ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್
This article includes a list of references, related reading or external links, but its sources remain unclear because it lacks inline citations. (October 2009) |
12°59′29″N 80°14′01″E / 12.99151°N 80.23362°E ಟೆಂಪ್ಲೇಟು:Infobox Indian Institute of Technology
ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ (ಐಐಟಿ ಮದ್ರಾಸ್ ) ದಕ್ಷಿಣ ಭಾರತದ ಚೆನ್ನೈ(ಮುಂಚೆ ಮದ್ರಾಸ್)ಯಲ್ಲಿರುವ ತಾಂತ್ರಿಕ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆ. ಭಾರತ ಸರ್ಕಾರವು ಇದನ್ನು ರಾಷ್ಟ್ರೀಯ ಪ್ರಮುಖ ಶಿಕ್ಷಣ ಸಂಸ್ಥೆ ಎಂದು ಮಾನ್ಯತೆ ನೀಡಿದೆ.[೧][೨][೩] ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ಅಂದಿನ ಪಶ್ಚಿಮ ಜರ್ಮನಿಯ ಸರ್ಕಾರದ ತಾಂತ್ರಿಕ ಮತ್ತು ಧನಸಹಾಯದೊಂದಿಗೆ 1959ರಲ್ಲಿ ಸ್ಥಾಪಿಸಲಾಯಿತು.ತಾಂತ್ರಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ತರಬೇತಿ ಶಿಕ್ಷಣ ಮತ್ತು ಸಂಶೋಧನಾ ಸೌಲಭ್ಯಗಳನ್ನು ಒದಗಿಸಲು ಭಾರತ ಸರ್ಕಾರವು ಸಂಸತ್ತಿನಲ್ಲಿ ಒಂದು ಮಸೂದೆ ಮಂಜೂರು ಮಾಡಿತು. ಇದರಂತೆ ದೇಶಾದ್ಯಂತ ಸ್ಥಾಪಿಸಲಾದ 15 ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಪೈಕಿ ಐಐಟಿ ಮದ್ರಾಸ್ ಮೂರನೆಯದಾಗಿದೆ. 2008ರಲ್ಲಿ ಆರು ಹಾಗೂ 2009ರಲ್ಲಿ ಎರಡು ಐಐಟಿ ಸಂಸ್ಥೆಗಳನ್ನು ಸ್ಥಾಪಿಸಲಾಯಿತು.[೨][೪] ಐಐಟಿ ಮದ್ರಾಸ್ ಕ್ಯಾಂಪಸ್ ಆವರಣದಲ್ಲೇ(ವಸತಿ) ಶಿಕ್ಷಣ ನೀಡುವ ಸಂಸ್ಥೆಯಾಗಿದೆ. ಮುಂಚೆ, ಪಕ್ಕದಲ್ಲಿರುವ ಗಿಂಡಿ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ್ದ 2.5 km² (620 ಎಕರೆಗಳ) ಪ್ರದೇಶದಲ್ಲಿ ಈ ವಿದ್ಯಾಸಂಸ್ಥೆಯನ್ನು ನಿರ್ಮಿಸಲಾಗಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 360 ಬೋಧನಾಂಗಗಳು, 6,000 ವಿದ್ಯಾರ್ಥಿಗಳು ಹಾಗೂ 1,250 ಆಡಳಿತ ಹಾಗೂ ಸಹಯೋಗ ಸಿಬ್ಬಂದಿಯವರಿದ್ದಾರೆ. 1961ರಲ್ಲಿ ಭಾರತೀಯ ಸಂಸತ್‌ನಿಂದ ಸನ್ನದು ಪಡೆದಾಗಿನಿಂದಲೂ ಈ ಶಿಕ್ಷಣ ಸಂಸ್ಥೆಯು ಬೆಳೆಯುತ್ತಲೇ ಇದೆ. ರಮಣೀಯವಾಗಿರುವ ಈ ಸಂಸ್ಥೆಯ ಹರವಿನ ಬಹುಪಾಲು ಗಿಂಡಿ ರಾಷ್ಟ್ರೀಯ ಉದ್ಯಾನವನದಿಂದ ಬೇರ್ಪಡಿಸಲಾದ ರಕ್ಷಿತ ಅರಣ್ಯವಾಗಿದೆ. ಇಲ್ಲಿ ಇಂದಿಗೂ ಸಹ ಇಲ್ಲಿ ಸಾರಂಗ, ಕೃಷ್ಣಮೃಗ ಹಾಗೂ ಇತರೆ ಸಸ್ಯ-ಪ್ರಾಣಿವರ್ಗಗಳನ್ನು ಕಾಣಬಹುದು. 2003ರಲ್ಲಿ ಇನ್ನಷ್ಟು ಆಳಗೊಳಿಸಲಾದ ನೈಸರ್ಗಿಕ ಕೆರೆಗೆ ಮಳೆನೀರಿನ ಬಹಳಷ್ಟು ಪ್ರಮಾಣ ಹರಿದುಹೋಗುತ್ತದೆ.
ಇತಿಹಾಸ
ಬದಲಾಯಿಸಿ1956ರಲ್ಲಿ, ಭಾರತದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಒಂದು ಶಿಕ್ಷಣ ಸಂಸ್ಥೆ ಸ್ಥಾಪಿಸಲು ಜರ್ಮನ್ ಸರ್ಕಾರವು ತನ್ನ ತಾಂತ್ರಿಕ ಬೆಂಬಲ ಸೂಚಿಸಿತು. ಮದ್ರಾಸ್‌ನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸ್ಥಾಪನೆಗಾಗಿ, 1959ರಲ್ಲಿ, ಅಂದಿನ ಪಶ್ಚಿಮ ಜರ್ಮನಿಯ ರಾಜಧಾನಿ ಬಾನ್‌ನಲ್ಲಿ ಮೊಟ್ಟಮೊದಲ ಭಾರತ-ಜರ್ಮನಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಪಶ್ಚಿಮ ಜರ್ಮನಿ ಸರ್ಕಾರದ ಶೈಕ್ಷಣಿಕ ಹಾಗೂ ಆರ್ಥಿಕ ಬೆಂಬಲದೊಂದಿಗೆ ಐಐಟಿ ಮದ್ರಾಸ್‌ನ್ನು ಸ್ಥಾಪಿಸಿ ಆರಂಭಿಸಲಾಯಿತು. ಆ ಕಾಲದಲ್ಲಿ, ಪಶ್ಚಿಮ ಜರ್ಮನಿ ಸರ್ಕಾರದ ಪಾಲಿಗೆ, ತನ್ನ ದೇಶದ ಹೊರಗೆ ಧನಸಹಯೋಗ ನೀಡಿದ್ದ ಅತಿ ದೊಡ್ಡ ಶೈಕ್ಷಣಿಕ ಯೋಜನೆಯಾಗಿತ್ತು. ಇದರಿಂದಾಗಿ, ಹಲವು ವರ್ಷಗಳ ಕಾಲದಿಂದಲೂ, ಜರ್ಮನಿಯ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳೊಂದಿಗೆ ಹಲವು ಸಹಯೋಗಿತ್ವದ ಸಂಶೋಧನಾ ಯತ್ನಗಳು ಆರಂಭವಾದವು.[೫] ಜರ್ಮನ್ ಸರ್ಕಾರದಿಂದ ಅಧಿಕೃತ ಸಹಯೋಗ-ಬೆಂಬಲಗಳು ಮುಗಿದರೂ, ಡಿಎಎಡಿ ಯೋಜನೆ ಮತ್ತು ಹಂಬೊಲ್ಟ್ ಫೆಲೊಷಿಪ್ಸ್ ಒಳಗೊಂಡ ಹಲವು ಸಂಶೋಧನಾ ಯತ್ನಗಳು ಇಂದಿಗೂ ನಡೆಯುತ್ತಿವೆ.1959ರಲ್ಲಿ ಅಂದಿನ ವೈಜ್ಞಾನಿಕ ಸಂಶೋಧನೆ ಮತ್ತು ಸಾಂಸ್ಕೃತಿಕ ಇಲಾಖೆಯ ಮಂತ್ರಿ ಪ್ರೊ. ಹುಮಾಯುನ್ ಕಬಿರ್ ಈ ಶಿಕ್ಷಣ ಸಂಸ್ಥೆಯನ್ನು ಉದ್ಘಾಟಿಸಿದರು. 1961ರಲ್ಲಿ, ಐಐಟಿಗಳನ್ನು 'ರಾಷ್ಟ್ರೀಯ ಪ್ರಮುಖತೆಯ ಶಿಕ್ಷಣ ಸಂಸ್ಥೆಗಳು' ಎಂದು ಘೋಷಿಸಲಾಯಿತು. ಇದರಲ್ಲಿ ಏಳು ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳು ಸೇರಿವೆ. ಖರಗ್ಪುರ ಸ್ಥಾಪನೆ: 1951), ಮುಂಬಯಿ ಸ್ಥಾಪನೆ: 1958), ಚೆನ್ನೈ ಸ್ಥಾಪನೆ: 1959), ಕಾನ್ಪುರ ಸ್ಥಾಪನೆ: 1959), ದೆಹಲಿ ಸ್ಥಾಪನೆ: 1961), ಗುವಹಾಟಿ (ಸ್ಥಾಪನೆ: 1994) ಹಾಗೂ ರೂರ್ಕೀ (ಸ್ಥಾಪನೆ: 1847, 2001ರಲ್ಲಿ ಐಐಟಿ ಆಗಿ ಮೇಲ್ದರ್ಜೆಗೆ ಬಡ್ತಿ ನೀಡಿತು). ಐಐಟಿ ಮದ್ರಾಸ್ 2009ರಲ್ಲಿ ಸ್ವರ್ಣ ಮಹೋತ್ಸವ ಆಚರಿಸಿತು.
ವಿದ್ಯಾಸಂಸ್ಥೆಯ ಆವರಣ
ಬದಲಾಯಿಸಿಐಐಟಿ ಮದ್ರಾಸ್‌ನ ಮುಖ್ಯ ಪ್ರವೇಶದ್ವಾರವು ಚೆನ್ನೈಯ ಸರ್ದಾರ್ ಪಟೇಲ್ ರಸ್ತೆಯಲ್ಲಿದೆ. ಇದರ ಅಕ್ಕಪಕ್ಕದಲ್ಲಿ ಅಡ್ಯಾರ್ ಮತ್ತು ವೇಲಾಚೇರಿ ಎಂಬ ವಸತಿ ಜಿಲ್ಲೆಗಳಿವೆ. ಈ ಆವರಣವು ತಮಿಳುನಾಡು ರಾಜ್ಯಪಾಲರ ಅಧಿಕೃತ ನಿವಾಸ ರಾಜಭವನಕ್ಕೆ ಸನಿಹದಲ್ಲಿದೆ. ಇತರೆ ಪ್ರವೇಶದ್ವಾರಗಳು ವೇಲಾಚೇರಿಯಲ್ಲಿ (ವೇಲಾಚೇರಿ ರಸ್ತೆಯಲ್ಲಿ ಅಣ್ಣಾ ಗಾರ್ಡನ್ ಎಂಟಿಸಿ ಬಸ್ ನಿಲ್ದಾಣದ ಬಳಿ), ಗಾಂಧಿ ರಸ್ತೆ (ಕೃಷ್ಣಾ ಹಾಸ್ಟಲ್ ಗೇಟ್ ಅಥವಾ ಟೋಲ್ ಗೇಟ್ ಎನ್ನಲಾಗಿದೆ) ಹಾಗೂ ತಾರಾಮಣಿ ಗೇಟ್ (ಅಸ್ಕೆಂಡಾಸ್ ಟೆಕ್ ಪಾರ್ಕ್ ಹಿಂಭಾಗದಲ್ಲಿ) ಸ್ಥಳಗಳಲ್ಲಿವೆ.ಈ ಆವರಣವು ಚೆನ್ನೈ ವಿಮಾನ ನಿಲ್ದಾಣದಿಂದ ಸುಮಾರು ಹತ್ತು ಕಿಲೋಮೀಟರ್, ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ 12 ಕಿಲೋಮೀಟರ್ ದೂರದಲ್ಲಿದ್ದು, ಬಹಳಷ್ಟು ಬಸ್ ಸಂಪರ್ಕಗಳಿವೆ.
ಬಾನ್ ಅವೆನ್ಯೂ ಮತ್ತು ದಿಲ್ಲಿ ಅವೆನ್ಯೂ ಎಂಬ ಎರಡು ಸಮಾನಾಂತರ ರಸ್ತೆಗಳು ಬೋಧನಾವೃಂದ ನಿವಾಸಿ ಪ್ರದೇಶದ ಮೂಲಕ ಹಾದುಹೋಗುತ್ತವೆ. ಈ ಕ್ಷೇತ್ರದಲ್ಲಿ ಹಸಿರಿನ ತೋರಣ ಆವರಿಸಿದೆ. ಇವೆರಡೂ ರಸ್ತೆಗಳು ಗಜೇಂದ್ರ ವೃತ್ತದಲ್ಲಿ, ಆಡಳಿತ ವಿಭಾಗದ ಬಳಿ ವಿಲೀನವಾಗುತ್ತವೆ. ಬಸ್‌ಗಳು, ವಿದ್ಯುತ್-ಚಾಲಿತ ಮಿನಿಬಸ್‌ಗಳು ಪ್ರವೇಶದ್ವಾರ, ಗಜೇಂದ್ರ ವೃತ್ತ, ಶೈಕ್ಷಣಿಕ ವಿಭಾಗ ಹಾಗೂ ವಸತಿನಿಲಯಗಳ ನಡುವೆ ಸಂಚರಿಸುತ್ತವೆ.
