ಭಾರತೀಯ ಕರಾವಳಿ ಭದ್ರತಾಪಡೆ

ಟೆಂಪ್ಲೇಟು:Indian Coast Guard

ಭಾರತ ಗಣರಾಜ್ಯದಕಡಲ ಸಂಬಂಧಿತ ಹಿತಾಸಕ್ತಿಗಳನ್ನು ರಕ್ಷಿಸುವ ಧ್ಯೇಯದ ಕಾರ್ಯಾಚರಣೆಯನ್ನು ಹೊಂದಿರುವ, ಭಾರತೀಯ ಶಸ್ತ್ರಾಸ್ತ್ರ ಸೇನಾ ಪಡೆಯ ಒಂದು ಉಪಶಾಖೆಯೇ ಭಾರತೀಯ ಕರಾವಳಿ ಭದ್ರತಾಪಡೆ (ICG). ಭಾರತೀಯ ಕರಾವಳಿ ಭದ್ರತಾಪಡೆಯು ರಕ್ಷಣಾ ಮಂತ್ರಿಮಂಡಳದ ಅಧೀನವಾಗಿದ್ದು, ಭಾರತ ಒಕ್ಕೂಟದ ಶಸ್ತ್ರಾಸ್ತ್ರ ಪಡೆಯಾಗಿದೆ.

ಭಾರತೀಯ ಕರಾವಳಿ ಭದ್ರತಾಪಡೆಯು ಕಡಲ ತೀರದ ರಕ್ಷಣಾ ನಿಬಂಧನೆಯ ಪ್ರಕಾರ ಒಂದು ಸ್ವಾಯತ್ವ ಅಸ್ತಿತ್ವವುಳ್ಳ ಸಂಸ್ಥೆಯೆಂದು ೧೮ ನೇ ಆಗಸ್ಟ್ ೧೯೭೮ ರಂದು ವಿಧಿಪೂರ್ವಕವಾಗಿ ಸ್ಥಾಪಿಸಲ್ಪಟ್ಟಿತು. ICG ಯ ಧ್ಯೇಯವು ಅದರ ಕರಾವಳಿ ರೇಖೆ, ಪ್ರತ್ಯೇಕ ಆರ್ಥಿಕ ವಲಯ ಹಾಗೂ ಹಡಗಿಗೆ ಸಾಮಾನು ಸಾಗಿಸುವುದು ಸೇರಿದಂತೆ ಭಾರತದ ಸಮುದ್ರ ಸಂಬಂಧಿತ ಹಿತಾಸಕ್ತಿಗಳನ್ನು ಕಾಪಾಡುವುದೇ ಆಗಿದೆ. ಕಡಲ ಸಂಪನ್ಮೂಲಗಳು,ಹಡಗಿನ ಮೂಲಕ ಸರಕು ರವಾನೆ, ಸುಂಕ ಹಾಗೂ ಆದಾಯ, ಸಮುದ್ರ ಸಂಬಂಧದ ಪರಿಸರ, ರಕ್ಷಿಸಲ್ಪಟ್ಟ ತಳಿಗಳೂ ಅಲ್ಲದೆ ಮಾದಕ ವಸ್ತುಗಳಿಗೆ ಸಂಬಂಧಿಸಿದ ಭಾರತೀಯ ಕಡಲ ಸಂಬಂಧಿ ಕಾನೂನು ಜಾರಿಗೊಳಿಸುವ ಕಾರ್ಯಾಚರಣೆಯನ್ನೂ ಸಹ ಹೊಂದಿದೆ.

ಭಾರತೀಯ ನೌಕಾಬಲ, ಭಾರತೀಯ ಮತ್ಸ್ಯ ಇಲಾಖೆ, ಆದಾಯ (ಸುಂಕ) ಇಲಾಖೆ ಹಾಗೂ ಕೇಂದ್ರ ಮತ್ತು ರಾಜ್ಯಗಳ ಪೋಲೀಸ್ ಪಡೆಗಳ ಜೊತೆ ನಿಕಟ ಸಹಕಾರದಲ್ಲಿ ಕರಾವಳಿ ಭದ್ರತಾಪಡೆಯು ಕೆಲಸ ಮಾಡುತ್ತದೆ. ICGಯು ಸಾಮಾನ್ಯವಾಗಿ ನೌಕಾಬಲದ ವೈಸ್ ಅಡ್ಮಿರಲ್ ನ ಅಂತಸ್ತಿನ ಅಧಿಕಾರಿಯ ನಾಯಕತ್ವದಲ್ಲಿರುತ್ತದೆ.

ಇತಿಹಾಸ ಬದಲಾಯಿಸಿ

ರಾಷ್ಟ್ರಕ್ಕೆ ಸೈನಿಕ ದಳವಲ್ಲದ ಕಡಲ ಸಂಬಂಧಿ ಸೇವೆಗಳನ್ನು ಒದಗಿಸಲು ಭಾರತೀಯ ಕರಾವಳಿ ಭದ್ರತಾಪಡೆಯ ಸ್ಥಾಪನೆಯು ಭಾರತೀಯ ನೌಕಾಬಲದಿಂದ ಈ ಮೊದಲು ಪ್ರಸ್ತಾಪಿಸಲ್ಪಟ್ಟಿತು.[೧] ೧೯೬೦ ರ ದಶಕದಲ್ಲಿ, ಸಮುದ್ರದಾಶ್ರಿತ ವಸ್ತುಗಳ ಕಳ್ಳ ಸಾಗಣೆ ಭಾರತದ ಸ್ವದೇಶಿ ಆರ್ಥಿಕ ವ್ಯವಸ್ಥೆಯನ್ನು ದಿಗಿಲುಗೊಳಿಸುತ್ತಿತ್ತು. ಭಾರತೀಯ ಸುಂಕದ ಇಲಾಖೆಯು ಆಗಾಗ್ಗೆ ಕಳ್ಳ ಸಾಗಣಿಕೆ ವಿರುದ್ಧದ ಗಸ್ತು ಹಾಕುವುದು ಮತ್ತು ತಡೆಯುವಿಕೆಯ ಪ್ರಯತ್ನದಲ್ಲಿ ಗುಪ್ತ ಕಾವಲು ದಳದ ಸಹಾಯಕ್ಕಾಗಿ ಭಾರತೀಯ ನೌಕಾಬಲವನ್ನು ಕೋರುತ್ತಿತ್ತು.

