ಮೈಸೂರ್ ಕನ್ಸರ್ನ್ಸ್, ಮಾಟುಂಗ, ಮುಂಬಯಿ

ಮೈಸೂರ್ ಕನ್ಸರ್ನ್ಸ್,[]'ಮುಂಬಯಿನ ಕಿಂಗ್ಸ್ ಸರ್ಕಲ್' (ಈಗ ಮಹೇಶ್ವರಿ ಉದ್ಯಾನವೆಂದು ಕರೆಯಲ್ಪಡುತ್ತಿದೆ) ನಲ್ಲಿ ಕಾಫಿಪುಡಿ ಮಾರಾಟದಿಂದಲೇ ದಶಕಗಳಿಂದ ಅಸ್ತಿತ್ವದಲ್ಲಿದೆ.'ಜಿ.ವಿ.ವೆಂಕಟರಾಮ್' ರವರು ಇದರ ಸ್ಥಾಪಕರು. ಮೂಲತಃ ಮೈಸೂರಿನವರಾದ ಇವರು ದಶಕಗಳಿಂದ ಕೇವಲ ಕಾಫಿಪುಡಿ, ಕೊಯಮತ್ತೂರ್ ಬೆಣ್ಣೆ,, ಬಿಸ್ಕತ್ತು, ಮುಂತಾದವುಗಳನ್ನು ವ್ಯಾಪಾರಮಾಡಿ ಹಣಸಂಪಾದಿಸಿದವರಲ್ಲಿ ಪ್ರಮುಖರು. ಎಲ್ಲರಂತೆ ಇವರೂ ಉದ್ಯೋಗಕ್ಕಾಗಿ ಮುಂಬಯಿಗೆ ಬಂದು ನೆಲೆಸಿದ ಜಿ.ವಿ.ಸಹೋದರರಲ್ಲೊಬ್ಬರು.[] ಎಂಬ ಹೆಸರಿನಲ್ಲಿ ಕಾಫಿಪುಡಿ ಅಂಗಡಿಯನ್ನು ಬಹಳ ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.

ಉತ್ತಮ ಫಿಲ್ಟರ್ ಕಾಫಿ-ದಕ್ಷಿಣ ಭಾರತೀಯರ ಆದ್ಯತೆಗಳಲ್ಲೊಂದು

ಬದಲಾಯಿಸಿ

ಮುಂಬಯಿನಲ್ಲಿ ನೆಲೆಸಿದ ದಕ್ಷಿಣ ಭಾರತೀಯರಿಗೆ ಮನಒಪ್ಪುವ ಒಳ್ಳೆಯ 'ಫಿಲ್ಟರ್ ಕಾಫಿಪುಡಿ'ಯನ್ನು ತಯಾರಿಸುವುದರಲ್ಲಿ ಯಶಸ್ವಿಯಾದರು.'ಉತ್ತಮ ಕಾಫಿ ತಯಾರಿಕೆ' ಗೆ ಸಮರ್ಪಕವಾದ ಉತ್ತಮ ಶುದ್ಧ ಕಾಫಿಪುಡಿಯ ಅಗತ್ಯವಿದೆ. ದಕ್ಷಿಣ ಭಾರತೀಯರಿಗೆ ಉತ್ತಮ ಶುದ್ಧ ಕಾಫಿಪುಡಿಯ ಅಗತ್ಯ ಬಹಳವಾಗಿತ್ತು. ಆಫೀಸಿನಲ್ಲಿ ಅನಿವಾರ್ಯವಾಗಿ ಚಹಾಸೇವನೆ ಮಾಡಿದರೂ, ಮನೆಯಲ್ಲಿ ಒಳ್ಳೆಯ 'ಫಿಲ್ಟರ್ ಕಾಫಿ' ಇಲ್ಲದಿದ್ದರೆ, ಸರಿಹೋಗುತ್ತಿರಲಿಲ್ಲ. ಈ ಅಗತ್ಯತೆಗಳನ್ನು ಪರಿಗಣಿಸಿ, ಅದನ್ನು ಸಮರ್ಪಕವಾಗಿ ನೀಗಿಸಿದ ಶ್ರೇಯಸ್ಸು 'ಜಿ.ವಿ.ವೆಂಕಟರಾಮ್' ರವರದು. [] ಹಾಗಾಗಿ ಅವರು ಮತ್ತು ಅವರ ಪರಿವಾರದವರು ಕೇವಲ ಶುದ್ಧ ಕಾಫಿಪುಡಿಯೊಂದನ್ನೇ ಆದ್ಯತೆಯಾಗಿಟ್ಟುಕೊಂಡು ತಮ್ಮ ಗ್ರಾಹಕರಿಗೆ ಒದಗಿಸುತ್ತಾ ಬಂದಿದ್ದಾರೆ. 'ಕಾಫಿ ಬಿಸಿನೆಸ್' ಜೊತೆಗೆ 'ಚಲನಚಿತ್ರತಯಾರಿಕೆಯ ಗೀಳೂ' ಅವರಿಗೆ ಅಂಟಿಕೊಂಡಿತ್ತು. ಮೈಸೂರು ಪ್ರಿಂಟಿಗ್ ಪ್ರೆಸ್ ನ ಮಾಲಿಕ, ಜಿ.ವಿ.ರಂಗಸ್ವಾಮಿ ಇವರ ಸೋದರ.

