ಎಚ್. ಆರ್. ಲೀಲಾವತಿ

ಎಚ್. ಆರ್.ಲೀಲಾವತಿಯವರು, ಪದ್ಮಚರಣ್, ರವರ ವಿದ್ಯಾರ್ಥಿನಿ. ಪದ್ಮಚರಣ್, ಲೀಲಾವತಿ, ಮತ್ತು ಎಚ್. ಕೆ. ನಾರಾಯಣ್ ರನ್ನು ಸುಗಮ ಸಂಗೀತದ ತ್ರಿವಳಿಗಳೆಂದು ಗುರುತಿಸಲ್ಪಟ್ಟಿದ್ದಾರೆ.[೧]

ಜನನ, ವಿದ್ಯಾಭ್ಯಾಸಸಂಪಾದಿಸಿ

ಲೀಲಾವತಿ, [೨]ಅಠಾಣ ರಾಮಣ್ಣ, ಹಾಗೂ ಗಾಯಕಿ ಜಯಲಕ್ಷ್ಮಮ್ಮನವರ ಮಗಳಾಗಿ ೧೯೩೪ ರ ಫೆಬ್ರವರಿ ೮ ರಂದು ಬೆಂಗಳೂರಿನಲ್ಲಿ ಜನಿಸಿದರು. ಈ ದಂಪತಿಗಳ ೪ ಜನ ಮಕ್ಕಳಲ್ಲಿ ಮೂರನೆಯ ಮಗಳು. ಇಬ್ಬರು ಅಣ್ಣಂದಿರು,ಎಚ್.ಆರ್.ಸೀತಾರಾಮ್ ಮತ್ತು ಬಾಪು ಎಚ್.ಆರ್. ಸತ್ಯನಾರಾಯಣ (ನಿವೃತ್ತ. ಇಂಜಿನಿಯರ್,ನಗರದ ಹೆಸರಾಂತ ಸಾಮಾಜಿಕ ಕಾರ್ಯಕರ್ತರು) ತಮ್ಮ, ಬಾಪು ಸೋಮಶೇಖರ್. ನಿವೃತ್ತ, ಆಲ್ ಇಂಡಿಯಾ ರೇಡಿಯೋ ನಿಲಯ ಮೈಸೂರಿನ ಎ.ಗ್ರೇಡ್, ಸಂಗೀತ ಸಂಯೋಜಕರು.ಶ್ರೀ.ರಾಮಸ್ವಾಮಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಕೆಯ ಬಳಿಕ, ಚೆನ್ನಕೇಶವಯ್ಯನವರೊಂದಿಗೆ ಸಂಗೀತಾಭ್ಯಾಸಮಾಡಿದರು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಗ್ರೇಡ್ ಮುಗಿಸಿರುತ್ತಾರೆ. ಲೀಲಾವತಿಯವರಿಗೆ, ಮೈಸೂರು ವಾಸುದೇವಾಚಾರ್ಯ, ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ, ಚಿಂತನಪಲ್ಲಿ ವೆಂಟಕರಾಯರು ಮುಂತಾದ ಸಂಗೀತ ವಿದ್ವಾಂಸರ ಆಶೀರ್ವಾದವೂ ದೊರೆಯಿತು. ೧೯೫೪ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ ಗಳಿಸಿದರು. ಮುಂದೆ, ಕೊಲ್ಕತ್ತದ 'ರಾಬಿನ್ ರೇ'ರ ಬಳಿ ರಬೀಂದ್ರ ಸಂಗೀತವನ್ನು ಕಲಿತು, ಕೊಲ್ಕತ್ತ, ರಾಂಚಿ, ಪಾಟ್ನಾ, ಚೆನ್ನೈ, ಗೌಹಾತಿಯ ಆಕಾಶವಾಣಿ ಕೇಂದ್ರಗಳಲ್ಲೂ ಹಾಡಿ ಅಪಾರ ಮೆಚ್ಚುಗೆ ಪಡೆದರು. ೧೯೭೬ ರಲ್ಲಿ ಬೆಂಗಳೂರು ಆಕಾಶವಾಣಿಯ ಸಂಗೀತ ಸಂಯೋಜಕರಾಗಿ ನೇಮಕಗೊಂಡರು.

ಪ್ರಶಸ್ತಿಗಳುಸಂಪಾದಿಸಿ

  1. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕರ್ನಾಟಕ ಕಲಾತಿಲಕ ಪ್ರಶಸ್ತಿ ನೀಡಿ ಗೌರವಿಸಿತು.
  2. ರಾಜ್ಯೋತ್ಸವ ಪ್ರಶಸ್ತಿ,
  3. ಸುಗಮ ಸಂಗೀತದ ಪರಮೋಚ್ಚ ಸಂತ ಶಿಶುನಾಳ ಶರೀಫ ಪ್ರಶಸ್ತಿಗಳು

ಧ್ವನಿಸುರಳಿಗಳನ್ನು ರಚಿಸಿದ್ದಾರೆಸಂಪಾದಿಸಿ

ಎಚ್.ಆರ್.ಲೀಲಾವತಿಯವರು, ಸಂಯೋಜಿಸಿ ಹಾಡಿರುವ ಧ್ವನಿ ಸುರುಳಿಗಳಲ್ಲಿ ಪ್ರಸಿದ್ಧವಾದ ಕೆಲವು ಗೀತೆಗಳಲ್ಲಿ :

