ಓಂ ಪುರಿ
ಓಂ ಪುರಿ (ಪಂಜಾಬಿ ಭಾಷೆ:ਓਮ ਪੂਰੀ, (ಜನನ: ೧೮ ಅಕ್ಟೋಬರ್ ೧೯೫೦ ಮರಣ: ೦೬ ಜನವರಿ ೨೦೧೭) ಒಬ್ಬ ಭಾರತೀಯ ನಟ. ಇವರು ಭಾರತೀಯ ಮುಖ್ಯವಾಹಿನಿ ಚಲನಚಿತ್ರಗಳು ಹಾಗೂ ಕಲಾತ್ಮಕ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ಬ್ರಿಟಿಷ್ ಹಾಗೂ ಅಮೆರಿಕನ್ ಚಲನಚಿತ್ರಗಳಲ್ಲಿಯೂ ಸಹ ಇವರ ಹೆಸರು ಕಾಣಿಸಿಕೊಂಡಿದೆ. ಇವರಿಗೆ ಗೌರವಾನ್ವಿತ (ಆರ್ಡರ್ ಆಫ್ ಬ್ರಿಟಿಶ್ ಎಂಪಾಯರ್ ಪದವಿ)ಒಬಿಇ (OBE) ಲಭಿಸಿದೆ. ಓಂ ಪುರಿ ಅವರು ವಿಶಿಷ್ಟ ಕಂಠ ಹಾಗೂ ವಿಭಿನ್ನ ನಟನೆಯ ಮೂಲಕ ಸಿನಿ ಪ್ರಿಯರ ಮನೆ ಮಾತಾಗಿದ್ದರು.
ಓಂ ಪುರಿ | |||||||||||
---|---|---|---|---|---|---|---|---|---|---|---|
ಓಂ ಪುರಿ | |||||||||||
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಅಂಬಾಲ, ಹರಿಯಾಣ, ಭಾರತ | ೧೮ ಅಕ್ಟೋಬರ್ ೧೯೫೦||||||||||
ವೃತ್ತಿ | ನಟ | ||||||||||
ವರ್ಷಗಳು ಸಕ್ರಿಯ | ೧೯೭೬ - ೨೦೧೭ | ||||||||||
ಪತಿ/ಪತ್ನಿ | ಸೀಮಾ ಕಪೂರ್ (ವಿಛ್ಛೇದಿತ), ನಂದಿತ ಪುರಿ | ||||||||||
|
ಆರಂಭಿಕ ಜೀವನ
ಬದಲಾಯಿಸಿಭಾರತ ದೇಶದ ಹರಿಯಾಣಾ ರಾಜ್ಯದ ಅಂಬಾಲಾದಲ್ಲಿ ಜನಿಸಿದ ಓಂ ಪುರಿ, ತಮ್ಮ ಜೀವನದ ಆರಂಭಿಕ ವರ್ಷಗಳನ್ನು, ಪಂಜಾಬ್ ರಾಜ್ಯದ ಪಟಿಯಾಲಾ ಜಿಲ್ಲೆಯ ಸನೌರ್‌ನಲ್ಲಿದ್ದ ತಮ್ಮ ಸೋದರಮಾವನವರೊಂದಿಗೆ ಕಳೆದರು. ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ಶಿಕ್ಷಣ ಸಂಸ್ಥೆಯಿಂದ ಅವರು ಪದವಿ ಪಡೆದರು. ರಾಷ್ಟ್ರೀಯ ನಾಟಕ ಶಾಲೆಯಿಂದ 1973ರಲ್ಲಿ ತೇರ್ಗಡೆಯಾದ ಓಂ ಪುರಿ, ಅದರ ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರಾಗಿದ್ದಾರೆ. ನಸೀರುದ್ದೀನ್ ಷಾ ಇವರ ಸಹಪಾಠಿಯಾಗಿದ್ದರು.[೧]