ಸಂಸ್ಥೆ
ಬದಲಾಯಿಸಿಆಡಳಿತ
ಬದಲಾಯಿಸಿಭಾರತೀಯ ತಂತ್ರಜ್ಞಾನ ಸಂಸ್ಥೆ, ಮದ್ರಾಸ್ (ಸ್ವಾಯತ್ತ)ಸ್ವಯಮಾಧಿಕಾರದ, ಶಾಸನ ನಿಯಮಗಳ ಅನುಸರಿಸುವ ಸಂಸ್ಥೆಯಾಗಿದೆ. ಇದು ತಂತ್ರಜ್ಞಾನ ಶಿಕ್ಷಣ ಸಂಸ್ಥೆ ಕಾಯಿದೆಯಡಿ ಕಾರ್ಯ ನಿರ್ವಹಿಸುತ್ತದೆ. ಭಾರತ ಸರ್ಕಾರದ ಐಐಟಿ ಪರಿಷತ್ ಎಂಬ ಸರ್ವೋನ್ನತ ಮಂಡಳಿಯು ಈ ಏಳೂ ಐಐಟಿಗಳ ಆಡಳಿತ ನಿರ್ವಹಿಸುತ್ತದೆ. ಭಾರತ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಖಾತೆಯ ಮಂತ್ರಿ ಈ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ಆಡಳಿತ ಮಂಡಳಿಯನ್ನು ಹೊಂದಿದ್ದು, ಅದರ ಆಡಳಿತ ಮತ್ತು ನಿಯಂತ್ರಣ ನಿರ್ವಹಿಸುವುದು.ಸೆನೇಟ್‌ನಲ್ಲಿ ಸಂಸ್ಥೆಯ ಎಲ್ಲಾ ಪ್ರಾಧ್ಯಾಪಕರಿದ್ದು ಅದರ ಶೈಕ್ಷಣಿಕ ನೀತಿಯನ್ನು ನಿರ್ಣಯಿಸುತ್ತದೆ. ಇದು ಪಠ್ಯಕ್ರಮಗಳು, ವಿಷಯಗಳು, ಪರೀಕ್ಷೆಗಳು ಹಾಗೂ ಫಲಿತಾಂಶಗಳನ್ನು ನಿಯಂತ್ರಿಸಿ ಮಂಜೂರು ಮಾಡುತ್ತದೆ. ವಿಶಿಷ್ಠ ಶೈಕ್ಷಣಿಕ ವಿಚಾರಗಳನ್ನು ಗಮನಿಸಲು ಸಮಿತಿಗಳನ್ನು ರಚಿಸುತ್ತದೆ. ಸೌಲಭ್ಯಗಳು ಮತ್ತು ಪ್ರಮಾಣಿತಗಳನ್ನು ಉತ್ತಮಗೊಳಿಸಲು, ಹಲವು ವಿವಿಧ ವಿಭಾಗಗಳಲ್ಲಿ ನಡೆಯುವ ಬೋಧನೆ, ತರಬೇತಿ ಹಾಗೂ ಸಂಶೋಧನಾ ಚಟುವಟಿಕೆಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುವುದು. ಶಿಕ್ಷಣ ಸಂಸ್ಥೆಯ ನಿರ್ದೇಶಕರು ಸೆನೇಟ್‌ನ ಅಧ್ಯಕ್ಷರಾಗಿರುವರು.ಸೆನೇಟ್‌ನ ಮೂರು ಉಪ-ಸಮಿತಿಗಳು - ಶೈಕ್ಷಣಿಕ ಸಂಶೋಧನಾ ಮಂಡಲಿ, ಶೈಕ್ಷಣಿಕ ವಿಷಯಗಳ ಮಂಡಲಿ ಹಾಗೂ ವಿದ್ಯಾರ್ಥಿ ಮಂಡಲಿ - ಇವೆಲ್ಲವೂ ಶೈಕ್ಷಣಿಕ ಆಡಳಿತ ಹಾಗೂ ಶಿಕ್ಷಣ ಸಂಸ್ಥೆಯ ದಕ್ಷ ನಿರ್ವಹಣೆಯಲ್ಲಿ ಸಹಕರಿಸುತ್ತವೆ. ಹಣಕಾಸು ಸಮಿತಿಯು ಹಣಕಾಸು ನೀತಿಯ ಕುರಿತು ಸಲಹೆ ನೀಡುವುದು, ಕಟ್ಟಡ ಮತ್ತು ನಿರ್ಮಾಣಕಾರ್ಯ ಸಮಿತಿಯು ಕಟ್ಟಡಗಳು ಮತ್ತು ಮೂಲಭೂತ ಸೌಕರ್ಯಗಳ ಕುರಿತು ಸಲಹೆ ನೀಡುವವು. ಕೈಗಾರಿಕಾ ಸಲಹೆ ಮತ್ತು ಪ್ರಾಯೋಜಿತ ಸಂಶೋಧನಾ ಮಂಡಲಿಯು ಕೈಗಾರಿಕಾ ಸಲಹಾ ವಿಚಾರಗಳನ್ನು ನೋಡಿಕೊಳ್ಳುವುದು ಹಾಗೂ ಗ್ರಂಥಾಲಯ ಸಲಹಾ ಸಮಿತಿಯು ಗ್ರಂಥಾಲಯದ ವ್ಯವಹಾರಗಳನ್ನು ನೋಡಿಕೊಳ್ಳುವುದು.
ವಿಭಾಗಗಳು
ಬದಲಾಯಿಸಿಐಐಟಿ ಮದ್ರಾಸ್‌ನಲ್ಲಿ 11 ತಾಂತ್ರಿಕ ವಿಜ್ಞಾನ ವಿಭಾಗಗಳಿವೆ:
- ಅಂತರಿಕ್ಷಯಾನ ತಾಂತ್ರಿ ವಿಜ್ಞಾನ
- ಆನ್ವಯಿಕ ಯಂತ್ರವಿಜ್ಞಾನ
- ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಜಿ)
- ರಾಸಾಯನಿಕ ತಾಂತ್ರಿಕ ವಿಜ್ಞಾನ
- ಲೋಕೋಪಯೋಗಿ ತಾಂತ್ರಿಕ ವಿಜ್ಞಾನ
- ಕಂಪ್ಯೂಟರ್ ವಿಜ್ಞಾನ ಮತ್ತು ತಾಂತ್ರಿಕ ವಿಜ್ಞಾನ
- ವಿದ್ಯುತ್ ತಾಂತ್ರಿಕ ವಿಜ್ಞಾನ
- ತಾಂತ್ರಿಕ ವಿಜ್ಞಾನ ವಿನ್ಯಾಸ
- ಯಂತ್ರ ತಾಂತ್ರಿಕ ವಿಜ್ಞಾನ
- ಲೋಹವೈಜ್ಞಾನಿಕ ಮತ್ತು ವಸ್ತು ತಾಂತ್ರಿಕ ವಿಜ್ಞಾನ
- ಸಾಗರ ತಾಂತ್ರಿಕ ವಿಜ್ಞಾನ
ಇತರೆ ಐದು ವಿಭಾಗಗಳು ಕೆಳಕಂಡ ವಿಷಯಗಳಲ್ಲಿ ಅಧ್ಯಯನ ವ್ಯವಸ್ಥೆ ಒದಗಿಸುವವು:
- ರಸಾಯನಶಾಸ್ತ್ರ
- ಗಣಿತಶಾಸ್ತ್ರ
- ಭೌತಶಾಸ್ತ್ರ
- ಮಾನವಿಕಗಳ ಅಧ್ಯಯನ ಮತ್ತು ಸಮಾಜ ವಿಜ್ಞಾನ
- ವ್ಯವಸ್ಥಾಪನಾ ಅಧ್ಯಯನಗಳು
ಶೈಕ್ಷಣಿಕ
ಬದಲಾಯಿಸಿಐಐಟಿ ಮದ್ರಾಸ್ ತಾಂತ್ರಿಕ ವಿಜ್ಞಾನ, ವಿಜ್ಞಾನ, ಮಾನವಿಕ ಅಧ್ಯಯನ ಮತ್ತು ವ್ಯವಸ್ಥಾಪನಾ ಅಧ್ಯಯನಗಳಲ್ಲಿ 15 ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಹಾಗೂ ಸಂಶೋಧನಾ ಪದವಿಗಳಿಗಾಗಿ ಪಠ್ಯಕ್ರಮ ಒದಗಿಸುತ್ತದೆ. ವಿವಿಧ ವಿಜ್ಞಾನ ಮತ್ತು ತಾಂತ್ರಿಕ ವಿಜ್ಞಾನ ಇಲಾಖೆಗಳು ಹಾಗೂ ವಿದ್ಯಾ ಸಂಸ್ಥೆಯ ಕೇಂದ್ರಗಳಿಗೆ ಸೇರಿದ 360 ಬೋಧನಾ ವೃಂದದವರು ಬೋಧನೆ, ಸಂಶೋಧನೆ ಮತ್ತು ಕೈಗಾರಿಕಾ ಸಲಹೆಗಳಲ್ಲಿ ಮಗ್ನರಾಗಿರುವರು. ಬೋಧನೆ, ಸಂಶೋಧನೆ ಹಾಗೂ ಕೈಗಾರಿಕಾ ಸಲಹೆಯ ವಿಚಾರದಲ್ಲಿ ಐಐಟಿ ಮದ್ರಾಸ್ ದೇಶದಲ್ಲೇ ಪ್ರಮುಖ ಕೇಂದ್ರವೆನಿಸಿದೆ.ಐಐಟಿ ಮದ್ರಾಸಿನಲ್ಲಿ, ತಾಂತ್ರಿಕ ವಿಜ್ಞಾನ ಹಾಗು ಅಪ್ಪಟ ವಿಜ್ಞಾನಗಳ ವಿವಿಧ ವಿಷಯಗಳಲ್ಲಿ 15 ಶೈಕ್ಷಣಿಕ ವಿಭಾಗಗಳು, ಉನ್ನತ ಸಂಶೋಧನಾ ಕೇಂದ್ರಗಳು ಹಾಗೂ 100 ಪ್ರಯೋಗಾಲಯಗಳಿವೆ. ತನ್ನ ಸಮಕಾಲೀನ ಸಂಸ್ಥೆಗಳ ಪ್ರಕಾರ, ಈ ಐಐಟಿಗಳು ವಿಶ್ವದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಪರಿಗಣಿತವಾಗಿವೆ.[೬] ಶೈಕ್ಷಣಿಕ ಅವಧಿಯು ಆರು ತಿಂಗಳುಗಳ ಕಾಲ ನಡೆಯುವುದು. ಪ್ರತಿ ಅರ್ಧವಾರ್ಷಿಕ ಅವಧಿಯಲ್ಲಿ ಕನಿಷ್ಠ ಪಕ್ಷ ಎಪ್ಪತ್ತು ದಿನಗಳ ಕಾಲ ಬೋಧನಾ ತರಗತಿಗಳು ನಡೆಯುವವು. ಬೋಧನೆಯು ಆಂಗ್ಲ ಮಾಧ್ಯಮದಲ್ಲಿರುವುದು. ಅರ್ಧವಾರ್ಷಿಕ ಅವಧಿಯುದ್ದಕ್ಕೂ ವಿದ್ಯಾರ್ಥಿಗಳ ಸತತ ಮೌಲ್ಯಮಾಪನ ನಡೆಸಲಾಗುತ್ತದೆ. ಐಐಟಿಗೆ (ಸ್ವಾಯತ್ತ)ಸ್ವಯಮಾಧಿಕಾರ ದೊರಕಿರುವ ಕಾರಣ, ಬೋಧಕ ವೃಂದವೇ ವಿದ್ಯಾರ್ಥಿಗಳ ಮೌಲ್ಯಮಾಪನಾ ಕಾರ್ಯ ನಡೆಸುವುದು. ದೇಶ ಹಾಗೂ ವಿದೇಶಿ ಸಮಕಾಲೀನ ಮೌಲ್ಯಮಾಪಕರು ಪ್ರತಿಪಾದಿತ ವಿಷಯ (ತೆಸಿಸ್) ಪರಿಶೀಲನೆಯ ಮೇಲೆ ಸಂಶೋಧನಾ ಕಾರ್ಯವು ಅವಲಂಬಿತವಾಗಿರುತ್ತದೆ. ಅಧಿಶಾಸನದಡಿ ಅಧ್ಯಯನದ ಪಠ್ಯಕ್ರಮವನ್ನು ವಿದ್ಯಾಸಂಸ್ಥೆಯ ಅತ್ಯುನ್ನತ ಶೈಕ್ಷಣಿಕ ಮಂಡಲಿಯಾಗಿ ಸೆನೇಟ್ ಸಂಪುಟ ಸಿದ್ಧಪಡಿಸುವುದು.
ಆರಂಭಿಕ ಪದವಿ ಶಿಕ್ಷಣ ಪಠ್ಯಕ್ರಮ
ಬದಲಾಯಿಸಿ- ಆರಂಭಿಕ ಪದವಿ ಪಠ್ಯಕ್ರಮಕ್ಕೆ ಸೇರ್ಪಡೆ ಕ್ರಮ
ಜೆಇಇ: ಐಐಟಿಗಳಲ್ಲಿ ವ್ಯಾಸಂಗಕ್ಕೆ ಸೇರ್ಪಡೆಯಾಗಲು ಪ್ರತಿವರ್ಷವೂ ಸಂಯುಕ್ತ ಪ್ರವೇಶ ಪರೀಕ್ಷೆ (ಜಾಯಿಂಟ್ ಎಂಟ್ರನ್ಸ್ ಎಕ್ಸಾಮಿನೇಷನ್) ನಡೆಸಲಾಗುವುದು. ಇದರಲ್ಲಿ ತೇರ್ಗಡೆ ಹೊಂದಿದವರಿಗೆ ಪದವಿ ವ್ಯಾಸಂಗ ಮಾಡಲು ಐಐಟಿಗಳಲ್ಲಿ ಅವಕಾಶವುಂಟು. ಇದು ತೀವ್ರ ಸ್ಪರ್ಧಾತ್ಮಕ ಪರೀಕ್ಷೆ ಎನ್ನಲಾಗಿದೆ.[ಹೆಚ್‌ಎಸ್‌ಇಇ]: ಐಐಟಿ ಮದ್ರಾಸ್ ಮಾನವಿಕ ಮತ್ತು ಸಮಾಜ ವಿಜ್ಞಾನ ಪ್ರವೇಶ ಪರೀಕ್ಷೆ ನಡೆಸುತ್ತದೆ. ಇದರಲ್ಲಿ ತೇರ್ಗಡೆ ಹೊಂದಿದವರು ಬಹಳಷ್ಟು ನಾವೀನ್ಯವುಳ್ಳ ಐದು ವರ್ಷಗಳ ಅವಧಿಯ ಸ್ನಾತಕೋತ್ತರ ಪಠ್ಯಕ್ರಮಕ್ಕೆ ಸೇರ್ಪಡೆಯಾಗಬಹುದು. ಮೂರು ವಿಷಯಗಳು ಇದರಲ್ಲಿ ಲಭ್ಯ:
ಅಭಿವೃದ್ಧಿಪರ ಅಧ್ಯಯನಗಳು, ಅರ್ಥಶಾಸ್ತ್ರ ಹಾಗೂ ಇಂಗ್ಲಿಷ್ ಅಧ್ಯಯನಗಳು. ಐಐಟಿ ಮದ್ರಾಸ್‌ನಲ್ಲಿ ಕೇವಲ 39 ವಿದ್ಯಾರ್ಥಿಗಳು ಆಯ್ಕೆಯಾಗುವರು. ಈ ಪರೀಕ್ಷೆಗಾಗಿ ಪಠ್ಯಕ್ರಮವು ಹೀಗಿವೆ: 25% ಇಂಗ್ಲಿಷ್ ಮತ್ತು ಗ್ರಹಿಕೆ (English and Comprehension), 25% ಪರಿಮಾಣಾತ್ಮಕ ಕ್ಷಮತೆ ಮತ್ತು ವಿಶ್ಲೇಷಣಾತ್ಮಕ ಕ್ಷಮತೆ (Quantitative Ability and Analytical Ability), 50% ಸಾಮಾನ್ಯ ಅಧ್ಯಯಗಳು (ನಾಲ್ಕು ಭಾಗಗಳು - ಭಾರತೀಯ ಅರ್ಥಶಾಸ್ತ್ರ, ಭಾರತೀಯ ಸಮಾಜ, ಸಮಕಾಲೀನ ವಿಶ್ವ ವ್ಯವಹಾರಗಳು, ಪರಿಸರ ಮತ್ತು ಪರಿಸರ ವಿಜ್ಞಾನ)
ಪದವಿ ಪಠ್ಯಕ್ರಮ
ಬದಲಾಯಿಸಿ- ಪದವಿ ಶಿಕ್ಷಣ ಪಠ್ಯಕ್ರಮಕ್ಕೆ ಸೇರ್ಪಡೆ
ಜಿಎಟಿಇ: ಐಐಟಿಗಳಲ್ಲಿ ಸ್ನಾತಕೋತ್ತರ ಯಾಂತ್ರಿಕ ವಿಜ್ಞಾನ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ಪ್ರವೇಶ ನೋಡಿಕೊಳ್ಳಲು ಜಿಎಟಿಇ (ತಾಂತ್ರಿಕ ವಿಜ್ಞಾನದಲ್ಲಿ ಪದವಿಧರರ ಅರ್ಹತಾ ಪರೀಕ್ಷೆ (ಗ್ರ್ಯಾಜುಯೆಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್)) ಪ್ರವೇಶ ಪರೀಕ್ಷೆಯಾಗಿದೆ.
