ರವಿ ಶಾಸ್ತ್ರಿ
ರವಿಶಂಕರ ಜಯದ್ರಿಥ ಶಾಸ್ತ್ರಿ (ಮರಾಠಿ:रवि जयद्रिथ शास्त्री) (ಜನನ: ಮೇ ೨೭ ೧೯೬೨) ಭಾರತದ ನಿವೃತ್ತ ಕ್ರಿಕೆಟ್ ಆಟಗಾರ. ಇವರು ಭಾರತ ಕ್ರಿಕೆಟ್ ತಂಡದಲ್ಲಿ ಪ್ರಧಾನವಾಗಿ ಆಲ್-ರೌಂಡರ್ ಪಾತ್ರವನ್ನು ನಿರ್ವಹಿಸಿದರು. ತಮ್ಮ ವೃತ್ತಿಜೀವನವನ್ನು ಬೌಲರ್ ಆಗಿ ಪ್ರಾರಂಭಿಸಿದರಾದರೂ ನಿಧಾನವಾಗಿ ತಂಡದ ಪ್ರಮುಖ ಬ್ಯಾಟ್ಸ್-ಮನ್ ಆದರು.
ರವಿ ಶಾಸ್ತ್ರಿ | ||||
ಭಾರತ | ||||
ವೈಯಕ್ತಿಕ ಮಾಹಿತಿ | ||||
---|---|---|---|---|
ಪೂರ್ಣಹೆಸರು | ರವಿಶಂಕರ ಜಯದ್ರಿಥ ಶಾಸ್ತ್ರಿ | |||
ಅಡ್ಡಹೆಸರು | ರವಿ | |||
ಹುಟ್ಟು | ಮೇ ೨೭ ೧೯೬೨ | |||
ಮುಂಬಯಿ, ಭಾರತ | ||||
ಪಾತ್ರ | ಆಲ್-ರೌಂಡರ್, ವಿಶ್ಲೇಶಕ(commentator) | |||
ಬ್ಯಾಟಿಂಗ್ ಶೈಲಿ | ಬಲಗೈ | |||
ಬೌಲಿಂಗ್ ಶೈಲಿ | ಎಡಗೈ ಸಾಂಪ್ರದಾಯಿಕ ಸ್ಪಿನ್ | |||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | ||||
ಟೆಸ್ಟ್ ಪಾದಾರ್ಪಣೆ (cap ೧೫೧) | ಫೆಬ್ರುವರಿ ೨೧ ೧೯೮೧: v ನ್ಯೂಜಿಲ್ಯಾಂಡ್ | |||
ಕೊನೆಯ ಟೆಸ್ಟ್ ಪಂದ್ಯ | ಡಿಸೆಂಬರ್ ೨೬ ೧೯೯೨: v ದಕ್ಷಿಣ ಆಫ್ರಿಕಾ | |||
ODI ಪಾದಾರ್ಪಣೆ (cap ೩೬) | ನವೆಂಬರ್ ೨೫ ೧೯೮೧: v ಇಂಗ್ಲೆಂಡ್ | |||
ಕೊನೆಯ ODI ಪಂದ್ಯ | ಡಿಸೆಂಬರ್ ೧೭ ೧೯೯೨: v ದಕ್ಷಿಣ ಆಫ್ರಿಕಾ | |||
ಪ್ರಾದೇಶಿಕ ತಂಡದ ಮಾಹಿತಿ | ||||
ವರ್ಷಗಳು | ತಂಡ | |||
೧೯೭೯–೧೯೯೩ | ಮುಂಬಯಿ | |||
೧೯೮೭–೧೯೯೧ | ಗ್ಲಾಮೋರ್ಗನ್ | |||
೧೯೮೭ | MCC | |||
ವೃತ್ತಿಜೀವನದ ಅಂಕಿಅಂಶಗಳು | ||||
