ಭಾರತದ ಕೃಷಿ ಮತ್ತು ಆಹಾರ ಧಾನ್ಯ ಉತ್ಪಾದನೆ

ಭಾರತದ ಕೃಷಿ ಮತ್ತು ಆಹಾರ ಧಾನ್ಯ ಉತ್ಪಾದನೆ.

ಬದಲಾಯಿಸಿ
ನಾವು, ಬಾರತದಲ್ಲಿ ಹಿಂದೆ ೫೦ ಮಿಲಿಯನ್ ಟನ್ ಆಹಾರದ ಉತ್ಪಾದನೆಯಾಗತ್ತಿತ್ತು , ಸುಮಾರು ಅಷ್ಟೇ ಪ್ರದೇಶದಲ್ಲಿ ಈಗ ೨೫೦ ಮಿಲಿಯನ್ ಟನ್ ಆಹಾರ ಧಾನ್ಯ ಬೆಳೆಯುತಿದ್ದೇವೆ. ಬಾರತದಲ್ಲಿ ೧೪೩ ಮಿಲಿಯನ್ ಹೆಕ್ಟೇರು ಪ್ರದೇಶದಲ್ಲಿ , ೨೫೦ ಮಿಲಿಯನ್ ಟನ್ ಆಹಾರ ಧಾನ್ಯ ಬೆಳೆದರೆ ಚೀನಾ ದೇಶವು ೧೦೩ ಮಿಲಿಯನ್ ಹೆಕ್ಟೇರು ಪ್ರದೇಶದಲ್ಲಿ ೫೦೦ ಮಿಲಿಯನ್ ಟನ್ ಆಹಾರ ಧಾನ್ಯ ಬೆಳೆಯುತ್ತದೆ (?) . ಆದ್ದರಿಂದ ಭಾರತದಲ್ಲಿ ನವೀನ ತಾಂತ್ರಕತೆ ಬೆಳೆಯಬೇಕು, ಇದು ಡಾ. ಮಹದೇವಪ್ಪ ಅವರ ಅಭಿಪ್ರಾಯ.

ಬಾರತವು ಅದರ ಪಂಚ ವಾರ್ಷಿಕ ಯೋಜನೆ ಗಳಲ್ಲಿ ಮೊದಲ ಮೂರು ಯೋಜನೆಗಳಲ್ಲಿ ಕೃಷಿಗೆ ವಿಶೇಷ ಪ್ರಾಮುಖ್ಯತೆ ಕೊಟ್ಟಿತ್ತು . ನಂತರ ಪುನಃ ೭ ನೇ ಯೋಜನೆಯಲ್ಲಿ ರೂ.೧೬,೫೯೦/- ವಿನಿಯೋಗಿಸಿತು ನಂತರ ಎರಡನೇ ಹಸಿರು ಕ್ರಾಂತಿಯ ಅಂಗವಾಗಿ ೧೦ ನೇ ಪಂಚ ವಾರ್ಷಿಕ ಯೋಜನೆಯಲ್ಲಿ ರೂ.೧,೦೩,೩೧೫/- ಮೀಸಲಿಟ್ಟಿತು. ಅದೇ ರೀತಿ ೧೧ನೇ ಪಂಚ ವಾಇಕಯೋಜನೆಗೆ ರೂ.೨,೦೧,೩೨೬/- ಮೀಸಲಿಟ್ಟಿದೆ

೨೦೧೪-೨೦೧೫ ಬೆಳೆ ಉತ್ಪಾದನೆ

ಬದಲಾಯಿಸಿ
  • ಮಳೆಯ ಇಳಿಮುಖ ಮತ್ತು ವಿಳಂಬ ಪರಿಣಾಮ 2014-15 ಆಹಾರ ಬೆಳೆ ಉತ್ಪಾದನೆ ಕಡಿಮೆ ಆಗುವ ಸಂಭವ:

ಬಾರತಾದ್ಯಂತ ಶೇ. ೪೧ ರಷ್ಟು ಮಳೆ ಕಡಿಮೆ (19-7-2014).2013-2014ರಲ್ಲಿ ಜುಲೈ ತಿಂಗಳಿಲ್ಲಿ 269.82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿತ್ತು. 2014 ಜುಲೈ ಗೆ ೧೫೭.೩೫/157.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರಾ ಬಿತ್ತನೆ ಆಗಿದೆ.

