ರತ್ನಮಾಲಾ ಪ್ರಕಾಶ್

ಭಾರತಿಯ ಗಾಯಕಿ


ರತ್ನಮಾಲಾ ಪ್ರಕಾಶ್(19 August 1952), ಕನ್ನಡದ ಖ್ಯಾತ ಗಾಯಕಿಯರಲ್ಲಿ ಒಬ್ಬರು. ಸುಗಮ ಸಂಗೀತ ಕ್ಷೇತ್ರದಲ್ಲಿ ಅವರ ಸಾಧನೆ ಗಮನಾರ್ಹ. ಸುಗಮ ಸಂಗೀತ ಮಾತ್ರವೇ ಅಲ್ಲ ಭಕ್ತಿಗೀತೆ, ಶಾಸ್ತ್ರೀಯ ಸಂಗೀತ, ಜನಪದ ಗೀತೆ ಹಾಗೂ ಚಲನಚಿತ್ರ ಹಿನ್ನೆಲೆಗಾಯನದಲ್ಲಿಯೂ ರತ್ನಮಾಲಾ ದೊಡ್ಡ ಹೆಸರು ಗಳಿಸಿದ್ದಾರೆ.

ರತ್ನಮಾಲಾ ಪ್ರಕಾಶ್
ಹಿನ್ನೆಲೆ ಮಾಹಿತಿ
ಜನ್ಮನಾಮರತ್ನಮಾಲಾ
ಜನನ (1952-08-19) ೧೯ ಆಗಸ್ಟ್ ೧೯೫೨ (ವಯಸ್ಸು ೭೧)[೧]
ಬೆಂಗಳೂರು, ಕರ್ನಾಟಕ
ಸಂಗೀತ ಶೈಲಿಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತ
ವೃತ್ತಿಹಿನ್ನೆಲೆ ಗಾಯಕಿ
ಸಕ್ರಿಯ ವರ್ಷಗಳು೧೯೮೦ - ಈವರೆಗೂ

ವೈಯಕ್ತಿಕ ಜೀವನ ಸಂಪಾದಿಸಿ

ಹೆಸರಾಂತ ಶಾಸ್ತ್ರೀಯ ಸಂಗೀತಗಾರರಾದ ಆರ್. ಕೆ. ಶ್ರೀಕಂಠನ್ ಮತ್ತು ಮೈತ್ರೇಯಿ ದಂಪತಿಗಳ ಮಗಳಾಗಿ ೧೯೫೨ರ ಆಗಸ್ಟ್ ೧೯ರಂದು ಹುಟ್ಟಿದ ರತ್ನಮಾಲ, ಬೆಳೆದದ್ದು ಸಂಗೀತಮಯ ಪರಿಸರದಲ್ಲಿಯೇ. ಬಾಲ್ಯದಿಂದಲೂ ಸಂಗೀತವನ್ನು ಆಸ್ಥೆಯಿಂದ ಕಲಿತ ರತ್ನಮಾಲ ಸುಗಮ ಸಂಗೀತ ಕ್ಷೇತ್ರದಲ್ಲಿ ಮುಂದುವರೆದರು.

ಸುಗಮ ಸಂಗೀತ ಸಂಪಾದಿಸಿ

ಕೆ.ಎಸ್.ನರಸಿಂಹಸ್ವಾಮಿ ಅವರಿಂದ ಕರ್ನಾಟಕದ ಪರ್ವೀನ್ ಸುಲ್ತಾನಾ ಎಂದು ಮೆಚ್ಚುಗೆ ಗಳಿಸಿದವರು ರತ್ನಮಾಲ. ಕುವೆಂಪು ಅವರಿಂದ ಹಿಡಿದು ಎಚ್.ಎಸ್.ವೆಂಕಟೇಶಮೂರ್ತಿ ಅವರ ತನಕ ಎಲ್ಲಾ ತಲೆಮಾರಿನ ಕವಿಗಳ ಹಾಡುಗಳನ್ನು ರತ್ನಮಾಲ ಹಾಡಿದ್ದಾರೆ.