ಕನ್ನಡ ಚಲನಚಿತ್ರ ನಿರ್ಮಾಣದ ಗೀಳು

ಬದಲಾಯಿಸಿ
ಚಿತ್ರ:ScanFalicitation.jpg
'ಚಿತ್ರನಿರ್ಮಾಪಕ,ಜಿ.ವಿ.ವೆಂಕಟರಾಮ್, ವೈಜಯಂತಿ ಮಾಲಾರವರನ್ನು ಅಭಿನಂದಿಸುತ್ತಿದ್ದಾರೆ'
ಚಿತ್ರ:ScanVaijayantimala.jpg
'ವೈಜಯಂತಿ ಮಾಲಾರವರ ಕೈನಿಂದ ಚಿತ್ರದ ಉದ್ಘಾಟನೆ. ನಾಯಕ ಕಲ್ಯಾಣ್ ಕುಮಾರ್ ಮತ್ತು ನಾಯಕಿ ನಟಿ,ಮೀನಾಕ್ಷಿ'
ಚಿತ್ರ:Latamangeshkar.jpg
'ಲತಾಮಂಗೇಶ್ಕರ್ ಮತ್ತು ಮಹಮ್ಮದ್ ರಫಿ ಗೀತೆಯನ್ನು ಹಾಡಲು ಸಿದ್ಧರಾಗಿದ್ದಾರೆ'
ಚಿತ್ರ:Myscons3.jpg
'ವೈಜಯಂತಿ ಮಾಲಾರವರು 'ಆಶಾನಿರಾಶ ಚಿತ್ರ'ಕ್ಕೆ ವಿಧ್ಯುಕ್ತ ಚಾಲನೆ ಕೊಟ್ಟಾಗ'