  • 2013-2014 ರಲ್ಲಿ ೨೬.೪೦/26.40 ಕೋಟಿ ಟನ್ ಆಹಾರ ಉತ್ಪಾದನೆ ಆಗಿತ್ತು.ಇದರಲ್ಲಿ 12.90 ಟನ್ ಮುಂಗಾರು ಮಳೆ ಹಂಗಾಮಿನಲ್ಲೇ ಆಹಾರ ಉತ್ಪಾದನೆ ಆಗಿತ್ತು. (2014-15 ಸಾಲಿನಲ್ಲಿ ಮುನ್ನೆಚ್ಚರಿಕೆ ವಹಿಸಲು ಎಲ್ಲಾ ರಾಜ್ಯಗಳಿಗೆ ವಿವರವಾದ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ಆಹಾರ ರಾಜ್ಯಸಚಿವ ಸಂಜೀವ ಕುಮಾರ್ ಬಾಲ್ಯನ್ ರಾಜ್ಯ ಸಭೆಯಲ್ಲಿ ತಿಳಿಸಿದರು -ವರದಿ ಪ್ರಜಾವಾಣಿ/18/7/2014//19-7-2014)
  • ೧೮- ಜುಲೈ ೨೦೧೪/18- 7-2014ರಲ್ಲಿ ಬಿತ್ತನೆ ಆದ ಕ್ಷೇತ್ರ ೩೪೫.೨೦. ಲಕ್ಷ ಹೆಕ್ಟೇರ್æ 345.20.
  • ೧೯-ಜುಲೈ ೨೦೧೩-19-7-2013- -ಬಿತ್ತನೆ ಆದ ಕ್ಷೇತ್ರ -೬೨೦.೨೨ / 620.22 ಲಕ್ಷ ಹೆಕ್ಟೇರ್
  • ೨೦೧೪/2014ರಲ್ಲಿ ಬಿತ್ತನೆ ಆದ ಕ್ಷೇತ್ರ -ವಿವಿಧ ಆಹಾರ ಧಾನ್ಯಗಳಯ ಇತರೆ.
  • ಭತ್ತ೧೨೭.೩೬/127.36 ಲಕ್ಷ ಹೆಕ್ಟೇರ್‘
  • ಎಣ್ನೆ ಕಾಳು ೩೮.೭/ 38.7 ಲಕ್ಷ ಹೆಕ್ಟೇರ್
  • ಏಕದಳ ಧಾನ್ಯ೪೮.೪೩/ 48.43 ಲಕ್ಷ ಹೆಕ್ಟೇರ್
  • ಹತ್ತಿ ೫೬.೦೦ /56.00 ಲಕ್ಷ ಹೆಕ್ಟೇರ್
  • ಕಬ್ಬು೪೬.೦೯ / 46.09
  • ದ್ವಿದಳಧಾನ್ಯ ೨೧.೫೮ / 21.58 (ಕೇಂದ್ರ ಸಚಿವಾಲಯ-21-7-2014ವರದಿ ಪ್ರಜಾವಾಣಿ)

ಕಬ್ಬು : ೨೦೧೩-೧೪ ಉತ್ಪಾದನೆ

ಬದಲಾಯಿಸಿ
ಭಾರತದ ರಾಜ್ಯಗಳಲ್ಲಿ ಕಬ್ಬು ಉತ್ಪಾದನೆ
ಕ್ರಮ ಸಂ ರಾಜ್ಯ ಉತ್ಪಾದನೆ: ಸಾವಿರಟನ್/ ಕೃಷಿ - ಸಾವಿರ ಹೆಕ್ಟೇರ್
1 ಉತ್ತರಪ್ರದೇಶ 1,36,429 2172
2 ಮಹಾರಾಷ್ಟ್ರ 72404 936;
3 ಕರ್ಣಾಟಕ 34,666 410;
4 ತಮಿಳುನಾಡು 24,792 231.7;
5) ಬಿಹಾರ 15,065 266.6 6
6 ಆಂಧ್ರ ಪ್ರದೇಶ 14,898 ; 191
7 ಗುಜರಾತ್ 11,700 180
8 ಹರಿಯಾಣ 9490 130
9 ಉತ್ತರಾಖಂಡ 7466 -; 122
10 ಪಂಜಾಬ್ 6720 96
11 ಮಧ್ಯಪ್ರದೇಶ 3250 77
12 ಪಶ್ಚಿಮ ಬಂಗಾಳ 2100 77
13 ಅಸ್ಸಾಂ 1060 29
14 ಒಡಿಶಾ 818 73.1
15 ಝಾರ್ಕಂಡ್ 499 7.1
16 ರಾಜಸ್ಥಾನ 343 5.1
17 ಕೇರಳ 51 0.5
18 ಛತ್ತೀಸ್‌ಘಡ್ 31 11. .2
19 ಹಿಮಾಚಲ ಪ್ರದೇಶ 26 1. 8
20 ಇತರೆ ಪ್ರದೇಶ 926 21.7
21 ಒಟ್ಟು 3,41,773 4921
ಒಟ್ಟು 3,41,773 ಸಾವಿರ ಟನ್‌ಗಳು ; ಬೆಳೆ ಪ್ರದೇಶ -4921 ಸಾವಿರ ಹೆಕ್ಟೇರುಗಳು

