ಭೌಗೋಳಿಕವಾಗಿ ಭಾರತ ಉಪಖಂಡ ಪ್ರದೇಶ ಮೂಲದ ಆಧಾರದ ಮೇಲೆ ಭಾರತದಲ್ಲಿ ಇಂದು ಸುಮಾರು ೩೦-೩೫ ಶುದ್ಧ ಗೋತಳಿಗಳನ್ನು ಗುರುತಿಸಲಾಗಿದೆ. ಭಾರತೀಯ ಗೋತಳಿಗಳಲ್ಲಿ ಬಹಳಷ್ಟು ತಳಿಗಳ ಹೆಸರು ಬಂದಿದ್ದು ತಳಿಗಳು ಅಭಿವೃದ್ಧಿಗೊಂಡ ಪ್ರದೇಶದ ಹೆಸರಿನಿಂದ. ಒಂದೇ ಪ್ರದೇಶದಲ್ಲಿ ಹೆಚ್ಚು ತಳಿಗಳು ಅಭಿವೃದ್ಧಿಗೊಂಡಿರುವ ಸಂದರ್ಭದಲ್ಲಿ ಅವುಗಳಿಗೆ ವಿಶೇಷಣವೊಂದು ಒದಗಿ ಬಂದಿರುವುದೂ ಇದೆ. ಉದಾ., ಮಲೆನಾಡು ಗಿಡ್ಡ. ಅಮೃತಮಹಲ್‌ನಂತೆ ತಳಿಯ ಹಿರಿಮೆಯನ್ನು ಕಂಡು ಅದನ್ನು ಪೋಷಿಸಿದವರು, ಅಭಿವೃದ್ದಿ ಪಡಿಸಿದವರು ವಿಶೇಷ ನಾಮಕರಣ ಮಾಡಿದ ಉದಾಹರಣೆಗಳು ಕೆಲವಿವೆ. ಕೆಂಪುಸಿಂಧಿ, ಥಾರ್ ಪಾರ್ಕರ್ ಸಹಿವಾಲ್, ಹರ್ಯಾಣಾ, ರಾಟಿ, ಗಿರ್, ಕಂಕ್ರೇಜ್ ಇವು ಉತ್ತರ ಭಾರತದ ಪ್ರಮುಖ ತಳಿಗಳಾದರೆ, ದೇವಣಿ, ಖಿಲ್ಲಾರಿ, ಒಂಗೋಲ್, ಕೃಷ್ಣಾತೀರಿ, ಅಮೃತಮಹಲ್, ಹಳ್ಳಿಕಾರ್, ವೆಚ್ಚೂರ್, ಅಂಬ್ಲಾಚೆರಿ, ಕಂಗಾಯಂ, ಅಲಂಬಾಡಿ ಇವು ದಕ್ಷಿಣ ಭಾರತದ ಪ್ರಸಿದ್ಧ ತಳಿಗಳು.

ಭಾರತೀಯ ಗೋತಳಿಗಳು ಅವುಗಳ ಬಳಕೆ ಮತ್ತು ಗುಣಲಕ್ಷಣಗಳಿಗನುಸಾರವಾಗಿ ಹಾಲಿನ ತಳಿ, ಕೆಲಸಗಾರ ತಳಿ ಹಾಗೂ ಉಭಯೋದ್ದೇಶದ ತಳಿಗಳೆಂದು ಮೂರು ಭಾಗಗಳಾಗಿ ವಿಂಗಡಿಸಲ್ಪಟ್ಟಿವೆ.