ಅಂದಿನ ಹಿಂದಿ ಚಿತ್ರರಂಗದ ದಿಗ್ಗಜರ ಸ್ನೇಹವನ್ನೂ ಗಳಿಸಿದ್ದದ್ದು ಒಂದು ವಿಶೇಷವಾಗಿತ್ತು. 'ಕಾಫಿಪುಡಿ' ಮತ್ತು 'ದಿನಸಿ ಅಂಗಡಿವ್ಯಾಪಾರ' ಚೆನ್ನಾಗಿ ಲಾಭದಲ್ಲಿ ನಡೆಯುತ್ತಿದ್ದು ಒಂದಷ್ಟು ಹಣವನ್ನು ಸಂಪಾದಿಸಿದರು. ಒಂದು 'ಕನ್ನಡ ಸಿನಿಮಾ' ತಯಾರಿಸುವ ಆಲೋಚನೆ ಅವರಿಗೆ ಹೇಗೋ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಅವರ ಸೋದರರರೊಂದಿಗೆ ಚರ್ಚಿಸಿ ’ಆಶಾ ನಿರಾಶಾ’ ಎಂಬ ಚಿತ್ರ ತಯಾರಿಕೆಗೆ 'ಸ್ಕೆಚ್' ಹಾಕಿದರು. ಹಾಗೆ ಮುಂದುವರಿದ ಚಿತ್ರನಿರ್ಮಾಣ ಸಂಸ್ಥೆಯ ಹೆಸರು ’ಕರ್ನಾಟಕ ಆರ್ಟ್ ಪ್ರೊಡಕ್ಷನ್ ಸಂಸ್ಥೆ'. ಆಗಿನ ಮುಂಬಯಿಯ ದಾದರ್ ನಲ್ಲಿದ್ದ ರಣಜಿತ್ ಸ್ಟುಡಿಯೋನಲ್ಲಿ ಚಿತ್ರೀಕರಣ ಶುರುವಾಯಿತು. ಚಿತ್ರೀಕರಣದ ಮುಹೂರ್ತ ಸಮಾರಂಭಕ್ಕೆ ವಿಶೇಷ ಅತಿಥಿಯಗಿ ಬಂದಿದ್ದವರು, ಅಂದಿನ ಸೂಪರ್ ಸ್ಟಾರ್ ವೈಜಯಂತಿ ಮಾಲಾ ರವರು. ಕ್ಯಾಮರಾ ಸ್ವಿಚ್ ಆನ್ ಮಾಡಿ ಚಿತ್ರಕ್ಕೆ ವಿಧ್ಯುಕ್ತವಾದ ಚಾಲನೆನೀಡಿದವರು, 'ವೈಜಯಂತಿ ಮಾಲ'ರವರು, ನಿರ್ಮಾಪಕ 'ಜಿ.ವಿ.ವೆಂಕಟರಾಮ್ ಸೋದರಿಗೆ' ಶುಭ ಹರೈಸಿದ್ದರು. ಚಿತ್ರದ ನಾಯಕ, ನಟಶೇಖರ್ ಚಿತ್ರದ ಖ್ಯಾತಿಯ ಕಲ್ಯಾಣಕುಮಾರ್, ಮತ್ತು, ನಾಯಕಿ ದಕ್ಷಿಣ ಭಾರತದ ಬೆಡಗಿ,ಮೀನಾಕ್ಷಿ,ಯವರು. ಅವರು, 'ತೀನ್ ಬತ್ತಿ ಚಾರ್ ರಾಸ್ತಾ' ಹಿಂದಿ ಚಿತ್ರದಲ್ಲಿ ನಾಯಕಿಯಾಗಿ ಕೆಲಸಮಾಡಿದ್ದರು. 'ಸಂಧ್ಯಾ', 'ವಿದ್ಯಾ', 'ಜಯಶ್ರೀ', 'ರಾಮಕೃಷ್ಣ ಭಟ್', 'ಎಂ.ಎಸ್.ಮಾಧವರಾವ್', ಮೊದಲಾದವರು ತಾರಾಗಣದಲ್ಲಿದ್ದರು. ಗಾಯಕಿ-ನಟಿ ಅಮೀರ್‍ಬಾಯಿ ಕರ್ನಾಟಕಿ ಸಹಿತ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಪಟ್ಕಥೆಯನ್ನು 'ಜಿ.ವಿ.ಹೊಯ್ಸಳ' ಬರೆದರು. ಸೋದರಿ 'ಎಸ್.ಪಿ.ಹೊಯ್ಸಳ', ಛಾಯಾಗ್ರಾಹಕರಾಗಿ ದುಡಿದರು. ನಿರ್ದೇಶನ, 'ಎನ್.ಕೆ.ಇಂದ್ರಾ,' ಎನ್ನುವವರು ವಹಿಸಿಕೊಂಡಿದ್ದರು. ಹಿಂದಿ ಚಿತ್ರರಂಗ ಹೆಸರಾಂತ 'ಜೋಗನ್', 'ಪಾಪಿ' ಚಿತ್ರಗಳಿಗೆ ಸಂಗೀತ ನೀಡಿ ಹೆಸರು ಮಾಡಿದ ಬುಲೋನಿ ರಾಣಿಯವರು ಸಂಗೀತ ಒದಗಿಸಿದರು. ಇಂಥ ಹೆಸರಾಂತ ವ್ಯಕ್ತಿಗಳ ಮುಖಾಂತರ 'ಲತಾ ಮಂಗೇಶ್ಕರ್' ಮತ್ತು 'ಮಹಮ್ಮದ್ ರಫಿ'ಯನ್ನು ಸಂಪರ್ಕಿಸಿದ 'ವೆಂಕಟರಾಮ್' ತಮ್ಮ ಚಿತ್ರಕ್ಕೆ ಕಂಠದಾನಮಾಡಲು ಬಿನ್ನವಿಸಿಕೊಂಡರು. ಯುಗಳ ಗೀತೆಯನ್ನು ಬರೆದವರು, 'ಬಾನಾಡಿ' ಮತ್ತು 'ಹರಿತಸ್'; ಇದರ ಸಾಲುಗಳು ಹೀಗಿವೆ.

