ಮಡ್‍ಸ್ಕಿಪ್ಪರ್
ಮಡ್‍ಸ್ಕಿಪ್ಪರ್ ಗೋಬಿಡೆ ಕುಟುಂಬದ ಪೆರಿಯಾಫ್ತಾಲ್ಮಿನೆ ಅಧಿಕುಟುಂಬಕ್ಕೆ ಸೇರಿದ ಕಡಲ ಮೀನು.[೨] ಸಮುದ್ರದ ಕಿನಾರೆಯ ಜೌಗು ಅಳಿವೆ ಪ್ರದೇಶಗಳಲ್ಲಿ, ಉಬ್ಬರವಿಳಿತ ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಸಿಹಿನೀರು-ಉಪ್ಪು ನೀರೆಡರಲ್ಲೂ ಬದುಕಬಲ್ಲದು (ಆಂಫಿಡ್ರೊಮಸ್).
ಮಡ್‍ಸ್ಕಿಪ್ಪರ್ | |
---|---|
ಗ್ಯಾಂಬಿಯಾದಲ್ಲಿ ಅಟ್ಲಾಂಟಿಕ್ ಮಡ್‍ಸ್ಕಿಪರ್ (ಪೆರಿಆಪ್‍ತ್ಯಾಲ್ಮಸ್ ಬಾರ್ಬೇರಸ್) | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ಆ್ಯಕ್ಟಿನೋಟೆರಿಜೀ |
ಗಣ: | ಗೋಬಿಯಿಫ಼ಾರ್ಮೀಸ್ |
ಕುಟುಂಬ: | ಆಕ್ಸುಡರ್ಸಿಡೀ |
ಉಪಕುಟುಂಬ: | ಆಕ್ಸುಡರ್ಸಿನೀ Gunther 1861[೧] |
ಜಾತಿಗಳು | |
ಅಪೊಕ್ರಿಪ್ಟೀಸ್ | |
Synonyms | |
|
ವ್ಯಾಪ್ತಿ
ಬದಲಾಯಿಸಿಪೆರಿಯಾಫ್ತಾಲ್ಮಸ್ ಜಾತಿಯ ಮೀನು ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳಲ್ಲಿ ಪೂರ್ವ ಆಫ್ರಿಕಾದಿಂದ ಆಸ್ಟ್ರೇಲಿಯಾವರೆಗಿನ ವಿಸ್ತಾರ ಪ್ರದೇಶಗಳಲ್ಲಿ ಇವು ಕಂಡುಬರುತ್ತವೆ.
ದೇಹರಚನೆ
ಬದಲಾಯಿಸಿಇದೊಂದು ಚಿಕ್ಕ ಗಾತ್ರದ ವಿಚಿತ್ರಾಕೃತಿಯ ಮೀನು. ಸುಮಾರು 25 ಸೆಂ.ಮೀ ವರೆಗೆ ಬೆಳೆಯಬಲ್ಲದು. ಎದೆಯ ಈಜುರೆಕ್ಕೆಗಳು ಉದ್ದವಾಗಿದ್ದು ಬಲವಾದ ಸ್ನಾಯುಗಳಿಂದ ರಚಿತವಾಗಿವೆ. ಇವುಗಳ ಸಹಾಯದಿಂದ ಕೆಸರಿನಲ್ಲಿ ನೆಗದು ಚಲಿಸುತ್ತವೆ. ಬಾಲದ ಈಜುರೆಕ್ಕೆಯ ಕೆಳ ಅಂಚು ಅಲಗಿನಂತಿದೆ. ಕಣ್ಣುಗಳು ವಿಚಿತ್ರವಾಗಿದ್ದು ನೆತ್ತಿ ಮೇಲೆ ಹೊರಬಂದಂತೆ ಕಾಣುತ್ತವೆ. ಎರಡು ಕಣ್ಣುಗಳೂ ಒಂದಕ್ಕೊಂದು ಸಮೀಪವಿದ್ದು ಆಚೀಚೆ ತಿರುಗಬಲ್ಲುದಾಗಿವೆ (ಹೆಚ್ಚು ಕಡಿಮೆ ಕಪ್ಪೆಯ ಕಣ್ಣನ್ನು ಹೋಲುತ್ತವೆ). ಮೇಲ್ದವಡೆ ಕೆಳಗಿನದಕ್ಕಿಂತ ಹೆಚ್ಚು ಮುಂಚಾಚಿದೆ. ಉಭಯವಾಸಿಯಂತೆ ನೀರಿನಲ್ಲೂ ಗಾಳಿಯಲ್ಲೂ ಉಸಿರಾಡಬಲ್ಲುದು. ಎದೆಯ ಈಜುರೆಕ್ಕೆಗಳನ್ನು ಮುಂಗಾಲಿನಂತೆ ಉಪಯೋಗಿಸಿ ಕೆಸರಿನಲ್ಲಿ ನೆಗೆಯುವುದು, ಕಿನಾರೆಯಲ್ಲಿರುವ ಮ್ಯಾಂಗ್ರೋವ್ ಸಸ್ಯಗಳ ಬೇರುಗಳ ಮೇಲೆ ಹತ್ತುವುದು ಇದರ ಸ್ವಭಾವ. ಇದರಿಂದಾಗಿ ಇದಕ್ಕೆ ಮಡ್ ಸ್ಕಿಪ್ಪರ್ ಎಂದು ಹೆಸರು.
ಆಹಾರ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Richard van der Laan; William N. Eschmeyer & Ronald Fricke (2014). "Family-group names of Recent fishes". Zootaxa. 3882 (2): 001–230. doi:10.11646/zootaxa.3882.1.1. PMID 25543675.
- ↑ Nelson, JS; Grande, TC & Wilson, MVH (2016). "Classification of fishes from Fishes of the World 5th Edition" (PDF). Archived from the original (PDF) on 13 ಮಾರ್ಚ್ 2020. Retrieved 10 May 2018.
- ↑ Ecology of Kalimantan: Indonesian Borneo
ಹೊರಗಿನ ಕೊಂಡಿಗಳು
ಬದಲಾಯಿಸಿ- FishBase entry on Gobiidae
- Gobioid Research Institute Archived 2019-04-24 ವೇಬ್ಯಾಕ್ ಮೆಷಿನ್ ನಲ್ಲಿ.
- The Mudskipper: a website on mudskippers or The Mudskipper
- Mudskipper photos by Daniel Trim