ಜಿಎಎಂ: ಐಐಟಿಗಳಲ್ಲಿ ಸ್ನಾತಕೋತ್ತರ ವಿಜ್ಞಾನ ಪಠ್ಯಕ್ರಮಗಳಿಗಾಗಿ ಸೇರ್ಪಡೆ ನೋಡಿಕೊಳ್ಳಲು ಎಂಎಸ್‌ಸಿಗಾಗಿ ಜಂಟಿ ಸೇರ್ಪಡೆ (ಜಾಯಿಂಟ್ ಅಡ್ಮಿಷನ್ ಟು ಎಂ.ಎಸ್‌ಸಿ) ಪರೀಕ್ಷೆ ಪದ್ದತಿಯನ್ನು ಬಳಸುತ್ತದೆ.
ಆಡಳಿತ ನಿರ್ವಹಣಾ ಪಠ್ಯಕ್ರಮ ಯೋಜನೆ
ಬದಲಾಯಿಸಿ- ಎಂಬಿಎ ವ್ಯಾಸಂಗಕ್ಕಾಗಿ ಸೇರ್ಪಡೆ
ಜಎಂಇಟಿ: ಐಐಟಿಗಳಲ್ಲಿ ಎಂಬಿಎ ಪಠ್ಯಕ್ರಮಗಳಿಗೆ ಸೇರ್ಪಡೆ ನೋಡಿಕೊಳ್ಳಲು ವ್ಯವಸ್ಥಾಪನಾ ಪಠ್ಯಕ್ರಮಕ್ಕಾಗಿ ಜಂಟಿ ಆಡಳಿತ ನಿರ್ವಹಣಾ ಪ್ರವೇಶ ಪರೀಕ್ಷೆ (Joint Management Entrance Test) ನಡೆಸಲಾಗುವುದು. ಇದರ ನಂತರ ಗ್ರೂಫ್ ಟಾಸ್ಕ್ ಅಭ್ಯಾಸ ಹಾಗೂ ವೈಯಕ್ತಿಕ ಸಂದರ್ಶನವಿರುವುದು.
ಕ್ರೆಡಿಟ್ ಪದ್ದತಿ (ಅರ್ಹತಾ ಅಂಕದ ಆಧಾರಿತ)
ಬದಲಾಯಿಸಿಇತರೆ ಐಐಟಿಗಳಂತೆ, ಐಐಟಿ ಮದ್ರಾಸ್‌ನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಅರ್ಹತಾ ಅಂಕದ ಆಧಾರಿತ ಪದ್ದತಿ ಮೂಲಕ ಅಳೆಯಲಾಗುವುದು. ಜಿಪಿಎ ಒಂದರಿಂದ ಹತ್ತರ ತನಕದ ಶ್ರೇಣಿಯಲ್ಲಿದೆ. ಪ್ರತಿ ವಿಷಯವೂ ನಿರ್ದಿಷ್ಟ ಕ್ರೆಡಿಟ್‌ಗಳನ್ನು ಹೊಂದಿರುತ್ತದೆ. (ಸಾಮಾನ್ಯವಾಗಿ 1ರಿಂದ 4). ಪದವಿ ಶಿಕ್ಷಣ ಅವಧಿಯಲ್ಲಿ ಕನಿಷ್ಠ ಸಂಖ್ಯೆಯಲ್ಲಿ ಕ್ರೆಡಿಟ್ ಸಂಪಾದಿಸತಕ್ಕದ್ದು. ಇದು ಪಠ್ಯಕ್ರಮ, ವಿಭಾಗ ಮತ್ತು ವಿಶಿಷ್ಟಗೊಳಿಸುವಿಕೆಯನ್ನು ಅವಲಂಬಿಸುತ್ತದೆ. ಪ್ರತಿ ವಿಷಯಕ್ಕೂ ಕೆಳಕಂಡ ಇಂಗ್ಲಿಷ್ ಅಕ್ಷರಗಳ ಪ್ರಕಾರ ದರ್ಜೆ ನೀಡಲಾಗುವುದು:
ಅಕ್ಷರ ಶ್ರೇಣಿ | S | A | B | C | D | E | U | W |
---|---|---|---|---|---|---|---|---|
ದರ್ಜೆ ಅಂಕಗಳು | 10 | 9 | 8 | 7 | 6 | 4 | 0 | 0 |
U ದರ್ಜೆ ಎಂದರೆ ಆ ವಿಷಯದಲ್ಲಿ ಅನುತ್ತೀರ್ಣ, W ಎಂದರೆ ಅಗತ್ಯ ಹಾಜರಾತಿ ಸಾಲದು,ಇವೆರಡರಲ್ಲಿ ಯಾವುದಾದರೂ ಒಂದನ್ನು ಪರಿಗಣಿಸಿದರೂ ವಿಷಯದಲ್ಲಿ ಅನುತ್ತೀರ್ಣ ಎಂದೇ ನಿರ್ಣಯಿಸಲಾಗುವುದು.
ಒಟ್ಟಾರೆ-ಕ್ರೆಡಿಟ್ ಪ್ರಕಾರದ ಸರಾಸರಿಯಂತೆ ಜಿಪಿಎಯನ್ನು ಲೆಕ್ಕಿಸಲಾಗುವುದು:
ಇದರಲ್ಲಿ:
-
- ವಿಷಯಗಳ ಸಂಖ್ಯೆ,
- ವಿಷಯಕ್ಕಾಗಿ ಕ್ರೆಡಿಟ್‌ಗಳು,
- ವಿಷಯಕ್ಕಾಗಿ ಗ್ರೇಡ್ ಅಂಕಗಳು, ಹಾಗೂ,
- ಒಟ್ಟಾರೆ ಗ್ರೇಡ್ ಅಂಕದ ಸರಾಸರಿ.
ಪ್ರಸ್ತುತ, ಅನುತ್ತೀರ್ಣ ದರ್ಜೆಯ ನಂತರ ಪೂರಕ ಉತ್ತೀರ್ಣ ದರ್ಜೆ ಗಳಿಸಿದಲ್ಲಿ, ಯಲ್ಲಿ ಅನುತ್ತೀರ್ಣ ಅಂಕವನ್ನು ಬಳಸಲಾಗುವುದಿಲ್ಲ. ಈ ಅನುತ್ತೀರ್ಣ ದರ್ಜೆಗಳನ್ನು ಮಾಹಿತಿ ಸಂಗ್ರಹದಿಂದ ಅಳಿಸಿ, ಇದರ ಬದಲಿಗೆ ಅಡಿಬರಹದಲ್ಲಿ ಉತ್ತೀರ್ಣ ದರ್ಜೆ ಪಡೆಯಲು ಮಾಡಿದ ಯತ್ನಗಳ ಸಂಖ್ಯೆಯನ್ನು ನಮೂದಿಸಲಾಗುವುದು. ಕೆಲವು ವಿಷಯಗಳನ್ನು ಉತ್ತೀರ್ಣ-ಅನುತ್ತೀರ್ಣ ವಿಷಯಗಳೆಂದೇ ಪರಿಗಣಿಸಲಾಗುವುದು. ವಿದ್ಯಾರ್ಥಿಯು ಇದರಲ್ಲಿ ಉತ್ತೀರ್ಣರಾದರೂ ಸಾಕು. ಆದರೆ, ಸಿಜಿಪಿಎ ಗಣನೆಗೆ ತೆಗೆದುಕೊಳ್ಳುವಾಗ ಈ ವಿಷಯಗಳಲ್ಲಿ ಗಳಿಸಿದ ಅಂಕಗಳು/ಗ್ರೇಡ್‌ಗಳನ್ನು ಸೇರಿಸಿಕೊಳ್ಳಲಾಗುವುದಿಲ್ಲ.
ಇತರೆ ಶೈಕ್ಷಣಿಕ ಚಟುವಟಿಕೆಗಳು
ಬದಲಾಯಿಸಿಶೈಕ್ಷಣಿಕ ಸಂಶೋಧನಾ ಕಾರ್ಯಚಟುವಟಿಕೆಗಳು
ಬದಲಾಯಿಸಿಐಐಟಿ ಮದ್ರಾಸ್‌ನಲ್ಲಿ, ತಾಂತ್ರಿಕ ವಿಜ್ಞಾನ ಹಾಗೂ ಅಪ್ಪಟ ವಿಜ್ಞಾನ ವಿಷಯಗಳಲ್ಲಿ ಹಲವು ವಿಭಾಗಗಳು ಹಾಗೂ ಆಧುನಿಕ ಸಂಶೋಧನಾ ಕೇಂದ್ರಗಳು ಹಾಗೂ 100 ಪ್ರಯೋಗಾಲಯಗಳಿವೆ. ವಿಶ್ವದರ್ಜೆಯ ಬೋಧಕವೃಂದ, ಪ್ರತಿಭಾವಂತ ವಿದ್ಯಾರ್ಥಿಗಳ ಸಮುದಾಯ, ಉತ್ಕೃಷ್ಠ ತಾಂತ್ರಿಕ ಮತ್ತು ಸಹಯೋಗಿ ಸಿಬ್ಬಂದಿ, ಕ್ರಿಯಾಶೀಲತೆಯುಳ್ಳ ಆಡಳಿತ ವರ್ಗ ಹಾಗೂ, ವಿಶ್ವದೆಲ್ಲೆಡೆ ಪ್ರಸಿದ್ಧಿ ಗಳಿಸಿರುವ ಐಐಟಿಯ ಹಳೆಯ ವಿದ್ಯಾರ್ಥಿಗಳು - ಇವೆಲ್ಲವೂ ಸಹ ಐಐಟಿ ಪ್ರತಿಷ್ಠಿತ ಸ್ಥಾನಮಾನ ಹೆಚ್ಚಿಸಲು ಕಾರಣವಾಗಿವೆ.ಎಂಎಸ್ ಅಥವಾ ಪಿಹೆಚ್‌ಡಿ ಪ್ರದಾನ ಮಾಡುವ ವಿಭಾಗಗಳೊಳಗೇ ಬೋಧನಾ ವೃಂದಗಳು ಅಥವಾ ವಿಶಿಷ್ಟ ಸಂಶೋಧನಾ ಸಮುದಾಯಗಳು ಸಂಶೋಧನಾ ಕಾರ್ಯ ನಡೆಸುವವು. ಇಂತಹ ವಿಭಾಗೀಯ ವ್ಯಾಸಂಗ ಕ್ರಮದಲ್ಲಿ ಸೇರ್ಪಡೆಯಾದ ವಿದ್ಯಾರ್ಥಿಗಳು ತಮ್ಮ ಬೋಧಕರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯದಲ್ಲಿ ತೊಡಗುವರು. ಪ್ರತಿಯೊಂದು ವಿಭಾಗವೂ ಕೈಪಿಡಿಗಳು, ಭಿತ್ತಿಪತ್ರಗಳು ಹಾಗೂ ಸಂಕ್ಷಿಪ್ತ ಪ್ರಕಟಣೆಗಳ ಮೂಲಕ ತನ್ನ ಅಧ್ಯಯನ ವಿಷಯಗಳನ್ನು ಶಿಕ್ಷಣ ಸಮುದಾಯಕ್ಕೆ ಮಾಹಿತಿ ಒದಗಿಸುವುದು. ಈ ಅಧ್ಯಯನ ವಿಷಯಗಳು ಸೈದ್ಧಾಂತಿಕವಾಗಿರಬಹುದು ಅಥವಾ ಪ್ರಾಯೋಗಿಕವಾಗಿರಬಹುದು. ಗೊತ್ತುಪಡಿಸಲಾದ ವಿಶೇಷ ಕ್ಷೇತ್ರಗಳಲ್ಲಿ ಹದಿನಾರು ಅಂತರ-ವಿಭಾಗೀಯ ಸಂಶೋಧನಾ ಯೋಜನೆಗಳನ್ನು ಐಐಟಿ ಮದ್ರಾಸ್ ಚಾಲಿತಗೊಳಿಸಿದೆ.ಪ್ರತಿಯೊಂದು ಸ್ತರದಲ್ಲಿ ಕಟ್ಟುನಿಟ್ಟಾದ ಶೈಕ್ಷಣಿಕ ಅಧ್ಯಯನದೊಂದಿಗೆ ಹಲವು ಸಂಬಂಧಿತ ಪಠ್ಯೇತರ ಚಟುವಟಿಕೆಗಳು ಸಮತೋಲನದಲ್ಲಿವೆ. ವಿಶೇಷ ಬೋಧನಾ ಸರಣಿ ಕಾರ್ಯಕ್ರಮದಡಿ ಶೈಕ್ಷಣಿಕವಾಗಿ ಸಂಬಂಧವಿರುವ ವಿವಿಧ ವಿಷಯಗಳ ಬಗ್ಗೆ ವಿಶೇಷ ಬೋಧನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಬೋಧನಾವೃಂದವು ಹಲವು ಸಮ್ಮೇಳನಗಳು, ವಿಚಾರಗೋಷ್ಠಿಗಳು ಹಾಗೂ ಕಾರ್ಯಾಗಾರಗಳನ್ನು ಆಯೋಜಿಸುವುದು. ವಿಶ್ವದೆಲ್ಲೆಡೆಯಿಂದ ಹಲವು ತಜ್ಞರು ಮತ್ತು ವಿದ್ಯಾರ್ಥಿವೇತನ ಪಡೆಯುತ್ತಿರುವವರು ಇವುಗಳಲ್ಲಿ ಸಕ್ರಿಯರಾಗಿ ಭಾಗವಹಿಸುವರು.