ಭತ್ತ-ಅಕ್ಕಿ

ಬದಲಾಯಿಸಿ
ಭಾರತದಲ್ಲಿ ಭತ್ತದ ಉತ್ಪಾದನೆ -ಮತ್ತು ಬೆಳೆಯುವ ಪ್ರದೇಶ
ಭಾರತದ ಪ್ರಮುಖ ಬೆಳೆ ಭತ್ತ.. ಜಗತ್ತಿನಲ್ಲಿ ಉತ್ಪಾದನೆ ಆಗುವ ಒಟ್ಟು ಅಕ್ಕಿಯ ೨೦% ಅಕ್ಕಿ ಬಾರತದಲ್ಲೇ ಆಗುವುದು ; ೧೯೮೦ರಲ್ಲಿ ೫೩.೬ಮಿಲಿಯ ಟನ್ ಉತ್ಪಾದನೆ ಆದರೆ , ೧೯೯೦ ರಲ್ಲಿ ೭೪.೬ ಮಿಲಿಯ ಟನ್ ಉತ್ಪಾದನೆ ಆಗಿದೆ. ೧೯೫೦ ಉತ್ಪಾದನೆ ಗಿಂತ ೩೫೦% ಹೆಚ್ಚು. ಇದು ಸುಧಾರಿತ ಬೇಸಾಯ ಬೀಜಗಳ ಉಪಯೋಗದ ಫಲ. ೧೯೮೦ರಲ್ಲಿ ಹೆಕ್ಟೇರಿಗೆ ೧೩೩೬ ಕಿಲೋ ಇದ್ದರೆ, ೧೯೯೦ರಲ್ಲಿ೧೭೫೧ ಕಿಲೋಗ್ರಾಂ ಇಳುವರಿ ಆಗಿದೆ. ಇಳುವರಿ ೧೯೫೦ಕ್ಕೂ ೧೯೯೨ಕ್ಕೂ ೨೫೨% ಹೆಚ್ಚು ಇಳವರಿ ಆಗಿದೆ. ಜಗತ್ತಿನಲ್ಲಿ ಹೆಚ್ಚು ಭತ್ತ ಬೆಳೆಯುವ ದೇಶಗಳಲ್ಲಿ ೨ ನೆಯದು ; ೧೮೨ ಮಿಲಿಯ ಟನ್ ಬೆಳಯುವ ಚೀನ ಮೊದಲ ಸ್ಥಾನದಲ್ಲಿದೆ.೨೦೦೮-೨೦೦೯ ರಲ್ಲಿ ೯೯.೧೮ ಮಿ ನ್; ಮಳೆ ಕೊರತೆಯಿಂದ ೨೦೦೯-೧೦ ರಲ್ಲಿ ೮೯.೧೩ ಮಿ.ಟನ್ ಆದರೆ ;೨೦೧೦-೧೧ ರಲ್ಲಿ ೧೦೦ ಮಿ. ಟನ್ ದಾಖಲೆ ಬೆಳೆ .೨೦೧೧-೧೨ಲ್ಲಿ ೧೦೪.೩೨ ಮಿ.ಟನ್ ದಾಖಲೆ ಉತ್ತಮ ಪಡಿಸಿದೆ. (ಮಿ.= ಮಿಲಿಯನ್ ;ಮಿ.= ೧೦ ಲಕ್ಷ )

ಚೀನದ ಪ್ರಮುಖ ಬೆಳೆಯೂ ಭತ್ತ ; ೫೨೫,೮೦೦ ಚ.ಕಿ.ಮೀ ಬೇಸಾಯ ದ ಭೂಮಿ ಅದರಲ್ಲಿ ೨೫% ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ಭತ್ತ ಬೆಳೆಯುವ ಪ್ರದೇಶ ಭಾರತಕ್ಕಿಂತ ಕಡಿಮೆ ಆದರೆ ಉತ್ಪನ್ನ ಭಾರರತಕ್ಕಿಂತ ಹೆಚ್ಚು.