" ಇಂದೆಮಗೆ ಬಂದಿಹುದು ಮಧುರ

ಮಿಲನ ಸುದಿನ

ಜೀವನವು ಪ್ರೇಮಮಯ ಸವಿಯೇ

ಸುಧೆಯ ಪಾನ

ಈವನದ ತರುಲತೆಗಳಂತೆ ನಗುನಗುತಲಿ ನಲಿದಾಡೆ

ಭಾವಲಹರಿ ಸೆಳೆಯುತಿಹುದು ಪ್ರೇಮ ಲೋಕಕೆ ಎನ್ನ..."

ಕರ್ಮವೀರ ಪತ್ರಿಕೆ, ಬೆಳಕು ಚೆಲ್ಲಿದೆ

ಬದಲಾಯಿಸಿ

'ಕನ್ನಡ ಚಿತ್ರರಂಗ ಸಚಿತ್ರ ಇತಿಹಾಸ ಗ್ರಂಥ'ದಲ್ಲೂ 'ಆಶಾ ನಿರಾಶಾ' ಚಲನಚಿತ್ರದ ಬಗ್ಗೆ, ದಾಖಲೆಗಳು ದೊರೆಯುವುದಿಲ್ಲ. ಸನ್, ೧೯೫೪,ಜೂನ್ ೨೦, ರ,ಕರ್ಮವೀರ ಪತ್ರಿಕೆಯಲ್ಲಿ ಮುಂಬಯಿನ ಕನ್ನಡಿಗರೊಬ್ಬರ ಧೀರ ಕಾರ್ಯದಬಗ್ಗೆ ಬೆಳಕು ಚೆಲ್ಲಿದ ಲೇಖನ ಪ್ರಕಟವಾಗಿದೆ. ಚಿತ್ರನಿರ್ಮಾಣದ ಬಗೆಗಿನ ಮೂಲ ಕಾಗದ ಪತ್ರಗಳ ದಾಖಲೆಗಳ 'ಝೆರಾಕ್ಸ್ ಕಾಗದಗಳು, ಮಾಹಿತಿ ಪತ್ರಕೆಗಳು, ದಿವಂಗತ, ಶ್ರೀ.ವೆಂಕಟರಾಮ್ ರವರ ಮಗ, 'ಶ್ರೀಕಾಂತ್ ವೆಂಕಟರಾಮ್' ಹತ್ತಿರ, ಉಪಲಭ್ದವಿವೆ. ಸುದ್ದಿ ಮಾಧ್ಯಮದ ಪ್ರಕಾರ,ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಚಿತ್ರದಲ್ಲಿ 'ಬೆಳ್ಳನೆ ಬೆಳಗಾಯಿತು ಗೀತೆ', ಯನ್ನು ಲತಾರವರು ಹಾಡಿದ್ದಾರೆ. ’ಒಂದೇ ಬಳ್ಳಿಯ ಹೂಗಳು’ ಚಿತ್ರದಲ್ಲಿ 'ಮಹಮ್ಮದ್ ರಫಿ' ಯವರು ಕಂಠದಾನಮಾಡಿದ ’ನೀನೆಲ್ಲಿ ನಡೆವೆ ದೂರ', ಎಂಬ ಗೀತೆ, ಕರ್ನಾಟಕದ ಜನತೆಯನ್ನು ಪುಳಕಿತಗೊಳಿಸಿವೆ.