ಇತರೆ ವಿಶ್ವವಿದ್ಯಾನಿಲಯಗಳೊಂದಿಗೆ ಸಹಯೋಗ
ಬದಲಾಯಿಸಿಐಐಟಿ ವಿಶ್ವದಾದ್ಯಂತ ಹಲವು ಇತರೆ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಯೋಗಿತ್ವ ಹೊಂದಿದೆ. ಈ ಸಹಯೋಗದಲ್ಲಿ ಬೋಧನಾವೃಂದದ ಪರಸ್ಪರ ವಿನಿಮಯವು ಬಹುಮುಖ್ಯ ಪಾತ್ರ ವಹಿಸಿದೆ. ಐಐಟಿ ಮದ್ರಾಸ್ ಹಲವು ವಿದೇಶಿ ವಿಶ್ವವಿದ್ಯಾನಿಲಯಗಳೊಂದಿಗೆ ಹಲವು ಷರತ್ತುಬದ್ಧ ಒಪ್ಪಂದಗಳಲ್ಲಿ ಸಹಭಾಗಿತ್ವ ಪಡೆದಿದೆ. ಇದರಂತೆ ಸಹಕಾರೀ ಯೋಜನೆಗಳು ಹಾಗೂ ಉಭಯ ವರ್ಗಗಳಿಗೂ ಉಪಯೋಗವಾಗುವಂತಹ ಹಲವು ಸಂಶೋಧನಾ ಕಾರ್ಯಗಳು ನಡೆಯುತ್ತಿವೆ.
ಈ ಶಿಕ್ಷಣ ಸಂಸ್ಥೆಯ ಬೋಧನಾವೃಂದದವರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಹಲವು ಶೈಕ್ಷಣಿಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಕೈಗಾರಿಕಾ ಸಲಹೆ ಹಾಗೂ ಪ್ರಾಯೋಜಿತ ಸಂಶೋಧನೆ
ಬದಲಾಯಿಸಿತನ್ನ ಬೋಧನಾ ವೃಂದದವರು ವಿವಿಧ ಉದ್ದಿಮೆ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಸಲಹೆಗಾರರಾಗಿರುವುದರ ಮೂಲಕ, ಉದ್ದಿಮೆಗಳೊಂದಿಗೆ ಸಾಂಸ್ಥಿಕ ಪರಸ್ಪರ ಕ್ರಿಯೆಗೆ ಐಐಟಿ ಮದ್ರಾಸ್ ಇಡೀ ದೇಶದಲ್ಲೇ ಅತ್ಯುತ್ತಮ ಉದಾಹರಣೆಯಾಗಿದೆ. ಭಾರತದ ಇತರೆ ಶಿಕ್ಷಣ ಸಂಸ್ಥೆಗಳ ನೆರವಿನೊಂದಿಗೆ, ನವೀನತೆಯುಳ್ಳ ಪರಿಕಲ್ಪನೆಗಳನ್ನು ಹಲವು ಯೋಜನೆಗಳಲ್ಲಿ ಪ್ರಯೋಗಿಸಲಾಗಿದೆ.
ಕೈಗಾರಿಕಾ ಸಲಹೆಗಳ ಮೂಲಕ, ಬೋಧನಾವೃಂದ ಮತ್ತು ಸಿಬ್ಬಂದಿಯವರು ಕೈಗಾರಿಕಾ ಕ್ಷೇತ್ರಕ್ಕಾಗಿ ವಿಶಿಷ್ಟ ಕಾರ್ಯ ಮಾಡುವರು. ಇದರಲ್ಲಿ ಯೋಜನಾ ವಿನ್ಯಾಸ, ಪರೀಕ್ಷಣ ಮತ್ತು ಮೌಲ್ಯಮಾಪನ, ಅಥವಾ ಕೈಗಾರಿಕಾ ಅಭಿವೃದ್ಧಿಯ ಹೊಸ ಕ್ಷೇತ್ರಗಳಲ್ಲಿ ತರಬೇತಿಗಳು ಸಹ ನಡೆಯುತ್ತವೆ. ಕೈಗಾರಿಕಾ ಸಲಹಾ ಮತ್ತು ಪ್ರಾಯೋಜಿತ ಸಂಶೋಧನಾ ಕೇಂದ್ರದ (ಐಸಿಎಸ್‌ಅರ್) ಮೂಲಕ ಆಯ್ದುಕೊಳ್ಳಲಾದ ಕೆಲವು ವಿಶಿಷ್ಟ ಕಾರ್ಯಗಳನ್ನು ಕೈಗೊಳ್ಳುವಂತೆ ಆಸಕ್ತ ಕೈಗಾರಿಕಾ ಮತ್ತು ಸಂಘಟನೆಯವರು ಐಐಟಿ ಬೋಧಕವೃಂದದವರನ್ನು ಕೋರುವರು.
ಬೋಧನಾವೃಂದದವರು ಕಾರ್ಯನಿರ್ವಹಿಸುವ ಯೋಜನೆಗಳಿಗೆ ನಿಧಿನೆರವು ನೀಡುವುದರ ಮೂಲಕ ರಾಷ್ಟ್ರೀಯ ಸಂಘಗಳು ವಿಶಿಷ್ಟ ಸಂಶೋಧನಾ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತವೆ. ಇಂತಹ ಸಂಶೋಧನೆಗಳಿಗೆ ಸಮಯ-ಸೀಮಿತವಾಗಿದ್ದು, ಯೋಜನೆಯಲ್ಲಿ ಪಾಲ್ಗೊಳ್ಳುವವರು ಪದವಿಗಾಗಿ ನೋಂದಾಯಿಸಿಕೊಳ್ಳಲು ಅನುಮತಿ ನೀಡುತ್ತದೆ. ಯೋಜನೆಯ ಪ್ರಸ್ತಾಪಗಳನ್ನು ಸಾಮಾನ್ಯವಾಗಿ ಐಐಟಿ ಬೋಧನಾವೃಂದದವರು ಸಿದ್ಧಪಡಿಸುವರು.ಸಂಶೋಧನೆಯ ವಿಧಾನಗಳು ಹಾಗು ಇಂತಹ ಯೋಜನೆಗಳಿಗೆ ಧನಸಹಾಯ ನೀಡುವ ಆಸಕ್ತಿಯನ್ನು ಆಧರಿಸಿ, ಇದನ್ನು ಆಸಕ್ತ ಸಂಘಗಳಿಗೆ ರವಾನಿಸಲಾಗುವುದು.
ಇಂತಹ ಪ್ರಾಯೋಜಿತ ಯೋಜನೆಗಳು ಆಗಾಗ್ಗೆ ವಿಭಾಗಗಳೊಳಗಿನ ಹೊಸ ಸಂಪನ್ಮೂಲಗಳಿಗೆ ಮಾರ್ಗಗಳಾಗಿವೆ. ಇವು ಆಗಾಗ್ಗೆ ಸಂಸ್ಥೆಗಳಲ್ಲಿ ಶೈಕ್ಷಣಿಕ ಪದವಿಗಾಗಿ ನೋಂದಾಯಿಸಿಕೊಳ್ಳಲು ಯೋಜನಾ ಸಿಬ್ಬಂದಿಗೆ ಅನುಮತಿ ನೀಡುತ್ತವೆ. ಐಸಿಎಸ್‌ಆರ್ ಸಂಸ್ಥೆಯಲ್ಲಿನ ಎಲ್ಲಾ ಪ್ರಾಯೋಜಿತ ಸಂಶೋಧನಾ ಚಟುವಟಿಕೆಗಳ ಸಮಭಾಗಿತ್ವ ವಹಿಸುತ್ತದೆ.
ವಿದ್ಯಾರ್ಥಿ ಚಟುವಟಿಕೆಗಳು
ಬದಲಾಯಿಸಿಶಾಸ್ತ್ರ
ಬದಲಾಯಿಸಿಶಾಸ್ತ್ರ ಎಂಬುದು ಐಐಟಿ ಮದ್ರಾಸ್‌ನಲ್ಲಿ ನಡೆಯುವ ವಾರ್ಷಿಕ ತಾಂತ್ರಿಕ ಉತ್ಸವ. ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಈ ಉತ್ಸವ ನಡೆಯುತ್ತದೆ. ಚೆನ್ನೈ ನಗರದಲ್ಲಿ ನಡೆಯುವ ವಿದ್ಯಾರ್ಥಿ ಉತ್ಸವಗಳ ಪೈಕಿ ಇದು ಐಎಸ್‌ಒ 9001:2000 ಪ್ರಮಾಣ ಪತ್ರ ಪಡೆದಿದೆ. ಸುಸಂಘಟಿತ ಆಯೋಜನೆ, ಅದ್ಭುತವಾದ ಚಟುವಟಿಕೆಗಳ ಶ್ರೇಣಿ ಹಾಗೂ ಭಾರತದಲ್ಲಿ ತಾಂತ್ರಿಕ ವಿಜ್ಞಾನ ಪ್ರತಿಭೆಯನ್ನು ಗುರುತಿಸುವ ಪರಂಪರೆಯು ಇದರಲ್ಲಿ ದೃಢವಾಗುತ್ತಿದೆ. ವೇದಿಕೆಗಳಲ್ಲಿ ಕಾರ್ಯಾಗಾರಗಳು, ವೀಡಿಯೊ ಸಮ್ಮೇಳನ, ಬೋಧನೆಗಳು, ಪ್ರದರ್ಶನಗಳು ಹಾಗೂ ತಾಂತ್ರಿಕ ಪ್ರದರ್ಶನಗಳು ಸೇರಿವೆ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ವಿನ್ಯಾಸ, ಪ್ರಾಯೋಜನಾ ಪ್ರಾತ್ಯಕ್ಷಿತೆಯ ರೂಪುರೇಖೆ, ಪ್ರತ್ಯಾನುಕರಣಗಳು, ರಸಪ್ರಶ್ನೆಗಳು, ಆನ್ವಿಕ ತಾಂತ್ರಿಕ ವಿಜ್ಞಾನ, ರೊಬೊಟಿಕ್ಸ್, 'ಗುಜರಿ-ತಾಣ'ದ ಯುದ್ಧಗಳು ಮತ್ತು ಅಪರೂಪದ ವಿಸ್ಮಯಕಾರಿ ಉಪಕರಣ-ಸಲಕರಣೆಗಳ ವಿನ್ಯಾಸವೂ ಸೇರಿದೆ.
ವಿಭಾಗೀಯ ಉತ್ಸವಗಳು
ಬದಲಾಯಿಸಿಹಲವು ವಿಭಾಗಗಳು ವಿಭಾಗೀಯ ಉತ್ಸವಗಳನ್ನು ಆಯೋಜಿಸುತ್ತವೆ. ಎಕ್ಸಿಬಿಟ್ (ExeBit), ವೇವ್ಸ್ (Wavez), ಮೆಕ್ಯಾನಿಕಾ (Mechanica), ಸಿಇಎ (CEA), ಕೆಮ್‌ಕ್ಲೇವ್ (Chemclave), ಅಮಾಲ್ಗ್ಯಾಮ್ (Amalgam) ಮತ್ತು ಫೊರೇಸ್ (Forays) ಇವೆಲ್ಲವೂ ಕ್ರಮವಾಗಿ ಕಂಪ್ಯೂಟರ್ ವಿಜ್ಞಾನ ಮತ್ತು ತಾಂತ್ರಿಕ ವಿಜ್ಞಾನ, ಸಾಗರ ತಾಂತ್ರಿಕ ವಿಜ್ಞಾನ, ಯಾಂತ್ರಿಕ-ತಾಂತ್ರಿಕ ವಿಜ್ಞಾನ, ಕಟ್ಟಡ ನಿರ್ಮಾಣ ತಾಂತ್ರಿಕ ವಿಜ್ಞಾನ, ರಾಸಾಯನಿಕ ತಾಂತ್ರಿಕ ವಿಜ್ಞಾನ, (ಖನಿಜ)ಲೋಹಶಾಸ್ತ್ರೀಯ ಹಾಗೂ ವಸ್ತು ತಾಂತ್ರಿಕ ವಿಜ್ಞಾನ ಮತ್ತು ಗಣಿತ ವಿಭಾಗಗಳು ಆಯೋಜಿಸುತ್ತವೆ.
ಉತ್ಸವದ ಹೆಸರು | ವಿಭಾಗ |
---|---|
ಎಕ್ಸಿಬಿಟ್ | ಕಂಪ್ಯೂಟರ್ ವಿಜ್ಞಾನ ಮತ್ತು ತಾಂತ್ರಿಕ ವಿಜ್ಞಾನ |
ಅಮ್ಯಾಲ್ಗಮ್ Archived 8 October 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. | ಲೋಹಶಾಸ್ತ್ರೀಯ ಮತ್ತು ವಸ್ತು ತಾಂತ್ರಿಕ ವಿಜ್ಞಾನ |
ಸಿಇಎ Archived 6 February 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. | ಕಟ್ಟಡ ನಿರ್ಮಾಣ ತಾಂತ್ರಿಕ ವಿಜ್ಞಾನ |
ಕೆಮ್‌ಕ್ಲೇವ್ | ರಾಸಾಯನಿಕ ತಾಂತ್ರಿಕ ವಿಜ್ಞಾನ |
ಫೊರೇಸ್ Archived 11 June 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. | ಗಣಿತಶಾಸ್ತ್ರ |
ಮೆಕ್ಯಾನಿಕಾ | ಯಂತ್ರ ತಾಂತ್ರಿಕ ವಿಜ್ಞಾನ |
ವೇವ್ಸ್ | ಸಾಗರ ತಾಂತ್ರಿಕ ವಿಜ್ಞಾನ |
ಸಮನ್ವಯ Archived 19 October 2016[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. | ವ್ಯವಸ್ಥಾಪನಾ ಅಧ್ಯಯನ |
ವಸತಿ ನಿಲಯಗಳು
ಬದಲಾಯಿಸಿಐಐಟಿ ಮದ್ರಾಸ್ ವಿದ್ಯಾರ್ಥಿಗಳಲ್ಲಿ ಹಲವರು ವಸತಿ ನಿಲಯಗಳಲ್ಲಿ ವಾಸಿಸುವರು. ಇಲ್ಲಿ ಬಹಳಷ್ಟು ಶೈಕ್ಷಣಿಕ ದಿನಚರಿಗೆ ಪೂರಕವಾಗಿರುವ ಬಹಳಷ್ಟು ಜನರನ್ನು ಒಳಗೊಳ್ಳುವ ಪಠ್ಯೇತರ ಚಟುವಟಿಕೆಗಳು ನಡೆಯುವವು. ಈ ವ್ಯಾಪ್ತಿಯಲ್ಲಿ 17 ವಸತಿ ನಿಲಯಗಳಿವೆ. ಇವುಗಳಲ್ಲಿ ಎರಡು ವಸತಿಗಳಾದ ಶರಾವತಿ ಮತ್ತು ಸರಯೂ ಮಹಿಳೆಯರಿಗೆ ಮಾತ್ರ ಮೀಸಲಾಗಿವೆ. ಹಿಂದಿನ ಕಾಲದಲ್ಲಿ, ಪ್ರತಿಯೊಂದು ವಸತಿ ನಿಲಯದಲ್ಲಿ ಊಟದ ಮನೆಗಳಿದ್ದವು. ಇವುಗಳನ್ನು ಇಂದು ಮುಚ್ಚಲಾಗಿವೆ. ಶರಾವತಿ ಹಾಗೂ ಏಳು ಮಹಡಿಗಳುಳ್ಳ ನಾಲ್ಕು ವಸತಿ ನಿಲಯಗಳಲ್ಲಿ ಊಟದ ಮನೆಗಳಿಲ್ಲ. ವಿಂಧ್ಯಾ ಮತ್ತು ಹಿಮಾಲಯ ಎನ್ನಲಾದ ಎರಡು ದೊಡ್ಡ, ಕೇಂದ್ರೀಕೃತ ಊಟದ ಮನೆಗಳಲ್ಲಿ ಭೋಜನ ಸೌಕರ್ಯ ಒದಗಿಸಲಾಗಿದೆ. ವಸತಿ ನಿಲಯಗಳಲ್ಲಿ ಪದವಿ ಹಾಗೂ ಪವವಿಧರ ವಿದ್ಯಾರ್ಥಿಗಳು ವಾಸಿಸುವರು. ಆದರೆ ಇವೆರಡೂ ಗುಂಪುಗಳನ್ನು ಪ್ರತ್ಯೇಕವಾಗಿಡಲಾಗುವುದು. ಸೇರ್ಪಡೆಯ ಸಮಯದಲ್ಲಿ, ವಿದ್ಯಾರ್ಥಿಗಳನ್ನು ವಸತಿ ನಿಲಯಗಳಲ್ಲಿರಿಸಲಾಗುವುದು. ಐಐಟಿಯ ಅವಧಿಯುದ್ದಕ್ಕೂ ಈ ವಸತಿ ನಿಲಯಗಳಲ್ಲಿಯೇ ಇರುವರು. ವಸತಿ ನಿಲಯಗಳನ್ನು ಭಾರತದ ಪ್ರಮುಖ ನದಿಗಳ ಹೆಸರುಗಳನ್ನಾಧರಿಸಿ ಕರೆಯಲಾಗುವುದು. ಐಐಟಿ ಬಸ್‌ಗಳಿಗೆ ಪರ್ವತಗಳ ಹೆಸರು ಇಡಲಾಗಿದೆ. ಹಾಗಾಗಿ, 'ಚಲಿಸುವ ಪರ್ವತಗಳು ಹಾಗೂ ನದಿಗಳು ನಿಂತಿರುವ ಏಕೈಕ ಜಾಗ ಐಐಟಿ ಮದ್ರಾಸ್' ಎಂಬ ಚಮತ್ಕಾರಿ ಚುಟುಕ ಪ್ರಚಲಿತವಾಗಿದೆ.
ಐಐಟಿಎಮ್‌ನ ವಸತಿ ನಿಲಯಗಳ ಹೆಸರುಗಳು ಕೆಳಕಂಡಂತಿವೆ:
- ಸರಸ್ವತಿ (ಸರಸ್)
- ಕೃಷ್ಣ
- ಕಾವೇರಿ
- ಬ್ರಹ್ಮಪುತ್ರ (ಬ್ರಹ್ಮಸ್)
- ತಪತಿ
- ಗೋದಾವರಿ (ಗೋದಾವ್)
- ಅಲಕನಂದ (ಅಲಕ್)
- ಜಮುನಾ (ಜಮ್)
- ಗಂಗಾ
- ನರ್ಮದಾ (ನರ್ಮದ್)
- ಮಂದಾಕಿನಿ (ಮಂದಕ್)
- ಶರಾವತಿ (ಶರಾವ್)
- ಸರಯೂ
- ಸಿಂಧೂ
- ಪಂಪಾ
- ತಾಮ್ರಪರಣಿ (ತಂಬಿ)
- ಮಹಾನದಿ (ಮಹಾನ್)
ಸಿಂಧೂ, ಪಂಪಾ, ಮಹಾನದಿ ಮತ್ತು ತಾಮ್ರಪರಣಿ ವಸತಿ ನಿಲಯಗಳಲ್ಲಿ ಏಳು ಮಹಡಿಗಳಿವೆ, ಇತರೆ ಹಳೆಯ ವಸತಿ ನಿಲಯಗಳಲ್ಲಿ ಮೂರು ಅಥವಾ ನಾಲ್ಕು ಮಹಡಿಗಳಿವೆ (2000ದ ವರೆಗೆ ಎಲ್ಲಾ ಹಳೆಯ ವಸತಿ ನಿಲಯಗಳಲ್ಲಿಯೂ ಸಹ ಮೂರು ಅಂತಸ್ತುಗಳಿದ್ದವು; ಆ ವರ್ಷ ಹೆಚ್ಚುವರಿ ಕೋಣೆಗಳನ್ನು ನಿರ್ಮಿಸಲಾಯಿತು. ಈ ನಾಲ್ಕೂ ವಸತಿ ನಿಲಯಗಳಲ್ಲಿ ಸುಮಾರು 1,500 ಜನ ವಿದ್ಯಾರ್ಥಿಗಳು ವಸತಿ ಪಡೆಯಬಹುದು.
ಪಠ್ಯೇತರ ಚಟುವಟಿಕೆಗಳು
ಬದಲಾಯಿಸಿವಾರ್ಷಿಕ ಸಾಂಸ್ಕೃತಿಕ ಉತ್ಸವ ಸಾರಂಗ್, ಚಳಿಗಾಲದಲ್ಲಿ ನಡೆಯುತ್ತದೆ. ಶಾಸ್ತ್ರ ಎಂಬುದು ಐಐಟಿಯ ತಾಂತ್ರಿಕ ಉತ್ಸವ. ಬಯಲು ರಂಗ ಮಂದಿರದಲ್ಲಿ ಇತರೆ ಚಟುವಟಿಕೆಗಳಲ್ಲದೆ, ವಾರಕ್ಕೊಮ್ಮೆ (ಶನಿವಾರದಂದು) ಚಲನಚಿತ್ರ ಪ್ರದರ್ಶಿಸಲಾಗುತ್ತದೆ. ಇದರಲ್ಲಿ 7,000 ಆಸನಗಳಿದ್ದು, ಸಾಮಾನ್ಯವಾಗಿ ಪ್ರದರ್ಶನಗಳು ನಡೆಯುವಾಗ ಚಿತ್ರಮಂದಿರವು ತುಂಬಿರುತ್ತದೆ. ಷ್ರೋಟರ್ ಎಂಬುದು ವಾರ್ಷಿಕ ಅಂತರ-ವಸತಿ ನಿಲಯಕ್ಕೆ ಪ್ರಶಸ್ತಿ-ಗೌರವ ನೀಡುವ ಕ್ರೀಡಾ ಕೂಟ.ಚರ್ಚಾ ಸಂಘ, ಖಗೋಳ ಸಂಘ ಮತ್ತು ನಾಟಕ ಸಂಘಗಳು ಸೇರಿದಂತೆ ಹಲವು ಹವ್ಯಾಸಿ ಸಂಘಗಳಿವೆ. ಸಂಗೀತ ಮತ್ತು ರೊಬಾಟಿಕ್ಸ್ ಇತ್ತೀಚೆಗಿನ ಮತ್ತು ಜನಪ್ರಿಯ ಸಂಘಗಳು.ವಿವೇಕಾನಂದ ಅಧ್ಯಯನ ಕೇಂದ್ರ (ವಿಎಸ್‌ಸಿ) ಹಾಗೂ ರಿಫ್ಲೆಕ್ಷನ್ಸ್ ಆಧ್ಯಾತ್ಮಿಕ ಚರ್ಚೆಗಳ ಮೇಲೆ ಗಮನ ಕೇಂದ್ರೀಕರಿಸುವುದು.
ಈ ಆವರಣದಲ್ಲಿ ತನ್ನದೇ ಆದ ವಿಶಿಷ್ಟ (ಸಂಭಾಷಣಾ ವಿಧಾನ)ಆಡುಮಾತನ್ನು ಬೆಳೆಸಿಕೊಂಡಿದೆ. ಇದು ಬಹುಶಃ ಉಪಭಾಷೆಯೆಂದು ಕರೆಯಬಹುದು. ಇದನ್ನು ಗಮನಿಸಿದ ಜರ್ಮನಿ ದೇಶದ ವಿಶ್ವವಿದ್ಯಾಲಯವು ಮಾಸ್ಟರ್ಸ್ ತೆಸಿಸ್ Archived 15 February 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಎಂಬುದನ್ನು ಪ್ರಕಟಿಸಿತು. ಇಲ್ಲಿ ಇಂಗ್ಲಿಷ್, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳ ಸಾರಸಂಗ್ರಹಿಯಾಗಿದ್ದು, ಆವರಣದಲ್ಲಿನ ಆಡುಭಾಷೆಯನ್ನು ಚೆನ್ನೈಯಲ್ಲಿರುವ ಇತರೆ ಕಾಲೇಜ್‌ಗಳೂ ಸಹ ಆಯ್ದುಕೊಂಡಿವೆ.ತನ್ನ ಸಹೋದರ ವಿದ್ಯಾಸಂಸ್ಥೆಗಳಿಗಿಂತಲೂ ಭಿನ್ನವಾಗಿ, ಐಐಟಿ ಮದ್ರಾಸ್‌ನಲ್ಲಿ ವಿದ್ಯಾರ್ಥಿಗಳನ್ನು ಏಕೀಕೃತಗೊಳಿಸುವಂತಹ ಯಾವುದೇ ಭಾರತೀಯ ಭಾಷೆಯಿಲ್ಲ. ತಮಿಳು, ತೆಲುಗು, ಇಂಗ್ಲಿಷ್ ಮತ್ತು ಹಿಂದಿ ಇವೆಲ್ಲ ಭಾಷೆಗಳಲ್ಲಿಯೂ ಸಂವಾದ ನಡೆಯುವುದುಂಟು. ಇದರ ಫಲವಾಗಿ, ಚರ್ಚಾಸ್ಪರ್ಧೆ, ನಾಟಕಗಳು, ಕಿರುಚಿತ್ರಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸುವ ಎಲ್ಲಾ ಚಟುವಟಿಕೆಗಳು ಎಲ್ಲವೂ ಇಂಗ್ಲಿಷ್‌ನಲ್ಲೇ ಇರುತ್ತವೆ. ಉತ್ತರ ಭಾರತದಲ್ಲಿರುವ ಐಐಟಿಗಳಿಗಿಂತಲೂ ಭಿನ್ನವಾಗಿ, ಐಐಟಿ ಮದ್ರಾಸ್‌ನಲ್ಲಿ ಹಿಂದಿಗಿಂತಲೂ ಇಂಗ್ಲಿಷ್ ಆಡುಮಾತು ಹೆಚ್ಚಾಗಿ ಕೇಳಿಬರುತ್ತದೆ.
ಸೌಲಭ್ಯಗಳು
ಬದಲಾಯಿಸಿಐಐಟಿ ಮದ್ರಾಸ್‌ನಲ್ಲಿ ವಿದ್ಯಾರ್ಥಿಗಳು, ಬೋಧನಾವೃಂದ, ಆಡಳಿತ ಮತ್ತು ಸಹಯೋಗ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ವಸತಿ ಸೌಲಭ್ಯವಿದೆ. ಹೆಚ್ಚುತ್ತಲಿರುವ ವಿದ್ಯಾರ್ಥಿ ಸಂಖ್ಯೆಯ ಅಗತ್ಯಗಳನ್ನು ಪೂರೈಸಲು, ಈ ನಿವಾಸಗಳಲ್ಲಿ ಖಾಸಗಿ ಅಡುಗೆಯವರನ್ನು ನೇಮಿಸಿಕೊಳ್ಳಲಾಗಿದೆ. ಈ ಆವರಣದಲ್ಲಿ ಎರಡು ಶಾಲೆಗಳು (ವನವಾಣಿ ಹಾಗೂ ಕೇಂದ್ರೀಯ ವಿದ್ಯಾಲಯ), ಮೂರು ದೇವಾಲಯಗಳು (ಜಲಕಂಠೇಶ್ವರ, ದುರ್ಗ ಪೆಳ್ಳಿಯಮ್ಮನ್ ಹಾಗೂ ಗಣಪತಿ ದೇವಾಲಯಗಳು), ಮೂರು ಬ್ಯಾಂಕ್‌ಗಳ ಶಾಖೆಗಳು (ಎಸ್‌ಬಿಐ, ಐಸಿಐಸಿಐ, ಕೆನರಾ ಬ್ಯಾಂಕ್), ಆಸ್ಪತ್ರೆ, ವ್ಯಾಪಾರ ಮಳಿಗೆಗಳು, ಆಹಾರ ಕೇಂದ್ರಗಳು, ವ್ಯಾಯಾಮ ಶಾಲೆ, ಈಜುಕೊಳ, ಕ್ರಿಕೆಟ್, ಫುಟ್ಬಾಲ್, ಹಾಕಿ ಮತ್ತು ಬ್ಯಾಡ್ಮಿಂಟನ್ ಕ್ರೀಡಾಂಗಣಗಳಿವೆ. ಶಿಕ್ಷಣ ವಲಯ, ಬೋಧನಾವೃಂದ ಹಾಗೂ ಸಿಬ್ಬಂದಿ ನಿವಾಸ ವಲಯಗಳಲ್ಲಿ ಹೆಚ್ಚು-ವೇಗದ ಅಂತರಜಾಲ ಸಂಪರ್ಕವು ಲಭ್ಯವಿದೆ. ವಸತಿ ನಿಲಯದಲ್ಲಿ ಅಂತರಜಾಲವು ಮಧ್ಯಾಹ್ನ ಎರಡು ಗಂಟೆಯಿಂದ ಮಧ್ಯರಾತ್ರಿಯ ತನಕ ಲಭ್ಯವಿದೆ.
