ಭಾರತದಲ್ಲಿರುವ ಅತಿ ಎತ್ತರದ ಮೂರ್ತಿಗಳು
ಜಗತ್ತಿನ ಹಲವು ದೇಶಗಳಲ್ಲಿ ಎತ್ತರದ ಮೂರ್ತಿಗಳಿರುವುದು ನಮಗೆ ತಿಳಿದ ವಿಚಾರ. ಹಿಂದಿನಿಂದಲೂ ಮಾನವ ಕುಲವು ತಮಗೆ ಆದರ್ಶಮಯವಾದ ವ್ಯಕ್ತಿಗಳದ್ದೊ ಅಥವಾ ತಾವು ಪೂಜಿಸುವ ಇಷ್ಟ ದೇವರದ್ದೊ ಮೂರ್ತಿಗಳನ್ನು ನಿರ್ಮಿಸಿ ತನ್ನ ಗೌರವ ಸೂಚಿಸಿರುವುದನ್ನು ನಾವು ಇತಿಹಾಸದಿಂದ ಕಂಡುಕೊಳ್ಳಬಹುದು. ವಾಸ್ತವ ಏನೇ ಇದ್ದರೂ, ಮೂರ್ತಿಗಳು ಎಷ್ಟು ಎತ್ತರವಿರುತ್ತದೊ ಅಷ್ಟು ಆಳವಾದ ನಂಬಿಕೆ ಗೌರವಗಳು ಅದರ ಹಿಂದಿರುತ್ತದೆ ಎಂಬ ಅಂಶವನ್ನು ನಾವು ಕೇವಲ ಅವಲೋಕಿಸಬಹುದಷ್ಟೆ.
ಸರ್ದಾರ ವಲ್ಲಭಾಯಿ ಪಟೇಲ ಐಕ್ಯತೆಯ ಪ್ರತಿಮೆ
ಬದಲಾಯಿಸಿ೫೯೭ ಅಡಿಗಳಷ್ಟು ಎತ್ತರವಿರುವ ಈ ಸರ್ದಾರ ವಲ್ಲಭಾಯಿ ಪಟೇಲ ಪ್ರತಿಮೆಯನ್ನು ಗುಜರಾತ ರಾಜ್ಯದ ಸರ್ದಾರ ಸರೋವರ ಮಧ್ಯ ನಿರ್ಮಿಸಲು ಉದ್ದೇಸಿಶಿದೆ. ಈ ಮೂರ್ತಿಯು ಜಗತ್ತಿನ ಅತಿ ಎತ್ತರದ ಮೂರ್ತಿ ಮತ್ತು ಭಾರತದ ಅತಿ ಎತ್ತರದ ಮೂರ್ತಿಯಾಗಲಿದೆ.
ವೀರ ಅಭಯ ಆಂಜನೇಯ ಹನುಮಾನ ಸ್ವಾಮಿ ಪ್ರತಿಮೆ
ಬದಲಾಯಿಸಿ135 ಅಡಿಗಳಷ್ಟು ಎತ್ತರವಿರುವ ಈ ಆಂಜನೇಯನ ಮೂರ್ತಿಯು ಇರುವುದು ಆಂಧ್ರಪ್ರದೇಶದ ವಿಜಯವಾಡಾ ನಗರದಿಂದ 30 ಕಿ.ಮೀ ದೂರವಿರುವ ಪರಿತಲಾ ಎಂಬ ಹಳ್ಳಿಯಲ್ಲಿ. 2003 ರಲ್ಲಿ ಪ್ರತಿಷ್ಠಾಪಿಸಲಾದ ಈ ಮೂರ್ತಿಯು ಭಾರತದ ಅತಿ ಎತ್ತರದ ಮೂರ್ತಿ.
