ಮಹಾಬಲ ಸೀತಾಳಭಾವಿಯವರು ಉತ್ತರಕನ್ನಡದ ಸಿದ್ಧಾಪುರದಲ್ಲಿ ೧೯೮೩ರಲ್ಲಿ ಜನಿಸಿದರು. ಇವರು ಯುವ ಪತ್ರಕರ್ತರಾಗಿ, ವಿದ್ವಾಂಸರಾಗಿ ಪ್ರಸಿದ್ದರು.

ಆರಂಭಿಕ ಜೀವನ

ಬದಲಾಯಿಸಿ

ಮಹಾಬಲ ಸೀತಾಳಭಾವಿಯವರ ತಂದೆಯ ಹೆಸರು ವಿಶ್ವೇಶ್ವರ ಭಟ್ ಸೀತಾಳಭಾವಿ. ಬಾಲ್ಯದಿಂದಲೂ ಅವರಿಗೆ ಸಿನಿಮಾ ಹಾಗೂ ಸಾಹಿತ್ಯ ವಿಚಾರಗಳಲ್ಲಿ ಆಸಕ್ತಿ ಇತ್ತು. ಇವರು ಸಂಸ್ಕೃತ ಹಾಗೂ ಆಂಗ್ಲ ಭಾಷೆಯ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಶಿಕ್ಷಣ

ಬದಲಾಯಿಸಿ

ಮಹಾಬಲ ಸೀತಾಳಭಾವಿಯವರು ತಮ್ಮ ಉನ್ನತ ವಿದ್ಯಾಬ್ಯಾಸವನ್ನು ಮೈಸೂರಿನಲ್ಲಿ ಪಡೆದರು. ಅವರು ಸಂಸ್ಕ್ರತ ತರ್ಕಶಾಸ್ತ್ರ ವಿದ್ವತ್ ,ಮಾಧ್ಯಮ ಹಾಗು ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಪಡೆದರು.

ವೃತ್ತಿ ಜೀವನ

ಬದಲಾಯಿಸಿ

ಉದಯ ಟಿವಿ, ಸುವರ್ಣ ನ್ಯೂಸ್ ವಾಹಿನಿಗಳಲ್ಲಿ ಹಾಗೂ ಉದಯವಾಣಿಯಲ್ಲಿ ದುಡಿದಿರುವ ಅವರು ಪ್ರಸ್ತುತ ಕನ್ನಡಪ್ರಭ ದೈನಿಕದ ಉಪ ಸುದ್ದಿ ಸಂಪಾದಕರಾಗಿದ್ಧಾರೆ. ಇವರ ಪತ್ನಿ ರೇಖಾ, ಮಗಳು ಸುಷೀಮಾ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.[]

ಆಸಕ್ತಿಯ ಕ್ಷೇತ್ರಗಳು

ಬದಲಾಯಿಸಿ

ಪ್ರವಾಸ

  • ಛಾಯಗ್ರಹಣ

ಮುಖ್ಯ ಕೃತಿಗಳು

ಬದಲಾಯಿಸಿ
  • ನಿತ್ಯಜೀವನಕ್ಕೆ ಹತ್ತಿರದ ಸುಭಾಷಿತಗಳು
  • ನೂರೆಂಟು ಸುಭಾಷಿತಗಳು
  • ಮ್ಯಾನೇಜ್ಮೆಂಟ್ ಭಗವದ್ಗೀತೆ
  • ಚಾಣಕ್ಯನೀತಿ
  • ಆಂಟನ್ ಚೆಕಾ‌ಫ್ ಕಥೆಗಳು
  • ಲೋಕಪಾಲ: ಯಾಕಿಷ್ಟು ಗೊಂದಲ
  • ನಾಯಕತ್ವದ ದಾರಿ ಪಂಚತಂತ್ರದ ಮಾದರಿ
  • ಚಾಟು ಕವಿತೆಗೆ ಚುಟುಕು ಕತೆ
  • ವಾರನ್ ಬಫೆಟ್
  • ವಂದನಾಶಿವ
  • ಸುಂದರಲಾಲ ಬಹುಗುಣ
  • ೧೦೮ ಹಳೆ ಆಚಾರ ಹೊಸ ವಿಚಾರ
  • ಮ್ಯಾನೇಜ್ಮೆಂಟ್ ಕತೆಗಳು
  • ಇಂಟರ್ನೆಟ್ ಕಥೆಗಳು[]

ಅನುವಾದಿಸಿದ ಕೃತಿಗಳು

ಬದಲಾಯಿಸಿ
  • ಪ್ರಿಯಂವದೆಯ ಸ್ವಗತ ಹಿಂದಿಗೆ ಅನುವಾದಗೊಂಡಿದೆ
  • ಆಂಟನ್ ಚೆಕಾ‌ಫ್ ಕಥೆಗಳು
  • ಭಾಸನ ಐದು ನಾಟಕಗಳು
  • ಅಭಿಜ್ಞಾನ ಶಾಕುಂತಲ

ಪ್ರಶಸ್ತಿಗಳು

ಬದಲಾಯಿಸಿ
  • ಚೆನೈ ಅಂತರಾಷ್ಟ್ರೀಯ ಕಿರುಚಿತ್ರ ಮಂಡಳಿಯ ಪ್ರಶಂಸೆ
  • ಮುಂಬೈ,ದೆಹಲಿ ಹಾಗೂ ಅಮೇರಿಕಾ ಕನ್ನಡ ಸಂಘದ ಪ್ರಶಸ್ತಿ
  • ೨೦೦೫ರ ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತ ಸಂಘದ ಪ್ರಶಸ್ತಿ (೨೦೦೫)
  • ಛಾಯಗ್ರಹಣಕ್ಕೆ ಎರಡು ಬಾರಿ ರಾಜ್ಯ ಪ್ರಶಸ್ತಿ[]

ಉಲ್ಲೇಖ

ಬದಲಾಯಿಸಿ