ರಂಗ್ ದೇ ಬಸಂತಿ (ಚಲನಚಿತ್ರ)

ರಂಗ್ ದೇ ಬಸಂತಿ ಯು ([1] [2], [3]; ಇಂಗ್ಲಿಷ್‌ ಭಾಷಾಂತರ: ಪೇಂಟ್‌ ಇಟ್‌ ಸ್ಯಾಫ್ರನ್ ‌[5]) 2006ರಲ್ಲಿ ಬಂದ ಒಂದು ಭಾರತೀಯ ನಾಟಕೀಯ ಚಲನಚಿತ್ರವಾಗಿದ್ದು, ರಾಕೇಶ್ ಓಂಪ್ರಕಾಶ್ ಮೆಹ್ರಾ ಇದರ ಕಥೆಯನ್ನು ಬರೆದು, ನಿರ್ದೇಶಿಸಿದ್ದಾರೆ. ತಾರೆಯರ ಒಂದು ದೊಡ್ಡ ದಂಡೇ ಈ ಚಿತ್ರದಲ್ಲಿದ್ದು, ಅಮೀರ್ ಖಾನ್‌‌, ಸೋಹಾ ಆಲಿ ಖಾನ್‌, ಮಾಧವನ್‌, ಕುನಾಲ್‌ ಕಪೂರ್‌, ಸಿದ್ಧಾರ್ಥ್‌ ನಾರಾಯಣ್‌, ಶರ್ಮನ್‌ ಜೋಷಿ, ಅತುಲ್‌ ಕುಲಕರ್ಣಿ ಮತ್ತು ಬ್ರಿಟಿಷ್‌ ನಟಿ ಅಲೈಸ್‌ ಪ್ಯಾಟನ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ೨೫೦ ದಶಲಕ್ಷ ರೂ.ಗಳ (೫.೫ ದಶಲಕ್ಷ US$) ವೆಚ್ಚದಲ್ಲಿ ನಿರ್ಮಿಸಲಾದ ಈ ಚಿತ್ರದ ಚಿತ್ರೀಕರಣವನ್ನು ನವದೆಹಲಿ ಹಾಗೂ ಅದರ ಸುತ್ತಮುತ್ತ ನಡೆಸಲಾಯಿತು.

Rang De Basanti
ನಿರ್ದೇಶನRakeysh Omprakash Mehra
ನಿರ್ಮಾಪಕRakeysh Omprakash Mehra
Ronnie Screwvala
ಲೇಖಕKamlesh Pandey (story)
Renzil D'Silva (screenplay)
Rakeysh Omprakash Mehra (screenplay)
Prasoon Joshi (dialogue)
ಪಾತ್ರವರ್ಗAamir Khan
R. Madhavan
Alice Patten
Soha Ali Khan
Waheeda Rehman
Siddharth Narayan
Kunal Kapoor
Atul Kulkarni
Sharman Joshi
ಸಂಗೀತA. R. Rahman
Prasoon Joshi (lyrics)
ಛಾಯಾಗ್ರಹಣBinod Pradhan
ಸಂಕಲನP. S. Bharathi
ವಿತರಕರುUTV Motion Pictures
ಬಿಡುಗಡೆಯಾಗಿದ್ದು26 January 2006
ಅವಧಿ157 minutes
ದೇಶIndia
ಭಾಷೆHindi, English, Punjabi
ಬಂಡವಾಳRs. 250 million (approximately US$5.5 million)
ಬಾಕ್ಸ್ ಆಫೀಸ್Rs. 1.36 billion (approximately US$30 million)

ಭಾರತದಲ್ಲಿನ ಬ್ರಿಟಿಷ್‌ ಸೇನೆಯಲ್ಲಿ ಹಿಂದೊಮ್ಮೆ ಅಧಿಕಾರಿಯಾಗಿ ಕೆಲಸ ಮಾಡಿದ್ದ ತನ್ನ ತಾತನ ದಿನಚರಿ ಪುಸ್ತಕಗಳಲ್ಲಿನ ನಮೂದುಗಳನ್ನು ಆಧರಿಸಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ ಒಂದು ಚಲನಚಿತ್ರವನ್ನು ನಿರ್ಮಿಸಬೇಕೆಂದು ದೃಢನಿರ್ಧಾರ ಮಾಡುವ ಬ್ರಿಟಿಷ್‌ ಸಾಕ್ಷ್ಯಚಿತ್ರ ನಿರ್ಮಾಪಕಿಯೊಬ್ಬಳ ಕುರಿತಾದ ಕಥೆಯೇ ಈ ಚಿತ್ರದ ಕಥಾವಸ್ತು.

ಭಾರತದಲ್ಲಿ ಬಂದಿಳಿದ ನಂತರ, ತನ್ನ ಚಲನಚಿತ್ರದಲ್ಲಿ ಅಭಿನಯಿಸುವಂತೆ ಐದು ಮಂದಿ ಯುವಕರ ಗುಂಪೊಂದನ್ನು ಆಕೆ ಕೇಳಿಕೊಳ್ಳುತ್ತಾಳೆ. ಅವರು ಇದಕ್ಕೆ ಒಪ್ಪುತ್ತಾರಾದರೂ, ಚಿತ್ರೀಕರಣವನ್ನು ಪ್ರಾರಂಭಿಸಿದಾಗ ಅವರ ಒಬ್ಬ ಸ್ನೇಹಿತ ಯುದ್ಧವಿಮಾನವೊಂದರ ಅಪ್ಪಳಿಸುವಿಕೆಯಲ್ಲಿ ಮರಣ ಹೊಂದುತ್ತಾನೆ. ಈ ಘಟನೆಗೆ ಸರ್ಕಾರದ ಭ್ರಷ್ಟಾಚಾರವು ಒಂದು ಮೂಲಕಾರಣವೆಂದು ಕಂಡುಬರುತ್ತದೆ. ಯಾವುದೇ ಹೊಣೆಗಾರಿಕೆಯಿಲ್ಲದೆ ನಿಶ್ಚಿಂತೆಯಿಂದ ಜೀವನ ಸಾಗಿಸುತ್ತಿದ್ದ ಅವರನ್ನು ಈ ಘಟನೆಯು ಅಮೂಲಾಗ್ರವಾಗಿ ಸುಧಾರಣೆ ಮಾಡಿ, ಸ್ನೇಹಿತನ ಸಾವಿಗೆ ಸೇಡು ತೀರಿಸಿಕೊಳ್ಳಲು ಸಂಕಲ್ಪ ಮಾಡುವ ತೀವ್ರಾಸಕ್ತಿಯ ವ್ಯಕ್ತಿಗಳನ್ನಾಗಿ ಅವರನ್ನು ಮಾರ್ಪಡಿಸುತ್ತದೆ.

ಈ ಚಲನಚಿತ್ರದ ಕೆಲಭಾಗಗಳಲ್ಲಿ ಮಿಗ್‌-21 ಯುದ್ಧವಿಮಾನದ ಬಳಕೆ ಹಾಗೂ ನಿಷೇಧಿಸಲಾದ ಭಾರತೀಯ ಕುದುರೆ ಪಂದ್ಯವನ್ನು ತೋರಿಸಿದ್ದರಿಂದಾಗಿ, ಚಲನಚಿತ್ರದ ಬಿಡುಗಡೆಯ ಸಮಯದಲ್ಲಿ ಕ್ರಮವಾಗಿ ಭಾರತೀಯ ರಕ್ಷಣಾ ಇಲಾಖೆ ಮತ್ತು ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿಗಳಿಂದ ಬಿರುಸಾದ ಪ್ರತಿರೋಧವನ್ನು ಎದುರಿಸಬೇಕಾಯಿತು. ೨೦೦೬ರ ಜನವರಿ ೨೬ರಂದು ಈ ಚಲನಚಿತ್ರವು ವಿಶ್ವದೆಲ್ಲೆಡೆ ಬಿಡುಗಡೆಯಾಯಿತು ಮತ್ತು ತರುವಾಯ [[2006ರ BAFTA ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ವಿದೇಶೀ ಭಾಷಾ ಚಲನಚಿತ್ರ|2006ರ BAFTA ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ವಿದೇಶೀ ಭಾಷಾ ಚಲನಚಿತ್ರ]]ಕ್ಕಾಗಿರುವ ವರ್ಗಕ್ಕೆ ಇದು ನಾಮಕರಣಗೊಂಡಿತು.

ಅತ್ಯುತ್ತಮ ವಿದೇಶೀ ಭಾಷಾ ಚಲನಚಿತ್ರದ ವರ್ಗದಲ್ಲಿನ ಕ್ಕಾಗಿರುವ ವರ್ಗಕ್ಕೆ ಇದು ನಾಮಕರಣಗೊಂಡಿತು.

ಅತ್ಯುತ್ತಮ ವಿದೇಶೀ ಭಾಷಾ ಚಲನಚಿತ್ರದ ವರ್ಗದಲ್ಲಿನ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳು ಹಾಗೂ ಅಕಾಡೆಮಿ ಪ್ರಶಸ್ತಿಗಳಿಗಾಗಿ ಭಾರತದ ಅಧಿಕೃತ ಪ್ರವೇಶವಾಗಿಯೂ ರಂಗ್ ದೇ ಬಸಂತಿ ಚಿತ್ರವನ್ನು ಆರಿಸಲಾಗಿತ್ತು. ಆದರೆ, ಕೊನೆಗೆ ಇವೆರಡೂ ಪ್ರಶಸ್ತಿಗಳಲ್ಲಿ ಯಾವುದಕ್ಕೂ ಅದು ನಾಮನಿರ್ದೇಶನಗೊಳ್ಳಲಿಲ್ಲ.

ಸಮ್ಮಿಶ್ರ ಪ್ರತಿಕ್ರಿಯೆಗಳು ಹಾಗೂ ವಿಮರ್ಶೆಗಳನ್ನು ಪಡೆದ ಎ. ಆರ್. ರಹಮಾನ್‌ರ ಸಂಗೀತ ಧ್ವನಿಪಥದ (ಸೌಂಡ್‌ಟ್ರಾಕ್) ಪೈಕಿ ಎರಡು ಟ್ರಾಕ್‌ಗಳು ಅಕಾಡೆಮಿ ಪ್ರಶಸ್ತಿ ನಾಮಕರಣಕ್ಕಾಗಿ ಪರಿಗಣಿಸಲ್ಪಟ್ಟವು. ತನ್ನ ನಿರ್ಮಾಣ ಮೌಲ್ಯಗಳಿಂದಾಗಿ ಈ ಚಿತ್ರವು ವಿಮರ್ಶಕರು ಹಾಗೂ ಪ್ರೇಕ್ಷಕವೃಂದದಿಂದ ಉತ್ತಮ-ರೀತಿಯಲ್ಲಿ ಸ್ವೀಕರಿಸಲ್ಪಟ್ಟಿದ್ದೇ ಅಲ್ಲದೇ, ಭಾರತೀಯ ಸಮಾಜದ ಮೇಲೆ ಒಂದು ಗಮನಾರ್ಹ ಪ್ರಭಾವವನ್ನೂ ಬೀರಿತು.

ಭಾರತದಲ್ಲಿ, ಹಿಂದಿ ಚಿತ್ರರಂಗದ ಅನೇಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಈ ಚಲನಚಿತ್ರವು ಉತ್ತಮ ಸಾಧನೆಯನ್ನು ಮೆರೆಯಿತು. ಫಿಲ್ಮ್‌ಫೇರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿರುವುದೂ ಇದರಲ್ಲಿ ಸೇರಿದೆ.

ಕಥಾವಸ್ತು

ಬದಲಾಯಿಸಿ

ಹೋರಾಟ ಮನೋಭಾವದ ಬ್ರಿಟಿಷ್‌ ಚಲನಚಿತ್ರ ನಿರ್ಮಾಪಕಿಯಾದ ಸ್ಯೂ ಮೆಕ್‌ಕಿನ್ಲೆ (ಅಲೈಸ್‌ ಪ್ಯಾಟನ್‌) ಎಂಬಾಕೆಗೆ ತನ್ನ ತಾತ ಶ್ರೀ. ಮೆಕ್‌ಕಿನ್ಲೆಯ (ಸ್ಟೀವನ್‌ ಮೆಕಿಂಟೋಷ್‌) ದಿನಚರಿ ಪುಸ್ತಕ ಸಿಗುತ್ತದೆ. ಆತ ಭಾರತದ ಸ್ವಾತಂತ್ರ ಚಳವಳಿಯ ಅವಧಿಯಲ್ಲಿ ಬ್ರಿಟಿಷ್‌ ಸೇನೆಯಲ್ಲಿ ಓರ್ವ ಸೆರೆಮನೆ ಅಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾನೆ.

ಚಳವಳಿಯಲ್ಲಿ ಕ್ರಿಯಾಶೀಲರಾಗಿದ್ದ ಐವರು ಸ್ವಾತಂತ್ರ್ಯ ಹೋರಾಟಗಾರರಾದ, ಚಂದ್ರಶೇಖರ ಆಝಾದ್‌, ಭಗತ್‌ ಸಿಂಗ್‌, ಶಿವರಾಮ್‌ ರಾಜಗುರು, ಆಶ್ಫಾಕುಲ್ಲಾ ಖಾನ್‌, ಮತ್ತು ರಾಂ ಪ್ರಸಾದ್‌ ಬಿಸ್ಮಿಲ್‌ರ ಕಥೆಯನ್ನು ಈ ದಿನಚರಿ ಪುಸ್ತಕದ ಮೂಲಕ ಆಕೆ ತಿಳಿದುಕೊಳ್ಳುತ್ತಾಳೆ.

ಅವರ ಕುರಿತಾದ ಒಂದು ಚಲನಚಿತ್ರವನ್ನು ನಿರ್ಮಿಸಬೇಕೆಂದು ಸಂಕಲ್ಪ ಮಾಡುವ ಸ್ಯೂ, ಭಾರತಕ್ಕೆ ಪಯಣಿಸುತ್ತಾಳೆ. ತನ್ನ ಸ್ನೇಹಿತೆ ಸೋನಿಯಾಳ (ಸೋಹಾ ಆಲಿ ಖಾನ್‌) ನೆರವಿನೊಂದಿಗೆ, ಸ್ಯೂ ಆರಂಭದಲ್ಲಿ ನಾಲ್ಕು ಮಂದಿ ತರುಣರನ್ನು ತನ್ನ ಚಿತ್ರದ ತಾರಾಗಣದಲ್ಲಿ ಸೇರಿಸಿಕೊಳ್ಳುತ್ತಾಳೆ. ದಲ್ಜಿತ್‌ "DJ" (ಅಮೀರ್ ಖಾನ್‌‌), ಕರಣ್‌ ಸಿಂಘಾನಿಯಾ (ಸಿದ್ಧಾರ್ಥ್‌ ನಾರಾಯಣ್‌), ಅಸ್ಲಾಂ (ಕುನಾಲ್‌ ಕಪೂರ್‌) ಮತ್ತು ಸೂಖಿ (ಶರ್ಮನ್‌ ಜೋಷಿ) - ಈ ನಾಲ್ಕು ಮಂದಿ ಚಿತ್ರದಲ್ಲಿ ಕ್ರಾಂತಿಕಾರಿಗಳಾಗಿ ಬಿಂಬಿಸಲ್ಪಡಲು ಆಯ್ಕೆಯಾಗುತ್ತಾರೆ.

ಸ್ವಾತಂತ್ರ ಚಳವಳಿಯ ಕುರಿತಾದ ಚಲನಚಿತ್ರವೊಂದರಲ್ಲಿ ಅಭಿನಯಿಸುವುದರ ಬಗ್ಗೆ ಅವರಲ್ಲೇನೂ ಉತ್ಸಾಹಶೀಲತೆಯು ಕಂಡುಬರದಿದ್ದರೂ, ಕೊನೆಗೊಮ್ಮೆ ಅವರ ಮನವೊಲಿಸುವಲ್ಲಿ ಸ್ಯೂ ಯಶಸ್ವಿಯಾಗುತ್ತಾಳೆ. ರಾಜಕೀಯ ಪಕ್ಷವೊಂದರ ಕ್ರಿಯಾವಾದಿಯಾದ ಲಕ್ಷ್ಮಣ್‌ ಪಾಂಡೆ (ಅತುಲ್‌ ಕುಲಕರ್ಣಿ) ನಂತರದಲ್ಲಿ ತಾರಾಗಣಕ್ಕೆ ಸೇರ್ಪಡೆಯಾಗುತ್ತಾನೆ. ಆತನ ಮುಸ್ಲಿಂ-ವಿರೋಧಿ ನಂಬಿಕೆಗಳು ಹಾಗೂ ಅಸ್ಲಾಂ ಎಂಬ ಓರ್ವ ಮುಸ್ಲಿಂ ವ್ಯಕ್ತಿಯ ಕುರಿತಾದ ತಿರಸ್ಕಾರ ಭಾವನೆಯಿಂದಾಗಿ ಆರಂಭದಲ್ಲಿ ಲಕ್ಷ್ಮಣ್‌ ಪಾಂಡೆ ಓರ್ವ ಜನಪ್ರಿಯನಲ್ಲದ ವ್ಯಕ್ತಿಯಾಗಿದ್ದರೂ ಆತ ತಂಡದಲ್ಲಿ ಸೇರ್ಪಡೆಗೊಳ್ಳುತ್ತಾನೆ.

ಚಿತ್ರೀಕರಣದ ಸಂದರ್ಭದಲ್ಲಿ, ಭಾರತದ ಕ್ರಾಂತಿಕಾರಿ ಧೀರೋದಾತ್ತ ನಾಯಕರ ಆದರ್ಶಗಳ ಅನುಸರಣೆಯು ಮುಖ್ಯಪಾತ್ರಧಾರಿಗಳೊಳಗೆ ಸೇರಿಕೊಳ್ಳುತ್ತದೆ. ಸ್ಯೂ ಚಿತ್ರದಲ್ಲಿ ತಾವು ಅಭಿನಯಿಸುತ್ತಿರುವ ಪಾತ್ರಗಳಿಗೆ ತಮ್ಮದೇ ಸ್ವಂತ ಜೀವನವು ಸರಿಯಾಗಿ ಹೋಲುತ್ತದೆ ಎಂದು ಅವರಿಗೆ ನಿಧಾನವಾಗಿ ಅರ್ಥವಾಗಲು ಪ್ರಾರಂಭವಾಗುತ್ತದೆ ಹಾಗೂ ಹಿಂದಿದ್ದ ಕ್ರಾಂತಿಕಾರಿಗಳಿಗೆ ಎದುರಾಗಿದ್ದ ಪರಿಸ್ಥಿತಿಗಳೇ ತಮ್ಮ ಪೀಳಿಗೆಯ ಜನರಿಗೂ ಚಿತ್ರಹಿಂಸೆ ನೀಡುತ್ತಿವೆ ಎಂಬುದು ಅವರ ಅರಿವಿಗೆ ಬರುತ್ತದೆ.

ಈ ಮಧ್ಯೆ, ಸೋನಿಯಾಳ ಭಾವೀಪತಿ ಮತ್ತು ಭಾರತೀಯ ವಾಯುಪಡೆಯಲ್ಲಿ ಓರ್ವ ಫ್ಲೈಟ್‌ ಲೆಫ್ಟಿನೆಂಟ್‌ ಆಗಿದ್ದ ಅಜಯ್‌ಸಿಂಗ್‌ ರಾಥೋಡ್‌ (ಆರ್‌. ಮಾಧವನ್‌), ತನ್ನ ಯುದ್ಧವಿಮಾನವು ಅಪ್ಪಳಿಸಿದ್ದರಿಂದಾಗಿ ಸಾಯುತ್ತಾನೆ. ವಿಮಾನ ಚಾಲಕನ ತಪ್ಪಿನಿಂದಾಗಿ ವಿಮಾನದ ಅಪ್ಪಳಿಸುವಿಕೆಯು ಸಂಭವಿಸಿತು ಎಂದು ಘೋಷಿಸುವ ಸರ್ಕಾರ, ಸದರಿ ಪ್ರಕರಣದ ತನಿಖೆಗೆ ಅಂತ್ಯಹಾಡುತ್ತದೆ. ರಾಥೋಡ್‌ ಓರ್ವ ಶ್ರೇಷ್ಠ ವಿಮಾನ ಚಾಲಕನಾಗಿದ್ದ ಎಂಬುದನ್ನು ಅರಿತಿದ್ದ ಸೋನಿಯಾ ಮತ್ತು ಆಕೆಯ ಸ್ನೇಹಿತೆಯರು ಸದರಿ ಅಧಿಕೃತ ವಿವರಣೆಯನ್ನು ಸ್ವೀಕರಿಸುವುದಿಲ್ಲ. ಅದರ ಬದಲಿಗೆ, ತಾನು ವಿಮಾನದಿಂದಾಚೆಗೆ ನೆಗೆದು ತಪ್ಪಿಸಿಕೊಂಡು ಜನಜಂಗುಳಿಯಿರುವ ನಗರದೊಳಗೆ ವಿಮಾನವು ಅಪ್ಪಳಿಸುವಂತೆ ಮಾಡಿದ್ದರೆ ನಷ್ಟವಾಗುತ್ತಿದ್ದ ಇತರ ನೂರಾರು ಜೀವಗಳನ್ನು ಉಳಿಸಲು ರಾಥೋಡ್‌ ತನ್ನ ಜೀವವನ್ನು ತ್ಯಾಗಮಾಡಿದ್ದಾನೆ ಎಂದು ಅವರು ಸಮರ್ಥಿಸುತ್ತಾರೆ.