'ಡಾ.ವಿಜಯರವರ ಮಾಹಿತಿಗಳು'

ಬದಲಾಯಿಸಿ

ಸನ್, ೧೯೫೪ ರಲ್ಲಿ 'ಕನ್ನಡ ಚಲನಚಿತ್ರರಂಗದ ಇತಿಹಾಸ ಪುಸ್ತಕ'ದ, ಪ್ರಮುಖ ಸಂಪಾದಕರೊಬ್ಬರಲ್ಲದ ಡಾ.ವಿಜಯ 'ಆಶಾ ನಿರಾಶ' ಚಿತ್ರದ ಬಗ್ಗೆ ಬೆಳಕು ಚಿಲ್ಲಿದ್ದಲ್ಲದೆ, ಹಲವು ವಿಶಯಗಳನ್ನು ಬಹಿರಂಗಗೊಳಿಸಿದ್ದಾರೆ. ’ಸುಪ್ರಸಿದ್ಧ ಹಿಂದಿ ಗಾಯಕರೆನಿಸಿರುವ ಲತಾ ಮಂಗೇಶ್ಕರ್ ಮತ್ತು ಮಹಮ್ಮದ್ ರಫಿ ಇವರು 'ಕರ್ನಾಟಕ ಆರ್ಟ್ಸ್ ಪ್ರೊಡಕ್ಷನ್ಸ್' ರವರ ’ಆಶಾ ನಿರಾಶಾ’ ವೆಂಬ ಕನ್ನಡ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಮತ್ತು ಮೀನಾಕ್ಷಿ ಇವರ ಬದಲಿಗೆ ಹಾಡುಗಳನ್ನು ಹಾಡಿದ್ದಾರೆ. ಹಿಂದಿ ಗಾಯಕರು ಹಾಡಿದ ಕನ್ನಡ ಭಾಷೆಯ ಹಾಡುಗಳು ಕರ್ನಾಟಕದಲ್ಲಿ ಜನಪ್ರಿಯವಾಗುವುದರಲ್ಲಿ ಸಂಶಯವಿಲ್ಲ. ಇವರು ಕನ್ನಡದಲ್ಲಿ ಹಾಡಿರುವುದು ಇದೇ ಮೊದಲು. ಅದೆ ರೀತಿ ಕರ್ನಾಟಕದ ಸುಪ್ರಸಿದ್ಧ ಗಾಯಕಿ ಹಾಗೂ ನಟಿಯಾದ ಅಮೀರ್ ಬಾಯಿ ಕರ್ನಾಟಕಿಯವರು ಒಂದೆರಡು ಹಾಡುಗಳನ್ನು ಹಾಡಿದ್ದಾರೆ. ಇವರ ಹಾಡುಗಳನ್ನು ಬಾಂಬೆಯ ಶ್ರೀ ಸೌಂಡ್ ಸ್ಟುಡಿಯೋ ವಿನಲ್ಲಿ ರೆಕಾರ್ಡ್ ಮಾಡಲಾಗಿದೆ. ’ಬಾನಾಡಿ’ ಮತ್ತು ’ಹರಿತಸ್’ ಎನ್ನುವವರು ಈ ಚಿತ್ರಕ್ಕೆ ಹಾಡುಗಳನ್ನು ಒದಗಿಸಿದ್ದಾರೆ. ಪ್ರಸಿದ್ಧ ಸಂಗೀತ ನಿರ್ದೆಶಕರದ ಶ್ರೀ ಬುಲೋನಿ ರಾಣಿಯವರು ಈ ಚಿತ್ರದ ಸಂಗೀತ ನಿರ್ದೇಶಕರು’