ನಾಗ್ ಚೌಧುರಿ ಸಮಿತಿಯು ಸಮಸ್ಯೆಯ ಅಧ್ಯಯನಕ್ಕಾಗಿ ಭಾರತೀಯ ನೌಕಾಬಲ ಹಾಗೂ ಭಾರತೀಯ ವಾಯು ಪಡೆಯ ಸಹಭಾಗಿತ್ವದಲ್ಲಿ ರಚಿಸಲ್ಪಟ್ಟಿತು. ೧೯೭೧ ರ ಆಗಸ್ಟ್ ನಲ್ಲಿ, ಭಾರತದ ವಿಶಾಲ ಕರಾವಳಿ ತೀರವನ್ನು ಕಾಯುವ, ಕಾನೂನು ವಿರುದ್ಧದ ಚಟುವಟಿಕೆಗಳನ್ನುಗುರುತಿಸುವ ಉದ್ದೇಶದಿಂದ ಮೀನುಗಾರಿಕೆಯ ಹಡಗುಗಳನ್ನು ದಾಖಲಿಸಲು ಹಾಗೂ ಕಾಯ್ದೆ ವಿರುದ್ಧದ ಮೋಸದ ನೌಕೆಗಳನ್ನು ತಡೆಯಲು ಒಂದು ಸಶಕ್ತ ಮತ್ತು ಸುಸಜ್ಜಿತ ಸಲಕರಣೆಗಳಿಂದ ಸಜ್ಜುಗೊಂಡ ಪಡೆಯ ಅವಶ್ಯಕತೆಯನ್ನು ಸಮಿತಿಯು ಗುರುತಿಸಿತು. ಈ ಸೇವೆಗಳನ್ನು ಒದಗಿಸಲು ಅಗತ್ಯವುಳ್ಳ ಸಲಕರಣೆಗಳ ಸಂಖ್ಯೆ ಹಾಗೂ ಸ್ವರೂಪ, ಮೂಲಭೂತ ಸೌಕರ್ಯ ಮತ್ತು ಉದ್ಯೋಗ ಮಂಡಲಿಯನ್ನೂ ಸಹ ಸಮಿತಿಯು ಪರಿಗಣಿಸಿತು.[೧]

೧೯೭೩ರ ಹೊತ್ತಿಗೆ, ಭಾರತವು ಸಲಕರಣೆಗಳನ್ನು ಹೊಂದಲು ಪ್ರಾರಂಭಿಸಿತು ಹಾಗೂ ಅಂತರಿಕ ಸುರಕ್ಷಾ ಕಾಯ್ದೆಯ ಸಂರಕ್ಷಣೆಯ ಪೂರ್ವಸಿದ್ಧತೆಯಡಿ, ಈ ಎಲ್ಲಾ ಕಳ್ಳ ಸಾಗಣೆ ವಿರುದ್ಧ ಹಾಗೂ ಕಾನೂನು ಜಾರಿಗೊಳಿಸುವ ಕಾರ್ಯಕ್ಕಾಗಿ ಭಾರತೀಯ ನೌಕಾಬಲದಿಂದ ಉದ್ಯೋಗಿಗಳನ್ನು ನಿಯೋಜಿಸಲು ಪ್ರಾರಂಭಿಸಿತು. ಒಂದು ಸೈನಿಕ ಸೇವೆಯ ತನ್ನ ಮುಖ್ಯ ಧ್ಯೇಯದಿಂದ ಈ ಸೇವಗಳ ಸ್ವಭಾವದ ದಾರಿಯು ತಪ್ಪುತ್ತಿದೆಯೆಂಬುದನ್ನು ಭಾರತೀಯ ನೌಕಾಬಲವು ಅರ್ಥಮಾಡಿಕೊಂಡಿತು. ೧೯೭೪ ರ ಆಗಸ್ಟ್ ೩೧ ರಂದು, ನೌಕಾಬಲದ ಸಿಬ್ಬಂದಿಯ ಮುಖ್ಯಸ್ಥರಿಂದ ಬಂದ ಮಾಹಿತಿಗಳ ಆಧಾರದ ಮೇಲೆ, ಆಗಿನ ರಕ್ಷಣಾ ಕಾರ್ಯದರ್ಶಿಯವರು ಕರಾವಳಿ ಭದ್ರತಾಪಡೆಯ ಅವಶ್ಯಕತೆಯ ಮುಖ್ಯಾಂಶಗಳನ್ನು ತಿಳಿಸುತ್ತಾ ಸಚಿವ ಸಂಪುಟದ ಕಾರ್ಯದರ್ಶಿಯವರಿಗೆ ಒಂದು ಟಿಪ್ಪಣಿ ಒಪ್ಪಿಸಿದರು.

೧೯೭೪ ರ ಸೆಪ್ಟೆಂಬರ್ ನಲ್ಲಿ, ಭಾರತೀಯ ನೌಕಾಬಲ ಹಾಗೂ ಕೇಂದ್ರ ಮತ್ತು ರಾಜ್ಯ ಪೋಲೀಸ್ ಪಡೆಗಳ ಪಾತ್ರಗಳ ನಡುವಿನ ಸುರಕ್ಷೆ ಹಾಗೂ ಕಾನೂನು ಜಾರಿಗೊಳಿಸುವಲ್ಲಿನ ಬಿರುಕುಗಳನ್ನು ಪರೀಕ್ಷಿಸಲು ಭಾರತೀಯ ನೌಕಾಪಡೆ ಮತ್ತು ಆದಾಯ ಇಲಾಖೆಯ ಸಹಯೋಗದೊಂದಿಗೆ ರುಸ್ತುಂ ಜಿ ಸಮಿತಿಯು ರಚಿಸಲ್ಪಟ್ಟಿತು. ಬಾಂಬೆ ಹೈ ಆಚೆಗಿನ ತೈಲ ಸಂಶೋಧನೆಯು ಕಡಲ ಸಂಬಂಧಿ ಕಾನೂನು ಜಾರಿಗೊಳಿಸುವಿಕೆ ಹಾಗೂ ರಕ್ಷಣಾ ಸೇವೆಯ ಅವಶ್ಯಕತೆಯನ್ನು ಇನ್ನೂ ಹೆಚ್ಚು ಒತ್ತಾಯವನ್ನು ಹೇರಿತು. ಆ ಸಮಿತಿಯು ೩೧ ನೇ ಜುಲೈ ೧೯೭೫ ರಂದು ರಕ್ಷಣಾ ಸಚಿವಾಲಯದಡಿ ಭಾರತೀಯ ಕರಾವಳಿ ಭದ್ರತಾಪಡೆಯ ಸ್ಥಾಪನೆಗಾಗಿ ತನ್ನ ಶಿಫಾರಸ್ಸುಗಳನ್ನು ಒಪ್ಪಿಸಿತು. ಗೃಹ ಖಾತೆಯ ಸಚಿವಾಲಯದಡಿ ಈ ಸೇವೆಯನ್ನು ವರ್ಗಾಯಿಸುವಂತಹ ಶಿಫಾರಸ್ಸನ್ನು ಸಚಿವ ಸಂಪುಟದ ಕಾರ್ಯದರ್ಶಿಯವರು ಮಾಡಿದಾಗ, ಅಧಿಕಾರಿಶಾಹಿ ಕೋಪಯುತ ವಿವಾದಗಳು ಉಂಟಾಯಿತು. ಅದೃಷ್ಟವಶಾತ್, ಅಂದಿನ ಪ್ರಧಾನ ಮಂತ್ರಿಗಳಾದ ಶ್ರೀಮತಿ ಇಂದಿರಾ ಗಾಂಧಿ ಅವರು ಸಚಿವ ಸಂಪುಟದ ಕಾರ್ಯದರ್ಶಿಯವರ ನಿರ್ಧಾರವನ್ನು ರದ್ದುಪಡಿಸಿದರು ಹಾಗೂ ಈ ಸೇವೆಯನ್ನು ರಕ್ಷಣಾ ಸಚಿವಾಲಯಕ್ಕೆ ಒಪ್ಪಿಸಲು ನಿರ್ಧರಿಸಿದರು.[೧]