ಮುಂದುವರೆಯುವುದು/ ಮುಂದುವರೆಸಿದೆ.->೨೦೧೩-೧೪

ಹಿಂದಿನ ವರ್ಷಗಳ ಆಹಾರ ಉತ್ಪಾದನೆ

ಬದಲಾಯಿಸಿ
  • ಭಾರತದಲ್ಲಿ ಕೃಷಿ ಮತ್ತು ಆಹಾರ ಧಾನ್ಯ ಉತ್ಪಾದನೆ:
  • ಕಳೆದ ೧೩ ವರ‍್ಷಗಳಲ್ಲಿ ಆಹಾರ ಧಾನ್ಯ ಉತ್ಪಾದನೆ ಏರು ಮುಖವಾಗಿದೆ. ಭಾರತದ ಸಾಧನೆ ಉತ್ತಮವಾಗಿದೆ. ೨೦೦೧ ರಲ್ಲಿ ೨೧೨೮.೫ ಲಕ್ಷಟನ್ ಗಳಷ್ಟಿದ್ದರೆ ೨೦೧೦-೧೧ ರಲ್ಲಿ ೨೪೪೪.೯ ಲಕ್ಷಟನ್‘ಗಳಷ್ಟು ಏರಿದೆ. ಆದರೆ ಮುಂದಿನ ದಿನಗಳಲ್ಲಿ ಕೃಷಿಗೆ ಬೇಸತ್ತು ನಗರಕ್ಕೆ ವಲಸೆ ಬರುತ್ತಿರುವ ಯುವ ಪೀಳಿಗೆ , ರಸ ಗೊಬ್ಬರ ಅತಿ ಉಪಯೋಗದಿಂದ ಬರಡಾಗುತ್ತಿರುವ ನಿಸ್ಸಾರವಾಗುತ್ತಿರವ ನೆಲ , ಅಂತರ್ ಜಲ ಬತ್ತಿ ಬರಡಾಗತ್ತರುವ ಭೂಮಿ - ಅದಕ್ಕೆ ವಿರುದ್ಧವಾಗಿ ಏರುತ್ತಿರುವ ಜನಸಂಖ್ಯೆ ಮತ್ತು ಮುಂದಿನ ದಿನಗಳಳಲ್ಲಿ ಆಹಾರ ಧಾನ್ಯಗಳ ಹೆಚ್ಚುತ್ತಿರುವ ಬೇಡಿಕೆ ಭಾರತಕ್ಕೆ ಸಮಸ್ಯೆಯಾಗಬಹುದೆಂಬುದು ತಜ್ಞರ ಮತ.
ವರ್ಷ/ಸಾಲು ಉತ್ಪಾದನೆ -ಲಕ್ಷ ಟನ್‌ಗಳಲ್ಲಿ
2001-2002 2128.5
2002-2003 1747.7
2003-2004 2131.9
2004-2005 1983.6
2005-2006. 2086.0
2006-2007 2172.8
2007-2008 2307.8
2008-2009 2344.7
2009-2010 2181.1
2010-2011 2444.9
2011-2012 2592.9
2012-2013 2571.3
2013-2014 2647.7

(ಮಾಹಿತಿ:- ಕೇಂದ್ರ ಕೃಷಿ ಸಚಿವಾಲಯ—ವರದಿ ಪ್ರಜಾವಾಣಿ ೧೬-೮-೨೦೧೪) 2013-14 ನೇಸಾಲಿನಲ್ಲಿ ನಾಲ್ಕನೇ ಬಾರಿ ಮಾಡಿದ ಪರಿಷ್ಕೃತ ಅಂದಾಜು ಪ್ರಕಾರ 2647.7 ಲಕ್ಷ ಟನ್ ಆಹಾರಧಾನ್ಯ ಕೃಷಿಕರಿಂದ ಬರಬಹುದೆಂದು ನಿರೀಕ್ಷೆ ಮಾಡಿದೆ.