'ಆಶಾ ನಿರಾಶಾ,' ಚಲನಚಿತ್ರದ ಚಿತ್ರೀಕರಣ ಅರ್ಧದಲ್ಲೇ ನಿಂತಿತು

ಬದಲಾಯಿಸಿ

'ಲತಾ' ಹಾಡಿರುವ ನೃತ್ಯಗೀತೆ, ಮತ್ತು ಶೋಕಗೀತೆಗಳ ಸಹಿತ ಸಿ.ಡಿ.ಯಲ್ಲಿ ಲಭ್ಯವಿದೆ. ಅಂದಿನ ಜಮಾನದ ’ಪಳೆಯುಳಿಕೆಯಾಗಿ ಉಳಿದಿರುವ ಈ ಗೀತೆಗಳು ಕೇಳುಗರನ್ನು ಅರ್ಥಶತಮಾನದಷ್ಟು ದೂರಕ್ಕೆ ಕೊಂಡೊಯ್ಯುತ್ತವೆ. ಕಾರಣಾಂತರಗಳಿಂದ ಚಿತ್ರೀಕರಣ ಮಧ್ಯದಲ್ಲೇ ನಿಂತು, ಉಳಿದ ಭಾಗದ ಚಿತ್ರೀಕರಣಕ್ಕೆ ಮದರಾಸ್ ಗೆ ಹೋಗುವ ಬಗ್ಗೆ ಮಾತುಕಥೆಗಳ ದಾಖಲೆಗಳು ಸಿಕ್ಕಿವೆ. ನಿರ್ದೇಶಕಿ 'ಎನ್.ಕೆ.ಇಂದ್ರ' ಪ್ರಾಜೆಕ್ಟ್ ನಿಂದ ಹೊರಗೆಬಂದು ಕನ್ನಡದ ನಟ-ನಿರ್ದೇಶಕ, 'ಎಚ್.ಎಲ್.ಎನ್.ಸಿಂಹ' ಮುಂದೆಬಂದರು. ಅವರು ತಮ್ಮದೇ ಕಥೆ ಸಂಭಾಷಣೆಗೆ ಆದ್ಯತೆ ನೀಡಬೇಕೆಂದು ವೆಂಕಟರಾಮ್ ರವರನ್ನು ಒತ್ತಾಯಿಸಿದಾಗ, 'ಪ್ರಾಜೆಕ್ಟ್ 'ಅಲ್ಲಿಗೇ ನಿಂತುಹೋಯಿತು. ಮುಂಬಯಿ ಸ್ಟುಡಿಯೊಗಳ ನಿರ್ವಹಣೆಯ ಖರ್ಚನ್ನು ಹೊಂದಿಸುವುದು ಕಷ್ಟವಾಯಿತು. ಈ ದುಬಾರಿ ವ್ಯವಹಾರದಿಂದಾಗಿ ಕನ್ನಡ ಚಿತ್ರಗಳ್ಯಾವೂ ಸಂಪೂರ್ಣವಾಗಿ ಮುಂಬಯಿನಲ್ಲಿ ನಿರ್ಮಾಣವಾದ ದಾಖಲೆಗಳಿಲ್ಲ. ನಂತರ ನಿರ್ಮಾಣವಾದ, ಚಿರಂಜೀವಿ,ಸುಭದ್ರ ಮುಂತಾದ ಚಿತ್ರಗಳು ಪುಣೆಯಲ್ಲಿನಿರ್ಮಾಣಗೊಂಡವು. ಪ್ರಖ್ಯಾತ ಚಿತ್ರ, ಚಂದ್ರಹಾಸ ದ ಅರ್ಧದಷ್ಟು ಮುಂಬಯಿನಲ್ಲಿ ಉಳಿದರ್ಧ ಕೊಲ್ಲಾಪುರದಲ್ಲಿ ಚಿತ್ರೀಕರಣಗೊಂಡವು. ಹೆಚ್ಚಿನ ಚಿತ್ರಗಳು, 'ಮದ್ರಾಸ್', 'ಕೊಯಂಬತ್ತೂರ್', 'ಸೇಲಂ', ಹಾಗೂ 'ಮೈಸೂರ್' ಗಳಲ್ಲಿ ತಯಾರಾದವು. ಮರಾಠಿ ಚಿತ್ರನಿರ್ಮಾಪಕರೂ 'ಪುಣೆ' ಗೆ ಗುಳೆಹೋದ ಸಂಗತಿಗಳಿವೆ. 'ಆಶಾ ನಿರಾಶಾ' ಚಿತ್ರನಿರ್ಮಾಣದ ಎಲ್ಲ ಕಲಾವಿದರು ಜೀವಂತವಾಗಿಲ್ಲ. ಹೆಸರಾಂತ ಕಲಾವಿದರಾದ, 'ವೈಜಯಂತಿ ಮಾಲ', 'ಲತಾ ಮಂಗೇಶ್ಕರ್', ಇವರಿಗೆ,ಚಿತ್ರನಿರ್ಮಾಣದ ಬಗ್ಗೆ ನೆನಪಿರುವ ಬಗ್ಗೆ ಮಾಹಿತಿಯಿಲ್ಲ. 'ಲತಾ','ರಫಿ' ಹಾಡಿದ ಹಾಡುಗಳ ಸಿ.ಡಿ.ಬಿಟ್ಟರೆ, ಹೆಚ್ಚಿನ ಸಂಗತಿಗಳು ಯಾರಿಗೂ ನೆನಪಿಲ್ಲ.