ಭಾರತೀಯ ನೌಕಾಬಲದಿಂದ ವರ್ಗಾಯಿಸಲ್ಪಟ್ಟ ಸಜ್ಜುಗೊಂಡ ಎರಡು ಚಿಕ್ಕ ಯುದ್ಧ ನಾವೆಗಳು ಹಾಗೂ ಐದು ಗುಪ್ತ ಕಾವಲು ದಳದ ದೋಣಿಗಳು ಫೆಬ್ರುವರಿ ೧, ೧೯೭೭ ರಂದು ಒಂದು ಮಧ್ಯಕಾಲೀನ ಭಾರತೀಯ ಕರಾವಳಿ ಭದ್ರತಾಪಡೆಯು ಅಸ್ತಿತ್ವಕ್ಕೆ ಬಂದಿತು. ಸೇವೆಯ ಕರ್ತವ್ಯ ಹಾಗೂ ಕೆಲಸಕಾರ್ಯಗಳು ಕಡಲತೀರದ ರಕ್ಷಣಾ ಕಾಯ್ದೆಯಲ್ಲಿ ವಿಧಿವತ್ತಾಗಿ ನಿರೂಪಿಸಲ್ಪಟ್ಟಿದೆ, ಇದು ೧೯೭೮ ನೇ ಆಗಸ್ಟ್ ೧೮ ರಂದು ಅಂಗೀಕರಿಸಲ್ಪಟ್ಟು ಮಾರನೆಯ ದಿನವೇ ಜಾರಿಗೆ ಬಂದಿತು. ಭಾರತೀಯ ನೌಕಾಬಲದ ಉಪ-ಸೇನಾಧಿಕಾರಿ ವಿ.ಎ.ಕಾಮತ್ ರವರು ಸಂಸ್ಥಾಪಕ ಪ್ರಧಾನ ನಿರ್ದೇಶಕರಾಗಿದ್ದರು. ಉಪ ಸೇನಾಧಿಕಾರಿ ಕಾಮತ್ ರವರು ICG ಯನ್ನು ೧೯೮೪[೧] ರ ವೇಳೆಗೆ ಒಂದು ಶಕ್ತಿಶಾಲಿ ಪಡೆಯನ್ನಾಗಿ ಅಭಿವೃದ್ಧಿಪಡಿಸಲು ಒಂದು ಯೋಜನೆಯನ್ನು ಪ್ರಸ್ತಾಪಿಸಿದರು, ಆದರೆ ಈ ಯೋಜನೆಯ ಪೂರ್ಣ ಸಾಮರ್ಥ್ಯವನ್ನು ಸಂಪನ್ಮೂಲ ಕೊರತೆಯ ಕಾರಣ ಸಾಧಿಸಲಾಗಿಲ್ಲ.[೧]

ಭಾರತೀಯ ಕರಾವಳಿ ಭದ್ರತಾಪಡೆಯು ವಿಶ್ವದ ಬೇರೆ ಕರಾವಳಿ ರಕ್ಷಣಾ ದಳಗಳ ಜೊತೆ ಅಭ್ಯಾಸವನ್ನು ನಡೆಸುತ್ತದೆ. ೨೦೦೬ ರಲ್ಲಿ, ಭಾರತೀಯ ಕರಾವಳಿ ಭದ್ರತಾಪಡೆಯು ಜಪಾನ್ ಹಾಗೂ ಕೊರಿಯಾ ಜೊತೆಗಾರರೊಂದಿಗೆ ಪ್ರಯೋಗಗಳನ್ನು ನಡೆಸಿತು. ಮೇ ೨೦೦೫ ರಲ್ಲಿ, ಭಾರತೀಯ ಕರಾವಳಿ ಭದ್ರತಾಪಡೆಯು MSA ಎಂದರೆ ಕಡಲ ಸಂಬಂಧಿ ಸುರಕ್ಷಾ ಎಜೆನ್ಸಿ ಎಂದು ಸಾಂಪ್ರದಾಯಿಕವಾಗಿ ಹೆಸರಾದ ಪಾಕಿಸ್ತಾನ ಕಡಲ ತೀರದ ಭದ್ರತಾ ದಳದೊಂದಿಗೆ ಸಂಬಂಧ ಜೋಡಣೆಯನ್ನು ಸ್ಥಾಪಿಸಲು ಒಪ್ಪಿಕೊಂಡಿತು.

ಈ ಸೇವೆಯ ಪ್ರಮುಖ ಐತಿಹಾಸಿಕ ಸಾಧನೆಗಳು ಎಮ್ ವಿ ಅಲೊಂಡ್ರ ರೈನ್ಬೊ , ಎಂಬ ಸಮುದ್ರಗಳ್ಳರಿಂದ ಒಂದು ಹಡಗನ್ನು ಉನ್ನತ ಸಮುದ್ರದಲ್ಲಿ ಮೊಟ್ಟಮೊದಲನೆಯದಾಗಿ ಪುನರ್ವಶಗೊಳಿಸಿಕೊಂಡದ್ದು ಸೇರಿದೆ.