ಆಹಾರ
ಬದಲಾಯಿಸಿಐಐಟಿ ಮದ್ರಾಸ್ ಆವರಣದಲ್ಲಿ ಹಲವು ಆಹಾರ ಕೇಂದ್ರಗಳಿವೆ. ಭೋಜನ ಮಂದಿರದ ಏಕತಾನತೆಯಿಂದ ಮುಕ್ತಿ ಪಡೆಯಲು ಬಯಸುವವರು ಈ ಆಹಾರ ಕೇಂದ್ರಗಳಿಗೆ ಭೇಟಿ ನೀಡಿ ಲಘು ಉಪಾಹಾರ ಸವಿಯಬಹುದು.ಸರಸ್ವತಿ ವಸತಿನಿಲಯದ ಎದುರಿಗಿರುವ, ಮುಂಚೆ ಬಸೆರಾ ಎನ್ನಲಾದ ಆಲಿವ್ ಕಿಚನ್ , ಸಂಜೆ 6 ಗಂಟೆಯಿಂದ ರಾತ್ರಿ 1 ಗಂಟೆಯ ವರೆಗೆ ತೆರೆದಿದ್ದು, ಬಹುಮಟ್ಟಿಗೆ ಉತ್ತರ ಭಾರತೀಯ ಖಾದ್ಯಗಳನ್ನು ತಯಾರಿಸಿ ಮಾರುತ್ತದೆ.ದಿ ಗುರುನಾಥ್ ಪಟೀಸರಿ ಎಂಬುದು ವಿದ್ಯಾರ್ಥಿ ಸೌಲಭ್ಯ ಕೇಂದ್ರ (ಎಸ್‌ಎಫ್‌ಸಿ)ಯಲ್ಲಿದೆ. ಇದನ್ನು ಗುರು ಅಥವಾ ಗುರುನಾಥ್ ಎನ್ನಲಾಗಿದೆ. ಇದು ವಾರದ ಏಳೂ ದಿನಗಳಂದು ಮಧ್ಯರಾತ್ರಿಯ ತನಕ ತೆರೆದಿರುತ್ತದೆ. ಇದರಲ್ಲಿ ಬೇಕರಿ, ಹಣ್ಣಿನ ರಸಗಳು, ಚಾಟ್‌ಗಳು ಮತ್ತು ಇತರೆ ಕುರುಕಲು ತಿಂಡಿಗಳನ್ನು ತಯಾರಿಸಲಾಗುತ್ತದೆ.ಕೇಂದ್ರ ಗ್ರಂಥಾಲಯಕ್ಕೆ ಬಹಳ ಹತ್ತಿರವಿರುವ ಟಿಫ್ಯಾನಿಸ್ , ಮಹಿಳೆಯರ ವಸತಿ ನಿಲಯಗಳಾದ ಸರಯು ಮತ್ತು ಶರಾವತಿ ನಡುವೆ ಇದೆ. ಇದು ತಿಂಡಿಯ ಸಮಯದಿಂದ ರಾತ್ರಿ 1 ಗಂಟೆಯ ತನಕ ತೆರೆದಿರುತ್ತದೆ. ಇಲ್ಲಿ ಮಿಶ್ರಿತ ಖಾದ್ಯಗಳನ್ನು ಬಡಿಸುವುದಲ್ಲದೆ, ನಗರದಲ್ಲಿ ಪ್ರಸಿದ್ಧವಾದ ಅರ್ಚನಾ ಸ್ವೀಟ್ಸ್ ತಯಾರಿಸಿದ ಸಿಹಿತಿಂಡಿಗಳನ್ನು ಸಹ ಮಾರುವುದು.2006ರಲ್ಲಿ ಆಡಳಿತ ವ್ಯವಸ್ಥೆ ನಿರ್ವಹಣಾ ಅಧ್ಯಯನ ವಿಭಾಗದ (ಡಿಒಎಮ್‌ಎಸ್) ಬದಿಯಲ್ಲಿ ಕೆಫೆ ಕಾಫಿ ಡೇ ಮಳಿಗೆಯನ್ನು ಆರಂಭಿಸಲಾಯಿತು. ಇದು ರಾತ್ರಿ 1 ಗಂಟೆಯ ತನಕ ತೆರೆದಿರುತ್ತದೆ.ಕ್ಯಾಂಪಸ್ ಕೆಫೆ ಸಿಬ್ಬಂದಿಯ ಉಪಾಹಾರ ಕೇಂದ್ರವಾಗಿದ್ದು, ಶೈಕ್ಷಣಿಕ ವಲಯದಲ್ಲಿ, ಬಸ್ ನಿಲ್ದಾಣದ ಬಳಿಯಿದೆ. ವಾರದ ಏಳೂ ದಿನಗಳಂದು ಬೆಳಗ್ಗೆ 8ರಿಂದ ಸಂಜೆ 8ರ ತನಕ ತೆರೆದಿರುತ್ತದೆ.ಆಲಿವ್ ಕಿಚನ್ ಮತ್ತು ಗುರುನಾಥ್ ವಸತಿ ನಿಲಯಗಳಿರುವ ವಲಯದಲ್ಲಿವೆ, ಟಿಫಾನಿಸ್ ಮತ್ತು ಕೆಫೆ ಕಾಫಿ ಡೇ ಗ್ರಂಥಾಲಯಕ್ಕೆ ಸನಿಹದಲ್ಲಿವೆ. ಶೈಕ್ಷಣಿಕ ವಲಯದಲ್ಲಿರುವ ಅತಿ ಸನಿಹ ಆಹಾರ ಕೇಂದ್ರವೆಂದರೆ ಕ್ಯಾಂಪಸ್ ಕೆಫೆ.
ಶಾಲೆಗಳು
ಬದಲಾಯಿಸಿಐಐಟಿ ಮದ್ರಾಸ್ ಆವರಣದಲ್ಲಿ ಎರಡು ಶಾಲೆಗಳಿವೆ. ಇವುಗಳಲ್ಲಿ ಬೋಧನಾವೃಂದ ಮತ್ತು ಸಿಬ್ಬಂದಿಯವರ ಮಕ್ಕಳಷ್ಟೇ ಅಲ್ಲ, ನೆರೆಯ ವೇಲಾಚೇರಿ ಹಾಗೂ ಅಡ್ಯಾರ್ ಪ್ರದೇಶಗಳ ಮಕ್ಕಳೂ ಸಹ ವ್ಯಾಸಂಗ ಮಾಡುವರು.ಕೇಂದ್ರೀಯ ವಿದ್ಯಾಲಯ (Central School) ಗಜೇಂದ್ರ ವೃತ್ತಕ್ಕೆ ಬಹಳ ಹತ್ತಿರದಲ್ಲಿದ್ದು, ನವದೆಹಲಿಯಲ್ಲಿರುವ ಕೇಂದ್ರೀಯ ಪ್ರೌಢಶಿಕ್ಷಣ ಮಂಡಲಿಯ ಸದಸ್ಯ ಶಾಲೆಯಾಗಿದೆ. ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ವಿಶಾಲ ಆಟದ ಮೈದಾನವಿದೆ. ಶಾಸ್ತ್ರ ಕಾರ್ಯಕ್ರಮವು ಪ್ರತಿವರ್ಷ ಈ ಮೈದಾನದಲ್ಲಿ ನಡೆಯುತ್ತದೆ.ವನವಾಣಿ ಮೆಟ್ರಿಕುಲೇಷನ್ ಹೈಯರ್ ಸೆಕಂಡರಿ ಸ್ಕೂಲ್ ಬಾನ್ ಅವೆನ್ಯೂದಲ್ಲಿ ಬೋಧನಾವೃಂದ ನಿವಾಸ ವಲಯದಲ್ಲಿದೆ. ಇದು ತಮಿಳುನಾಡು ಮೆಟ್ರಿಕುಲೇಷನ್ ಪಠ್ಯಕ್ರಮವನ್ನು ಅನುಸರಿಸುತ್ತದೆ.
ಬ್ಯಾಂಕುಗಳು
ಬದಲಾಯಿಸಿಗಜೇಂದ್ರ ವೃತ್ತದ ಬಳಿ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಿದೆ. ಇದರದ್ದು ಎರಡು ಎಟಿಎಮ್ ಕೇಂದ್ರಗಳಿವೆ. ಒಂದು ಶಾಖೆಯಲ್ಲಿ ಹಾಗೂ ಇನ್ನೊಂದು ವಸತಿ ನಿಲಯ ವಲಯದ ತಾರಾಮಣಿ ಹೌಸ್‌ನಲ್ಲಿದೆ.ಕೆನರಾ ಬ್ಯಾಂಕ್ ಶಾಖೆಯು ಬೋಧನಾವೃಂದದ ನಿವಾಸ ವಲಯದ ವ್ಯಾಪಾರ ಕೇಂದ್ರದಲ್ಲಿದೆ. ಇದರದ್ದು ಎರಡು ಎಟಿಎಮ್‌ಗಳಿವೆ. ಒಂದು ಶಾಖೆಯಲ್ಲಿದೆ ಹಾಗೂ ಇನ್ನೊಂದು ಗುರುನಾಥ್ ಉಪಾಹಾರ ಕೇಂದ್ರದ ಹಿಂಭಾಗದಲ್ಲಿ ವಸತಿ ನಿಲಯ ವಲಯದಲ್ಲಿದೆ.ಜೊತೆಗೆ, ವಸತಿ ನಿಲಯ, ವಲಯದ ವಸತಿ ನಿಲಯ ಆಡಳಿತ ಕಟ್ಟಡದಲ್ಲಿ ಐಸಿಐಸಿಐ ಬ್ಯಾಂಕ್‌ನ ಎಟಿಎಮ್, ಹಾಗೂ ಲೇಡಿಸ್ ಕ್ಲಬ್ ಬಳಿ ಇಂಡಿಯನ್ ಬ್ಯಾಂಕ್‌ನ ಎಟಿಎಮ್ ಇದೆ.
ಅಂಗಡಿಗಳು(ಮಳಿಗೆಗಳು)
ಬದಲಾಯಿಸಿಟಾಟಾ ಬುಕ್ ಹೌಸ್ ಗಜೇಂದ್ರ ವೃತ್ತದ ಬಳಿ, ಆಡಳಿತ ನಿರ್ವಹಣಾ ಅಧ್ಯಯನ ವಿಭಾಗದ ಪಕ್ಕದಲ್ಲಿ ಕೆಫೆ ಕಾಫಿ ಡೇ ಕಟ್ಟಡದ ಮೊದಲ ಮಹಡಿಯಲ್ಲಿದೆ. ಇಲ್ಲಿ ಬಹುಮಟ್ಟಿಗೆ ಯಾಂತ್ರಿಕ ವಿಜ್ಞಾನಕ್ಕೆ ಸಂಬಂಧಿತ ಪಠ್ಯಪುಸ್ತಕಗಳು ಹಾಗು ಕೆಲವು ಕಾದಂಬರಿಗಳು, ಸಾಮಾನ್ಯ ಗ್ರಂಥಗಳು ಇತ್ಯಾದಿ ಲಭ್ಯವಿವೆ.ವಸತಿ ನಿಲಯ ವಲಯದಲ್ಲಿರುವ ವಿದ್ಯಾರ್ಥಿ ಸೌಲಭ್ಯ ಕೇಂದ್ರ(ಎಸ್‌ಎಫ್‌ಸಿ)ದಲ್ಲಿ ಗುರುನಾಥ್ ಉಪಾಹಾರ ಕೇಂದ್ರ ವು ನಿರ್ವಹಿಸುವ ಸಾಮಾನ್ಯ ವ್ಯಾಪಾರ ಮಳಿಗೆಯಿದೆ. ಪ್ರತಿಯೊಬ್ಬ ಐಐಟಿ ಸದಸ್ಯರಿಗೂ ಅಗತ್ಯವಾದ ದೈನಿಕ ವಸ್ತುಗಳು ಇಲ್ಲಿ ಲಭ್ಯ. ಇಲ್ಲಿ ಲೇಖನ ಸಾಮಗ್ರಿಗಳು, ಪ್ರಸಾಧನ ಸಾಮಗ್ರಿಗಳು, ಹಾಸಿಗೆ-ದಿಂಬುಗಳು, ಪ್ಲ್ಯಾಸ್ಟಿಕ್ ಮಗ್‌ಗಳು, ಬಕೆಟ್‌ಗಳು, ಟಿಷರ್ಟ್‌ಗಳು, ಕಂಪ್ಯೂಟರ್ ಯಂತ್ರಾಂಶಗಳು ಬಿಡಿಭಾಗಗಳು ಇತ್ಯಾದಿ ಲಭ್ಯ. ಗುರುನಾಥ್ ಗಿಫ್ಟ್ಸ್ & ಜೆಮ್ಸ್ ಎಂಬ ಪ್ರತ್ಯೇಕ ಅಂಗಡಿಯಲ್ಲಿ ಐಐಟಿ ಚಿರಸ್ಮರಣೀಯ ವಸ್ತುಗಳು (ಮಗ್‌ಗಳು, ಕೀಲಿ ಹಿಡಿಕೆಗಳು, ಲೇಖನಿ, ಲೋಟಗಳು, ಟೈಗಳು, ಐಐಟಿ ಟ್ಯಾಗ್ ಹೊಂದಿರುವ ಕ್ರೀಡಾ ಸಮವಸ್ತ್ರ), ಶುಭಾಶಯ ಪತ್ರಗಳು, ಉಡುಗೊರೆ ವಸ್ತುಗಳು, ಪುಸ್ತಕಗಳು, ಸಿಡಿಗಳು ಇತ್ಯಾದಿಗಳು ಇಲ್ಲಿ ಲಭ್ಯ. ಜೊತೆಗೆ, ಗೋದಾವರಿ ವಸತಿ ನಿಲಯದ ಎದುರಿಗಿರುವ ಹಳೆಯ ವಿದ್ಯಾರ್ಥಿಗಳ ಸಂಘ ಕಾರ್ಯಾಲಯದಲ್ಲೂ ಸಹ ಐಐಟಿ ಚಿರಸ್ಮರಣೀಯ ವಸ್ತುಗಳು ಲಭ್ಯ. ಗುರುನಾಥ್ ಎನ್ನಲಾದ ಎಸ್‌ಎಫ್‌ಸಿಯಲ್ಲಿ ಅಖಿಲ ಭಾರತ ಪ್ರವಾಸ ನಿಯೋಗ ದ ಶಾಖೆಯಿದ್ದು, ಪ್ರಯಾಣ ಮತ್ತು ಪಾಸ್ಪೋರ್ಟ್ ಸಹಾಯ ಕೇಂದ್ರವಾಗಿದೆ. ಬೋಧನಾವೃಂದ ವಲಯದಲ್ಲಿರುವ ವ್ಯಾಪಾರ ಕೇಂದ್ರ ದಲ್ಲಿ ದಿನಸಿ ಪದಾರ್ಥ, ತರಕಾರಿ, ಲಾಂಡ್ರಿ ಇತ್ಯಾದಿ ಸೇರಿದಂತೆ ವಿವಿಧ ಅಂಗಡಿಗಳಿವೆ. ವಿದ್ಯಾರ್ಥಿಗಳಿಗಾಗಿ ಇನ್ನೊಂದು ಲಾಂಡ್ರಿ ಬ್ರಹ್ಮಪುತ್ರ ವಸತಿ ನಿಲಯದ ನೆಲ ಅಂತಸ್ತಿನಲ್ಲಿದೆ.
