ಮುಧೋಳ್ ಹೌಂಡ್ ಅನ್ನು ಕಾರವಾನ್ ಹೌಂಡ್ ಎಂದೂ ಕರೆಯುತ್ತಾರೆ. ಇದು ಭಾರತಸೀಹೌಂಡ್‌ನ ತಳಿಯಾಗಿದೆ.[]

ಮುಧೋಳ್ ಹೌಂಡ್

ಕೆನಲ್ ಕ್ಲಬ್ ಆಫ್ ಇಂಡಿಯಾ(ಕೆಸಿಐ) ಮತ್ತು ಇಂಡಿಯನ್ ನ್ಯಾಷನಲ್ ಕೆನಲ್ ಕ್ಲಬ್ (ಐಎನ್‌ಕೆಸಿ) ವಿವಿಧ ಹೆಸರುಗಳಲ್ಲಿ ಈ ತಳಿಯನ್ನು ಗುರುತಿಸುತ್ತದೆ. ಕೆಸಿಐ ಇದನ್ನು ಕಾರವಾನ್ ಹೌಂಡ್ ಎಂದು ನೋಂದಾಯಿಸಿದೆ ಮತ್ತು ಐಎನ್‌ಕೆಸಿ ಮುಧೋಳ್ ಹೌಂಡ್ ಎಂಬ ಹೆಸರನ್ನು ಬಳಸುತ್ತದೆ.

೨೦೦೫ರಲ್ಲಿ ದೇಶದ ಪರಂಪರೆಯನ್ನು ಆಚರಿಸಲು ಭಾರತೀಯ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಬಿಡುಗಡೆ ಮಾಡಿದ ಅಂಚೆಚೀಟಿಗಳಲ್ಲಿ ಕಾಣಿಸಿಕೊಂಡಿರುವ ನಾಲ್ಕು ಭಾರತೀಯ ನಾಯಿ ತಳಿಗಳಲ್ಲಿ ಮುಧೋಳ್ ಹೌಂಡ್ ಒಂದಾಗಿದೆ. ಕರ್ನಾಟಕಮುಧೋಳ ಪಟ್ಟಣ ಮತ್ತು ಸುತ್ತಮುತ್ತಲಿನ ಸುಮಾರು ೬೫೦ ಕುಟುಂಬಗಳು ನಾಯಿಮರಿಗಳ ಮಾರಾಟಕ್ಕಾಗಿ ಈ ತಳಿಯನ್ನು ಸಾಕುತ್ತಿದರು.

ಇತಿಹಾಸ

ಬದಲಾಯಿಸಿ

ಈ ತಳಿಯು ಕರ್ನಾಟಕಮುಧೋಳ ತಾಲೂಕಿನಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಪ್ರಿಯವಾಗಿ ಕಂಡುಬರುತ್ತದೆ. ಆದ್ದರಿಂದ ಈ ತಳಿಗೆ ಮುಧೋಳ್ ಹೌಂಡ್ ಎಂದು ಹೆಸರು ಬಂದಿದೆ.[]

ಮುಧೋಳದ ರಾಜೇಸಾಹೇಬ್ ಮಾಲೋಜಿರಾವ್ ಘೋರ್ಪಡೆ (೧೮೮೪-೧೯೩೭) ಮುಧೋಳ್ ಹೌಂಡ್ ಅನ್ನು ಪುನರುಜ್ಜೀವನಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.[] ೧೯೯೦ರ ದಶಕದ ಆರಂಭದಲ್ಲಿ ಇಂಗ್ಲೆಂಡಿಗೆ ಭೇಟಿ ನೀಡಿದಾಗ, ಮುಧೋಳ ಸಂಸ್ಥಾನದ ಮಹಾರಾಜರು ಕಿಂಗ್ ಜಾರ್ಜ್ ಗೆ ಒಂದು ಜೋಡಿ ಹೌಂಡ್‌ಗಳನ್ನು ಉಡುಗೊರೆಯಾಗಿ ನೀಡಿದರು. ಇದು ಮುಧೋಳ್ ಹೌಂಡ್ ತಳಿಯನ್ನು ಜನಪ್ರಿಯಗೊಳಿಸಿತು.[][]

ಭಾರತೀಯ ಸೇನೆಯು ಗಡಿ ರಕ್ಷಣಾ ಕರ್ತವ್ಯಗಳಿಗೆ ಮುಧೋಳ್ ಹೌಂಡ್ ಅನ್ನು ಬಳಸುವ ಬಯಕೆಯನ್ನು ವ್ಯಕ್ತಪಡಿಸಿದೆ. ಮೀರತ್‌ನಲ್ಲಿರುವ ಸೇನೆಯ ರಿಮೌಂಟ್ ವೆಟರ್ನರಿ ಕಾರ್ಪ್ಸ್‌ನಲ್ಲಿ ಪರೀಕ್ಷೆಗಾಗಿ ಆರು ಮುಧೋಳ್ ನಾಯಿಗಳನ್ನು ಬಳಸಿಕೊಂಡಿದೆ. ಕರ್ನಾಟಕಬಾಗಲಕೋಟೆ ಜಿಲ್ಲೆಯ ಮುಧೋಳ ಬಳಿಯ ತಿಮ್ಮಾಪುರದಲ್ಲಿರುವ ನಾಯಿಗಳ ಸಂಶೋಧನೆ ಮತ್ತು ಮಾಹಿತಿ ಕೇಂದ್ರದಲ್ಲಿ ಆಯ್ಕೆಯಾದ ನಂತರ ಈ ನಾಯಿಗಳನ್ನು ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಪಶುವೈದ್ಯಕೀಯ ಘಟಕದಲ್ಲಿ ಸಾಕಲು ಪ್ರಾರಂಭಿಸಿದರು.[]

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Sowmyashree, B.L., Jayashree, R., Kumar, S.N. and Nagaraja, R., Microsatellite DNA Polymorphism Studies in Mudhol Hound Dog Native of India. Indian Journal of Animal Research, 2021 (1) p.6.[೧]
  2. "Mudhol Hound has its day". The Hindu. 5 March 2007. Archived from the original on 8 January 2008. Retrieved 29 July 2014.
  3. Menasinakai, Sangamesh (2 August 2015). "Mudhol's top dogs". The Times of India, Newspaper. Retrieved 2 August 2015.
  4. Jadeja, Arjunsinh (27 January 2015). "Tracking the hounds of Mudhol". No. Bangalore. Deccan Herald. Retrieved 2 February 2015.
  5. Jadeja, Arjunsinh (23 July 2013). "Mudhol's royal chapter". No. Bangalore. Deccan Herald. Retrieved 2 February 2015.
  6. "Mudhol hounds now get a fighting chance". The Hindu. 13 November 2015. Retrieved 6 May 2016.