ಈ ಕುರಿತು ಅವರು ತನಿಖೆ ನಡೆಸಿದಾಗ, ಓರ್ವ ಭ್ರಷ್ಟ ರಕ್ಷಣಾ ಸಚಿವನ (ಮೋಹನ್‌ ಅಗಾಶೆ) ಕಾರಣದಿಂದಾಗಿ ಈ ಅಪ್ಪಳಿಸುವಿಕೆಯು ಸಂಭವಿಸಿದೆ ಎಂದು ಗೊತ್ತಾಗುತ್ತದೆ. ವೈಯಕ್ತಿಕ ಹಿತವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ರಕ್ಷಣಾ ಸಚಿವ ಕಳಪೆಯಾದ ಮತ್ತು ಕಾನೂನುಬಾಹಿರವಾದ ಮಿಗ್‌-೨೧ ವಿಮಾನದ ಬಿಡಿಭಾಗಗಳ ವಿನಿಮಯಕ್ಕಾಗಿ ಒಪ್ಪಂದವೊಂದಕ್ಕೆ ಸಹಿಹಾಕಿರುವುದು ಅವರಿಗೆ ತಿಳಿದುಬರುತ್ತದೆ. ಅವರಿಗೇ ಅಚ್ಚರಿಯಾಗುವಂತೆ ಮತ್ತೊಂದು ಸತ್ಯವೂ ಹೊರಬೀಳುತ್ತದೆ. ಈ ಒಪ್ಪಂದವು ಕುದುರಲು ಕಾರಣನಾಗಿದ್ದ ಪ್ರಮುಖ ವ್ಯಕ್ತಿ ಬೇರಾರೂ ಆಗಿರದೆ ಕರಣ್‌ನ ಅಪ್ಪ, ರಾಜ್‌ನಾಥ್ ಸಿಂಘಾನಿಯಾ (ಅನುಪಮ್‌ ಖೇರ್‌) ಆಗಿದ್ದ ಎಂಬುದೇ ಆ ಸತ್ಯವಾಗಿರುತ್ತದೆ.

ಈ ಸನ್ನಿವೇಶದಿಂದ ಕೋಪಗೊಳ್ಳುವ ಗುಂಪು ಹಾಗೂ ಅವರ ಬೆಂಬಲಿಗರು ನವದೆಹಲಿಯಲ್ಲಿನ ಒಂದು ಯುದ್ಧಸ್ಮಾರಕವಾದ ಇಂಡಿಯಾ ಗೇಟ್‌ ಬಳಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸುತ್ತಾರೆ.

ದಂಡಪ್ರಯೋಗ ಮಾಡುವುದರ ಮೂಲಕ ಆರಕ್ಷಕರು ಅವರ ಪ್ರತಿಭಟನೆಯನ್ನು ಬಲವಂತವಾಗಿ ಚೆದುರಿಸುತ್ತಾರೆ; ಈ ಪ್ರಯತ್ನದಲ್ಲಿ ರಾಥೋಡ್‌ನ ತಾಯಿಗೆ (ವಹಿದಾ ರೆಹಮಾನ್‌) ಗಂಭೀರ ಸ್ವರೂಪದ ಗಾಯಗಳಾಗುತ್ತವೆ ಹಾಗೂ ಆಕೆ ಗಾಢವಿಸ್ಮೃತಿಗೆ ಈಡಾಗುತ್ತಾಳೆ.

ಹಿಂದಿನ ಸ್ವಾತಂತ್ರ್ಯ ಹೋರಾಟಗಾರರ ಮೇಲ್ಪಂಕ್ತಿಯನ್ನು ಅನುಸರಿಸಬೇಕು ಎಂದು ನಿರ್ಧರಿಸುವ DJ, ಕರಣ್‌, ಅಸ್ಲಾಂ, ಸೂಖಿ, ಮತ್ತು ಲಕ್ಷ್ಮಣ್‌, ನ್ಯಾಯವನ್ನು ಪಡೆಯುವುದಕ್ಕಾಗಿ ಹಿಂಸೆಯ ಮಾರ್ಗವನ್ನು ಅವಲಂಬಿಸುತ್ತಾರೆ. ಇದರ ಪರಿಣಾಮವಾಗಿ, ರಾಥೋಡ್‌ನ ಸಾವಿನ ಸೇಡು ತೀರಿಸಿಕೊಳ್ಳಲು ಅವರು ರಕ್ಷಣಾ ಸಚಿವನನ್ನು ಕೊಲ್ಲುತ್ತಾರೆ. ತನ್ನ ಅಪ್ಪನ ಭ್ರಷ್ಟ ಕೃತ್ಯಗಳಿಗಾಗಿ ಕರಣ್‌ ಆತನನ್ನು ಕೊಲ್ಲುತ್ತಾನೆ. ಸಚಿವನು ಭಯೋತ್ಪಾದಕರಿಂದ ಮೃತಪಟ್ಟ ಎಂದು ವರದಿಯಾಗುವುದರ ಜೊತೆಗೆ ಮಾಧ್ಯಮಗಳು ಅವನನ್ನೊಬ್ಬ ಹುತಾತ್ಮನಂತೆ ಬಿಂಬಿಸುತ್ತವೆ. ಈ ಸಾವುಗಳ ಹಿಂದಿನ ತಮ್ಮ ಉದ್ದೇಶಗಳನ್ನು ಎಲ್ಲರ ಮುಂದಿಡಲು, ರೇಡಿಯೋ ಕೇಂದ್ರವೊಂದರ ಮೂಲಕ ಸಾರ್ವಜನಿಕರನ್ನು ತಲುಪಲು ಈ ಐವರೂ ಪ್ರಯತ್ನಿಸುತ್ತಾರೆ. ಆಕಾಶವಾಣಿ ಕೇಂದ್ರದಲ್ಲಿನ ನೌಕರರನ್ನು ಅಲ್ಲಿಂದ ಖಾಲಿಮಾಡಿಸಿದ ನಂತರ ಅವರು ಬಲವಂತವಾಗಿ ಅದರ ಆವರಣವನ್ನು ವಶಪಡಿಸಿಕೊಳ್ಳುತ್ತಾರೆ. ತನ್ನ ಮಾತುಗಳ ಪ್ರಸಾರಕ್ಕೆ ಮುಂದಾಗುವ ಕರಣ್‌, ರಕ್ಷಣಾ ಸಚಿವ ಹಾಗೂ ಆತನ ಅನ್ಯಾಯದ ಕೆಲಸಗಳ ಕುರಿತಾದ ಸತ್ಯಸಂಗತಿಯನ್ನು ಬಹಿರಂಗಪಡಿಸುತ್ತಾನೆ. ಮಾತುಗಳು ಹೀಗೆ ಪ್ರಸಾರವಾಗುತ್ತಿರುವಾಗಲೇ ಹೊಂಚುದಾಳಿಯೊಂದರಲ್ಲಿ ಆರಕ್ಷಕರು ಹಾಗೂ ಸೇನಾ ಕಮಾಂಡೋಗಳಿಂದ ಅವರೆಲ್ಲರೂ ಕೊಲ್ಲಲ್ಪಡುತ್ತಾರೆ.

ನಿರ್ಮಾಣ

ಬದಲಾಯಿಸಿ

ಬೆಳವಣಿಗೆ

ಬದಲಾಯಿಸಿ

ಸದರಿ ಚಿತ್ರದ ಕಥೆಯ ಕುರಿತು ಸಂಶೋಧನೆ ನಡೆಸಿ, ಅದನ್ನು ಬೆಳೆಸಲು ರಾಕೇಶ್ ಮೆಹ್ರಾ ಏಳು ವರ್ಷಗಳನ್ನು ತೆಗೆದುಕೊಂಡ. ಚಿತ್ರಕಥೆ ಬರೆಯಲು ತೆಗೆದುಕೊಂಡ ಮೂರು ವರ್ಷಗಳೂ ಸಹ ಅದರಲ್ಲಿ ಸೇರಿದ್ದವು.[] ಅಕ್ಸ್‌ ಎಂಬ ಆತನ ಹಿಂದಿನ ಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ವಿಫಲಗೊಂಡಿದ್ದನ್ನು ಹಿನ್ನೆಲೆಯಾಗಿಟ್ಟುಕೊಂಡ ಕೆಲವರು, ಆತನ ಸ್ಥೈರ್ಯದ ಕುರಿತು ಒಂದಷ್ಟು ಸಂದೇಹಗಳನ್ನು ವ್ಯಕ್ತಪಡಿಸಿದರು. ಆದರೆ ಇದರಿಂದ ತಾನು ವಿಚಲಿತಗೊಂಡಿಲ್ಲ ಎಂದು ಹೇಳುವ ಮೂಲಕ ಆತ ಹರಿತವಾದ ಉತ್ತರವನ್ನಿತ್ತ.[] ಕಥೆಯನ್ನು ಹೇಳುವ ತನ್ನ ಕೌಶಲವು ಸುಧಾರಣೆಗೊಂಡಿರುವುದೇ ಅಲ್ಲದೇ, ಚಲನಚಿತ್ರವನ್ನು ರೂಪಿಸುವ ತನ್ನ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳುವಲ್ಲಿ ತನ್ನ ಹಿಂದಿನ ತಪ್ಪುಗಳು ತನಗೆ ಸಹಾಯಮಾಡಿವೆ ಎಂಬ ಮಾತನ್ನೂ ಸೇರಿಸಲು ಆತ ಮರೆಯಲಿಲ್ಲ.[] ಆರಂಭಿಕ ಹಂತದಲ್ಲಿ ಮೆಹ್ರಾ ಹೊಂದಿದ್ದ ಹಲವಾರು ಪರಿಕಲ್ಪನೆಗಳೊಂದಿಗೆ ರಂಗ್ ದೇ ಬಸಂತಿ ಚಿತ್ರದ ಕಥೆಯು ಬೆಳೆಯುತ್ತಾ ಹೋಯಿತಾದರೂ, ಕೆಲವೊಂದು ಪರಿಕಲ್ಪನೆಗಳು ಅಲ್ಲಲ್ಲೇ ಬಿಡಲ್ಪಟ್ಟರೆ, ಇನ್ನು ಕೆಲವು ಮಹತ್ತರವಾಗಿ ವಿಕಸನಗೊಂಡು ಹೊಸ ದಿಕ್ಕುಗಳಿಗೆ ಕೊಂಡೊಯ್ದವು. ಇವುಗಳ ಪೈಕಿ ಒಂದು ಪರಿಕಲ್ಪನೆಯು, ವಾಹನ ದುರಸ್ತಿಯ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿರುವ ಒಂದಷ್ಟು ಯುವಕರ ಸಮೂಹದೆಡೆಗೆ ಕಥೆಯನ್ನು ಎಳೆದೊಯ್ದರೆ, ಮತ್ತೊಂದು ಪರಿಕಲ್ಪನೆಯು ಭಾರತದ ಸ್ವಾತಂತ್ರ್ಯದ ಕ್ರಾಂತಿಕಾರಿ ಭಗತ್‌ ಸಿಂಗ್‌ನ ಜೀವನದ ಕಡೆಗೆ ಕಥೆಯನ್ನು ಎಳೆದೊಯ್ದಿತು.[] ಇದೇ ಅವಧಿಯಲ್ಲಿ, ತಾನು ಚಿತ್ರಿಸಲು ಯೋಜಿಸುತ್ತಿದ್ದ ಭಾರತದ ಕ್ರಾಂತಿಕಾರಿಗಳ ಕುರಿತಾಗಿ ನವದೆಹಲಿ ಮತ್ತು ಮುಂಬಯಿಯಲ್ಲಿನ ಯುವಕರ ಒಂದು ಗುಂಪಿನೊಂದಿಗೆ ಮೆಹ್ರಾ ವೈಯಕ್ತಿಕವಾಗಿ ಸಮೀಕ್ಷೆಯೊಂದನ್ನು ನಡೆಸಿದ. ಆದರೆ ಅಲ್ಲಿದ್ದ ಮಕ್ಕಳ ಪೈಕಿ ಅನೇಕರು ಅತ್ಯಂತ ಪ್ರಸಿದ್ಧ ಕ್ರಾಂತಿಕಾರಿಗಳಲ್ಲಿ ಕೆಲವರ ಹೆಸರುಗಳನ್ನು ಗುರುತಿಸಲು ಅಸಮರ್ಥರಾಗಿದ್ದುದು ಈ ಸಮೀಕ್ಷೆಯ ಅವಧಿಯಲ್ಲಿ ತಿಳಿದುಬಂತು.

ಇದರಿಂದಾಗಿ, ಇಂದಿನ ಯುವಪೀಳಿಗೆಯಲ್ಲಿ "ದೇಶಭಕ್ತಿಯ ಕುರಿತಾದ ಅರ್ಥವೇ ಮಸುಕಾಗಿದೆ" ಎಂಬ ಭಾವನೆಯು ಮೆಹ್ರಾನಲ್ಲಿ ಮೂಡುವಂತಾಯಿತು.[]

ಈ ಕಾರಣದಿಂದಾಗಿ, ಹೊಸದೊಂದು ಪರಿಕಲ್ಪನೆಯ ಪರವಾಗಿ ತನ್ನ ಮೂಲ ಯೋಜನೆಗಳನ್ನು ಆತ ಕೈಬಿಟ್ಟ. ಭಾರತಕ್ಕೆ ಭೇಟಿನೀಡುವ ಬ್ರಿಟಿಷ್‌ ಸಾಕ್ಷ್ಯಚಿತ್ರ ಚಲನಚಿತ್ರ ನಿರ್ಮಾಪಕಿಯೊಬ್ಬಳಿಗೆ ಇಲ್ಲಿನ ಸ್ಥಳೀಯ "ಮಕ್ಕಳು ತನ್ನ ದೇಶದ ಮಕ್ಕಳಿಗಿಂತ ಹೆಚ್ಚಿನ ರೀತಿಯಲ್ಲಿ ಪಾಶ್ಚಿಮಾತ್ಯ ಪ್ರಭಾವಕ್ಕೆ ಒಳಗಾಗಿದ್ದಾರೆ" ಎಂಬ ಅರಿವುಂಟಾಗುವುದು ಈ ಹೊಸ ಪರಿಕಲ್ಪನೆಯಲ್ಲಿ ಸೇರಿತ್ತು.[] ಅಂತಿಮವಾಗಿ ರಂಗ್ ದೇ ಬಸಂತಿಯ ಚಿತ್ರಕಥೆಗೆ ಒಂದು ಆಧಾರವಾಗಿ ರೂಪುಗೊಂಡ ಈ ಹೊಸ ಕಥೆಯು ಮೆಹ್ರಾ ಹಲವಾರು ವರ್ಷಗಳಿಂದ[] ಹೊಂದಿದ್ದ ತಾರುಣ್ಯದ ಮತ್ತು ಅನುಭವಗಳ ಪಾಲನೆಯಿಂದ ಪ್ರಭಾವಿಸಲ್ಪಟ್ಟಿತ್ತು. ಶಾಲೆಯಲ್ಲಿರುವಾಗಲೇ ಭಾರತೀಯ ವಾಯುಪಡೆಯನ್ನು ಸೇರುವ ಕುರಿತಾಗಿ ತಾನು ಹೊಂದಿದ್ದ ಬಯಕೆ, ಸ್ವಾತಂತ್ರ್ಯ ದಿನಾಚರಣೆಯ ಭಾಷಣಗಳನ್ನು ಕೇಳುವ ಮತ್ತು ಮದರ್‌ ಇಂಡಿಯಾದಂಥ ದೇಶಭಕ್ತಿಯ ಚಿತ್ರಗಳನ್ನು ವೀಕ್ಷಿಸುವ ತನ್ನ ಸ್ಮರಿಸಿಕೊಂಡ ವಿಷಯಗಳು ಇದರಲ್ಲಿ ಸೇರಿದ್ದವು.[] ಈ ಚಲನಚಿತ್ರವು ಆತ್ಮಚರಿತ್ರೆಗೆ ಸಂಬಂಧಿಸಿರುವಂಥಾದ್ದು ಎಂಬುದನ್ನು ಮೆಹ್ರಾ ನಿರಾಕರಿಸುತ್ತಾನಾದರೂ, ಪಾತ್ರದ ಚಿತ್ರಣಗಳು ಅಲ್ಲಲ್ಲಿ ತನ್ನಿಂದ ಮತ್ತು ತನ್ನ ಸ್ನೇಹಿತರಿಂದ ಪ್ರೇರೇಪಿಸಲ್ಪಟ್ಟಿವೆ ಎಂದು ಒಪ್ಪಿಕೊಂಡಿದ್ದಾನೆ.

ಲಾಕ್‌, ಸ್ಟಾಕ್‌ ಅಂಡ್‌ ಟು ಸ್ಮೋಕಿಂಗ್‌ ಬ್ಯಾರೆಲ್ಸ್‌ ಮತ್ತು ಸ್ನ್ಯಾಚ್‌ ಎಂಬ ಬ್ರಿಟಿಷ್‌ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಅಂಗದ್‌ ಪಾಲ್‌ ನಿರ್ವಹಿಸಿದ ನಿರ್ಮಾಣ-ನಿರ್ವಹಣೆಯಿಂದ ಪ್ರಭಾವಿತನಾಗಿದ್ದ ಮೆಹ್ರಾ, ಆತನನ್ನು ಭೇಟಿಮಾಡಿದ. ಭಾರತದಲ್ಲಿ ಕೆಲಸ ಮಾಡಲು ತೀವ್ರಾಸಕ್ತನಾಗಿದ್ದ ಪಾಲ್‌ ಮೆಹ್ರಾನ ಕಥೆಯನ್ನು ಮೆಚ್ಚಿಕೊಂಡು ಚಲನಚಿತ್ರವನ್ನು ನಿರ್ಮಿಸಲು ಒಪ್ಪಿಕೊಂಡಿದ್ದೇ ಅಲ್ಲದೇ,[] ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ನಿರ್ವಹಿಸಲು ಡೇವಿಡ್‌ ರೀಡ್‌ ಮತ್ತು ಆಡಂ ಬೋಹ್ಲಿಂಗ್‌ರನ್ನು ತನ್ನೊಂದಿಗೆ ಕರೆದುಕೊಂಡುಬಂದ. ಹಿಂದಿ ಚಲನಚಿತ್ರದ ಕುರಿತು ರೀಡ್‌ ಮತ್ತು ಬೋಹ್ಲಿಂಗ್‌ಗೆ ಅಂಥಾ ಪೂರ್ವಭಾವಿ ಅರಿವೇನೂ ಇರದಿದ್ದರೂ, ಚಿತ್ರಕಥೆಯಲ್ಲಿ ಅವರಿಗೆ ದೃಢವಾದ ನಂಬಿಕೆಯಿತ್ತು. ಇದೇ ಕಾರಣದಿಂದಾಗಿ ತಮ್ಮ ಎಂದಿನ ಸಂಭಾವನೆಯ ಅರ್ಧ-ಬೆಲೆಯಲ್ಲಿ ಕೆಲಸ ಮಾಡಲು ಆ ಇಬ್ಬರೂ ಒಪ್ಪಿದರು.[] ಇಂಗ್ಲಿಷ್‌ನಲ್ಲಿ (ಪೇಂಟ್‌ ಇಟ್‌ ಯೆಲ್ಲೋ ಎಂಬ ಹೆಸರಿನಿಂದ) ಮತ್ತು ಹಿಂದಿಯಲ್ಲಿ ಒಟ್ಟೊಟ್ಟಿಗೆ ಚಲನಚಿತ್ರದ ಎರಡು ವಿಭಿನ್ನ ಭಾಷಾ ಆವೃತ್ತಿಗಳನ್ನು ನಿರ್ಮಿಸುವುದೆಂದು ಮೂಲತಃ ಸೂಚಿಸಲಾಗಿತ್ತಾದರೂ,[][] ಚಿತ್ರದ ಬೆಳವಣಿಗೆಯ ಹಂತದಲ್ಲಿ ಇಂಗ್ಲಿಷ್‌ ಆವೃತ್ತಿಯ ಕುರಿತಾದ ಯೋಜನೆಗಳನ್ನು ಕೈಬಿಡಲಾಯಿತು. ಇಂಗ್ಲಿಷ್ ಭಾಷಾ ಆವೃತ್ತಿಯು ಪರಕೀಯ ಭಾವವನ್ನು ಹೊಮ್ಮಿಸುತ್ತದೆ ಮತ್ತು "ಒಬ್ಬರು ಒಂದು ಚಲನಚಿತ್ರವನ್ನು ಕೇವಲ ಒಂದು ಭಾಷೆಯಲ್ಲಿ ಮಾತ್ರವೇ ನಿರೂಪಿಸಲು ಸಾಧ್ಯ" ಎಂಬುದು ಮೆಹ್ರಾನ ನಂಬಿಕೆಯಾಗಿತ್ತು.[] ಇಂಗ್ಲಿಷ್‌ ಆವೃತ್ತಿಯನ್ನು ಕೈಬಿಟ್ಟ ನಂತರ, ಹಿಂದಿಯಲ್ಲಿನ ಚಲನಚಿತ್ರದ ಮೊದಲ ಕರಡುಪ್ರತಿಯನ್ನು ರೂಪಿಸಲೆಂದು ಕಥೆಗಾರ ಕಮಲೇಶ್ ಪಾಂಡೆಗೆ ಅವಕಾಶ ನೀಡಲಾಯಿತು,[] ತನ್ಮೂಲಕ ಆತನ ಚಿತ್ರಕಥಾ ಬರಹದ ವೃತ್ತಿಗೊಂದು ಆರಂಭ ಸಿಕ್ಕಂತಾಯಿತು.[] ತದನಂತರ ಮೆಹ್ರಾ ಮತ್ತು ಸಹ-ಕಥೆಗಾರ ರೆನ್ಸಿಲ್‌ ಡಿ'ಸಿಲ್ವಾರವರು ಚಿತ್ರಕಥೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು, ಸುಮಾರು ಎರಡು ವರ್ಷಗಳವರೆಗೆ ಅದರಲ್ಲೇ ತೊಡಗಿಸಿಕೊಂಡರು.[] ಚಲನಚಿತ್ರದ ಗೀತಸಾಹಿತಿ ಪ್ರಸೂನ್‌ ಜೋಷಿ ಕೂಡಾ ಚಿತ್ರದ ಸಂಭಾಷಣೆಯ ರಚನಾ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ, ಚಿತ್ರಕಥಾರಚನೆಯ ವಲಯಕ್ಕೆ ಮೊಟ್ಟಮೊದಲಿಗೆ ಪಾದಾರ್ಪಣೆ ಮಾಡಿದ.[]

ಚಲನಚಿತ್ರದ ಆರಂಭಿಕ ನಿರ್ಮಾಪಕರಲ್ಲೊಬ್ಬರು ಅಂತಿಮವಾಗಿ ಚಿತ್ರದ ನಿರ್ಮಾಣದೆಡೆಗೆ ಯಾವುದೇ ಬಂಡವಾಳವನ್ನು ಒದಗಿಸಲು ಅಸಮರ್ಥರಾದಾಗ, ಚಲನಚಿತ್ರವು ಗಣನೀಯವಾಗಿ ಹಿನ್ನಡೆಯನ್ನು ಕಾಣಬೇಕಾಯಿತು. ಹಣದ ಕೊರತೆಯಿಂದಾಗಿ ಪ್ರಮುಖ ಛಾಯಾಚಿತ್ರಗ್ರಹಣ ಕಾರ್ಯದ ಆರಂಭವಾಗುವಿಕೆಯಿಂದ ಕೇವಲ ಎರಡು ತಿಂಗಳ ಆಚೆಗೆ ನಿರ್ಮಾಣಕಾರ್ಯವು ಅನಿಶ್ಚಿತಗೊಂಡಿತು. ಆದಾಗ್ಯೂ, ಅಮೀರ್ ಖಾನ್‌‌ ಈ ಚಲನಚಿತ್ರದಲ್ಲಿ ಅಭಿನಯಿಸಲು ಒಪ್ಪಿದ ನಂತರ, ಮೆಹ್ರಾ ತನ್ನ ಚಿತ್ರಕಥೆಯೊಂದಿಗೆ UTV ಮೋಷನ್ ಪಿಕ್ಷರ್ಸ್‌ ಸಂಸ್ಥೆಯ ರೋನ್ನೀ ಸ್ಕ್ರೂವಾಲಾರನ್ನು ಭೇಟಿಯಾದ.[] ಚಲನಚಿತ್ರದ ನಿರ್ಮಾಣದ ಆರಂಭದಿಂದ ಮೆಹ್ರಾನನ್ನು ಬೆಂಬಲಿಸಿದ ಸ್ಕ್ರೂವಾಲಾನಿಗೆ ಸದರಿ ಚಿತ್ರದಲ್ಲಿ ವಿಶ್ವಾಸವಿತ್ತು,[] ಏಕೆಂದರೆ, ಐತಿಹಾಸಿಕ ಚಲನಚಿತ್ರಗಳಲ್ಲಿ, "ಕಥೆಯ ಪಾಲನೆ ಮತ್ತು ನಿರ್ವಹಣೆಯು, ಎಂದಿನ ಮಸಾಲಾ ಸಾಮಗ್ರಿಯ ಚಿತ್ರಗಳಲ್ಲಿರುವುದಕ್ಕಿಂತ ಅತಿ ವಿಭಿನ್ನವಾಗಿರುತ್ತದೆ"[೧೦] ಮತ್ತು ಇಂಥ ಚಲನಚಿತ್ರಗಳಲ್ಲಿನ "ಸವಿಸ್ತಾರವಾದ ಸಜ್ಜಿಕೆಗಳು ಮತ್ತು ಆಯಾಕಾಲದ ವಸ್ತ್ರವಿನ್ಯಾಸಗಳಿಗೆ ಪ್ರೇಕ್ಷಕರು ಸಲ್ಲಿಸಬೇಕಾದ ಮರ್ಯಾದೆಯನ್ನು ಸಲ್ಲಿಸುವುದರಿಂದ", ಇಂಥ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸುತ್ತವೆ ಎಂಬುದು ಸ್ಕ್ರೂವಾಲಾನ ನಂಬಿಕೆಯಾಗಿತ್ತು.[೧೦]

ಚಲನಚಿತ್ರದ ಅಂದಾಜುವೆಚ್ಚವು ೨೫೦ ದಶಲಕ್ಷ ರೂ.ಗಳು (ಸರಿ ಸುಮಾರಾಗಿ ೫.೫ ದಶಲಕ್ಷ US$) ಎಂದು ಯೋಜಿಸಿಲಾಗಿತ್ತು,[] ಮತ್ತು ಆರಂಭದಲ್ಲಿ ಯೋಜಿಸಿದ್ದಕ್ಕಿಂತ ಅಂದಾಜುವೆಚ್ಚವು ಕೊಂಚವೇ ಮೇಲೆ ಹೋಯಿತಾದರೂ UTVಯೊಂದಿಗೆ ಮೆಹ್ರಾ ಯಾವುದೇ ಗಂಭೀರಸ್ವರೂಪದ ಭಿನ್ನಾಭಿಪ್ರಾಯಗಳನ್ನು ಹೊಂದಲಿಲ್ಲ.[]

ಪಾತ್ರ ಹಂಚಿಕೆ

ಬದಲಾಯಿಸಿ

ಮೆಹ್ರಾನ ಚಿತ್ರಕಥೆಯನ್ನು ಓದಿದ ನಂತರ ಸದರಿ ಚಲನಚಿತ್ರದಲ್ಲಿ ಅಭಿನಯಿಸಲು ಅಮೀರ್ ಖಾನ್‌‌ ತಕ್ಷಣವೇ ಒಪ್ಪಿದ.[] ಸಮಗ್ರತೆ ಮತ್ತು ಘನತೆಯ ಒಂದು ಸದೃಢ ಔಚಿತ್ಯಪ್ರಜ್ಞೆಯೊಂದಿಗಿನ ಓರ್ವ ಸರಳ ಮನುಷ್ಯನಂತೆ ಆತನ ಪಾತ್ರವನ್ನು ಮೆಹ್ರಾ ವಿವರಿಸಿದ.[] ಚಲನಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ೪೦ರ ವಯೋಮಾನವನ್ನು ತಲುಪಿದ್ದ ಖಾನ್‌, ಇಪ್ಪತ್ತರ ವಯೋಮಾನದ ಅಂತ್ಯದಲ್ಲಿರುವ ಓರ್ವ ವ್ಯಕ್ತಿಯಂತೆ ಹೆಚ್ಚು ಪರಿಣಾಮಕಾರಿಯಾಗಿ ಕಾಣಿಸಿಕೊಳ್ಳುವ ದೃಷ್ಟಿಯಿಂದ ಒಂದು ಕಟ್ಟುನಿಟ್ಟಾದ ಪಥ್ಯಾಹಾರ ಹಾಗೂ ವ್ಯಾಯಾಮದ ದಿನಚರಿಗೆ ತನ್ನನ್ನು ಒಗ್ಗಿಸಿಕೊಂಡು ತನ್ನ ದೇಹತೂಕವನ್ನು10 kilograms (22 lb) ಇಳಿಸಿಕೊಂಡ.[] ಚಲನಚಿತ್ರದ ಕುರಿತು ಅಧಿಕೃತವಾಗಿ ಘೋಷಣೆಯಾಗುವ ಹೊತ್ತಿಗಾಗಲೇ ಅತುಲ್‌ ಕುಲಕರ್ಣಿ ಮತ್ತು ಕುನಾಲ್‌ ಕಪೂರ್‌ ಇಬ್ಬರೂ ಚಲನಚಿತ್ರದೊಂದಿಗೆ ಬಹಿರಂಗವಾಗಿ ತೊಡಗಿಸಿಕೊಂಡಿದ್ದರು;[] ಅಕ್ಸ್‌ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಮೆಹ್ರಾನಿಗೆ ಕಪೂರ್‌ ಸಹ-ನಿರ್ದೇಶಕನಾಗಿದ್ದರಿಂದ ಮೆಹ್ರಾ ರೂಪಿಸುತ್ತಿರುವ ವಸ್ತು-ವಿಷಯದೊಂದಿಗೆ ಆತ ಅಷ್ಟುಹೊತ್ತಿಗಾಗಲೇ ನಿಕಟವಾಗಿದ್ದ.[೧೧] ಪಾತ್ರದ ಪೂರ್ವಸಿದ್ಧತೆಯ ಅಂಗವಾಗಿ ಮೆಹ್ರಾ ಕುಲಕರ್ಣಿಗೆ ರಾಂ ಪ್ರಸಾದ್‌ ಬಿಸ್ಮಿಲ್‌ರ ಜೀವನಚರಿತ್ರೆಗಳನ್ನು ನೀಡಿದ. ಇದರಲ್ಲಿ ಬಿಸ್ಮಿಲ್‌ರ ಆತ್ಮಚರಿತ್ರೆಯೂ ಸೇರಿತ್ತು.[೧೨] ನಟರಾದ ಅರ್ಜುನ್‌ ರಾಂಪಾಲ್‌ ಮತ್ತು ಅರ್ಜನ್‌ ಬಾಜ್ವಾ ಮುಖ್ಯ ಪುರುಷ ಪಾತ್ರವರ್ಗದಲ್ಲಿರುತ್ತಾರೆ ಎಂದು ಆರಂಭದಲ್ಲಿ ಒಂದಷ್ಟು ಗಾಳಿಸುದ್ದಿಗಳು ಹಬ್ಬಿದ್ದವು,[೧೩][೧೪] ಆದರೆ ಈ ಅಂತಿಮವಾಗಿ ಈ ಪಾತ್ರಗಳನ್ನು ಶರ್ಮನ್‌ ಜೋಷಿ, ಸಿದ್ಧಾರ್ಥ್‌ ನಾರಾಯಣ್‌ ಮತ್ತು ಆರ್‌. ಮಾಧವನ್‌ ನಿರ್ವಹಿಸಿದರು. ಸಿದ್ಧಾರ್ಥ್‌ನ ಬಾಲಿವುಡ್‌ ಪಾದಾರ್ಪಣೆಗೆ ಈ ಚಿತ್ರವು ಚಿಮ್ಮುಹಲಗೆಯಾಯಿತು. ಇದಕ್ಕೂ ಮುಂಚೆ ಆತ ನುವ್ವೊಸ್ತಾನಂಟೆ ನೇನೊದ್ದಂಟಾನಾ ಎಂಬ ಯಶಸ್ವಿ ತೆಲುಗು ಚಲನಚಿತ್ರದಲ್ಲಿ ನಟಿಸಿದ್ದ. ಇದಕ್ಕೂ ಮುಂಚೆ ಓರ್ವ ಸಹ-ನಿರ್ದೇಶಕನಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದ ಸಿದ್ಧಾರ್ಥ್‌, "ಮೆಹ್ರಾ ಭಾರತೀಯ ಸಿನಿಮಾದ ಇದುವರೆಗಿನ ಓರ್ವ ಅತಿ ಮಹತ್ವಾಕಾಂಕ್ಷಿ ತಾಂತ್ರಿಕ ಚಲನಚಿತ್ರೋದ್ಯಮಿ" ಎಂದು ಹೇಳುವ ಮೂಲಕ ಮೆಹ್ರಾನನ್ನು ಪ್ರಶಂಸಿಸಿದ.[೧೫] ನಟ ಮಾಧವನ್‌ ತಮಿಳು ಚಲನಚಿತ್ರ ರಂಗದ ಓರ್ವ ಪ್ರಖ್ಯಾತ ನಟನಾಗಿದ್ದರೂ ಸಹ, ಯುದ್ಧ ವಿಮಾನದ ಓರ್ವ ವಿಮಾನ ಚಾಲಕನ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ. ಸದರಿ ಚಲನಚಿತ್ರದ ಸಾಮರ್ಥ್ಯವೇನೆಂಬುದನ್ನು ಮನವರಿಕೆಮಾಡಿಕೊಂಡಿದ್ದ ಆತ, ಅದರಲ್ಲಿ ತಾನೂ ಒಂದು ಭಾಗವಾಗಿರಬೇಕೆಂದು ಬಯಸಿದ್ದೇ ಈ ಪುಟ್ಟಪಾತ್ರವನ್ನು ಒಪ್ಪಿದುದರ ಹಿಂದಿನ ಕಾರಣವಾಗಿತ್ತು.[೧೬] ಎರಡೇ-ದೃಶ್ಯಗಳ ಒಂದು ಕಿರು ಸನ್ನಿವೇಶದಲ್ಲಿ ಅಸ್ಲಾಂನ ನಿಷ್ಟ ಮುಸ್ಲಿಂ ಅಪ್ಪನಾಗಿ ಓಂ ಪುರಿ ಕೂಡಾ ಈ ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದಾನೆ.

ಚಿತ್ರದ ಪಾತ್ರವರ್ಗದ ಹಂಚಿಕೆಯ ಸಂದರ್ಭದಲ್ಲಿ ಸೋಹಾ ಆಲಿ ಖಾನ್‌ ಮತ್ತು ಅಲೈಸ್‌ ಪ್ಯಾಟನ್‌ ಇಬ್ಬರೂ ಶೀಘ್ರವಾಗಿ ಅವರವರ ಪಾತ್ರಗಳಿಗೆ ಮೆಹ್ರಾನ ಸ್ಪಷ್ಟ ಆಯ್ಕೆಗಳಾದರು,[೧೭] ಇದರಿಂದಾಗಿ ಸಂಪೂರ್ಣ ಪಾತ್ರವರ್ಗದೊಂದಿಗೆ ಒಂದು ಪೂರ್ವಭಾವಿ ಅಭಿನಯ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಪ್ಯಾಟನ್‌ ಮುಂಬಯಿಗೆ ಹಾರಿಬರಬೇಕಾಯಿತು. ಯುನೈಟೆಡ್‌ ಕಿಂಗ್‌ಡಂನಲ್ಲಿನ ತನ್ನ ನೆಲೆಗೆ ಆಕೆ ಹಿಂದಿರುಗಿದ ನಂತರ, ಸಾಕ್ಷ್ಯಚಿತ್ರ ನಿರ್ಮಾಪಕಿಯ ಪಾತ್ರವು ಆಕೆಯ ತೆಕ್ಕೆಗೆ ಬಿದ್ದಿದೆ ಎಂದು ಆಕೆಗೆ ತಿಳಿಸಲಾಯಿತು.[೧೮] ವಿಮಾನ ಚಾಲಕನ ಭಾವೀಪತ್ನಿಯ ಪಾತ್ರವನ್ನು ಅಭಿನಯಿಸುತ್ತಿದ್ದ ಸೋಹಾ ರಂಗ್ ದೇ ಬಸಂತಿ ಚಿತ್ರದಲ್ಲಿನ ತನ್ನ ಪಾತ್ರದ ಜೊತೆಜೊತೆಗೇ, ರಿತುಪರ್ಣ ಘೋಷ್‌ನ ಅಂತರಮಹಲ್‌ ಮತ್ತು ಡೇವಿಡ್‌ ಧವನ್‌ನ ಹಾಸ್ಯಚಿತ್ರವಾದ ಶಾದಿ ನಂ. 1 ನಲ್ಲೂ ಅಭಿನಯಿಸುತ್ತಿದ್ದಳು. ನಿರ್ದಿಷ್ಟವಾಗಿ ಹೇಳುವುದಾದರೆ, ಅಂತರಮಹಲ್‌ ಚಿತ್ರದಲ್ಲಿನ ಆಕೆಯ ತೀವ್ರ ಭಾವುಕತೆಯ ದೃಶ್ಯಗಳು ಬಯಸುತ್ತಿದ್ದ ತೊಡಗಿಸಿಕೊಳ್ಳುವಿಕೆಯಿಂದಾಗಿ ಕೆಲವೊಮ್ಮೆ ಆಕೆಯ ಶಕ್ತಿಯು ಬರಿದಾಗಿಬಿಡುತ್ತಿತ್ತು. ಹೀಗಾಗಿ ರಂಗ್ ದೇ ಬಸಂತಿ ಯಲ್ಲಿನ ಆಕೆಯ ಪಾತ್ರನಿರ್ವಹಣೆಗೆ ಯಾವುದೇ ಕೊರತೆ ಅಥವಾ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ "ಅತೀವ ಪ್ರಮಾಣದಲ್ಲಿ ವೈಯಕ್ತಿಕ ಕೂಲಂಕಷ ಪರೀಕ್ಷೆಯ" ಅಗತ್ಯ ಅವಳಿಗೆ ಕಂಡುಬರುತ್ತಿತ್ತು.[೧೯] ಚಿತ್ರೀಕರಣದ ಸಮಯದಲ್ಲಿ, ಸಹ-ಕಲಾವಿದರಾದ ಸಿದ್ಧಾರ್ಥ್‌ ಮತ್ತು ಸೋಹಾ ನಡುವೆ ಪ್ರೇಮ ಅಂಕುರಿಸಿತ್ತು ಎಂಬ ವರದಿಗಳೂ ಹಬ್ಬಿದ್ದವು.[೨೦] ಇಬ್ಬರು ಪ್ರಮುಖ ನಟಿಯರ ಜೊತೆಗೆ, ಖಾನ್‌ ಪಾತ್ರದ ತಾಯಿಯ ಪಾತ್ರದಲ್ಲಿ ಕಿರಣ್‌ ಖೇರ್‌ ಕಾಣಿಸಿಕೊಂಡಿದ್ದರು.

ಚಿತ್ರೀಕರಣ

ಬದಲಾಯಿಸಿ

ನವದೆಹಲಿ, ಮುಂಬಯಿ, ರಾಜಾಸ್ತಾನ ಮತ್ತು ಪಂಜಾಬ್‌ನಲ್ಲಿ ಚಿತ್ರೀಕರಿಸಲಾದ ಈ ಚಲನಚಿತ್ರವನ್ನು,[೨೧] ೨೦೦೫ರ ಫೆಬ್ರವರಿ ೧ರಂದು ಹೊಟೇಲೊಂದರಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಯಿತು.[೨೨] ಚಿತ್ರೀಕರಣವು ಪ್ರಾರಂಭವಾದಾಗ ಮೆಹ್ರಾ ಒಂದು ಪ್ರಕಟಣೆಯನ್ನು ನೀಡಿ, ಚಿತ್ರತಂಡವು ಕೇವಲ ಜುಲೈ ತಿಂಗಳಲ್ಲಿ ಮಾತ್ರವೇ ತಮ್ಮ ರಜೆಯನ್ನು ಕಳೆಯಲು ಸಾಧ್ಯ ಎಂದು ತಿಳಿಸಿದ.[]

ಚಿತ್ರಕಥೆಯಲ್ಲಿದ್ದಂತೆ ವಾಸ್ತವಿಕ ತಾಣಗಳಲ್ಲಿ ಚಿತ್ರೀಕರಣ ನಡೆಸುವ ಬದಲು, ಚಿತ್ರೀಕರಣಕ್ಕಾಗಿ ಇತರ ತಾಣಗಳನ್ನೂ ಆರಿಸಲಾಯಿತು. ಇಂಥ ಒಂದು ದೃಶ್ಯದಲ್ಲಿ ಸೋಹಾ ಆಲಿ ಖಾನ್‌ ಕಾಣಿಸಿಕೊಂಡಿದ್ದು, ಸದರಿ ದೃಶ್ಯದಲ್ಲಿ ಇಂಡಿಯಾ ಹ್ಯಾಬಿಟೇಟ್‌ ಸೆಂಟರ್‌ನ್ನು ದೆಹಲಿ ವಿಶ್ವವಿದ್ಯಾಲಯದಂತೆ ರೂಪಬದಲಾಯಿಸಿ ತೋರಿಸಲಾಗಿದೆ.