೨೦೦೮ ರ ಮುಂಬಯಿ ಆಕ್ರಮಣಗಳ ನಂತರ, ಭಾರತದ ಸರ್ಕಾರವು ICG ಪಡೆ, ಸ್ವತ್ತುಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ವಿಸ್ತರಿಸಲು ಒಂದು ಕಾರ್ಯಕ್ರಮವನ್ನು ಆರಂಭಿಸಿತು. ಈ ಪಡೆಯನ್ನು ಬರುವ ದಶಕದಲ್ಲಿ ಮಾನವ ಶಕ್ತಿ ಹಾಗೂ ಹಡಗುಗಳೆರಡರಲ್ಲಿಯೂ ತ್ರಿಗುಣ ಪಡಿಸಬೇಕೆಂದು ನಿರೀಕ್ಷಿಸಲಾಗಿದೆ.[೨]

ಶ್ರೇಯಾಂಕ ರಚನೆ ಬದಲಾಯಿಸಿ

ಕರಾವಳಿ ಭದ್ರತಾಪಡೆಯ ಶ್ರೇಯಾಂಕ ರಚನೆ ಭಾರತೀಯ ನೌಕಾಬಲದ ಸಮಾನಾಂತರ ದರ್ಜೆಯ ರಚನೆ
ಡೈರೆಕ್ಟರ್ ಜನರಲ್ (ಭಾರತೀಯ ನೌಕಾದಳದ ಅಧಿಕಾರಿಯಿಂದ ಈ ಆಯ್ಕೆಯು ಹೊಂದಿರಲಾಗುತ್ತದೆ) ವೈಸ್ ಅಡ್ಮಿರಲ್
ಇನ್ ಸ್ಪೆಕ್ಟರ್ ಜನರಲ್ ರಿಯರ್ ಅಡ್ಮಿರಲ್
ಡೆಪ್ಯುಟಿ ಇನ್ ಸ್ಪೆಕ್ಟರ್ ಜನರಲ್ ಕಮೋಡೋರ್
ಡೆಪ್ಯುಟಿ ಇನ್ ಸ್ಪೆಕ್ಟರ್ ಜನರಲ್ ಕ್ಯಾಪ್ಟನ್‌
ಕಮ್ಯಾಂಡೆಂಟ್ ಕ್ಯಾಪ್ಟನ್‌
ಕಮ್ಯಾಂಡೆಂಟ್ (ಜ್ಯೂನಿಯರ್ ಗ್ರೇಡ್) ಕಮ್ಯಾಂಡರ್
ಡೆಪ್ಯುಟಿ ಕಮ್ಯಾಂಡೆಂಟ್ ಲೆಫ್ಟಿನೆಂಟ್ ಕಮ್ಯಾಂಡರ್
ಸರಿಸಮಾನ ಪದವಿ ಇಲ್ಲ ಲೆಫ್ಟಿನೆಂಟ್
ಅಸಿಸ್ಟೆಂಟ್ ಕಮ್ಯಾಂಡೆಂಟ್ † ಹಂಗಾಮಿ ಲೆಫ್ಟಿನೆಂಟ್
ಅಸಿಸ್ಟೆಂಟ್ ಕಮ್ಯಾಂಡೆಂಟ್ ◊ ಮಿಡ್ ಶಿಪ್ ಮ್ಯಾನ್

+ ಮೂರು ವರ್ಷಗಳ ಸೇವಾಹಿರಿತನದ ಸಹಿತ † ಸಮುದ್ರದಲ್ಲಿ ತೇಲುವ ತರಬೇತಿ ಹಾಗೂ ಉಪ ಮಾರ್ಗಗಳ ಮೂರನೆಯ ಹಂತದ ಮುಕ್ತಾಯದ ನಂತರದ ತರಬೇತಿಯಡಿ ಮತ್ತು ◊ ಸಮುದ್ರದಲ್ಲಿ ತೇಲುವ ತರಬೇತಿಯ ಎರಡನೆಯ ಹಂತದ ಮುಕ್ತಾಯದ ನಂತರ ತರಬೇತಿಯಡಿ

ಭಾರತೀಯ ಕರಾವಳಿ ಭದ್ರತಾಪಡೆಯ ಅಭ್ಯರ್ಥಿ ಆಯ್ಕೆಯ ವಿಧಿವಿಧಾನ

ಆಫೀಸರ್ಸ್ ಜನರಲ್ ಡ್ಯೂಟಿ ಶಾಖೆ – ಇದು ಕರಾವಳಿ ಭದ್ರತಾ ಪಡೆಯ ಕ್ರಿಯಾತ್ಮಕ ಅಂಗ. ಸಮುದ್ರದಲ್ಲಿ ಸಾಗುತ್ತಿರುವ ಹಡಗುಗಳನ್ನು ಕೇವಲ ಜನರಲ್ ಡ್ಯೂಟಿ ಶಾಖೆಯ ಅಧಿಕಾರಿಗಳು ಮಾತ್ರ ತಮ್ಮ ಅಪ್ಪಣೆಯಮೇರೆಗೆ ನಡೆಸಬಹುದು. ಜನರಲ್ ಡ್ಯೂಟಿ ಅಧಿಕಾರಿಯಾಗಿ ನೀನು ಶಸ್ತ್ರಗಳನ್ನು ಮತ್ತು ಸೆನ್ಸರ್ ಗಳನ್ನು ಬಳಸುವೆ ಹಾಗೂ ನಿನ್ನಲ್ಲಿರುವ ಸಲಕರಣೆಗಳ ಅಪಾರ ಅರಿವನ್ನು ಬೇಡುವಂತಹ ಹಲವಾರು ಕಾರ್ಯವಿಧಿಗಳನ್ನು ನಿನ್ನ ಮೇಲ್ವಿಚಾರಣೆಯಲ್ಲಿ ನಿರ್ವಹಿಸುವೆ. ನಿನ್ನ ಹಡಗು ಮತ್ತು ಅದರಲ್ಲಿರುವ ಸಿಬ್ಬಂದಿ ಹಾಗೂ ಇತರರ ರಕ್ಷಣೆ, ಶಾಂತಿ ಹಾಗೂ ಯುದ್ಧ ಕಾಲಗಳಲ್ಲಿ ನೀನು ನಿನ್ನ ಹಡಗನ್ನು ನಿರ್ವಹಿಸುವ, ನಡೆಸುವ ರೀತಿ ಹಾಗೂ ತತ್ಸಂಬಂಧಿತ ಕಾರ್ಯಾಚರಣೆಗಳಿಗೆ ನೀನೇ ಸಂಪೂರ್ಣ ಜವಾಬ್ದಾರನಾಗಿರುತ್ತೀಯೆ.