  1. ನೀ ಬರುವ ದಾರಿಯಲ್ಲಿ,
  2. ನೆನಪಿನ ದೋಣಿಯಲ್ಲಿ ಗೀತೆಗಳು ಮಹತ್ವದವು.
  3. ಡಾ.ಜಿ.ಎಸ್.ಎಸ್.ರ, 'ಉಡುಗಣವೇಷ್ಠಿತ ಚಂದ್ರ ಸುಶೋಭಿತ', ಗೀತೆ ಲೀಲಾವತಿಯವರ ಹೆಸರನ್ನು ಜಯಪ್ರಿಯತೆಗೊಳಿಸಿದೆ.ಲೀಲಾವತಿಯವರ ಸಂಯೋಜನೆಯಲ್ಲಿ ರತ್ನಮಾಲಾ ಪ್ರಕಾಶರು ಹಾಡಿರುವ, ಬಿ.ಎಂ.ಶ್ರೀ.ರವರ ‘ಕರುಣಾಳು ಬಾ ಬೆಳಕೆ’ ಗೀತೆ, ಹಲವು ದಶಕಗಳಿಂದ ಕನ್ನಡಿಗರ ಹೃದಯವನ್ನು ಬೆಳಗುತ್ತಿದೆ. [೩]

ನಾಡ­ಗೀತೆ ಮತ್ತು ಎಚ್‌.ಆರ್‌. ಲೀಲಾ­ವತಿಸಂಪಾದಿಸಿ

ರಾಷ್ಟ್ರಕವಿ, ಕುವೆಂಪುರವರ ನಾಡ­ಗೀತೆ, `ಜೈ ಭಾರತ ಜನ­ನಿಯ ತನು­ಜಾತೆ' ಗೀತೆ­ಯನ್ನು ರಾಗ ಸಂಯೋ­ಜಿಸಿ ಮೊದಲು ಹಾಡಿದ ಖ್ಯಾತಿ ಎಚ್‌.ಆರ್‌. ಲೀಲಾ­ವತಿಯವರಿಗೆ ಸಲ್ಲುತ್ತದೆ. ಇತ್ತಿ­ಚೆಗೆ ನಾಡ­ಗೀ­ತೆಯ ಕುರಿ­ತಂತೆ ವಿವಾದ ಹುಟ್ಟಿ­ಕೊಂ­ಡಿತ್ತು. ವಿವಾ­ದದ ಸಂದ­ರ್ಭ­ದಲ್ಲಿ ಎಚ್‌.ಆರ್‌.ಲೀಲಾ­ವತಿ ಎಲ್ಲರೂ ಒಪ್ಪು­ವಂ­ತಹ ಮಾತು­ಗ­ಳ­ನ್ನಾ­ಡಿ­ದ್ದರು. ಬಿ.ಎಂ.ಶ್ರೀಕಂಠಯ್ಯನವರ ಅನೇಕ ಹಾಡುಗಳನ್ನು ೧೯೨೩ ನೇ ಇಸವಿಯಲ್ಲಿಯೇ ರಾಗ ಸಂಯೋಜನೆ ಮಾಡಿದ್ದರು. ‘ನನ್ನ ಹಾಡು ಕಾಡ ಹಕ್ಕಿ ಇದ್ದಂತೆ’ ಎನ್ನುವ ಎಚ್‌.ಆರ್‌.ಲೀಲಾವತಿ, ಸಂಗೀತದ ಕುಟುಂಬದಿಂದ ಎದ್ದುಬಂದವರು. ಐದನೇ ವರ್ಷದಿಂದಲೇ ಸಂಗೀತದ ಕಲಿಕೆ ಆರಂಭ.

ಪರಿವಾರಸಂಪಾದಿಸಿ

ಲೀಲಾವತಿಯವರು, ಸುಗಮ ಸಂಗೀತಕಾರ (ಲೇಟ್) ಎಸ್.ಜಿ.ರಘುರಾಮರನ್ನು ವಿವಾಹವಾಗಿದ್ದರು. ಈ ದಂಪತಿಗಳಿಗೆ, ಇಬ್ಬರು ಗಂಡುಮಕ್ಕಳು. ಸುನಾದ್ ರಘುರಾಮ್, ಹಾಗೂ ಸುಕುಮಾರ್.

ಉಲ್ಲೇಖಗಳುಸಂಪಾದಿಸಿ

  1. ಸಿರಿಕಂಠದ ಗಾಯಕಿ ಎಚ್.ಆರ್.ಲೀಲಾವತಿ, vijayavani.net[ಶಾಶ್ವತವಾಗಿ ಮಡಿದ ಕೊಂಡಿ]
  2. ಸಿರಿಕಂಠದ ಗಾಯಕಿ ಎಚ್.ಆರ್.ಲೀಲಾವತಿ, Tuesday, 06.12.2016, ವಿಜಯವಾಣಿ ಸುದ್ದಿಜಾಲ[ಶಾಶ್ವತವಾಗಿ ಮಡಿದ ಕೊಂಡಿ]
  3. ಸಂಸ್ಕೃತಿ ಸಲ್ಲಾಪ, ಎಚ್.ಆರ್.ಲೀಲಾವತಿ, ಸುಗಮಸಂಗೀತದ ರುವಾರಿ