ಉತ್ತಮ ಕಾಫಿ ತಯಾರಿಕೆ

ಮೊದಲನೆಯದಾಗಿ ಕಾಫಿ ಹೆಚ್ಛಾಗಿ ದಾಕ್ಷಿಣಾತ್ಯರು ಬಳಸುವ ಪೇಯ. ಈಗ ಅದು ಎಲ್ಲಾ ಸ್ಥಳಗಳಲ್ಲೂ ದೊರೆಯುತ್ತದೆ. ದಕ್ಷಿಣ ಭಾರತದ ಕಾಫಿಪ್ರಿಯರ ಕೆಲವು ಆಶಯಗಳು ಇತರ ಕಾಫಿ ಕುಡಿಯುವ ಗ್ರಾಹಕರಿಗೆ ಅನ್ವಯವಾಗುವುದಿಲ್ಲ. ಮದ್ರಾಸ್ ನಲ್ಲಿ ಕಾಫಿ ತಯಾರಿಸಿದ ಮೇಲೆ ಅದನ್ನು ಒಂದು ಕಪ್ ಮತ್ತು ಬಸಿಪಾತ್ರೆಗೆ ರಭಸದಿಂದ ಸುರಿದು ಆರಿಸಿ ಬೆರಸುವ ಕ್ರಮವನ್ನು ನಾವು ಕೇವಲ ಚೆನ್ನೈನಲ್ಲಿ ಮಾತ್ರ ಕಾಣಬಹುದು. ಕಾಫಿ ತಯಾರಿಕೆಯಲ್ಲಿ ಹಲವು ವಿಧಗಳಿವೆ. ಫಿಲ್ಟರ್ ಪಾತ್ರೆಗಳು ಇನ್ನೂ ಮಾರುಕಟ್ಟೆಯಲ್ಲಿ ಲಗ್ಗೆ ಹಾಕದ ಕಾಲದಲ್ಲಿ ಪಾರಂಪಾರಿಕ ವಿಧಾನದಲ್ಲಿ ಕಾಫಿಗೆಂದೇ ತೆಗೆದಿಟ್ಟಿರುವ ಕಾಫಿಬಣ್ಣದ ಬಟ್ಟೆಯಲ್ಲಿ ಸೋಸಿ, ತಯಾರಿಸುವ ಪದ್ಧತಿ ಅತಿಪ್ರಾಚೀನವಾದದ್ದು. ಈ ಬಣ್ಣದ ಬಟ್ಟೆ ಮೊದಲು ಬಿಳಿಯದೇ ಆಗಿತ್ತು. ಅದರಲ್ಲಿ ಕಾಫಿ ಡಿಕಾಕ್ಷನ್ ಸೋಸಿ ಸೋಸಿ, ಕಾಲಾನುಕ್ರಮದಲ್ಲಿ ಅದು ಕಾಫಿ ಬಣ್ಣವನ್ನು ತಾಳಿ ಕಾಫಿಯ ಪರಿಮಳಕ್ಕೆ ಸರಿಹೊಂದಿತು. ನಂತರ ಬಂದದ್ದು, 'ಪರ್ಕ್ಯುಲೇಟರ್ ವಿಧಾನ' ; ಕೊನೆಯಲ್ಲಿ ಕುದಿಸಿ ತಯಾರಿಸುವ 'ಫಿಲ್ಟರ್ ಕಾಫಿ', ಈಗ ಪ್ರಚಲಿತದಲ್ಲಿದೆ.

ಕಾಫಿ ಹೂ
RoastedCoffeeBeans

ಬಟ್ಟೆಯಲ್ಲಿ ಸೋಸಿ ತಯಾರಿಸುವ ಪದ್ಧತಿ ಬದಲಾಯಿಸಿ

ಮೊದಲು ನೀರನ್ನು ಹಿಡಿ ಮೂತಿ ಇರುವ ಪಾತ್ರೆಯಲ್ಲಿ ಕುದಿಸಿ, ಕಾಫಿ ಸೋಸಲು ಅನುಕೂಲವರಿರುವ ,ಕಾಫಿಬಣ್ಣದ ಬಟ್ಟೆ,ಯನ್ನು ಖಾಲಿ ಪಾತ್ರೆಯ ಮೇಲೆ ಹರಡಿ ಕೈಯಿಂದ ಸ್ವಲ್ಪ ಹಳ್ಳ ಮಾಡಾಬೇಕು. ಅಗತ್ಯಕ್ಕೆ ತಕ್ಕಷ್ಟು ಕಾಫಿ ಪುಡಿಯನ್ನು ಹಾಕಬೇಕು. ಅದರ ಮೇಲೆ ಕಾಯಿಸಿದ ಬಿಸಿನೀರು ಸುರಿದು ಚೆನ್ನಾಗಿ ಹಿಂಡಿ ಡಿಕಾಕ್ಷನ್ ತಯರಿಸಿ ಹಾಲು, ಸಕ್ಕರೆ ಬೆರೆಸಿ. ಹಬೆಯಾಡುವ ಬಿಸಿ ಬಿಸಿ ಕಾಫಿ ಸಿದ್ಧ.