ಕಿರು ಧಾನ್ಯ

ಬದಲಾಯಿಸಿ
ಆಧುನಿಕತೆಯ ಭರಾಟೆಯಲ್ಲಿ ಮೂಲೆಗುಂಪಾಗುತ್ತಿರುವ ನವಣೆ, ಸಾಮೆ, ಬರಗು, ಊದಲು, ಹಾರಕ, ರಾಗಿ, ಸಜ್ಜೆ ಮತ್ತು ಸ್ಥಳೀಯ ಜೋಳ ಬೆಳೆದು ಇತರರಿಗೆ ಮಾದರಿಯಾಗುವ ಪ್ರಯತ್ನವನ್ನು ಇಲ್ಲಿನವರು ಮಾಡುತ್ತಲೇ ಇದ್ದಾರೆ. 2008ರಲ್ಲಿ ಜಾಗತಿಕ ಬ್ಯಾಂಕಿನ ಸಹಾಯದೊಂದಿಗೆ ಭಾರತೀಯ ಅನುಸಂಧಾನ ಪರಿಷತ್ ‘ಸದೃಢ ಆರೋಗ್ಯಕ್ಕಾಗಿ ಸಿರಿಧಾನ್ಯ ಅಭಿವೃದ್ಧಿ ಯೋಜನೆ’ಯೂ ಇಲ್ಲಿನ ಬೆಳೆಗಾರರಿಗೆ ಸ್ಫೂರ್ತಿ ತುಂಬಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನಲ್ಲಿ ಹಣ್ಣು, ತೋಟಗಾರಿಕೆ, ತರಕಾರಿ ಬೆಳೆಗಾರರೇ ಹೆಚ್ಚು. ಈ ನಡುವೆ ಹಿಡುವಳಿಯಲ್ಲಿ ಹೊಸ ಪ್ರಯೋಗಗಳಿಗೆ ತೆರೆದುಕೊಂಡಿರುವ ಹೊನ್ನೂರು ಸುತ್ತಮುತ್ತಲ ಕೃಷಿಕರು ಬರಗಾಲವನ್ನು ಎದುರಿಸುತ್ತಲೇ ಅರಳುವ ಅನನ್ಯ ಬೆಳೆ ಸಿರಿ ಧಾನ್ಯಗಳನ್ನು ಸಂರಕ್ಷಿಸುವತ್ತಲೂ ತಮ್ಮನ್ನು
‘ಮಿಲೆಟ್ ನೆಟ್‌ವರ್ಕ್ ಆಫ್ ಇಂಡಿಯಾ’ ದಾಖಲೆಯಲ್ಲಿ ಕೊರಲೆ, ಹಾರಕದ ಸುಳಿವಿಲ್ಲ. ಆದರೆ, ಅಳಿದು ಹೋಗುತ್ತಿರುವ ಇವುಗಳನ್ನು ಇಲ್ಲಿ ಬೆಳೆಯಲಾಗಿದೆ. ಇಂತಹ ತಳಿಗಳನ್ನು ಉಳಿಸಿ, ಇತರರು ಇವುಗಳನ್ನು ಬೆಳೆಯಲು ಉತ್ತೇಜಿಸಲಾಗಿದೆ. ಜಿಲ್ಲೆಯಲ್ಲಿ ಮೊದಲ ಸಲ ಸೆಪ್ಟೆಂಬರ್‌ನಲ್ಲಿ ‘ಸಿರಿಧಾನ್ಯ ಕ್ಷೇತ್ರೋತ್ಸವ’ ಆಚರಿಸುವುದಾಗಿ ಕೃಷಿಕ ಹೊನ್ನೂರು ಪ್ರಕಾಶ್ ಸಂತಸದಿಂದ ಹೇಳುತ್ತಾರೆ.
ರಾಷ್ಟ್ರದಲ್ಲಿ 1966–2006ರ ಅವಧಿಯಲ್ಲಿ ಶೇ 44 ರಷ್ಟು ಸಿರಿಧಾನ್ಯ ಪ್ರದೇಶಗಳು ಇತರ ಬೆಳೆಗಳ ಪಾಲಾಗಿವೆ. ಸುಮಾರು 4.0 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 3.6 ದಶಲಕ್ಷ ಟನ್ ಸಿರಿಧಾನ್ಯ ಉತ್ಪಾದಿಸಲಾಗುತ್ತಿದೆ. ಕರ್ನಾಟಕದಲ್ಲಿ 1.3 ದಶಲಕ್ಷ ಹೆಕ್ಟೇರ್ ಪ್ರದೇಶದಿಂದ 1.6 ದಶಲಕ್ಷ ಟನ್ ಬೆಳೆಯಲಾಗುತ್ತದೆ. ದೇಶದಲ್ಲಿಯೇ ಶೇ 60ರಷ್ಟು ರಾಗಿ ಕರ್ನಾಟಕ ಒಂದರಿಂದಲೇ ಪೂರೈಸುತ್ತದೆ.

