ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ
ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯು (ಸ್ವೀಡನ್‌ನ ಭಾಷೆ - Nobelpriset i fysik) ಸ್ವೀಡನ್‌ನ ರಾಜವಂಶದ ವಿಜ್ಞಾನ ಅಕಾಡೆಮಿಯಿಂದ ವರ್ಷಕೊಮ್ಮೆ ನೀಡಲಾಗುತ್ತದೆ. ಅದು ಆಲ್‌ಫ್ರೆಡ್ ನೊಬೆಲ್‌ರ ಉಯಿಲಿನಿಂದ ೧೮೯೫ರಲ್ಲಿ ಸ್ಥಾಪಿತವಾದ ಐದು ನೊಬೆಲ್ ಪ್ರಶಸ್ತಿಗಳ ಪೈಕಿ ಒಂದು ಮತ್ತು ೧೯೦೧ರಿಂದ ನೀಡಲಾಗುತ್ತಿದೆ; ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ, ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ, ನೊಬೆಲ್ ಶಾಂತಿ ಪ್ರಶಸ್ತಿ, ಮತ್ತು ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಇತರ ಪ್ರಶಸ್ತಿಗಳು.
ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ | |
---|---|
ಕೊಡಲ್ಪಡುವ ವಿಷಯ | ಭೌತಶಾಸ್ತ್ರದಲ್ಲಿ ಅತ್ಯುತ್ತಮ ಕೊಡುಗೆಗಾಗಿ ಕೊಡಲ್ಪಡುವ ಪ್ರಶಸ್ತಿ |
ಸ್ಥಳ | ಸ್ಟಾಕ್‍ಹೋಮ್, ಸ್ವೀಡನ್ |
ಕೊಡಿಸಲ್ಪಡು | ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ಸ್ |
ಪ್ರಧಮವಾಗಿ ಕೊಡಲ್ಪಟ್ಟದ್ದು | ೧೯೦೧ |
ಅಧಿಕೃತ ಜಾಲತಾಣ | nobelprize.org |
ಭೌತಶಾಸ್ತ್ರದ ಮೊದಲ ನೊಬೆಲ್ ಪ್ರಶಸ್ತಿಯನ್ನು ಜರ್ಮನಿಯ ವಿಲ್‌ಹೆಲ್ಮ್ ಕಾನ್ರಾಡ್ ರೆಂಟ್‌ಗನ್‌ರಿಗೆ "ಅಪೂರ್ವವಾದ ಕಿರಣಗಳ (ಅಥವಾ ಕ್ಷ-ಕಿರಣಗಳು) ಶೋಧನೆಯ ಮೂಲಕ ಅವರು ಸಲ್ಲಿಸಿದ ಅಸಾಮಾನ್ಯವಾದ ಸೇವೆಗಳ ಗೌರವಾರ್ಥವಾಗಿ" ನೀಡಲಾಗಿತ್ತು. ಪ್ರಶಸ್ತಿಯನ್ನು ಸ್ವೀಡನ್ ರಾಜಧಾನಿ ಸ್ಟಾಕ್‍ಹೋಮ್ ನಗರದಲ್ಲಿ ಆಲ್‌ಫ್ರೆಡ್ ನೊಬೆಲ್‌ರ ಸಾವಿನ ವಾರ್ಷಿಕೋತ್ಸವವಾದ ಡಿಸೆಂಬರ್ ೧೦ರಂದು ನೀಡಲಾಗುತ್ತದೆ. ೨೦೧೭ರವರೆಗೆ ೨೦೬ ವ್ಯಕ್ತಿಗಳು ಪುರಸ್ಕೃತರಾಗಿದ್ದಾರೆ.
೨೦೧೬ನೇ ಸಾಲಿನ ಭೌತಶಾಸ್ತ್ರ ಪ್ರಶಸ್ತಿ
ಬದಲಾಯಿಸಿ- ಅತ್ಯಾಧುನಿಕ ಗಣಿತೀಯ ವಿಧಾನಗಳನ್ನು ಬಳಸಿ ಭಿನ್ನ ಹಂತಗಳಲ್ಲಿ ಭೌತವಸ್ತುಗಳ ಅಧ್ಯಯನದ ಸಾಧ್ಯತೆಯನ್ನು ಹೊರ ತಂದಿರುವ ವಿಜ್ಞಾನಿಗಳಿಗೆ 2016ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಘೋಷಿಸಲಾಗಿದೆ.
- ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಿತ್ತಿರುವ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ಹಂಚಿಕೆಯಾಗಿದೆ.
- ವಿಜ್ಞಾನಿಗಳ ಪರಿಚಯ:
- ಡೇವಿಡ್ ಜೆ. ಥೌಲೆಸ್, ವಾಷಿಂಗ್ಟನ್ ವಿಶ್ವವಿದ್ಯಾಲಯ, ಅಮೆರಿಕ(ಪ್ರಶಸ್ತಿಯ ಅರ್ಧ ಭಾಗ)
- ಜನನ: 1934, ಬರ್ಸ್ಡನ್, ಯು.ಕೆ.
- ಎಫ್.ಡಂಕನ್ ಎಂ.ಹಲ್ಡೇನ್, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ, ಅಮೆರಿಕ
- ಜನನ: 1951, ಲಂಡನ್
- ಜೆ.ಮೈಕೆಲ್ ಕೋಸ್ಟೆರ್‌ಲಿಟ್ಸ್, ಬ್ರೌನ್ ವಿಶ್ವವಿದ್ಯಾಲಯ, ಅಮೆರಿಕ
- ಜನನ: 1942, ಅಬೆರ್ದಿನ್, ಯು.ಕೆ
- ಸಂಶೋಧನೆ: ಭಿನ್ನ ಹಂತಗಳಲ್ಲಿ ಆಕೃತಿಯ ಜ್ಯಾಮಿತೀಯ ಲಕ್ಷಣಗಳನ್ನು ಅಧ್ಯಯನ ಮಾಡುವುದಕ್ಕೆ ಸಂಬಂಧಿಸಿದಂತೆ (ಟೊಪಾಲಜಿಕಲ್ ಫೇಸ್) ಭೌತವಸ್ತು ಹಾಗೂ ಪರಿವರ್ತನೆ ಗಳ ಸೈದ್ಧಾಂತಿಕ ಸಂಶೋಧನೆಗಾಗಿ ಭೌತಶಾಸ್ತ್ರ ನೊಬೆಲ್ ಘೋಷಿಸಲಾಗಿದೆ.[೧]
ಬಾಹ್ಯ ಸಂಪರ್ಕಗಳು
ಬದಲಾಯಿಸಿ- "All Nobel Laureates in Physics" - Index webpage on the official site of the Nobel Foundation.
- "The Nobel Prize Award Ceremonies" – Official hyperlinked webpage of the Nobel Foundation.
- "The Nobel Prize in Physics" Archived 2017-07-16 ವೇಬ್ಯಾಕ್ ಮೆಷಿನ್ ನಲ್ಲಿ. - Official webpage of the Nobel Foundation.
- "The Nobel Prize Medal for Physics and Chemistry" – Official webpage of the Nobel Foundation.
ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