ಸ್ವರ್ಗೀಯ ನಟ ಅಮರೀಶ್ ಪುರಿ, ಓಂ ಪುರಿಯವರ ಸಹೋದರ ಎಂಬುದು ವ್ಯಾಪಕ ತಪ್ಪು ತಿಳಿವಳಿಕೆಯಾಗಿದೆ.[೧]
ವೃತ್ತಿಜೀವನ
ಬದಲಾಯಿಸಿಓಂ ಪುರಿ ಹಲವು ಭಾರತೀಯ ಚಲನಚಿತ್ರಗಳು ಹಾಗೂ ಯುನೈಟೆಡ್ ಕಿಂಗ್ಡಮ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ನಿರ್ಮಾಣವಾದ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. 1976ರಲ್ಲಿ ಬಿಡುಗಡೆಯಾದ ಚಲನಚಿತ್ರ ಘಾಷಿರಾಮ್ ಕೋತ್ವಾಲ್ ಒಂದಿಗೆ ಅವರ ವೃತ್ತಿಜೀವನ ಆರಂಭಿಸಿದರು. ಈ ಚಲನಚಿತ್ರವು ಅದೇ ಹೆಸರಿನ ಮರಾಠಿ ನಾಟಕವನ್ನು ಆಧರಿಸಿತ್ತು. ಅತ್ಯುತ್ತಮ ಎನ್ನಲಾದ ವೃತ್ತಿ ಅವರ ಕಾರ್ಯಗಳಿಗೆ ಅವರಿಗೆ ತೀರಾ ಕಡಿಮೆ ಅಥವಾ "ನಗಣ್ಯ" ಸಂಭಾವನೆ ನೀಡಲಾಗಿದೆ ಎಂದು ಓಂ ಪುರಿ ಇತ್ತೀಚೆಗೆ ಹೇಳಿಕೊಂಡಿದ್ದರು.[೨] ಭವಾನಿ ಭವಾಯಿ (1980), ಸದ್ಗತಿ (1981), ಅರ್ಧ್ ಸತ್ಯ (1982), ಮಿರ್ಚ್ ಮಸಾಲಾ (1986) ಮತ್ತು ಧಾರಾವಿ (1992) ಸೇರಿದಂತೆ ಹಲವು ಕಲಾತ್ಮಕ ಚಲನಚಿತ್ರಗಳಲ್ಲಿ ಅಮರೀಶ್ ಪುರಿ, ಜೊತೆಗೆ, ನಸೀರುದ್ದೀನ್ ಷಾ, ಶಬಾನಾ ಅಜ್ಮಿ ಹಾಗೂ ಸ್ಮಿತಾ ಪಾಟೀಲ್ ಅವರೊಂದಿಗೆ ಓಂ ಪುರಿ ನಟಿಸಿದ್ದಾರೆ.
ಅವರು ಪಂಜಾಬಿ ಚಲನಚಿತ್ರಗಳಲ್ಲಿಯೂ ಸಹ ಸಕ್ರಿಯರಾಗಿದ್ದಾರೆ. 1980ರ ದಶಕದಲ್ಲಿ ಓಂ ಪುರಿ ಬಹಳಷ್ಟು ಯಶಸ್ವಿಯಾದ ಛನ್ ಪರದೇಸಿ (1980) ಮತ್ತು ಲಾಂಗ್ ದಾ ಲಿಷ್ಕಾರಾ (1986) ಎಂಬ ಎರಡು ಪಂಜಾಬಿ ಚಲನಚಿತ್ರಗಳಲ್ಲಿ ನಟಿಸಿದ್ದರು. ಹತ್ತೊಂಬತ್ತು ವರ್ಷಗಳ ನಂತರ, 2005ರಲ್ಲಿ ಬಾಘಿ ಎಂಬ ಚಲನಚಿತ್ರದಲ್ಲಿ ನಟಿಸುವುದರೊಂದಿಗೆ ಓಂ ಪುರಿ ಪಂಜಾಬಿ ಚಲನಚಿತ್ರರಂಗಕ್ಕೆ ಮರಳಿದರು. ಗುರುದಾಸ್ ಮಾನ್ ನಿರ್ದೇಶನದ, 2008ರಲ್ಲಿ ತೆರೆಕಂಡ ಯಾರಿಯಾನ್ ಎಂಬ ಇನ್ನೊಂದು ಪಂಜಾಬಿ ಚಲನಚಿತ್ರದಲ್ಲಿ ಓಂ ಪುರಿ ನಟಿಸಿದ್ದಾರೆ.
