ಅಮೀರ್ ಬಾಯಿ ಕರ್ನಾಟಕಿ
ರಾಷ್ಟ ಮಟ್ಟದಲ್ಲಿ ಕನ್ನಡದ ಕೀರ್ತಿ ಬೆಳಗಿದ ಗಾಯಕಿ 'ಅಮೀರ್ ಬಾಯಿ ಕರ್ನಾಟಕಿ' ಜನಿಸಿದ್ದು ೧೯೧೧ ಜುಲೈ ೧೨.ಈಗಿನ ಬಾಗಲ ಕೋಟೆ ಜಿಲ್ಲೆಯ ಬೀಳಗಿಯಲ್ಲಿ.ತಂದೆ ಹಸನ್ಸಾಬ್ ತಬಲಾ ಕಲಾವಿದ,ತಾಯಿ ಅಮೀನ,ಆರು ಜನ ಮಕ್ಕಳಲ್ಲಿ ಅಮೀರ್ ಮತ್ತು ಗೋಹರ್ ತಮ್ಮ ಕಂಠ ಸಿರಿಯಿಂದ ಪ್ರಸಿದ್ದರಾಗಿದ್ದರು.ಬಾಲಗಂಧರ್ವರು ಅವರನ್ನು ರಂಗಭೂಮಿಗೆ ಕರೆತಂದರು,ಮುಂದೆ ಗೋಹರ್ ಬಾಲ ಗಂದರ್ವರನ್ನೇ ವಿವಾಹವಾದರು. ಅಮೀರ್ ಬಾಯಿ ರಂಗಭೂಮಿಯಲ್ಲಿದ್ದಾಗ ಹೆಚ್.ಎಂ.ವಿ.ಹೊರತಂದ ಖವಾಲಿಗಳ ಗ್ರಾಮಾ ಫೋನ್ ಪ್ಲೇಟ್ ಪ್ರಸಿದ್ದವಾಗಿತ್ತು.ಅದು ಅಮೀರ್ ಬಾಯಿಯವರ ಬೆಳ್ಳಿ ತೆರೆ ಪ್ರವೇಶಕ್ಕೆ ನಾಂದಿಯಾಯಿತು.೧೯೨೬ರಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಅವಕಾಶ ಸಿಕ್ಕಾಗ ಮುಂಬೈಗೆ ಬಂದರು.'ವಿಷ್ಣು ಭಕ್ತಿ"ಅವರ ಅಭಿನಯದ ಮೊದಲ ಚಿತ್ರ."ಕಿಸ್ಮತ್ 'ಇವರಿಗೆ ಪ್ರಸಿದ್ದಿ ತಂದುಕೊಟ್ಟ ಚಿತ್ರಗಳಲ್ಲಿ ಒಂದು.೧೯೪೭ರಲ್ಲಿ "ಅಮ್ರಪಾಲಿ"ಮತ್ತು "ಶಿಕಾರಿ"ಚಿತ್ರಗಳ ಗೀತೆಗಳು ಪ್ರಸಿದ್ದವಾದವು."ಶೆಹೆನಾಜ್"ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಕೂಡ ಮಾಡಿದ್ದರು.ನಮನ 'ವಿಷ್ಣು ಭಕ್ತಿ" ಸಿನಿಮಾದಿಂದ "ಬಾಯ್ ಫ್ರೆಂಡ್'ವರೆಗೆ ಒಟ್ಟು ೪೬ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಮರಾಠಿ ಹಾಗೂ ಗುಜರಾತಿ ಚಿತ್ರ ರಂಗದಲ್ಲೂ ಪ್ರಸಿದ್ದಿ ಪಡೆದಿದಾರೆ. ಅಕಾಶವಾಣಿಗಾಗಿ ಅಮೀರ್ ಬಾಯಿ ಕನ್ನಡ ಜಾನಪದ ಮತ್ತು ಭಾವಗೀತೆಗಳನ್ನು ಹಾಡಿದ್ದಾರೆ . ಅಮೀರ್‌ಬಾಯಿಗೆ ಖ್ಯಾತಿ ತಂದುಕೊಟ್ಟ ಚಿತ್ರವೆಂದರೆ ೧೯೪೩ರಲ್ಲಿ ಅಶೋಕ್ ಕುಮಾರ್ ನಾಯಕರಾಗಿ ನಟಿಸಿದ ‘ಕಿಸ್ಮತ್’ ಚಿತ್ರ. ಇದರಲ್ಲಿ ನಾಯಕಿಯಾಗಿ ನಟಿಸಿ, ಗಾಯಕಿಯಾಗಿ ಹಾಡಿದ ಹಾಡುಗಳು ಅಂದಿನ ತರುಣರಿಗೆ ಹುಚ್ಚು ಹಿಡಿಸಿದ್ದವು. ಅನಿಲ್ ಬಿಸ್ವಾಸ್ ಎಂಬ ಸಂಗೀತ ನಿರ್ದೇಶಕರಿಂದ ರಾಗ ಸಂಯೋಜಿಸಲ್ಪಟ್ಟ ಅಮೀರ್‌ಬಾಯಿ ಯವರ ಹಾಡುಗಳ ಮೂಲಕ ಜನಪ್ರಿಯವಾದ ಈ ಚಿತ್ರ ೧೯೪೩ರಲ್ಲಿ ೧ ಕೋಟಿಗೂ ಹೆಚ್ಚು ಹಣ ಗಳಿಸಿ ಹಿಂದಿ ಚಿತ್ರರಂಗದಲ್ಲಿ ದಾಖಲೆ ಸ್ಥಾಪಿಸಿತು. ಅಮೀರ್ ಬಾಯಿಯವರ ಜನಪ್ರಿಯ ಕನ್ನಡ ಹಾಡಾದ "ಪ್ರಿಯ ಮದುವನದಲಿ" ಇಂದಿಗೂ ಜನಪ್ರಿಯ.