ಇದೇ ರೀತಿಯಲ್ಲೇ, ನವದೆಹಲಿಯ ಬಾರಾಖಂಬಾ ರಸ್ತೆಯಲ್ಲಿನ ಮಾಡರ್ನ್‌ ಸ್ಕೂಲ್‌ನ್ನು ಆಕಾಶವಾಣಿ ಕೇಂದ್ರಕ್ಕೆ ಸಂಬಂಧಿಸಿದ ಎಲ್ಲಾ ದೃಶ್ಯಗಳಿಗೆ ಬಳಸಿಕೊಳ್ಳಲಾಗಿದೆ. ಇದಕ್ಕೆ ಚಿತ್ರದಲ್ಲಿನ ಯುವ ಪಾತ್ರಧಾರಿಗಳು ಲಗ್ಗೆಹಾಕಿ ವಶಪಡಿಸಿಕೊಳ್ಳುವಂತೆ ತೋರಿಸಲಾಗಿದೆ.[೨೩]

ಚಿತ್ರೀಕರಣದ ಕಾರಣದಿಂದಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಬಹುದು ಎಂಬ ಉದ್ದೇಶದಿಂದ ನಗರದಲ್ಲಿ ಚಿತ್ರೀಕರಣಕ್ಕೆ ಪ್ರೋತ್ಸಾಹ ನೀಡಲು ದೆಹಲಿ ಪ್ರವಾಸೋದ್ಯಮ ಇಲಾಖೆಯು ಸಂತೋಷದಿಂದ ಸಮ್ಮತಿಸಿದರೂ, ತದನಂತರ ಬರುವ ನಿಯಮಾನುಸಾರಿ ದಾಖಲೆ ಪತ್ರ ನಿರ್ವಹಣೆಯ ಅಥವಾ ಬರಹಕಾರ್ಯದ ಕಾರಣದಿಂದಾಗಿ ಇಂಡಿಯಾ ಗೇಟ್‌ ಸಮೀಪ ಯಾವುದೇ ಚಲನಚಿತ್ರದ ಚಿತ್ರೀಕರಣವನ್ನು ನಿಷೇಧಿಸಲಾಯಿತು.[೨೩]

ಜೈಪುರದ ಕೋಟೆಯ ಸಮೀಪ ಚಿತ್ರೀಕರಣ ನಡೆಸುವಾಗಲೂ ಅಧಿಕಾರಿಷಾಹಿಯೊಂದಿಗಿನ ಇದೇ ಸ್ವರೂಪದ ಸಮಸ್ಯೆಗಳನ್ನು ಮೆಹ್ರಾ ಎದುರಿಸಬೇಕಾಯಿತು. ಚಿತ್ರೀಕರಣಕ್ಕಾಗಿ ಒಂದು ಐತಿಹಾಸಿಕ ತಾಣವನ್ನು ಬಳಸುವುದಕ್ಕಾಗಿ, ಸ್ಥಳೀಯ ಆರಕ್ಷಕರಿಂದ ಮೊದಲ್ಗೊಂಡು ಭಾರತದ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆ ಕಚೇರಿಯವರೆಗಿನ ಏಳು ವಿವಿಧ ಅಧಿಕಾರಿಗಳ ಅನುಮತಿಗಳನ್ನು ಅವರು ಪಡೆಯಬೇಕಾಗಿತ್ತು.[೨೪]

ಜೈಪುರ ನಗರವನ್ನು ಮೇಲಿನಿಂದ ನೋಡುವಂತಿರುವಂತೆ ತೋರುವ ನಹರ್‌ಗಡ ಕೋಟೆಯು ಇಂಥ ಮತ್ತೊಂದು ಐತಿಹಾಸಿಕ ತಾಣವಾಗಿದ್ದು, ಇಲ್ಲಿ ಚಿತ್ರದ ಹಾಡೊಂದನ್ನು ಚಿತ್ರೀಕರಿಸಲಾಯಿತು.[೨೫] ಈ ತಾಣಗಳ ಜೊತೆಗೆ, ಅಮೃತಸರದ ಸ್ವರ್ಣ ದೇವಾಲಯದಲ್ಲೂ ಸಹ ಚಿತ್ರೀಕರಣವನ್ನು ನಡೆಸಲಾಯಿತು. ಧಾರ್ಮಿಕ ನಂಬಿಕೆಯ ದೃಷ್ಟಿಯಿಂದ ಓರ್ವ ಮುಸ್ಲಿಂ ಆಗಿರುವ ಅಮೀರ್‌ ಖಾನ್‌ಗೆ, ಮೊಟ್ಟಮೊದಲ ಬಾರಿಗೆ ಓರ್ವ ಉತ್ತರ ಭಾರತೀಯ ಪಂಜಾಬಿನವನ ಪಾತ್ರವನ್ನು ವಹಿಸುವ ಅವಕಾಶ ಸಿಕ್ಕಿತ್ತು. ಹೀಗಾಗಿ ಅಲ್ಲಿನ ಸೂಕ್ತವಾದ ಉಚ್ಚಾರಣೆ ಹಾಗೂ ವಾಕ್‌ಶೈಲಿಯನ್ನು ಸಿದ್ಧಿಸಿಕೊಳ್ಳಲು ಆತನಿಗೆ ಕೊಂಚ ಸಮಯಹಿಡಿಯಿತು.[೨೬] ಮೊಟ್ಟಮೊದಲ ಬಾರಿಗೆ ದೇವಾಲಯವನ್ನು ಭೇಟಿಮಾಡಿದಾಗಿನ ತನ್ನ ಅನುಭವದ ಕುರಿತು ಮಾತನಾಡುವಾಗ, ಅವನು ಹೇಳಿದ್ದು ಹೀಗಿತ್ತು:

ನಾನು ಇದುವರೆಗೆ ಭೇಟಿ ನೀಡಿದ ಅತ್ಯಂತ ಶಾಂತಿಯುತ ಸ್ಥಳಗಳ ಪೈಕಿ ಇದು ಒಂದು. ನೀವು ಈ ಸ್ಥಳವನ್ನು ಪ್ರವೇಶಿಸುತ್ತಿದ್ದಂತೆ ಒಂದು ತೆರನಾದ ಪ್ರಶಾಂತತೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಅಲ್ಲಿದ್ದಷ್ಟು ಹೊತ್ತೂ ನಾನು ನಿಜವಾಗಿಯೂ ಆನಂದವನ್ನನುಭವಿಸಿದೆ. ನೀವು ದೇವಾಲಯದ ಮಹಾದ್ವಾರದಲ್ಲಿ ಹಾದುಹೋಗುವ ರೀತಿಯಲ್ಲಿಯೇ, ನೀರಿನೊಳಗಡೆ ನಮ್ಮ ಪಾದಗಳು ಪ್ರವೇಶಿಸುವುದನ್ನು ಚಿತ್ರೀಕರಿಸಿದ್ದು ಇಲ್ಲಿ ತೆಗೆದುಕೊಂಡ ಮೊದಲ ದೃಶ್ಯವಾಗಿತ್ತು. ಆ ನೀರು ತಣ್ಣಗಿದ್ದರೂ ಸಹ ಆ ಅನುಭವ ದಿವ್ಯವಾಗಿತ್ತು![೨೬]

ಚಿತ್ರೀಕರಣದ ತಾಣಗಳನ್ನು ಒಮ್ಮೆಗೆ ಅಂತಿಮಗೊಳಿಸಿದ ನಂತರ ಲವ್ಲೀನ್‌ ಬೇನ್ಸ್‌ ಮತ್ತು ಅರ್ಜುನ್‌ ಭಾಸಿನ್‌ರ ತಂಡವನ್ನು ಚಲನಚಿತ್ರದ ಸ್ವರೂಪವನ್ನು ವಿನ್ಯಾಸಗೊಳಿಸಲು ಆಯ್ಕೆಮಾಡಲಾಯಿತು. ಇದಕ್ಕೂ ಮುಂಚಿತವಾಗಿ ಭಾಸಿನ್‌ ... Kama Sutra: A Tale of Love (೧೯೯೬) ಮತ್ತು ದಿಲ್‌ ಚಾಹ್ತಾ ಹೈ (೨೦೦೧) ಚಿತ್ರಗಳಲ್ಲಿ ಕೆಲಸಮಾಡಿದ್ದ. ದಿಲ್‌ ಚಾಹ್ತಾ ಹೈ ಚಿತ್ರದಲ್ಲಿ ಆಮಿರ್‌ ಖಾನ್‌ ಓರ್ವ ಪಾತ್ರಧಾರಿಯಾಗಿದ್ದ, ಮತ್ತು ತಮ್ಮ ಈ ಹಿಂದಿನ ಸಂಬಂಧದ ಕಾರಣದಿಂದಾಗಿಯೇ ಆತ ಭಾಸಿನ್‌ ಕುರಿತಾಗಿ ಮೆಹ್ರಾನ ಬಳಿ ಶಿಫಾರಸು ಮಾಡಿದ್ದ. ಚಲನಚಿತ್ರದ ಕಥಾಸ್ವರೂಪವು ಇಪ್ಪತ್ತರ ವಯೋಮಾನದ ಅಂತ್ಯಭಾಗದಲ್ಲಿರುವ ಪುರುಷರನ್ನು ಗಮನದಲ್ಲಿಟ್ಟುಕೊಂಡಿದ್ದರಿಂದ, ಅದಕ್ಕನುಸಾರವಾಗಿಯೇ ಭಾಸಿನ್‌ ಅವರ ಹೊರನೋಟಗಳನ್ನು ವಿನ್ಯಾಸಗೊಳಿಸಿದ. ಖಾನ್‌ನ ಕ್ರಾಂತಿಕಾರಿ ನೋಟ, ಶರ್ಮನ್‌ ಜೋಷಿಯ (ಸೂಖಿ ಯ ಪಾತ್ರವನ್ನು ಈತನೇ ವಹಿಸಿದ್ದು) ಪ್ರೀತಿಪಾತ್ರ ವ್ಯಕ್ತಿತ್ವ ಅಥವಾ ಮಾಧವನ್‌ನ ಘನತೆವೆತ್ತ ಹೊರನೋಟಗಳಿಗೆ ಆತನೇ ಕಾರಣನಾಗಿದ್ದರೂ, ಚಲನಚಿತ್ರಕ್ಕೆ ಬೇನ್ಸ್‌ ನೀಡಿದ ಪ್ರಮುಖ ಕೊಡುಗೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ವಿನ್ಯಾಸದ ಯಶಸ್ಸನ್ನು ಭಾಸಿನ್‌ ಅವಳಿಗೇ ನೀಡಿದ.[೨೭] ಖಾನ್‌ನ ತಲೆಗೂದಲನ್ನು ವಿನ್ಯಾಸಗೊಳಿಸಿದ ಎವಾನ್ ಕಂಟ್ರಾಕ್ಟರ್‌, ಖಾನ್‌ನ ಹಣೆಯ ಮೇಲೆ ನವಿರಾದ ಸುರುಳಿ ಕುರುಳು ಆಡುತ್ತಿರುವಂತೆ ರೂಪಿಸಿದ್ದ. ಈ ಹೊಸ ನೋಟವನ್ನು ನೀಡಲು ಕಂಟ್ರಾಕ್ಟರ್‌ಗೆ ಸುಮಾರು ಒಂದು ಗಂಟೆ ಸಮಯ ಹಿಡಿಯುತ್ತಿತ್ತು ಮತ್ತು ಈ ಹೊಸ ಶೈಲಿಯು ಚಲನಚಿತ್ರದ ಪ್ರಾರಂಭದಂದು ಪ್ರೇಕ್ಷಕರನ್ನು ಅಚ್ಚರಿಗೊಳಿಸಿತು.[೨೨]

ಚಿತ್ರನಿರ್ಮಾಣದ ಉತ್ತರಾರ್ಧದಲ್ಲಿ ದರ್ಶಕ ಪರಿಣಾಮಗಳನ್ನು (ವಿಷುಯಲ್ ಇಫೆಕ್ಟ್ಸ್‌) ಟಾಟಾ ಎಲ್ಕ್ಸ್‌ಸಿಯ ವಿಷುಯಲ್ ಕಂಪ್ಯೂಟಿಂಗ್‌ ಲ್ಯಾಬ್ಸ್‌ ನೆರವೇರಿಸಿತು. ಚಲನಚಿತ್ರಕ್ಕಾಗಿ ಅವರು ಸೃಷ್ಟಿಸಿದ ಸೇನಾ ವಿಮಾನವು ವಾಸ್ತವತೆಗೆ ಎಷ್ಟೊಂದು ಹತ್ತಿರವಾಗಿತ್ತೆಂದರೆ, ನಿರ್ಮಾಪಕರು ನಿಜವಾದ MiG-21 ವಿಮಾನವನ್ನೇನಾದರೂ ಬಳಸುತ್ತಿದ್ದಾರೆಯೇ ಎಂಬುದನ್ನು ತಪಾಸಿಸಲು ಭಾರತೀಯ ವಾಯುಪಡೆಯು ಆದೇಶ ನೀಡುವಷ್ಟರ ಮಟ್ಟಿಗೆ ಅದು ಹೋಯಿತು.[೨೮]

ಸೋನಿ BMG ಕಂಪನಿಯಿಂದ ಬಿಡುಗಡೆ ಮಾಡಲ್ಪಟ್ಟ ರಂಗ್ ದೇ ಬಸಂತಿ ಚಿತ್ರದ ಧ್ವನಿಪಥವು ಎ. ಆರ್. ರಹಮಾನ್‌ ಸಂಗೀತ ಸಂಯೋಜನೆಯನ್ನು ಒಳಗೊಂಡಿತ್ತು. ಸಾಹಿತ್ಯವನ್ನು ಪ್ರಸೂನ್‌ ಜೋಷಿ ಮತ್ತು ಭಾರತ-ಮೂಲದ ಓರ್ವ ರ್ಯಾಪ್‌ ಸಂಗೀತಗಾರನಾದ ಬ್ಲಾಝ್‌ ರಚಿಸಿದ್ದರು.[೨೯][೩೦]

೨೦೦೫ರ ಏಪ್ರಿಲ್‌ನಲ್ಲಿ ಚಲನಚಿತ್ರದ ಘೋಷಣೆಯಾದಾಗಿನಿಂದ ಸಂಗೀತ ಸಂಯೋಜನಾ ಕಾರ್ಯವನ್ನು ರಹಮಾನ್‌ಗೆ ನಿಯೋಜಿಸಲಾಗಿತ್ತು.[] ಪಾಪ್‌ ಗಾಯಕಿ ನೆಲ್ಲಿ ಫರ್ಟಾಡೊಳೊಂದಿಗೆ ನಡೆದ ಒಂದು ಪತ್ರಿಕಾಗೋಷ್ಠಿಯಲ್ಲಿ ಆತ ಮಾತನಾಡುತ್ತಾ, ಧ್ವನಿಪಥದಲ್ಲಿ ಮೂಲತಃ ಆಕೆಯೂ ಕಾಣಿಸಿಕೊಳ್ಳಬೇಕಿತ್ತು; ಆದರೆ ನಿರ್ಮಾಪಕರು ಬದಲಾಗಿದ್ದರಿಂದ ಹಾಗೂ ಇತರ ಅನೇಕ ಕಾರಣಗಳಿಂದಾಗಿ ಅಂತಿಮವಾಗಿ ಇದು ಸಾಧ್ಯವಾಗಲಿಲ್ಲ ಎಂದು ತಿಳಿಸಿದ.[೩೧] ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಅಮೀರ್ ಖಾನ್‌‌ ಹೊಂದಿದ್ದ ಜ್ಞಾನದ ನೆರವಿನಿಂದಾಗಿ,[೩೨] ಚಲನಚಿತ್ರದ ಧ್ವನಿಪಥದ ಕಾರ್ಯದಲ್ಲಿ ರಹಮಾನ್‌ ಮತ್ತು ಜೋಷಿಯೊಂದಿಗೆ ಕಾರ್ಯನಿರ್ವಹಿಸಲು ಆತನಿಗೆ ಸಾಧ್ಯವಾಯಿತು.[೨೧] ಇದರ ಜೊತೆಗೆ, ಚಿತ್ರದ ಹಾಡುಗಳಲ್ಲೊಂದನ್ನು ಆತ ಹಾಡಬೇಕೆಂದು ಮೆಹ್ರಾ ಮತ್ತು ರಹಮಾನ್‌ ಆತನನ್ನು ಆಯ್ಕೆಮಾಡಿದರು.[೩೩]

ಗೀತಸಾಹಿತಿಗಳಲ್ಲೊಬ್ಬನಾದ ಜೋಷಿಗೆ, ನಿರ್ದೇಶಕ ರಾಕೇಶ್ ಮೆಹ್ರಾನ ಕಾರ್ಯವೈಖರಿ ತೃಪ್ತಿತಂದಿತ್ತು. ಏಕೆಂದರೆ ಜೋಷಿಯ ಬರವಣಿಗೆಯ ಶೈಲಿ ಹಾಗೂ ಸೃಜನಶೀಲತೆಗೆ ಹೊಂದಿಕೊಂಡು ಹೋಗಲು ಮೆಹ್ರಾ ಸಿದ್ಧನಿರುತ್ತಿದ್ದ.[೨೯] ತನ್ನ ಹಿಂದಿನೆಲ್ಲಾ ಕೃತಿಗಳಿಗೆ ಹೋಲಿಸಿದಾಗ ಸದರಿ ಚಲನಚಿತ್ರದ ಧ್ವನಿಪಥವು ತನ್ನ ಅಚ್ಚುಮೆಚ್ಚಿನದಾಗಿತ್ತು ಎಂದು ಒಪ್ಪಿಕೊಂಡ ಜೋಷಿ, "ಇಂದಿನ ಯುವಜನಾಂಗದ ಆಲೋಚನಾ ರೀತಿಯನ್ನು ಅರ್ಥಮಾಡಿಕೊಳ್ಳಲು ತೊಡಗಿಸಿಕೊಳ್ಳುವಲ್ಲಿ ಹಾಗೂ ಅವರ ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸುವಲ್ಲಿ ಇದೊಂದು ಅದ್ಭುತ ಅನುಭವವಾಗಿತ್ತು" ಎಂದು ಅಭಿಪ್ರಾಯಪಟ್ಟ.[೩೪] ನುರಿತ ಗಾಯಕಿ ಲತಾ ಮಂಗೇಷ್ಕರ್‌ ಮೊಟ್ಟಮೊದಲ ಬಾರಿಗೆ ರಹಮಾನ್‌ನೊಂದಿಗೆ ಹಾಡಿದ [೨೧] ಈತನ ಹಾಡುಗಳಲ್ಲೊಂದಾದ ಲೂಕಾ ಚುಪ್ಪಿ ಯ ಕುರಿತು ಮಾತನಾಡುತ್ತಾ, ತಾಯಿಯು ತನ್ನ ಮಗನನ್ನು ಕಳೆದುಕೊಳ್ಳುವ ದೃಶ್ಯವೊಂದರ ಕುರಿತು ರಹಮಾನ್‌ನೊಂದಿಗೆ ಚರ್ಚೆ ನಡೆಸುತ್ತಿರುವಾಗ ಈ ಹಾಡು ಹೊರಹೊಮ್ಮಿತು ಎಂದು ಜೋಷಿ ತಿಳಿಸಿದ. ಮಗನು ಮತ್ತೆಂದೂ ಹಿಂದಿರುಗದ ರೀತಿಯಲ್ಲಿ ಅಡಗಿಕೊಳ್ಳಲಿರುವುದರ ದುಃಖತಪ್ತ ವಾಸ್ತವತೆಯ ಹಿನ್ನೆಲೆಯೊಂದಿಗೆ, ತಾಯಿ ಮತ್ತು ಮಗ ಕಣ್ಣಾಮುಚ್ಚಾಲೆ ಆಟವನ್ನು ಆಡುವುದರ ಕುರಿತು ಜೋಷಿ ಸಾಹಿತ್ಯವನ್ನು ಬರೆದಿದ್ದ.[೩೫] ಈ ಹಾಡನ್ನು ಲತಾ ಮಂಗೇಷ್ಕರ್‌ ಹಾಡುವಾಗ ತಾನು ಕಣ್ಣೀರುಗರೆಯುತ್ತಿದ್ದುದನ್ನು ಆತ ಒಪ್ಪಿಕೊಂಡಿದ್ದಾನೆ.[೩೬] ಈ ಧ್ವನಿಪಥವು ಫಿಲ್ಮ್‌ಫೇರ್‌ನ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದುಕೊಂಡಿತು,[೩೭] ಮತ್ತು ಅದರಲ್ಲಿನ ಎರಡು ಹಾಡುಗಳಾದ ಖಲ್‌ಬಲಿ ಮತ್ತು ಲೂಕಾ ಚುಪ್ಪಿ , ಅತ್ಯುತ್ತಮವಾದ ಮೂಲಗೀತೆಯ ಅಕಾಡೆಮಿ ಪ್ರಶಸ್ತಿಗಾಗಿರುವ ಒಂದು ನಾಮಕರಣಕ್ಕೆ ಪರಿಗಣಿಸಲ್ಪಟ್ಟಿದ್ದವು.[೩೬]

ವಿಶಿಷ್ಟ ಶೈಲಿಯ ಬಾಲಿವುಡ್‌ ಧ್ವನಿಪಥಗಳ ಕುರಿತು ಚರ್ಚಿಸುವಾಗ, ಸಾಂಪ್ರದಾಯಿಕ ಪಂಜಾಬಿ ಸಾಂಸ್ಕೃತಿಕ ಅಂಶಗಳನ್ನು ರಹಮಾನ್‌ ತನ್ನ ಸಂಗೀತದೊಳಗೆ ಮಿಳಿತಗೊಳಿಸಿದ್ದಾನೆ ಎಂದು ಕೊಲೊರೆಡೋ ಕಾಲೇಜ್‌ನ ಸಂಗೀತ ಪ್ರಾಧ್ಯಾಪಕನೋರ್ವ ತಿಳಿಸಿದ. ಸಿಖ್‌ ಗುರುದ್ವಾರದಲ್ಲಿ (ಸ್ವರ್ಣ ದೇವಾಲಯ) ಮಹಿಳೆಯೋರ್ವಳ ಪ್ರಾರ್ಥನೆ ಮತ್ತು ಬೆಳೆಯ ಕಟಾವಿನ ಸಮಯದಲ್ಲಿ ಮಾಡಲಾಗುವ ಭಾಂಗ್ರಾ ನೃತ್ಯದ ಸನ್ನಿವೇಶದಲ್ಲಿ ಚಲನಚಿತ್ರದಲ್ಲಿನ ಯುವಜನರ ರಾಷ್ಟ್ರೀಯ ಪ್ರತಿಬಂಧಕವಿಲ್ಲದ ಜೀವನಶೈಲಿಯನ್ನು ಚಿತ್ರಿಸಲು ಹಾರ್ಡ್‌ ರಾಕ್‌ (ಗಂಭೀರವಾದ ಲಯದ ರಾಕ್‌ ಸಂಗೀತ) ಮತ್ತು ಹಿಪ್‌ ಹಾಪ್‌ನಂಥ ಅಂಶಗಳನ್ನು ಬಳಸಲಾಗಿತ್ತು.[೩೮]

ಬಿಡುಗಡೆ

ಬದಲಾಯಿಸಿ

೨೦೦೬ರ ಜನವರಿ ೨೬ರಂದು ರಂಗ್ ದೇ ಬಸಂತಿ ಚಿತ್ರದ ವಿಶ್ವದ ಪ್ರಥಮ ಪ್ರದರ್ಶನ ನಡೆಯಿತು. ಪಾಶ್ಚಿಮಾತ್ಯ ಪ್ರೇಕ್ಷಕ ವೃಂದದ[೩೯] ನೆರವಿನೊಂದಿಗೆ ಇದೊಂದು ಯಶಸ್ವಿ ಚಿತ್ರವಾಗಲಿದೆ ಎಂಬ ಅತೀವ ನಿರೀಕ್ಷೆಯಲ್ಲಿ ಇದನ್ನು ಆಯೋಜಿಸಲಾಗಿತ್ತು. ಆದರೂ, ಕೆಲವೊಂದು ವಿವಾದಾತ್ಮಕ ದೃಶ್ಯಗಳನ್ನು ಇದು ಒಳಗೊಂಡಿದ್ದರಿಂದಾಗಿ ಹಲವಾರು ಸಂಘ-ಸಂಸ್ಥೆಗಳ ವತಿಯಿಂದ ಅಸಮಧಾನ-ಆಕ್ರೋಶವನ್ನೂ ಚಿತ್ರವು ಎದುರಿಸಬೇಕಾಗಿ ಬಂತು. ಭಾರತದಲ್ಲಿ ಮಾರಣಾಂತಿಕ ಅಪಘಾತಗಳ ಸುದೀರ್ಘ ಇತಿಹಾಸವನ್ನೇ ಹೊಂದಿರುವ, ಭಾರತೀಯ ವಾಯುಪಡೆಯಲ್ಲಿನ ಒಂದು ವಿವಾದಾತ್ಮಕ ವಿಮಾನವಾದ ಮಿಗ್‌-21 ಒಂದರ ದೃಶ್ಯಗಳನ್ನು ಚಲನಚಿತ್ರವು ಒಳಗೊಂಡಿತ್ತು. ಕೂಡಲೇ ಕಾರ್ಯತತ್ಪರವಾದ ಭಾರತೀಯ ರಕ್ಷಣಾ ಇಲಾಖೆಯು ಕಳವಳವನ್ನು ವ್ಯಕ್ತಪಡಿಸಿದ್ದರಿಂದಾಗಿ, ರಕ್ಷಣಾ ಇಲಾಖೆಯಿಂದ ಚಲನಚಿತ್ರ ನಿರ್ಮಾಪಕರು ಅನುಮತಿಯನ್ನು ಪಡೆಯಬೇಕೆಂದು ಭಾರತೀಯ ಸೆನ್ಸಾರ್ ಮಂಡಳಿಯು ಒತ್ತಾಯಿಸಬೇಕಾಗಿ ಬಂತು.[೪೦] ಇದಕ್ಕನುಸಾರವಾಗಿ, ಅಂದಿನ ರಕ್ಷಣಾ ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಹಾಗೂ ಸಶಸ್ತ್ರ ಪಡೆಗಳಿಗೆ ಸೇರಿದ ಇತರ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಖಾನ್‌ ಮತ್ತು ಮೆಹ್ರಾ ಚಲನಚಿತ್ರವನ್ನು ಪ್ರದರ್ಶಿಸಿದರು.[೪೧] ವಾಯುಪಡೆಗೆ ಸೇರಿದ ಓರ್ವ ಅಧಿಕಾರಿ ಮಾತನಾಡುತ್ತಾ, "ಇದು ಒಂದು ಅವಲೋಕನವಾಗಿರಲ್ಲ, ಬದಲಿಗೆ ಒಂದು ಮುನ್ನೋಟವಾಗಿತ್ತು" ಎಂದು ಹೇಳಿದನೆಂದು ವರದಿಯಾಗಿತ್ತು.[೪೨] ವಿಶೇಷ ಪ್ರದರ್ಶನವಾದ ನಂತರ, ರಕ್ಷಣಾ ಇಲಾಖೆಯು ಯಾವುದೇ ಭಾಗವನ್ನು ಕತ್ತರಿಸುವಂತೆ ಒತ್ತಾಯ ಹೇರಲಿಲ್ಲ. ಆದರೆ, ಮೃತರಾದ ಮಿಗ್‌ ವಿಮಾನ ಚಾಲಕರಿಗೆ ಚಲನಚಿತ್ರವನ್ನು ಅರ್ಪಿಸಲಾಗಿದೆ ಎಂದು ತೋರಿಸಲಾಗುವ ಚಿತ್ರದ ಚಿತ್ರಫಲಕಕ್ಕೆ ಇಲಾಖೆಯ ಶಿಫಾರಸಿನ ಅನುಸಾರ ಮತ್ತಷ್ಟು ಹೆಸರುಗಳನ್ನು ಸೇರಿಸಲಾಯಿತು.[೪೩] ಈ ಅನುಜ್ಞೆಯ ನಂತರ, ಚಲನಚಿತ್ರದಲ್ಲಿ ಪ್ರಾಣಿಗಳನ್ನು ಬಳಸಿರುವುದರ ಕುರಿತು ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಲಿಯು ಆಕ್ಷೇಪಗಳನ್ನೆತ್ತಿತು.