ಪುರುಷ ಮತ್ತು ಮಹಿಳೆಯರಿಬ್ಬರಿಗೂ ವಯೋಮಿತಿ ೨೧ ರಿಂದ ೨೫ ವರ್ಷಗಳು; ವಿಶೇಷ ವರ್ಗಗಳವರಿಗೆ ವಯೋಮಿತಿಯಲ್ಲಿ ಕೊಂಚ ಸಡಿಲಿಕೆ. ವಿದ್ಯಾರ್ಹತೆ - ಪದವಿ (ಗಣಿತ ಮತ್ತು ಭೌತಶಾಸ್ತ್ರಗಳನ್ನು ಇಂಟರ್ ಮೀಡಿಯಟ್ ಅಥವಾ ೧೦+೨+೩ ಯೋಜನೆಯಡಿಯಲ್ಲಿ ತರಗತಿ XII ರವರೆಗೆ ಓದಿರಬೇಕು), ಕ್ಷೇತ್ರ ಸಾರಿಗೆ ಸಚಿವರ ಇಲಾಖೆಯವರು ನಡೆಸುವ ಸೆಕೆಂಡ್ ಮೇಟ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಪೈಲಟ್/ಹಡಗು ನಡೆಸುವವನು – ಕರಾವಳಿ ಭದ್ರತಾ ಸೈನಿಕನು ಸ್ಥಿರ-ರೆಕ್ಕೆಗಳುಳ್ಳ ವಿಮಾನಗಳನ್ನು ತೀರದ ವಿಮಾನ ತಾಣಗಳಿಂದ ವಿಶೇಷವಾದ ವಿತ್ತ ವಲಯಗಳ ಪರಿವೀಕ್ಷಣೆಗಾಗಿ ಉಡಾವಣೆ ಮಾಡುವ ಕಾರ್ಯಗಳನ್ನು ಕೈಗೊಳ್ಳುತ್ತಾನೆ. ಅಲ್ಲದೆ, ಹೆಲಿಕಾಪ್ಟರ್ ಗಳನ್ನು ತೀರದಿಂದ ದೂರವಿರುವ ಕಾವಲುಪಡೆಯ ಹಡಗುಗಳಲ್ಲಿ ಸ್ಥಾಪಿಸಲಾಗಿದ್ದು/ಇರಿಸಲಾಗಿದ್ದು ಸಮುದ್ರದಲ್ಲಿ ಸಾಗುತ್ತಿರುವಾಗ ಸ್ಥಳೀಯ ಪರಿವೀಕ್ಷಣಾ ಕಾರ್ಯಗಳು, ಶೋಧನಾ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಇದು ಬಹಳ ಅನುಕೂಲಕರವಾಗುತ್ತದೆ. ಈ ವಿಮಾನಗಳನ್ನು ಚಲಾಯಿಸುವುದು ಬಹಳ ಕ್ಲಿಷ್ಟವಾದ ಕಾರ್ಯ ಹಾಗೂ ನಿಮ್ಮ ವಿಶೇಷ ಪರಿಣತಿಗೆ ಹಾಗೂ ಸಾಮರ್ಥ್ಯಕ್ಕೆ ಇದು ಅಗ್ನಿಪರೀಕ್ಷೆಯಾಗುತ್ತದೆ. ಪೈಲಟ್/ಹಡಗು ನಡೆಸುವವರ ಶಾಖೆಯ ಅಧಿಕಾರಿಯಾದಾಗ ನಿಮಗೆ ಭಾರತದ ಕರಾವಳಿಯ ಗುಂಟ ಇರುವ ತೀರದ ವಿಮಾನ ತಾಣಗಳಲ್ಲಿ ಹಾಗೂ ಹಡಗುಗಳಲ್ಲಿ ಏರಿ ಸೇವೆ ಸಲ್ಲಿಸುವ ಅವಕಾಶ ದೊರಕುತ್ತದೆ.

ತಾಂತ್ರಿಕ ಶಾಖೆಯ ಅಧಿಕಾರಿಗಳು - ಆಧುನಿಕ ಹಡಗುಗಳು ಮತ್ತು ವಿಮಾನಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಯಂತ್ರಗಳಿಂದ ಆವೃತವಾಗಿವೆ. ತಾಂತ್ರಿಕ ಶಾಖೆಯಲ್ಲಿ ನೀವು ಆ ಎಲ್ಲಾ ಸಲಕರಣೆಗಳು ಮತ್ತು ಸರಂಜಾಮುಗಳು ಯಾವುದೇ ಕ್ಷಣದಲ್ಲಿ ಉಪಯೋಗಿಸಲು ಆಗುವಂತಹ ರೀತಿಯಲ್ಲಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕಾಗುತ್ತದೆ. ನಿಮಗೆ ಕರಾವಳಿ ಭದ್ರತಾ ಮರುಜೋಡಣಾ ಸಂಸ್ಥೆಗಳಲ್ಲಿಯೂ ಕೆಲಸ ಮಾಡುವಂತಹ ಅವಕಾಶಗಳು ಒದಗಿಬರುತ್ತವೆ. ಈ ವಿಧವಾದ ವಿಶಾಲವಾದ ಅವಕಾಶಗಳ ವರ್ಣಮಯ ರೋಹಿತವು ನಿಮಗೆ ಅನ್ಯ ಉದ್ಯೋಗಗಳಲ್ಲಿ ದೊರೆಯುವುದು ದುರ್ಲಭ; ಈ ಪಡೆಯಲ್ಲಿ ಸೇರಿದವರಿಗೆ ತಂತ್ರಜ್ಞಾನದಲ್ಲಿ ಆಗುತ್ತಿರುವಂತಹ ಅತ್ಯಾಧುನಿಕ ಆವಿಷ್ಕಾರಗಳ ಮತ್ತು ಅಭಿವೃದ್ಧಿಗಳ ಮಾಹಿತಿ ದೊರೆಯುತ್ತಿರುತ್ತದೆ. ನೀವು ಉದ್ಯೋಗ ಮಾಡುತ್ತಿರುವಾಗಲೇ ಭಾರತದಲ್ಲಿನ ಸ್ನಾತಕೋತ್ತರ ಪದವಿಯ ಮಟ್ಟದ ತಾಂತ್ರಿಕ ತರಬೇತಿ ಶಿಕ್ಷಣವನ್ನೂ ನಿಮಗೆ ನೀಡಲಾಗುವುದು