ಮೈಸೂರು ಅನಂತಸ್ವಾಮಿ, ಎಚ್. ಕೆ. ನಾರಾಯಣ್, ಸಿ. ಅಶ್ವತ್ಥ್ ಮುಂತಾದವರ ಸಂಯೋಜನೆಯಲ್ಲಿ ಹಾಡಿದ ಹಾಡುಗಳು ಜನಪ್ರಿಯವಾಗಿವೆ. ಇಲ್ಲಿಯವರೆಗೆ ಮುದ್ರಿತಗೊಂಡಿರುವ ರತ್ನಮಾಲಾ ಅವರ ಧ್ವನಿಸುರುಳಿಗಳೇ ೫೦೦ಕ್ಕಿಂತಲೂ ಹೆಚ್ಚು.

ಕೆಲವು ಜನಪ್ರಿಯ ಹಾಡುಗಳು ಸಂಪಾದಿಸಿ

ಭಾವಗೀತೆಗಳು

 • "ತೌರ ಸುಖದೊಳಗೆನ್ನ"
 • "ನನ್ನ ಇನಿಯನ ನೆಲೆಯ ಬಲ್ಲೆಯೇನೆ"
 • "ಹೂವುಗಳು ಹೊರಳುವವು"
 • "ನೀನು ಮುಗಿಲು ನಾನು ನೆಲ"
 • "ಮತ್ತದೇ ಬೇಸರ ಅದೇ ಸಂಜೆ"
 • "ಯಾವ ಮೋಹನ ಮುರಳಿ ಕರೆಯಿತೋ"

ಚಿತ್ರಗೀತೆಗಳು ಸಂಪಾದಿಸಿ

ರತ್ನಮಾಲ ಹಾಡಿರುವ ಚಿತ್ರಗೀತೆಗಳು[೨].

ಹಾಡು
ಚಿತ್ರ
ವರ್ಷ
ಸಂಗೀತ
ಸಾಹಿತ್ಯ
ಸಹ ಗಾಯನ
ನಟಿ
ಶೃಂಗಾರದ ಕಾವ್ಯವೋ ಯಾರೇ ನೀ ಅಭಿಮಾನಿ 2000 ಹಂಸಲೇಖ ಹಂಸಲೇಖ ಎಸ್.ಪಿ.ಬಾಲಸುಬ್ರಹ್ಮಣ್ಯಂ ರಮ್ಯ ಕೃಷ್ಣ
ಬಾರೆ ಬಾರೆ ರುಕ್ಕಮ್ಮ ಗಡಿಬಿಡಿ ಕೃಷ್ಣ 1998 ಹಂಸಲೇಖ ಹಂಸಲೇಖ ರಾಜೇಶ್ ಕೃಷ್ಣನ್ ರವಳಿ,
ಚಾತುಲತಾ
ಹುಡುಗಿ ಹೂ ಹುಡುಗಿ,
ಗೆದಿಯಬೇಕು ಮಗಳ,
ಮಾಯಾದ ಮನದ ಭಾರ
ನಾಗಮಂಡಲ 1997 ಸಿ. ಅಶ್ವತ್ಥ್ ಗೋಪಾಲ್ ಯಾಗ್ನಿಕ್ -
-
ತಂಡ
ವಿಜಯಲಕ್ಷ್ಮಿ, ಬಿ.ಜಯಶ್ರೀ
ಗ ಗ ರಿ ರಿ ಗ(ಆಲಾಪ) ನಮ್ಮೂರ ಮಂದಾರ ಹೂವೆ 1996 ಇಳಯರಾಜ - ಪ್ರೇಮಾ
ತೇರು ಹೋಯ್ತಯ್ತವ್ವಾ ಕೊಟ್ರೇಶಿ ಕನಸು 1995 ಸಿ. ಅಶ್ವತ್ಥ್ ಎಚ್. ಎಸ್. ವೆಂಕಟೇಶಮೂರ್ತಿ ಮಂಜುಳಾ ಗುರುರಾಜ್, ಮಾಸ್ಟರ್ ಶರ್ಮ
ರಾಯರು ಬಂದರು ಮೈಸೂರು ಮಲ್ಲಿಗೆ 1992 ಸಿ. ಅಶ್ವತ್ಥ್ ಕೆ. ಎಸ್. ನರಸಿಂಹಸ್ವಾಮಿ