ಪರ್ಕ್ಯುಲೇಟರ್ ವಿಧಾನ ಬದಲಾಯಿಸಿ

ಅಂಗಡಿಯಲ್ಲಿ ಉಪಲಭ್ದವಿರುವ ಕಾಫಿ ಡಿಕಾಕ್ಷನ್ ತಯಾರಿಸುವ ಒಂದು ಉಪಕರಣವೇ 'ಪರ್ಕ್ಯುಲೇಟರ್'. ಎರಡುಪಾತ್ರೆಗಳನ್ನು ಒಂದ ಮೇಲೆ ಒಂದರಂತೆ ಜೋಡಿಸಿಟ್ಟಿರುವ ಕೆಳಭಾಗದಲ್ಲಿ ನೀರು ಹಾಕಿ, . ಮಧ್ಯದಲ್ಲಿ ಕಾಫಿ ಪುಡಿ, ಒಲೆಯಮೇಲಿಡಿ, ಉರಿ ಹೆಚ್ಚ್ಚಿರಲಿ. ನೀರು ಕತ ಕತ ಮರಳಿದ ಬಳಿಕ ಮೇಲ್ಭಾಗ ಕೋನಾಕಾರದ ಕೊಳವೆಯಿಂದ ಹದವಾದ ಡಿಕಾಕ್ಶನ್ ಮೇಲೆ ಬರುತ್ತದೆ. ನೀರು ಮೇಲ್ಭಾಗ ಜಾರ್ ನಲ್ಲಿ ಶೇಖರವಾಗುತ್ತದೆ. ಯಥಾಪ್ರಕಾರ ಸಕ್ಕರೆ ಹಾಲು ಬೆರೆಸಿ ಉಪಯೋಗಿಸಿ.

ಫಿಲ್ಟರ್ ಕಾಫಿ ಬದಲಾಯಿಸಿ

ಇದು ಅತಿ ಜನಪ್ರಿಯ. ಪಾತ್ರೆಅಂಗಡಿಯಲ್ಲಿ ದೊರಕುವ 'ಫಿಲ್ಟರ್ ತನ್ನಿ. ಇದರಲ್ಲಿ ಎರಡುಭಾಗವಿರುತ್ತದೆ. ಮೇಲ್ಭಾಗದ ಜಾರ್ ನ ತಳದಲ್ಲಿ ಚಿಕ್ಕ ಚಿಕ್ಕ ರಂಧ್ರಗಳಿರುತ್ತವೆ. ಅವು ಚೆನ್ನಾಗಿ ಅದರಲ್ಲಿ ಗಸಿ ಶೇಖರಿಸುವುದಿಲ್ಲ. ಕಾಫಿ ಪುಡಿ ಹಾಕಿ, ಒಟ್ಟಡ ತರಿಸುವ ಜಾಲರಿಯನ್ನು ಇಡಿ. ಮರಳಿಸಿದ ನೀರನ್ನು ಹಾಕಿ. ಮುಚ್ಚಳ ಮುಚ್ಚಿ. ಡಿಕಾಕ್ಷನ್ ಸ್ವಲ್ಪಹೊತ್ತಿನಲ್ಲಿ ಕೆಳಗೆ ತೊಟ್ಟುತೊಟ್ಟಾಗಿ ಇಳಿಯುತ್ತದೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ.

ಸ್ಟ್ರಾಂಗ್ ಕಾಫಿ ಬದಲಾಯಿಸಿ

ಇದನ್ನು ತಯಾರಿಸಲು ಮೂರೂ ವಿಧಾನಗಳು ಬಳಕೆಯಲ್ಲಿವೆ. ೨೦ ಗ್ರಾಂ ಕಾಫಿಪುಡಿಗೆ ೩೦೦ ಮಿ.ಲೀ ಕುದಿಯುವ ನೀರು ಹಾಕಿ. ಈ ಪ್ರಮಾಣವನ್ನು ಕಾಯ್ದುಕೊಂಡರೆ ರುಚಿಯಾದ ಕಾಫಿ ದೊರೆಯುವುದು. ಮೊದಲು ನಿರ್ಧರಿಸಿ. 'ಸ್ಟ್ರಾಂಗ್,' 'ಲೈಟ್', ಅಥವ 'ಎಕ್ಸ್ಟ್ರಾ ಸ್ಟ್ರಾಂಗ್ ಕಾಫಿ'ಯ ಅಗತ್ಯವಿದ್ದರೆ, ನಿಮ್ಮ ರುಚಿಗೆ ತಕ್ಕಹಾಗೆ ಕಾಫೀಪೌಡರ್ ಬಳಸಬೇಕು. ಎಲೆಕ್ಟ್ರಿಕ್ ಫಿಲ್ಟರ್ ಉಪಯೋಗಿಸುವ ಗ್ರಾಹಕರು, ಕಂಪೆನಿಯವರು ನಮೂದಿಸಿರುವ ಕೈಪಿಡಿಯನ್ನು ಅನುಸರಿಸುವುದು ಅತ್ಯಾವಶ್ಯಕ ,