ಈಸ್ಟ್ ಈಸ್ ಈಸ್ಟ್ (East is East) ಎಂಬ ಇಂಗ್ಲಿಷ್ ಚಲನಚಿತ್ರದಲ್ಲಿಯೂ ಅವರು ನಟಿಸಿದ್ದರು. ಹಲವು ವಿಶಿಷ್ಟ ಪಾತ್ರಗಳಲ್ಲಿ ನಟಿಸಿದ ಓಂ ಪುರಿ ಪ್ರಶಂಸೆ ಗಳಿಸಿದ್ದಾರೆ. ಆಕ್ರೋಶ್ (1980) ಚಲನಚಿತ್ರದಲ್ಲಿ ಅವರದ್ದು ಶೋಷಣೆಗೊಳಗಾದ ಬುಡಕಟ್ಟು ಜನಾಂಗದವರ ಪಾತ್ರ; ಇದರಲ್ಲಿ ಅವರದ್ದು ಯಾವ ಸಂಭಾಷಣೆಯೂ ಇರಲಿಲ್ಲ, ಕೇವಲ ಹಿನ್ನಲೆಯಲ್ಲಿ ತೋರಿಸುವ ಗತಿಸಿದ ಕಥಾಸರಣಿಯಲ್ಲಿ ಮಾತ್ರ ಅವರ ಪಾತ್ರವಿತ್ತು. ಡಿಸ್ಕೊ ಡ್ಯಾನ್ಸರ್ (1982) ಚಲನಚಿತ್ರದಲ್ಲಿ ನಾಯಕ ಮಿಥುನ್ ಚಕ್ರವರ್ತಿಯ ಪಾತ್ರವಾಗಿದ್ದ 'ಜಿಮ್ಮಿ'ಯ ಮ್ಯಾನೇಜರ್ ಪಾತ್ರ ನಿರ್ವಹಿಸಿದ್ದರು. ಅದೇ ವರ್ಷ ಬಿಡುಗಡೆಯಾದ ಅರ್ಧ್ ಸತ್ಯ ದಲ್ಲಿ, ಜೀವನಪರ್ಯಂತ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಶೋಷಣೆಯ ವಿರುದ್ಧ ರೊಚ್ಚಿಗೆದ್ದ ಕೋಪಿಷ್ಟ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಕ್ಕೆ ಓಂ ಪುರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತು. ಮಾಚಿಸ್ (1996) ಚಲನಚಿತ್ರದಲ್ಲಿ ಸಿಖ್ ಉಗ್ರವಾದಿಗಳ ನಾಯಕನ ಪಾತ್ರ, 1997ರಲ್ಲಿ ಬಿಡುಗಡೆಯಾದ ವಾಣಿಜ್ಯ ಚಲನಚಿತ್ರ ಗುಪ್ತ್ ನಲ್ಲಿ ಪುನಃ ಒಬ್ಬ ಗಟ್ಟಿಗ ಪೊಲೀಸ್ ಅಧಿಕಾರಿಯ ಪಾತ್ರ, ಹಾಗೂ, ಧೂಪ್ (2003)ನಲ್ಲಿ ವೀರಮರಣ ಹೊಂದಿದ ಸೈನಿಕನೊಬ್ಬನ ಧೀಮಂತ ತಂದೆಯ ಪಾತ್ರದಲ್ಲಿ ಓಂ ಪುರಿ ಮಿಂಚಿದ್ದರು.
1999ರಲ್ಲಿ ಓಂ ಪುರಿ ಮೊದಲ ಬಾರಿಗೆ ಕನ್ನಡ ಚಲನಚಿತ್ರವೊಂದರಲ್ಲಿ ನಟಿಸಿದರು. ಶಿವರಾಜಕುಮಾರ್ ನಾಯಕನಟರಾಗಿದ್ದ ಎಕೆ 47 ಚಲನಚಿತ್ರದಲ್ಲಿ, ಭೂಗತ ಪಾತಕಿಗಳಿಂದ ನಗರವನ್ನು ಸುರಕ್ಷಿತವಾಗಿರಿಸಲು ಶತಪ್ರಯತ್ನ ಮಾಡುವ ಒಬ್ಬ ಕಟ್ಟುನಿಟ್ಟಾದ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಓಂ ಪುರಿ ನಟಿಸಿ ಪ್ರಶಂಸೆ ಗಳಿಸಿದರು. ಈ ಚಲನಚಿತ್ರವು ಆ ವರ್ಷದ ಭಾರೀ ಯಶಸ್ವಿ ಚಲನಚಿತ್ರವಾಯಿತು. ಈ ಚಲನಚಿತ್ರದಲ್ಲಿ ಓಂ ಪುರಿಯವರ ನಟನೆ ಚಿರಸ್ಮರಣೀಯ. ಕನ್ನಡದಲ್ಲಿ ನೀಡಬೇಕಾದ ಸಂಭಾಷಣೆಗಳಿಗೆ ಸ್ವತಃ ಅವರೇ ಕಂಠದಾನ ಮಾಡಿದ್ದಾರೆ.