ತಿರುವಳ್ಳುವರ್ ಪ್ರತಿಮೆ
ಬದಲಾಯಿಸಿ133 ಅಡಿಗಳಷ್ಟು ಎತ್ತರವಿರುವ ತಮಿಳಿನ ಅತಿ ಪುರಾತನ ಕವಿ ತಿರುವಳ್ಳುವರ್ ನ ಈ ಪ್ರತಿಮೆಯು ಭಾರತದ ಎರಡನೆಯ ಅತಿ ಎತ್ತರದ ಮೂರ್ತಿ. ಜನವರಿ ಒಂದು 2000 ರಲ್ಲಿ ಉದ್ಘಾಟನೆಗೊಂಡ ಈ ಪ್ರತಿಮೆಯು ನೆಲೆನಿಂತಿರುವುದು ಕನ್ಯಾಕುಮಾರಿ ಬಳಿಯಿರುವ ದ್ವೀಪವೊಂದರಲ್ಲಿ.
ಪದ್ಮಸಂಭವ ಪ್ರತಿಮೆ
ಬದಲಾಯಿಸಿಎರಡನೆಯ ಬುದ್ಧನೆಂದು ಪರಿಗಣಿಸಲಾಗುವ ಪದ್ಮಸಂಭವನ ಈ ಮೂರ್ತಿಯು 123 ಅಡಿಗಳಷ್ಟು ಎತ್ತರವಾಗಿದೆ. ಈ ಮೂರ್ತಿಯು ಇರುವುದು ಹಿಮಾಚಲ ಪ್ರದೇಶದ ರೆವಲ್ಸರ್ ಎಂಬಲ್ಲಿ.
ಶಿವನ ಪ್ರತಿಮೆ
ಬದಲಾಯಿಸಿಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಜನಪ್ರಿಯ ಧಾರ್ಮಿಕ ಕ್ಷೇತ್ರ ಮುರುಡೇಶ್ವರದಲ್ಲಿ ಈ ಬೃಹತ್ತಾದ ಕುಳಿತಿರುವ ಶಿವನ ಪ್ರತಿಮೆಯಿದೆ. 122 ಅಡಿಗಳಷ್ಟು ಎತ್ತರವಾಗಿರುವ ಈ ವಿಗ್ರಹವು ತನ್ನ ಹಿನ್ನಿಲೆಯಲ್ಲಿ ಅರಬ್ಬಿ ಸಮುದ್ರದ ಭವ್ಯವಾದ ನೋಟವನ್ನು ಒದಗಿಸುತ್ತದೆ.
ಪದ್ಮಸಂಭವ ಪ್ರತಿಮೆ
ಬದಲಾಯಿಸಿರಿನ್ಪೊಚೆ ಅಥವಾ ಎರಡನೆಯ ಬುದ್ಧನೆಂದು ಪರಿಗಣಿಸಲಾಗುವ ಪದ್ಮಸಂಭವನ ಈ ಮೂರ್ತಿಯು 118 ಅಡಿಗಳಷ್ಟು ಎತ್ತರವಿದ್ದು ಸಿಕ್ಕಿಂ ರಾಜ್ಯದ ನಾಮ್ಚಿ ಎಂಬಲ್ಲಿ ಪ್ರತಿಷ್ಠಾಪನೆಗೊಂಡಿದೆ.
ಬಸವ ಪ್ರತಿಮೆ
ಬದಲಾಯಿಸಿಕರ್ನಾಟಕದ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿರುವ 108 ಅಡಿಗಳ ಈ ಬಸವ ಪ್ರತಿಮೆಯು ಜಗತ್ತಿನಲ್ಲೆ ಅತಿ ದೊಡ್ಡದಾದ ಬಸವ ಪ್ರತಿಮೆಯಾಗಿದೆ.
ಬುದ್ಧ ಪ್ರತಿಮೆ
ಬದಲಾಯಿಸಿಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ನಲ್ಲಿರುವ ಈ ಗೌತಮ ಬುದ್ಧನ ಪ್ರತಿಮೆಯು 107 ಅಡಿಗಳಷ್ಟು ಎತ್ತರವಾಗಿದೆ.
ಜೈ ಹನುಮಾನ ಪ್ರತಿಮೆ
ಬದಲಾಯಿಸಿಮಹಾರಾಷ್ಟ್ರ ರಾಜ್ಯದ ಬುಲ್ಡಾನಾ ಜಿಲ್ಲೆಯ ನಂದುರಾ ಪಟ್ಟಣದಲ್ಲಿ ಈ ಪ್ರತಿಮೆಯನ್ನು ಕಾಣಬಹುದು. ಮನಸೂರೆಗೊಳ್ಳುವಂತಹ ಈ ಪ್ರತಿಮೆಯು 105 ಅಡಿಗಳಷ್ಟು ಎತ್ತರವಿದೆ.