ದಿ.12-9- 2014ರ ವರೆಗೆ ಕೃಷಿ ಪ್ರಗತಿ(೫)

ಬದಲಾಯಿಸಿ
  • ಭಾರತದಲ್ಲಿ.12-9- 2014 ರವರೆಗೆ 999.10 ಲಕ್ಷ ಹೆಕ್ಟೇರ್ ಬಿತ್ತನೆ ಕಾರ್ಯ ನೆಡೆದಿದೆ. ಮುಂಗಾರು ಮಳೆ ಶೇ.11ರಷ್ಟು ಕೊರತೆಯಾಗಿದೆ.
  • ಭತ್ತವು 366.2 ಲಕ್ಷ ಹೆಕ್ಟೇರನಲ್ಲಿ ಬುತ್ತನೆಎಯಾಗಿದೆ. 175.8 ಲಕ್ಷ ಹೆಕ್ಟೇರನಲ್ಲಿ ಏಕದಳಧಾನ್ಯಗಳು ಬಿತ್ತನೆಯಾಗಿವೆ. ದ್ವದಳಧಾನ್ಯ99.2 ಲಕ್ಷ ಹೆಕ್ಟೇರನಲ್ಲಿ; 175.2ಲಕ್ಷ ಹೆಕ್ಟೇರನಲ್ಲಿ ಎಣ್ಣೆ ಕಾಳುಗಳು; 48.7,ಲಕ್ಷ ಹೆಕ್ಟೇರನಲ್ಲಿ ಕಬ್ಬು; ಹತ್ತಿ ಬೀಜ ಬಿತ್ತನೆ, ಹಿಂದಿನ ವರ್ಷದ 113.5 ಲಕ್ಷ ಹೆಕ್ಟೇರನಲ್ಲಿ ನಿಂದ 125.2 ಲಕ್ಷ ಹೆಕ್ಟೇರಿಗೆ ಏರಿದೆ.
  • ಖಾದ್ಯ ತೈಲದ ಅಮದು ಏರಿದೆ. ಹಿಂದಿನ ವರ್ಷದ ಅಮದು 7.57 ಲಕ್ಷ ಟನ್ ಇತ್ತು, 2013 ಜನವರಿಯಲ್ಲಿ ಅಮದು 11.6 ಲಕ್ಷ ಟನ್ ಇತ್ತು; - 2014 ಆಗಸ್ಟ್ ನಲ್ಲಿ 13.33ಲಕ್ಷ ಟನ್ ಅಮದು ಆಗಿದೆ.
  • (ಒಂದು ಹೆಕ್ಟೇರ್= ಎರಡೂವರೆ ಎಕರೆ)

2016 ಏಪ್ರಿಲ್ ಮಳೆ ಮತ್ತು ಕೃಷಿ

ಬದಲಾಯಿಸಿ
  • 2014 ರಲ್ಲಿ ಮಳೆ ಕೊರತೆ ; ಶೇ.12
  • 2015ರಲ್ಲಿ ಮಳೆ ಕೊರತೆ : ಶೇ. 14 .
  • ಬರ : ಮಳೆ ಕೊರತೆಯಿಂದಾಗಿ ಬರ ಪೀಡಿತ ಎಂದು ಘೋóಷಿಸಲಾದ ರಾಜ್ಯಗಳು 10
  • ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ಮಮಜೂರುಮಾಡಿರುವ ಮೊತ್ತ 10 ಸಾವಿರ ಕೋಟಿ.
  • ದೇಶದ ಕೃಷಿ ವಿವರ : ಮಳೆ ಅವಲಂಬಿತ ಕೃಷಿ =60%
  • ದೇಶೀಯ ಉತ್ಪನ್ನಕ್ಕೆ ಕೃಷಿಯ ಕೊಡಿಗೆ : 15%
  • ಕೃಷಿಯಿಂದ ಜನರಿಗೆ ಉದ್ಯೋಗ 60%

ಏಪ್ರಿಲ್ ಕೃಷಿ ಉತ್ಪಾದನೆ

ಬದಲಾಯಿಸಿ
  • ಬರ ಮಹಾರಾಷ್ಟ್ರ;2016 ಏಪ್ರಿಲ್;
  • ಭೀಕರ ಬರ ಎದುರಿಸುತ್ತಿರುವ ಮಹಾರಾಷ್ಟ್ರದ 11 ಪ್ರಮುಖ ಅಣೆಕಟ್ಟುಗಳ ಪೈಕಿ ಏಳರಲ್ಲಿ ನೀರಿಲ್ಲ.