ರಿಚರ್ಡ್ ಅಟೆನ್ಬರೊ ನಿರ್ದೇಶಿಸಿದ, ಬಹಳಷ್ಟು ಪ್ರಶಂಸಿತ 'ಗಾಂಧಿ ' (1982) ಚಲನಚಿತ್ರದಲ್ಲಿ ಓಂ ಪುರಿಯವರದು ಸಣ್ಣ ಪಾತ್ರವಾದರೂ, ಗಮನ ಸೆಳೆದ ಪಾತ್ರವಾಗಿತ್ತು. 1990ರ ದಶಕದ ಮಧ್ಯದಲ್ಲಿ, ಮುಖ್ಯವಾಹಿನಿ ಹಿಂದಿ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಓಂ ಪುರಿ ನಟಿಸಿ ವೈವಿಧ್ಯತೆ ತೋರಿದರು. ಇದರಲ್ಲಿ ಅವರ ಪಾತ್ರಗಳು ಚಲನಚಿತ್ರ ವಿಮರ್ಶಕರಿಗಿಂತಲೂ ಹೆಚ್ಚಾಗಿ ಪ್ರೇಕ್ಷಕ ಜನಸ್ತೋಮದ ಅಭಿರುಚಿಗಾಗಿ ಹೇಳಿ ಮಾಡಿಸಿದಂತಿತ್ತು. ಮೈ ಸನ್ ದಿ ಫ್ಯಾನಟಿಕ್ (1997), ಈಸ್ಟ್ ಈಸ್ ಈಸ್ಟ್ (1999) ಮತ್ತು ದಿ ಪೆರೋಲ್ ಆಫಿಸರ್ (2001) ಸೇರಿದಂತೆ ಹಲವು ಬ್ರಿಟಿಷ್ ನಿರ್ಮಾಣದ ಚಲನಚಿತ್ರಗಳಲ್ಲಿ ನಟಿಸಿ ಓಂ ಪುರಿ ಅಂತರರಾಷ್ಟ್ರೀಯ ಮನ್ನಣೆ ಗಳಿಸಿಕೊಂಡರು. ಜೊತೆಗೆ, ಪ್ಯಾಟ್ರಿಕ್ ಸ್ವೇಯ್ಜ್‌ರೊಂದಿಗೆ ಸಿಟಿ ಆಫ್ ಜಾಯ್ (1992); ಜ್ಯಾಕ್ ನಿಕೊಲ್ಸನ್‌ರೊಂದಿಗೆ ವುಲ್ಫ್ (1994); ಹಾಗೂ, ವಾಲ್ ಕಿಲ್ಮರ್‌ರೊಂದಿಗೆ ದಿ ಘೋಸ್ಟ್ ಅಂಡ್ ದಿ ಡಾರ್ಕ್ನೆಸ್ (1996) ಸೇರಿದಂತೆ ಹಲವು ಹಾಲಿವುಡ್ ಚಲನಚಿತ್ರಗಳಲ್ಲಿ ಓಂ ಪುರಿ ನಟಿಸಿದರು. 2007ರಲ್ಲಿ ಬಿಡುಗಡೆಯಾದ, ಟಾಮ್ ಹ್ಯಾಂಕ್ಸ್ ಮತ್ತು ಜೂಲಿಯಾ ರಾಬರ್ಟ್ಸ್ ಅಭಿನಯದ ಚಾರ್ಲಿ ವಿಲ್ಸನ್ಸ್ ವಾರ್ ನಲ್ಲಿ ಓಂ ಪುರಿ ಜನರಲ್ ಝಿಯಾ-ಉಲ್-ಹಕ್ ಪಾತ್ರದಲ್ಲಿ ಕಾಣಿಸಿಕೊಂಡರು.
ಹಿಂದಿ ಕಿರುತೆರೆ ಧಾರಾವಾಹಿಗಳಲ್ಲಿಯೂ ಸಹ ಓಂ ಪುರಿ ನಟಿಸಿದ್ದಾರೆ. ಹಿಂದಿ ಚಲನಚಿತ್ರರಂಗದ ಖ್ಯಾತ ನಿರ್ದೇಶಕ ಬಾಸು ಚಟರ್ಜಿ ನಿರ್ದೇಶನದ ಕಕ್ಕಾಜಿ ಕಹೀಂ (1988) (ಸ್ಥೂಲ ಅರ್ಥ: 'ಚಿಕ್ಕಪ್ಪ ಹೇಳುತ್ತಾರೆ') ಧಾರಾವಾಹಿಯಲ್ಲಿ, ಸದಾ ಪಾನ್ ಅಗೆಯುತ್ತಾ ಕಕ್ಕಾಜಿ ಪಾತ್ರದಲ್ಲಿ ಓಂ ಪುರಿ ರಾಜಕಾರಣಿಗಳನ್ನು ಲೇವಡಿ ಮಾಡುವ ಹಾಸ್ಯ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ. ಅಲ್ಲದೆ, 1989ರಲ್ಲಿ ಕಿರುತೆರೆಯಲ್ಲಿ ಮೂಡಿದ ಮಿಸ್ಟರ್ ಯೋಗಿ ಧಾರಾವಾಹಿಯಲ್ಲಿ, ಪ್ರಮುಖ ನಟ ಮೋಹನ್ ಗೋಖಲೆ ಪಾತ್ರ ಮಿಸ್ಟರ್ ಯೋಗಿಯ ಕಾಲೆಳೆದು ಮಜಾ-ಮೋಜು ಪಡೆವ ಒಬ್ಬ ಚಾಲಾಕಿ ಸೂತ್ರಧಾರರಾಗಿ ಓಂ ಪುರಿ ನಗೆಯುಕ್ಕಿಸಿದ್ದರು. ಇವೆರಡೂ ಧಾರಾವಾಹಿಗಳು ಬಹಳ ಮಹತ್ವವಾಗಿದ್ದವು, ಏಕೆಂದರೆ ಓಂ ಪುರಿಯವರ ಪಾಲಿಗೆ ಇವು ಮೊದಲ ಹಾಸ್ಯ ಪಾತ್ರಗಳಾಗಿದ್ದವು. ಅವರು ಹಾಸ್ಯ ಪಾತ್ರಗಳಲ್ಲಿಯೂ ಸಹ ಉತ್ತಮವಾಗಿ ನಟಿಸಬಲ್ಲರೆಂಬುದು ಇದರಿಂದ ಸಾಬೀತಾಯಿತು. ಹಿಂದಿ ಕಾದಂಬರಿ ತಮಸ್ ಆಧರಿಸಿದ, ಗೋವಿಂದ್ ನಿಹಲಾನಿ ನಿರ್ದೇಶಿಸಿದ ಅದೇ ಹೆಸರಿನ ತಮಸ್ (1987) ಕಿರುತೆರೆ ಚಲನಚಿತ್ರದಲ್ಲಿ ನಟನೆಗಾಗಿ ಓಂ ಪುರಿಯವರಿಗೆ ವಿಮರ್ಶಾತ್ಮಕ ಪ್ರಶಂಸೆ ಲಭಿಸಿತು. ಪ್ರೇಕ್ಷಕ ಜನಸ್ತೋಮದಲ್ಲಿ ಬಹಳ ಜನಪ್ರಿಯತೆ ಗಳಿಸಿದ ಹಿಂದಿ ಚಲನಚಿತ್ರ ಜಾನೇ ಭೀ ದೋ ಯಾರೋ (1983), ನಂತರ ಚಾಚೀ 420 (1997), ಹೇರಾ ಫೇರಿ (2000), ಚೋರ್ ಮಚಾಯೆ ಶೋರ್ (2002) ಹಾಗೂ ಮಾಲಾಮಾಲ್ ವೀಕ್ಲಿ (2006) ಹಿಂದಿ ಚಲನಚಿತ್ರಗಳಲ್ಲಿ ಓಂ ಪುರಿ ಹಾಸ್ಯ ಪಾತ್ರಗಳಲ್ಲಿ ಭಾರೀ ಪ್ರಶಂಸೆ ಗಳಿಸಿದರು.
ಸಿಂಗ್ ಈಸ್ ಕಿಂಗ್ , ಮೇರೆ ಬಾಪ್ ಪಹಲೆ ಆಪ್ ಹಾಗೂ ಬಿಲ್ಲೂ ಬಾರ್ಬರ್ , ಇವು ಓಂ ಪುರಿ ನಟನೆಯ ಇನ್ನೂ ಇತ್ತೀಚಿನ ಕೆಲವು ಹಿಂದಿ ಚಲನಚಿತ್ರಗಳು. 2009ರ ಡಿಸೆಂಬರ್ ತಿಂಗಳಲ್ಲಿ ತೆರೆಕಂಡ ರೋಡ್ ಟು ಸಂಗಮ್ ಎಂಬ ಚಲನಚಿತ್ರದಲ್ಲಿ ಮೊಹಮ್ಮದ್ ಅಲಿ ಕಸೂರಿ ಪಾತ್ರದಲ್ಲಿ ಓಂ ಪುರಿ ಕಾಣಿಸಿಕೊಂಡಿದ್ದರು. ದಿ ಹ್ಯಾಂಗ್ಮನ್ ಎಂಬುದು ಇವರ ಮುಂದಿನ ಚಲನಚಿತ್ರವಾಗಲಿದೆ.
ವಿಲನ್, ಪೋಷಕ ಪಾತ್ರ, ಪೊಲೀಸ್ ಅಧಿಕಾರಿ ಪಾತ್ರಗಳಲ್ಲಿ ಓಂ ಪುರಿ ಮಿಂಚಿದ್ದರು. ಇಂಗ್ಲಿಷ್, ಹಿಂದಿ, ಕನ್ನಡ, ಪಂಜಾಬಿ, ತೆಲುಗು, ತಮಿಳು, ಮಲೆಯಾಳಿ, ಫ್ರೆಂಚ್ ಭಾಷೆ ಸೇರಿದಂತೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಓಂ ಪುರಿ ಅಭಿನಯಿಸಿದ್ದಾರೆ.
