ಮತ್ತೆ ಹಾಡಿತು ಕೋಗಿಲೆ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ


ಮತ್ತೆ ಹಾಡಿತು ಕೋಗಿಲೆ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಎಚ್. ಆರ್. ಭಾರ್ಗವ ಇದನ್ನು ನಿರ್ದೇಶಿಸಿದ್ದಾರೆ. ಇದನ್ನು ಎಸ್.ಶಂಕರ್ ನಿರ್ಮಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ವಿಷ್ಣುವರ್ಧನ್, ಬೇಬಿ ಶ್ಯಾಮಿಲಿ, ಅನಂತನಾಗ್, ಭವ್ಯ ಮತ್ತು ರೂಪಿಣಿ ಇದ್ದಾರೆ. ಅಂದಿನ ಸೂಪರ್ ಸ್ಟಾರ್ ಗಳಾದ ಅನಂತನಾಗ್ ಮತ್ತು ವಿಷ್ಣುವರ್ಧನ್ ಈ ಚಿತ್ರದಲ್ಲಿ ಮೊದಲ ಬಾರಿಗೆ ಜತೆಯಾಗಿ ಅಭಿನಯಿಸಿದ್ದಾರೆ. (ಕೆಲವು ವರ್ಷಗಳ ನಂತರ ಅವರು ಮತ್ತೆ ಒಟ್ಟಾಗಿ "ನಿಷ್ಕರ್ಷ" ಚಿತ್ರದಲ್ಲಿ ಅಭಿನಯಿಸಿದರು). ನಿರ್ದೇಶಕ ಭಾರ್ಗವ ಅವರು ತಿಳಿಸಿದಂತೆ, ಅವರು ತಾವು ಕೂಡ ನಿರ್ಮಾಣದಲ್ಲಿ ಭಾಗಿಯಾಗಿದ್ದ "ನಾ ನಿನ್ನ ಮರೆಯಲಾರೆ" ಚಿತ್ರವನ್ನು ಬಹಳ ಇಷ್ಟ ಪಟ್ಟಿದ್ದು , ಚಿ. ಉದಯಶಂಕರ್ ಅವರನ್ನು ಅಂತಹದೇ ಮತ್ತೊಂದು ಚಿತ್ರಕಥೆ ( ಬೈಕ್ ಅನ್ನು ಸದಾ ಸಂಗಾತಿಯಾಗಿ ಹೊಂದಿರುವ ನಾಯಕ ಮತ್ತು ನಾಯಕಿಯರ ದುರಂತ ಪ್ರೇಮಕಥೆ)ಗಾಗಿ ಕೇಳಿಕೊಂಡರು. ಆಗ ಚಿ. ಉದಯಶಂಕರ್ ಅವರು ತಾವು ರಾಜಕುಮಾರ್ ಅವರಿಗಾಗಿ ಬರೆದಿದ್ದ , ಆದರೆ ಅದಾಗಲೇ ಅಂತಹದೊಂದು ಕತೆಯ ಚಿತ್ರ "ದೇವರ ಮಕ್ಕಳು " ಅನ್ನು ಮಾಡಿರುವ ಕಾರಣ ರಾಜಕುಮಾರ್ ಅವರು ತಿರಸ್ಕರಿಸಿದ್ದ ಕಥೆಯನ್ನು ಅವರಿಗೆ ಕೊಟ್ಟರು.[]

ಮತ್ತೆ ಹಾಡಿತು ಕೋಗಿಲೆ (ಚಲನಚಿತ್ರ)
ಮತ್ತೆ ಹಾಡಿತು ಕೋಗಿಲೆ
ನಿರ್ದೇಶನಭಾರ್ಗವ
ನಿರ್ಮಾಪಕಎಸ್.ಶಂಕರ್
ಪಾತ್ರವರ್ಗವಿಷ್ಣುವರ್ಧನ್ ರೂಪಿಣಿ, ಭವ್ಯ ಅನಂತನಾಗ್, ರಮೇಶ್ ಭಟ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಶಂಕರಿ ಪ್ರೊಡಕ್ಷನ್ಸ್

ಪಾತ್ರವರ್ಗ

ಬದಲಾಯಿಸಿ


ಹಾಡುಗಳು

ಬದಲಾಯಿಸಿ

ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದವರು ರಾಜನ್-ನಾಗೇಂದ್ರ ಮತ್ತು ಹಾಡುಗಳನ್ನು ಬರೆದವರು ಚಿ.ಉದಯಶಂಕರ್.

ಹಾಡುಗಳ ಪಟ್ಟಿ
ಸಂ.ಹಾಡುಹಾಡಿದವರುಸಮಯ
1."ಬಾ ನನ್ನ ಸಂಗೀತ"ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಂದ್ರಿಕಾ ಗುರುರಾಜ್ 
2."ಹಾಡುವ ಆಸೆ"ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ 
3."ನಾನಿಂದು ನಿನ್ನಿಂದ"ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ 
4."ನವ ವಸಂತದ"ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ 
5."ನಿಮ್ಮನ್ನು ಕಂಡಾಗಲೆ"ಎಸ್. ಪಿ. ಬಾಲಸುಬ್ರಹ್ಮಣ್ಯಂ 
6."ತನನನ ಹಾಡುವೆ"ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ 

ಉಲ್ಲೇಖನಗಳು

ಬದಲಾಯಿಸಿ