ಏಪ್ರಿಲ್ 15ಕ್ಕೆ ಕೊನೆಗೊಂಡಂತೆ ಜಲಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಮರಾಠವಾಡ ಪ್ರದೇಶದಲ್ಲಿರುವ ಒಟ್ಟು 814 ಯೋಜನೆಗಳಲ್ಲಿ ಕೇವಲ ಶೇಕಡ 3ರಷ್ಟು ಮಾತ್ರವೇ ನೀರಿದೆ. ದೊಡ್ಡ, ಮಧ್ಯಮ ಹಾಗೂ ಚಿಕ್ಕ ನೀರಾವರಿ ಯೋಜನೆಗಳು ಇದರಲ್ಲಿ ಸೇರಿವೆ. ಮರಾಠವಾಡ ಪ್ರದೇಶದಲ್ಲಿರುವ ಪ್ರಮುಖ ಏಳು –ಜಯಕವಾಡಿ, ಪುರ್ನಾ ಸಿದ್ದೇಶ್ವರ, ಮಜಲಗಾಂವ್, ಮಂಜ್ರಾ, ಕೆಳ ತೆರ್ನಾ, ಮನ್ನಾರ್ ಹಾಗೂ ಸಿನಾ ಕಾಳೆಗಾಂವ್ – ನೀರಾವರಿ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ‘ಶೂನ್ಯ’ವಾಗಿದೆ. ಮರಾಠಾವಾಡ ಭಾಗದ 75 ಕಿರು ನೀರಾವರಿ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಶೇಕಡ 4ರಷ್ಟಿದೆ. ಇನ್ನುಳಿದ 728 ಕಿರು ಅಣೆಕಟ್ಟುಗಳಲ್ಲಿ ಶೇ 3ರಷ್ಟು ನೀರಿನ ಸಂಗ್ರಹವಿದೆ ಎಂದು ಅಂಕಿಅಂಶಗಳಿಂದ ತಿಳಿದು ಬಂದಿದೆ.[] []

೨೦೧೫-೨೦೧೬

ಬದಲಾಯಿಸಿ
  • ಕೃಷಿ ಸಚಿವಾಲಯದ ವರದಿ:(೧೦-೫-೨೦೧೬;ಪ್ರಜಾವಾಣಿ)
  • 2015–16ನೆ ಸಾಲಿನಲ್ಲಿ ದೇಶದ 10 ರಾಜ್ಯಗಳಲ್ಲಿ ಬರ ಪರಿಸ್ಥಿತಿ ಉದ್ಭವಿಸಿದ್ದರಿಂದ ಆಹಾರ ಧಾನ್ಯಗಳ ಉತ್ಪಾದನೆಯು 25.22 ಕೋಟಿ ಟನ್‌ಗಳಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ.
  • ತೊಗರಿ, ಉದ್ದು ಸೇರಿದಂತೆ ಬೇಳೆಕಾಳುಗಳ ಉತ್ಪಾದನೆಯು ಹಿಂದಿನ ವರ್ಷದ 1.71 ಕೋಟಿ ಟನ್‌ಗೆ ಹೋಲಿಸಿದರೆ 2015–16ರಲ್ಲಿ 1.70 ಕೋಟಿ ಟನ್‌ಗಳಷ್ಟಾಗಲಿದೆ.

ಉತ್ಪಾದನೆಯಲ್ಲಿ ಕುಸಿತದ ಕಾರಣದಿಂದಾಗಿ ಬೇಳೆಕಾಳುಗಳ ಬೆಲೆಯು ಮುಂಬರುವ ದಿನಗಳಲ್ಲಿ ದುಬಾರಿ ಮಟ್ಟದಲ್ಲಿಯೇ ಇರಲಿದೆ ಎಂದು ಊಹಿಸಲಾಗಿದೆ. ಮುಂಗಾರು ಕೈಕೊಟ್ಟಿದ್ದರಿಂದ ಉತ್ಪಾದನೆ ಕಡಿಮೆಯಾಗಿ ಬೇಳೆಕಾಳುಗಳ ಚಿಲ್ಲರೆ ಮಾರಾಟ ದರವು ಈಗಾಗಲೇ ಏರುಗತಿಯಲ್ಲಿ ಇದೆ.

