನದ ಫಲವಾಗಿ ಆತ ಬಹುತೇಕ ಒಂಟಿಯಾದ. ಎಂದೇ ಜೀವವಿಜ್ಞಾನ ಕ್ಷೇತ್ರ ತೊರೆದು ಮಾನವಶಾಸ್ತ್ರ (ಆಂತ್ರೊಪಾಲಜಿ) ಮತ್ತು ಪುರಾತತ್ತ್ವ ಶಾಸ್ತ್ರ (ಆರ್ಕಿಯಾಲಜಿ) ಕ್ಷೇತ್ರಗಳಲ್ಲಿ ಮೂಲಭೂತ ಸಂಶೋಧನಮಗ್ನನಾದ. ಟ್ರಾಯ್ ನಗರದ ಉತ್ಖನನದಲ್ಲಿ ಈತನ ಪಾತ್ರವಿತ್ತು.[][]

ಮಾನವಶಾಸ್ತ್ರಾಧ್ಯಯನ ಈತನಿಗೆ ಒಂದು ಅಂಶ ಸ್ಪಷ್ಟಪಡಿಸಿತು: ಉಚ್ಚ ನೀಚ ಜನಾಂಗಗಳೆಂಬ ವಿಭೇದೀಕರಣ ನಿಸರ್ಗದಲ್ಲಿ ಅಮಾನ್ಯ. ಫಲವಾಗಿ ವ್ಯಾಧಿಗ್ರಸ್ತ ವ್ಯಕ್ತಿಯ ಶುಶ್ರೂಷೆಗಿಂತಲೂ ಅಂಥ ಸಮಾಜದ ಸುಧಾರಣೆ ತೀವ್ರ ಅಗತ್ಯ ಎಂಬ ನಂಬಿಕೆ ದೃಢವಾಗಿ ಬೇರುಬಿಟ್ಟಿತು. ಈ ನಿಟ್ಟಿನಲ್ಲಿ ವಿರ್ಚೊವ್ ರಾಜಕೀಯ ಪ್ರವೇಶಿಸಿ ಪ್ರಷ್ಯನ್ ಲೋಕಸಭೆಗೆ (ಪಾರ್ಲಿಮೆಂಟ್) ಆಯ್ಕೆಗೊಂಡ (1862). ಜರ್ಮನಿಯ ಏಕೀಕರಣವಾದ ಬಳಿಕ ರೈಚ್‌ಸ್ಟ್ಯಾಗ್‌ಗೂ ಚುನಾಯಿತನಾದ (1880).[]

ಜರ್ಮನಿಯ ಉದಾರವಾದೀ ಪಕ್ಷದ (ಜರ್ಮನ್ ಲಿಬರಲ್ ಪಾರ್ಟಿ) ಒಬ್ಬ ಸಕ್ರಿಯಾತ್ಮಕ ಸದಸ್ಯ ವಿರ್ಚೊವ್. ಇದರ ಸದಸ್ಯಸಂಖ್ಯೆ ಬಲುಕಡಿಮೆ. ಆದರೂ ತನ್ನ ನಿಲವಿನಿಂದ ಹಾಗೂ ವಾದವೈಖರಿಯಿಂದ ಈತ ಆ ಸಾಮ್ರಾಜ್ಯದ ಪ್ರಥಮ ಚಾನ್ಸಲರ್ ಬಿಸ್ಮಾರ್ಕ್‌ನ (1815-90) ಪ್ರತಿರೋಧ ಎದುರಿಸಬೇಕಾಯಿತು. ವಿರ್ಚೊವ್‌ನ ಸಾಮಾಜಿಕ ಕಳಕಳಿ ಆ ಮಟ್ಟದ್ದಾಗಿತ್ತು. ಆದರೂ ಈತ ಸಮಾಜವಾದಿ ಆಗಿರಲಿಲ್ಲ. ಡಾರ್ವಿನ್‌ನ (1809-82) ವಿಕಾಸವಾದವನ್ನು, ಇದು ಸಮಾಜವಾದೀಯ ಎಂಬ ಕಾರಣಕ್ಕಾಗಿ, ತೀವ್ರವಾಗಿ ತಿರಸ್ಕರಿಸಿದ.[][] ಇತ್ತ ಬಿಸ್ಮಾರ್ಕ್ ಸಾಮಾಜಿಕ ಸುಧಾರಣೆಯನ್ನು ಸರ್ಕಾರದ ನೀತಿಯಾಗಿ ಅನುಷ್ಠಾನಿಸಲು ಮುಂದಾದಾಗ ವಿರ್ಚೊವ್‌ನ ಪಕ್ಷ ಕುಸಿಯಿತು. ಮುಂದಿನ ಚುನಾವಣೆಯಲ್ಲಿ ಈತ ತನ್ನ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡ.