ಚಲನಚಿತ್ರ ನಿರ್ಮಾಪಕರು ಮಂಡಳಿಯ ಅಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರವೊಂದನ್ನು ಪಡೆದಿದ್ದರಾದರೂ, ಪ್ರಾಣಿ ಹಕ್ಕುಗಳ ಓರ್ವ ಪ್ರಖ್ಯಾತ ಕ್ರಿಯಾವಾದಿ ಹಾಗೂ ಕ್ಷೇಮಾಭಿವೃದ್ಧಿ ಮಂಡಳಿಯ ಸದಸ್ಯೆಯಾದ ಮನೇಕಾ ಗಾಂಧಿ, ಈ ಪ್ರಮಾಣಪತ್ರದಲ್ಲಿ ಲೋಪದೋಷಗಳನ್ನು ಕಂಡುಕೊಂಡರು.[೪೪] ತರುವಾಯ, ಈ ಪ್ರಮಾಣಪತ್ರವನ್ನು ರದ್ದುಮಾಡಲಾಯಿತು ಮತ್ತು ವಿಶ್ವದ ಪೂರ್ವಭಾವಿ ಪ್ರದರ್ಶನಕ್ಕೆ ಕೆಲವೇ ದಿನಗಳು ಉಳಿದಿರುವಾಗ, ಮನೇಕಾಗಾಂಧಿಯನ್ನು ಸ್ವತಃ ಭೇಟಿಮಾಡಿದ ಮೆಹ್ರಾ ಆಕ್ಷೇಪವನ್ನು ಪುನಃ ಪರಿಶೀಲಿಸುವಂತೆ ಆಕೆಯನ್ನು ಕೋರಿದ. ಚಿತ್ರವನ್ನು ಮತ್ತೊಮ್ಮೆ ವೀಕ್ಷಿಸಿದ ನಂತರ ಮಂಡಳಿಯು ತನ್ನ ಆಕ್ಷೇಪವನ್ನು ಮುಕ್ತಗೊಳಿಸಿ, ಚಲನಚಿತ್ರದಲ್ಲಿನ ಪ್ರಾಣಿಗಳ ಬಳಕೆಯು ಸ್ವಾಭಾವಿಕವಾಗಿದೆ ಮತ್ತು ಸಮರ್ಥನೀಯವಾಗಿದೆ ಎಂದು ಹೇಳಿತು.

ಆದಾಗ್ಯೂ, ನಿಹಾಂಗ್‌ ಸಿಖ್‌ರಿಂದ ಮಾಡಲ್ಪಡುವ ಒಂದು ನಿಷೇಧಿತ ಕುದುರೆ ಓಟದ ಪಂದ್ಯವನ್ನು ಚಿತ್ರಿಸುವ ೨೦-ಸೆಕೆಂಡ್‌ ಅವಧಿಯ ದೃಶ್ಯವೊಂದನ್ನು ತೆಗೆದುಹಾಕುವಂತೆ ಮಂಡಳಿಯು ಮಾಡಿದ ಶಿಫಾರಸಿನ ಅನುಸಾರ, ಚಲನಚಿತ್ರ ನಿರ್ಮಾಪಕರು ಈ ದೃಶ್ಯವನ್ನು ತೆಗೆದುಹಾಕಿದರು.[೪೫][೪೬]

ನಂತರ ಶ್ರೀಮತಿ ಕವಿತಾ ಗಾಡ್ಗೀಳ್‌ ಎಂಬುವವರು ಚಲನಚಿತ್ರದ ಬಿಡುಗಡೆಗೆ ಆಕ್ಷೇಪವನ್ನು ವ್ಯಕ್ತಪಡಿಸಿದರು. ಅವರ ಮಗನಾಗಿದ್ದ ಫ್ಲೈಟ್‌ ಲೆಫ್ಟಿನೆಂಟ್‌ ದಿವಂಗತ ಅಭಿಜೀತ್‌ ಗಾಡ್ಗೀಳ್‌, ತನ್ನ ಮಿಗ್‌-೨೧ ಯುದ್ಧವಿಮಾನದ ಅಪ್ಪಳಿಸುವಿಕೆಯಿಂದಾಗಿ ಕೊಲ್ಲಲ್ಪಟ್ಟಿದ್ದ, ಮತ್ತು ಸದರಿ ಚಲನಚಿತ್ರವು ತನ್ನ ಈ ಮಗನ ಜೀವನವನ್ನು ಜಾಳುಜಾಳಾಗಿ ಆಧರಿಸಿದೆ ಎಂದು ಭಾವಿಸಿದ್ದ ಶ್ರೀಮತಿ ಗಾಡ್ಗೀಳ್‌, ನಿರ್ಮಾಪಕರು ಚಿತ್ರವನ್ನು ತನಗೊಮ್ಮೆ ತೋರಿಸಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಯಾಗಿ ಸ್ಪಂದಿಸಿದ ಚಲನಚಿತ್ರದ ಕಥೆಗಾರರಲ್ಲೊಬ್ಬರಾದ ಕಮಲೇಶ್ ಪಾಂಡೆ, ಸದರಿ ಚಿತ್ರವು ಅಭಿಜೀತ್‌ ಗಾಡ್ಗೀಳ್‌ರ ಜೀವನದಿಂದ ಪ್ರೇರಣೆಯನ್ನು ಪಡೆದಿಲ್ಲ ಎಂದು ಸ್ಪಷ್ಟೀಕರಿಸಿದ.[೪೭]

ಚಲನಚಿತ್ರವು ಹಲವಾರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲ್ಪಟ್ಟಿತು. ೨೦೦೬ರಲ್ಲಿ, ಲೈಯಾನ್‌ ಅಸಿಎಕ್ಸ್‌ಪೊ ಚಲನಚಿತ್ರೋತ್ಸವ,[೪೮] ವಿಸ್ಕಾನ್ಸಿನ್‌ ಚಲನಚಿತ್ರೋತ್ಸವ[೪೯] ಮತ್ತು ಮೊರಾಕೊ-ಮೂಲದ ಮರ್ರಾಕೆಚ್‌ನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳೊಂದಿಗೆ ಇದು ಫ್ರಾನ್ಸ್‌ನಲ್ಲಿ ಪ್ರದರ್ಶಿಸಲ್ಪಟ್ಟಿತು.[೫೦] ಪ್ರಚಾರದ ಒಂದು ಭಾಗವಾಗಿ, ಚಿತ್ರದ ತಾರಾಗಣವು ವಿದ್ಯಾರ್ಥಿಗಳೊಂದಿಗೆ ಪರಸ್ಪರ ಸಂವಹನ ನಡೆಸುವ ಉದ್ದೇಶದೊಂದಿಗೆ, ನವದೆಹಲಿ, ಮುಂಬಯಿ, ಕೋಲ್ಕತಾ, ಹೈದರಾಬಾದ್‌ ಮತ್ತು ಪುಣೆಯಲ್ಲಿನ ಪ್ರಮುಖ ವಿಶ್ವವಿದ್ಯಾಲಯದ ಆವರಣಗಳಿಗೆ ಭೇಟಿನೀಡಿತು.[೫೧] ಚಲನಚಿತ್ರದ ಪ್ರಚಾರಕ್ಕೆ ಅಂತರರಾಷ್ಟ್ರೀಯ ಪರಿಣಿತರ ಎರವಲು ಸೇವೆಯನ್ನು ಪಡೆದ ನಂತರ,[೫೨] ಚಲನಚಿತ್ರದ ಮಾರಾಟಗಾರಿಕೆ ವೆಚ್ಚವು ೨೫೦ ದಶಲಕ್ಷ ರೂ.ಗಳ (ಸರಿ ಸುಮಾರಾಗಿ ೫.೫ ದಶಲಕ್ಷ US$) ಒಟ್ಟಾರೆ ನಿರ್ಮಾಣ ಅಂದಾಜುವೆಚ್ಚದ ಶೇಕಡಾ ೪೦ರಷ್ಟು ಮಟ್ಟಕ್ಕೆ ಬಂದುಮುಟ್ಟಿತು. ಬಾಲಿವುಡ್‌ನಲ್ಲಿ ಈ ವೆಚ್ಚವು ಅಭೂತಪೂರ್ವವಾಗಿತ್ತು. ಏಕೆಂದರೆ, ಭಾರತೀಯ ಚಲನಚಿತ್ರ ನಿರ್ಮಾಪಕರು ತಮ್ಮ ನಿರ್ಮಾಣದ ಅಂದಾಜುವೆಚ್ಚದ ಕೇವಲ ಸುಮಾರು ಶೇಕಡಾ ಐದರಷ್ಟನ್ನು ಮಾತ್ರವೇ ಮಾರಾಟಗಾರಿಕೆಗೆ ಮೀಸಲಿಡುತ್ತಾರೆ.[೫೩]

೧೦೦ ದಶಲಕ್ಷ ರೂ.ಗಳ (ಸರಿ ಸುಮಾರಾಗಿ ೨.೨ ದಶಲಕ್ಷ US$) ಮಾರಾಟಗಾರಿಕೆ ಪ್ರಚಾರದ ಪೈಕಿ, ಇದರ ಐದನೇ ಒಂದು ಭಾಗ ನಿರ್ಮಾಪಕರಿಂದ ಬಂದರೆ, ಉಳಿದ ಭಾಗವನ್ನು ಬ್ರಾಂಡ್‌-ಒಪ್ಪಂದಗಳು ಹಾಗೂ ಪಾಲುದಾರಿಕೆಯ ಮೂಲಕ ಪಡೆಯಲಾಯಿತು.[೫೪]

ರಹಮಾನ್‌ನ ಹಿಂದಿನ ಸಂಗೀತಮಯ ಸಾಧನೆಯಾದ ಸಾಥಿಯಾ ಚಿತ್ರವು ೨೦೦೨ರಲ್ಲಿ ಬಂದಾಗಿನಿಂದಲೂ ಮಾಧ್ಯಮದಲ್ಲಿ ಈ ಚಿತ್ರದ ಧ್ವನಿಪಥದಿಂದ ಹೆಚ್ಚಿನ ಪ್ರಮಾಣದ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು.[೫೫] ೨೦೦೫ರ ಡಿಸೆಂಬರ್‌ನ ಆರಂಭದಲ್ಲಿ ಮೊದಲ ಬಾರಿಗೆ ವಾಣಿಜ್ಯ ಸ್ವರೂಪದಲ್ಲಿ ಬಿಡುಗಡೆಯಾದ ಇದರ ಧ್ವನಿಪಥವು ಸಾಧಾರಣಕ್ಕಿಂತ ಮೇಲ್ಮಟ್ಟದ ಪ್ರತಿಕ್ರಿಯೆಗಳನ್ನು ಸಾರ್ವತ್ರಿಕವಾಗಿ ಪಡೆದುಕೊಂಡಿತು.[೫೬][೫೭][೫೮] ಇದರ ಹಾಡುಗಳಲ್ಲೊಂದಾದ, ಮಸ್ತಿ ಕಿ ಪಾಠ್‌ಶಾಲಾ ಕ್ಕೆ (ಭಾಷಾಂತರಿಸಿದಾಗ: ತಮಾಷೆಯ ಶಾಲಾಕೊಠಡಿ ), ಭಾರತೀಯ ದೂರದರ್ಶನ ವಾಹಿನಿಗಳು ೨೦೦೬ರ "ವರ್ಷದ ಹಾಡು" ಎಂಬ ಶ್ರೇಯಾಂಕವನ್ನು ನೀಡಿದರೆ,[೫೯] ಎರಡು ಸಂಯೋಜನೆಗಳನ್ನು ಅಕಾಡೆಮಿ ಪ್ರಶಸ್ತಿಯ ನಾಮಕರಣವೊಂದಕ್ಕೆ ಪರಿಗಣಿಸಲಾಯಿತು.[೬೦]

ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕೆ ಮುಂಚೆಯೇ, ಚಲನಚಿತ್ರದ ಮಾರಾಟಗಾರಿಕೆಯಲ್ಲಿ ನೆರವಾಗುವ ದೃಷ್ಟಿಯಿಂದ ನಿರ್ಮಾಪಕರು ಹಲವಾರು ಉನ್ನತ ಬ್ರಾಂಡ್‌ಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡರು.

ಚಲನಚಿತ್ರದ ಬಿಡುಗಡೆಯ ಸ್ಮರಣಾರ್ಥವಾಗಿ ವಿಶೇಷ ಆವೃತ್ತಿಯ ಬಾಟಲಿಗಳನ್ನು ಬಿಡುಗಡೆ ಮಾಡುವ ಮೂಲಕ ದಿ ಕೋಕಾ-ಕೋಲಾ ಕಂಪನಿಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಇದು ಬಾಲಿವುಡ್‌ನಲ್ಲಿ ಒಂದು ಮೊಟ್ಟಮೊದಲ ವಿಶಿಷ್ಟ ಹೆಜ್ಜೆಯಾಗಿತ್ತು. ಇದರ ಜೊತೆಗೆ, ಸಂಗೀತದ CDಗಳು ಹಾಗೂ ಕ್ಯಾಸೆಟ್‌ಗಳಿಗೆ ಕೋಲಾ ಕಂಪನಿಯೊಂದಿಗಿನ ಸಹವರ್ತಿ-ಬ್ರಾಂಡ್‌ಗಳ ಸ್ವರೂಪವನ್ನು ನೀಡಲಾಯಿತು. ಚಲನಚಿತ್ರದಿಂದ ಪಡೆದ ಸಂಗ್ರಹಯೋಗ್ಯ ಸ್ಮರಣಿಕೆಗಳ ಮಾರಾಟವನ್ನೂ ಇದರ ಜೊತೆಯಲ್ಲಿಯೇ ಹಮ್ಮಿಕೊಳ್ಳಲಾಗಿತ್ತು.[೬೧] ಭಾರತದಲ್ಲಿನ ಒಂದು ಸುಪ್ರಸಿದ್ಧ ಸಿದ್ಧ-ಉಡುಪುಗಳ ಚಿಲ್ಲರೆ ಮಾರಾಟ ಸರಣಿಯಾದ ಪ್ರವೋಗ್‌ ಕಂಪನಿಯು, ಭಾರತದ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಒಂದು ವಿಶೇಷವಾದ ಸೀಮಿತ ದಾಸ್ತಾನಿನ ವಸ್ತ್ರದ ವಾಣಿಜ್ಯ ಸರಕನ್ನು ಬಿಡುಗಡೆ ಮಾಡಿತು.[೬೨] ಇದರ ಜೊತೆಗೆ, LG ಸಮೂಹ, ಬರ್ಜರ್‌ ಪೇಂಟ್ಸ್‌, ಭಾರ್ತಿ ಏರ್‌ಟೆಲ್‌ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಇವೇ ಮೊದಲಾದ ಕಂಪನಿಗಳೊಂದಿಗೆ ಜತೆಗೂಡಿದ ನಿರ್ಮಾಪಕರು ಒಪ್ಪಂದಗಳನ್ನು ಏರ್ಪಡಿಸಿಕೊಂಡರು.[೫೪] ತಮ್ಮ ಮಾರಾಟಗಾರಿಕೆಯ ಪ್ರಯತ್ನಗಳನ್ನು ಮತ್ತಷ್ಟು ವರ್ಧಿಸಿಕೊಳ್ಳುವ ಸಲುವಾಗಿ MSN ಇಂಡಿಯಾ, ಚಾನೆಲ್‌ V ಮತ್ತು ರೇಡಿಯೋ ಮಿರ್ಚಿಯಂಥ ಹಲವಾರು ಮಾಧ್ಯಮ ಪಾಲುದಾರರೊಂದಿಗೆ ನಿರ್ಮಾಪಕರು ಒಪ್ಪಂದ ಮಾಡಿಕೊಂಡರು.[೬೩] ಭಾರತೀಯ ಮೊಬೈಲ್‌ ಕಂಟೆಂಟ್ ಕಂಪನಿಯೊಂದರಿಂದ ಬಿಡುಗಡೆ ಮಾಡಲ್ಪಟ್ಟ ಒಂದು ವಿಡಿಯೋ ಅಟವು ಚಲನಚಿತ್ರದ ಕಥಾಸ್ವರೂಪದ ಒಂದು ರೂಪಾಂತರವನ್ನು ಆಧರಿಸಿತ್ತು.[೬೪]

ಭಾರತದಲ್ಲಿ ದಿ ಹಿಂದೂ ಪತ್ರಿಕೆಯು, ಮೆಟ್ರೋಪಾಲಿಟನ್‌ ನಗರಗಳಿಗೆ ಸೇರಿದ ಪ್ರೇಕ್ಷಕರು ಈ ಚಿತ್ರದೆಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಒಲವು ತೋರುತ್ತಿದ್ದಾರೆ, ರಂಗ್ ದೇ ಬಸಂತಿ ಚಿತ್ರವು ತನ್ನ ಆರಂಭಿಕ ವಾರದಲ್ಲಿಯೇ ದಾಖಲಾರ್ಹ ಗಳಿಕೆಯನ್ನು ಸಂಗ್ರಹಿಸುತ್ತಿದೆ ಎಂದು ವರದಿಮಾಡಿತು.[೬೫] ಇದಕ್ಕೆ ಪುಷ್ಟಿನೀಡುವಂತೆ ಚಲನಚಿತ್ರದ ಗಳಿಕೆಯ ಶೇಕಡಾ ೫೫ರಷ್ಟು ಭಾಗವು ಈ ನಗರಗಳಲ್ಲಿದ್ದ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಿಂದಲೇ ಬಂದಿತು.[೬೬] ಬಾಲಿವುಡ್‌ನ ಸ್ವಂತ ನೆಲೆಯಾದ ಮುಂಬಯಿಯಿಂದ ಬಂದ ಮೊದಲನೇ ವಾರದ ಗಲ್ಲಾಪೆಟ್ಟಿಗೆಯ ಸಂಗ್ರಹಗಳೇ, ೪೦ ದಶಲಕ್ಷ ರೂ.ಗಳನ್ನೂ (ಸರಿ ಸುಮಾರಾಗಿ ೮೮೦,೦೦೦ US$) ಮೀರಿಸುವಂತಿದ್ದರೆ, ನವದೆಹಲಿಯಲ್ಲಿನ ಚಿತ್ರಮಂದಿರಗಳು ಮುಂಬಯಿಯ ಆದಾಯದ ಅರ್ಧದಷ್ಟನ್ನು ಗಳಿಸಿದವು. ದೇಶದಾದ್ಯಂತದ ಮೊದಲನೇ ವಾರದ ಸಂಚಿತ ಗಳಿಕೆಯು ಸುಮಾರು ೮೦ ದಶಲಕ್ಷ ರೂ.ಗಳಷ್ಟು (ಸರಿ ಸುಮಾರಾಗಿ ೧.೭೬ ದಶಲಕ್ಷ US$) ಇತ್ತು. ಅದೇ ವಾರದಲ್ಲಿ ದಾಖಲಾದ ಅಮೆರಿಕ ಸಂಯುಕ್ತ ಸಂಸ್ಥಾನಗಳು, ಯುನೈಟೆಡ್‌ ಕಿಂಗ್‌ಡಂ ಮತ್ತು ಆಸ್ಟ್ರೇಲಿಯಾದಿಂದ ಬಂದ ಸಾಗರೋತ್ತರ ಗಳಿಕೆಗಳು ಒಟ್ಟಾರೆಯಾಗಿ ೬೦ ದಶಲಕ್ಷ ರೂ.ಗಳನ್ನೂ (ಸರಿ ಸುಮಾರಾಗಿ ೧.೩೨ ದಶಲಕ್ಷ US$) ಮೀರಿಸಿದ್ದವು.[೬೫] ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸುಮಾರು ೬೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಲನಚಿತ್ರವು ಮೊದಲನೇ ವಾರಾಂತ್ಯದ ಹೊತ್ತಿಗೆ ೩೧ ದಶಲಕ್ಷ ರೂ.ಗಳನ್ನು (ಸರಿ ಸುಮಾರಾಗಿ ೭೦೦,೦೦೦ US$) ಮತ್ತು ೧೦ ವಾರಗಳ ಅವಧಿಯಲ್ಲಿ ೯೯ ದಶಲಕ್ಷ ರೂ.ಗಳನ್ನೂ (ಸರಿಸುಮಾರಾಗಿ ೨.೨ ದಶಲಕ್ಷ US$) ಸಂಗ್ರಹಿಸಿತು.[೬೭]  ೧.೨೩ ಶತಕೋಟಿ ರೂ.ಗಳು (ಸರಿ ಸುಮಾರಾಗಿ ೨೭ ದಶಲಕ್ಷ US$) ಭಾರತೀಯ ಪ್ರಾಂತ್ಯವೊಂದರಿಂದಲೇ ಬರುವುದರೊಂದಿಗೆ ಈ ಚಲನಚಿತ್ರವು ವಿಶ್ವಾದ್ಯಂತ ಗಳಿಸಿದ ಹಣವು ೧.೩೬ ಶತಕೋಟಿ ರೂ.ಗಳಿಗಿಂತಲೂ (ಸರಿ ಸುಮಾರಾಗಿ ೩೦ ದಶಲಕ್ಷ US$) ಹೆಚ್ಚಿತ್ತು.[೬೭]

