ಎಚ್.ಕೆ.ನಾರಾಯಣ್, ಕನ್ನಡ ನಾಡಿನ ಹೆಚ್ಚು ಸಂಖ್ಯೆಯ ಕವಿಗಳ ಗೀತೆಗಳಿಗೆ, ರಾಗಸಂಯೋಜನೆಮಾಡಿ, ಕವಿತೆಗಳನ್ನು ಗೀತೆಗಳ ರೂಪದಲ್ಲಿ ಪ್ರಚಾರಕ್ಕೆ ಹೊರತಂದ ಖ್ಯಾತಿಯನ್ನು ಪಡೆದಿದ್ದಾರೆ. ಅವರೊಬ್ಬ ನುರಿತ ಶಾಸ್ತ್ರೀಯ ಸಂಗೀತಕಾರರು, ಮತ್ತು ಆಕಾಶವಾಣಿ ಕಲಾವಿದರು.

ಜನನ ಹಾಗೂ ಬಾಲ್ಯ :

ಬದಲಾಯಿಸಿ

ಹೊಳೆನರಸಿಪುರದ ಬಳಿಯ ಸಣ್ಣ ಗ್ರಾಮದಲ್ಲಿ. ತಂದೆ, ಕೇಶವ, ಸಂಗೀತಗಾರರು. ಮಾವ, 'ಎಮ್. ಪಿ. ನಾಗಮುತ್ತು', ಸಂಗೀತಕಾರರು ; ಆಕಾಶವಾಣಿಯ ಸಂಗೀತವಿಭಾಗದಲ್ಲಿ ಕೆಲಸಮಾಡುತ್ತಿದ್ದರು. ಇಂತಹ ಮನೆಯ ಪರಿಸರದಲ್ಲಿ ಬೆಳೆದ, ನಾರಾಯಣ್ ಚಿಕ್ಕವಯಸ್ಸಿನಲ್ಲೇ, ಆಕಾಶವಾಣಿಗೆ ಪಾದಾರ್ಪಣೆಮಾಡಿದರು. ಆ ಸಮಯದಲ್ಲಿ ಗೀತೆಯೊಂದಕ್ಕೆ, 'ಸ್ವರಪ್ರಸ್ತಾವನೆ' ಹಾಕಿದರು. ಆ ಗೀತೆ, ಅವರ ಗುರುಗಳಾದ, ವಿದ್ವಾನ್, 'ಅರ್. ಕೆ. ಶ್ರೀಕಂಠನ್,' ಅಲ್ಲದೆ, ಎಲ್ಲರಿಂದಲೂ ಪ್ರಶಂಸೆಯನ್ನು ಗಿಟ್ಟಿಸಿತು. ಸರಿ, 'ಎಚ್.ಕೆ.ಎನ್,'ಆಕಾಶವಾಣಿಯ, 'ಸಂಗೀತ ಸಂಯೋಜಕ,' ರಾಗಿ ನೇಮಕಗೊಂಡರು.