ದೇವಾಲಯಗಳು
ಬದಲಾಯಿಸಿಐಐಟಿ ಇರುವ ಪ್ರದೇಶವು ರಕ್ಷಿತಾರಣ್ಯವಾಗಿದ್ದ ಕಾಲದ ಮೂರು ಹಳೆಯ ದೇವಾಲಯಗಳಿವೆ.ದೆಹಲಿ ಅವೆನ್ಯೂ ರಸ್ತೆಗೆ ಬಹಳ ಹತ್ತಿರ, ಬೋಧನಾ ವೃಂದ ವಲಯದಲ್ಲಿ ಜಲಕಂಠೇಶ್ವರ (ಶಿವ) ದೇವಾಲಯವಿದೆ. ದೆಹಲಿ ಅವೆನ್ಯೂ ರಸ್ತೆಯಲ್ಲಿ, ಮುಖ್ಯದ್ವಾರ ಮತ್ತು ಗಜೇಂದ್ರ ವೃತ್ತದ ನಡುವಿನ ಅಂತರದಲ್ಲಿ ದುರ್ಗಾ ಪೆಳ್ಳಿಯಮ್ಮನ್ ದೇವಾಲಯವಿದೆ. ವಸತಿ ನಿಲಯ ವಲಯದಲ್ಲಿ ತಾರಾಮಣಿ ಹೌಸ್ ಹಿಂಭಾಗದಲ್ಲಿರುವ ಹಳೆಯ ವಿನಾಯಕ ದೇವಾಲಯದಲ್ಲಿ ಪ್ರತಿ ಶನಿವಾರ ಸಂಜೆ ವಿಶೇಷ ಕಾರ್ಯಕ್ರಮ ನಡೆಯುತ್ತದೆ.
ಐಐಟಿಯ ಪ್ರಮುಖ ಹಳೆಯ-ವಿದ್ಯಾರ್ಥಿಗಳು
ಬದಲಾಯಿಸಿಶೈಕ್ಷಣಿಕ
ಬದಲಾಯಿಸಿ- ಸುಬ್ರ ಸುರೇಶ್, ಮ್ಯಾಸಚೂಸೆಟ್ಸ್ ತಂತ್ರಜ್ಞಾನ ಸಂಸ್ಥೆಯ ತಾಂತ್ರಿಕ ವಿದ್ಯಾಲಯದಲ್ಲಿ ತಾಂತ್ರಿಕ ವಿಜ್ಞಾನ ವಿಭಾಗದ ಮುಖ್ಯಸ್ಥ (ಡೀನ್ ಆಫ್ ತಾಂತ್ರಿಕ ವಿಜ್ಞಾನ)
- ಕೆ. ಆರ್. ರಾಜಗೋಪಾಲ್, ವಿಶ್ವವಿದ್ಯಾನಿಲಯದ ಪ್ರಮುಖ ಪ್ರಾಧ್ಯಾಪಕ ಹಾಗೂ ಟೆಕ್ಸಸ್ ಎ&ಎಮ್ ವಿಶ್ವವಿದ್ಯಾನಿಲಯದಲ್ಲಿ ಇಂಜಿನಿಯರಿಂಗ್ ವಿಭಾಗದ ಫೊರ್ಸಿತ್ ಚೇರ್.[೭]
- ಮಾರ್ಟಿ ಜಿ. ಸುಬ್ರಹ್ಮಣ್ಯಂ, ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಸ್ಟರ್ನ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ 'ಚಾರ್ಲ್ಸ್ ಇ. ಮೆರಿಲ್' ಆಯವ್ಯಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು
- ಸನತ್ ಕೆ. ಕುಮಾರ್, ಕೊಲಂಬಿಯಾ ವಿಶ್ವವಿದ್ಯಾನಿಲಯದ ರಾಸಾಯನಿಕ ತಾಂತ್ರಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು.[೮]
- ಕೆ. ಸುಧೀರ್, ಯೇಲ್ ವ್ಯವಸ್ಥಾಪನಾ ವಿದ್ಯಾಲಯದಲ್ಲಿ ಪ್ರೊಫೆಸರ್ ಆಫ್ ಮಾರ್ಕೆಟಿಂಗ್ [೯]
- ಕೆ. ರವಿ ಕುಮಾರ್, ಸದರ್ನ್ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾನಿಲಯದ ಮಾರ್ಷಲ್ಸ್ ವಾಣಿಜ್ಯ ವಿದ್ಯಾಸಂಸ್ಥೆಯಲ್ಲಿ ಇನ್ಫರ್ಮೇಷನ್ & ಆಪರೇಷನ್ಸ್ ಮ್ಯಾನೆಜ್ಮೆಂಟ್ ವಿಭಾಗದ ಪ್ರಧ್ಯಾಪಕರು [೧೦]
- ಅನಂತ್ ರಾಮನ್, ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಯುಪಿಎಸ್ ಫೌಂಡೇಷನ್ ಪ್ರೊಫೆಸರ್ ಆಫ್ ಬ್ಯುಸಿನೆಸ್ ಲಾಜಿಸ್ಟಿಕ್ಸ್ [೧೧]
- ವಿ. ಕಸ್ತೂರಿ ರಂಗನ್, ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಮಾಲ್ಕಮ್ ಪಿ. ಮೆಕ್ನೇರ್ ಪ್ರೊಫೆಸರ್ ಆಫ್ ಮಾರ್ಕೆಟಿಂಗ್ [೧೨]
- ರಮೇಶ್ ಗೋವಿಂದನ್, ಸದರ್ನ್ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಫ್ ಕಂಪ್ಯೂಟರ್ ಸೈಯನ್ಸ್ [೧೩]
- ಜಿ. ಕೆ. ಸೂರ್ಯಪ್ರಕಾಶ್, ಸದರ್ನ್ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಒಲಾಹ್ ನೊಬೆಲ್ ಲಾರಿಯೇಟ್ ಚೇರ್ ಆಫ್ ಕೆಮಿಸ್ಟ್ರಿ [೧೪]
- ರಾಮಚಂದ್ರನ್ ಜಯಕುಮಾರ್, ಹಾರ್ವರ್ಡ್ ಬುಸಿನೆಸ್ ಸ್ಕೂಲ್‌ನಲ್ಲಿ ಸ್ವರ್ಗೀಯ ಡಾಯ್ವೂ ಪ್ರೊಫೆಸರ್ ಆಫ್ ಬ್ಯುಸಿನೆಸಸ ಅಡ್ಮಿನಿಸ್ಟ್ರೇಷನ್ [೧೫]
- ಸುಬ್ರ ಸುರೇಶ್, ಎಮ್‌ಐಟಿಯಲ್ಲಿ ಫೊರ್ಡ್ ಪ್ರೊಫೆಸರ್ ಆಫ್ ಇಂಜಿನಿಯರಿಂಗ್, ಡೀನ್ ಆಫ್ ದಿ ಸ್ಕೂಲ್ ಆಫ್ ಇಂಜಿನಿಯರಿಂಗ್ [೧೬]
- ಆನಂದ್ ರಾಜಾರಾಮನ್, ಜಂಗ್ಲೀಯ ಸಂಸ್ಥಾಪಕರು; ಪ್ರಸ್ತುತ ವೆಂಕಿ ಹರಿನಾರಾಯಣ್‌ರೊಂದಿಗೆ Kosmix.comನ ಪಾಲುದಾರರು.
- ವೆಂಕಟೇಶನ್ ಗುರುಸ್ವಾಮಿ, ಕಾರ್ನೆಗೀ ಮೆಲನ್ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸಹ ಪ್ರಾಧ್ಯಾಪಕರು.
- ಆರ್. ಶಂಕರ್, ಯೇಲ್ ವಿಶ್ವವಿದ್ಯಾನಿಲಯದಲ್ಲಿ ಜೆ. ಆರ್. ಹಫ್ಮನ್ ಪ್ರೊಫೆಸರ್ ಆಫ್ ಫಿಸಿಕ್ಸ್ ಅಂಡ್ ಅಪ್ಲೈಡ್ ಫಿಸಿಕ್ಸ್ [೧೭]
- ನರಸಿಂಹನ್ ಜಗದೀಶ್, ಗೊಯಿಜುಯೆಟಾ ಬುಸಿನೆಸ್ ಸ್ಕೂಲ್‌ನಲ್ಲಿ ಡೀನ್ಸ್ ಡಿಸ್ಟಿಂಗ್ವಿಷ್ಡ್ ಯುನಿವರ್ಸಿಟಿ ಚೇರ್ [೧೮]
- ಶಂಕರನ್ ಸುಂದರೇಶನ್, ಪ್ರಿಂಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಫ್ ಕೆಮಿಕಲ್ ಇಂಜಿನಿಯರಿಂಗ್ [೧೯]
- ಅರುಣ್ ಸುಂದರರಾಜನ್, ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಸ್ಟರ್ನ್ ಸ್ಕೂಲ್ ಆಫ್ ಬುಸಿನೆಸ್‌ನಲ್ಲಿ ಪ್ರಾಧ್ಯಾಪಕರು.[೨೦]
- ಹರಿ ಬಾಲಕೃಷ್ಣನ್, ಎಂಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕರು.
- ಎಲ್. ಮಹಾದೇವನ್, ಹಾರ್ವರ್ಡ್‌ನಲ್ಲಿ ಪ್ರಾಧ್ಯಾಪಕರು [೨೧], ಮೆಕಾರ್ಥರ್ ಫೆಲೊ 2009[೨೨]
ಉದ್ಯಮ
ಬದಲಾಯಿಸಿ- ಬಿ. ಎನ್. ಸುರೇಶ್. (ತಿರುವನಂತಪುರದಲ್ಲಿರುವ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ನಿರ್ದೇಶಕರು) [1969 ಎಂಟಿಎಂಇ]
- ಆಶಿತ್ ಕೆ. ಬರ್ಮ (ಚೆನ್ನೈಯಲ್ಲಿರುವ ಸತ್ಯಂ ಕಂಪ್ಯೂಟರ್ಸ್‌ನಲ್ಲಿ ಮಾರ್ಕೆಟಿಂಗ್ & ಸ್ಟ್ರಾಟೆಜಿ ವಿಭಾಗದ ಉಪ-ಅಧ್ಯಕ್ಷ)
- ಗೋಪಾಲಕೃಷ್ಣನ್ ಎಸ್. (ಇನ್ಫೊಸಿಸ್ ಉದ್ದಿಮೆಯ ಸಹ-ಸಂಸ್ಥಾಪಕರು ಮತ್ತು ಸಿಇಒ) [ಎಂಎಸ್77 ಪಿಹೆಚ್] [ಎಂಟಿ79 ಸಿಎಸ್]
- ಗುರುರಾಜ್ ದೇಶಪಾಂಡೆ (ಸೈಕಾಕೊರ್ ನೆಟ್ವರ್ಕ್ಸ್‌ನ ಸಂಸ್ಥಾಪಕರು) [ಬಿಟಿ73 ಇಇ]
- ಬಿ ಮುತ್ತುರಾಮನ್. ಟಾಟಾ ಸ್ಟೀಲ್ ಉದ್ದಿಮೆಯ ವ್ಯವಸ್ಥಾಪಕ ನಿರ್ದೇಶಕರು [ಬಿಟಿ66 ಎಂಟಿ]
- ಸತೀಶ್ ಪೈ (ಷ್ಲುಂಬರ್ಗರ್ ಆಯಿಲ್‌ಫೀಲ್ಡ್ ಟೆಕ್ನಾಲಜೀಸ್ ಉಪ-ಅಧ್ಯಕ್ಷರು)
- ಡಾ. ಸಿ. ಮೋಹನ್ Archived 10 August 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. (ಐಬಿಎಂ ಫೆಲೊ & IBM ಇಂಡಿಯಾ ಚೀಫ್ ಸೈಂಟಿಸ್ಟ್) [ಬಿಡಿ77 ಚಿಹೆಚ್‌ಇ]
- ಡಾ. ಮಣ್ಣಿಗೆ ವಿಕ್ರಮ್ ರಾವ್ (ಹ್ಯಾಲಿಬರ್ಟನ್‌ನ ಚೀಫ್ ಟೆಕ್ನಾಲಜಿ ಆಫಿಸರ್)
- ಜಯ್ ಮೆನನ್ (ಐಬಿಎಂ ಫೆಲೊ, ಸಿಟಿಒ ಮತ್ತು ವಿಪಿ, ತಾಂತ್ರಿಕ ಯೋಜನೆ - ಐಬಿಎಂ ಸಿಸ್ಟಮ್ಸ್ ಅಂಡ್ ಟೆಕ್ನಾಲಜಿ ಗ್ರೂಪ್) - ಡಿಸ್ಟಿಂಗ್ವಿಷ್ಡ್ ಆಲಮ್ನಸ್ ಪ್ರಶಸ್ತಿ ಪುರಸ್ಕೃತರು.