ಕನ್ನಡ ಸಿನಿಮಾಗಳು
ಬದಲಾಯಿಸಿಕನ್ನಡದಲ್ಲಿ ತಬ್ಬಲಿಯು ನೀನಾದೆ ಮಗನೆ, ಎ.ಕೆ.47, ದೃವ, ಸಂತೆಯಲ್ಲಿ ನಿಂತ ಕಬೀರ ಮತ್ತು ಟೈಗರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಭಾಗಶಃ ಚಲನಚಿತ್ರಗಳ ಪಟ್ಟಿ
ಬದಲಾಯಿಸಿ- 1976 : ಕೆ. ಹರಿಹರನ್ ಮಣಿ ಕೌಲ್, ಸಯ್ಯದ್ ಅಖ್ತರ್ ಮಿರ್ಜಾ ಮತ್ತು ಕಮಲ್ ಸ್ವರೂಪ್ ನಿರ್ದೇಶನದ ಘಾಷಿರಾಮ್ ಕೋತ್ವಾಲ್ : ಘಾಷಿರಾಮ್
- 1977 : ಬಿ. ವಿ. ಕಾರಂತ್ ಮತ್ತು ಗಿರೀಶ್ ಕಾರ್ನಾಡ್ರ ಗೋಧೂಲಿ (ಅತ್ಯುತ್ತಮ ಚಿತ್ರಕಥೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ (1980)
- ಶ್ಯಾಮ್ ಬೆನೆಗಲ್ರ ಭೂಮಿಕಾ (ಒಂದು ಪಾತ್ರ ) (ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ (1978)
- 1978 : ಸಯ್ಯದ್ ಅಖ್ತರ್ ಮಿರ್ಜಾರ ಅರ್ವಿಂದ್ ದೇಸಾಯ್ ಕೀ ಅಜೀಬ್ ದಾಸ್ತಾನ್ : ಮಾರ್ಕ್ಸ್‌ವಾದಿ ಕಾರ್ಯಕರ್ತ
- 1980 : ಗೋವಿಂದ್ ನಿಹಲಾನಿಯವರ ಅಕ್ರೋಶ್ : ಲಹಾನ್ಯಾ ಭಿಕು
- 1982 : ರಿಚರ್ಡ್ ಅಟೆನ್ಬೊರೊ ಅವರ ಗಾಂಧಿ : ನಹರಿ
- ಶ್ಯಾಮ್ ಬೆನೆಗಲ್ರ ಆರೋಹಣ್ : ಹರಿ ಮಂಡಲ್
- 1983 : ಗೋವಿಂದ್ ನಿಹಲಾನಿಯವರ ಅರ್ಧ್ ಸತ್ಯ : ಅನಂತ್ ವೆಲಾಂಕರ್ (1984ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿಗಳು)
- 1984 : ದಿ ಜ್ಯೂಯಲ್ ಇನ್ ದಿ ಕ್ರೌನ್ (ಕಿರುತೆರೆ ಸರಣಿ) : ಮಿಸ್ಟರ್ ಡಿಸೌಜಾ
- 1991 : ದೀಪಾ ಮೆಹ್ತಾರ ಸ್ಯಾಮ್ & ಮಿ : ಚೇತನ್ ಪಾರೀಖ್
- 1992 : ಕೇತನ್ ಮೆಹ್ತಾರ ಮಾಯಾ ಮೆಮ್ಸಾಬ್ (ಮಾಯಾ: ದಿ ಎನ್ಚಾಂಟಿಂಗ್ ಇಲ್ಯೂಷನ್ ) (ಗಸ್ತಾವ್ ಫ್ಲಾಬರ್ಟ್‌ರ ಮ್ಯಾಮ್ ಬೊವರಿ ಕಾದಂಬರಿ ಆಧಾರಿತ)
- ರೊಲೆಂಡ್ ಜೊಫೆಯವರ ಸಿಟಿ ಆಫ್ ಜಾಯ್ (ಡಾಮಿನಿಕ್ ಲಾಪಿಯರ್ ಕಾದಂಬರಿ ಆಧಾರಿತ) : ಹಝಾರಿ ಪಾಲ್
- 1993 : ಇನ್ ಕಸ್ಟಡಿ : ದೇವೆನ್
- 1994 : ವುಲ್ಫ್ : ಡಾ. ವಿಜಯ್ ಅಲಝಿಯಸ್
ದ್ರೋಹಕಾಲ್ (1994)
- 1996 : ದಿ ಘೋಸ್ಟ್ ಅಂಡ್ ದಿ ಡಾರ್ಕ್ನೆಸ್ : ಅಬ್ದುಲ್ಲಾ
- ಸಂಪೂರ್ಣ್ ಸಿಂಗ್ (ಗುಲ್ಜಾರ್) ನಿರ್ದೇಶಿಸಿದ ಮಾಚಿಸ್ : ಸನಾತನ್
- 1997 : ಉದಯನ್ ಪ್ರಸಾದ್‌ರವರ ಮೈ ಸನ್ ದಿ ಫ್ಯಾನಾಟಿಕ್ : ಪರ್ವೆಜ್
- 1998 : ಸಚ್ ಎ ಲಾಂಗ್ ಜರ್ನಿ : ಗುಲಾಮ್ ಮೊಹಮ್ಮದ್
- ಅನೀಸ್ ಬಾಜ್ಮಿಯವರ ಪ್ಯಾರ್ ತೊ ಹೋನಾ ಹಿ ಥಾ : ಇನ್ ಸ್ಪೆಕ್ಟರ್ ಖಾನ್
- 1999 : ಈಸ್ಟ್ ಇಸ್ ಈಸ್ಟ್ : ಜಾರ್ಜ್ ಖಾನ್+
- 2000 : ಕಮಲ್ ಹಾಸನ್ ನಿರ್ದೇಶಿಸಿದ ಹೇ ರಾಮ್ : ಗೋಯಲ್