ಸಹಾಯಕ ಸೇನಾಧಿಕಾರಿಗಳ ನೇಮಕಾತಿಯು ದ್ವೈ-ವಾರ್ಷಿಕವಾಗಿ ನಡೆಸಲ್ಪಡುತ್ತದೆ. . ಪ್ರಮುಖ ರಾಷ್ಟ್ರೀಯ ವಾರ್ತಾ ಪತ್ರಿಕೆಗಳಲ್ಲಿ ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳೆರಡರಲ್ಲಿಯೂ ಜಾಹಿರಾತು ಕೊಡಲ್ಪಡುವುದು. ಆಯ್ಕೆಯಾದ ಸಂಕ್ಷಿಪ್ತ ಪಟ್ಟಿಯ ಅಭ್ಯರ್ಥಿಗಳು ಮುಂಬಯಿ, ಚೆನ್ನೈ, ಕೋಲ್ಕತ್ತಾ ಹಾಗೂ ದೆಹಲಿಯಲ್ಲಿರುವ, ತಮಗೆ ಅನುಕೂಲವಾಗುವಂತಹ, ಕೇಂದ್ರಗಳಲ್ಲಿ ಪೂರ್ವಭಾವಿ ಆಯ್ಕೆ ಸಮಿತಿಯ ಮುಂದೆ (PSB) ಹಾಜರಾಗಲು ಕರೆಯಲ್ಪಡುತ್ತಾರೆ. ಮಾನಸಿಕ ಸಾಮರ್ಥ್ಯ ಪರೀಕ್ಷೆಯೂ ಅಲ್ಲದೆ ಸಂದರ್ಶನವನ್ನೂ ಸಹ PSB ಯು ಹೊಂದಿರುತ್ತದೆ. PSBಯಲ್ಲಿ ಅರ್ಹತೆ ಗಳಿಸಿದ ಅಭ್ಯರ್ಥಿಗಳು ನವದೆಹಲಿಯಲ್ಲಿನ ಅಂತಿಮ ಆಯ್ಕೆಯ ಸಮಿತಿಯ (FSB) ಮುಂದೆ ಹಾಜರಾಗಬೇಕು. FSB ಗುಣಮಟ್ಟದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಅವಶ್ಯ. ವೈದ್ಯಕೀಯ ಅರ್ಹತೆಗಳಿಸಿದ ಅಭ್ಯರ್ಥಿಗಳು ಅಂತಿಮ ಶ್ರೇಯಾಂಕ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲ್ಪಡುತ್ತಾರೆ.

ಸಂಸ್ಥೆ(ಸಂಘಟನೆ) ಬದಲಾಯಿಸಿ

Indian Armed Forces
 
Triservices Crest.
Military Manpower
Active troops 1,325,000 (3rd)
Reserve forces 1,155,000 (7th)
Paramilitary forces 1,293,300 (4th)
Components
Indian Army  
Indian Air Force  
Indian Navy  
Indian Coast Guard
Paramilitary forces of India
Strategic Nuclear Command
History
Military history of India
Ranks
Air Force ranks and insignia
Army ranks and insignia
Naval ranks and insignia

ಭಾರತೀಯ ಕರಾವಳಿ ರಕ್ಷಣಾಪಡೆಯ ಕಾರ್ಯಾಚರಣೆಯು ನಾಲ್ಕು ವಲಯಗಳಿಗೆ ವಿಂಗಡಿಸಲ್ಪಟ್ಟಿದೆ: ಪಶ್ಚಿಮ ವಲಯದ ಕೇಂದ್ರಕಛೇರಿಯು ಮುಂಬಯಿನಲ್ಲಿದೆ, ಪೂರ್ವ ವಲಯದ ಕೇಂದ್ರ ಕಛೇರಿಯು ಚೆನ್ನೈನಲ್ಲಿದೆ ಮತ್ತು ಅಂಡಮಾನ್ & ನಿಕೋಬಾರ್ ವಲಯದ ಕೇಂದ್ರ ಕಛೇರಿಯು ಪೋರ್ಟ್ ಬ್ಲೇಯ್ರ್ ನಲ್ಲಿದೆ ಹಾಗೂ ವಾಯುವ್ಯ ವಲಯದ ಕೇಂದ್ರ ಕಛೇರಿಯು ಗಾಂಧಿನಗರದಲ್ಲಿದೆ. ಈ ಭದ್ರತಾ ಪಡೆಯಲ್ಲಿ ಒಟ್ಟು ೫೪೪೦ರಿದ್ದು, ಅದರಲ್ಲಿ ೬೩೩ ಆಡಳಿತಾಧಿಕಾರಿಗಳಿದ್ದಾರೆ.

ICGಯು ಡೈರೆಕ್ಟರ್ ಜನರಲ್ ಆಫ್ ಕೋಸ್ಟ್ ಗಾರ್ಡ್ ರ ಮುಖಂಡತ್ವದಲ್ಲಿ ಕಾರ್ಯ ಜರುಗಿಸುವಂತಹುದಾಗಿದ್ದು, ಈ ಹುದ್ದೆಯನ್ನು ಅಲಂಕರಿಸುವವರು ಸಾಮಾನ್ಯವಾಗಿ ಭಾರತ ನೌಕಾಪಡೆವೈಸ್ ಅಡ್ಮಿರಲ್ ಮಟ್ಟದ ಆಡಳಿತಾಧಿಕಾರಿಗಳಾಗಿರುತ್ತಾರೆ. ಈಗ ICGಯ DG ಆಗಿರುವವರು ವೈಸ್ ಅಡ್ಮಿರಲ್ ಅನೀಲ್ ಛೋಪ್ರಾ, AVSM. ಪ್ರತಿ ವಲಯವೂ ಒಬ್ಬ ಇನ್ ಸ್ಪೆಕ್ಟರ್ ಜನರಲ್ (IG) ಅಥವಾ ಒಬ್ಬ ಸಹಾಯಕ ಇನ್ ಸ್ಪೆಕ್ಟರ್ ಜನರಲ್ (DIG)ರ ಅಧೀನದಲ್ಲಿರುತ್ತದೆ. IG ಮತ್ತು DIGಗಳನ್ನು ಕರಾವಳಿ ಭದ್ರತಾ ಅಧಿಕಾರಿಗಳು ನೇಮಿಸುತ್ತಾರೆ ಹಾಗೂ ಸಾಮಾನ್ಯವಾಗಿ ಈ ಪದವಿಗೇರುವವರು ಭಾರತೀಯ ಸೇನಾ ಸೇವೆಯ ಕಾಲೇಜುಗಳಿಂದ ಪದವಿ ಪಡೆದವರಾಗಿರುತ್ತಾರೆ.