ಹರ್ ಕಿ ಪೌರಿ ಶಿವ ಪ್ರತಿಮೆ
ಬದಲಾಯಿಸಿಉತ್ತರಾಖಂಡ ರಾಜ್ಯದ ಹರಿದ್ವಾರದಲ್ಲಿ 100 ಅಡಿಗಳ ಈ ನಿಂತಿರುವ ಶಿವನ ಪ್ರತಿಮೆಯಿದೆ. ಜಗತ್ತಿನಲ್ಲೆ ಮೂರನೆಯ ಅತಿ ಎತ್ತರದ ಶಿವ ಮೂರ್ತಿ ಇದಾಗಿದ್ದು, ಭಾರತದಲ್ಲಿ ಎರಡನೆಯ ಎತ್ತರದ ಶಿವ ಪ್ರತಿಮೆ ಹೆಗ್ಗಳಿಕೆಯನ್ನು ಪಡೆದಿದೆ.
ಚಿನ್ಮಯ ಗಣಾಧೀಶ ಪ್ರತಿಮೆ
ಬದಲಾಯಿಸಿಮಹಾರಾಷ್ಟ್ರದ ಕೋಲ್ಹಾಪುರಿನ ಚಿನ್ಮಯ ಸಾಂದೀಪನಿ ಆಶ್ರಮದಲ್ಲಿರುವ ಗಣೆಶನ ಈ ವಿಗ್ರಹವು 85 ಅಡಿಗಳಷ್ಟು ಎತ್ತರವಾಗಿದೆ.
ಶಿವ ಪ್ರತಿಮೆ
ಬದಲಾಯಿಸಿಬಿಜಾಪುರ ನಗರದಿಂದ 3 ಕಿ.ಮೀ ದೂರದಲ್ಲಿ ಉಕ್ಕಲಿ ರಸ್ತೆಯಲ್ಲಿರುವ ರಂಭಾಪುರ ಹಳ್ಳಿಯಲ್ಲಿ ಕಾಣಬಹುದಾಗಿದೆ 85 ಅಡಿಗಳಷ್ಟು ಎತ್ತರದ ಸಿಮೆಂಟ್ ಹಾಗು ಉಕ್ಕಿನಿಂದ ಮಾಡಲಾದ ಈ ಬೃಹತ್ ಶಿವ ಪ್ರತಿಮೆಯನ್ನು. ಇದನ್ನು 26 ನೇಯ ಫೆಬ್ರುವರಿ 2006 ರ ಶಿವರಾತ್ರಿಯ ದಿನದಂದು ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಈ ಶಿವ ಪ್ರತಿಮೆಯ ಕೆಳಬದಿಯಲ್ಲಿ ಪುಟ್ಟ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಲಾಗಿದ್ದು ಸುತ್ತಲಿರುವ ಗೋಡೆಗಳ ಮೇಲೆ ಶಿವ ಚರಿತೆಯನ್ನು ಕನ್ನಡದಲ್ಲಿ ಕೆತ್ತಲಾಗಿದೆ. ಇದರ ಎತ್ತರ 85 ಅಡಿಗಳು.
ಬುದ್ಧ ಪ್ರತಿಮೆ
ಬದಲಾಯಿಸಿಬಿಹಾರಿನ ಬೌದ್ಧ ಧಾರ್ಮಿಕ ಕ್ಷೇತ್ರವಾದ ಬೋಧ ಗಯಾದಲ್ಲಿರುವ ಈ ಮಹಾನ್ ಬುದ್ಧ ಪ್ರತಿಮೆಯು 80 ಅಡಿಗಳಷ್ಟು ಎತ್ತರವಾಗಿದೆ.
ಆದಿನಾಥ ಪ್ರತಿಮೆ
ಬದಲಾಯಿಸಿಮಧ್ಯ ಪ್ರದೇಶದ ಜೈನ ಧಾರ್ಮಿಕ ಕ್ಷೇತ್ರವಾದ ಬರವಾಣಿಯಲ್ಲಿ ಮಹಾನ್ ಆದಿನಾಥ ಪ್ರತಿಮೆಯು 85 ಅಡಿಗಳಷ್ಟು ಎತ್ತರವಾಗಿದೆ.