ಚಲನಚಿತ್ರವು ಚಿತ್ರಮಂದಿರದಲ್ಲಿ ಬಿಡುಗಡೆಯಾದ ಒಂದು ವಾರದೊಳಗಾಗಿ, ಚಲನಚಿತ್ರದ ಸುಮಾರು ೧೦ ದಶಲಕ್ಷ ರೂ.ಮೌಲ್ಯದ (ಸರಿ ಸುಮಾರಾಗಿ ೨೨೦,೦೦೦ US$) ನಕಲಿ ಪ್ರತಿಗಳನ್ನು ಭಾರತೀಯ ವಿಮಾನ ನಿಲ್ದಾಣವೊಂದರಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಯಿತು.[೬೮] ದಿ ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆಯ ವತಿಯಿಂದ ಮಾಡಲಾದ ಒಂದು ವರದಿಯು, ಅಂತರಜಾಲದಲ್ಲಿ ನಡೆಯುವ ಸ್ವಾಮ್ಯಚೌಯವನ್ನು ಎತ್ತಿತೋರಿಸಿತು ಹಾಗೂ ರಂಗ್ ದೇ ಬಸಂತಿ ಯಂಥ ಚಿತ್ರಗಳನ್ನು ಇಲ್ಲಿಂದ ಉಚಿತವಾಗಿ ಡೌನ್‌ಲೋಡ್‌ ಮಾಡಲು ಸಾಧ್ಯ ಎಂದು ತೋರಿಸಿತು.[೬೯]

ಇದಕ್ಕೆ ಪ್ರತ್ಯುತ್ತರವನ್ನು ನೀಡಲು, UTV ಮೋಷನ್ ಪಿಕ್ಷರ್ಸ್‌ ಸಂಸ್ಥೆಯು ಸಾಕಷ್ಟು ಹೆಚ್ಚು ಸಂಖ್ಯೆಯಲ್ಲಿ ಭಾರತೀಯ ಜನಾಂಗವು ವಾಸಮಾಡುವ ನ್ಯೂಯಾರ್ಕ್‌ ನಗರ, ಹೂಸ್ಟನ್‌ ಮತ್ತು ಡಲ್ಲಾಸ್‌ ನಗರಗಳಲ್ಲಿನ ಸ್ಥಳೀಯ ಚಿಲ್ಲರೆ ವ್ಯಾಪಾರಿ ತಾಣಗಳ ಮೇಲೆ ಸ್ವಾಮ್ಯಚೌರ್ಯ-ನಿರೋಧಕ ದಾಳಿಗಳನ್ನು ಆರಂಭಿಸಿತು.

೨೦೦೬ರ ಮಾರ್ಚ್‌ ೧೫ರಂದು ಮಾಡಬೇಕೆಂದು ಉದ್ದೇಶಿಸಲಾಗಿದ್ದ DVD ಬಿಡುಗಡೆಗೂ ಮುಂಚಿತವಾಗಿ ಯಾವುದೇ ನಕಲಿ DVD ಮಾರಾಟಗಳು ಇರಬಾರದೆಂಬುದನ್ನು ಖಾತ್ರಪಡಿಸಿಕೊಳ್ಳಲು ಈ ದಾಳಿಯನ್ನು ನಡೆಸಲಾಗಿತ್ತು.[೭೦] DVD ಬಿಡುಗಡೆಯು ಆರು ತಿಂಗಳ ಅವಧಿಯಲ್ಲಿ ೭೦,೦೦೦ ಪ್ರತಿಗಳಿಗಿಂತಲೂ ಹೆಚ್ಚಿನ ಮಾರಾಟವನ್ನು ದಾಖಲಿಸಿತು, ಮತ್ತು ಇದರ ಪರಿಣಾಮವಾಗಿ ಸದರಿ ಚಲನಚಿತ್ರವು ಅದರ ಬಿಡುಗಡೆಯ ಸಮಯದಲ್ಲಿ ಅತಿಹೆಚ್ಚು ಮಾರಾಟವಾದ ಶೀರ್ಷಿಕೆ ಎಂಬ ಕೀರ್ತಿಗೆ ಪಾತ್ರವಾಯಿತು. DVD ಮತ್ತು ಅದಕ್ಕೆ ಸಂಬಂಧಿಸಿದ VCD ಬಿಡುಗಡೆಯು ೩೦ ಶತಕೋಟಿ ರೂ.ಗಳನ್ನು (ಸರಿ ಸುಮಾರಾಗಿ ೬೬೦ ದಶಲಕ್ಷ US$) ಸಂಗ್ರಹಿಸಿದವು.[೭೧]

ಪುರಸ್ಕಾರ

ಬದಲಾಯಿಸಿ

ವಿಮರ್ಶಾ ಪುರಸ್ಕಾರ

ಬದಲಾಯಿಸಿ

[[ನಿರ್ಮಾಪಕ ರಾಕೇಶ್ ಓಂಪ್ರಕಾಶ್ ಮೆಹ್ರಾ (ಎಡಭಾಗ) ೨೦೦೬ರ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿನ ಚಲನಚಿತ್ರದ ಅರ್ಪಣೆಯ ಸನ್ನಿವೇಶದಲ್ಲಿರುವುದು]] ವಿಮರ್ಶಕರು ಚಲನಚಿತ್ರಕ್ಕೆ, ಅದರಲ್ಲೂ ನಿರ್ದಿಷ್ಟವಾಗಿ ಸಮಗ್ರ ತಾರಾಗಣದ ಪಾತ್ರನಿರ್ವಹಣೆ ಮತ್ತು ವಿಶ್ವಾಸಾರ್ಹತೆಗೆ ಒಂದು ಅಗಾಧ ಪ್ರಮಾಣದ ಧನಾತ್ಮಕ ಪ್ರತಿಸ್ಪಂದನೆಯನ್ನು ನೀಡಿದರು. ಚಲನಚಿತ್ರದ ಛಾಯಾಗ್ರಹಣ ಮತ್ತು ಕಥೆಯ ಕುರಿತು ವಿಮರ್ಶಕರು ಚಲನಚಿತ್ರಕ್ಕೆ, ಅದರಲ್ಲೂ ನಿರ್ದಿಷ್ಟವಾಗಿ ಸಮಗ್ರ ತಾರಾಗಣದ ಪಾತ್ರನಿರ್ವಹಣೆ ಮತ್ತು ವಿಶ್ವಾಸಾರ್ಹತೆಗೆ ಒಂದು ಅಗಾಧ ಪ್ರಮಾಣದ ಧನಾತ್ಮಕ ಪ್ರತಿಸ್ಪಂದನೆಯನ್ನು ನೀಡಿದರು. ಚಲನಚಿತ್ರದ ಛಾಯಾಗ್ರಹಣ ಮತ್ತು ಕಥೆಯ ಕುರಿತು ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯು ಧನಾತ್ಮಕವಾಗಿ ಬರೆಯಿತಾದರೂ, "ಚಿತ್ರವು ತನ್ನೊಂದಿಗೆ ಹೊತ್ತೊಯ್ಯುವ ಸಂದೇಶವು ಚಿತ್ರದ ಅಂತ್ಯದ ವೇಳೆಗೆ ತೆಳುವಾಗುವಂತೆ ತೋರುತ್ತದೆ" ಎಂದು ಅಭಿಪ್ರಾಯಪಟ್ಟಿತು.[೭೨] ಚಲನಚಿತ್ರದ ತಾರಾಗಣವನ್ನು ಅದರ ಪಾತ್ರನಿರ್ವಹಣೆಗಾಗಿ ಮತ್ತು ಬಿನೋದ್‌ ಪ್ರಧಾನ್‌ರನ್ನು ಅವರ ಛಾಯಾಗ್ರಹಣಕ್ಕಾಗಿ ಹೊಗಳುತ್ತಾ, ಸದರಿ ಚಲನಚಿತ್ರವು ನಗರ ಪ್ರದೇಶದ ಪ್ರೇಕ್ಷಕರೊಂದಿಗೆ ಯಶಸ್ಸು ಕಾಣಲಿದೆ ಎಂದು ತರಣ್‌ ಆದರ್ಶ್‌ ತನ್ನ ಅಭಿಪ್ರಾಯವನ್ನು ಬರೆದ.[೭೨] ದಿ ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆಯು ಚಲನಚಿತ್ರವನ್ನು ಸಾರೀಕರಿಸುತ್ತಾ, ಇದೊಂದು "ಉತ್ತಮ ಚಿತ್ರಕಥೆಯನ್ನುಳ್ಳ, ಕುಶಲಾತ್ಮಕವಾಗಿ ಹೆಣೆದ [ಮತ್ತು] ಚಿಂತನೆಗೆ ಗ್ರಾಸ ಒದಗಿಸುವ ಮನರಂಜನಾತ್ಮಕ ಚಿತ್ರ" ಎಂದು ಹೇಳಿತು.[೭೩] Rediff.comನ ಸಾಯಿಸುರೇಶ್ ಶಿವಸ್ವಾಮಿ ತನ್ನ ಅಭಿಪ್ರಾಯವನ್ನು ಬರೆಯುತ್ತಾ, ರಂಗ್ ದೇ ಬಸಂತಿ ದಂಥ ಚಲನಚಿತ್ರಗಳು ಸುಲಭವಾಗಿ "ಬೋಧಿಸುವ ಚಟಕ್ಕೆ" ಇಳಿದುಬಿಡುತ್ತವೆ; ಆದರೆ ಇದನ್ನು ತಪ್ಪಿಸುವ ಮೂಲಕ ಎಲ್ಲೆಡೆಯಿಂದ ತನ್ನ ಸಂದೇಶವನ್ನು ಮೆಹ್ರಾ ಪಡೆದಿದ್ದಾರೆ ಎಂದು ತಾನು ನಂಬಿರುವುದಾಗಿ ಹೇಳಿ, ಚಿತ್ರದ ಸಂಗೀತ, ಛಾಯಾಗ್ರಹಣ, ಸಂಭಾಷಣೆಗಳು ಮತ್ತು ಕಲಾನಿರ್ದೇಶನವನ್ನು ತಾನು ಮೆಚ್ಚಿರುವುದಾಗಿ ತಿಳಿಸಿದ.[೭೪]

ನಿರ್ಮಿಸಲು ಕಷ್ಟವಾಗಬಹುದಾಗಿದ್ದ ಚಲನಚಿತ್ರವೊಂದಕ್ಕೆ ಕಥೆಯೊಂದನ್ನು ಬರೆದಿದ್ದಕ್ಕೆ ಕಮಲೇಶ್ ಪಾಂಡೆಗೆ ಕೀರ್ತಿ ಸಲ್ಲಬೇಕು ಎಂದು ತಿಳಿಸಿದ ದಿ ಹಿಂದೂ ಪತ್ರಿಕೆಯು, ಯುವಪಾತ್ರಧಾರಿಗಳು ಧೀರೋದಾತ್ತ ನಾಯಕರಾಗಿ ಮಾರ್ಪಾಡಾಗುವಿಕೆಯು ಕೊಂಚ ಕಾವ್ಯಾತ್ಮಕವಾಗಿ ಕಂಡಿತು ಎಂದು ಹೇಳುವುದನ್ನು ಮರೆಯಲಿಲ್ಲ.

ಚಿತ್ರಕಥೆ, ನಿರ್ದೇಶನ ಮತ್ತು ತಾರಾಗಣ ಈ ಎಲ್ಲಾ ವಿಭಾಗಗಳಿಗೆ ಉತ್ತಮವಾದ ಹೊಗಳಿಕೆ ಬಂದಿತಾದರೂ ರಹಮಾನ್‌ರ ಧ್ವನಿಪಥದಲ್ಲಿ ಅಷ್ಟೊಂದು ಬಿರುಸು ಕಾಣಲಿಲ್ಲ ಎಂಬುದು ವಿಮರ್ಶಕರ ಅಭಿಪ್ರಾಯವಾಗಿತ್ತು.[೭೫]

ಭಾರತದಾಚೆಗಿನ ವಿಮರ್ಶಕರಿಂದಲೂ ಚಲನಚಿತ್ರವು ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು. BBCಯಿಂದ ಬಂದ ವಿಮರ್ಶೆಯು ಈ ಚಿತ್ರಕ್ಕೆ ಅತ್ಯುನ್ನತ ಎಂದು ಹೇಳಬಹುದಾದ ಐದು ತಾರೆಗಳ ಶ್ರೇಯಾಂಕವನ್ನು ನೀಡುವುದರ ಜೊತೆಗೆ, ಇದು "ಪ್ರಣಯ, ಇತಿಹಾಸ ಮತ್ತು ಸಾಮಾಜಿಕ ವ್ಯಾಖ್ಯಾನದ ಒಂದು ಮನರಂಜನಾತ್ಮಕ ಮಿಶ್ರಣ" ಎಂಬ ಮಾತನ್ನೂ ಸೇರಿಸಿತು.[೭೬] ಚಲನಚಿತ್ರದ ನಿರ್ಮಾಣ ಮೌಲ್ಯಗಳು, ಸಂಗೀತ ಮತ್ತು ತಾರಾಗಣದ ಕುರಿತು ಸ್ಯಾನ್‌ ಫ್ರಾನ್ಸಿಸ್ಕೋ ಕ್ರಾನಿಕಲ್‌ ಪತ್ರಿಕೆಯು ಉತ್ತಮವಾದ ಅಭಿಪ್ರಾಯವನ್ನೇ ನೀಡಿತಾದರೂ, ಚಿತ್ರದಲ್ಲಿನ ಕೆಲವೊಂದು ನ್ಯೂನತೆಗಳನ್ನು ಅದು ತಿರಸ್ಕರಿಸಿತು. ಚಿತ್ರದಲ್ಲಿನ ರಾಜಕೀಯ ವಧೆಯ ಕುರಿತಾದ ಮೆಹ್ರಾನ ಗೊಂದಲಹುಟ್ಟಿಸುವ ಸಂದೇಶ ಹಾಗೂ ಕಳಪೆಯಾಗಿ ರೂಪಿಸಲಾದ ಪಾತ್ರಗಳು ಮತ್ತು ಸನ್ನಿವೇಶಗಳು ಅದರ ತಿರಸ್ಕಾರಕ್ಕೆ ಕಾರಣವಾದ ಅಂಶಗಳಾಗಿದ್ದವು.[೭೭]

ವೆರೈಟಿ ಪತ್ರಿಕೆಯ ಡೆರೆಕ್‌ ಎಲ್ಲೆ ಎಂಬಾತ ತಾಂತ್ರಿಕ ಸಿಬ್ಬಂದಿಯನ್ನು ಹೊಗಳಿ ಎ. ಆರ್. ರಹಮಾನ್‌ನ ಸಂಗೀತವನ್ನು ಧನಾತ್ಮಕವಾಗಿ ವಿಮರ್ಶಿಸಿದನಾದರೂ, ಇದು ಸ್ಮರಣೀಯವಲ್ಲದ ಸಂಗೀತವಾಗಿ ಉಳಿಯಲಿದೆ ಎಂದು ತಿಳಿಸಿದ. ಈ ಎಲ್ಲಾ ಅಂಶಗಳ ಹೊರತಾಗಿಯೂ, ಆತ, "ಈ ಚಿತ್ರವು ವೈಯಕ್ತಿಕ ಭಾವನಾತ್ಮಕ ನೆಲೆಗಟ್ಟಿನಲ್ಲಿ ಪ್ರತ್ಯೇಕಿಸುವ ರೀತಿಯಲ್ಲಿ ನಿಲ್ಲುತ್ತದೆ", ಹೀಗಾಗಿ ಅದು ಚಿತ್ರದ ಅಂತ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟ.[೭೮]

ಬ್ಲೂಂಬರ್ಗ್‌ ವೆಬ್‌ಸೈಟ್‌ ಮಾಧ್ಯಮವು "ಯುವಕರ ತಾರಾಗಣದ ಕಚ್ಚಾ ಶಕ್ತಿ ಮತ್ತು ಎ. ಆರ್. ರಹಮಾನ್‌ನ ಅತ್ಯದ್ಭುತವಾಗಿ ಹುರಿದುಂಬಿಸುವ ಧ್ವನಿಪಥ"ದ ಕುರಿತು ಧನಾತ್ಮಕವಾಗಿ ಬರೆಯಿತು.[೭೯]

೨೦೦೭ ಅಕಾಡೆಮಿ ಪ್ರಶಸ್ತಿಗಳ ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗಕ್ಕೆ ಸಲ್ಲಿಕೆ

ಬದಲಾಯಿಸಿ

ಚಲನಚಿತ್ರವು "ಸಮಕಾಲೀನ ಭಾರತೀಯ ವಾಸ್ತವತೆಯನ್ನು ಪ್ರತಿಬಿಂಬಿಸಿದ್ದರಿಂದ ಹಾಗೂ ಸಿನಿಮೀಯ ಶ್ರೇಷ್ಠತೆಯನ್ನು ಹೊಂದಿದ್ದರಿಂದ", ಕ್ರಿಷ್‌ , ಲಗೇ ರಹೋ ಮುನ್ನಾ ಭಾಯಿ , ಓಂಕಾರ ಮತ್ತು ಕಭಿ ಅಲ್ವಿದ ನಾ ಕೆಹನಾ ದಂಥ ಚಿತ್ರಗಳಿಂದ ಬಂದ ತೀವ್ರ ಪೈಪೋಟಿಯ ನಡುವೆಯೂ ಈ ಚಿತ್ರವನ್ನು 79ನೇ ಅಕಾಡೆಮಿ ಪ್ರಶಸ್ತಿಗಳಿಗಾಗಿ ಭಾರತದ ಅಧಿಕೃತ ಪ್ರವೇಶವಾಗಿ ಆರಿಸಲಾಯಿತು.[೮೦][೮೧]

ಆಯ್ಕೆ ಸಮಿತಿಯ ಆಯ್ಕೆಯು ಸರಿಯಾಗಿತ್ತೋ ಇಲ್ಲವೋ ಎಂಬುದನ್ನು ಚರ್ಚಿಸುವಾಗ, ಓಂಕಾರ ಚಿತ್ರವು ಷೇಕ್ಸ್‌ಪಿಯರ್‌ನ ಒಥೆಲೊ ನಾಟಕದ ರೂಪಾಂತರವಾಗಿರುವುದರಿಂದ ಅದನ್ನು ಆಯ್ಕೆ ಮಾಡಿದ್ದರೆ ಅಕಾಡೆಮಿ ಸದಸ್ಯರು ಆ ಚಿತ್ರದೊಂದಿಗೆ ಉತ್ತಮ ಸಂಬಂಧ ಹೊಂದುವುದು ಸಾಧ್ಯವಿತ್ತು ಎಂದು ವಿಮರ್ಶಕರು ಅಭಿಪ್ರಾಯಪಟ್ಟರು.[೭೩][೮೨]

ಈ ಎಲ್ಲಾ ಅಳುಕುಗಳ ಮತ್ತು ತನ್ನ ಚಲನಚಿತ್ರಕ್ಕೆ ಆಸ್ಕರ್‌ ಪ್ರಶಸ್ತಿಗಳಲ್ಲಿ ಉತ್ತಮ ಅವಕಾಶವಿಲ್ಲ ಎಂಬ ಮೆಹ್ರಾನ ನಂಬಿಕೆಯ ಹೊರತಾಗಿಯೂ,[೮೩] ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಚಿತ್ರವನ್ನು ಪ್ರಚಾರ ಮಾಡುವ ಪ್ರಯತ್ನಗಳು ಮನಃಪೂರ್ವಕವಾಗಿ ಪ್ರಾರಂಭವಾದವು.