  • ಹಾಲಿನ ತಳಿಗಳು: ಈ ತಳಿಗಳಲ್ಲಿ ಹಸುಗಳು ಹೆಚ್ಚಿನ ಹಾಲನ್ನು ಕೊಡುತ್ತವೆ ಮತ್ತು ಗಂಡು ಹೋರಿಗಳು ಉತ್ತಮ ಕೆಲಸಗಾರ ಆಗಿರುವುದಿಲ್ಲ. ಸಾಹಿವಾಲ್, ಕೆಂಪು ಸಿಂಧಿ, ಗಿರ್, ದೇವನಿ ತಳಿಗಳು ಇದಕ್ಕೆ ಉದಾಹರಣೆಗಳು. ಈ ತಳಿಗಳ ಸರಾಸರಿ ಹಾಲಿನ ಉತ್ಪಾದನೆ ಪ್ರತಿ ಹಾಲಿನ ಚಕ್ರಕ್ಕೆ ೧೬೦೦ ಕೆ.ಜಿ. ಯಷ್ಟಿರುತ್ತದೆ. (1600 kg per lactation)
  • ಕೆಲಸಗಾರ ತಳಿಗಳು:ಗಂಡುತಳಿಗಳು ಒಳ್ಳೆಯ ಕೆಲಸಗಾರ ಆಗಿದ್ದು ಹಸುಗಳ ಹಾಲಿನ ಉತ್ಪಾದನೆ ಕಡಿಮೆ. ಪ್ರತಿ ಹಾಲಿನ ಚಕ್ರಕ್ಕೆ ಸರಾಸರಿ ೫೦೦ ಕೆ.ಜಿ.ಯಷ್ಟು ಮಾತ್ರ ಇರುತ್ತದೆ. ಸಾಮಾನ್ಯವಾಗಿ ಬಿಳಿಬಣ್ಣದ್ದಾಗಿರುತ್ತವೆ. ಒಂದು ಜೊತೆ ಎತ್ತುಗಳು ಒಂದು ಸಾವಿರ ಕೆ.ಜಿ.ಯಷ್ಟು ಭಾರವನ್ನು ಎಳೆಯಬಲ್ಲವು. ಸಾಧಾರಣ ಒಳ್ಳೆಯ ರಸ್ತೆಯಲ್ಲಿ ಗಾಡಿ ಎಳೆದುಕೊಂಡು ಗಂಟೆಗೆ ೫ರಿಂದ ೭ ಕಿ.ಮಿ ನಡೆದು ದಿನಕ್ಕೆ ೩೦-೪೦ ಕಿ.ಮಿ. ಕ್ರಮಿಸಬಲ್ಲವು. ಕಂಗಾಯಮ್, ಅಂಬ್ಲಾಚೆರಿ, ಅಮೃತಮಹಲ್, ಹಳ್ಳಿಕಾರ್ ತಳಿಗಳು ಇದಕ್ಕೆ ಉದಾಹರಣೆಗಳು.
  • ಉಭಯೋದ್ದೇಶ ತಳಿಗಳು:ಈ ತಳಿಗಳ ಹಸುಗಳು ಒಂದು ಮಟ್ಟಿಗೆ ಒಳ್ಳೆಯ ಹಾಲು ಉತ್ಪಾದನೆ ಮಾಡುತ್ತವೆ ಮತ್ತು ಗಂಡುಹೋರಿಗಳು ಒಳ್ಳೆಯ ಕೆಲಸಗಾರ ಆಗಿರುತ್ತವೆ. ಹಾಲಿನ ಉತ್ಪಾದನೆ ಪ್ರತಿ ಹಾಲಿನ ಚಕ್ರಕ್ಕೆ ಸುಮಾರು ೧೫೦ ಕೆ.ಜಿ.ಯಿಂದ ೫೦೦ ಕೆ.ಜಿ.ಯಷ್ಟಿರುತ್ತದೆ. ಒಂಗೋಲ್, ಹರಿಯಾಣ, ಕಾಂಕ್ರೇಜ್, ಥಾರ್ ಪಾರ್ಕರ್, ಕೃಷ್ಣಾ, ರಾಟಿ, ಮೇವಟಿ ಇದಕ್ಕೆ ಉದಾಹರಣೆಗಳು.

National Bureau of Animal Genetic Resourcesನಲ್ಲಿ ದಾಖಲಾಗಿರುವ ಗೋತಳಿಗಳು[೧] ಬದಲಾಯಿಸಿ

National Bureau of Animal Genetic Resourcesನಲ್ಲಿ ೩೯ ಭಾರತೀಯ ಗೋತಳಿಗಳು ದಾಖಲಾಗಿವೆ. (2015). ಅವುಗಳೆಂದರೆ,