  • ಬೇಳೆಕಾಳುಗಳಲ್ಲದೆ ಅಕ್ಕಿ, ಉರುಟು ಧಾನ್ಯಗಳ ಉತ್ಪಾದನೆಯೂ ಕಡಿಮೆಯಾಗಲಿದೆ ಎಂದು ಕೃಷಿ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ಅಂದಾಜಿಸಲಾಗಿದೆ.

ಆದರೆ, ಗೋಧಿ ಉತ್ಪಾದನೆಯು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳಗೊಳ್ಳಲಿದ್ದು, ಈ ಹಿಂದಿನ 8.65 ಕೋಟಿ ಟನ್‌ಗೆ ಹೋಲಿಸಿದರೆ 9.4 ಕೋಟಿ ಟನ್‌ಗಳಷ್ಟಾಗಲಿದೆ. ಆಹಾರೇತರ ಉತ್ಪನ್ನಗಳ ಪೈಕಿ ಎಣ್ಣೆ ಬೀಜ, ಸಕ್ಕರೆ, ಹತ್ತಿ, ಸಣಬಿನ ಉತ್ಪಾದನೆಯೂ 2015–16ನೆ ಬೆಳೆ ವರ್ಷದಲ್ಲಿ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಆಹಾರ ಧಾನ್ಯ ಕೋಟಿ ಟನ್’ಗಳಲ್ಲಿ
ವಿವರ 2015-16 2014-15
ಗೋಧಿ 9.40 8.60
ಅಕ್ಕಿ 10.33 10.54
ಒರಟು ಧಾನ್ಯ 3.77 4.28
ತೈಲ ಬೀಜ 2.58 2.75
ಕಬ್ಬು 34.6 36.2
ಹತ್ತಿ (ಬೇಲ್) 3.05 3.48
ಹತ್ತಿ ಬೇಲ್ ಲೆಕ್ಕದಲ್ಲಿ 1ಬೇಲ್=170ಕೆ.ಜಿ. -

[]

೧.ಕೃಷಿ ವಿಜ್ಞಾನಿ ನೇಮಕಾತಿ ಮಂಡಳಿ ಅಧ್ಯಕ್ಷರು, ಧಾರವಾಡ ಕೃಷಿವಿಉಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ; ಡಾ.ಎಂ. ಮಹಾದೇವಪ್ಪ. ಶಿವಮೊಗ್ಗದಲ್ಲಿ ರೈತರಿಗೆ ತರಬೇತಿ ಉಪನ್ಯಾಸ. ೧೨-೧೨-೨೦೧೩ (ಪ್ರಜಾವಾಣಿ ವರದಿ.)
೩.ಕಬ್ಬು-ಕಬ್ಬು (ಮಾಹಿತಿ ಕೇಂದ್ರ ಕೃಷಿಸಚಿವಾಲಯ -ಪ್ರಜಾವಾಣಿ ವರದಿ ೧೫-೧೨-೨೦೧೩)
೫. ಕೇಂದ್ರ ಸಚಿವಾಲಯ ಪಿಟಿಐ ವರದಿ ಪ್ರಜಾವಾಣಿ;೧೯-೯-೨೦೧೪
೬.www.prajavani.net/article/ಈ-ವರ್ಷ-ಉತ್ತಮ-ಮಳೆ

ಉಲ್ಲೇಖ

ಬದಲಾಯಿಸಿ
  1. ತೀವ್ರಗೊಂಡ-ನೀರಿನ-ಸಮಸ್ಯೆ]
  2. "ಆರ್ಕೈವ್ ನಕಲು". Archived from the original on 2016-04-23. Retrieved 2016-05-10.
  3. ೧೦-೫-೨೦೧೬:ಪ್ರಜಾವಾಣಿ:ಆಹಾರ-ಧಾನ್ಯ-25-ಕೋಟಿ-ಟನ್‌-ಉತ್ಪಾದನೆ-ನಿರೀಕ್ಷೆ=೧೦-೫-೨೦೧೬ [೧] Archived 2020-08-15 ವೇಬ್ಯಾಕ್ ಮೆಷಿನ್ ನಲ್ಲಿ.