ಚಲನಚಿತ್ರಕ್ಕೆ ಪ್ರಚಾರ ನೀಡಿ ಬೆಂಬಲಿಸುವ ದೃಷ್ಟಿಯಿಂದ ಸಂಗೀತ ಸಂಯೋಜಕ ಎ. ಆರ್. ರಹಮಾನ್‌ ಪೂರ್ವ ತೀರ ದೇಶಗಳಾದ್ಯಂತ ಹಲವಾರು ಸಂಗೀತ ಕಚೇರಿಗಳನ್ನು ನೀಡಿದ. ಆತನ ಪ್ರಯತ್ನಗಳ ಜೊತೆಗೆ, ಚಲನಚಿತ್ರದ ಪ್ರಚಾರದ ಪ್ರಯತ್ನಗಳನ್ನು ಸಂಘಟಿಸುವ ದೃಷ್ಟಿಯಿಂದ ನಿರ್ಮಾಪಕ ಸ್ಕ್ರೂವಾಲಾ, 20ತ್‌ ಸೆಂಚುರಿ ಫಾಕ್ಸ್‌ ಮತ್ತು ವಾಲ್ಟ್‌ ಡಿಸ್ನೆ ಪಿಕ್ಚರ್ಸ್‌ನಲ್ಲಿರುವ ತನ್ನ ಪಾಲುದಾರರನ್ನು ಹಾಗೂ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಯೋಜಿಸಿದ.[೮೪]

ವಿದೇಶಿ ಚಲನಚಿತ್ರದ ವರ್ಗದಲ್ಲಿನ ನಾಮಕರಣಗಳು ಈ ಚಿತ್ರವನ್ನು ಸೇರಿಸದೇ ಇದ್ದಾಗ, ಸದರಿ ಚಿತ್ರವು ಆಸ್ಕರ್ ಪ್ರಶಸ್ತಿಗಾಗಿ ಭಾರತದ ವತಿಯಿಂದ ಬಂದ ಪ್ರವೇಶವಾಗಬೇಕಿತ್ತೇ ಎಂಬ ವಿಷಯದ ಕುರಿತಾದ ಚರ್ಚೆಗಳು ಹುಟ್ಟಿಕೊಳ್ಳಲು ಇದು ಕಾರಣವಾಯಿತು. ಸ್ಕ್ರೂವಾಲಾ ಪಾಲ್ಗೊಂಡಿದ್ದ ದೂರದರ್ಶನ ವಾಹಿನಿಯೊಂದರ ಇಂಥದೇ ಒಂದು ಚರ್ಚೆಯಲ್ಲಿ, ಇಂಥ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಅವಶ್ಯಕವಾಗಿರುವ ಕಲಾತ್ಮಕ ಮಾನದಂಡಗಳ ಅರಿವು ಆಯ್ಕೆ ಸಮಿತಿಗೆ ಇದೆಯೇ ಎಂಬ ಪ್ರಶ್ನೆಯನ್ನು ಸದರಿ ಆಯ್ಕೆ ಸಮಿತಿಗೆ ಕೇಳಲಾಯಿತು. ಓಂಕಾರ ಚಿತ್ರವನ್ನು ಆಯ್ಕೆ ಮಾಡಿದ್ದೇ ಆಗಿದ್ದರೆ ಅದೊಂದು ಉತ್ತಮ ಆಯ್ಕೆಯಾಗಿರುತ್ತಿತ್ತು ಎಂಬ ಬಗ್ಗೆ ಚರ್ಚೆಯ ಒಂದು ವರ್ಗವು ಅಭಿಪ್ರಾಯ ಪಟ್ಟರೆ, ಅಕಾಡೆಮಿ ಸದಸ್ಯರ ಪಶ್ಚಿಮ-ಕೇಂದ್ರಿತ ಸಂವೇದನಾಶೀಲತೆಗಳ ಕುರಿತು ಮತ್ತೊಂದು ವರ್ಗವು ಚರ್ಚಿಸಿತು.

ಆದಾಗ್ಯೂ, ಏಕಕಾಲದಲ್ಲಿ ನಡೆಸಲಾದ ಒಂದು SMS ಜನಮತ ಸಂಗ್ರಹದಿಂದ ಬಂದ ಫಲಿತಾಂಶಗಳು ಸೂಚಿಸಿದ ಪ್ರಕಾರ, ಸದರಿ ಚಲನಚಿತ್ರವು ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಸೂಕ್ತವಾಗಿತ್ತು ಎಂದು ಶೇಕಡಾ ೬೨ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದರು.[೮೫]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಬದಲಾಯಿಸಿ

ಇತರ ಅಸಂಖ್ಯಾತ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಸ್ವೀಕರಿಸಿದ ಪ್ರಶಸ್ತಿಗಳ ಜೊತೆಗೆ, ಸಂಪೂರ್ಣ ಮನರಂಜನೆಯನ್ನು ನೀಡುವ ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ರಂಗ್ ದೇ ಬಸಂತಿ ಚಿತ್ರವು ಸ್ವೀಕರಿಸಿತು. ಭಾರತ-ಮೂಲದ ವಾರ್ಷಿಕ ಫಿಲ್ಮ್‌ಫೇರ್‌ ಪ್ರಶಸ್ತಿಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಇದು ಗೆದ್ದಿತು. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಪಾತ್ರನಿರ್ವಹಣೆಗಾಗಿರುವ ವಿಮರ್ಶಕರ ಪ್ರಶಸ್ತಿ- ಪುರುಷ (ಅಮೀರ್ ಖಾನ್‌‌), ಅತ್ಯುತ್ತಮ ಸಂಕಲನ (ಪಿ. ಎಸ್. ಭಾರತಿ), ಅತ್ಯುತ್ತಮ ಛಾಯಾಗ್ರಹಣ ಮತ್ತು ಹೊಸ ಸಂಗೀತಕ್ಕಾಗಿರುವ ಆರ್‌ಡಿ ಬರ್ಮನ್‌ ಪ್ರಶಸ್ತಿ (ನರೇಶ್ ಅಯ್ಯರ್‌) ವರ್ಗಗಳಲ್ಲಿ ಚಿತ್ರವು ಗೆದ್ದುಕೊಂಡ ಪ್ರಶಸ್ತಿಗಳು ಇದರಲ್ಲಿ ಸೇರಿದ್ದವು.[೮೬] ಇತರ ತಾಂತ್ರಿಕ ಪ್ರಶಸ್ತಿಗಳಲ್ಲಿ, ಅತ್ಯುತ್ತಮ ಚಿತ್ರ, ಅತ್ಯುತ್ತಮ ಪೋಷಕ ನಟಿ (ಸೋಹಾ ಆಲಿ ಖಾನ್‌), ಅತ್ಯುತ್ತಮ ಚಿತ್ರಕಥೆ (ರೆನ್ಸಿಲ್‌ ಡಿ'ಸಿಲ್ವಾ ಮತ್ತು ರಾಕೇಶ್ ಮೆಹ್ರಾ) ಮತ್ತು ಅತ್ಯುತ್ತಮ ಸಂಗೀತಕ್ಕಾಗಿ ಮೀಸಲಾಗಿರುವ ೨೦೦೭ರ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳನ್ನೂ ಸಹ ಇದು ಗೆದ್ದಿತು.[೮೭][೮೮] ಇವುಗಳನ್ನು ಹೊರತುಪಡಿಸಿ, ೨೦೦೬ರ ಜಾಗತಿಕ ಭಾರತೀಯ ಚಲನಚಿತ್ರ ಪ್ರಶಸ್ತಿಗಳು[೮೯] ಮತ್ತು ೨೦೦೭ರ ಸ್ಟಾರ್ ಸ್ಕ್ರೀನ್‌ ಪ್ರಶಸ್ತಿಗಳ ಸಮಾರಂಭದಲ್ಲಿ ಈ ಚಲನಚಿತ್ರವು ಎಂಟು ಪ್ರಶಸ್ತಿಗಳನ್ನು ಗೆದ್ದಿತು,[೯೦] ಮತ್ತು ೨೦೦೭ರ ಝೀ ಸಿನಿ ಪ್ರಶಸ್ತಿಗಳ ಪೈಕಿ ಆರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.[೯೧]

೨೦೦೭ರ ಬ್ರಿಟಿಷ್‌ ಅಕಾಡೆಮಿ ಆಫ್ ಫಿಲ್ಮ್‌ ಅಂಡ್‌ ಟೆಲಿವಿಷನ್‌ ಆರ್ಟ್ಸ್‌ ಪ್ರಶಸ್ತಿಗಳ ಇಂಗ್ಲಿಷ್‌ ಭಾಷೆಯಲ್ಲಿಲ್ಲದ ಅತ್ಯುತ್ತಮ ಚಲನಚಿತ್ರದ ವರ್ಗಕ್ಕೂ ಈ ಚಲನಚಿತ್ರವು ನಾಮಕರಣಗೊಂಡಿತ್ತು.[೭೧][೯೨]

ಸಾಮಾಜಿಕ ಪ್ರಭಾವ

ಬದಲಾಯಿಸಿ
ಚಿತ್ರ:RDB advertisements.jpg
ಭಾರತೀಯ ಬ್ರಾಂಡ್‌ಗಳು ಚಲನಚಿತ್ರದಿಂದ ಪಡೆದುಕೊಂಡ ಚಿತ್ರಸರಣಿಗಳನ್ನು ಹೇಗೆ ಬಳಸಿಕೊಂಡಿವೆ ಎಂಬುದನ್ನು ಪ್ರದರ್ಶಿಸುವ ಒಂದು ಸಚಿತ್ರ ಜೋಡಣೆಕೃತಿ (ಮೇಲಿನಿಂದ ಪ್ರದಕ್ಷಿಣಾ ಶೈಲಿಯಲ್ಲಿ: ತೆಹೆಲ್ಕಾದವರ ಎರಡನೇ ವಾರ್ಷಿಕೋತ್ಸವ ನಿಯತಕಾಲಿಕ, ಒಂದು ವ್ಯಾಹವಾರಿಕ ಮತ್ತು ಅರ್ಥಶಾಸ್ತ್ರ ನಿಯತಕಾಲಿಕ ಮತ್ತು ಅಮುಲ್‌ – ಒಂದು ಹೈನು ಉತ್ಪನ್ನಗಳ ತಯಾರಕ).

ರಂಗ್ ದೇ ಬಸಂತಿ ಚಿತ್ರವು ಭಾರತೀಯ ಸಮಾಜದ ಮೇಲೆ ಒಂದು ಗಮನಾರ್ಹವಾದ ಪ್ರಭಾವವನ್ನು ಬೀರಿತ್ತು. ಈ ಚಲನಚಿತ್ರವು ಬಿಡುಗಡೆಯಾದ ಮೊದಲ ತಿಂಗಳ ಅವಧಿಯಲ್ಲಿನ ಬ್ಲಾಗ್‌ ಬರಹಗಾರರ ನಡವಳಿಕೆಯ ಮಾದರಿಗಳ ಒಂದು ಅಧ್ಯಯನವು ಮಾಹಿತಿ ನೀಡಿರುವ ಪ್ರಕಾರ, ಸರ್ಕಾರ ಮತ್ತು ರಾಜಕಾರಣಿಗಳೆಡೆಗಿನ ಸಾರ್ವಜನಿಕ ಆಕ್ರೋಶದಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿರುವುದು ಕಂಡುಬಂದಿದೆ. ಭ್ರಷ್ಟಾಚಾರ ಮತ್ತು ಅಧಿಕಾರಿಶಾಹಿ ಮನೋವೃತ್ತಿಗಳಲ್ಲಿ ಸರ್ಕಾರ ಹಾಗೂ ರಾಜಕಾರಣಿಗಳು ಮುಳುಗಿಹೋಗಿರುವುದಕ್ಕಾಗಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿನ ಅವರ ಅದಕ್ಷತೆಯ ಕುರಿತಾಗಿ ಈ ಆಕ್ರೋಶ ಮೂಡಿದೆ ಎಂಬುದು ವಿಶೇಷ.

ಚಲನಚಿತ್ರದ ಪ್ರಭಾವದಿಂದ ಪ್ರಚೋದಿಸಲ್ಪಟ್ಟ ತೀವ್ರ ರಾಜಕೀಯ ಚರ್ಚೆಗಳು ಇದೇ ಮಾದರಿಯಲ್ಲಿ ಕಂಡುಬಂದವು.[೬೩] ಕಥಾಲೇಖಕ ಡಿ'ಸಿಲ್ವಾ ಈ ಕುರಿತಾಗಿ ಮಾತನಾಡುತ್ತಾ, ಸದರಿ ಚಲನಚಿತ್ರವು "ಎಲ್ಲೋ ಒಂದು ಕಡೆ ಯಾವುದೋ ಒಂದು ವಿಷಯವನ್ನು ನೆನಪಿಗೆ ತರುತ್ತದೆ" ಎಂದು ಹೇಳಿದ್ದಾನೆ.[೯೩]

ರಾಜಕೀಯ ಆಲೋಚನೆ ಹಾಗೂ ಚರ್ಚೆಗಳನ್ನು ಪ್ರಚೋದಿಸುವುದರ ಜೊತೆಗೆ, ಇದು ಅನೇಕರಲ್ಲಿ ಸಾಮಾಜಿಕ ಅರಿವನ್ನೂ ಬಡಿದೆಬ್ಬಿಸಿತು. ಸರ್ಕಾರೇತರ ಸಂಸ್ಥೆಗಳಿಗೆ ನಾಗರಿಕರು ಹೇಗೆ ಬೆಂಬಲ ನೀಡಬೇಕು ಹಾಗೂ ಕೊಡುಗೆಯನ್ನು ನೀಡಬೇಕು ಎಂಬುದರ ಹಾಗೂ ತೆರಿಗೆಗಳನ್ನು ಪಾವತಿಸುವ ಮತ್ತು ಮತದಾನ ಮಾಡುವ ನಾಗರಿಕರ ಸರಳ ಕರ್ತವ್ಯಗಳನ್ನು ಕಾರ್ಯರೂಪಕ್ಕೆ ತರುವುದರ ಕುರಿತು ಕೆಲವೊಂದು ಚರ್ಚೆಗಳು ನಡೆದವು. ಅಷ್ಟೇ ಅಲ್ಲ, ದೇಶದೆಡೆಗೆ ಹೆಚ್ಚು ಜವಾಬ್ದಾರಿಯುತ ವರ್ತನೆಗಳನ್ನು ತೋರುವಂತಾಗುವುದರ ಕುರಿತೂ ಇತರ ಕೆಲವರು ಚಿಂತನೆಗಳಲ್ಲಿ ತೊಡಗಿದರು.[೬೩]

ಅತಿರೇಕದ ದೇಶಪ್ರೇಮದ ಅಬ್ಬರವನ್ನೊಳಗೊಂಡ ಇತರ ಭಾರತೀಯ ಚಲನಚಿತ್ರಗಳಿಗಿಂತ ಭಿನ್ನವಾಗಿ, ಹಲವಾರು ಯುವ ಭಾರತೀಯರು ಈ ಚಲನಚಿತ್ರದ ಪಾತ್ರಗಳಲ್ಲಿ ಉತ್ತಮ ರೀತಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯವಿದೆ.[೯೪]

ಅಂತರಜಾಲ ಮಾಧ್ಯಮದಲ್ಲಿ ಇಂಥ ಪ್ರತಿಕ್ರಿಯೆಗಳು ಕಂಡುಬರುತ್ತಿರುವಾಗ, ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳು-ವಿಷಯಗಳ ಕುರಿತು ಪ್ರತಿಭಟಿಸಲು ಯುವ ಕ್ರಿಯಾವಾದವು ಬೀದಿಗಿಳಿಯಿತು. ಭಾರತದಲ್ಲಿನ ಎಲ್ಲರ-ಗಮನವನ್ನು ಸೆಳೆದ ಕೊಲೆ ಪ್ರಕರಣಗಳಲ್ಲಿ ಒಂದಾದ, ೧೯೯೯ರ ಜೆಸ್ಸಿಕಾ ಲಾಲ್‌ ಕೊಲೆ ಪ್ರಕರಣದ ಮೇಲೆ ಇದರ ನೇರ ಪ್ರಭಾವ ಕಂಡುಬಂದಿತು. ಚಲನಚಿತ್ರವು ಬಿಡುಗಡೆಯಾದ ಒಂದು ತಿಂಗಳ ನಂತರ, ಪರಿಣಾಮಕಾರಿಯಲ್ಲದ ಆಪಾದನೆಯ ಆರೋಪ ಮತ್ತು ಪ್ರತಿಕೂಲ ಸಾಕ್ಷಿಗಳ ಕಾರಣದಿಂದಾಗಿ ಪ್ರಮುಖ ಆರೋಪಿಯನ್ನು ನ್ಯಾಯಾಲಯವೊಂದು ಖುಲಾಸೆ ಮಾಡಿತು.[೯೫] ಆ ವ್ಯಕ್ತಿಯ ಮರು-ಬಂಧನಕ್ಕೆ ಆಗ್ರಹಿಸಿದ ತೀವ್ರ ಸ್ವರೂಪದ ನಾಗರಿಕ ಪ್ರತಿಭಟನೆಗಳು ಹಾಗೂ ಮಾಧ್ಯಮಗಳ ಆಂದೋಲನಗಳನ್ನು ಇದು ಚುರುಕುಗೊಳಿಸಿತು. ನವದೆಹಲಿಯ ಇಂಡಿಯಾ ಗೇಟ್‌ ಪ್ರದೇಶದಲ್ಲಿ ಚಿತ್ರದ ನಾಯಕ ಪಾತ್ರಧಾರಿಗಳು ಮೌನವಾದ, ಮೋಂಬತ್ತಿ-ಬೆಳಕಿನ ಜಾಗರಣೆ ನಡೆಸುವ ದೃಶ್ಯದಿಂದ ಪ್ರೇರಣೆಯನ್ನು ಪಡೆಯುವ ಮೂಲಕ, ಇಂಥದೇ ಒಂದು ಪ್ರದರ್ಶನಕಾರರ ಗುಂಪು ತನ್ನ ಪ್ರತಿಭಟನೆಗೆ ದನಿ ನೀಡುವ ಉದ್ದೇಶದೊಂದಿಗೆ ಇದೇ ಸ್ವರೂಪದ ಪ್ರತಿಭಟನಾ ಸಭೆಯನ್ನು ನಡೆಸಿತು.[೯೬]

ಇದಾದ ಕೆಲವೇ ದಿನಗಳಲ್ಲಿ, ಜನಗಳ ಸಾಮಾಜಿಕ ಒಳಗೊಳ್ಳುವಿಕೆಗಳಲ್ಲಿ ಇದ್ದಕ್ಕಿದ್ದಂತೆ ಹೆಚ್ಚಳವಾಗಿರುವುದಕ್ಕೆ ಸಂಬಂಧಿಸಿದ ಕಾರಣಗಳನ್ನು ಕಂಡುಹಿಡಿಯಲು ಸಮೀಕ್ಷೆಯೊಂದನ್ನು ನಡೆಸಲಾಯಿತು.

ರಂಗ್ ದೇ ಬಸಂತಿ ಯಂಥ ಚಿತ್ರಗಳೇ ಇದರ ಹಿಂದಿರುವ ಮುಖ್ಯ ಕಾರಣ ಎಂದು ಸಮೀಕ್ಷೆಗೆ ಪ್ರತಿಕ್ರಿಯಿಸಿದವರ ಪೈಕಿ ಶೇಕಡಾ ಹದಿನೆಂಟಕ್ಕಿಂತಲೂ ಹೆಚ್ಚಿನ ಮಂದಿ ಅಭಿಪ್ರಾಯಪಟ್ಟಿದ್ದರು.[೯೭] ಪ್ರಿಯದರ್ಶಿನಿ ಮಟ್ಟೂರವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಇಂಥ ಮತ್ತೊಂದು ಬೃಹತ್ ಯುವ ಕ್ರಿಯಾವಾದವು ಕಂಡುಬಂತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ, ಅಮೆರಿಕ ಸಂಯುಕ್ತ ಸಂಸ್ಥಾನಗಳು ಹಾಗೂ ವಿಶ್ವಾದ್ಯಂತ ಇದೇ ಸ್ವರೂಪದ ಪ್ರತಿಭಟನಾ ಸಭೆಗಳು ಜರುಗಿದ್ದನ್ನು ಅದು ಒಳಗೊಂಡಿತ್ತು.[೯೮][೯೯] ಚಲನಚಿತ್ರದ ಬಿಡುಗಡೆಯ ನಂತರ, ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗಾಗಿ ಮೀಸಲಾತಿಗಳನ್ನು ಪರಿಚಯಿಸಿದ್ದಕ್ಕೆ ವಿರುದ್ಧವಾಗಿದ್ದ ಮತ್ತೊಂದು ಸಾಮಾಜಿಕ ಪ್ರತಿಭಟನೆಯು ಕಂಡುಬಂತು.

