ಉಭಯವಾಸಿಗಳು[] ಎಂದರೆ ಉಭಯವಾಸಿ ವರ್ಗದ ಬಹಿರ್ ಉಷ್ಣಿ ಚತುಷ್ಪದಿ ಕಶೇರುಕಗಳಾಗಿವೆ.ಅಧುನಿಕ ಉಭವಾಸಿಗಳೆವು ಲಿಸಾಂಫಿಬಿಯನ್ಸಗಳಾಗಿವೆ.ಅವುಗಳು ವಿಭಿನ್ನವಾದ ಅವಾಸಗಳಲ್ಲಿ ಕಂಡುಬರುತ್ತವೆ. ಬಹಳಷ್ಟು ಉಭಯವಾಸಿಗಳು ಭೂವಾಸಿಗಳಾಗಿವೆ,ಕೆಲವು ಫಾಸೊರಿಯಲ್‍ಗಳಾಗಿವೆ, ಕೆಲವು ಮರವಾಸಿಗಳಾಗಿವೆ ಅಥವಾ ಸಿಹಿ ನೀರಿನ ಮೂಲದ ಅವಾಸ ಪರಿಸರವ್ಯವಸ್ಥೆಯಲ್ಲಿ ಕಂಡು ಬರುತ್ತವೆ.ಉಭಯವಾಸಿಗಳು ಸಾಮಾನ್ಯವಾಗಿ ನೀರಿನಲ್ಲಿ ಲಾರ್ವಾ ರೂಪದಲ್ಲಿ ತಮ್ಮ ಜೀವನವನ್ನು ಆರಂಬಿಸುತ್ತವೆ. ಆದರೆ ಕೆಲವು ಜಾತಿಯ ಉಭಯವಾಸಿಗಳು ವರ್ತಾನಾ ಬದಲಾವಣೆಗಳ ಹೊಂದಾಣಿಕೆಯಿಂದಾಗಿ ಈ ಹಂತವನ್ನು ಹೊರತಾಗಿ ಬೆಳೆಯುತ್ತವೆ.ಸಾಮಾನ್ಯವಾಗಿ ಮರಿಗಳು ಲಾರ್ವಾದಿಂದ ರೂಪಾಂತರ

Gladiator-ಉಭಯವಾಸಿ
Metamorphosis-ಕಪ್ಪೆಯ ರೂಪಾಂತರಣ
ಕಪ್ಪೆಯ ನೈಜ ರೂಪಾಂತರಣದ ಚಿತ್ರ

ಹೊಂದಿ ತರುಣ ಜೀವಿಗಳಿಗೆ ಇರುವಂತೆ ಕಿವಿರುಗಳು ಮಾರ್ಪಾಟಾಗಿ ಪುಪ್ಪಸಗಳಾಗಿ ಬದಲಾವಣೆ ಹೊಂದುತ್ತವೆ.ಉಭಯವಾಸಿಗಳು ತಮ್ಮ ಚರ್ಮವನ್ನು ದ್ವಿತೀಯಕ ಉಸಿರಾಟದ ಅಂಗವಾಗಿ ಬಳಸಿಕೊಳ್ಳುವವು ಹಾಗೂ ಕೆಲವು ಚಿಕ್ಕ ಭೂವಾಸಿ ಸೆಲಾಮೆಂಡರ್‍ಗಳು ಮತ್ತು ಕಪ್ಪೆಗಳು ಉಸಿರಾಟಾಕ್ಕಾಗಿ ಪೂರ್ಣವಾಗಿ ತಮ್ಮ ಚರ್ಮವನ್ನೆ ನಂಬಿಕೊಂಡಿವೆ.ಉಭಯವಾಸಿಗಳು ಮೇಲ್ನೋಟಕ್ಕೆ ಸರಿಸೃಪಗಳಂತಿದ್ದರೂ, ಸಸ್ತನಿ ಮತ್ತು ಪಕ್ಷಿಗಳಂತಲ್ಲದೇ ಸರಿಸೃಪಗಳು ಆಮ್ನಿಓಟ್ಸ[೧]ಗಳಾಗಿದ್ದು ತಮ್ಮ ಸಂತಾನಭಿವೃದ್ದಿಗಾಗಿ ನೀರಿನ ಆಕರಗಳ ಅವಶ್ಯಕತೆಯಿಲ್ಲ.ಉಭಯವಾಸಿಗಳ ಸಂಕೀರ್ಣಮಯವಾದ ಸಂತನೋತ್ಪತ್ತಿಯ ಅವಶ್ಯಕತೆಗಳು ಹಾಗೂ ಸೂಕ್ಷ್ಮವಾದ ಚರ್ಮಗಳನ್ನು ಹೊಂದಿದ್ದು, ಉಭಯವಾಸಿಗಳು ಬಹಳಷ್ಟು ಸಾರಿ ಪರಿಸರ ವ್ಯವಸ್ಥೆಯ ಸೂಚಕ[]ಗಳಾಗಿವೆ ಮತ್ತು ಇತ್ತೀಚಿನ ದಶಕಗಳಲ್ಲಿ ವಿಶ್ವಾದಾಂತ್ಯ ಉಭವಾಸಿಗಳ ಸಂಖ್ಯೆಯು ಗಣನೀಯವಾಗಿ ಕ್ಷೀಣಗೊಳ್ಳುತ್ತಿದೆ.

ಡಿವೋನಿಯನ್[] ಅವಧಿಯಲ್ಲಿ ಮೊಟ್ಟಮೊದಲ ಉಭಯವಾಸಿಗಳು ಕಾಣಿಸಿಕೊಂಡವು.ಹಾಗೆ ಕಾಣಿಸಿಕೊಂಡ ಉಭಯವಾಸಿಗಳು ಮೀನುಗಳಂತೆ ಕಿವಿರುಗಳಿರದೆ, ಪುಪ್ಪಸಗಳನ್ನು ಹೊಂದಿದ ಮೂಳೆಗಳಿಂದಾದ ರೆಕ್ಕೆಗಳನ್ನು ಹೊಂದಿ ಭೂವಾಸಕ್ಕೆ ಯೋಗ್ಯವಾದ ಮಾರ್ಪಾಟನ್ನು ಹೊಂದಿದವು.ಉಭಯವಾಸಿಗಳು ಕಾರ್ಬೋನಿಫೆರಸ್[] ಹಾಗೂ ಪರ್ಮಿಯನ್[] ಅವಧಿಗಳಲ್ಲಿ ಸಾಕಷ್ಟು ಬಲಾಡ್ಯವಾಗಿದ್ದವು, ಆದರೆ ಸರಿಸೃಪಗಳ ಮತ್ತು ಕಶೇರುಕಗಳಿಂದ ತೊಂದರೆಗೊಳಗಾಗಿ ನಂತರ ಅವನತಿ ಹಾದಿ ಹಿಡಿದವು. ಈ ಅವಧಿಯಲ್ಲಿ ಉಭಯವಾಸಿಗಳು ಗಾತ್ರದಲ್ಲಿ ಕುಗ್ಗಿ ವಿಭಿನ್ನತೆಯಲ್ಲಿ ಕ್ಷೀಣಿಸಿದವು.

ಉಲ್ಲೇಖಗಳು

ಬದಲಾಯಿಸಿ
"https://kn.wikipedia.org/w/index.php?title=ಉಭಯವಾಸಿ&oldid=1249598" ಇಂದ ಪಡೆಯಲ್ಪಟ್ಟಿದೆ