ಬೆಬಿಂಕಾ ಒಂದು ಬಗೆಯ ಪುಡಿಂಗ್ ಆಗಿದೆ ಮತ್ತು ಒಂದು ಸಾಂಪ್ರದಾಯಿಕ ಇಂಡೊ-ಪೋರ್ಚುಗೀಸ್ ಡಿಜ಼ರ್ಟ್ ಆಗಿದೆ. ಸಾಂಪ್ರದಾಯಿಕ ಬೆಬಿಂಕಾ ಆರು ಪದರಗಳನ್ನು ಹೊಂದಿರುತ್ತದೆ. ಘಟಕಾಂಶಗಳಲ್ಲಿ ಮೈದಾ ಹಿಟ್ಟು, ಸಕ್ಕರೆ, ತುಪ್ಪ, ಮೊಟ್ಟೆಯ ಹಳದಿ ಭಾಗ ಮತ್ತು ತೆಂಗಿನ ಹಾಲು ಸೇರಿವೆ.[][]

ಇದು ಗೋವಾದಲ್ಲಿ ಒಂದು ಸಾಂಪ್ರದಾಯಿಕ ಸಿಹಿ ತಿನಿಸಾಗಿದೆ, ಮತ್ತು ವಿಶಿಷ್ಟವಾಗಿ ಕ್ರಿಸ್ಮಸ್ ಹಬ್ಬದಲ್ಲಿ ಜನಪ್ರಿಯವಾಗಿದೆ.[] ಇದು ಸುಲಭವಾಗಿ ಲಭ್ಯವಿದ್ದು ಒಯ್ಯಲು ಮತ್ತು ದೀರ್ಘ ಸಮಯದವರೆಗೆ ಸಂರಕ್ಷಿಸಿಡಲು ಸುಲಭವಾಗಿದೆ ಅಥವಾ ತಾಜಾ ಆಗಿ ತಿನ್ನಲ್ಪಡಬಹುದು.

ಬೆಬಿಂಕಾವನ್ನು ವಾಯವ್ಯ ಪೆಸಿಫಿಕ್ ಮಹಾಸಾಗರದಲ್ಲಿನ ಒಂದು ಚಂಡಮಾರುತದ ಹೆಸರಾಗಿ ಕೂಡ ಅಳವಡಿಸಿಕೊಳ್ಳಲಾಯಿತು.[] ಇದನ್ನು ಪೋರ್ಚುಗಲ್ ಮತ್ತು ಮೊಜಾಂಬಿಕ್‍ನಲ್ಲಿ ಕೂಡ ತಯಾರಿಸಲಾಗುತ್ತದೆ. ಆದರೆ ಸಾಂಪ್ರದಾಯಿಕವಾಗಿ ಇದು ಗೋವಾದ ಪದರಗಳಿರುವ ಕೇಕ ಆಗಿದೆ.

ಉಲ್ಲೇಖಗಳು

ಬದಲಾಯಿಸಿ
  1. Banerji, Chitrita (2010). Eating India: Exploring the Food and Culture of the Land of Spices. Bloomsbury Publishing. ISBN 1408820544.
  2. Petrina Verma Sarkar. "Bebinca (layered Goan dessert)". About, Inc. Archived from the original on 7 ಜುಲೈ 2011. Retrieved 6 January 2011.
  3. "Bebinca - Culinary Encyclopedia". ifood.tv. Archived from the original on 8 May 2014. Retrieved 26 July 2013.
  4. "Tropical Storm Bebinca lessens threat to Philippines, veers north toward Japan". USA Today. 4 October 2006. Archived from the original on 14 ಮೇ 2008. Retrieved 6 January 2011.


"https://kn.wikipedia.org/w/index.php?title=ಬೆಬಿಂಕಾ&oldid=1145835" ಇಂದ ಪಡೆಯಲ್ಪಟ್ಟಿದೆ