ಭಾರತದಾದ್ಯಂತದ ಪ್ರಮುಖ ನಗರಗಳಲ್ಲಿ ನಡೆದ ಶಾಂತಿಯುತ ಪ್ರತಿಭಟನಾ ಸಭೆಗಳಲ್ಲಿ ಯುವ ವೈದ್ಯರು ಹಾಗೂ ಎಂಜಿನಿಯರುಗಳು ಕೈಜೋಡಿಸಿದರು.[೧೦೦] ನೆರೆಯ ದೇಶವಾದ ಪಾಕಿಸ್ತಾನದಲ್ಲಿ ಈ ಚಲನಚಿತ್ರವು ಬಿಡುಗಡೆಯಾಗದಿದ್ದರೂ ಸಹ, ಇದೇ ಸ್ವರೂಪದ ಪ್ರತಿಕ್ರಿಯೆಗಳನ್ನು ಚಿತ್ರವು ಅಲ್ಲಿ ಬಡಿದೆಬ್ಬಿಸಿತು. ಈ ಚಲನಚಿತ್ರದಿಂದ ಪ್ರಭಾವಿತಗೊಂಡ ಜಂಗ್‌ ಎಂಬ ಪಾಕಿಸ್ತಾನದ ರಾಷ್ಟ್ರೀಯ ವೃತ್ತಪತ್ರಿಕೆಯು ಒಂದು ದೂರದರ್ಶನ ವಾಹಿನಿಯನ್ನು ಪ್ರಾರಂಭಿಸಿ, ನಾಗರಿಕರ ಸಮಸ್ಯೆಗಳ ಕಡೆಗೆ ಗಮನ ಹರಿಸಲು ಮತ್ತು ಸಾರ್ವಜನಿಕರ ಜಾಗೃತಿ ಕಾರ್ಯಕ್ಕೆ ಬೆಂಬಲ ನೀಡಲು ಪಣತೊಟ್ಟಿತು.[೧೦೧] ಈ ರೀತಿಯ ಬಲವಾದ ಸಾಮಾಜಿಕ ಪ್ರತಿಸ್ಪಂದನೆಗಳಿಗೆ ನಟ ಕುನಾಲ್‌ ಕಪೂರ್‌ ಪ್ರತಿಕ್ರಿಯಿಸುತ್ತಾ, "ಯುವಪೀಳಿಗೆಯು ಅರ್ಥಮಾಡಿಕೊಳ್ಳುವ ಮತ್ತು ಸ್ವತಃ ಕಲ್ಪಿಸಿಕೊಂಡು ಅನುಭವಿಸುವ ರೀತಿಯಲ್ಲಿರುವ ಒಂದು ಇಡುಗಂಟಿನಲ್ಲಿ ದೇಶಭಕ್ತಿಯನ್ನು" ಸಾದರಪಡಿಸಿದ ಒಂದು ವೇಗವರ್ಧಕ ಅಥವಾ ಪರಿವರ್ತನಕಾರಿಯಾಗಷ್ಟೇ ಈ ಚಲನಚಿತ್ರವು ತನ್ನ ಪಾತ್ರವನ್ನು ನಿರ್ವಹಿಸಿದೆ ಎಂದು ಅಭಿಪ್ರಾಯಪಟ್ಟ.[೧೦೨]

ಭಾರತೀಯ ಮಾಧ್ಯಮಗಳಲ್ಲಿ, ಸದರಿ ಚಲನಚಿತ್ರದಿಂದ ಪಡೆದ ಚಿತ್ರಿಕೆಗಳ ಸರಣಿಯನ್ನು ಅನೇಕ ಉತ್ಪನ್ನದ ಬ್ರಾಂಡ್‌ಗಳು ಬಳಸುವ ಮೂಲಕ ಚಲನಚಿತ್ರವನ್ನು ಆಗಾಗ ಉಲ್ಲೇಖಿಸುವ ಪ್ರಕ್ರಿಯೆಯು ಸ್ಪಷ್ಟವಾಗಿ ಗೋಚರಿಸುವಂತಿತ್ತು.[೧೦೩] ಇದರ ಜೊತೆಗೆ, ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಕುರಿತಾಗಿ ಸಾರ್ವಜನಿಕ ಕ್ರಿಯಾವಾದದ ನಿದರ್ಶನಗಳನ್ನು ಉಲ್ಲೇಖಿಸುವಾಗ, "RDB" (ಚಲನಚಿತ್ರದ ಸಂಕ್ಷೇಪಿತ ಶೀರ್ಷಿಕೆ) ಮತ್ತು "RDB ಪರಿಣಾಮ" ಎಂಬ ಪರಿಭಾಷೆಗಳನ್ನೂ ಮಾಧ್ಯಮಗಳು ಬಳಸುತ್ತವೆ.[೬೩] ೨೦೦೭ರಲ್ಲಿ ನಡೆದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಚುನಾವಣೆಗಳು, ಹಿಂದಿನ ವರ್ಷಗಳಲ್ಲಿದ್ದುದಕ್ಕಿಂತ ಮಿಗಿಲಾಗಿರುವ, ವಿದ್ಯಾರ್ಥಿಗಳ ಎದುರಲ್ಲಿರುವ ಪ್ರಮುಖ ಸಮಸ್ಯೆಗಳ ಕುರಿತು ಹೆಚ್ಚು ಗಮನ ಹರಿಸಿದವು. ಇದನ್ನೇ ಓರ್ವ ವಿದ್ಯಾರ್ಥಿಯು "RDB ಲಕ್ಷಣ" ಎಂದು ಉಲ್ಲೇಖಿಸಿದ್ದು ಗಮನಾರ್ಹವಾಗಿದೆ.[೧೦೪] ಇದನ್ನೇ ಮೇಲ್ಪಂಕ್ತಿಯಾಗಿರಿಸಿಕೊಂಡು, ಅಂಡರ್ ದಿ ಇನ್‌ಫ್ಲುಯೆನ್ಸ್‌ ಎಂಬ ನಾಟಕವೊಂದನ್ನು ಕಮಲ್‌ ಸುನಾವಾಲಾ ಬರೆದಿದ್ದು, ಸದರಿ ಚಲನಚಿತ್ರವನ್ನು ವೀಕ್ಷಿಸಿದ ನಂತರ ಓರ್ವ ಯುವ ಭಾರತೀಯ ದೇಶಭ್ರಷ್ಟನ ಜೀವನವು ಹೇಗೆ ಬದಲಾಗುತ್ತದೆ ಎಂಬ ಬಗ್ಗೆ ಈ ನಾಟಕವು ಹೇಳುತ್ತಾ ಹೋಗುತ್ತದೆ.[೧೦೫]

ಇದನ್ನೂ ನೋಡಿರಿ

ಬದಲಾಯಿಸಿ

ಹೆಚ್ಚಿನ ಓದಿಗಾಗಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Sen, Raja (2006-01-12). "Rang De is not a war film". Rediff.com. Retrieved 2008-03-16.
  2. ೨.೦ ೨.೧ Iyer, Sandhya (2004-04-20). "Mehra to paint the town yellow". The Times of India. Retrieved 2008-03-17.
  3. ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ Jha, Subhash (2006-02-03). "It's so much fun to raise the bar". The Telegraph. Archived from the original on 2007-08-18. Retrieved 2009-02-11.
  4. ೪.೦ ೪.೧ ೪.೨ ೪.೩ Doval, Nikita (2004-04-01). "Aamir paints it yellow!". The Times of India. Retrieved 2008-03-17.
  5. ೫.೦ ೫.೧ ೫.೨ ೫.೩ ೫.೪ Sen, Raja (2006-01-14). "Just jump off the cliff!". Rediff.com. Retrieved 2008-03-17.
  6. "NRI industrialist to produce Aamir's Rang De Basanti". Apunkachoice.com. 2004-03-28. Archived from the original on 2008-03-16. Retrieved 2008-03-17.
  7. Misra, Jhumari Nigam (2006-06-05). "The industry has been unfair to writers". The Times of India. Retrieved 2008-03-18.
  8. Shetye, Aakanksha Naval (2005-12-12). "Adman Prasoon Joshi has now turned dialogue-writer!". The Times of India. Retrieved 2008-03-22.
  9. Blakely, Rhys (2008-02-28). "Ronnie Screwvala brings Hollywood to Bollywood's UTV". Timesonline.co.uk. Archived from the original on 2011-06-12. Retrieved 2008-03-17.
  10. ೧೦.೦ ೧೦.೧ Ansari, Shabani (2005-03-22). "Bollywood takes a trip down memory lane". The Times of India. Retrieved 2008-03-17.
  11. Rajamani, Radhika (2004-04-13). "The long act". The Hindu. Archived from the original on 2004-06-02. Retrieved 2008-03-18.
  12. Jain, Priyanka (2006-02-10). "Range De Basanti is a very honest film". Rediff.com. Retrieved 2008-03-21.
  13. Tankha, Madhur (2004-08-16). "A perfectionist to the core". The Hindu. Archived from the original on 2004-11-01. Retrieved 2008-03-18.
  14. Tuteja, Joginder (2008-03-12). "I was finalized for Rang De Basanti and Gangster". Indiafm.com. Retrieved 2008-03-18.
  15. Jha, Subhash K. (2006-02-11). "An interview with actor Siddharth". Newindpress.com. Archived from the original on 2006-02-28. Retrieved 2008-03-19.
  16. Warrier, Shobha (2006-11-22). "Working with Mani Ratnam is frightening". Rediff.com. Retrieved 2008-03-19.
  17. "Rang De Basanti stars talks about the movie - Part I". Indiaglitz.com. 2006-01-27. Retrieved 2008-03-19.
  18. Pandohar, Jaspreet (2006-01-27). "The way the people look up to you is astonishing". BBC. Retrieved 2008-03-19.
  19. Siddiqui, Rana (2005-10-22). "Unlearning to learn". ದಿ ಹಿಂದೂ. Archived from the original on 2012-11-02. Retrieved 2008-03-19.
  20. "Sid, Soha, Saif, Sharmila". Newindpress.com. 2008-03-15. Retrieved 2008-03-20.
  21. ೨೧.೦ ೨೧.೧ ೨೧.೨ "Rang De Basanti a contemporary film". Hindustan Times. 2006-01-27. Retrieved 2008-03-20.
  22. ೨೨.೦ ೨೨.೧ Singh, Harneet (2006-01-27). "Mooch ado about nothing". The Indian Express. Retrieved 2008-03-20.
  23. ೨೩.೦ ೨೩.೧ Ghosh, Padmaparna (2007-05-20). "Capital cinema". The Telegraph. Archived from the original on 2008-01-15. Retrieved 2008-03-20.
  24. "Monumental troubles". Newindpress.com. 2006-09-13. Archived from the original on 2006-11-26. Retrieved 2008-03-20.
  25. Bhatia, Kunal (2007-05-25). "Jaipur's pride: forts and palaces". Mumbai Mirror. Retrieved 2008-03-21.
  26. ೨೬.೦ ೨೬.೧ "Aamir Khan chats about 'Rang De Basanti'". IndiaFM News Bureau. 2006-02-02. Retrieved 2008-08-20.
  27. N, Patcy (2006-02-01). "How the Rang De look evolved". Rediff.com. Retrieved 2008-03-21.
  28. Frater, Patrick (2008-03-13). "CG creators prep for future success". Variety. Retrieved 2008-03-21.
  29. ೨೯.೦ ೨೯.೧ "Ad-making still my first love: Prasoon Joshi". The Hindu. 2006-12-15. Retrieved 2008-03-21.
  30. "`Rap is rhythm 'n' poetry'". The Hindu. 2006-04-29. Archived from the original on 2007-11-27. Retrieved 2008-03-21.
  31. "Nelly Furtado was to feature in RDB: A R Rehman". The Hindu. 2005-12-30. Archived from the original on 2007-01-03. Retrieved 2008-03-21.
  32. "Aamir comes to rescue". The Times of India. 2007-10-05. Retrieved 2008-03-21.
  33. "Aamir Khan sings again, for 'Rang De Basanti'". IndiaGlitz. 2005-12-03. Archived from the original on 2005-12-05. Retrieved 2008-05-10.
  34. "I'm a perfectionist like Aamir". The Times of India. 2008-03-01. Retrieved 2008-03-21.
  35. Kabir, Nasreen (2008-03-15). "Prose is for lazy people, poetry for the imaginative". Tehelka Weekly. Archived from the original on 2012-09-13. Retrieved 2008-03-21.
  36. ೩೬.೦ ೩೬.೧ Singh, Ruma (2006-12-16). "'I was in tears when Lataji was singing the song". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 2009-02-23. {{cite news}}: Italic or bold markup not allowed in: |publisher= (help)
  37. "Rang De Basanti sweeps Filmfare awards". Times News Network. ದಿ ಟೈಮ್ಸ್ ಆಫ್‌ ಇಂಡಿಯಾ. 2007-02-25. Retrieved 2009-02-23. {{cite news}}: Italic or bold markup not allowed in: |publisher= (help)
  38. Bhattachajya, Nilanjana (Fall 2007), "“But it has Some Good Songs ...”: Introducing Students to the Aesthetics of the Popular Hindi Film Through Music" (PDF), ASIANetwork Exchange, vol. XV, no. 1, pp. 11–12, archived from the original (PDF) on 2011-07-25{{citation}}: CS1 maint: date and year (link)
  39. Foster, Peter (2006-12-15). "Bollywood pins hopes on new blockbuster". The Daily Telegraph. Retrieved 2008-03-22.
  40. "Rang de Basanti flies into turbulent weather". The Times of India. 2006-01-10. Retrieved 2008-03-23.
  41. ಉಲ್ಲೇಖ ದೋಷ: Invalid <ref> tag; no text was provided for refs named TOI_after viewing
  42. "AF gives all clear signal to Aamir's Rang de Basanti". The Times of India. 2006-01-10. Retrieved 2008-03-23.
  43. "20 seconds snipped, Rang De set for rollout". The Telegraph. 2006-01-16. Archived from the original on 2007-01-01. Retrieved 2008-03-23.
  44. Aasheesh Sharma, Geetika Sasan Bhandari (2006-02-13). "Catfight Over Animal Rights". India Today. Retrieved 2008-03-23.
  45. Devi, Sangeetha (2006-02-09). "On a south stint: Atul Kulkarni". The Hindu. Archived from the original on 2007-07-01. Retrieved 2008-06-15.
  46. De Sarkar, Bishakha (2006-02-05). "I am happy this has happened. Now everybody can learn the rules". The Telegraph. Archived from the original on 2007-08-18. Retrieved 2008-03-23.
  47. Dubey, Bharti (2006-01-11). "They should have spoken to me". The Times of India. Retrieved 2008-03-23.
  48. "Demande d'accréditation" (PDF). Asiexpo Film Festival. Archived from the original (PDF) on 2007-10-23. Retrieved 2008-03-23.
  49. "Wisconsin Film Festival 2007 – Events by Title". Wisconsin Film Festival. Archived from the original on 2014-03-08. Retrieved 2008-03-23.
  50. Roy, Amit (2006-12-10). "Bruno's baby". The Telegraph. Archived from the original on 2009-04-03. Retrieved 2008-03-23.
  51. "Aamir on campus trail to promote 'Rang De'". The Times of India. 2006-01-10. Retrieved 2008-03-23.
  52. Subramanian, Shobana (2008-02-19). "Box office blueprint". Business Standard. Retrieved 2008-05-10.
  53. Pfanner, Eric (2006-05-22). "India's new cinema has a global script". International Herald Tribune. Archived from the original on 2007-09-11. Retrieved 2008-03-23.
  54. ೫೪.೦ ೫೪.೧ Sawhney, Anubha (2006-07-08). "Moolah Ad-on". The Times of India. Retrieved 2008-06-15.
  55. "Rang De Basanti - a winner for A. R. Rehman?". IndiaGlitz. 2005-12-08. Retrieved 2008-05-10.
  56. "Rang De Basanti - A six on ten". IndiaGlitz. 2005-12-11. Retrieved 2008-05-10.
  57. Verma, Sukanya (2005-12-12). "Rang De Basanti's music works". Rediff.com. Retrieved 2008-05-10.
  58. Tuteja, Joginder (2005-12-13). "Rang De Basanti - Music review". Indiafm.com. Retrieved 2008-05-10.
  59. Nagarajan, Saraswathy (2007-02-24). "`All I have is my music'". The Hindu. Archived from the original on 2011-06-23. Retrieved 2008-05-10.
  60. Hazarika, Sneha (2006-12-22). "'I'm dedicating it to Ustad'". The Telegraph. Archived from the original on 2008-10-24. Retrieved 2008-05-10.
  61. "Aamir Khan Launches "Coca-Cola's Rang De Basanti" Special Edition Bottles". The Coca Cola Company. 2006-01-17. Retrieved 2009-04-22.
  62. "'Rang De Basanti' joins hand with Provogue". Indo-Asian News Service. 2005-12-25. Retrieved 2008-06-15.
  63. ೬೩.೦ ೬೩.೧ ೬೩.೨ ೬೩.೩ Dilip, Meghna (2008). "Rang De Basanti - Consumption, Citizenship And The Public Sphere" (PDF). University of Massachusetts, Amherst. Retrieved 2009-02-17. {{cite journal}}: Cite journal requires |journal= (help)
  64. "Mobile2win Launches "Rang De Basanti" Game On Mobile". contentSutra.com. 2006-03-28. Archived from the original on 2008-03-09. Retrieved 2008-06-15.
  65. ೬೫.೦ ೬೫.೧ "Rang De Basanti bowls over audiences ; accolades from Bollywood". The Hindu. 2006-02-05. Archived from the original on 2006-02-07. Retrieved 2008-03-23.
  66. Raghavendra, Nandini (2006-10-15). "Q up to Q3". The Economic Times. Retrieved 2008-03-23.
  67. ೬೭.೦ ೬೭.೧ "Rang De Basanti - Box Office Data, Movie News, Cast Information". The Numbers. Archived from the original on 2008-01-29. Retrieved 2008-03-23.
  68. "Rang De Basanti rises from crisis". Indiaglitz.com. 2006-02-01. Retrieved 2008-03-23.
  69. Tippu, Sufia (2006-03-04). "Movies? Just click 'n' watch". The Times of India. Retrieved 2008-03-23.
  70. "UTV commences serious Anti-Piracy raids in Canada & US". UTV Motion Pictures. 2006-03-09. Retrieved 2008-03-23.
  71. ೭೧.೦ ೭೧.೧ "Rang De Basanti, India's official entry to Oscars". Webindia123.com. 2006-09-26. Archived from the original on 2012-03-07. Retrieved 2009-04-21.
  72. ೭೨.೦ ೭೨.೧ Adarsh, Taran (2006-01-26). "Movie Review: Rang De Basanti". The Indian Express. Archived from the original on 2009-09-23. Retrieved 2008-03-23.
  73. ೭೩.೦ ೭೩.೧ Chatterjee, Saibal (2006-09-26). "Is Rang De Basanti India's best bet?". Hindustan Times. Archived from the original on 2009-01-07. Retrieved 2008-03-23.
  74. Sivaswamy, Saisuresh (2006-01-26). "Rang De Basanti: young and restless". Rediff.com. Retrieved 2008-03-23.
  75. Kamath, Sudhish (2006-02-03). "Both dream and nightmare". ದಿ ಹಿಂದೂ. Archived from the original on 2008-02-25. Retrieved 2008-05-04.
  76. ಉಲ್ಲೇಖ ದೋಷ: Invalid <ref> tag; no text was provided for refs named BBC_review
  77. Johnson, G. Allen (2006-05-05). "Movie Review: Rang De Basanti". San Francisco Chronicle. Retrieved 2008-03-23.
  78. Elley, Derek (2006-02-05). "Rang De Basanti Review". Variety. Retrieved 2008-03-23.
  79. Mohideen, Nabeel (2006-02-01). "Aamir Khan's `Rang de Basanti' Has Raw Energy: Movie Review". Bloomberg.com. Retrieved 2008-03-23.
  80. "Rang De Basanti chosen for Oscars". BBC. 2006-09-26. Retrieved 2008-06-27.
  81. "Bollywood film Rang de Basanti is India's entry for Oscars". Monstersandcritics.com. 2006-09-26. Archived from the original on 2008-12-12. Retrieved 2008-06-27.
  82. Doctor, Vikram (2006-09-26). "Will Rang De Basanti make the Oscars cut?". The Economic Times. Retrieved 2008-06-27.
  83. "An Oscar for the mantelpiece". The Times of India. 2006-09-05. Retrieved 2008-06-27.
  84. "Aamir's Oscar plans for Rang De Basanti". Rediff.com. 2006-09-27. Retrieved 2008-06-27.
  85. "Why Rang De Basanti was the wrong one for Oscar?". IBNLive.com. 2007-01-18. Retrieved 2008-06-27.
  86. "Rang De Basanti sweeps Filmfare awards". The Times of India. 2007-02-25. Retrieved 2008-03-21.
  87. "Latest winners and nominees". International Indian Film Academy. 2007. Archived from the original on 2012-02-07. Retrieved 2008-03-21. {{cite web}}: Unknown parameter |month= ignored (help)
  88. "Rang de Basanti top film at IIFA". The Hindu. 2007-06-11. Archived from the original on 2008-04-08. Retrieved 2008-03-21.
  89. "Munnabhai gets best film award". The Times of India. 2007-12-10. Retrieved 2008-03-21.
  90. "Hrithik, Kareena bag best actor Star Screen awards". Bollywood.com. 2007-01-07. Archived from the original on 2011-07-08. Retrieved 2009-04-22.
  91. "Rakyesh Mehra gets Best Director trophy at the Zee Cine awards". The Hindu. 2007-04-02. Archived from the original on 2007-08-12. Retrieved 2008-03-21.
  92. "Rang De Basanti gets BAFTA nomination". The Hindu. 2007-01-12. Archived from the original on 2007-12-06. Retrieved 2008-03-21.
  93. Chibber, Nanditta (2006-02-14). "Vajpayee sings Rang De tune!". Rediff.com. Retrieved 2008-06-15.
  94. Doval, Nikita (2006-02-04). "GenX patriotism: The new formula". Hyderabad Times. Archived from the original on 2009-01-11. Retrieved 2009-02-17.
  95. "Manu Sharma, eight others acquitted in Jessica murder case". Rediff.com. 2006-02-21. Retrieved 2008-06-15.
  96. Sengupta, Somini (2006-03-13). "Acquittal in Killing Unleashes Ire at India's Rich". ದ ನ್ಯೂ ಯಾರ್ಕ್ ಟೈಮ್ಸ್. Retrieved 2008-06-15.
  97. Sharma, Purnima (2006-05-15). "'We will not take things lying down anymore'". The Times of India. Retrieved 2008-06-15.
  98. "Making a difference". NDTV. Archived from the original on 2012-09-08. Retrieved 2008-06-15.
  99. "Seeking justice in Priyadarshini murder case". ದಿ ಹಿಂದೂ. 2006-07-24. Archived from the original on 2009-06-24. Retrieved 2008-06-15.
  100. Kripalani, Manjeet (2006-05-19). "India's Affirmative Action Rocks the Boat". BusinessWeek. Retrieved 2008-06-15.
  101. "Rang De Basanti inspires new Pakistani news channel". The Pak Tribune. 2006-09-18. Archived from the original on 2006-10-22. Retrieved 2008-08-24.
  102. Sharma, Jyoti (2007-01-24). "Why are we embarrassed to show love for India?". The Times of India. Archived from the original on 2009-01-14. Retrieved 2008-08-16.
  103. "Amul Hits of 2005 - 2006". Amul. Retrieved 2008-06-27.
  104. Saxena, Shobhan (2007-11-11). "Campus netagiri gets radical". The Times of India. Retrieved 2008-07-05.
  105. Guha, Aniruddha (2007-09-28). "Play it again, son!". Daily News & Analysis. Retrieved 2008-06-27.


ಬಾಹ್ಯ ಕೊಂಡಿಗಳು

ಬದಲಾಯಿಸಿ
Awards
Preceded by
Black
ब्लैक
Filmfare Best Movie Award
2007
Succeeded by

ಟೆಂಪ್ಲೇಟು:FilmfareBestMovieAward