ಜನನ ಹಾಗೂ ಪರಿವಾರ ಸಂಪಾದಿಸಿ

ಬೆಂಗಳೂರಿನಲ್ಲಿ ಸನ್.೧೯೫೨ ರ, ಆಗಸ್ಟ್, ೧೯ ರಂದು, ಜನಿಸಿದ ರತ್ನಮಾಲಾರ ತಂದೆ, ಸುಪ್ರಸಿದ್ಧ ಸಂಗೀತ ವಿದ್ವಾಂಸ,'ಡಾ.ಆರ್.ಕೆ.ಶ್ರೀಕಂಠನ್'. ತಾಯಿ 'ಮೈತ್ರೇಯಿ'. ಚಿಕ್ಕವರಾಗಿದ್ದಾಗಿನಿಂದ ತಂದೆಯವರ ಸಂಗೀತ ಪಾಠದ ಗರಡಿಯಲ್ಲಿ ಬೆಳೆದರು. ಆದರೆ ಅವರು ಆಯ್ದುಕೊಂಡಿದ್ದು ಸುಗಮ ಸಂಗೀತವನ್ನು.

 • ಮೈಸೂರು ಅನಂತಸ್ವಾಮಿ
 • ಸಿ ಅಶ್ವಥ್,
 • ಪದ್ಮಚರಣ,
 • ಎಚ್.ಕೆ.ನಾರಾಯಣ,

ಮೊದಲಾದ ದಿಗ್ಗಜರ ಸಂಗೀತ ನಿರ್ದೇಶನದಲ್ಲಿ ತಮ್ಮ ಗಾಯನವನ್ನು ಪ್ರಸ್ತುತಪಡಿಸಿ,'ಸೈ'ಎನ್ನಿಸಿಕೊಂಡರು.

ಸಿಡಿ,ಕ್ಯಾಸೆಟ್ ಗಳಲ್ಲಿ ಧ್ವನಿಮುದ್ರಿಕೆಗಳು ಸಂಪಾದಿಸಿ

ಐನೂರಕ್ಕೂ ಮಿಗಿಲಾದ 'ಸಿಡಿ'ಗಳಲ್ಲಿ 'ಕ್ಯಾಸೆಟ್' ಗಳಲ್ಲಿ ತಮ್ಮ ಧ್ವನಿಯನ್ನು ಮುದ್ರಿಸಲಾಗಿದೆ.

 • ಕೆಂ ಗುಲಾಬಿ
 • ಮೈಸೂರು ಮಲ್ಲಿಗೆ
 • ಭಾವ ಸಂಗಮ
 • ಡಾ.ರಾಜ್ ಕುಮಾರ್ ಜೊತೆಗೆ ಹಾಡಿರುವ 'ಅನುರಾಗ'
 • ಮಂಕು ತಿಮ್ಮನ ಕಗ್ಗ
 • ಚೈತ್ರ
 • ರೂಪಸಿ
 • ಭಾವೋತ್ಸವ
 • ಕವಿತಾ
 • ಸ್ಪಂದನ
 • ನೆನಪಿನಾಳದಲ್ಲಿ
 • ನೀಲಾಂಬರಿ,
 • ಅಣಿಮುತ್ತುಗಳು

ಖ್ಯಾತ ಸಂಗೀತ ನಿರ್ದೇಶಕರ ಜೊತೆ ಸಂಪಾದಿಸಿ

 • ಟಿಜಿ ಲಿಂಗಪ್ಪ
 • ಹಂಸಲೇಖ
 • ರಾಜನ್ ನಾಗೇಂದ್ರ
 • ವಿಜಯ ಭಾಸ್ಕರ
 • ಅಶ್ವಥ್-ವೈದಿ,

ಮುಂತಾದವರ ನಿರ್ದೇಶನದಲ್ಲಿ ಹಾಡಿದ ಚಲನಚಿತ್ರ ಗೀತೆಗಳು ಅಪಾರ.