ಉತ್ತಮ ಕಾಫಿ ತಯಾರಿಕೆಗೆ ಬೇಕಾದ ಸಿದ್ಧತೆಗಳು ಬದಲಾಯಿಸಿ

  • ಕಾಫಿಪುಡಿಯನ್ನು ಒಳ್ಳೆಯ, ತಾಜಾ ಪುಡಿಯನ್ನು ಸಿದ್ಧಪಡಿಸುವ ವಿಶ್ವಸನೀಯ ಅಂಗಡಿಯಲ್ಲೇ ಕೊಳ್ಳಿರಿ.
  • ಕಾಫಿಪುಡಿಯನ್ನು 'ಟಪ್ಪರ ವೇರ್'ನಲ್ಲಿಡುವುದು ಅತಿ ಮುಖ್ಯ.. ಪರಿಮಳ ಹೊರಗೆ ಹೋಗದಂತೆ ತಡೆಯುತ್ತದೆ.
  • ಫಿಲ್ಟರ್ ಪಾತ್ರೆಯನ್ನು ಬಿಸಿನೀರಿನಲ್ಲಿ ತೊಳೆದು ಶುದ್ಧಗೊಳಿಸಿ. ಒಳಗಿನ ರಂಧ್ರಗಳು ಶುದ್ಧಗೊಂಡು ಸರಾಗವಾಗಿ ಕೆಳಗೆ ಇಳಿಯಲು ಅನುಕೂಲ.
  • ತಾಜಾ ಹಾಲು ಗಟ್ಟಿ ತಾಜಾ ಕಾಫಿ ಪೌಡರ್ ಕಾಫಿಗೆ ಸಕ್ಕರೆ ಸ್ವಲ್ಪ ಕಡಿಮೆ ಇರಬೇಕು.
  • ಬಳಸಿದ ಕಾಫಿಪೌಡರನ್ನು ಮತ್ತೆ ಬಳಸಬಾರದು. ಫಿಲ್ಟರ್ನಲ್ಲಿ ಒಮ್ಮೆ ಬಳಸಿದ ಪೌಡರ್ ಮೇಲೆ ಹೊಸ ಪೌಡರ್ ಸೇರಿಸಬಾರದು.
  • ಇಷ್ಟ ಪಡುವುದಾದರೆ ಪುಡಿಮಾಡಿದ ದಾಲ್ಚಿನ್ನಿ, ಏಲಕ್ಕಿ, ಅಥವಾ ತುಳಸಿ ಪುಡಿ ,ಸೇರಿಸಿದರೆ ಕಾಫಿಯ ಸ್ವಾದ ಹೆಚ್ಚ್ಚಬಹುದು.
  • ಇಲ್ಲಿ ಸಾಮಾನ್ಯವಾಗಿ ದಕ್ಷಿಣಾತ್ಯರು ಯಾವ ಬೆರಕೆಯನ್ನೂ ಇಷ್ಟಪಡುವುದಿಲ್ಲ. ಆದರೆ ಉತ್ತರ ಭಾರತೀಯರು, ಹೆಚ್ಛಾಗಿ ಚಹಾ ಸೇವನೆಮಾಡುತ್ತಾರೆ. ಹಾಗಾಗಿ ಇಲಾಯ್ಚಿ, ಅದರಖ್, ಮತ್ತು ತುಳಸಿ ಎಸೆನ್ಸ್ ಸೇರಿಸಲು ಇಷ್ಟಪಡುತ್ತಾರೆ. ಇದು ಪ್ರತಿಯೊಬ್ಬರ ಬಳಕೆಯ ವಿಧಾನದ ಮೇಲೆ ನಿರ್ಧರಿಸಲ್ಪಡುತ್ತದೆ.
  • ಶುಂಠಿಯನ್ನು ಅದ್ರಕ್ ಜಜ್ಜಿ ಜೊತೆ ಬಳಸಿದರೆ ನೆಗಡಿ ಕಡಿಮೆಯಾಗುತ್ತದೆ.
  • ಡಿಕಾಕ್ಷನ್ ತಯಾರಾದ ಬಳಿಕ ಅದರ ಮೇಲೆ ತಣ್ಣೀರನ್ನು ಕ್ಷುಮಿಸುವ ಪರಿಪಾಠವಿದೆ. ಇದರಿಂದ ಅದು ರಾಡಿಯಾಗದೆ ಏಕಪ್ರಕಾರವಾಗಿ, ತಿಳಿಯಾಗುತ್ತದೆ.
  • ಬಹಳ ಸ್ಟ್ರಾಂಗ್ ಬೇಕಾದರೆ, ಹರಳು ಸಕ್ಕರೆ ಬೆರೆಸಿ.
  • ಕಾಫಿ ತಯಾರಾದ ನಂತರ ಸೇವಿಸಿ. ಆದರೆ, ಅದನ್ನು ಇಟ್ಟು ಮತ್ತೆ ಮತ್ತೆ ಬಿಸಿಮಾಡಿದರೆ ಅದರ ಹದ ಸರಿಬರದೆ, ರುಚಿಯಲ್ಲಿ ನಿರಾಶೆಯಾಗುತ್ತದೆ.