ಟೆಸ್ಟ್ | ODIಗಳು | |||
ಪಂದ್ಯಗಳು | ೮೦ | ೧೫೦ | ||
ಒಟ್ಟು ರನ್ನುಗಳು | ೩೮೩೦ | ೩೧೦೮ | ||
ಬ್ಯಾಟಿಂಗ್ ಸರಾಸರಿ | ೩೫.೭೯ | ೨೯.೦೪ | ||
೧೦೦/೫೦ | ೧೧/೧೨ | ೪/೧೮ | ||
ಅತೀ ಹೆಚ್ಚು ರನ್ನುಗಳು | ೨೦೬ | ೧೦೯ | ||
ಬೌಲ್ ಮಾಡಿದ ಚೆಂಡುಗಳು | ೧೫೭೫೧ | ೬೬೧೩ | ||
ವಿಕೆಟ್ಗಳು | ೧೫೧ | ೧೨೯ | ||
ಬೌಲಿಂಗ್ ಸರಾಸರಿ | ೪೦.೯೬ | ೩೬.೦೪ | ||
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | ೨ | ೧ | ||
೧೦ ವಿಕೆಟುಗಳು ಪಂದ್ಯದಲ್ಲಿ | – | – | ||
ಶ್ರೇಷ್ಠ ಬೌಲಿಂಗ್ | ೫/೭೫ | ೫/೧೫ | ||
ಕ್ಯಾಚುಗಳು /ಸ್ಟಂಪಿಂಗ್‍ಗಳು | ೩೬/– | ೪೦/– | ||
ದಿನಾಂಕ ಡಿಸೆಂಬರ್ ೧, ೨೦೦೮ ವರೆಗೆ. |
ಜೀವನ
ಬದಲಾಯಿಸಿಕ್ರಿಕೆಟ್ಟಿನಲ್ಲಿ ವಿವಿಧ ಹಿನ್ನೆಲೆಗಳಲ್ಲಿ ಅಪಾರ ಯಶಸ್ಸು ಕಂಡ ಅಪರೂಪದ ವ್ಯಕ್ತಿ ರವಿ ಶಾಸ್ತ್ರಿ. ರವಿಶಾಸ್ತ್ರಿ ಜನಿಸಿದ್ದು ಮೇ ೨೭, ೧೯೬೨ರಲ್ಲಿ. ರವಿ ಶಾಸ್ತ್ರಿ ಅವರ ಕುಟುಂಬದವರು ಮೂಲತಃ ಮಂಗಳೂರಿನವರಾಗಿದ್ದು ಮುಂದಿನ ದಿನಗಳಲ್ಲಿ ಮುಂಬಯಿನಲ್ಲಿ ನೆಲೆ ನಿಂತವರು.
ಆಲ್ ರೌಂಡರ್
ಬದಲಾಯಿಸಿಒಬ್ಬ ಬೌಲರ್ ಎಂದು ತಂಡಕ್ಕೆ ಬಂದ ರವಿಶಾಸ್ತ್ರಿ ಮುಂದಿನ ದಿನಗಳಲ್ಲಿ ಬ್ಯಾಟಿಂಗಿನಲ್ಲೂ ಉಪಯುಕ್ತರೆನಿಸಿ ಆಲ್ ರೌಂಡರ್ ಎನಿಸಿದರು. ಎಡಗೈನಲ್ಲಿ ಸ್ಪಿನ್ ಬೌಲಿಂಗ್ ಮಾಡುತ್ತಿದ್ದ ಶಾಸ್ತ್ರಿ ಬಲಗೈನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಬೌಲರ್ ಆಗಿ ಬಂದು ಆಲ್ ರೌಂಡರ್ ಅನಿಸಿದವರು ಕೊನೆ ಕೊನೆಗೆ ಬೌಲಿಂಗಿಗಿಂತ ಬ್ಯಾಟಿಂಗಿನಲ್ಲೇ ಯಶಸ್ಸು