- ಬಿ ಸಂತಾನಂ (ಸಿಇಒ ಸೇಂಟ್-ಗೊಬೇನ್ ಇಂಡಿಯಾ) [ಬಿಅಇ78 ಸಿವಿ]
- ಕಾಳಿದಾಸ್ ಮಾಧವಪೆಡ್ಡಿ, ಅಧ್ಯಕ್ಷರು, ಫೆಲ್ಪ್ಸ್ ಡಾಜ್ ವೈರ್ & ಕೇಬಲ್ ಹಾಗೂ ಉಪಾಧ್ಯಕ್ಷರು, ಫೆಲ್ಪ್ಸ್ ಡಾಜ್ ಕಾರ್ಪೊರೇಷನ್
- ಡಾ. ಕೃಷ್ಣ ಭರತ್ (ಗೂಗಲ್ ನ್ಯೂಸ್ ಸೃಷ್ಟಿಕರ್ತ, ಗೂಗಲ್‌ನಲ್ಲಿ ಪ್ರಿನ್ಸಿಪಾಲ್ ಸೈಂಟಿಸ್ಟ್)(ಪ್ರಮುಖ ವಿಜ್ಞಾನಿ)
- ಫಣೀಶ್ ಮೂರ್ತಿ (ಐಗೇಟ್‌ನ ಸಿಇಒ; ಇದಕ್ಕೆ ಮುಂಚೆ ಇನ್ಫೊಸಿಸ್ ಆಡಳಿತ ನಿರ್ವಮಂಡಳಿಯ ಸದಸ್ಯ ಹಾಗೂ ವಿಶ್ವಾದ್ಯಂತದ ಮಾರಾಟ ಮತ್ತು ಮಾರುಕಟ್ಟೆ ಮುಖ್ಯಸ್ಥ)
- ಸುನಿಲ್ ವಾಧ್ವಾನಿ (ಐಗೇಟ್ ಸಂಸ್ಥಾಪಕ) [ಬಿಟಿ74 ಎಂಇ]
- ಶ್ರೀಹರಿ ನರಸಿಪುರ (ಪ್ರೋಗ್ರಾಮ್ ಡೈರೆಕ್ಟರ್, ರಾಷನಲ್ ಸಾಫ್ಟ್ವೇರ್, ಐಬಿಎಂ ಇಂಡಿಯಾ) [ಎಂಟಿ83 ಎಂಇ]
- ಶಿವಕುಮಾರ್ ಡಿ. (ನೊಕಿಯಾ ಇಂಡಿಯಾ ಗ್ರಾಹಕ ಮತ್ತು ಮಾರುಕಟ್ಟೆ ನಿರ್ವಹಣಾ ವಿಭಾಗದ ರಾಷ್ಟ-ಮಟ್ಟದ ಪ್ರಧಾನ ವ್ಯವಸ್ಥಾಪಕರು [ಬಿಟಿ82 ಎಇ]
- ಹರಿ ಟಿ. ಎನ್. (ಅಂಬಾ ರಿಸರ್ಚ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮಾನವ ಸಂಪನ್ಮೂಲ ಗ್ಲೋಬಲ್ ಹೆಡ್) [BT86 ME]
- ಡಾ. ಜಾಲಯ್ಯ ಉನ್ನಾಮ್ (ಯುಎಸ್ ಸ್ಮಾಲ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಇಂದ ನ್ಯಾಷನಲ್ ಪ್ರೈಮ್ ಕಾಂಟ್ರಾಕ್ಟರ್ ಆಫ್ ದಿ ಇಯರ್ ಪ್ರಶಸ್ತಿ) [ಬಿಟಿ70 ಎಂಟಿ]
- ಕೆ.ಎನ್. ರಾಧಾಕೃಷ್ಣನ್ (ಅಧ್ಯಕ್ಷರು, ಟಿವಿಎಸ್ ಮೋಟಾರ್ ಕಂಪೆನಿ) [ಬಿಟಿ86 ಎಂಟಿ]
- ಯೋಗೇಶ್ ಕುಮಾರ್ (ಡೈರೆಕ್ಟರ್ ಆಫ್ ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಲ್‌ಸಿಎ-ತೇಜಸ್) ಪ್ರಾಜೆಕ್ಟ್, ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್) [ಎಂಟಿ81 ಎಂಈ]
- ಪಾರ್ಥಾ ಡೆ ಸರ್ಕಾರ್ (ಸಿಇಒ-ಐಟಿ ಅಂಡ್ ಐಟಿಇಎಸ್, ಹಿಂದೂಜಾ ಟಿಎಂಟಿ ಲಿಮಿಟೆಡ್.) [ಬಿಟಿ88 ಎಂಟಿ]
- ಸುದರ್ಶನ್. ಎಸ್ (ನಿರ್ದೇಶಕರು, ಆರ್&ಡಿ, ಚೆಕ್ಟ್ರಾನಿಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್. Archived 9 May 2004[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.) [ಎಂಟಿ99 ಸಿಎಸ್]
- ಯೋಗೇಶ್ ಗುಪ್ತಾ (ಅಧ್ಯಕ್ಷ & ಸಿಇಒ, ಫ್ಯಾಟ್ವೈರ್ ಸಾಫ್ಟ್‌ವೇರ್) [ಬಿಟಿ81 ಇಇ]
- ಕೃಷ್ಣ ಕೊಲ್ಲೂರಿ (ನಿರ್ದೇಶಕರ ಮಂಡಲಿ, ನೆವಿಸ್ ನೆಟ್ವರ್ಕ್ಸ್, ಕಾರ್ಯಕಾರಿ ಉಪಾಧ್ಯಕ್ಷರು ಜೂನಿಪರ್ ನೆಟ್ವರ್ಕ್ಸ್) [ಬಿಟಿ86 ಎಂಇ]
- ಶ್ರೀನಿ ಚಾರಿ (ಅಧ್ಯಕ್ಷರು & ಸಿಇಒ, ಟರ್ಬೊವರ್ಕ್ಸ್) [ಬಿಟಿ81 ಎಂಇ]
- ಬಿ ಎನ್ ನರಸಿಂಹ ಮೂರ್ತಿ (ವರಿಷ್ಠ ಉಪಾಧ್ಯಕ್ಷರು, ಬ್ಯುಸಿನೆಸ್ ಟ್ರಾನ್ಸಿಷನ್ & ಡೊಮೆಸ್ಟಿಕ್ ಮಾರ್ಕೆಟ್ಸ್, ಹಿಂದೂಜಾ ಟಿಎಂಟಿ) [ಬಿಟಿ79 ಎಂಇ]
- ರಾಜ್ ಶ್ರೀಕಾಂತ್ (ವ್ಯವಸ್ಥಾಪಕ ನಿರ್ದೇಶಕರು, ಡಾಯಿಚ್ ಬ್ಯಾಂಕ್ ಅಲೆಕ್ಸ್ ಬ್ರೌನ್, ನ್ಯೂಯಾರ್ಕ್, ಅಮೆರಿಕಾ ಸಂಯುಕ್ತ ಸಂಸ್ಥಾನ)
- ಕಲ್ಪತಿ ಎಸ್. ಸುರೇಶ್ (ಚೇರ್ಮನ್ ಮತ್ತು ಸಿಇಒ, ಎಸ್‌ಎಸ್‌ಐ ಲಿಮಿಟೆಡ್) [ಬಿಟಿ86 ಇಇ]
- ಅರವಿಂದ್ ರಘುನಾಥನ್ (ವ್ಯವಸ್ಥಾಪಕ ನಿರ್ದೇಶಕರು, ಡಾಯಿಚ್ ಬ್ಯಾಂಕ್)
- ರಾಮನಾಥನ್ ವಿ ಗುಹಾ (ಆರ್‌ಎಸ್‌ಎಸ್ ಫೀಡ್ ಟೆಕ್ನಾಲಜಿಯ ಆವಿಷ್ಕಾರಕ)
- ಸಿ.ವಿ. ಅವಧಾನಿ (ಭಾರತೀಯ ಉಪ-ಪ್ರಧಾನ ಲೆಕ್ಕಪರೀಕ್ಷಕ) [ಬಿಟಿ69 ಎಂಇ] [ಎಂಎಸ್73 ಎಂಇ]
- ವೆಂಕಿ ಹರಿನಾರಾಯಣ್ (ಕಾಸ್ಮಿಕ್ಸ್ ಸಹ-ಸಂಸ್ಥಾಪಕ) [ಬಿಟಿ88]
- ವಿಶ್ ತಡಿಮೇಟಿ (ಕಾರ್ಲಿಯಂಟ್ ಸಂಸ್ಥಾಪಕ ಹಾಗೂ ಅಧ್ಯಕ್ಷರು & ಸಿಇಒ ಸೈಬರ್ಟೆಕ್) [ಎಂಟಿ86 ಇಇ]
- ಡಾ. ಪಿ. ಚಲ್ಲಪಂಡಿ, ನಿರ್ದೇಶಕರು, ಸೇಫಟಿ ಗ್ರೂಪ್, ಇಂದಿರಾ ಗಾಂಧಿ ಸೆಂಟರ್ ಅಣು ಸಂಶೋಧನಾ ಕೇಂದ್ರ, ಭಾರತ.
- ಪಿ. ಆನಂದನ್ (ವ್ಯವಸ್ಥಾಪಕ ನಿರ್ದೇಶಕರು, ಮೈಕ್ರೊಸಾಫ್ಟ್ ರಿಸರ್ಚ್ ಭಾರತ)[೨೩]
- ಡಾ. ಪ್ರಭಾಕರ್ ರಾಘವನ್ (ಯಾಹೂ! ರಿಸರ್ಚ್ ಮುಖ್ಯಸ್ಥರು)[೨೪]
- ವೆಂಕಟ್ ರಂಗನ್ (ಸಹ-ಸಂಸ್ಥಾಪಕರು ಮತ್ತು ಸಿಟಿಒ, ಕ್ಲಿಯರ್ವೆಲ್ ಸಿಸ್ಟಮ್ಸ್) [ಬಿಟಿ81 ಎಂಇ] [೨೫]
- ರಘು ರಾಮಕೃಷ್ಣನ್ (ಉಪಾಧ್ಯಕ್ಷರು & ರಿಸರ್ಚ್ ಫೆಲೊ, ಯಾಹೂ! ರಿಸರ್ಚ್)
ಇತರರು
ಬದಲಾಯಿಸಿ- ಸಂತ್ ರಾಜೀಂದರ್ ಸಿಂಗ್‌ಜಿ ಮಹಾರಾಜ್ (ಪ್ರಸಿದ್ಧ ಆಧ್ಯಾತ್ಮಿಕ ವ್ಯಕ್ತಿ ಹಾಗೂ ಕೊಲಂಬಿಯಾದ ಸರ್ವೋನ್ನತ ಪುರಸ್ಕಾರ, ಚಿನ್ನದ ಶಿಲುಬೆ ಪುರಸ್ಕಾರ ಹಾಗೂ ವಿವಿಧ ವಿಶ್ವ ಸಂಸ್ಥೆ ಪ್ರಶಸ್ತಿಗಳು, ಹಾಗೂ ವಿಶ್ವ ಧಾರ್ಮಿಕ ಮಹಾಸಭೆಯಲ್ಲಿ ಭಾಷಣಕಾರರಾಗಿದ್ದರು; 1989ರಲ್ಲಿ ಬೆಲ್ ಲ್ಯಾಬ್ಸ್‌ನಿಂದ ನಿವೃತ್ತರಾದರು.) [ಬಿಟಿ67].
ಉಲ್ಲೇಖಗಳು
ಬದಲಾಯಿಸಿ- ↑ Murali, Kanta (1 ಫೆಬ್ರವರಿ 2003). "The IIT Story: Issues and Concerns". Frontline. Retrieved 22 ಸೆಪ್ಟೆಂಬರ್ 2009.
- ↑ ೨.೦ ೨.೧ "The Indian Institute of Technology Madras -- 50 Glorious Years". ದಿ ಹಿಂದೂ. 31 ಜುಲೈ 2008. Archived from the original on 14 ಅಕ್ಟೋಬರ್ 2008. Retrieved 22 ಸೆಪ್ಟೆಂಬರ್ 2009.
- ↑ "Indian Institute of Technology Madras (IIT Madras)". StudyPlaces.com. Archived from the original on 11 ಏಪ್ರಿಲ್ 2010. Retrieved 22 ಸೆಪ್ಟೆಂಬರ್ 2009.
- ↑ "At 'Nostalgia,' tributes to Indo-German ties". ದಿ ಹಿಂದೂ. 28 ಫೆಬ್ರವರಿ 2009. Archived from the original on 3 ಮಾರ್ಚ್ 2009. Retrieved 22 ಸೆಪ್ಟೆಂಬರ್ 2009.
- ↑ Madras, Indian Institute of Technology (18 ಜನವರಿ 2006). "The Institute". Retrieved 14 ಮೇ 2006.
- ↑ "ಭಾರತದಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ (ಐಐಟಿ ಮದ್ರಾಸ್) ಬಗ್ಗೆ". Archived from the original on 26 ಆಗಸ್ಟ್ 2010. Retrieved 8 ಅಕ್ಟೋಬರ್ 2010.
- ↑ ಟೆಕ್ಸಸ್ ಎ&ಎಮ್ ವಿಶ್ವವಿದ್ಯಾನಿಲಯದಲ್ಲಿ ಕೆ. ಆರ್. ರಾಜಗೋಪಾಲ್ Archived 18 June 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಸನತ್ ಕೆ. ಕುಮಾರ್ Archived 23 September 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಯೇಲ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್‌ನಲ್ಲಿ ಕೆ. ಸುಧೀರ್
- ↑ ಸದರ್ನ್ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ರವಿ ಕುಮಾರ್ Archived 26 August 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಹಾರ್ವರ್ಡ್ ಬುಸಿನೆಸ್ ಸ್ಕೂಲ್‌ನಲ್ಲಿ ಅನಂತರಾಮನ್ Archived 5 August 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಹಾರ್ವರ್ಡ್ ಬುಸಿನೆಸ್ ಸ್ಕೂಲ್‌ನಲ್ಲಿ ವಿ. ಕಸ್ತೂರಿ ರಂಗನ್ Archived 15 September 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಹಾರ್ವರ್ಡ್ ಬುಸಿನೆಸ್ ಸ್ಕೂಲ್‌ನಲ್ಲಿ ರಮೇಶ್ ಗೋವಿಂದನ್ Archived 27 October 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಸದರ್ನ್ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಜಿ. ಕೆ. ಸೂರ್ಯಪ್ರಕಾಶ್
- ↑ Hansell, Saul (2 ಮಾರ್ಚ್ 1998). "Ramchandran Jaikumar, 53, Business Professor at Harvard". The New York Times. Retrieved 26 ಜುಲೈ 2009.
- ↑ ಎಂಐಟಿಯಲ್ಲಿ ಸುಬ್ರ ಸುರೇಶ್ Archived 7 June 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಆರ್. ಶಂಕರ್
- ↑ ಗೊಯಿಝುಯೆಟಾ ಬುಸಿನೆಸ್ ಸ್ಕೂಲ್‌ನಲ್ಲಿ ನರಸಿಂಹನ್ ಜಗದೀಶ್ Archived 30 October 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಪ್ರಿಂಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಶಂಕರನ್ ಸುಂದರೇಶನ್
- ↑ ಅಂತರಜಾಲ ಉದ್ದಿಮೆಯೊಂದು ಸಾರ್ವಜನಿಕ ಷೇರುದಾರರಿಗೆ ಆಹ್ವಾನ ನೀಡಿದಲ್ಲಿ, ಉದ್ದಿಮೆಯ ವಾಣಿಜ್ಯ ರೂಪುರೇಖೆಯು ಷೇರು ಬೆಲೆಯನ್ನು ಅವಲಂಬಿಸುವುದೇ?
- ↑ ಹಾರ್ವರ್ಡ್‌ನಲ್ಲಿ ಎಲ್. ಮಹಾದೇವನ್
- ↑ ಎಲ್. ಮಹಾದೇವನ್, ಮೆಕಾರ್ಥರ್ ಫೆಲೊ
- ↑ ಮೈಕ್ರೊಸಾಫ್ಟ್ ರಿಸರ್ಚ್‌ನಲ್ಲಿ ಪಿ. ಆನಂದನ್
- ↑ ಯಾಹೂ! ರಿಸರ್ಚ್‌ನಲ್ಲಿ ಪ್ರಭಾಕರ್ ರಾಘವನ್ Archived 24 February 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಕ್ಲಿಯರ್ವೆಲ್ ಸಿಸ್ಟಮ್ಸ್‌ನಲ್ಲಿ ವೆಂಕಟರಂಗನ್ Archived 4 December 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- http://www.iitm.ac.in/institute/
- http://www.hindu.com/2007/11/06/stories/2007110660000200.htm Archived 28 October 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಅಧಿಕೃತ ಅಂತರಜಾಲತಾಣ
- "Office of Alumni Affairs - IIT Madras, Website". Archived from the original on 30 ಸೆಪ್ಟೆಂಬರ್ 2010. Retrieved 8 ಅಕ್ಟೋಬರ್ 2010.
- "IIT (NPTEL) Online Video Courses". Archived from the original on 27 ಸೆಪ್ಟೆಂಬರ್ 2010. Retrieved 8 ಅಕ್ಟೋಬರ್ 2010.