ಶ್ರೀಕಾಂತ್,ಈಗಿನ ವ್ಯವಸ್ಥಾಪಕರು

ಬದಲಾಯಿಸಿ

'ಶ್ರೀಕಾಂತ್ ವೆಂಕಟರಾಮ್', ಮುಂಬಯಿನ ಫಿಲ್ಟರ್ ಕಾಫಿಪುಡಿ ನಿರ್ಮಾಪಕರಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರ ಕಾಫಿಪುಡಿಯ ದರವನ್ನು ಬೇರೆ ಕಾಫಿಪುಡಿ ಅಂಗಡಿಯರು ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ಕೇವಲ ಕಾಫಿಪುಡಿಯಷ್ಟೆ 'ಮೈಸೂರ್ ಕನ್ಸರ್ನ್ಸ್' ನ ಮಹತ್ವದ ಮಾರಾಟದ ವಸ್ತು. ಮೊದಲು ಕೊಯಂಬತ್ತೂರ್ ಬೆಣ್ಣೆ, ಒಂಟಿಕೊಪ್ಪಲ್ ಪಂಚಾಂಗ, ಬಿಸ್ಕತ್, ಚಾಕಲೇಟ್ಸ್, ಮೊದಲಾದ ವಸ್ತುಗಳನ್ನೂ ಮಾರಾಟಮಾಡುತ್ತಿದ್ದರು. ಈಗ ಅವೆಲ್ಲವನ್ನೂ ನಿಲ್ಲಿಸಲಾಗಿದೆ. ಶ್ರೀಕಾಂತ್ ಬೆಂಗಳೂರಿನಲ್ಲೂ ಕಾಫಿಪುಡಿಯನ್ನು ಮಾರಾಟಮಾಡುವ ಒಂದು ಶಾಖೆಯನ್ನು ತೆರೆದಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. 'ಮಾಟುಂಗಾ ಕನ್ನಡಿಗ್ರು ಯಾವುದರಲ್ಲೂ ಕಡಮೆ ಇಲ್ಲ' September 11, 2012
  2. Where to grab Mumbai's best cup of 'kaapi'
  3. 'ಮುಂಬಯಿಯಲ್ಲಿ ಕನ್ನಡ ಡಿಂಡಿಮ ಬಾರಿಸಿದ ಜಿ.ವಿ.ರಂಗಸ್ವಾಮಿ, 'ಒನ್ ಇಂಡಿಯ ಪತ್ರಿಕೆ',ಮಾರ್ಚ್,೧೪,೨೦೦೨, ಪ್ರೊ.ಜಿ.ವಿ.ಯವರ ಲೇಖನ