ವಿದ್ವಾನ್ ಆರ್.ಕೆ. ಶ್ರೀಕಂಠನ್ರವರ ಶಿಷ್ಯತ್ವದಲ್ಲಿ

ಬದಲಾಯಿಸಿ

ಮೊದಲ, ಸಂಗೀತ ಶಿಕ್ಷಣ, ತಂದೆ, ಹಾಗೂ ಮಾವನವರಿಂದ ದೊರೆಯಿತು.ಸಂಗೀತದಲ್ಲಿ ಪರಿಣಿತರಾದರಲ್ಲದೆ, ಪೂರ್ಣಪ್ರಮಾಣದ ಸಂಗೀತ ಕಛೇರಿಯನ್ನು ನೀಡುತ್ತಿದ್ದರು. ಶಾಸ್ತ್ರೀಯ ಸಂಗೀತದ "ಮೇಸ್ಟ್ರು," ಎನ್ನಿಸಿಕೊಂಡರು. ಆಕಾಶವಾಣಿಯ ಅಗತ್ಯಗಳಿಗಾಗಿ 'ಸುಗಮಸಂಗೀತ,' ವನ್ನು ಅವರು, ರೂಢಿಸಿಕೊಂಡರು. 'ನೃತ್ಯ ಕಾರ್ಯಕ್ರಮ,' ಗಳಿಗೆ "ಸಹಗಾನ," ವನ್ನು ನೀಡುತ್ತಿದ್ದರು. ಕರಾರುವಾಕ್ಕಾಗಿ, ಮತ್ತು ಭಾವಪೂರ್ಣವಾಗಿ, ತಾಸುಗಟ್ಟಲೆ ಹಾಡಬೇಕಾದ ನೃತ್ಯದ ಸಹಗಾಯನವನ್ನು, (ನಟುವಾಂಗದೊಡನೆ), ಮಾಡುತ್ತಿದ್ದ ಕೆಲಸ ಅನನ್ಯ. ಭಾವಗೀತೆಗಳ ರಾಗಸಂಯೋಜನೆಗೆ ಅಗತ್ಯವಾಗಿದ್ದ, ಹಿಂದೂಸ್ತಾನಿ ಸಂಗೀತ ಪ್ರಾಕಾರದಲ್ಲೂ, ಸಾಕಷ್ಟು ಪರಿಶ್ರಮವನ್ನು ಸಾಧಿಸಿದರು. ನೃತ್ಯಕ್ಕೆ ಹಾಡಲು ಪ್ರಾರಂಭಿಸಿದ ಎರಡು ವರ್ಷಗಳ ನಂತರ, ಅವರು, ತಮ್ಮ ಶಿಷ್ಯೆ, ನೃತ್ಯಾಂಗನೆ, 'ಶಾಂತ,' ರವರನ್ನು ಮದುವೆಯಾದರು. ಈ ತೀರ್ಮಾನವನ್ನು ನಾರಾಯಣ್-ಶಾಂತರವರು ತೆಗೆದುಕೊಂಡರು. ಇವರಿಗೆ, ಇಬ್ಬರು ಹೆಣ್ಣುಮಕ್ಕಳು. ಅವರೂ, 'ನೃತ್ಯಕಲಾಸಕ್ತರು'. ಸೋದರ, ಕೇಶವಮೂರ್ತಿಗಳು, ಜೊತೆಯಲ್ಲಿದ್ದಾರೆ. ಇವರು, 'ಗಿಟಾರ್,' 'ಪಿಟೀಲು,' ವಾದ್ಯಗಳನ್ನು ನುಡಿಸುತ್ತಾರೆ. 'ಪಾಶ್ಚ್ಯಾತ್ಯ ಸಂಗೀತ,' ದಲ್ಲೂ ಕೃಷಿಮಾಡಿದ್ದಾರೆ. ಮಗ, ಮನೆಯಲ್ಲಾದ ಚಿಕ್ಕ, "ಗ್ಯಾಸ್ ಸಿಲಿಂಡರ್ ಸ್ಫೋಟ," ದಲ್ಲಿ ಮೃತರಾದರು. ಈ ಅಪ್ರಿಯ ಘಟನೆಯನ್ನು ಮರೆಯಲು, ನಾರಾಯಣ್ ರಿಗೆ, 'ಧ್ಯಾನ,' ಹಾಗೂ 'ಸಂಗೀತಾರಾಧನೆ,' ಯೇ ಸಹಾಯಕವಾಯಿತು. 'ಆಕಾಶವಾಣಿಯ ತಮ್ಮ ೩೬ ವರ್ಷಗಳ, ಸೇವಾ-ಕಾಲಾವಧಿ' ಯಲ್ಲಿ, ಅಸಂಖ್ಯಾತ, ಹಾಡುಗಳಿಗೆ ರಾಗಸಂಯೋಜಿಸಿದ್ದಾರೆ. ಹಾಡಿದ್ದಾರೆ. ಕಾರ್ಯಕ್ರಮಗಳಿಗೆ ಸಂಗೀತದ, ಅನಿವಾರ್ಯತೆ ಬಂದಾಗ ತಾವೇ ಹಾಡಿದ್ದಾರೆ. ಎಲ್ಲ ಕಲಾವಿದರಿಗೂ ಪ್ರೋತ್ಸಾಹ, ಮತ್ತು ಕಲೆಗೆ ಉತ್ತೇಜನ ಕೊಡುತ್ತಿದ್ದರು. ಮಹಾನ್ ಸಂಗೀತಕಾರರಾದ, 'ವಸಂತಕವಲಿ', 'ಪದ್ಮಚರಣ್', 'ವಿದ್ವಾನ್, ಆರ್. ಕೆ. ಶ್ರೀಕಂಠನ್', 'ವೀಣಾ ದೊರೈಸ್ವಾಮಿ ಅಯ್ಯಂಗಾರ್', 'ಎಸ್. ಕೃಷ್ಣಮೂರ್ತಿ', 'ಎಚ್. ಆರ್. ಲೀಲಾವತಿ', ಮುಂತಾದವರಿಗೆ, ಸಹಾಯಕರಾಗಿ, ಸಹೋದ್ಯೋಗಿಯಾಗಿ, ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಅವರದೆಆದ, 'ಸುಗಮಸಂಗೀತ,' ದ, ಒಂದು "ಛಾಪ," ನ್ನು ಉಳಿಸಿಕೊಂಡಿದ್ದಾರೆ.