1902 ಸೆಪ್ಟಂಬರ್ 5ರಂದು ಬರ್ಲಿನ್ನಿನಲ್ಲಿ ನಿಧನನಾದ.

ಉಲ್ಲೇಖಗಳು

ಬದಲಾಯಿಸಿ
  1. Kuiper, Kathleen (2010). The Britannica Guide to Theories and Ideas That Changed the Modern World. New York: Britannica Educational Pub. in association with Rosen Educational Services. p. 28. ISBN 978-1-61530-029-7.
  2. Bagot, Catherine N.; Arya, Roopen (2008). "Virchow and his triad: a question of attribution". British Journal of Haematology (in ಇಂಗ್ಲಿಷ್). 143 (2): 180–190. doi:10.1111/j.1365-2141.2008.07323.x. ISSN 1365-2141. PMID 18783400. S2CID 33756942.
  3. Tixier-Vidal, Andrée (2011). "De la théorie cellulaire à la théorie neuronale". Biologie Aujourd'hui (in ಫ್ರೆಂಚ್). 204 (4): 253–266. doi:10.1051/jbio/2010015. PMID 21215242. S2CID 196608425.
  4.   Rines, George Edwin, ed. (1920). "Virchow, Rudolf" . Encyclopedia Americana. {{cite encyclopedia}}: Cite has empty unknown parameters: |HIDE_PARAMETER15=, |HIDE_PARAMETER13=, |HIDE_PARAMETER2=, |HIDE_PARAMETER21=, |HIDE_PARAMETER8=, |HIDE_PARAMETER17=, |HIDE_PARAMETER20=, |HIDE_PARAMETER5=, |HIDE_PARAMETER7=, |HIDE_PARAMETER4=, |HIDE_PARAMETER22=, |HIDE_PARAMETER16=, |HIDE_PARAMETER19=, |HIDE_PARAMETER18=, |HIDE_PARAMETER6=, |HIDE_PARAMETER9=, |HIDE_PARAMETER10=, |HIDE_PARAMETER11=, |HIDE_PARAMETER1=, |HIDE_PARAMETER23=, |HIDE_PARAMETER14=, |HIDE_PARAMETER3=, and |HIDE_PARAMETER12= (help)
  5.   "Virchow, Rudolf" . Collier's New Encyclopedia. 1921. {{cite encyclopedia}}: Cite has empty unknown parameters: |HIDE_PARAMETER10=, |HIDE_PARAMETER4=, |HIDE_PARAMETER8=, |HIDE_PARAMETER6=, |HIDE_PARAMETER9=, |HIDE_PARAMETER1=, |HIDE_PARAMETER5=, |HIDE_PARAMETER7=, |HIDE_PARAMETER3=, and |HIDE_PARAMETER2= (help)
  6. "Virchow's Biography". Berliner Medizinhistorisches Museum der Charité. Archived from the original on 3 October 2018. Retrieved 24 November 2014.
  7. Hodgson, Geoffrey Martin (2006). Economics in the Shadows of Darwin and Marx. Edward Elgar Publishing., p. 14 ISBN 978-1-78100-756-3
  8. Vucinich, Alexanderm (1988), Darwin in Russian Thought. University of California Press. p. 4 ISBN 978-0-520-06283-2

ಹೊರಗಿನ ಕೊಂಡಿಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: