ಭಾವನಾ(ನಟಿ-ಭಾವನಾ ರಾಮಣ್ಣ)
ಭಾರತೀಯ ಚಲನಚಿತ್ರ ನಟಿ ನಂದಿನಿ ರಾಮಣ್ಣ ಅವರು ತಮ್ಮ ರಂಗನಾಮ ಭಾವನಾ ರಾಮಣ್ಣನಿಂದಲೇ ಚಿರಪರಿಚಿತರು. ಅವರು ಅನೇಕ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ . ಭರತನಾಟ್ಯ ನೃತ್ಯಗಾರ್ತಿಯಾದ ಅವರು ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಮತ್ತು ಗಿನ್ನಿಸ್ ದಾಖಲೆಗೆ ಸೇರಿದ ಶಾಂತಿ ಚಿತ್ರದಲ್ಲಿ ನಟಿಸಿದ್ದಾರೆ . ಭಾವನಾ ರಾಮಣ್ಣ ಹೋಮ್‌ಟೌನ್ ಪ್ರೊಡಕ್ಷನ್ಸ್ ಎಂಬ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ನಡೆಸುವ ಸಂಸ್ಥೆಯನ್ನು ಇವರು ಸ್ಥಾಪಿಸಿದ್ದಾರೆ [೨] [೩] ೨೦೧೪ ರ ಲೋಕಸಭಾ ಚುನಾವಣೆಗೆ ಮುನ್ನ, ಭಾವನಾ ರಾಮಣ್ಣ ಅವರನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಒಬ್ಬರೆಂದು ಹೆಸರಿಸಲಾಯಿತು, ಅವರು ೨೦೧೩ ರ ವಿಧಾನಸಭಾ ಚುನಾವಣೆಯಲ್ಲಿ ಈ ಪಾತ್ರವನ್ನು ನಿರ್ವಹಿಸಿದ್ದರು.
ಭಾವನಾ ರಾಮಣ್ಣ | |
---|---|
Born | ನಂದಿನಿ ರಾಮಣ್ಣ |
Occupation | ನಟಿ |
Years active | ೧೯೯೬-ಇಲ್ಲಿಯವರೆಗೆ |
ವೃತ್ತಿ
ಬದಲಾಯಿಸಿಭಾವನಾ ಅವರ ಹೆಸರನ್ನು ಕೋಡ್ಲು ರಾಮಕೃಷ್ಣ ಅವರು ತಮ್ಮ ಚಿತ್ರಕ್ಕಾಗಿ ಬದಲಿಸುವ ಮುನ್ನ ನಂದಿನಿ ರಾಮಣ್ಣ ಎಂದೇ ಕರೆಯಲ್ಪಡುತ್ತಿದ್ದರು [೪] [೫]
ಭಾವನಾ ಶಾಸ್ತ್ರೀಯ ನೃತ್ಯಗಾರ್ತಿಯಾಗಲು ತರಬೇತಿ ಪಡೆದರು ಮತ್ತು ಆರಂಭದಲ್ಲಿ ನಟಿಸುವ ಉದ್ದೇಶವಿರಲಿಲ್ಲ. ಅವರು ಸುಮಾರು ಹತ್ತು ವರ್ಷಗಳ ಕಾಲ ಭರತನಾಟ್ಯವನ್ನು ಕಲಿತರು ಮತ್ತು ರಂಗ ನೃತ್ಯ ಸಂಯೋಜಕರಾಗಿ ವೃತ್ತಿಜೀವನವನ್ನು ಬಯಸಿದ್ದರು. "ಮದುವೆ ಸಮಾರಂಭದಲ್ಲಿ ತಮ್ಮನ್ನು ನೋಡಿ ತಮ್ಮ ನೃತ್ಯದಿಂದ ಪ್ರಭಾವಿತರಾದ" ಕೃಷ್ಣಪ್ಪ ಉಪ್ಪೂರರಿಂದ ತುಳು ಚಿತ್ರವಾದ ಮರಿಬೆಲೆ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದೆ ಎಂದು ಭಾವನಾ ಅವರು ತಿಳಿಸಿದ್ದಾರೆ. [೧] ಈ ಚಿತ್ರವು ಯಶಸ್ವಿಯಾಗಲಿಲ್ಲ, ಆದರೆ ಭಾವನಾ ಅವರನ್ನು ಕನ್ನಡ ಚಲನಚಿತ್ರ ನಿರ್ಮಾಪಕರು ಗುರುತಿಸಿದರು. ಮರಿಬೆಲೆ ನಂತರ ಆಕೆ ಕನ್ನಡ ಚಿತ್ರ ನಂ .1 ರಲ್ಲಿ ಪೋಲಿಸ್ ಪಾತ್ರಕ್ಕಾಗಿ ಪ್ರಸಿದ್ಧರಾದರು . ಚಿತ್ರೋದ್ಯಮದಲ್ಲಿ ಸರಾಗವಾಗಿ ಸಾಗಬಹುದಾಗಿದ್ದ ಅವರಿಗೆ ನೀ ಮುಡಿದ ಮಲ್ಲಿಗೆ ಹೂ ಮುಜುಗರವನ್ನು ತಂದಿತು. [೬]
ಭಾವನಾ ಸೀತಾರಾಂ ಕಾರಂತ್ ಅವರ ಸಂಗೀತಪ್ರಧಾನ ಚಿತ್ರ ಚಂದ್ರಮುಖಿ ಪ್ರಾಣಸಖಿಯಲ್ಲಿ ನಟಿಸಿದರು, ಅಲ್ಲಿ ಅವರು ರಮೇಶ್ ಅರವಿಂದ್ ಮತ್ತು ಪ್ರೇಮಾ ಅವರೊಂದಿಗೆ ನಟಿಸಿದರು. [೭] ಭಾವನಾ ಕವಿತಾ ಲಂಕೇಶ್ ಅವರ ದೇವೇರಿ ಚಿತ್ರಕ್ಕೆ ಅರವಿಂದನ್ ಪುರಸ್ಕಾರ ಪ್ರಶಸ್ತಿಯನ್ನು ಪಡೆದರು. "ರಾಷ್ಟ್ರಗೀತೆ" ಚಿತ್ರದಲ್ಲಿ ಅವರು ಖ್ಯಾತ ನಿರ್ದೇಶಕ ಕೆವಿ ರಾಜು ಅವರಿಂದ ಲೈಂಗಿಕ ಕಾರ್ಯಕರ್ತೆಯ ಪಾತ್ರವನ್ನು ಪಡೆದರು. ನಿರ್ದೇಶಕರು ಒಬ್ಬ ಪ್ರಸಿದ್ಧ ನಿರ್ದೇಶಕರಾಗಿದ್ದರಿಂದ ವ್ಯಕ್ತಿಯಾಗಿದ್ದರಿಂದ ಅವರು ಹಿಂದಿನ ಮುಜುಗರದ ಪ್ರಸಂಗವನ್ನೂ ಮರೆತು ಈ ಚಿತ್ರದಲ್ಲಿ ನಟಿಸಬೇಕಾಯಿತು. ಮಲೆಯಾಳಂ ಚಲನಚಿತ್ರಗಳ ನಿರ್ದೇಶಕ ಮತ್ತು ಛಾಯಾಗ್ರಾಹಕ ದಿನೇಶ್ ಬಾಬು ಭಾವನಾ ಅವರಿಗೆ "ದೀಪಾವಳಿ" ಚಿತ್ರದಲ್ಲಿ ನಟಿಸುವ ಅವಕಾಶ ನೀಡಿದರು. ಇದರಲ್ಲಿ ವಿಷ್ಣುವರ್ಧನ್ ಮತ್ತು ರಮೇಶ್ ಅರವಿಂದ್ ಅವರ ಎದುರಿಗೆ ಭಾವನಾ ನಟಿಸಿದರೂ ಈ ಚಿತ್ರ ಬಾಕ್ಸಾಫೀಸಿನಲ್ಲಿ ವಿಫಲವಾಯಿತು. ವಿಷ್ಣುವರ್ಧನ್ ಅವರ "ಪರ್ವ"ದಲ್ಲಿ ಭಾವನಾ ಒಂದು ಹಾಡಿನಲ್ಲಿ ನಟಿಸಿದ್ದಾರೆ [೮] ಭಾವನ ನಿನಗಾಗಿ ಚಿತ್ರದಲ್ಲಿ ಐಟಂ ನೃತ್ಯ ಮಾಡಿದ್ದಾರೆ. [೯] ಭಾವನಾ ಕವಿತಾ ಲಂಕೇಶ್ ಅವರ ಎರಡನೇ ಚಿತ್ರ ಅಲೆಮಾರಿಯಲ್ಲಿ ನಟಿಸಿದರು . [೧೦] [೧೧] ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮಕ್ಕಾಗಿ ಮಾಡಿದ ಅಲೆಮಾರಿಯನ್ನು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಯಿತು. [೧೨] ಆದರೆ ಚಲನಚಿತ್ರಗಳ ವಿಭಾಗವು ಅವಳ ಚಲನಚಿತ್ರವನ್ನು ಬಿಡುಗಡೆ ಮಾಡಲಿಲ್ಲ. [೧೩] ಖ್ಯಾತ ಬರಹಗಾರ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಶಾಂತಿ ಆಫ್ ಬೀಟ್ ಕನ್ನಡ ಚಲನಚಿತ್ರ, ಗಿನ್ನಿಸ್ ದಾಖಲೆಗೆ ಸೇರಿದ ಎರಡನೇ ಭಾರತೀಯ ಚಿತ್ರ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರವಾಗಿದೆ. [೧೪] [೧೫] ಇದು ಗಿನ್ನೆಸ್ ಪುಸ್ತಕದಲ್ಲಿ `ನಿರೂಪಣಾ ಚಿತ್ರದಲ್ಲಿ ಕಡಿಮೆ ನಟರು 'ವಿಭಾಗಕ್ಕೆ ಪ್ರವೇಶಿಸಿದೆ. ಇದು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. [೧೬] ಭಾವನಾ ಅಮಿತಾಬ್ ಬಚ್ಚನ್ ನಟಿಸಿದ ಬಾಲಿವುಡ್ ಚಲನಚಿತ್ರ ಫ್ಯಾಮಿಲಿ ಕೂಡ ಮಾಡಿದರು. [೧೭]
ಭಾವೀರ ಭಾಗೀರಥಿ ಪಾತ್ರಕ್ಕಾಗಿ ಭಾವನಾ "ಅತ್ಯುತ್ತಮ ನಟಿ" ಪ್ರಶಸ್ತಿ ಪಡೆದರು. [೧೮] [೧೯] ರೆಡಿಫ್.ಕಾಂ ಪ್ರಕಟಿಸಿದ ೨೦೧೦ರ ಕನ್ನಡದ ಅಗ್ರ ನಟಿಯರಲ್ಲಿ ಇವರೂ ಒಬ್ಬರಾಗಿದ್ದರು. [೨೦]
ಭಾವನಾ ಅವರ ಚಲನಚಿತ್ರಗಳ ಪಟ್ಟಿ
ಬದಲಾಯಿಸಿವರ್ಷ | ಚಲನಚಿತ್ರ | ಪಾತ್ರ | ಭಾಷೆ | ಚಿತ್ರಕ್ಕೆ ಬಂದ ಪ್ರಶಸ್ತಿಗಳು,ಉಲ್ಲೇಖಗಳು |
---|---|---|---|---|
೧೯೯೬ | ಮರಿಬಾಲೆ | ತುಳು | ||
೧೯೯೭ | ನೀ ಮುಡಿದ ಮಲ್ಲಿಗೆ | ಕನ್ನಡ | ಈ ಚಿತ್ರಕ್ಕಾಗಿ ೧೯೯೭ ರ ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿಯ "ಉತ್ತಮ ಪೋಷಕನಟಿ" ಪ್ರಶಸ್ತಿಯನ್ನು ಪಡೆದರು | |
೧೯೯೯ | ನಂ ೧, | ದುರ್ಗಾ | ಕನ್ನಡ | |
೧೯೯೯ | ಚಂದ್ರಮುಖಿ ಪ್ರಾಣಸಖಿ | ಕನ್ನಡ | ||
ದೇವೇರಿ | ಕನ್ನಡ | |||
ಅನುಬುಲ್ಲ ಕದಲುಕ್ಕು | ಶಾಂತಿ | ತಮಿಳು | ||
೨೦೦೦ | ದೀಪಾವಳಿ | ಕನ್ನಡ | ||
೨೦೦೧ | ಎಲ್ಲರ ಮನೆ ದೋಸೆನೂ | ಕನ್ನಡ | ||
ನತ್ಚತ್ರ ಕಡಲ್ | ಮಾಲಿನಿ | ತಮಿಳು | ||
ಕುರಿಗಳು ಸಾರ್ ಕುರಿಗಳು | ಕನ್ನಡ | |||
ರಾಷ್ಟ್ರಗೀತೆ | ಕನ್ನಡ | |||
ಅಮ್ಮಾವೇ ನವ್ವೀತೆ | ಸಿರೀಷ | ತೆಲುಗು | ||
೨೦೦೨ | ಪರ್ವ | ಕನ್ನಡ | ||
ನಿನಗಾಗಿ | ಕನ್ನಡ | ಅತಿಥಿ ಪಾತ್ರ | ||
ಕ್ಷಾಮ | ಕನ್ನಡ | ಈ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಾದ "ಅತ್ಯುತ್ತಮ ನಟಿ" ಪ್ರಶಸ್ತಿ ಪಡೆದಿದ್ದಾರೆ | ||
ಚೆಲ್ವಿ | ಕನ್ನಡ | |||
೨೦೦೩ | ರಾಂಗ್ ನಂಬರ್ | ಕನ್ನಡ | ||
ಹಲೋ | ಕನ್ನಡ | |||
ಆಹಾ ಎತ್ತನಾಯ್ ಅಜಗು | ಸಂದ್ಯಾ | ತಮಿಳು | ||
ಪ್ರೀತಿ ಪ್ರೇಮ ಪ್ರಣಯ | ಶೀಲಾ | ಕನ್ನಡ | ||
೨೦೦೪ | ಶಾಂತಿ | ಶಾಂತಿ | ಕನ್ನಡ | |
ಸಗರಿ | ದಿವ್ಯ | ಕನ್ನಡ | ||
ಭಗವಾನ್ | ಬಾಬಿ | ಕನ್ನಡ | ||
೨೦೦೬ | ಫ್ಯಾಮಿಲಿ | ಹಿಂದಿ | ||
೨೦೦೮ | ಇಂತಿ ನಿನ್ನ ಪ್ರೀತಿಯ | ಪರಿಮಳ | ಕನ್ನಡ | |
೨೦೧೦ | ವಿಮುಕ್ತಿ | ಮಾಧವಿ | ಕನ್ನಡ | |
ಆಪ್ತರಕ್ಷಕ | ನೀತ | ಕನ್ನಡ | ||
೨೦೧೨ | ಚಿಂಗಾರಿ | ಕನ್ನಡ | ||
ಭಾಗೀರಥಿ | ಭಾಗೀರಥಿ | ಕನ್ನಡ | ಈ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. | |
೨೦೧೪ | ಕ್ರೇಜಿ ಸ್ಟಾರ್ | ಕನ್ನಡ | ||
೨೦೧೬ | ನಿರುತ್ತರ [೨೧] | ಹಂಸ | ಕನ್ನಡ |
ದೂರದರ್ಶನ
ಬದಲಾಯಿಸಿ- ಗೋದ್ರೆಜ್ ಗೇಮ್ ಆಡಿ, ಜೀವನ ಬದಲಾವಣೆ ಮಾಡಿ [೨೨]
ರಾಜಕೀಯ
ಬದಲಾಯಿಸಿಭಾವನಾ ೨೦೧೩ ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ದಾವಣಗೆರೆಯಲ್ಲಿ ಇತರ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದರು. 2012 ರಲ್ಲಿ ಅವರು ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಪರ ಪ್ರಚಾರ ಮಾಡಿದರು. ೨೦೧೮ ರಲ್ಲಿ ಭಾವನಾ ರಾಮಣ್ಣ ಅಧಿಕೃತವಾಗಿ ಬಿಜೆಪಿ [೨೩] ಸೇರಿದರು.
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Shenoy, Archana (29 September 2002). "Oomph & attitude". Deccan Herald. Archived from the original on 20 August 2003. Retrieved 23 September 2020.
- ↑ https://www.zauba.com/director/BHAVANA-RAMANNA-NANDINI/02596013
- ↑ "ಆರ್ಕೈವ್ ನಕಲು". Archived from the original on 2015-09-24. Retrieved 2021-09-30.
- ↑ "When a rose turns a lily". Deccan Herald. Archived from the original on 25 June 2013. Retrieved 15 March 2013.
- ↑ "In Karnataka Politics, It is Star 'Caste' That Counts, Not Stardom". News18. Retrieved 31 October 2019.
- ↑ "Bhavana". Sify. Archived from the original on 9 June 2015. Retrieved 15 March 2013.
- ↑ ಸಿಫಿ ತಾಣದಲ್ಲಿ ಚಂದ್ರಮುಖಿ ಪ್ರಾಣಸಖಿ ಚಿತ್ರದ ಉಲ್ಲೇಖ
- ↑ "He was humble and never treated anyone like a newcomer". Rediff. Retrieved 17 March 2013.
- ↑ "Jogula". Retrieved 17 March 2013.
- ↑ "Fighting the formula". The Hindu. Archived from the original on 1 July 2003. Retrieved 17 March 2013.
- ↑ "Alemaari Story in Pictures". Rediff. Retrieved 17 March 2013.
- ↑ "Every film is a work of art". Rediff. Retrieved 17 March 2013.
- ↑ "ENCORE!". The Hindu. Archived from the original on 7 September 2004. Retrieved 17 March 2013.
- ↑ "Shanti gets into the Guinness Book". The Hindu. Archived from the original on 16 July 2005. Retrieved 15 March 2013.
- ↑ Srinivasa, Srikanth (2 July 2012). "Meet Kannada cinema's actress of substance". Rediff.com. Retrieved 17 March 2013.
- ↑ "An experiment with peace". The Hindu. Archived from the original on 16 August 2012. Retrieved 15 March 2013.
- ↑ "'The right people don't approach me'". The Times of India. Archived from the original on 11 April 2013. Retrieved 15 March 2013.
- ↑ "Sudeep, Bhavana bag best acting awards". Deccan Herald. Archived from the original on 21 December 2013. Retrieved 15 March 2013.
- ↑ "'Prasad' gets best film award for 2011". The Hindu. Retrieved 15 March 2013.
- ↑ "Bhavana". Rediff. Retrieved 17 March 2013.
- ↑ ಭಾವನಾ ರಾಮಣ್ಣ ಅವರ ನಿರುತ್ತರ ಚಿತ್ರದ ಬಗ್ಗೆ IMDB ಅಲ್ಲಿನ ಮಾಹಿತಿ
- ↑ "Television beckons Bhavana". Daily News & Analysis. Retrieved 15 March 2013.
- ↑ http://www.daijiworld.com/news/news_disp.asp?n_id=131569