ಮೈಸೂರು ಅನಂತಸ್ವಾಮಿ

ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಮೈಸೂರು ಅನಂತಸ್ವಾಮಿಯವರದು ಸದಾ ನೆನಪಿನಲ್ಲುಳಿಯುವ ಹೆಸರು.(ಜನನ: ಅಕ್ಟೋಬರ್ ೨೫,೧೯೩೬ - ಮರಣ: ಜನವರಿ ೧,೧೯೯೫)

ಹಿನ್ನೆಲೆ,ಕಾರ್ಯಕ್ಷೇತ್ರ

ಬದಲಾಯಿಸಿ

ಅನಂತಸ್ವಾಮಿ ಹುಟ್ಟಿದ್ದು ಪ್ರಸಿದ್ಧ ಸಂಗೀತಗಾರ ಚಿಕ್ಕ ರಾಮರಾವ್ರವರ ಮನೆತನದಲ್ಲಿ, ಮೈಸೂರಿನಲ್ಲಿ.ತಂದೆ ಸುಬ್ಬರಾಯರು,ತಾಯಿ ಕಮಲಮ್ಮ.ಬಾಲ್ಯದಿಂದಲೇ ಸುಗಮ ಸಂಗೀತದಲ್ಲಿ ಅಪಾರ ಆಸಕ್ತಿ.ಆ ಕಾಲದ ಜನಪ್ರಿಯ ಜಾನಪದ ಸಂಗೀತ ಹಾಡುಗಾರ ಪಿ.ಕಾಳಿಂಗರಾವ್‌ರವರ ಕಂಪೆನಿಯಲ್ಲಿ ಕೆಲಕಾಲ ಮ್ಯಾಂಡೋಲಿನ್ ವಾದಕರಾಗಿದ್ದರು.ಅಲ್ಲಿಂದ ಸುಗಮ ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿದ ಇವರು ಮತ್ತೆ ಹಿಂದೆ ತಿರುಗಿ ನೋಡಲಿಲ್ಲ.ಅನೇಕ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರು.ನಂತರದಲ್ಲಿ ತಾವೇ ಸಂಗೀತ ಸಂಯೋಜನೆ ಮಾಡಿದರು.ಕನ್ನಡದ ಪ್ರಸಿದ್ಧ ಕವಿಗಳ ಕವನಗಳಿಗೆ ಧ್ವನಿಯಾದರು.ಕನ್ನಡ ಕವಿಗಳ ಭಾವಗೀತೆಗಳನ್ನು ಜನಪ್ರಿಯಗೊಳಿಸಲು ತಮ್ಮನ್ನು ತಾವೇ ಮುಡಿಪಾಗಿರಿಸಿಕೊಂಡರು.ಈ ಕವನಗಳನ್ನು ಧ್ವನಿಸುರುಳಿಗಳ ಮೂಲಕ ಕನ್ನಡಿಗರ ಮನೆ-ಮನಗಳಿಗೂ ತಲುಪಿಸಿ,ಆ ಮೂಲಕ ಹೊಸಯುಗಕ್ಕೆ ನಾಂದಿ ಹಾಡಿದರು.ಇವರು ಸಂಯೋಜನೆ ಮಾಡಿರುವ ರಾಗಗಳು ಆಯಾ ಗೀತೆಗಳ ಭಾವಕ್ಕೆ ತಕ್ಕಂತೆ ಸೂಕ್ತವಾಗಿದ್ದು ,ಅವುಗಳ ಅರ್ಥಗಳನ್ನು ಹೆಚ್ಚು ಸಮರ್ಥವಾಗಿ ಹೊರಚೆಲ್ಲುತ್ತವೆ. ಇವರ ಸಂಗೀತ ನಿರ್ದೇಶನ ಮತ್ತು ಗಾಯನದ ಸುಮಾರು ೨೬ ಧ್ವನಿಸುರುಳಿಗಳು ಬಿಡುಗಡೆಯಾಗಿವೆ.

ಇವರ ಕೆಲವು ಧ್ವನಿಸುರುಳಿಗಳು

ಬದಲಾಯಿಸಿ

ಇವರು ಸಂಗೀತ ನಿರ್ದೇಶನ ಮಾಡಿರುವ ಕೆಲವು ಚಲನಚಿತ್ರಗಳು

ಬದಲಾಯಿಸಿ

ಮತ್ತೆ ಮತ್ತೆ ಮೆಲುಕು ಹಾಕಬೇಕೆನಿಸುವ ಕೆಲವು ಗೀತೆಗಳು

ಬದಲಾಯಿಸಿ
  • ಜೋಗದ ಸಿರಿ ಬೆಳಕಿನಲ್ಲಿ...
  • ಎದೆ ತುಂಬಿ ಹಾಡಿದೆನು....
  • ಓ ನನ್ನ ಚೇತನಾ,ಆಗು ನೀ ಅನಿಕೇತನಾ...
  • ಜಯ ಭಾರತ ಜನನಿಯ ತನುಜಾತೆ... - ಕುವೆಂಪುರವರ ಈ ಕವನ ಕನ್ನಡ ಚಿತ್ರಗೀತೆಯಾಗಿ ಮಾರ್ಪಟ್ಟು ಅನೇಕ ವರ್ಷಗಳ ಕಾಲ ಒಂದು ಜನಪ್ರಿಯ ಧಾಟಿಯಲ್ಲಿತ್ತು.ಈ ಕವನಕ್ಕೆ ಹೊಸಧಾಟಿಯ ರಾಗ ಸಂಯೋಜನೆ ಮಾಡಿ ,ಅದಕ್ಕೆ ದೇಶಭಕ್ತಿಯ ಲೇಪ ಕೊಟ್ಟು,ಮೈ ಮನಗಳಲ್ಲಿ ಪುಳಕವೆಬ್ಬಿಸುವ,ಉತ್ಸಾಹವನ್ನು ತುಂಬುವ ಮಾಂತ್ರಿಕ ಕೆಲಸವನ್ನು ಮಾಡಿದ್ದು ಅನಂತಸ್ವಾಮಿಯವರು.
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ.
  • ರಾಜ್ಯೋತ್ಸವ ಪ್ರಶಸ್ತಿ.

ಮೈಸೂರು ಅನಂತಸ್ವಾಮಿಯವರ ಮಗ ರಾಜು ಅನಂತಸ್ವಾಮಿ ಮತ್ತು ಮಗಳು ಸುನೀತಾ ಕೂಡಾ ತಂದೆಯಂತೆಯೇ ಸುಗಮ ಸಂಗೀತ ಕ್ಷೇತ್ರದಲ್ಲಿ ಮುಂದುವರೆದಿದ್ದಾರೆ.