ಹನುಮಾನ ಪ್ರತಿಮೆ
ಬದಲಾಯಿಸಿಪಂಜಾಬ ರಾಜ್ಯದ ಅಮೃತಸರ್ ಪಟ್ಟಣದ ಹನುಮಾನ್ 8೦ ಅಡಿಗಳಷ್ಟು ಎತ್ತರದ ಆಂಜನೇಯನ ಈ ಮೂರ್ತಿಯನ್ನು ಕಾಣಬಹುದಾಗಿದೆ.
ಶಿವ ಪ್ರತಿಮೆ
ಬದಲಾಯಿಸಿಮಧ್ಯ ಪ್ರದೇಶದ ಜಬಲಪುರ ಸಮೀಪ ಕನಚೂರ ಎಂಬಲ್ಲಿ ಶಿವನ ಪ್ರತಿಮೆ ೭೬ ಅಡಿಗಳಷ್ಟು ಎತ್ತರವಾಗಿದೆ.
ಹನುಮಾನ ಪ್ರತಿಮೆ
ಬದಲಾಯಿಸಿಒಡಿಶಾ ರಾಜ್ಯದ ರೂರ್ಕೆಲಾ ಪಟ್ಟಣದ ಹನುಮಾನ್ ವಾಟಿಕಾ ಎಂಬಲ್ಲಿ 75 ಅಡಿಗಳಷ್ಟು ಎತ್ತರದ ಆಂಜನೇಯನ ಈ ಮೂರ್ತಿಯನ್ನು ಕಾಣಬಹುದಾಗಿದೆ.
ಬುದ್ಧ ಪ್ರತಿಮೆ
ಬದಲಾಯಿಸಿಜಮ್ಮು ಮತ್ತು ಕಾಶ್ಮೀರ ರಾಜ್ಯದ ಲಡಾಖ್ ಪ್ರದೇಶದಲ್ಲಿರುವ ಲಿಕಿರ್ ಬೌದ್ಧ ಮಠದಲ್ಲಿ ಮೈತ್ರೇಯ ಬುದ್ಧನ 75 ಅಡಿಗಳಷ್ಟು ಎತ್ತರವಿರುವ ಈ ಸುಂದರ ಮೂರ್ತಿಯನ್ನು ಕಾಣಬಹುದು.
ಹನುಮಾನ ಪ್ರತಿಮೆ
ಬದಲಾಯಿಸಿನವ ದೆಹಲಿಯ ಝಂಡೇವಾಲಾ ಪ್ರದೇಶದಲ್ಲಿ 65 ಅಡಿಗಳಷ್ಟು ಎತ್ತರವಿರುವ ಈ ಆಂಜನೇಯ ಮೂರ್ತಿಯನ್ನು ಕಾಣಬಹುದಾಗಿದೆ.
ಶಿವ ಪ್ರತಿಮೆ
ಬದಲಾಯಿಸಿಬೆಂಗಳೂರಿನ ಕೆಂಪ್ ಫೋರ್ಟ್ ನಲ್ಲಿರುವ 65.5 ಅಡಿಗಳಷ್ಟು ಉದ್ದದ ಈ ಶಿವನ ಪ್ರತಿಮೆಯು ನಗರದ ಒಂದು ಜನಪ್ರಿಯ ಆಕರ್ಷಣೆ.
ಶಿವ ಪ್ರತಿಮೆ
ಬದಲಾಯಿಸಿಬಾಗಲಕೋಟ ಜಿಲ್ಲೆ ಮುಧೋಳ ತಾಲ್ಲೂಕಿನ ಮಂಟೂರ ಗ್ರಾಮಲ್ಲಿರುವ ಸುಮಾರು 55 ಅಡಿಗಳಷ್ಟು ಉದ್ದದ ಈ ಶಿವನ ಪ್ರತಿಮೆಯು ನಗರದ ಒಂದು ಜನಪ್ರಿಯ ಆಕರ್ಷಣೆ.