ಕ್ರಮಸಂಖ್ಯೆ ತಳಿಯ ಹೆಸರು ಮೂಲ ಪ್ರದೇಶ
ಅಮೃತಮಹಲ್ ಕರ್ನಾಟಕ
ಬಚೌರ್ ಬಿಹಾರ
ಬರಗೂರು ತಮಿಳುನಾಡು
ಡಾಂಗಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ
ದೇವನಿ ಮಹಾರಾಷ್ಟ್ರ ಮತ್ತು ಕರ್ನಾಟಕ
ಗೌಳವ್ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ
ಗಿರ್ ಗುಜರಾತ್
ಹಳ್ಳಿಕಾರ್ ಕರ್ನಾಟಕ
ಹರಿಯಾಣ ಹರ್ಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ
೧೧ ಕಂಗಾಯಂ ತಮಿಳುನಾಡು
೧೨ ಕಾಂಕ್ರೇಜ್ ಗುಜರಾತ್ ಮತ್ತು ರಾಜಸ್ಥಾನ
೧೩ ಕೇನ್ ಕಥಾ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ
೧೪ ಖೇರಿಗರ್ ಉತ್ತರ ಪ್ರದೇಶ
೧೫ ಖಿಲಾರ್ ಮಹಾರಾಷ್ಟ್ರ ಮತ್ತು ಕರ್ನಾಟಕ
೧೬ ಕೃಷ್ಟಾ ಕರ್ನಾಟಕ
೧೭ ಮಾಳ್ವಿ ಮಧ್ಯಪ್ರದೇಶ
೧೮ ಮೇವಟಿ ರಾಜಸ್ಥಾನ, ಹರ್ಯಾಣ ಮತ್ತು ಉತ್ತರ ಪ್ರದೇಶ
೧೯ ನಾಗೋರಿ ರಾಜಸ್ಥಾನ
೨೦ ನಿಮರಿ ಮಧ್ಯಪ್ರದೇಶ
೨೧ ಒಂಗೋಲ್ ಆಂಧ್ರಪ್ರದೇಶ
೨೨ ಪುಂಗನೂರು ಆಂಧ್ರಪ್ರದೇಶ
೨೩ ರಾಟಿ ರಾಜಸ್ಥಾನ
೨೪ ಕೆಂಪು ಕಂಧಾರಿ ಮಹಾರಾಷ್ಟ್ರ
೨೫ ಕೆಂಪು ಸಿಂಧಿ ಸಿಂಧ್ ಪ್ರಾಂತ್ಯ
೨೬ ಸಾಹಿವಾಲ್ ಪಂಜಾಬ್ ಮತ್ತು ರಾಜಸ್ಥಾನ
೨೭ ಸಿರಿ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ
೨೮ ಥಾರ್ ಪಾರ್ಕರ್ ರಾಜಸ್ಥಾನ
೨೯ ಅಂಬ್ಲಾಚೆರಿ ತಮಿಳುನಾಡು
೩೦ ವೇಚೂರು ಕೇರಳ
೩೧ ಮೋಟು ಒಡಿಶಾ, ಛತ್ತೀಸ್ ಘಡ್ ಮತ್ತು ಆಂಧ್ರಪ್ರದೇಶ
೩೨ ಘುಮುಸಾರಿ ಒಡಿಶಾ
೩೩ ಬಿಂಝಾರ್ ಪುರಿ ಒಡಿಶಾ
೩೪ ಖರಿಯಾರ್ ಒಡಿಶಾ
೩೫ ಪುಲಿಕುಳಮ್ ತಮಿಳುನಾಡು
೩೬ ಕೋಸಲಿ ಛತ್ತೀಸ್ ಘಡ್
೩೭ ಮಲೆನಾಡು ಗಿಡ್ಡ ಕರ್ನಾಟಕ
೩೮ ಬೇಹಲಿ ಹರಿಯಾಣ ಮತ್ತು ಮಧ್ಯಪ್ರದೇಶ
೩೯ ಗಂಗಾತೀರಿ ಉತ್ತರ ಪ್ರದೇಶ ಮತ್ತು ಬಿಹಾರ

ಎಮ್ಮೆ ಮತ್ತು ದೇಸೀ ಹಸುಗಳ ಹಾಲಿನಲ್ಲಿ ಮಾತ್ರ ಆರೋಗ್ಯವನ್ನು ಕಾಪಾಡುವ ಎ2 ಎಂಬ ಅಂಶವಿದೆ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ಗೊತ್ತಾಗಿದೆ.[೨][೩]

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2016-04-07. Retrieved 2015-06-14.
  2. ಕೊಳಕು ಡೇರಿಗಳಿಗೆ ಎ2 ಹಾಲಿನ ಏಟು[ಶಾಶ್ವತವಾಗಿ ಮಡಿದ ಕೊಂಡಿ], ನಾಗೇಶ ಹೆಗಡೆ, ಪ್ರಜಾವಾಣಿ, ೨೩ಏಪ್ರಿಲ್೨೦೧೫
  3. Why you should avoid A1 Milk of Western breeds and Hybrid Cows, Natural Farmer

ಹೊರಕೊಂಡಿಗಳು ಬದಲಾಯಿಸಿ