ಕಂಡದ್ದು. ಗಾವಸ್ಕರ್ ಅವರಿಗೆ ಕುಟ್ಟುವುದರಲ್ಲಿ ಸರಿಸಮಾನನಾಗಿ ಡ್ರಾ ಪಂದ್ಯಗಳಿಗೆ ಅಗತ್ಯವೋ ಎಂಬಂತೆ ಕುಟು ಕುಟು ಕುಟ್ಟುತ್ತಾ ಚಪಾತಿ ಶಾಟುಗಳಲ್ಲಿ ಪ್ರಖ್ಯಾತರಿದ್ದ ರವಿ ಶಾಸ್ತ್ರಿ, ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗಿನಲ್ಲಿ ಆಗಿನ ಕಾಲದಲ್ಲಿ ಬೇಕಿದ್ದ ಹೆಚ್ಚೂ ಕಡಿಮೆ ವೇಗದ ರನ್ ಗತಿಗೂ ಒಗ್ಗಿಕೊಳ್ಳುತ್ತಿದ್ದರು. ಹೆಚ್ಚು ಉದ್ದ ಇದ್ದು ಬ್ಯಾಟಿಂಗಿನಲ್ಲಿ ಕೆಲವೇ ರೀತಿಯ ಸೀಮಿತವಾದ ಹೊಡೆತಗಳ ಸಾಮರ್ಥ್ಯ ಮಾತ್ರ ಹೊಂದಿದ್ದರೂ, ಬಹಳಷ್ಟು ವೇಳೆ ಅವರು ಉಪಯುಕ್ತ ಬ್ಯಾಟಿಂಗ್ ನೀಡಿದರು.
ಚಾಂಪಿಯನ್ ಆಫ್ ಚಾಂಪಿಯನ್ಸ್
ಬದಲಾಯಿಸಿ೧೯೮೫ರ ವರ್ಷದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವರ್ಲ್ಡ್ ಕ್ರಿಕೆಟ್ ಟೂರ್ನಮೆಂಟಿನಲ್ಲಿ ಅಂತಹ ಆಕ್ರಾಮಕ ಎನ್ನುವ ಆಟ ಆಡದಿದ್ದರೂ ಬಹಳಷ್ಟು ಪಂದ್ಯಗಳಲ್ಲಿ ಇವರ ಬ್ಯಾಟಿಂಗ್ ಕೊಡುಗೆ ಮತ್ತು ಅಲ್ಲಲ್ಲಿ ಬೌಲಿಂಗಿನಲ್ಲಿ ನೀಡಿದ ಕೊಡುಗೆ ಮಹತ್ವದ್ದೆನಿಸಿ ಇವರು ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಎನಿಸಿ ದೊಡ್ಡ ಮೊತ್ತದ ಬಹುಮಾನ, ಅಂದಿನ ಕಾಲದಲ್ಲಿ ಸಾಮಾನ್ಯ ಭಾರತೀಯರು ಅದುವರೆಗೆ ಹೆಚ್ಚು ಕೇಳಿರದಿದ್ದ 'ಆಡಿ ಕಾರು' ಮುಂತಾದ ಬಹುಮಾನ ಪಡೆದು ಪ್ರಖ್ಯಾತಿ ಪಡೆದರು.
ಒಂದು ಓವರಿನಲ್ಲಿ ಆರು ಸಿಕ್ಸರ್
ಬದಲಾಯಿಸಿರವಿ ಶಾಸ್ತ್ರಿಯವರು ಮೊದಲ ದರ್ಜೆ ಪಂದ್ಯವೊಂದರಲ್ಲಿ ಆರು ಚೆಂಡುಗಳಿಗೆ ಆರೂ ಸಿಕ್ಸರ್ ಬಾರಿಸಿ ಗ್ಯಾರಿ ಸೋಬರ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದರು.