ಡಾ.ರಾಜ್ ಜೊತೆ ಹಾಡಿದ್ದು ಸಂಪಾದಿಸಿ

ವಿಶೇಷವಾಗಿ ನೆನೆಸುವುದಾದರೆ,ಡಾ.ರಾಜ್ ರೊಡನೆ, 'ಗುರಿ', ಡಾ. ಎಸ್.ಪಿ.ಬಾಲಸುಬ್ರಮಣ್ಯಂ ರೊಡನೆ ಹಾಡಿದ, 'ಏಳು ಸುತ್ತಿನ ಕೋಟೆ' ಚಿತ್ರಗಳಿಗೆ ಹಾಡಿದ ಹಾಡುಗಳು. ಆಕಾಶವಾಣಿ,ದೂರದರ್ಶನದಲ್ಲಿ ಪ್ರಸಾರವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪ್ರಸಂಗಗಳು.

ಮತ್ತೆ ಕೆಲವು ಮರೆಯಲಾರದ ಅನುಭವಗಳು ಸಂಪಾದಿಸಿ

 • ಸೋವಿಯೆಟ್ ರಶ್ಯಾದಲ್ಲಿ ಜರುಗಿದ 'ಭಾರತದ ಉತ್ಸವದಲ್ಲಿ ಪಂಡಿತ್ ರವಿಶಂಕರ್ ತಂಡದಲ್ಲಿ ಭಾಗವಹಿಸಿ ಹಾಡಿದ ಹೆಗ್ಗಳಿಕೆ'.
 • ದೇಶ-ವಿದೇಶಗಳಲ್ಲಿ ಹಾಡಿದ ಖ್ಯಾತಿ. ದುಬೈ,ಸಿಂಗಪುರ್ ಕನ್ನಡ ಸಂಘ, ಶಾರ್ಜಾ, ಅಬುದಾಬಿಯಲ್ಲಿ ಮೈಸೂರು ಅನಂತ ಸ್ವಾಮಿ ತಂಡದಲ್ಲಿ ಹಾಡಿದರು.
 • ಅಮೇರಿಕಾದ ಫಿನಿಕ್ಸ್, ಹಾಗೂ ಹೂಸ್ಟನ್ ಕನ್ನಡ ಸಂಘದಲ್ಲಿ ಭಾಗವಹಿಸಿ ಹಾಡಿದ ಅತ್ಯದ್ಭುತ ಅನುಭವಗಳು.
 • 'ರಮಾ ಫೌಂಡೇಶನ್' ಅಡಿಯಲ್ಲಿ ಬಾಲಪ್ರತಿಭೆಗಳಿಗೆ ಕೊಟ್ಟ ಉತ್ತೇಜನ,
 • 'ಕರ್ನಾಟಕ ವೈಜಯಂತಿ ಮೂಲಕ ಕರ್ನಾಟಕದಾದ್ಯಂತ ಹಮ್ಮಿಕೊಂಡ ಕಾರ್ಯಕ್ರಮಗಳು.

ಪ್ರಶಸ್ತಿ,ಪುರಸ್ಕಾರಗಳು ಸಂಪಾದಿಸಿ

 • 'ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ'ಯಿಂದ 'ಕರ್ನಾಟಕ ಕಲಾ ತಿಲಕ' ಪ್ರಶಸ್ತಿ.
 • 'ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ',
 • 'ಆರ್ಯ ಭಟ ಪ್ರಶಸ್ತಿ',
 • 'ದುಬೈ,ಸಿಂಗಪುರ ಅಬುದಾಬಿ,ಕನ್ನಡಸಂಘಗಳಿಂದ ದೊರೆತ ಪ್ರಶಸ್ತಿಗಳು ಮುಖ್ಯವಾದವುಗಳು.


ಉಲ್ಲೇಖಗಳು ಸಂಪಾದಿಸಿ

 1. http://kanaja.in/?tribe_events=%E0%B2%B0%E0%B2%A4%E0%B3%8D%E0%B2%A8%E0%B2%AE%E0%B2%BE%E0%B2%B2%E0%B2%BE-%E0%B2%AA%E0%B3%8D%E0%B2%B0%E0%B2%95%E0%B2%BE%E0%B2%B6%E0%B3%8D%E2%80%8C
 2. https://chiloka.com/celebrity/rathnamala-prakash