- ಪ್ರಿಯದರ್ಶನ್ ನಿರ್ದೇಶನದ ಹೇರಾ ಫೇರಿ (ಮಂಕಿ ಬಿಜಿನೆಸ್ ) : ಖಡಕ್ ಸಿಂಗ್
- 2001:ದಿ ಮಿಸ್ಟಿಕ್ ಮ್ಯಾಸೂರ್ : ರಾಮ್‌ಲಗನ್
- Gadar: Ek Prem Katha de ಅನಿಲ್ ಶರ್ಮಾ: ಸೂತ್ರಧಾರ
- ಜಾನ್ ಡುಯಿಗನ್ ನಿರ್ದೇಶಿಸಿದ ದಿ ಪೆರೊಲ್ ಆಫಿಸರ್ : ಜಾರ್ಜ್
- 2002 : ವಿಕ್ರಮ್ ಭಟ್ ನಿರ್ದೇಶಿಸಿದ ಆವಾರಾ ಪಾಗಲ್ ದೀವಾನಾ (Wayward, Crazy and Insane )
- ಅಶೋಕ್ ರಾಯ್ ನಿರ್ದೇಶಿಸಿದ ಚೋರ್ ಮಚಾಯೆ ಶೋರ್
- ಜುಲಿಯನ್ ಜೆರಾಲ್ಡ್ ನಿರ್ದೇಶಿಸಿದ ವೈಟ್ ಟೀತ್ (ಚಾನೆಲ್ 4) : ಸಾಮದ್ (ಝೇಡೀ ಸ್ಮಿತ್‌ರ ವೈಟ್ ಟೀತ್ ಆಧಾರಿತ)
- 2004 : ಮಧುರ್ ಭಂಡಾರ್ಕರ್ ನಿರ್ದೇಶಿಸಿದ Aan: Men at Work : ಪೊಲೀಸ್ ಆಯುಕ್ತ ಖುರಾನಾ
ಫರ್ಹಾನ್ ಅಖ್ತರ್ ನಿರ್ದೇಶಿಸಿದ ಲಕ್ಷ್ಯ :ಮೇಜರ್ ಪ್ರೀತಮ್ ಸಿಂಗ್
- ಮಣಿ ರತ್ನಂ ನಿರ್ದೇಶಿಸಿದ ಯುವ :ಪ್ರಸನ್ನಜಿತ್ ಭಟ್ಟಾಚಾರ್ಯ
- 2005:ದಿ ಹ್ಯಾಂಗ್ಮನ್ : ಶಿವ
- 2006 : ರಂಗ್ ದೇ ಬಸಂತಿ : ಅಸ್ಲಮ್‌ನ ತಂದೆ ಅಮಾನುಲ್ಲಾ ಖಾನ್
- ಪ್ರಿಯದರ್ಶನ್ ನಿರ್ದೇಶಿಸಿದ ಮಾಲಾಮಾಲ್ ವೀಕ್ಲಿ : ಬಲವಂತ್ 'ಬಲ್ಲು'
- ಪ್ರಿಯದರ್ಶನ್ ನಿರ್ದೇಶಿಸಿದ ಚುಪ್ ಚುಪ್ ಕೆ (Quietly ) : ಪ್ರಭಾತ್ ಸಿಂಗ್ ಚೌಹಾನ್
- ಫರ್ಹಾನ್ ಅಖ್ತರ್ ನಿರ್ದೇಶಿಸಿದ ಡಾನ್ - ದಿ ಚೇಸ್ ಬಿಗಿನ್ಸ್ ಎಗೇನ್ : ಸಿಬಿಐ ಆಫಿಸರ್ ವಿಜಯ್ ಮಲ್ಲಿಕ್
- 2007: ಅಹ್ಮದ್ ಖಾನ್ ನಿರ್ದೇಶಿಸಿದ ಫೂಲ್ ಅಂಡ್ ಫೈನಲ್ : ರಾಹುಲ್/ರಾಜಾ ಪಾತ್ರದ ತಂದೆ
- 2008 : ಮೈಕ್ ನಿಕಾಲ್ಸ್ ನಿರ್ದೇಶಿಸಿದ ಚಾರ್ಲಿ ವಿಲ್ಸನ್ಸ್ ವಾರ್ : ಪಾಕಿಸ್ತಾನದ ರಾಷ್ಟ್ರಾಧ್ಯಕ್ಷ ಮೊಹಮ್ಮದ್ ಝಿಯಾ
- 2008 : ಪ್ರಿಯದರ್ಶನ್ ನಿರ್ದೇಶಿಸಿದ, ಇರ್ಫಾನ್ ಖಾನ್, ಲಾರಾ ದತ್ತಾ ಆಭಿನಯದ ಬಿಲ್ಲೂ ಬಾರ್ಬರ್
- 2009 : ವಿಪುಲ್ ಷಾ ನಿರ್ದೇಶಿಸಿದ ಲಂಡನ್ ಡ್ರೀಮ್ಸ್ : ಅರ್ಜುನ್‌ನ ಚಿಕ್ಕಪ್ಪ
- 2010 : ಅಜಯ್ ಸಿಂಗ್ ನಿರ್ದೇಶಿಸಿದ ಖಾಪ್ : ಗ್ರಾಮದ ಸರಪಂಚ್
- 2010 : ಅಭಿನವ್ ಕಾಶ್ಯಪ್ ನಿರ್ದೇಶಿಸಿದ ದಬಂಗ್ : ಪೊಲೀಸ್ ಅಧಿಕಾರಿ
- 2010 : ಆಂಡಿ ಡಿಎಮೊನಿ ನಿರ್ದೇಶಿಸಿದ ವೆಸ್ಟ್ ಈಸ್ ವೆಸ್ಟ್ : ಜಾರ್ಜ್ ಖಾನ್
- 2011 : ಫರ್ಹಾನ್ ಅಖ್ತರ್ ನಿರ್ದೇಶಿಸಿದ ಡಾನ್ 2 - ದಿ ಚೇಸ್ ಕಂಟಿನ್ಯೂಸ್
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
ಬದಲಾಯಿಸಿ- 1981: ವಿಜೇತ : ಆಕ್ರೋಶ್ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ
- 1982: ವಿಜೇತ : ಆರೋಹಣ್ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ
- 1984: ವಿಜೇತ : ಅರ್ಧ್ ಸತ್ಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ
- 1984: ವಿಜೇತ : ಅರ್ಧ್ ಸತ್ಯ ಚಲನಚಿತ್ರಕ್ಕಾಗಿ ಕಾರ್ಲವಿ ವೆರಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ
- 1998: ವಿಜೇತ : ಮೈ ಸನ್ ದಿ ಫ್ಯಾನಟಿಕ್ ಚಲನಚಿತ್ರಕ್ಕಾಗಿ ಬ್ರಸಲ್ಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ
- 1990: ವಿಜೇತ : ಭಾರತದಲ್ಲಿ ನಾಲ್ಕನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ
- 1998: ವಿಜೇತ : ಚಲನಚಿತ್ರ ಕಲಾ ಕ್ಷೇತ್ರದಲ್ಲಿ ಅಸಾಮಾನ್ಯ ಕೊಡುಗೆಗಾಗಿ ಗ್ರ್ಯಾನ್ ಪ್ರಿ ಸ್ಪೆಷಲ್ ಡೆ ಅಮೆರಿಕ್ಸ್ ಮಾಂಟ್ರೆಯಲ್ ವರ್ಲ್ಡ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ
- 2004: ವಿಜೇತ : ಬ್ರಿಟಿಷ್ ಚಲನಚಿತ್ರರಂಗಕ್ಕೆ ಅಮೂಲ್ಯ ಸೇವೆಗಾಗಿ ಆಫಿಸರ್ ಅಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ ಪ್ರಶಸ್ತಿ
- 2009: ವಿಜೇತ : ಫಿಲ್ಮ್‌ಫೇರ್ ಜೀವಮಾನ ಸಾಧನೆಯ ಪ್ರಶಸ್ತಿ
- 1999: ನಾಮನಿರ್ದೇಶಿತ : ಪ್ಯಾರ್ ತೊ ಹೋನಾ ಹಿ ಥಾ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕನಟ ಪ್ರಶಸ್ತಿ
- 1998: ನಾಮನಿರ್ದೇಶಿತ : ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕನಟ ಪ್ರಶಸ್ತಿ-Gupt:The Hidden Truth
- 1997: ನಾಮನಿರ್ದೇಶಿತ : ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕನಟ ಪ್ರಶಸ್ತಿ-ಮಾಚಿಸ್
ನಿಧನ
ಬದಲಾಯಿಸಿಓಂ ಪುರಿ ಅವರು ೨೦೧೭ರ ಜನವರಿ ೬ರಂದು ಶುಕ್ರವಾರ ಬೆಳಗ್ಗೆ ತಮ್ಮ ಮುಂಬೈನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.[೩]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ಪುರಿ, ನಂದಿತಾ. "ಬ್ರದರ್ಸ್ ಇನ್ ಆರ್ಮ್ಸ್". ಮಿಡ್-ಡೇ ಮಲ್ಟಿಮೀಡಿಯಾ ಲಿಮಿಟೆಡ್. Archived from the original on 2005-02-28. Retrieved 2011-01-14.
- ↑ ಝಾ, ಸುಭಾಷ್. ""I've been paid peanuts for my efforts"- Om Puri". ಗ್ರೇನಿಯಂ ಇನ್ಫ಼ರ್ಮೇಶನ್ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್.[permanent dead link]
- ↑ ಓಂ ಪುರಿ ನಿಧನ[permanent dead link]