ಸಾಧನೆ
ಬದಲಾಯಿಸಿಟೆಸ್ಟ್ ಕ್ರಿಕೆಟ್ಟಿನಲ್ಲಿ ೮೦ ಪಂದ್ಯಗಳಲ್ಲಿ ೩೮೩೦ರನ್ನುಗಳ ಜೊತೆಗೆ ೧೫೧ ವಿಕೆಟ್ಟುಗಳನ್ನೂ ಸಂಪಾದಿಸಿದ ರವಿ ಶಾಸ್ತ್ರಿ ಒಂದು ದಿನದ ೧೫೦ ಪಂದ್ಯಗಳಲ್ಲಿ ೩೧೦೮ರನ್ನುಗಳನ್ನೂ ೧೨೯ ವಿಕೆಟ್ಟುಗಳನ್ನೂ ಸಂಪಾದಿಸಿದರು.
ವೀಕ್ಷಕ ವಿವರಣೆಗಾರ, ತಜ್ಞ ವಿಶ್ಲೇಷಕ
ಬದಲಾಯಿಸಿಇವೆಲ್ಲಕ್ಕೂ ಮಿಗಿಲಾದ ರವಿಶಾಸ್ತ್ರಿ ಸಾಧನೆ ಎಂದರೆ ಕ್ರಿಕೆಟ್ ವೀಕ್ಷಕ ವಿವರಣೆಗಾರ, ತಜ್ಞ ವಿಶ್ಲೇಷಕರಾಗಿ ಕಂಡ ಅತ್ಯಭೂತ ಪೂರ್ವ ಯಶಸ್ಸು. ಬಹುಶಃ ರವಿ ಶಾಸ್ತ್ರಿ ಈ ಕ್ಷೇತ್ರಕ್ಕೆ ಬಂದ ಸಮಯದಲ್ಲಿ ದೂರದರ್ಶನದಲ್ಲಿ ಕ್ರಿಕೆಟ್ ಪಂದ್ಯಗಳ ಪ್ರಸಾರ ವಿಶ್ವದೆಲ್ಲೆಡೆಯಲ್ಲಿ ಉತ್ತಮ ತಂತ್ರಜ್ಞಾನ ಪಡೆದುದರ ಜೊತೆಗೆ, ಭಾರತದ ಕ್ರಿಕೆಟ್ಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಲು ಪ್ರಾರಂಭಿಸಿತ್ತು. ಜೊತೆಗೆ ಪಂದ್ಯಗಳ ಸಂಖ್ಯೆ ತೀವ್ರ ಮಟ್ಟಕ್ಕೆ ಏರಿತು. ಇವೆಲ್ಲವುಗಳನ್ನು ವಿಶ್ವದೆಲ್ಲೆಡೆಯಲ್ಲಿ ಅತ್ಯಂತ ಸಮರ್ಥವಾಗಿ, ಚಾಕಚಕ್ಯತೆಯಿಂದ ಮತ್ತು ಉತ್ತಮ ಮಾತುಗಾರಿಕೆಯಿಂದ ಸ್ವಯಂ ಅಭಿವೃದ್ಧಿಗೆ ಬಳಸಿಕೊಂಡವರಲ್ಲಿ ರವಿ ಶಾಸ್ತ್ರಿ ಪ್ರಮುಖನಾಗಿ ಕಾಣುತ್ತಾರೆ.
ಎಲ್ಲೆಲ್ಲೂ ರವಿ ಮಿಂಚು
ಬದಲಾಯಿಸಿಒಂದಿಷ್ಟು ಪ್ರತಿಭೆ, ಸಾಕಷ್ಟು ಸೋಗು, ಬಹಳಷ್ಟು ಅದೃಷ್ಟ ಮತ್ತು ಉತ್ತಮ ಹೊಂದಾಣಿಕೆಯ ಮನೋಭಾವಗಳಿರುವ ವ್ಯಕ್ತಿ ಯಾವ ರೀತಿಯಲ್ಲಿ ಸಾಧನೆ ಮಾಡಬಹುದೆಂಬುದಕ್ಕೆ ರವಿಶಾಸ್ತ್ರಿ ಉತ್ತಮ ಉದಾಹರಣೆ. ಯಾರು ಗೆಲ್ಲಲಿ, ಸೋಲಲಿ ಅಲ್ಲಿ ಮಿಂಚುವ ವ್ಯಕ್ತಿ ರವಿಶಾಸ್ತ್ರಿ.