ಪ್ರತಿಯೊಂದು ವಲಯವೂ ಒಂದು ಕರಾವಳಿ ರಾಜ್ಯ ಅಥವ ಒಂದು ಕೇಂದ್ರಾಡಳಿತ ಪ್ರದೇಶವನ್ನು ವ್ಯಾಪಿಸಿರುವ ರೀತಿಯಲ್ಲಿ ಜಿಲ್ಲೆಗಳಾಗಿ ವಿಭಾಗಿಸಲ್ಪಟ್ಟದೆ.

ಕಾರ್ಯನಿರ್ವಹಣಾ ಕೇಂದ್ರಗಳು ಬದಲಾಯಿಸಿ

ಭಾರತೀಯ ಕರಾವಳಿಯ ಭದ್ರತಾಪಡೆಯು ಈ ಕೆಳಕಂಡ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತದೆ:

  • ೨೯ ಸಮುದ್ರ ತೀರದ ಪಹರೆ ಪಡೆಯ ರಕ್ಷಣಾಸ್ಥಾನಗಳು[೩]
  • ಡಮನ್ ಹಾಗೂ ಚೆನ್ನೈ ನಲ್ಲಿ ೨ ವಾಯು ರಕ್ಷಣಾ ನೆಲೆಗಳು
  • ಗೋವಾ, ಕೋಲ್ಕತ್ತಾ ಮತ್ತು ಪೋರ್ಟ್ ಬ್ಲೇರ್ ನಲ್ಲಿ ವಾಯು ರಕ್ಷಣಾ ಪ್ರದೇಶಗಳು

ಸಲಕರಣೆಗಳು ಬದಲಾಯಿಸಿ

ಕ್ಷೇತ್ರಸಂಚಾರಿ ಹಡಗುಗಳು ಬದಲಾಯಿಸಿ

ಭಾರತೀಯ ಕರಾವಳಿ ರಕ್ಷಣಾಪಡೆಗೆ ಸೇರಿದ ಹಡಗುಗಳು ಭಾರತೀಯ ಕರಾವಳಿ ರಕ್ಷಣಾಪಡೆಯ ನೌಕೆಯೆಂದು ಹೆಸರಿಸಲಾಗಿದೆ(ICGS).

Ship Class Type Origin Displacement In service Notes
ಸೇವೆಯಲ್ಲಿ ಇವೆ: ೮೬ ಹಡಗುಗಳು
ಸಂಕಲ್ಪ್ ವರ್ಗ ಅತ್ಯಾಧುನಿಕ ತೀರದಾಚೆಯ ಗಸ್ತು ತಿರುಗುವ ಹಡಗು   ಭಾರತ ೨೩೦೦ ಟನ್ನುಗಳು [೪]
ಸಮರ್ ವರ್ಗ ಅತ್ಯಾಧುನಿಕ ತೀರದಾಚೆಯ ಗಸ್ತು ತಿರುಗುವ ಹಡಗು   ಭಾರತ ೨೦೦೫ ಟನ್ನುಗಳು
ವಿಶ್ವಾಸ್ತ್ ವರ್ಗ ಅತ್ಯಾಧುನಿಕ ತೀರದಾಚೆಯ ಗಸ್ತು ತಿರುಗುವ ಹಡಗು   ಭಾರತ ೧೮೦೦ ಟನ್ನುಗಳು
ವಿಕ್ರಮ್ ವರ್ಗ ಅತ್ಯಾಧುನಿಕ ತೀರದಾಚೆಯ ಗಸ್ತು ತಿರುಗುವ ಹಡಗು ೧೨೨೦ ಟನ್ನುಗಳು
ಸಮುದ್ರ ವರ್ಗ ಮಾಲಿನ್ಯವನ್ನು ನಿಯಂತ್ರಿಸುವ ಹಡಗು (PCV)   ಭಾರತ ೩೩೦೦ ಟನ್ನುಗಳು
ಜೀಜಾಬಾಯ್ ವರ್ಗ ತೀರದ ಒಳಗಿನ ಗಸ್ತು ತಿರುಗುವ ವಾಹನಗಳು ೨೦೦ ಟನ್ನುಗಳು ೧೩
ವಡ್ಯಾರ್ ವರ್ಗ ವೇಗವಾಗಿ ತಡೆಹಿಡಿಯುವ ವಿಮಾನ ೨.೪ ಟನ್ನುಗಳು
ಬ್ರಿಸ್ಟಾಲ್ ವರ್ಗ ವೇಗವಾಗಿ ತಡೆಹಿಡಿಯುವ ವಿಮಾನ ೫.೫ ಟನ್ನುಗಳು
ವೇಗವಾಗಿ ತಡೆಹಿಡಿಯುವ ದೋಣಿ   ಭಾರತ ೩೨ ಟನ್ನುಗಳು ೧೨
ವೇಗವಾಗಿ ಚಲಿಸುವ ಗಸ್ತಿನ ಹಡಗು ೨೧೫ ಟನ್ನುಗಳು ೧೧
ಅತಿ ವೇಗವಾಗಿ ಚಲಿಸುವ ಗಸ್ತಿನ ಹಡಗು (XFPV)   ಭಾರತ ೨೭೦ ಟನ್ನುಗಳು
ಸಮುದ್ರದ ಮೇಲಿನ ರಕ್ಷಣಾ ದೋಣಿ ೨೦೩ ಟನ್ನುಗಳು
ತೀರದೊಳಗಿನ ಗಸ್ತು ತಿರುಗುವ ವಿಮಾನಗಳು   ಕೊರಿಯಾ ೩೨ ಟನ್ನುಗಳು
ಗಾಳಿಯ ಮೇಲೆ ತೇಲುವ ವಾಹನಗಳು (ಹೂವರ್ ಕ್ರಾಫ್ಟ್)   ಯುನೈಟೆಡ್ ಕಿಂಗ್ಡಂ ಎನ್.ಎ.
ನಿರ್ಮಾಣ ಹಂತದಲ್ಲಿ/ಆಜ್ಞಾಪಿಸು: ೮೦ ಹಡಗುಗಳು
ಸಂಕಲ್ಪ್ ವರ್ಗ ಅತ್ಯಾಧುನಿಕ ತೀರದಾಚೆಯ ಗಸ್ತು ತಿರುಗುವ ಹಡಗುಗಳು   ಭಾರತ ೨೨೩೦ ಟನ್ ಗಳು ೧ ನಿರ್ಮಿಸಲಾಗುತ್ತಿದೆ
ವಿಶ್ವಸ್ತ ವರ್ಗ ತೀರದಾಚೆಯ ಗಸ್ತು ತಿರುಗುವ ಹಡಗು   ಭಾರತ ೧೮೦೦ ಟನ್ನುಗಳು ೧ ಕ್ಕೆ ಬೇಡಿಕೆ ಸಲ್ಲಿಸಲಾಗಿದೆ
ಸಮುದ್ರ ವರ್ಗ ಮಾಲಿನ್ಯ ನಿಯಂತ್ರಣ ವಾಹನ (PCV)   ಭಾರತ ೩೩೦೦ ಟನ್ನುಗಳು ೨ ನಿರ್ಮಿಸಲಾಗುತ್ತಿದೆ
ರಾಣಿ ಅಬ್ಬಕ್ಕ ವರ್ಗ ತೀರದ ಒಳಗಿನ ಗಸ್ತು ತಿರುಗುವ ವಾಹನ   ಭಾರತ ೨೭೫ ಟನ್ನುಗಳು ೨ ನಿರ್ಮಿಸಲಾಗುತ್ತಿದೆ
+ ೬ ಕ್ಕೆ ಬೇಡಿಕೆ ಸಲ್ಲಿಸಲಾಗಿದೆ
ಅಡ್ಡಗಟ್ಟುವ ದೋಣಿ   ಭಾರತ ೭೫ ಟನ್ನುಗಳು ೧ ನಿರ್ಮಿಸಲಾಗುತ್ತಿದೆ
+ ೫ ಕ್ಕೆ ಬೇಡಿಕೆ ಸಲ್ಲಿಸಲಾಗಿದೆ
ವೇಗವಾಗಿ ತಡೆಹಿಡಿಯುವ ದೋಣಿ   ಭಾರತ ೭೫ ಟನ್ನುಗಳು ೧೫ ಕ್ಕೆ ಬೇಡಿಕೆ ಸಲ್ಲಿಸಲಾಗಿದೆ
ಗಾಳಿಯ ಮೇಲೆ ತೇಲುವ ವಾಹನಗಳು (ಹೂವರ್ ಕ್ರಾಫ್ಟ್)   ಯುನೈಟೆಡ್ ಕಿಂಗ್ಡಂ ಎನ್.ಎ. ೧೨ ಕ್ಕೆ ಬೇಡಿಕೆ ಸಲ್ಲಿಸಲಾಗಿದೆ
(ಹೈಡ್ರೊಫಾಯಿಲ್ಸ್)   ಯುನೈಟೆಡ್ ಕಿಂಗ್ಡಂ ಎನ್.ಎ. ೧೨ ಕ್ಕೆ ಬೇಡಿಕೆ ಸಲ್ಲಿಸಲಾಗಿದೆ
ವೇಗವಾಗಿ ತಡೆಯುವ ದೋಣಿ   ಭಾರತ ೩೬ ಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಲ್&ಟಿ
ಅತಿ ವೇಗವಾಗಿ ಗಸ್ತು ತಿರುಗುವ ವಾಹನಗಳು (FPV)   ಭಾರತ ೨೦ ಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಕೊಚ್ಚಿನ್