ಅವರ ಕೆಲವು ಸಾಧನೆಗಳು

ಬದಲಾಯಿಸಿ

೧. 'ನೂಪುರ್' ನೃತ್ಯ ತಂಡಕ್ಕೆ, ಸಹಗಾನವನ್ನು ನೀಡಿದರು. "ಲಲಿತಾ ಶ್ರೀನಿವಾಸನ್," ಅದರ ಪ್ರಾಯೋಜಕರು. ೨. ರಷ್ಮಿಹೆಗಡೆ, ಮುಂತಾದ ಹಿರಿಯ ಕಲಾವಿದರಿಗೆ, ತಮ್ಮ ಹಾಡುಗಾರಿಕೆಯ ಸಹಾಯವನ್ನು ಮಾಡಿದರು. ಇವರಜೊತೆಯಲ್ಲಿ, ವಿದೇಶಗಳಿಗೆ ಹೋಗಿ, ಅಲ್ಲಿನ ವೇದಿಕೆಗಳಲ್ಲಿ ಪ್ರದರ್ಶನ ನೀಡಿದರು. ಆಕಾಶವಾಣಿ ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ಅವರಿಗೆ ವರ್ಗವಾಯಿತು. ಆಗ ಅವರು ಅದನ್ನು ವಿರೋಧಿಸಿ, ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದರು.

'ಸುಗಮ ಸಂಗೀತ ಕ್ಷೇತ್ರ'ಕ್ಕೆ ಕೊಟ್ಟ ಕೊಡುಗೆಗಳು

ಬದಲಾಯಿಸಿ

'ಸಿ. ಅಶ್ವಥ್', ಹಾಗೂ, 'ಮೈಸೂರ್ ಅನಂತಸ್ವಾಮಿ,' ಗಳಿಗಿಂತ ಮೊದಲೇ ಅವರು, ಸಾವಿರಾರು ಗೀತೆಗಳಿಗೆ, 'ರಾಗಸಂಯೋಜನೆ,' ಮಾಡಿದ್ದರು. 'ದ್ವನಿಸುರಳಿಗಳು,' ಆಗತಾನೇ, ಹೊರಬರುತ್ತಿದ್ದ ದಿನಗಳಲ್ಲೇ, 'ಸಂಗೀತಾ,' ಸಂಸ್ಥೆಗಾಗಿ, 'ಗಣೇಶ್ ಕಥನ ಕಥಾ', 'ಬಾರೋ ವಸಂತಾ', ಮುಂತಾದ, 'ಗೀತಗುಚ್ಛ,' ಗಳಿಗೆ ಸಂಗೀತ ಸಂಯೋಜಿಸಿ, ಪ್ರಖ್ಯಾತ ಗಾಯಕ, ಗಾಯಕಿಯರಿಂದ ಹಾಡಿಸಿದ್ದರು. "ನಾರಾಯಣ್ ರಾವ್ ಮಾನೆ," ಮತ್ತು ಇತರ ಕಲಾವಿದರಿಂದ ನೂರಾರು ದ್ವನಿ-ಸುರಳಿಗಳಿಗೆ ಹಾಡಿಸಿ ಅವನ್ನು ಹೊರತಂದರು.

'ಮನ್ನಣೆಗಳು', ಹಾಗೂ 'ಸನ್ಮಾನಗಳು'  :

ಬದಲಾಯಿಸಿ
  1. ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕ್ಷೇತ್ರಗಳಲ್ಲಿ ರಾಜ್ಯ ಮಟ್ಟದ ಎಲ್ಲ ಪ್ರಶಸ್ತಿ, ಗೌರವಗಳು.
  2. 'ವೈಯಕ್ತಿಕ', 'ಯುಗಳ', ಹಾಗೂ 'ಸಮೂಹ ಗಾಯನ,' ಕ್ಕಾಗಿ
  3. ಅತಿ-ಹೆಚ್ಚು ಗೀತೆಗಳಿಗಾಗಿ ಸಂಗೀತ ಸಂಯೋಜಿಸಿದ ಕೀರ್ತಿ. 'ವಿಶ್ವವಿನೂತನ, ವಿದ್ಯಾಚೇತನ, ...ಸರ್ವಹೃದಯ ಸಂಸ್ಕಾರಿ....ಜಯಭಾರತೀ' ಗೀತೆಯು, ಇವರು, ಸಮೂಹ ಗಾಯನಕ್ಕಾಗಿ ಸಂಗೀತ ನೀಡಿರುವ ಅತ್ಯಂತ ಪ್ರಮುಖ ಗೀತೆಗಳಲ್ಲೊಂದು.
  4. 'ತೊರೆದು ಹೋಗದಿರು ಜೋಗಿ',
  5. 'ಎಲ್ಲಿರುವೆ ಕಾಣಿಸದೇ ಕರೆವ ಕೊರಳೇ',
  6. 'ಅಗಣಿತ ತಾರಾಗಣಗಳ ನಡುವೆ',
  7. 'ಮಳೆಬರಲಿ',
  8. ಶುಭನುಡಿಯೇ ಶಕುನದ ಹಕ್ಕಿ',
  9. 'ಎಲ್ಲಿಹೋಯಿತೇ ನನ್ನ ಮುದ್ದು ಹಕ್ಕಿ,' ಮೊದಲಾದ ಹಾಡುಗಳು ನಾರಾಯಣ್ ಅವರನ್ನು ನೆನಪಿಸುತ್ತವೆ.