ವಿಮಾನಗಳ ತಪಶೀಲು ಪಟ್ಟಿ ಬದಲಾಯಿಸಿ

ವಿಮಾನ ಮೂಲ ರೀತಿ ವಿಧಗಳು ಬಳಕೆಯಲ್ಲಿ (ಉದ್ಯೋಗದಲ್ಲಿ)[೫] ಟಿಪ್ಪಣಿಗಳು
HAL ಧ್ರುವ್   ಭಾರತ ಬಹೂಪಯೋಗಿ ಹೆಲಿಕಾಪ್ಟರ್
HAL ಧ್ರುವ್   ಭಾರತ ಆಕ್ರಮಣ ಹೆಲಿಕಾಪ್ಟರ್ ALH
ಏರೋಸ್ಪಾಟಿಯೇಲ್ SA ೩೧೬ ಅಲೂಯೆಟೆ III   France ಬಹೂಪಯೋಗಿ ಹೆಲಿಕಾಪ್ಟರ್ SA ೩೧೬B ೧೭
ಡಾರ್ನಿಯರ್ Do ೨೨೮   Germany
  ಭಾರತ ಸಾರಿಗೆ
ಶೋಧನೆ ಮತ್ತು ರಕ್ಷಣೆ
ಕಾವಲುಪಡೆ
Do ೨೨೮-೧೦೧ ೨೪ ೧೮ HALನಿಂದ ನಿರ್ಮಿತವಾದುದು

ಚಿತ್ರಸಂಪುಟ ಬದಲಾಯಿಸಿ

ಇವನ್ನೂ ಗಮನಿಸಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ ೧.೨ ೧.೩ ೧.೪ "ಆರ್ಕೈವ್ ನಕಲು". Archived from the original on 2012-05-02. Retrieved 2011-02-21.
  2. ಕರಾವಳಿ ಭದ್ರತಾ ಪಡೆಯನ್ನು ಹೆಚ್ಚಿಸಲು ಆಂಟೋನಿಯವರು ಅನೇಕ ಪ್ರಸ್ತಾಪನೆಗಳನ್ನು ಮುಕ್ತಗೊಳಿಸಿದರು.
  3. "ಕರಾವಳಿ ಭದ್ರತಾಪಡೆಯ ನೆಲೆಯು ಪ್ರಾರಂಭಿಸಲ್ಪಟ್ಟಿತು". Archived from the original on 2011-02-23. Retrieved 2011-02-21.
  4. ಆಂಟೋನಿ ಅವರು 5 ನೆಯ AOPV ‘ICGS ಸಂಕಲ್ಪ್' ಅನ್ನು ಕರಾವಳಿ ಭದ್ರತಾಪಡೆಗೆ ನಾಳೆಯ ದಿನ ಸೇರಿಸಿಕೊಳ್ಳುವವರಿದ್ದಾರೆ
  5. "ವರ್ಲ್ಡ್ ಮಿಲಿಟರಿ ಏರ್ ಕ್ರಾಫ್ಟ್ ಇನ್ವೆಂಟರಿ", ಏರೋಸ್ಪೇಸ್ ಸೋರ್ಸ್ ಬುಕ್ ೨೦೦೭, ಏವಿಯೇಷನ್ ವೀಕ್ & ಸ್ಪೇಸ್ ಟೆಕ್ನಾಲೊಜಿ , ೧೫ ಜನವರಿ ೨೦೦೭.

ಬಾಹ್ಯ ಕೊಂಡಿಗಳು ಬದಲಾಯಿಸಿ